ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 25-11-2014
ಪತ್ರಿಕಾ ಪ್ರಕಟಣೆ
1) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯ ಗುಡಿ ಹತ್ತರದ ಮನೆಯಿಂದ 30 ವರ್ಷದ ಹೆಣ್ಣುಮಗಳು ಕಾಣೆಯಾದ ಬಗ್ಗೆ.
ಫಿರ್ಯಾದುದಾರರಾದ ದಾಸರಗಾದಿಲಿಂಗ ತಂದೆ ದಾಸರ ಅಂಜಿನೇಯ, 36 ವರ್ಷ, ದಾಸರ ಜನಾಂಗ, ಕೂಲಿ ಕೆಲಸ, ವಾಸ: ಬ್ರಹ್ಮಯ್ಯಗುಡಿ ಹತ್ತಿರ, ಕಪ್ಪಗಲ್ ರಸ್ತೆ, ಬಳ್ಳಾರಿ ಇವರ ಹೆಂಡತಿಯಾದ ಶ್ರೀಮತಿ. ವರಲಕ್ಷ್ಮೀ ವಯಸ್ಸು 30 ವರ್ಷ, ಇವರು ದಿನಾಂಕ 19-11-2014 ರಂದು ಬೆಳಿಗ್ಗೆ ಸುಮಾರು 5-30 ಗಂಟೆಯಿಂದ 6-00 ಗಂಟೆಯ ಸಮಯದಲ್ಲಿ ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯಗುಡಿ ಹತ್ತಿರ ಇರುವ ಫಿರ್ಯಾಧಿದಾರರ ಗುಡಿಸಲು ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿ ಮಾಡಿಕೊಡಲು ಕೋರಿ ದೂರು ಇದ್ದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ