ಮಂಗಳವಾರ, ನವೆಂಬರ್ 4, 2014

PRESS NOTE AS ON 02-11-2014

                 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: ೦೨-೧೧-೨೦೧೪
ಪತ್ರಿಕಾ ಪ್ರಕಟಣೆ 

೧) ಬಳ್ಳಾರಿ ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ಸರಹದ್ದಿನ  ಗೋಲ್ಡ್‌ಸ್ಮಿತ್ ಕಾಲೋನಿಯಿಂದ ಗಂಡ ಮತ್ತು ಇಬ್ಬರು ಮಕ್ಕಳು ಎಲ್ಲಿಗೋ ಹೋಗಿದ್ದು, ಕಾಣೆಯಾಗಿರುವ ಬಗ್ಗೆ.  
  
      ಫಿರ್ಯಾದಿದಾರರಾದ ಶ್ರೀಮತಿ ಫರ್‌ಹಿನ್ ಬೇಗಂ  ಗಂಡ ಜಹಿಂದ್ ಬಾಷ ವ: ೨೩ ವರ್ಷ ವಾಸ: ಗೋಲ್ಡ್ ಸ್ಮಿತ್ ಕಾಲೋನಿ, ಬಳ್ಳಾರಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಫಿರ್ಯಾದಿದಾರರ ಗಂಡ ತಮ್ಮ ಮಕ್ಕಳಾದ ೧] ಉಮೇರ್ ವ: ೪ವರ್ಷ, ೨] ಜೈನಾ ವ: ೨ ವರ್ಷ ರವರನ್ನು ಫಿರ್ಯಾದಿದಾರರ ಗಂಡ ದಿನಾಂಕ: ೦೧-೧೧-೨೦೧೪ ರಂದು ಬೆಳಿಗ್ಗೆ ೧೦:೩೦ ತಮ್ಮ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲವಾದ್ದರಿಂದ ಫಿರ್ಯಾದಿದಾರರು ತಮ್ಮ ಸಂಬಂಧಿಕರ ಮನೆಗೆಳಲ್ಲಿ ಹುಡುಕಾಡಿ ಎಲ್ಲಿಯೂ ಪತ್ತಿಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

೨) ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಸರಹದ್ದಿನ  ಟ್ಯಾಂಕ್‌ಬಂಡ್ ರಸ್ತೆಯಲ್ಲಿನ ಪಾದುಕಾ ಫುಟ್‌ವರ್ಲ್ಡ್ ಅಂಗಡಿಯಿಂದ ಶ್ರೀನಿವಾಸಲು ಇವರು ಎಲ್ಲಿಗೋ ಹೋಗಿದ್ದು, ಕಾಣೆಯಾಗಿರುವ ಬಗ್ಗೆ.   

        ಪಿರ್ಯಾದಿದಾರರಾದ ಶ್ರೀ. ಎನ್ . ರವಿ ತಂದೆ ಶ್ರೀನಿವಾಸುಲು ೪೨ ವರ್ಷ ,ವಾಸ; ಮನೆ ನಂ; ೩೫/೨, ವಾರ್ಡ ನಂ;೧೩ ಮರಾಠ ಬೀದಿ, ಪಾಂಡುರಂಗ ಗುಡಿ ಹತ್ತಿರ, ಕಮ್ಮಿಂಗ್ ರೋಡ್,ಬಳ್ಳಾರಿ. ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನಂದರೆ, ದಿ; ೨೬/೦೮/೨೦೧೪ ರಂದು ೧೨;೩೦ ಮಧ್ಯಾಹ್ನ ಗಂಟೆಗೆ    ಬಳ್ಳಾರಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಪಾದುಕಾ ಪುಟ್‌ವರ್ಲ್ಡ್ ಶಾಪ್‌ಗೆ ಪಿರ್ಯಾದಿದಾರರ ತಂದೆ ಶ್ರೀನಿವಾಸಲು, ೫೫ ವರ್ಷ, ಇವರು ಬಂದು ಪಿರ್ಯಾದಿದಾರರಿಗೆ ಅಂಗಡಿಯ ಬೀಗವನ್ನು ಕೊಟ್ಟು  ಯಾರಿಗೆ ಏನೇನು ಕೊಡಬೇಕು ಕೊಡು ಅಂತಾ ಹೇಳಿದಾಗ ಪಿರ್ಯಾದಿದಾರರು ತನಗೂ ಈ ಅಂಗಡಿಗೆ ಏನು ಸಂಬಂಧ ಅಂತಾ ಹೇಳಿದ್ದಕ್ಕೆ ಪಿರ್ಯಾದಿದಾರರ ತಂದೆಯಾದ  ಶ್ರೀನಿವಾಸ ರವರು ತನ್ನ ಕೈಯಲ್ಲಿದ್ದ ಬೀಗವನ್ನು ಬೀಸಾಡಿ ಎಲ್ಲಿಗೋ ಹೋಗಿದ್ದ ಆ ದಿನದಿಂದ ಇಲ್ಲಿಯವರೆಗೂ ಶ್ರೀನಿವಾಸನನ್ನು ನಗರದ ಎಲ್ಲಾ ಕಡೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರು  ಶ್ರೀನಿವಾಸರವರ ಇರುವಿಕೆಯ ಬಗ್ಗೆ ಎಲ್ಲಿಯೂ ಮಾಹಿತಿ ದೊರೆತಿರುವುದಿಲ್ಲವೆಂದು ಕೊಟ್ಟ ದುರಿನ ಮೇರೆಗೆ ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                           ಪೊಲೀಸ್ ಸೂಪರಿಂಟೆಂಡೆಂಟ್,                                                                            
                                                                                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು                        ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ