ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 05-11-2014
ಪತ್ರಿಕಾ ಪ್ರಕಟಣೆ
ದಿನಾಂಕ: 04.11.2014 ರಂದು ಮದ್ಯಾಹ್ನ :02 :30 ಗಂಟೆಗೆ ಪಿ.ಎಸ್.ಐ ಗಾದಿಗನೂರು ರವರು ಠಾಣೆಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿ ಪಡೆದು, ಸಿಬ್ಬಂದಿಯವರೊಂದಿಗೆ ಹೊಸಪೇಟೆ ತಾಲ್ಲೂಕು ಕಾಕುಬಾಳು ಗ್ರಾಮದ ಸುಭಾಷರವರ ಬೀಡಿ ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ, ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಮಧ್ಯಾಹ್ನ : 03 :20 ಗಂಟೆಗೆ ಧಾಳಿ ಮಾಡಲi 1) ಜಡಿಯಪ್ಪ ತಂದೆ ಸಣ್ಣ ಹನುಮಪ್ಪ, 30ವರ್ಷ, ಕುರುಬರು, ವ್ಯವಸಾಯ, ವಾಸ: 1ನೇ ವಾರ್ಡ, ಕಾಕುಬಾಳು ) 2) ಸುಭಾಷಪ್ಪ ತಂದೆ ರೇವಣಸಿದ್ದಪ್ಪ, ಲಿಂಗಾಯ್ತರು, ವಾಸ: ಕಾಕುಬಾಳು ಗ್ರಾಮ, 3) ರಮೇಶ ತಂದೆ ಪಂಪಣ್ಣ @ ಸೀಮೆಎಣ್ಣೆ ಪಂಪಣ್ಣ, ವಾಸ: ಕಾಕುಬಾಳು ಗ್ರಾಮ 4) ಸುವರ್ಣವಮ್ಮ ಗಂಡ ಸುಭಾಷಪ್ಪ, ವಾಸ: ಕಾಕುಬಾಳು ಗ್ರಾಮ ಇವರು ಸಿಕ್ಕಿ ಬಿದ್ದಿದ್ದು, ಇವರ ಕಡೆಯಿಂದ ಒಟ್ಟು ರೂ. 12,952/- ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಜಪ್ತುಪಡಿಸಿಕೊಂಡು, ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಈ ಬಗ್ಗೆ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಬಳ್ಳಾರಿ ನಗರದ ಕೌಲ್‍ಬಜಾರ್‍ನಿಂದ 50 ವರ್ಷದ ಎಂ.ಡಿ. ಇಸಾಕ್ ಇವರು ಮನೆಯಿಂದ ಕಾಣೆಯಾಗಿರುವ ಬಗ್ಗೆ.
ಫಿರ್ಯಾಧಿದಾರರಾದ ಶ್ರೀ. ಎಂ.ಡಿ.ಐ ಐಯುಬ್ ತಂದೆ ಎಂ.ಡಿ ಇಸಾಕ್ ವ: 23 ವರ್ಷ ವಾಸ: ಕೌಲ್ ಬಜಾರ್ ಬಳ್ಳಾರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಫಿರ್ಯಾದಿದಾರರ ತಂದೆಗೆ ಈಗ್ಗೆ 3 ವರ್ಷಗಳಿಂದ ಆಕ್ಸಿಡೆಂಟ್ ಆಗಿದ್ದು ಕಾಲಿಗೆ ರಾಡ್ ಹಾಕಿದ್ದು ಅಲ್ಲದೆ ಅವರಿಗೆ ಮೂರು ಮಕ್ಕಳಿದ್ದು ಯಾರಿಗೂ ಮದುವೆ ಯಾಗದೇ ಇದ್ದುದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದು ದಿನಾಂಕ 31-10-14 ರಂದು ಮದ್ಯಾಹ್ನ 1:00 ಗಂಟೆಗೆ ಫಿರ್ಯಾದಿದಾರರ ತಂದೆ ಶ್ರೀ. ಎಂ.ಡಿ. ಇಸಾಕ್, 50 ವರ್ಷ ಇವರು ನಮಾಜ್ ಹೋಗಿ ಅಲ್ಲಿಂದ ಸಿಟಿಗೆ ಹೋಗಿ ಹಣ ಕೊಟ್ಟು ಬರುವುದಾಗಿ ಹೇಳಿ ಮನೆಯಿಂದ 2,500/- ರೂಗಳನ್ನು ತೆಗೆದುಕೊಂಡು ಹೋಗಿದ್ದು ಮರಳಿ ಮನೆಗೆ ಬಾರದೇ ಇದ್ದುದ್ದರಿಂದ ಕಾಣೆಯಾದ ತನ್ನ ತಂದೆಯನ್ನು ನಗರದ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದೇ ಇದ್ದುದ್ದರಿಂದ ಕಾಣೆಯಾದ ನನ್ನ ತಂದೆಯನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
3) ಬಳ್ಳಾರಿ ನಗರದ ಗೌಳೇರಹಟ್ಟಿಯ ತನ್ನ ಮನೆಯಿಂದ 30 ವರ್ಷದ ಗೌರಿ @ ತಾರಾವತಿ ಇವರು ಕಾಣೆಯಾಗಿರುವ ಬಗ್ಗೆ.
ಫಿರ್ಯಾದಿದಾರರಾದ ಜಿ.ಲೋಕೇಶ್ ತಂದೆ ಲೇಟ್ ನಾಗೇಶಪ್ಪ ವಾಸಃ ಗೌಳೇರಹಟ್ಟಿ ಬಳ್ಳಾರಿ, ದಿನಾಂಕ: 30-10-2014 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮನೆಯಲ್ಲಿದ್ದಾಗ ಫಿರ್ಯಾದಿದಾರರ ಹೆಂಡತಿ ಗೌರಿ @ ತಾರಾವತಿ, 30 ವರ್ಷ, ರವರು ವಾಕಿಂಟ್ ಹೋಗಿ ಬರುತ್ತೇನೆ, ಅಂತಾ ಹೇಳಿ ಹೋದವಳು ತುಂಬಾ ಸಮಯವಾದರೂ ಬಾರದೇ ಇದ್ದುದನ್ನು ಕಂಡು ಫಿರ್ಯಾದಿ ಹಾಗೂ ಅವರ ಅಳಿಯ ಸತೀಶ್ ಸೇರಿ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹೋಗಿ ಹುಡುಕಾಡಿ ನೋಡಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಫಿರ್ಯಾದಿಯು ತನ್ನ ಹೆಂಡತಿಯನ್ನು ಇಲ್ಲಿಯವರೆಗೂ ಹುಡುಕಾಡಿ ನೋಡಲು ಸಿಗದೇ ಇದ್ದುದ್ದರಿಂದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ, ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ