ಶುಕ್ರವಾರ, ಸೆಪ್ಟೆಂಬರ್ 4, 2015

PRES NOTE OF 04092015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0373/2015
(IPC 1860 U/s 504,143,147,148,149,323,324,506(2) )
04/09/2015 Under Investigation
RIOTS - Others
Brief Facts :  ದಿನಾಂಕ: 4-9-2015 ರಂದು ಬೆಳಗಿನ ಜಾವ 1-00 ಗಂಟೆಗೆ ಶ್ರೀ. ಕೆ. ಗೋವಿಂದಪ್ಪ, ವಾಸ: ಬೀಸಲಹಳ್ಳಿಗ್ರಾಮರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ಮಹೇಶನು ತಮಗೆ ನೋಡಿದಾಗಲೆಲ್ಲಾ ಉಗುಳುವುದು, ದುರುಗುಟ್ಟಿ ನೋಡುವುದು ಮಾಡುತ್ತಿದ್ದರಿಂದ ತಾನು ಈಗ್ಗೆ ಸುಮಾರು ದಿನಗಳ ಹಿಂದೆ ಮಹೇಶನಿಗೆ ಈ ರೀತಿ ತಮಗೆ ನೋಡಿ ಯಾಕೆ ಉಗುಳುತ್ತಿಯ ಎಂದು ಬುದ್ಧಿ ಹೇಳಿದ್ದು. ನಿನ್ನೆ ದಿನ ದಿನಾಂಕ:   3-9-2015 ರಂದು ರಾತ್ರಿ 7-40 ತಾನು, ತನ್ನ ತಮ್ಮ ಸಣ್ಣ ನಾಗಪ್ಪ ಬೀಸಲಹಳ್ಳಿಗ್ರಾಮದ ಅನಂತಪುರ ಮೇನ್ ರಸ್ತೆಯಲ್ಲಿರುವ ಶೇಖಮ್ಮರವರ ಬೀಡಿ ಅಂಗಡಿ ಮುಂದೆ ನಿಂತಿದ್ದಾಗ ಅಲ್ಲಿಗೆ 1]. ಮಹೇಶ, 2]. ತಿಮ್ಮಪ್ಪ, 3]. ರಮೇಶ, 4]. ಸಂತೋಷ, 5]. ಉಮೇಶ ರವರು ಗುಂಪು ಕೂಡಿಕೊಂಡು ತಮ್ಮ ಹತ್ತಿರ ಬಂದು ಮಹೇಶನು ತನಗೆ ಬೈದಾಡಿ ಕಟ್ಟಿಗೆಯಿಂದ ಹೊಡೆದಿದ್ದು ಬಿಡಿಸಲು ಬಂದ ತನ್ನ ತಮ್ಮನಿಗೆ ಉಳಿದವರು ಕೈಕಾಲುಗಳಿಂದ ಹೊಡೆದಿರುತ್ತಾರೆಂದು ಮಹೇಶನು ಹೋಗುತ್ತಾ ತನಗೆ ಲೇ ಸೂಳೇ ಮಗನೇ ತನ್ನ ತಂಟೆಗೆ ಬಂದರೆ ನಿನ್ನ ಪ್ರಾಣ ತೆಗೆಯುತ್ತೇನೆಂದು ಚಾಕು ತೋರಿಸಿ ಪ್ರಾಣ ಬೇದರಿಕೆ ಹಾಕಿ ಹೋಗಿರುತ್ತಾನೆಂದು ತಾನು ಮತ್ತು ತನ್ನ ತಮ್ಮ ವಿಮ್ಸ್ ನಲ್ಲಿ ಚಿಕೆತ್ಸೆ ಪಡೆದುಕೊಂಡು ಬಂದಿದ್ದಾಗಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.
2 Cr.No:0374/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
04/09/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 4-9-2015 ರಂದು ಬೆಳಿಗ್ಗೆ 10-30 ಗಂಟೆಗೆ ಶ್ರೀ. ಕೆ. ಹೊಸಕೇರಪ್ಪ, ಪಿ.ಎಸ್.ಐ., ಗ್ರಾಮೀಣ ಪೊಲೀಸ್ ಠಾಣೆ, ಬಳ್ಳಾರಿರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಶ ದಿನಾಂಕ: 4-9-2015 ರಂದು ಬೆಳಿಗ್ಗೆ ಪಿ.ಎಸ್.ಐರವರು ಠಾಣೆಯ ಸಿಬ್ಬಂದಿಯವರಾದ ಹೆಚ್ಸಿ-43, ಪಿ.ಸಿ-987-500 ರವರೊಂದಿಗೆ ಪೊಲೀಸ್ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ರೌಂಡ್ಸ್ನಲ್ಲಿದ್ದಾಗ ಮೋಕಾ ರಸ್ತೆಯಲ್ಲಿ ಕೆಲವು ಜನರು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಮೋಕಾ ರಸ್ತೆ ವಾಜಪೇಯಿ ಬಡಾವಣೆ ಮುಂದುಗಡೆ ನಿಂತಿದ್ದಾಗ ಬೆಳಿಗ್ಗೆ 8-15 ಗಂಟೆಗೆ ಸಂಗನಕಲ್ಲು ಕಡೆಯಿಂದ 3 ಲಾರಿಗಳು ಬರುತ್ತಿದ್ದು ನೋಡಿ ನಿಲ್ಲಿಸಲು ಸೂಚಿಸುತ್ತಿದ್ದಂತೆ 3 ಲಾರಿಗಳನ್ನು ಚಾಲಕರುಗಳು ಸ್ವಲ್ಪ ದೂರದಲ್ಲಿ ನಿಲ್ಲಿಸಿದರು ನಾವು ಹತ್ತಿರ ಹೊಗುತ್ತಿದ್ದಂತೆ ಮುಂದಿನ ಲಾರಿಯಿಂದ ಒಬ್ಬ ವ್ಯಕ್ತಿ, ಮದ್ಯದ ಲಾರಿಯಿಂದ ಒಬ್ಬ ವ್ಯಕ್ತಿ ಮತ್ತು ಕೊನೆಯ ಲಾರಿಯಿಂದ ಒಬ್ಬ ವ್ಯಕ್ತಿ ಮತ್ತು ಅದರ ಚಾಲಕ ಓಡಿ ಹೋದರು. 3 ಲಾರಿಗಳನ್ನು ಪರಿಶೀಲಿಸಿ ನೋಡಲು ಅವುಗಳಲ್ಲಿ ಮರಳು ತುಂಬಿದ್ದು ಕಂಡು ಬಂದಿದ್ದು 3 ಲಾರಿಗಳ ಚಾಲಕರು ಮತ್ತು ಮಾಲೀಕರು ಯಾವುದೇ ಪರವಾನಿಗೆ ಪಡೆಯದೇ ಹಗರಿ ನದಿಯಿಂದ ಮರಳನ್ನು ಕಳ್ಳತನ ಮಾಡಿ ಸಾಗಾಣಿಕೆ ಮಾಡುತ್ತಿದ್ದರಿಂದ 1] ಟಿಪ್ಪರ್ ಲಾರಿ ನೊಂದಣಿ ಸಂಖ್ಯೆ ಎ.ಪಿ-31-ಟಿ-3264 2] ಟಿಪ್ಪರ್ ಲಾರಿಯಿದ್ದು ನೊಂದಣಿ ಸಂಖ್ಯೆ ಕೆ.ಎ-34-ಡಿ-4599 3] ಟಿಪ್ಪರ್ ಲಾರಿ ಇದ್ದು ನೊಂದಣಿ ಸಂಖ್ಯೆ: ಕೆ.ಎ-34-6126 ಗಳನ್ನು ಅವುಗಳಲ್ಲಿ ತುಂಬಿದ 15 ಮೆಟ್ರಿಕ್ ಟನ್ ಮರಳನ್ನು ಮತ್ತು ಸ್ಯಾಂಪಲ್ ಮರಳನ್ನು ಜಪ್ತು ಮಾಡಿಕೊಂಡು ವೇಣು ಮತ್ತು ನಾಗರಾಜರವರನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು ಇವರ ಮೇಲೆ ಮತ್ತು ಪರಾರಿಯಾದವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
3 Cr.No:0375/2015 04/09/2015 Under 
(SC AND THE ST  (PREVENTION OF ATTROCITIES) ACT, 1989 U/s 3(1)(10) ; IPC 1860 U/s 34,504,323,324 ) Investigation
SCHEDULED CASTE AND THE SCHEDULED TRIBES - Scheduled Tribes
Brief Facts :  ದಿನಾಂಕ: 4-9-2015 ರಂದು ಮದ್ಯಾಹ್ನ 2-15 ಗಂಟೆಗೆ ಶ್ರೀ. ವೆಂಕಟೇಶ್, ವಾಸ: ವಿನಾಯಕನಗರರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ದಿನಾಂಕ: 1-9-2015 ರಂದು ಬೆಳಗಿನ ಜಾವ ತಾನು ಹನುಮಪ್ಪರವರ ಹೋಟಲ್ಗೆ ಹೋಗಿ ಟೀ ಕುಡಿದು ಅಲ್ಲಿಂದ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದು ಸಂಜೆ 5-30 ಗಂಟೆಗೆ ತಾನು ತಮ್ಮ ಮನೆಯ ಮುಂದೆ ಇದ್ದಾಗ ಗೊಲ್ಲರ ಜನಾಂಗದ ಹನುಮಪ್ಪ ಮತ್ತು ಆತನ ಸ್ನೇಹಿತ ವಾಲ್ಮೀಕಿ ಜನಾಂಗದ ಭೀಮೇಶ್ ರವರು ತಮ್ಮ ಮನೆಯ ಮುಂದೆ ಬಂದವರೇ ಹನುಮಪ್ಪನು ತನಗೆ ಲೇ ದಾಸರ ಸೂಳೇ ಮಗನೇ, ಸಣ್ಣ ಜಾತಿಗೆ ಹುಟ್ಟಿದವನೆ ತಮ್ಮ ಹೋಟಲ್ ಗೆ ಬಂದು ತನ್ನ ಹೆಂಡತಿಗೆ ನೋಡುತ್ತಿಯ ಎಂದು ಬೈದಾಡಿ ಇಟ್ಟಿಗೆಯಿಂದ ತನಗೆ ಹೊಡೆದಿದ್ದು ಬಿಡಿಸಲು ಬಂದ ತನ್ನ ತಾಯಿ ಶ್ರೀಮತಿ. ಪಾರ್ವತಮ್ಮಳಿಗೆ ಭೀಮೇಶನು ಇಟ್ಟಿಗೆ ತುಂಡಿನಿಂದ ಹೊಡೆದಿರುತ್ತಾನೆಂದು ತನ್ನ ಅಣ್ಣನ ಮಗಳು ಕು: ಸುನೀತ ಬಿಡಿಸಲು ಬಂದಾಗ ಹನುಮಪ್ಪನು ಕಾಲಿನಿಂದ ಸುನೀತಳಿಗೆ ಜಾಡಿಸಿ ಒದ್ದಿರುತ್ತಾನೆಂದು, ತಾವು ವಿಮ್ಸ್ ನಲ್ಲಿ ಚಿಕೆತ್ಸೆ ಪಡೆದುಕೊಂಡು ಬಂದಿದ್ದಾಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ
Hirehadagali PS
4 Cr.No:0159/2015
(CODE OF CRIMINAL PROCEDURE, 1973 U/s 110(E)(G) )
04/09/2015 Under Investigation
CrPC - Security For Good Behaviour (Sec 110)
Brief Facts :  ನಾನು ದಿನಾಂಕ 04-09-2015 ರಂದು ಬೆಳೆಗ್ಗೆ 09.30 ಗಂಟೆಗೆ ಪಿ.ಸಿ-737 ರವರೊಂದಿಗೆ ಹಿರೇಹಡಗಲಿ ಠಾಣಾ ಸರಹದ್ದಿನ 8 ನೇ ಗ್ರಾಮ ಗಸ್ತಿನ ಗ್ರಾಮಗಳಾದ ಚಿಕ್ಕಕೊಳಚಿ, ಹಿರೇಕೊಳಚಿ, ತಮಲಾಪುರ  ಗ್ರಾಮಗಳಿಗೆ ಬೇಟಿ ನೀಡಿ ನಂತರ ಬೆಳೆಗ್ಗೆ 10.30 ಗಂಟೆಗೆ ಕಗ್ಗಲಕಟ್ಟಿ ತಾಂಡಕ್ಕೆ ಬೇಟಿ ನೀಡಿದ್ದು  ಆರೋಪಿಯು ಕಗ್ಗಲಕಟ್ಟಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಓಡಾಡುತ್ತ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ದುರ್ಭಾಷೆಗಳಿಂದ ಬೈದಾಡುತ್ತ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಾ ಅಸಭ್ಯ ರೀತಿಯಿಂದ ವರ್ತಿಸುತ್ತ ಸಾರ್ವಜನಿಕರಿಗೆ ಭಯ-ಭೀತಿ ಊಂಟು ಮಾಡುತ್ತ ಶಾಂತತಾ ಭಂಗ ಉಂಟು ಮಾಡುತ್ತಿದ್ದು, ಈತನ ಬಗ್ಗೆ ಬಾತ್ಮೀದಾರರನ್ನು ಕಂಡು ಮಾಹಿತಿ ಸಂಗ್ರಹಿಸಲು ತನ್ನ ಹೆಂಡತಿಗೂ ಸಹ ದುಭಾಷೆಗಳಿಂದ ಬೈಯುತ್ತಾ ಕಿರಿಕಿರಿ ಮಾಡುವ ಪ್ರವೃತ್ತಿವುಳ್ಳವನೆಂದು ತಿಳಿದುಬಂದಿದ್ದು  ಹಾಗು ಈತನು ಈ ಹಿಂದೆ ಸಹ ಇದೇ ರೀತಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತ ದುಭರ್ಾಷೆಗಳಿಂದ ಬೈಯುತ್ತಾ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದು ಸದರಿ ಆರೋಪಿಯು ರೂಢಿಗತವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತ ಅಸಭ್ಯವಾಗಿ ವರ್ತಿಸುತ್ತ ಭಯ-ಭೀತಿ ಉಂಟು ಮಾಡುತ್ತ ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದರಿಂದ ಆರೋಪಿಗೆ ದಸ್ತಗಿರಿ ಮಾಡಿ ಠಾಣೆಗೆ ಬೆಳೆಗ್ಗೆ 11.15 ಗಂಟೆಗೆ ಕರೆದುಕೊಂಡು  ಬಂದು ಸದರಿ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದೆ
Hospet Town PS
5 Cr.No:0174/2015
(CODE OF CRIMINAL PROCEDURE, 1973 U/s 41,109 )
04/09/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ: 04/09/2015 ರಂದು ಪಿ.ಎಸ್.ಐ[ಕಾ&ಸು] ರವರು ಮತ್ತು ಪಿ.ಸೀಸ್- 334, 933 ರವರೊಂದಿಗೆ ಗುಡ್ ಮಾರ್ನಿಂಗ್ ಬೀಟ್ ಗೆಂದು ಠಾಣೆಯಿಂದ ಹೊರಟು ನಗರದ  ಮೇನ ಬಜಾರ್, ಹಂಪಿ ರೋಡ್, ಆರ್.ಎಸ್.ರಸ್ತೆ., ಪಟೇಲ್ ನಗರ, ಮುಗಿಸಿಕೊಂಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ  ಹತ್ತಿರ ಪೇಟ್ರೋಲಿಂಗ್ ಮಾಡುತ್ತಿರುವಾಗ್ಗೆ  ಬೆಳಿಗ್ಗೆ 07-25  ಗಂಟೆಗೆ ಒಬ್ಬ  ಅಪರಿಚಿತ ವ್ಯಕ್ತಿ ನಮಗೆ ಅನುಮಾನ ಬರುವಂತೆ ವರ್ತಿಸುತ್ತಿದ್ದು, ಸದರಿಯವನ ಹತ್ತಿರ ಹೋಗುತ್ತಿದ್ದಂತೆಯೇ ನಮ್ಮನ್ನು ನೋಡಿ ಓಡಲು ಪ್ರಯತ್ನಿಸುತ್ತಿರುವಾಗ್ಗೆ ಪಿ.ಪೀಸ್- 334, 933 ರವರು ಸದ್ರಿ ವ್ಯಕ್ತಿಯನ್ನು ಬೆನ್ನು ಹತ್ತಿ ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಮತ್ತು ವಿಳಾಸದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದು, ನಂತರ ಪುನಃ ಒತ್ತಿ ಒತ್ತಿ ವಿಚಾರಿಸಲು ನಿಜವಾದ ಹೆಸರು ಯೂಸೂಫ್ ತಂದೆ ಹುಸೇನ್ ಶೇಖ್, 38 ವರ್ಷ, ಮುಸ್ಲಿಂ ಜನಾಂಗ, ಪೇಂಟಿಂಗ್ ಕೆಲಸ, ವಾಸ|| ವಿನೋಬನಗರ 1ನೇ ಮೇನ್, 13 ನೇ ಕ್ರಾಸ್, ಡಾವಣಗೆರೆ ಎಂದು ತಿಳಿಸಿದ್ದು ಈತನನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಸಂಶಯಪಟ್ಟು ಮುಂಜಾಗ್ರತ ಕ್ರಮ ಅನುಸರಿಸಿ ಸದ್ರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬೆಳಿಗ್ಗೆ 08-05 
ಗಂಟೆಗೆ ವಾಪಾಸ್ಸು ಬಂದು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ