ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: ೧೫-೧೧-೨೦೧೪
ಪತ್ರಿಕಾ ಪ್ರಕಟಣೆ
೧) ಕೌಲ್‌ಬಜಾರ್ ಠಾಣೆ ಸರಹದ್ದಿನ ಗಣೇಶ್ ವಿಲಾಸ್ ಹೋಟಲ್ ಮುಂದೆ ನಡೆಯುತ್ತಿದ್ದ ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ.
ದಿನಾಂಕ: ೧೪-೧೧-೨೦೧೪ ರಂದು ರಾತ್ರಿ ೭-೩೦ ಗಂಟೆಗೆ ಬಳ್ಳಾರಿ ಕೌಲ್‌ಬಜಾರ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ಶ್ರೀ ಎಂ.ಬಿ ಗೊಳಸಂಗಿ ಪೊಲೀಸ್ ಇನ್ಸ್‌ಪೆಕ್ಟರ್ ರವರಿಗೆ ಕೌಲ್‌ಬಜಾರ್‌ನ ಗಣೇಶ್‌ವಿಲಾಸ್ ಹೋಟೆಲ್ ಮುಂದೆ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪಿ.ಐ. ಮತ್ತು ಅವರ ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿದಾಗ ಮಟಕಾ ಬರೆಯುತ್ತಿದ್ದ ಆರೋಪಿತರಾದ ೧] ಜಿ. ಉಮಾಪತಿ ೨] ಟೀ ಬಾಬು ರ ರವರನ್ನು ವಶಕ್ಕೆ ಪಡೆದಿದ್ದು ಆರೋಪಿ-೨ ರವರು ಓಡಿಹೋಗಿದ್ದು, ಆರೋಪಿತರಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ ರೂ. ೪,೩೫೦/- ರೂ. ೧ ಮಟಕಾ ಪಟ್ಟಿ, ೧ ಬಾಲ್‌ಪೆನ್ನು ನ್ನು ಜಪ್ತುಪಡಿಸಿಕೊಂಡಿದ್ದು, ಈ ಬಗ್ಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
೨) ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದಿನ ಹಲಕುಂದಿ ಗ್ರಾಮದಿಂದ ೧೮ ವರ್ಷದ ಹುಡುಗಿ ಕಾಣೆಯಾಗಿರುವ ಬಗ್ಗೆ.
ಫಿರ್ಯಾದಿದಾರರಾದ ಶ್ರೀ. ಮಹೇಶ್ ಹೂಗಾರ್ ತಂದೆ ಹುಚ್ಚಪ್ಪ ವಯಸ್ಸು ೫೭ ವರ್ಷ, ಲಿಂಗಾಯತ ಜಾತಿ, ಹೂವಿನ ವ್ಯಾಪಾರ, ವಾಸ. ೨ನೇ ವಾರ್ಡ, ಹೊನ್ನಳ್ಳಿ ರಸ್ತೆ, ಗಾದಿ ಕಾಂಪ್ಲಕ್ಸ್, ಹಲಕುಂದಿ ಗ್ರಾಮ, ಬಳ್ಳಾರಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದೇನೆಂದರೆ, ದಿನಾಂಕ: ೧೨-೧೧-೨೦೧೪ ರಂದು ಮದ್ಯಾಹ್ನ ೧೨-೩೦ ಗಂಟೆಗೆ ಹಲಕುಂದಿ ಗ್ರಾಮದ ಹೊನ್ನಳ್ಳಿ ರಸ್ತೆಯಲ್ಲಿರುವ ತಮ್ಮ ಮನೆಯಿಂದ ಕು: ಸುಮಲತಾ ವಯಸ್ಸು ೧೮ ವರ್ಷ, ವಾಸ. ಹಲಕುಂದಿ ಗ್ರಾಮ, ಬಳ್ಳಾರಿ ತಾಲ್ಲೂಕು ಇವಳು ಬಳ್ಳಾರಿಯ ಸಣ್ಣ ಮಾರ್ಕೆಟ್ ಹತ್ತಿರವಿರುವ ತನ್ನ ದೊಡ್ಡಮ್ಮ ಶ್ರೀಮತಿ ಲಕ್ಷ್ಮೀದೇವಿರವರ ಮನೆಗೆ ಚೋಟಾ ಮೊಹರಂ ಹಬ್ಬಕ್ಕೆ ಹೋಗುತ್ತೇನೆಂದು ಹೋದವಳು ಅಲ್ಲಿಗೆ ಹೋಗದೇ ಮನೆಗೆ ವಾಪಾಸ್ ಬರದೇ ಕಾಣೆಯಾಗಿರುತ್ತಾಳೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು ಜಿ.ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ