ಗುರುವಾರ, ನವೆಂಬರ್ 20, 2014

PRESS NOTE AS ON 20-11-2014


ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 20-11-2014

ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಬೊಮ್ಮನಾಳ್ ರಸ್ತೆಯ ಬೇಕರಿ ಮುಂದೆ ನಡೆಯುತ್ತಿದ್ದ ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಯ ಬಂಧನ. 
        ದಿಃ17-11-2014 ರಂದು ಮದ್ಯಾಹ್ನ 01-45 ಗಂಟೆಗೆ ಪಿ.ಐ ಬ್ರೂಸ್‍ಪೇಟೆ ರವರು ಠಾಣೆಯಲ್ಲಿರುವಾಗ ಬಳ್ಳಾರಿ ನಗರದ ಮಿಲ್ಲರಪೇಟೆ ಬೊಮ್ಮನಾಳ್ ರಸ್ತೆಯಲ್ಲಿರುವ ಬೇಕರಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಸೀಬಿನ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಪಿ.ಎಸ್.ಐ. ರವರಿಗೆ ಸೂಚಿಸಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 2-10 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಪಾದಿತನಾದ ಹುಲುಕುಂಟೇಶ್ವರ ಆಚಾರಿ ರವರನ್ನು ಹಿಡಿದು ಅತನಿಂದ ಜೂಜಾಟಕ್ಕೆ ಇಟ್ಟಿದ್ದ ನಗದು ಹಣ ರೂ. 5,135, /-ರೂ, 6 ಮಟ್ಕಾ ಪಟ್ಟಿ ಒಂದು ಬಾಲ್‍ಪೆನ್ ನೇದ್ದವುಗಳನ್ನು ಜಪ್ತು ಪಡಿಸಿಕೊಂಡು ಆತನಿಗೆ ವಿಚಾರಿಸಿದ್ದು ಆತನು ಮಿಲ್ಲರಪೇಟೆಯ ವಾಸಿ ಮೌನೇಶ್‍ನಿಗೆ ಮಟಕಾ ಪಟ್ಟಿಗಳನ್ನು ಕೊಡುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನಿಗೆ ಹಿಡಿದುಕೊಂಡು ಬಂದು ಪಿ.ಎಸ್.ಐ.ರವರು ನೀಡಿದ ವರದಿ ಮೇರೆಗೆ ಠಾಣೆಯ ಎನ್.ಸಿ. ನಂಃ 26/14 ರಲ್ಲಿ ನಮುದಿಸಿಕೊಂಡು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕಲಂಃ78(3) ಕ.ಪೋ. ಕಾಯ್ದೆ ಈಗ ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಪ್ರಕರಣದಲ್ಲಿ ಪ್ರ.ವ.ವರದಿಯನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಘನ 1ನೇ ಎಸಿಜೆ & ಜೆಎಂಎಫ್‍ಸಿ ಬಳ್ಳಾರಿ ರವರ ಪರವಾನಿಗೆ ಕೋರಿದ್ದು ಘನ ನ್ಯಾಯಾಲಯವು ಪರವಾನಿಗೆ ನೀಡಿದ್ದರಿಂದ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.
                                                                                                              ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                            ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ