ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: ೧೦-೧೧-೨೦೧೪
ಪತ್ರಿಕಾ ಪ್ರಕಟಣೆ
ದಿನಾಂಕ ೦೯/೧೧/೨೦೧೪ ರಂದು ಕೆ.ಎ. ೦೪ ಎಂ.ಹೆಚ್ ೯೨೪೦ ನಂಬರಿನ ಮಾರುತಿ ಸುಜೂಕಿ ಆಲ್ಟೋ ಕಾರಿನಲ್ಲಿ ಚಾಲಕ ಶಿವಕುಮಾರ ತಂದೆ ಮಾಯಣ್ಣ ವ: ೩೨ ವರ್ಷ. ವಕ್ಕಲಿಗ ಜನಾಂಗ ವಾಸ: ಮಾಗಡಿ ರಾಮನಗರ ಜಿಲ್ಲೆ ಈತನೊಂದಿಗೆ ಮತ್ತು ತನ್ನ ಸ್ನೇಹಿತರಾದಂತ ಮಂಜುನಾಥ, ಸೂರಿ, ಹನುಮಂತರಾಜ ಇವರುಗಳೊಂದಿಗೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಟಿ.ಬಿ ಡ್ಯಾಂ ಮತ್ತು ಹಂಪಿಯನ್ನು ನೋಡಿಕೊಂಡು ಹೋಗಲು ಬಂದಿದ್ದು, ಹಂಪಿಯ ಮುಖ್ಯ ಸ್ಥಳಗಳನ್ನು ನೋಡಿದ ನಂತರ ಸದರಿ ಮೇಲ್ಕಂಡ ಕಾರಿನಲ್ಲಿ ಬೆಳಿಗ್ಗೆ ೧೧:೦೦ ಗಂಟೆಗೆ ಹಂಪಿಯಿಂದ ಹೊರಟು ಎನ್,ಹೆಚ್ ೧೩ ಮುಖಾಂತರ ಬೆಂಗಳೂರು ಕಡೆಗೆ ಹೊರಟಿದ್ದಾಗ ಪೋತಲಗಟ್ಟೆ ಕ್ರಾಸ್ ದಾಟಿದ ನಂತರ ಸುಮಾರು ೧ ಕಿ ಮೀ ದೂರದಲ್ಲಿ ಚಿಲಕನಹಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಎನ್.ಹೆಚ್ ೧೩ ರಲ್ಲಿ ಮೇಲ್ಕಂಡ ಕಾರ್ ಚಾಲಕ ಶಿವಕುಮಾರನು ಮದ್ಯಾಹ್ನ ೧೨:೩೦ ಗಂಟೆ ಸುಮಾರಿಗೆ ರಸ್ತೆಯ ಎಡಬದಿಯಲ್ಲಿ ಕಾರನ್ನು ನಿಧಾನವಾಗಿ ಚಲಾಯಿಸಿಕೊಂಡು ಮರಿಯಮ್ಮನಹಳ್ಳಿ ಕಡೆಯಿಂದ ಕೂಡ್ಲಿಗಿ ಕಡೆಗೆ ಹೊರಟಿದ್ದಾಗ ಎದುರುಗಡೆಯಿಂದ ಅಂದರೆ ಕೂಡ್ಲಿಗಿ ಕಡೆಯಿಂದ ಟಿ.ಎನ್, ೩೪ ಎಸ್ ೨೯೪೯ ನೊಂದಣೆ ಸಂಖ್ಯೆಯ ಲೋಡ್ ತುಂಬಿದ ಲಾರಿಯನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ನಡೆಸುತ್ತಾ ತಾರ್ ರಸ್ತೆಯ ಎಡ ಬದಿಯಿಂದ ಒಮ್ಮೆಲೇ ಬಲಬದಿಗೆ ತಿರುಗಿಸಿ ಕಾರಿನ ಮುಂದುಗಡೆ ಬಾಗಕ್ಕೆ ಜೋರಾಗಿ ಡಿಕ್ಕಿಪಡಿಸಿದ್ದರ ಪರಿಣಾಮ ಸದರಿ ಕಾರು ಪಲ್ಟಿಯಾಗಿ ತಾರ್ ರಸ್ತೆಯ ಎಡಬದಿ ಕಚ್ಚಾ ರಸ್ತೆಯಲ್ಲಿ ಜಕ್ಕಂಗೊಂಡು ಬಿದ್ದಿದ್ದು ಈ ಅಪಘಾತದಲ್ಲಿ ಕಾರಿನ ಚಾಲಕ ಶಿವಕುಮಾರನ ತಲೆಗೆ ರಕ್ತಗಾಯವಾಗಿದ್ದು ಇನ್ನೊಬ್ಬನಿಗೆ ತುಟಿಗೆ ಗದ್ದಕ್ಕೆ ಎಡಿಕಣ್ಣಿನ ಉಬ್ಬಿನ ಮೇಲೆ ರಕ್ತಗಾಯಗಳಾಗಿದ್ದು ಕಾರಿನ ಹಿಂದುಗಡೆ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಮಂಜುನಾಥ, ಸೂರಿ, ಹನುಮಂತರಾಜ ಇವರಿಗೂ ಸಹಾ ರಕ್ತಗಾಯ ಪೆಟ್ಟುಗಳು ಆಗಿದ್ದು ಅಪಘಾತ ಉಂಟು ಪಡಿಸಿದ ಮೇಲ್ಕಂಡ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆಂದು, ಕಾರ್ ಚಾಲಕ ಶಿವಕುಮಾರನು ಅಸ್ಪತ್ರೆಗೆ ಬರುವಾಗ ಮಾರ್ಗ ಮದ್ಯದಲ್ಲೇ ಸತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಕೂಡ್ಲಿಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಫಿರ್ಯಾದಿದಾರಾದ ಅಲ್ತಪ್ ಹುಸೇನ್ ತಂದೆ ಸೈಯದ್ ಮಹಮದ್ ವ: ೪೦ ವರ್ಷ, ವಾಸ: ತಿಲಕ್ ನಗರ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ದಿನಾಂಕ ೦೭/೧೧/೨೦೧೪ ರಂದು ಸಂಜೆ ೬:೦೦ ಗಂಟೆಯಿಂದ ದಿ: ೦೯/೧೧/೧೪ ರಂದು ಬೆಳಿಗ್ಗೆ ೧೧:೦೦ ಗಂಟೆಯ ಮಧ್ಯಾ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಯಾವುದೋ ಆಯುಧದಿಂದ ಜಖಂಗೊಳಿಸಿ ಮನೆಯೂಳಗೆ ಪ್ರವೇಶಿಸಿ ಮನೆಯ ಹಾಲ್‌ನಲ್ಲಿಟ್ಟಿದ್ದ ಗಾಡ್ರೇಜ್ ಬೀರುವಾವನ್ನು ತೆಗೆದು ಅದರಲ್ಲಿದ್ದ ಸುಮಾರು ರೂ ೧,೪೩,೦೦೦/- ಬೆಲೆಬಾಳುವ ಬಂಗಾರ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ. ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ