ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 19-11-2014
ಪತ್ರಿಕಾ ಪ್ರಕಟಣೆ
1) ತೆಕ್ಕಲಕೋಟೆ ಪೊಲೀಸ್ ಠಾಣೆ ಸರಹದ್ದಿನ ಸಿರುಗುಪ್ಪ-ಬಳ್ಳಾರಿ ರಸ್ತೆಯ ಎಸ್.ಹೆಚ್.-19 ರಸ್ತೆಯ ಹೆಂಗಸರ ಶೌಚಾಲಯದ ಬಳಿ ಯಾವುದೋ ವಾಹನ ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವು.
ದಿನಾಂಕ 18-11-2014 ರಂದು ಪಿರ್ಯಾದಿದಾರರಾದ ಶ್ರೀ ಹರಿಜನ ಗೂಳೆಪ್ಪ ತಂದೆ ಹರಿಜನ ಕಂದಾರಪ್ಪ 41 ವರ್ಷ, ಹರಿಜನರು, ವ್ಯವಸಾಯ, ವಾ: 20 ನೇ ವಾರ್ಡ ದೇವಿನಗರ ರವರು ದೂರು ನೀಡಿದ್ದೇನೆಂದರೆ, ದಿನಾಂಕ:17-11-2014 ರಂದು ತಮ್ಮ ಹೊಲದಿಂದ ಎಸ್.ಹೆಚ್-19 ರಸ್ತೆಯ ಮೂಲಕ ಮನೆಗೆ ವಾಪಸ್ಸಾಗುತ್ತಿರುವಾಗ ಸಂಜೆ 07-30 ಗಂಟೆಗೆ ಸೂಮಾರಿಗೆ ತಮ್ಮೂರಿನ ಹೆಂಗಸರ ಉಪಯೋಗಕ್ಕಾಗಿ ಕಟ್ಟಿರುವ ಶೌಚಾಲಯದ ಬಳಿ ಎಸ್.ಹೆಚ್-19 ಸಿರುಗುಪ್ಪ-ಬಳ್ಳಾರಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಮಕಾಡೆ ಬಿದ್ದಿದ್ದು, ಹೋಗಿ ನೋಡಲು ನಮ್ಮ ಸಂಭಂಧಿಕನಾದ ಓಬಳೇಶ ತಂದೆ ದಸ್ತಗಿರಪ್ಪ, 18 ವರ್ಷ, ಹರಿಜನರು ಸಾ: ದೇವಿನಗರ ಕ್ಯಾಂಪ್ ಆಗಿದ್ದು ಕಿವಿ, ಮೂಗಿನಲ್ಲಿ ರಕ್ತ ಜಿನುಗುತಿದ್ದು, ಮೈ, ಕೈ-ಕಾಲುಗಳು ತೆರಚಿದ್ದವು, ಇವನನ್ನು ಚಿಕಿತ್ಸೆಗಾಗಿ ಸಿರುಗುಪ್ಪ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸಗೆ ದಾಖಲಿಸಿದ್ದು, ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಓಳೇಶನು ಮೃತನಾಗಿರುತ್ತಾನೆ. ಅವನು ಮೂಕನಾಗಿದ್ದರಿಂದ, ಈ ಘಟನಯ ಬಗ್ಗೆ ಹೆಚ್ಚಿನ ವಿಷಯ ಕೆಳಲಾಗಿಲ್ಲ ಅಪಘಾತ ಸ್ಥಳದ ಸನ್ನಿವೇಶ ಮತ್ತು ಮೃತ ಓಬಳೇಶನ ಮೈಮೇಲಿನ ಗಾಯಗಳನ್ನು ಗಮನಿಸಿದಲ್ಲಿ, ಯಾವುದೋ ವಾಹನದ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಓಬಳೇಶನಿಗೆ ಡಿಕ್ಕಿ ಪಡಿಸಿ ಸಾವಿಗೆ ಕಾರಣವಾಗಿದ್ದು, ಸದರಿ ವಾಹನವನ್ನು ಪತ್ತೆ ಮಾಡಿ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ ಮೇರೆಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಹೊಸಪೇಟೆ ಠಾಣೆ ಸರಹದ್ದಿನ ಉಕ್ಕಡಕೇರೆಯ ಮನೆಯಿಂದ 14 ವರ್ಷದ ಬಾಲಕ ಕಾಣೆಯಾಗಿರುವ ಬಗ್ಗೆ.
ದಿನಾಂಕ: 18-11-2014 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದುದಾರರಾದ ಶ್ರೀ. ಯಲ್ಲಪ್ಪ.ಟಿ. ತಂದೆ ಜಂಬಪ್ಪ, 46 ವರ್ಷ ನಾಯಕರು, ವಾ: ಉಕ್ಕಡಕೇರಿ, ಹೊಸಪೇಟೆ ರವರು ಕೊಟ್ಟ ದೂರು ಏನೆಂದರೆ, ತನ್ನ ಮಗ ಧೀರಜ್, 14 ವರ್ಷ ಈತನು ಹೊಸಪೇಟೆಯ ಜೇಸಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು, ದಿನಾಂಕ: 15-11-2014 ರಂದು ಶನಿವಾರ ಎಂದಿನಂತೆ ಶಾಲೆಗೆ ಹೋಗಿ ಮದ್ಯಾಹ್ನ ಮನೆಗೆ ವಾಪಾಸು ಬಂದು ಸಂಜೆ ಸುಮಾರು 5-15 ಗಂಟೆಯ ಸಮಯದಲ್ಲಿ ತಾನು ತನ್ನ ಸ್ನೇಹಿತರ ಹತ್ತಿರ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಈತನು ಹೋಗುವಾಗ ಹಸಿರು ಬಣ್ಣದ ಟೀ ಷರ್ಟ್, ಕೆಂಪು ಬಣ್ಣದ ಹಾಫ್ ಪ್ಯಾಂಟ್ ತೊಟ್ಟಿದ್ದು, ಕನ್ನಡ ಇಂಗ್ಲೀಷ್ ಹಿಂದಿ ಮತ್ತು ಕೊಂಕಣೆ ಮಾತನಾಡುತ್ತಾನೆ. ರಾತ್ರಿಯಾದರೂ ಬಾರದೇ ಇದ್ದುದರಿಂದ ತನ್ನ ಮಗನ ಸ್ನೇಹಿತರ ಮನೆಗಳಲ್ಲಿ ಮತ್ತು ತಮ್ಮ ಸಂಬಂಧಿಕರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಗಲಿಲ್ಲ, ನಂತರ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲವೆಂದು ಸದರಿ ಹುಡುಗನನ್ನು ಹುಡುಕಿ ಕೊಡಲು ನೀಡಿದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿರುತ್ತುದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ