ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: ೦೪-೧೧-೨೦೧೪
ಪತ್ರಿಕಾ ಪ್ರಕಟಣೆ
ದಿನಾಂಕ: -೦೩/೧೧/೨೦೧೪ ರಂದು ರಾತ್ರಿ ೧೦-೧೫ ಗಂಟೆ ಸುಮಾರಿಗೆ ಬಲ್ಲಹುಣ್ಸಿ ಗ್ರಾಮದಲ್ಲಿ ನಡೆಯುವ ಮೊಹರಂ ಹಬ್ಬದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಫಿರ‍್ಯಾದಿದಾರರು, ತನ್ನ ಸ್ನೇಹಿತ ಪರಶುರಾಮ ಇಬ್ಬರು ಪರಶುರಾಮನ ಹೀರೋಹೊಂಡ ಸ್ಪ್ಲಂಡರ್ ಪ್ಲಸ್ ಮೋಟರ್ ಸೈಕಲ್ ನಂ.ಕೆ.ಎ-೩೫/ಯು-೮೦೧೪ ನೇದ್ದರಲ್ಲಿ ಫಿರ‍್ಯಾದಿ ಹಿಂದೆ ಕುಳಿತಿದ್ದು, ಮೋಟರ್ ಸೈಕಲನ್ನು ಪರಶುರಾಮನು ಚಲಾಯಿಸಿಕೊಂಡು ಹ.ಬೊ.ಹಳ್ಳಿ-ಕೂಡ್ಲೀಗಿ ತಾರ್ ರಸ್ತೆಯ ಮೇಲೆ ಪುಂಡಿಕಾಳ್ ಜಿಲಾನ್ ಇವರ ಹೊಲದ ಹತ್ತಿರ ರಸ್ತೆಯ ಎಡಬದಿಗೆ ಹೋಗುತ್ತಿದ್ದಾಗ, ಬಲ್ಲಹುಣ್ಸಿ ಕಡೆಯಿಂದ ಆರೋಪಿ ಪ್ರಕಾಶ ಈತನು ತನ್ನ ೫ ವರ್ಷದ ಮಗ ದೇವರಾಜನನ್ನು ಕೂಡಿಸಿಕೊಂಡು ತನ್ನ ಬಜಾಜ್ ಕವಾಸಕಿ ಕ್ಯಾಲಿಬರ್ ಮೋಟರ್ ಸೈಕಲ್ ನಂ.ಕೆ.ಎ-೩೫/ಜೆ-೫೬೬೭ ನೇದ್ದನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಮಗೆ ಡಿಕ್ಕಿ ಹೊಡೆಸಿದ ಪರಿಣಾಮ ಗಾಡಿಯಲ್ಲಿದ್ದ ಫಿರ‍್ಯಾದಿ ಮತ್ತು ಪರಶುರಾಮ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದರಿಂದ ಫಿರ‍್ಯಾದಿಗೆ ಎಡಗಾಲಿನ ಪಾದದ ಹತ್ತಿರ ತೆರಚಿದ ರಕ್ತಗಾಯ ಮತ್ತು ಮೈಮೇಲೆ ಒಳಪೆಟ್ಟಾಗಿ, ಪರಶುರಾಮನಿಗೆ ಮುಖದ ಮೇಲೆ ಬಲವಾದ ರಕ್ತಗಾಯವಾಗಿ ರಕ್ತ ಸೋರುತ್ತಿದ್ದು, ಆರೋಪಿ ಪ್ರಕಾಶ ಮತ್ತು ಆತನ ಮಗ ದೇವರಾಜ ಸಹ ರಸ್ತೆಯ ಮೇಲೆ ಬಿದ್ದರಿದ್ದರಿಂದ ಅವರಿಗೂ ಸಹ ರಸ್ತೆಗಾಯ ಮತ್ತು ಒಳಪೆಟ್ಟಾಗಿರುತ್ತವೆ. ಹಿಂದೆ ಬರುತ್ತಿದ್ದ ಗೋಣಿಸ್ವಾಮಿ ಮತ್ತು ಪ್ರತಾಪ್ ಇವರು ಈ ಅಪಘಾತವನ್ನು ನೋಡಿ ಗಾಯಗೊಂಡಿದ್ದವರನ್ನು ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ಬಂದು ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಪರಶುರಾಮ ತಂದೆ ವೀರಪ್ಪ, ೩೫ ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಹಿರೋಹೊಂಡಾ ಸ್ಲೇಂಡರ್ ಮೋಟರ್ ಸೈಕಲ್ ನಂ.ಕೆ.ಎ-೩೫/ಯು-೮೦೧೪ ನೇದ್ದರ ಚಾಲಕ, ವಾಸ:-ಮಡ್ಡಕ್ಕಿ ಬಟ್ಟಿ ಹತ್ತಿರ, ಚಾಲಿನಗರ, ಹ.ಬೊ.ಹಳ್ಳಿ ಈತನು ಮೃತಪಟ್ಟ ಬಗ್ಗೆ ಖಚಿತ ಪಡಿಸಿರುವುದಾಗಿ ಇದ್ದ ದೂರಿನ ಮೇರೆಗೆ ಹೆಚ್.ಬಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
೨) ಇಟ್ಟಿಗಿ ಗ್ರಾಮದಲ್ಲಿ ತವರು ಮನೆಯಿಂದ ಹೆಚ್ಚಿನ ವರದಕ್ಷಣೆ ತರಲಿಲ್ಲವೆಂದು ಮದುವೆಯಾದ ೨ ತಿಂಗಳಲ್ಲಿ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿದ ಬಗ್ಗೆ.
ಆರೋಪಿಯಾದ ಸುಬಾನ್‌ಸಾಬ್ ಈತನು ದಾವಣಗೆರೆಯ ತಮ್ಮ ಸಂಬಂಧಿಕರ ಮನೆಗೆ ಬಂದು ಹೋಗುವುದು ಮಾಡುವಾಗ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದ ರಿಹಾನಳನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳಿಸಿ ಪ್ರೀತಿಸಿದ್ದರಿಂದ ರಿಹಾನಳ ಮನೆಯವರು ಇವರ ಪ್ರೀತಯ ಒತ್ತಾಯಕ್ಕೆ ಮಣಿದು ರಿಹಾನಳನ್ನು ದಿನಾಂಕ: ೨೮-೦೯-೨೦೧೪ ರಂದು ದಾವಣಗೆರೆಯಲ್ಲಿ ರೂ. ೨೦,೦೦೦/- ನಗದು ಹಣ ಹಾಗು ರೂ. ೧೦,೦೦೦/- ಬೆಲೆ ಬಾಳುವ ಬಟ್ಟೆಗಳನ್ನು ವರದಕ್ಷಣೆ ವರೋಪಚಾರಕ್ಕೆಂದು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಆಕೆಯ ಗಂಡ ರಿಹಾನಳನ್ನು ಮದುವೆಯಾಗಿರುವುದು ಮೃತಳ ಅತ್ತೆಯಾದ ಆರೋಪಿ ಜಮೀಲಾ ಮತ್ತು ಮೃತಳ ನಾದಿನಿಯಾದ ಶ್ರೀಮತಿ. ರಷೀದಾ ಇವರಿಗೆ ಇಷ್ಟವಿಲ್ಲವಾದ್ದರಿಂದ ಮದುವೆಯಾದ ನಂತರದ ದಿನಗಳಲ್ಲಿ ಆರೋಪಿತರ ೩ ಜನರು ಸೇರಿಕೊಂಡು ರಿಹಾನಳಿಗೆ ಇನ್ನೂ ಹೆಚ್ಚಿನ ವರದಕ್ಷಣೆಯಾಗಿ ರೂ. ೫೦,೦೦೦/- ಗಳನ್ನು ತವರು ಮನೆಯಿಂದ ಪಡೆದುಕೊಂಡು ಬರುವಂತೆ ಪೀಡಿದುತ್ತಾ ಹೊq-ಬಡೆ ಮಾಡುತ್ತಾ ಬಂದು ಹೆಚ್ಚಿನ ವರದಕ್ಷಣೆಯನ್ನು ಕೊಡದೇ ಇದ್ದರೆ ರಿಹಾನಳಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕುವುದಾಗಿ ರಿಹಾನಳ ತಂದೆ ತಾಯಿಗಳಿಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಾ ಬಂದು, ಹೆಚ್ಚಿನ ವರದಕ್ಷಣೆ ತಾರದೇ ಇದ್ದುದರಿಂದ ಆರೋಪಿತರು ದಿನಾಂಕ: ೦೨-೧೧-೨೦೧೪ ರಂದು ಸಂಜೆ ೫-೦೦ ಗಂಟೆಗೆ ಸುಮಾರಿಗೆ ಇಟ್ಟಿಗಿ ಗ್ರಾಮದ ತಮ್ಮ ಮನೆಯಲ್ಲಿ ರಿಹಾನಳ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ರಿಹಾನಳಿಗೆ ತಲೆಯಿಂದ ಪಾದದವರೆಗೆ ಸುಟ್ಟ ಗಾಯಗಳಾಗಿದ್ದು, ಈ ಬಗ್ಗೆ ಇಟ್ಟಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸೀರಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣೆಗೆರೆ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆಂದು ಇದದ ದೂರಿನ ಮೇರೆಗೆ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ