ಭಾನುವಾರ, ನವೆಂಬರ್ 16, 2014

Press Note as on 16-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 16-11-2014
ಪತ್ರಿಕಾ ಪ್ರಕಟಣೆ

1.            ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಬಸವ ಕಾಲುವೆಯಲ್ಲಿ ಅಪರಿಚಿತ ಮಹಿಳೆಯನ್ನು ಕೈ ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಕೊಲೆ ಮಾಡಿ ನೀರಿನಲ್ಲಿ ಹಾಕಿ ಹೋಗಿರುವ ಬಗ್ಗೆ.

          ಪಿರ್ಯಾದಿದಾರರಾದ ಶ್ರೀ. ಎಂ.ಗೋವಿಂದ  ತಂದೆ ಬಯೋಜಪ್ಪ  ವ:39 ವರ್ಷ, ಮರಾಠಿ ಜನಾಂಗ, ನೀರಾವರಿ ಇಲಾಖೆಯಲ್ಲಿ ಲಸ್ಕರ್ ಕೆಲಸವಾಸ: ಹಳೇ ಮಲಪನಗುಡಿ ಗ್ರಾಮ, ಹೊಸಪೇಟೆ ತಾಲ್ಲೂಕು ನೀರಾವರಿ ಇಲಾಖೆಯಲ್ಲಿ ಅಸ್ಕರ್ ಕೆಲಸ ಮಾಡುತ್ತಿದ್ದು  ಇವರಿಗೆ  ಮಲಪನಗುಮಡಿ ಗ್ರಾಮದ ಬಳಿ ಇರುವ  10 ನೇ ಮೈಲಿ ಕಲ್ಲಿನಿಂದ 17 ನೇ ಮೈಲಿ ಕಲ್ಲಿನ ವರೆಗೆ ಕಾಲುವೆ ಕಾಯುವ ಕಾಯುವ  ಲಸ್ಕರ್  ಕೆಲಸ ಮಾಡುತ್ತಿದ್ದು  ಕೊಂಡನಾಯಕನಹಳ್ಳಿಯ ಬಳಿ  ಬಸವ ಕಾಲುವೆಗೆ ಅಡ್ಡಲಾಗಿ  ರಸ್ತೆಗೆ ಸೇತುವೆ ಇದ್ದು ಈ ಸೆತುವೆಯ ಒಂದು ಬಾಗ  ಬಿದ್ದು ಹೋಗಿರುವುದರಿಂದ ಅದನ್ನು ಸರಿ ಪಡಿಸುವ ಸಲುವಾಗಿ ಸದರಿ ಕಾಲುವೆಯ ನೀರನ್ನು ಬಂದ್ ಮಾಡಿರುತ್ತಾರೆ, ಪಿರ್ಯಾದಿದಾರರು ದಿನಾಂಕ:15/11/2014 ರಂದು ಬೆಳಿಗ್ಗೆ ಕರ್ತವ್ಯದ ಮೇಲೆ ಇದ್ದು ಕಾಲುವೆಯನ್ನು ಚಕ್ ಮಾಡುತ್ತಾ ಬರುತ್ತಿರುವಾಗ 11.3 ನೇ ಮೈಲಿ ಕಲ್ಲಿನ ಬಳಿ ಕಾಲುವೆಯಲ್ಲಿ ನಿಂತ ನೀರಿನಲ್ಲಿ ಒಬ್ಬ ಅನಾಮಧೇಯ ಮಹಿಳೆಯ ಶವ ಬೋರಲಾಗಿ ತೇಲುತ್ತಿದ್ದು ಅವಳ ಮೈ ಮೇಲೆ ಕೆಂಪು ಕಲರಿನ ಜಾಕೇಟ್ ಹಾಗು ಕರಿಯ ಗೆರೆಯುಳ್ಳ ಕೆಂಪು, ಬಿಳಿ ಹಳದಿ ಹೂಗಳಿರುವ ಸೀರೆ ಇದ್ದು, ಈಕೆಯ ಕೈಗಳನ್ನು ಮತ್ತು ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿದಂತೆ ಕಂಡುಬರುತ್ತಿದ್ದು ಯಾರೋ ದುಷ್ಕರ್ಮಿಗಳು ಈ  ಸುಮಾರು 30-32 ವರ್ಷ   ವಯಸ್ಸಿನ  ಅನಾಮಧೇಯ ಮಹಿಳೆ ಹೆಸರು ವಿಳಾಸ ಗೊತ್ತಿರುವುದಿಲ್ಲ ಆಕೆಯನ್ನು ಯಾವುದೋ ಕಾರಣಕ್ಕಾಗಿ ಕೊಲೆ ಮಾಡಿ ಸಾಕ್ಷತ್ವವನ್ನು ನಾಶಪಡಸುವ ಉದ್ದೇಶದಿಂದ ಕಾಲುವೆಯಲ್ಲಿ ತಂದು ಹಾಕಿರುವಂತೆ ಕಂಡು ಬರುತ್ತಿದೆ ಎಂದು ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಕೊಟ್ಟ ದೂರಿನ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                     
  ಪೊಲೀಸ್ ಸೂಪರಿಂಟೆಂಡೆಂಟ್,     
                            ಬಳ್ಳಾರಿ.                
ಇವರಿಗೆ
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ