ಬುಧವಾರ, ನವೆಂಬರ್ 5, 2014

Press Note as on 06-10-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 06-11-2014

ಪತ್ರಿಕಾ ಪ್ರಕಟಣೆ 

1) ಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಜೋಗಿ ಹಳ್ಳದ ಬ್ರಿಡ್ಜ್ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು, ಒಬ್ಬ ವ್ಯಕ್ತಿಗೆ ಗಾಯ.

          ದಿನಾಂಕ 05-11-2014 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರರ ಮಗನಾದ ಮೃತ ಯಲ್ಲಪ್ಪನು ಮೋಟಾರ್ ಸೈಕಲ್ ನಂ ಕೆ.ಎ-02 ಇ.ಎಫ್-8192 ನೇದ್ದರಲ್ಲಿ ಬಾರಿಮ್‍ಸಾಬ್ ನನ್ನು ಹಿಂದೆ ಕೂಡಿಸಿಕೊಂಡು, ಕಂದಗಲ್ ಗ್ರಾಮಕ್ಕೆ ಹೋಗಿ ಕೋಳಿಗಳನ್ನು ತೆಗೆದುಕೊಂಡು ವಾಪಸ್ಸು ಕೊರ್ಲಹಳ್ಳಿ ಗ್ರಾಮಕ್ಕೆ ಹೊಗಲು ಬರುತ್ತಿದ್ದಾಗ ಕೊಂಬಳಿ-ಪುರ ಮುಖ್ಯ ರಸ್ತೆಯಲ್ಲಿನ ಜೋಗಿ ಹಳ್ಳದ ಬ್ರಿಡ್ಜ್ ಹತ್ತಿರ, ಕೊಂಬಳಿ ಗ್ರಾಮ ಸಮೀಪ ಮೋಟಾರೈ ಸೈಕಲ್‍ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಕೊಂಡು ಬಂದು ಜೋಗಿ ಹಳ್ಳದ ಬಲಗಡೆ ತಗ್ಗಿನಲ್ಲಿ ಬಿದ್ದು ಪಿರ್ಯಾದಿಯ ಮಗ ಯಲ್ಲಪ್ಪ ತಂದೆ ಬಸಪ್ಪ, 25 ವರ್ಷ, ವಾ: ಕೊರಲಹಳ್ಳಿ ಗ್ರಾಮ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ ಈತನಿಗೆ ಹಣೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತೇನೆಂದು ಹಾಗೂ ಗಾಯಗೊಂಡ ಬಾರಿಮ್‍ಸಾಹೇಬನಿಗೆ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                 ಪೊಲೀಸ್ ಸೂಪರಿಂಟೆಂಡೆಂಟ್, 
                                                         ಬಳ್ಳಾರಿ.                 


ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
 ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ