ಗುರುವಾರ, ನವೆಂಬರ್ 6, 2014

Press Note as on 07-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 07-11-2014
ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ಪಟ್ಟಣದ ಹೊರಗೆ ಇರುವ ಎನ್.ಹೆಚ್.-13 ರಸ್ತೆಯ ಸುರಂಗ ಮಾರ್ಗ-2 ರಲ್ಲಿ ಟ್ರ್ಯಾಕ್ಸ್ ವಾಹನದಿಂದ ರಸ್ತೆ ಅಫಘಾತ ಒಬ್ಬ ವ್ಯಕ್ತಿಯ ಸಾವು, ಒಬ್ಬ ಮಹಿಳೆಗೆ ಗಾಯ

       ದಿನಾಂಕ: 06-11-2014 ರಂದು ಮದ್ಯಾಹ್ನ 2-45 ಗಮಟೆ ಸುಮಾರಿಗೆ ಹೊಸಪೇಟೆಯ ಕಣಿವೆ ಏರಿಯಾದಲ್ಲಿರುವ ಎನ್.ಹೆಚ್.-13 ರಸ್ತೆಯ ಸುರಂಗ ಮಾರ್ಗ-2 ರ ಒಳಗೆ ರಸ್ತೆ ಮೇಲೆ ಫಿರ್ಯಾದಿ ಮತ್ತು ಗಾಯಾಲುಗಳಾದ ಶಿವಶಾಂತವಿರ, ಬಸಮ್ಮ ಹಾಗು ಕೆಲಸಗಾರಳಾದ ಚಾಮುಂಡೇಶ್ವರಿ ರವರುಗಳು ಸುರಂಗ ಮಾರ್ಗದ ಸೀಲಿಂಗ್‍ನಲ್ಲಿರುವ ಟ್ಯೂಬ್‍ಲೈಟ್ ರಿಪೇರಿ ಕೆಲಸದಲ್ಲಿದ್ದಾಗ ಶಿವಶಾಂತವಿರನು ಅಲ್ಯುಮಿನಿಯಂ ಲ್ಯಾಡರ್‍ನ ಮೇಲೆ ನಿಂತು ಟ್ಯೂಬ್‍ಲೈಟ್ ಬಿಚ್ಚುತ್ತಿರುವಾಗ್ಗೆ ಅದೇ ವೇಳೆಗೆ ಮರಿಯಮ್ಮನಹಳ್ಳಿ ಕಡೆಯಿಂದ ಹೊಸಪೇಟೆ ಕಡೆ ಬರುತ್ತಿದ್ದ ಟ್ರಾಕ್ಸ್ ನಂಬರ್ ಕೆ.ಎ-35 ಎ.8839 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸುತ್ತಾ ಲಾರಿಯನ್ನು ಓವರ್‍ಟೇಕ್ ಮಾಡುತ್ತಾ ಬಂದು ಬ್ಯಾರಿಯರ್‍ಗೆ ಮತ್ತು ಫುಟ್‍ಪಾತ್‍ಗೆ ಡಿಕ್ಕಿ ಹೊಡೆಸಿಕೊಂಡು ಅಲ್ಯುಮಿನಿಯಂ ಲ್ಯಾಡರ್ ತಿವಿದು ಬೀಳಿಸಿ ಸ್ವಲ್ಪ ದೂರ ದಬ್ಬಿಕೊಂಡು ಹೋಗಿದ್ದು, ಲ್ಯಾಡರ್ ಮೇಲೆ ನಿಂತಿದ್ದ ಶಾಂತವೀರನು ಮೇಲಿನಿಂದ ರಸ್ತೆಯ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ ಕಿವಿ, ಮೂಗಿನಿಂದ ರಕ್ತ ಸೋರಿದ್ದು, ಗಾಯಗೊಂಡ ಶಿವಶಾಂತವೀರ ತಂದೆ ಲೇಟ್ ನಾಗರಾಜ, 30 ವರ್ಷ, ಕುಂಬಾರ ಜಾತಿ, ಎಲೆಕ್ಟ್ರೀಷಿಯನ್ ಕೆಲಸ, ವಾಸ: ಹೊಸಹಳ್ಳಿ ಗ್ರಾಮ, ಕೊಪ್ಪಳ ತಾ & ಜಿಲ್ಲೆ ಈತನಿಗೆ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ದಿನಾಂಕ.06/11/2014 ರಂದು ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಸದರಿ ಗಾಯಾಳು ಸಂಜೆ ಮಾರ್ಗಮಧ್ಯೆದಲ್ಲಿ ಮೃತಪಟ್ಟಿರುತ್ತಾನೆಂದು, ಸ್ಥಳದಲ್ಲಿ ನಿಂತಿದ್ದ ಕೂಲಿ ಬಸಮ್ಮಳಿಗೆ ಗಾಯಗಳಾಗಿದ್ದು, ಟ್ರ್ಯಾಕ್ಸ್ ಚಾಲಕನು ವಾಹನವನ್ನು  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಇದ್ದ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ. 


2) ಗಾಂಧಿನಗರ ಠಾಣೆ ಸರಹದ್ದಿನ ಸತ್ಯನಾರಾಯಣ ಪೇಟೆಯ 2 ಮತ್ತು 3 ಲಿಂಕ್ ಕ್ರಾಸಿನಲ್ಲಿ ಅಪರಿಚಿತ ವ್ಯಕ್ತಿಗಳು ಮೋಟಾರ್ ಸೈಕಲ್‍ನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ. 

      ಪಿರ್ಯಾಧಿದಾರರಾದ ಶ್ರೀಮತಿ ಸುಮಿತ್ರ ಗಂಡ ಕೆ.ಎಸ್. ವೆಂಕಟೇಶ್ ರವರು ದಿನಾಂಕ; 06-11-14 ರಂದು ರಾತ್ರಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೆನಂದರೆ ದಿನಾಂಕ; 06-11-2014 ರಂದು ರಾತ್ರಿ    07-30 ಗಂಟೆ ಸಮಯದಲ್ಲಿ ರಾಘವೇಂದ್ರಸ್ವಾಮಿ ಮಠದಿಂದ ತನ್ನ ಅತ್ತೆಯ ಮನೆಗೆ ಹೋಗಲು ಎಸ್.ಎನ್.ಪೇಟೆ 2 ಮತ್ತು 3 ನೇ ಕ್ರಾಸಿನ ಲಿಂಕ್ ರಸ್ತೆಯ ಕುಂತಲಾಭಿವೃಧ್ದಿನಿ ತೈಲ ತಯಾರು ಮಾಡುವವರ ಮನೆ ಮುಂದೆ ಹೋಗುತ್ತಿದ್ದಾಗ ರಾತಿ 08-30 ರ ಸಮಯದಲ್ಲಿ ಹಿಂದಿನಿಂದ ಇಬ್ಬರು ವ್ಯಕ್ತಿಗಳು ಮೋಟಾರ ಬೈಕಿನಲ್ಲಿ ಬಂದು ಅದರಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿಯು ಫಿರ್ಯಾದಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಮೋಟಾರ್ ಬೈಕಿನಲ್ಲಿ ಪರಾರಿಯಾಗಿದ್ದು  ಕಿತ್ತುಕೊಂಡ ಮಾಂಗಲ್ಯ ಸರವು  40 ಗ್ರಾಂ ಇದ್ದು, ಅದರ ಅಂದಾಜು ಬೆಲೆ ರೂಪಾಯಿ 1,08,000/- ಗಳಷ್ಟಿದ್ದು ಸುಲಿಗೆ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 
                                                 ಪೊಲೀಸ್ ಸೂಪರಿಂಟೆಂಡೆಂಟ್, 
                                                         ಬಳ್ಳಾರಿ.               

ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
 ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ