ಬುಧವಾರ, ನವೆಂಬರ್ 26, 2014

PRESS NOTE AS ON 26-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 26-11-2014
ಪತ್ರಿಕಾ ಪ್ರಕಟಣೆ 

1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಸೋಮಸಮುದ್ರ ಗ್ರಾಮದ ಹತ್ತಿರ  ಯಾವುದೋ ಲಾರಿಯ ಚಾಲಕನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಡಿಕ್ಕಿ ಪಡಿಸಿದ್ದು, ಒಬ್ಬ ಮಹಿಳೆ ಸಾವು ಹಾಗು 9 ಜನರಿಗೆ ಗಾಯಗಳು ಆಗಿರುತ್ತವೆ.

         ದಿನಾಂಕ 25/11/2014 ರಂದು ಬೆಳಿಗ್ಗೆ 4:30 ಗಂಟೆ ಸುಮಾರಿಗೆ ಸೋಮಸಮುದ್ರ ಗ್ರಾಮದ ಹತ್ತಿರ ಇರುವ ಉದಯಗೌಡರವರ ಗೋಡಾನ್ ಹತ್ತಿರ ಸಿರುಗುಪ್ಪ-ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಯಾವುದೋ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಆಜಾಗೂರುಕತೆಯಿಂದ ಚಲಾಯಿಸಿಕೊಂಡು ನಮ್ಮ ಹಿಂದಿನಿಂದ ಬಂದು ರಸ್ತೆಯ ಎಡಭಾಗದಲ್ಲಿ ಬಳ್ಳಾರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ನನ್ನ ತಮ್ಮನ ಹೆಂಡತಿ ಕಾವೇರಿಗೆ ಹಿಂದಿನಿಂದ ಡಿಕ್ಕಿಹೊಡೆದು ಕಾವೇರಿ ಸಾವಿಗೆ ಕಾರಣನಾಗಿ, ನಂತರ ಮುಂದೆ ಹೊರಟಿದ್ದ ನಮ್ಮ ಗ್ರಾಮದ ಪಾರ್ವತಿ ಗಂಡ ಶಿವಲಿಂಗಪ್ಪ. ಅಂಜಿನಮ್ಮ ಗಂಡ ಜಂಭಣ್ಣ,  ಪಾರ್ವತಿ ಗಂಡ ಬಸವರಾಜ ಮಹಾಲಕ್ಷ್ಮಿ ತಂದೆ ವಿರೇಶ,  ನಾಗಮ್ಮ ಹೊನ್ನೂರಮ್ಮ ಪಾರ್ವತಿ ಗಂಡ ಚಿದಾನಂದ ತಿಪ್ಪಮ್ಮ. ಈರಮ್ಮ ಒಳಪೆಟ್ಟು ಮತ್ತು ರಕ್ತಗಾಯಗಳನ್ನುಂಟು ಮಾಡಿ ಲಾರಿಯನ್ನು ನಿಲ್ಲಿಸದೇ  ಪರಾರಿಯಾದ  ಲಾರಿ ಚಾಲಕನ ವಿರುದ್ದ ಕ್ರಮಕೈಗೊಳ್ಳಲು ಕೊಟ್ಟ ದೂರಿನ ಮೇರೆಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.

2) ಕುಡುತಿನಿ ಠಾಣೆ ಸರಹದ್ದಿನ ತಿಮ್ಮಲಾಪುರ ಗ್ರಾಮದ ಹೆಚ್.ಎಲ್.ಸಿ. ಕಾಲುವೆಯಲ್ಲಿ ಪತಿಯು ತನ್ನ ಹೆಂಡತಿಯನ್ನು ವರದಕ್ಷಣೆ ಹಾಗು ಕಿರುಕುಳದಿಂದ ನೀರಿನಲ್ಲಿ ತಳ್ಳಿ ಸಾಯಿಸಿರುತ್ತಾನೆ. 

       ಫಿರ್ಯಾದಿದಾರರಾದ ಶ್ರೀ. ಶಂಕರ್ ಲಿಂಗಪ್ಪ ವಾ: ಕಪ್ಪಗಲ್ ಗ್ರಾಮ ಇವಳ ಮಗಳಾದ ಶ್ರೀಮತಿ. ಸೌಜನ್ಯ ಈಕೆಯನ್ನು ತನ್ನ ಗಂಡನಾದ ಮಂಜುನಾಥನಿಗೆ ಮದುವೆ ಮಾಡಿಕೊಟ್ಟಿದ್ದು, ನಂತರ ಗಂಡ-ಹೆಂಡತಿ 3 ತಿಂಗಳು ಚೆನ್ನಾಗಿದ್ದು, ತದನಂತರ ತನ್ನ ಮಗಳಿಕೆ ಕಿರುಕುಳ ನೀಡುವುದು, ಹೊಡೆಯುವುದು ಮತ್ತು ಆಕೆಯ ಅತ್ತೆ ಮಾವ ಇವರು ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲ, ನಡೆತೆ ಸರಿಯಾಗಿಲ್ಲ ಎಂದು ನಿಂದಿಸುವುದು ಮತ್ತು ನಿಮ್ಮಪ್ಪನ ಮನೆಯಿಂದ ಏನು ತಂದಿಲ್ಲ ಎಂದು ದಿನ ನಿತ್ಯ ಕಿರುಕುಳ ಕೊಡುತ್ತಿದ್ದು, ದಿನಾಂಕ: 24-11-2014 ರಂದು ಸೌಜನ್ಯಳನ್ನು ಡಾಕ್ಟರ್ ಹತ್ತಿರ ತೋರಿಸಲು ತೋರಣಗಲ್ಲುಗೆ ಕರೆದುಕೊಂಡು ತಿಮ್ಮಲಾಪುರ ಗ್ರಾಮಕ್ಕೆ ವಾಪಾಸು ಬರುವಾಗ ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಡುದಾರಿಯಲ್ಲಿ ಗಾಡಿಯನ್ನು ನಿಲ್ಲಿಸಿ ಸೌಜನ್ಯಗಳಿಗೆ ಕಾಲುವೆಗೆ ತಳ್ಳಿ ಸಾಯಿಸಿರುತ್ತಾನೆಂದು ಇದ್ದ ದೂರಿನ ಮೇರೆಗೆ ಕುಡುತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತದೆ.

                                                                                         ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                          ಬಳ್ಳಾರಿ.                                                                                                                                   
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ