ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 18-11-2014
ಪತ್ರಿಕಾ ಪ್ರಕಟಣೆ
1) ಹಿರೇಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಮೈಲಾರ-ಕುರುವತ್ತಿ ಕಡೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ಲಿಸಿ ಟೈರ್ ಗಾಡಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಚಾಲಕನ ಸಾವು.
ದಿನಾಂಕ: 16-11-2014 ರಂದು ರಾತ್ರಿ 10-00 ಗಂಟೆಗೆ ಸುಮಾರಿಗೆ ಮೈಲಾರ ಗ್ರಾಮದಿಂದ ಕುರುವತ್ತಿಗೆ ಹೋಗುವ ರಸ್ತೆಯಲ್ಲಿ ಆರೋಪಿಯಾದ ಬಸವರಾಜ ತನ್ನ ಆಟೋ ನಂ ಕೆ.ಎ-17 ಎ-9065 ರ ಚಾಲಕ ತನ್ನ ಆಟೋವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತ ರಸ್ತೆಯ ಎಡಬದಿ ಕಚ್ಚಾರಸ್ತೆಯಲ್ಲಿ ನಿಲ್ಲಿಸಿದ್ದ ಟೈರ್ ಬಂಡಿಗೆ ಡಿಕ್ಕಿ ಹೊಡೆಸಿದ್ದರಿಂದ ಆಟೋ ಬಲ ಮಗ್ಗುಲಾಗಿ ಪಲ್ಟಿಯಾಗಿದ್ದು, ಆಟೊ ಚಾಲಕ ಆರೋಪಿ ಬಸವರಾಜ, 30 ವರ್ಷ, ವಾ: ಮೈಲಾರ ಗ್ರಾಮ ಈತನಿಗೆ ತಲೆಯ ಹಿಂಬಾಗಕ್ಕೆ ತೀವ್ರವಾದ ರಕ್ತಗಾಯವಾಗಿದ್ದು ಆಟೋ ಹಿಂಬದಿಯಲ್ಲಿದ್ದ ಹೊನ್ನೂರುಸಾಬ್‍ಗೆ ಯಾವುದೇ ಗಾಯಗಳು ಆಗಿರುವುದಿಲ್ಲವೆಂದು ಗಾಯಗೊಂಡ ಬಸವರಾಜನಿಗೆ ಗುತ್ತಲ ಆಸ್ಪತ್ತೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಬಸವರಾಜ ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತದೆ.
2) ಬಳ್ಳಾರಿ ನಗರದ ಬ್ರೂಸ್‍ಪೇಟೆ ಠಾಣೆ ಸರಹದ್ದಿನ ಇಂದಿರಾನಗರದಿಂದ 19 ವರ್ಷದ ಹುಡುಗಿ ಕಾಣೆಯಾಗಿರುವ ಬಗ್ಗೆ.
ದಿನಾಂಕ 14-11-14 ರಂದು ರಾತ್ರಿ 10-00 ಗಂಟೆಯಿಂದ ದಿ: 15-11-2014 ರ ಬೆಳಗಿನ ಜಾವ 03-00 ಗಂಟೆ ಮಧ್ಯದ ಅವಧಿಯಲ್ಲಿ ಪಿರ್ಯಾಧಿದಾರರಾದ ಶ್ರೀಮತಿ ತಿಮ್ಮಕ್ಕ ಗಂಡ ತಿಮ್ಮಪ್ಪ, 48 ವರ್ಷ, ವಾಸ: ಇಂದಿರಾ ನಗರ, ಬಳ್ಳಾರಿ ಇವರು ತನ್ನ ಮಗಳಾದ ಕು:ಉಷಾ, 19 ವರ್ಷ, ವಾ: 16 ನೇ ವಾರ್ಡ, ಶ್ರೀರಾಂಪುರ ಕಾಲೋನಿ, ಇಂದಿರಾನಗರ, ಬಳ್ಳಾರಿ ಇವಳೊಂದಿಗೆ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 15-11-14 ರಂದು ಬೆಳಗಿನ ಜಾವ 03-30 ಗಂಟೆಗೆ ಪಿರ್ಯಾಧಿದಾರರು ಎದ್ದು ನೋಡಲು ಉಷಾ ರವರು ಇರದೇ ಕಾಣೆಯಾಗಿರುತ್ತಾಳೆಂದು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ. ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ