ಸೋಮವಾರ, ಸೆಪ್ಟೆಂಬರ್ 28, 2015

PRESS NOTE OF 28/09/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0408/2015
(CODE OF CRIMINAL PROCEDURE, 1973 U/s 110(E)(G) )
28/09/2015 Under Investigation
CrPC - Security For Good Behaviour (Sec 110)
Brief Facts :  ದಿನಾಂಕ  28-9-2015 ರಂದು ಮದ್ಯಾಹ್ನ ನಾನು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 390 ರವರೊಂದಿಗೆ ಇಲಾಖೆ ಜೀಪ್ ನಂಬರ್ ಕೆ.ಎ-34ಜಿ-303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಗಸ್ತು ಮಾಡುತ್ತಾ ಮದ್ಯಾಹ್ನ 12-30 ಗಂಟೆ ಸಮಯಕ್ಕೆ ಬೆಂಗಳೂರು ರಸ್ತೆ ಗುಗ್ಗರಹಟ್ಟಿ ಬಸ್ ಸ್ಟಾಂಡ್ ಮುಂದುಗಡೆ ಹೋದಾಗ ಜನರು ಗುಂಪಾಗಿ ನಿಂತಿದ್ದು ನೋಡಿ ನಾನು ಜೀಪ್ ನಿಲ್ಲಿಸಿ ಸಿಬ್ಬಂದಿಯವರೊಂದಿಗೆ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಉದ್ದೇಶಿಸಿ ಮಟಕಾ ಜೂಜಾಟ ಆಡಿರಿ ಒಂದು ರೂಪಾಯಿಗೆ ನೂರು ರೂಪಾಯಿ ಬರುತ್ತದೆ. ಮಟಕಾ ಜೂಜಾಟ ಅಡಿರಿ ಸಾಹುಕಾರರು ಅಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟದ ದುಷ್ಟಟಗಳಿಗೆ ಬಿಳುವಂತೆ ಪ್ರಚೋದನೆ ಮಾಡುತ್ತಿದ್ದು, ಜನರಲ್ಲಿ ಮಟಕಾ ಜೂಜಾಟ ಅಡುವ ಆಸೆ ಹುಟ್ಟಿಸುತ್ತಿದ್ದು ಕಂಡು ಬಂದಿತು. ಈ ವ್ಯಕ್ತಿಯನ್ನು ಹಿಗೇಯೇ ಬಿಟ್ಟಲ್ಲಿ ಇತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಇತನನ್ನು ಹಿಡಿದುಕೊಂಡು ಇತನ ಹೆಸರು ವಿಚಾರಿಸಲು ಬಾಲಕೃಷ್ಣ @ ಕೊಂಡಯ್ಯ ತಂದೆ ನಾಗಪ್ಪ, ವ: 48 ವರ್ಷ, ಕೊರಚರಜಾತಿ, ಕೂಲಿಕೆಲಸ, ವಾಸ: ಹುಲಿಗೆಮ್ಮ ಗುಡಿಹತ್ತಿರ, ವೆಂಕಟಮ್ಮಕಾಲೋನಿ, ಗುಗ್ಗರಹಟ್ಟಿ, ಬಳ್ಳಾರಿ. ಅಂತಾ ತಿಳಿಸಿದನು. ಇತನು ಠಾಣೆಯ ಈ ಕೆಳಕಂಡ ಮಟಕಾ ಜೂಜಾಟದ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. 1]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 95/2012 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್
2]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 255/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 3]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 300/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 396/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 5]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 24/2014 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್6]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 10/2015 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ಇತನನ್ನು ಹಿಗೆಯೇ ಬಿಟ್ಟಲ್ಲಿ ಸಾರ್ವಜನಿಕರಿಗೆ ದುಷ್ಟಟಗಳಿಗೆ ಬಿಳುವಂತೆ ಮಾಡಿ, ಸಾರ್ವಜನಿಕರು ಸಂಜ್ಞೆಯ ಅಪರಾದಗಳಲ್ಲಿ ತೊಡಗುವಂತೆ ಮಾಡಿ ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಈತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಮದ್ಯಾಹ್ನ 1-00 ಗಂಟೆಗೆ ಬಂದು ಈತನ ಮೇಲೆ ಠಾಣೆ ಗುನ್ನೆ ನಂ: 408/2015 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.
Brucepet PS
2 Cr.No:0189/2015
(IPC 1860 U/s 379 )
28/09/2015 Under Investigation
THEFT - Of Automobiles - Of Two Wheelers
Brief Facts :  ದಿನಾಂಕ:29/08/2015 ರಂದು ಸಂಜೆ 7.45 ಗಂಟೆಯಿಂದ ರಾತ್ರಿ 8.00 ಗಂಟೆ ಮದ್ಯಾವದಿಯಲ್ಲಿ ಬಳ್ಳಾರಿ ನಗರದ ಮೀನಾಕ್ಷಿ ಸರ್ಕಲ್ ಹತ್ತಿರದ ಶಿವಲೀಲಾ ಹೋಟೆಲ್ ಎದರುಗಡೆ ಇರುವ ಹರಿಯಾಣ ಹ್ಯಾಂಡ್ ಲೂಮ್ಸ್ ಮುಂದುಗಡೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಫಿರ್ಯಾದಿದಾರರ ಕಪ್ಪು ಬಣ್ಣದ ಹಿರೋ ಸ್ಪೆಂಡರ್ ಪ್ಲಸ್ ಮೋಟರ್ ಸೈಕಲ್  ನಂ.ಕೆಎ34-ಈಬಿ-8624 ಚಾಸಿ ನಂ. MBLHA10AMDHK67264 Engine No.HA10EJDHK48833, ಮಾಡಲ್ 2013, ಇದರ ಅಂದಾಜು ಬೆಲೆ ರೂ.37,000/- ಗಳ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
Sandur PS
3 Cr.No:0157/2015
(IPC 1860 U/s 379 )
28/09/2015 Under Investigation
THEFT - Of Automobiles - Of Two Wheelers
Brief Facts :  ದಿನಾಂಕ 28.9.2015 ರಂದು ಪಿರ್ಯಾದುದಾರರಾದ ರಾಜು H.B.ತಂದೆ ಬಸವನ ಗೌಡ H.B.ವಃ27 ವರ್ಷ, ಲಿಂಗಾಯತರರು ರಿಲಾಯನ್ಸ್ ಆಫೀಸ್‌ನಲ್ಲಿ ಕೆಲಸ ವಾಸಃ- 8 ನೇ ವಾರ್ಡ ಮೇನ್ ಬಜಾರ್ ವೀರಶೈವ ಕಲ್ಯಾಣ ಮಂಟಪದ ಬಳಿ  ಸಂಡೂರು. ಸ್ವಂತ ಊರು ಃ- ಊರಮ್ಮ ಗುಡಿ ಬಳಿ ತಂಬ್ರಳ್ಳಿ H.B.ಹಳ್ಳಿ.[ತಾ]
ರವರು ಕೊಟ್ಟ ದೂರು ಏನೆಂದರೆ ನಾನು 2015 ಫೆಬ್ರವರಿ ತಿಂಗಳಲ್ಲಿ ಹೊಸಪೇಟೆಯಲ್ಲಿ ಒಂದು ಹೀರೊ ಸ್ಪ್ಲೆಂಡರ್ ಪ್ರೊ ಮೋಟಾರ್ ಸೈಕಲ್ ನಂಬರ್ K.A.35-EB 4839 ಖರೀದಿ ಮಾಡಿರುತ್ತೇನೆ.ದಿನಾಂಕ 18.09.2015 ರಾತ್ರಿ ನಾನು ದಿನನಿತ್ಯದಂತೆ ನನ್ನ HERO -SPLENDR- PRO ಮೋಟಾರ್ ಸೈಕಲ್ ನಂಬರ್ K.A.35-EB4839 ರನ್ನು ನಮ್ಮ ಮನೆಯ ಮುಂದುಗಡೆ ನಿಲ್ಲಿಸಿ ಅದರ ಹ್ಯಾಂಡ್‌ಲಾಕ್ ಮಾಡಿ ನಂತರ ನಮ್ಮ ಮನೆಯಲ್ಲಿ ಊಟ ಮಾಡಿ ನಂತರ ವೀರಶೈವ ಕಲ್ಯಾಣ ಮಂಟ ಪಕ್ಕೆ ಗಣೇಶ ಹಬ್ಬದ ಪ್ರಯುಕ್ತ ನೋಡಲು ಹೋಗಿ ನಂತರ ವಾಪಾಸ್ಸು ರಾತ್ರಿ 11-30 ಗಂಟೆಗೆ ವಾಪಾಸ್ಸು ಮನೆಗೆ ಬಂದು ಮಲಗುವ ಮುಂಚೆ ಮೋಟಾರ್ ಸೈಕಲ್ ಹ್ಯಾಂಡ್‌ಲಾಕ್‌ನ್ನು ಚೆಕ್ ಮಾಡಿಕೊಂಡು ಮನೆಯಲ್ಲಿ ಒಳಗೆ 
ಮಲಗಿಕೊಂಡೆನು.ನಂತರ ಮರುದಿನ ದಿನಾಂಕ 19/09/2015 ರಂದು ಬೆಳಿಗ್ಗೆ 8-00 ಗಂಟೆಗೆ ಎದ್ದು ನೋಡ ಲಾಗಿ ಮನೆಯ ಮುಂದೆ ನಿಲ್ಲಿಸಿ ಬೀಗ ಹಾಕಿದ್ದ ನನ್ನ ಬೈಕ್ ನೋಡಲಾಗಿ ಇರಲಿಲ್ಲಅಲ್ಲಿ ಅಕ್ಕಪಕ್ಕದಲ್ಲಿ ಹುಡುಕಾಡಲಾಗಿ ಇರಲಿಲ್ಲ.ಬೈಕ್‌ನ್ನು ಯಾರೋ ಕಳ್ಳರು ಮಾಡುವ ಉದ್ದೇಶದಿಂದ ದಿನಾಂಕ 18.09.2015 ರಂದು ರಾತ್ರಿ 11=30 ಗಂಟೆಯಿಂದ ದಿನಾಂಕ 19.09.2015 ಬೆಳಿಗ್ಗೆ 08-00 ಗಂಟೆಯ ಮದ್ಯದ ಅವಧಿಯಲ್ಲಿ ಕಳವು ಮಾಡಿ ಕೊಂಡು ಹೋಗಿರುತ್ತಾರೆ.ಕಳುವಾದ ಮೋಟಾರ್ ಸೈಕಲ್‌ನ್ನು ಬಳ್ಳಾರಿ, ಹೊಸಪೇಟೆ,ಕೂಡ್ಲಿಗಿ. ಹಾಗು ಇತರೆ ಕಡೆಗಳಿಗೆಲ್ಲಾ ಹೋಗಿ ಇಲ್ಲಿಯವರೆವಿಗೂ ಹುಡುಕಾಡಿದ್ದು ಸಿಗದೇ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಕಳುವಾದ ಮೇಲ್ಕಂಡ ನನ್ನ ಮೋಟಾರ್ ಸೈಕಲ್ ಮತ್ತು ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ಕಳುವಾದ ಮೋಟಾರ್ ಸೈಕಲ್‌ನ ವಿವರಗಳು[1] ನೊಂದಣಿ ಸಂಖ್ಯೆಃ- K.A.35-EB4839 [2]ಚಾಸಿ ನಂಬರ್ MB LHA10BFFHA82822 [3]ಇಂಜೀನ್ ನಂಬರ್ HA10ERFHA18768 [4]ಬಣ್ಣ  ಕಪ್ಪುಬಣ್ಣ [5] ಮಾದರಿ ಃ-HERO SPLENDOR.PRO [6] ವಾಹನದ ಅಂದಾಜು ಮೊತ್ತ ಃ-35000/-ರೂಗಳು.ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
Thoranagal PS
4 Cr.No:0148/2015
(INDIAN MOTOR VEHICLES ACT, 1988 U/s 192(A) ; IPC 1860 U/s 279 )
28/09/2015 Under Investigation
NEGLIGENT ACT - Other - Related
Brief Facts :  ಪೊಲೀಸ್ ಠಾಣೆಯ ಎ.ಎಸ್. ಐ ಕೃಷ್ಣಪ್ಪ ಆದ ನಾನು ಮಾನ್ಯ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:28-09-2015ರಂದು ಬೆಳಗ್ಗೆ 8.00ಗಂಟೆ ಸಮಯದಲ್ಲಿ ತೋರಣಗಲ್ಲು ಗ್ರಾಮದಲ್ಲಿ ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದಿದ್ದು, ನಂತರ ಪಿಸಿ 232 ರವರ ಮೂಖಾಂತರ ಪಂಚರುಗಳನ್ನು ಠಾಣೆಗೆ ಬರಮಾಡಿಕೊಂಡು, ಅವರಿಗೆ ವಿಷಯವನ್ನು ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ ಮೇರೆಗೆ ಅವರುಗಳು ಒಪ್ಪಿದ ಮೇರೆಗೆ, ಅವರನ್ನು ಮತ್ತು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಪಿಸಿ 232, 1067, 676 ಎ.ಪಿಸಿ 251 ರವರನ್ನು ತಮ್ಮ ಇಲಾಖಾ ಜೀಪ್ ನಂ-ಕೆಎ-34 ಜಿ-488ನೇದ್ದರಲ್ಲಿ ತೋರಣಗಲ್ಲು ಗ್ರಾಮದ ಬೈಪಾಸ್ ರಸ್ತೆಯ ಬಳಿಗೆ ಈ ದಿನ ಬೆಳಗ್ಗೆ 8.30ಗಂಟೆಗೆ ಹೋಗಿ ನೋಡಲಾಗಿ, ತೋರಣಗಲ್ಲು ಗ್ರಾಮದ ಕಡೆಯಿಂದ ಸರಕು ಸಾಗಣೆಮಾಡುವ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬರುತ್ತಿದ್ದ ವಾಹನವನ್ನು, ನಾನು ಮತ್ತು ಸಿಬ್ಬಂದಿಯವರು ಪಂಚರುಗಳ ಸಮಕ್ಷಮ ಒಂದೊಂದು ವಾಹನಗಳನ್ನು ನಿಲ್ಲಿಸಿ, ಅವುಗಳನ್ನು ಪರಿಶೀಲಿಸಿ ನೋಡಲಾಗಿ 1) ನಾಲ್ಕು ಚಕ್ರದ ಬಿಳಿ ಬಣ್ಣದ ಬೂಲೇರೋ ಮ್ಯಾಕ್ಸಿ ಟ್ರಕ್ ನಂ:ಕೆಎ-35 ಬಿ-4821 ನೇದ್ದನ್ನು ನೋಡಲಾಗಿ ಸದರಿ ವಾಹನದಲ್ಲಿದ್ದ 15 ಜನ ಪ್ರಯಾಣಿಕರಿದ್ದು, ಪೊಲೀಸರು ವಾಹನವನ್ನು ನಿಲ್ಲಿಸಿದ ತಕ್ಷಣ ಎಲ್ಲರೂ ಇಳಿದು ಹೋದರು, ನಂತರ ವಾಹನದ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಉದ್ದಾನಪ್ಪ ತಂದೆ ಪೆನ್ನಪ್ಪ 22ವರ್ಷ, ನಾಯಕರ ಜನಾಂಗ, ಡ್ರೈವರ್, ಸಾ:ಕಾಕುಬಾಳು ಗ್ರಾಮ, ಹೊಸಪೇಟೆ (ತಾ) ಬಳ್ಳಾರಿ (ಜಿ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ನಂತರ ಬಂದ 2) ನಾಲ್ಕು ಚಕ್ರದ ಆಶ್ ಕಲರ್ ನ ಟಾಟಾ ಕಂಪನಿಯ ಟಾಟಾ ಎಸ್ ನಂ:ಕೆಎ-34 ಎ-2422 ನೇದ್ದನ್ನು ನೋಡಲಾಗಿ ಸದರಿ ವಾಹನದಲ್ಲಿದ್ದ 14ಜನ ಜನರಿದ್ದು, ಪೊಲೀಸರು ವಾಹನವನ್ನು ನಿಲ್ಲಿಸಿದ ತಕ್ಷಣ ಎಲ್ಲರೂ ಇಳಿದು ಹೋದರು, ನಂತರ ವಾಹನದ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಕೆ ವಜ್ರೇಶ ತಂದೆ ಮಲ್ಲಪ್ಪ 25ವರ್ಷ, ಡ್ರೈವರ್ ಕೆಲಸ, ಸಾ- ಕಾಕುಬಾಳು ಗ್ರಾಮ, ಹೊಸಪೇಟೆ (ತಾ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ತಿಳಿಸಿದನು. ನಂತರ ಬಂದ 3) ಕೆಂಪು ಬಣ್ಣದ ಒಂದು ಟಾಟಾ ಕಂಪನಿಯ ನಾಲ್ಕು ಚಕ್ರದ ಗೂಡ್ಸ್ ಆಟೋ ನಂ:ಕೆಎ-35 ಎ-8620 ಬಂದಿದ್ದು, ಸದರಿ ವಾಹನವನ್ನು ಪೊಲೀಸರು ನಿಲ್ಲಿಸಿದ ತಕ್ಷಣ ಅದರಲ್ಲಿದ್ದ ನಾಲ್ಕು ಜನ ವಾಹನವನ್ನು ಇಳಿದು ತಮ್ಮ ಕೆಲಸಗಳಿಗೆ ಹೋದರು, ನಂತರ ಸದರಿ ವಾಹನದ ಡ್ರೈವರ್ ಅನ್ನು ವಿಚಾರಿಸಲಾಗಿ ತನ್ನ ಹೆಸರು ಸದ್ದಾಂ ಹುಸೇನ್ ತಂದೆ ನಿಜಾಮುದ್ದೀನ್ 18ವರ್ಷ, ಡ್ರೈವರ್ ಕೆಲಸ, ಸಾ:ಎಲ್&ಟಿ ಕಾಲೋನಿ, ಜಿಂದಾಲ್ ಕಾರ್ಖಾನೆ, ತೋರಣಗಲ್ಲು (ಗ್ರಾ) ಸಂಡೂರು (ತಾ) ಸ್ವಂತ ವಿಳಾಸ:ಚರಾಗ (ಗ್ರಾ) ರಾಮಚಂದ್ರಪು (ಪೊ) ಬಲರಾಮಪುರ (ಜಿ) ಛತ್ತಿಸ್ ಘಡ್  (ರಾ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ತದನಂತರ ಬಂದ 4) ನಾಲ್ಕು ಚಕ್ರದ ಸಿಲ್ವರ್ ಕಲರ್ ನ ಟಾಟಾ ಸೂಪರ್ ಎಸ್ ನಂ:ಕೆಎ-35 ಬಿ-4246 ನೇದ್ದಾಗಿದ್ದು, ಪೊಲೀಸರು ನಿಲ್ಲಿಸಿದ ತಕ್ಷಣ ಅದರಲ್ಲಿದ್ದ ಹದಿನಾಲ್ಕು ಜನ ವಾಹನವನ್ನು ಇಳಿದು ತಮ್ಮ ಕೆಲಸಗಳಿಗೆ ಹೋದರು,  ನಂತರ ಅದರಲ್ಲಿದ್ದ ಡ್ರೈವರ್ ರವರನ್ನು ವಿಚಾರಿಸಲಾಗಿ ತಮ್ಮ ಹೆಸರು ಕಮಲೇಶ್ ಶರ್ಮ ತಂದೆ ಲಲನ್ ಶರ್ಮ 36ವರ್ಷ, 36ವರ್ಷ , ಡ್ರೈವರ್ ಕೆಲಸ, ಹಾಲಿ ವಾಸ:ಡಾ.ಬಸವರಾಜ ರವರ ಮನೆ ಹತ್ತಿರ, 1ನೇ ವಾರ್ಡ್, ತೋರಣಗಲ್ಲು ಗ್ರಾಮ, ಸಂಡೂರು (ತಾ) ಸ್ವಂತ ವಿಳಾಸ- ಮೇಘೌಲಖೌಡ್  (ಗ್ರಾ) ನಿಚಲಾಲ್ (ಪೊ) ಮಹರಾಜ ಗಂಜ್ (ಜಿ) ಉತ್ತರಪ್ರದೇಶ (ರಾ) ಎಂದು ತಿಳಿಸಿದನು. ನಂತರ ಮತ್ತೊಂದು  5) ನಾಲ್ಕು ಚಕ್ರದ ಒಂದು ಬಿಳಿ ಬಣ್ಣದ ಮಹೇಂದ್ರ ಮಾಕ್ಸ್ ವಾಹನ ನಂ-ಕೆಎ-35 ಬಿ-1625 ನೇದ್ದಾಗಿದ್ದು , ಇದರಲ್ಲಿ ನಾಲ್ಕುಜನರಿದ್ದು , ಪೊಲೀಸರು ವಾಹವನ್ನು ನಿಲ್ಲಿಸಿದ ತಕ್ಷಣ ಇಳಿದು ಹೋದರು. ನಂತರ ವಾಹನದ ಡ್ರೈವರ್ ನನ್ನು ವಿಚಾರಿಸಲಾಗಿ ತನ್ನ ಹೆಸರು ಎರ್ರಿಸ್ವಾಮಿ ತಂದೆ ಹುಲುಗಪ್ಪ 25ವರ್ಷ, ನಾಯಕರ ಜನಾಂಗ, ಸ್ವಂತ ಕುರೆಕುಪ್ಪ (ಗ್ರಾ) ಸಂಡೂರು (ತಾ) ಎಂದು ತಿಳಿಸಿ, ತಾನು ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ನಂತರ 6) ಬಳಿ ಬಣ್ಣದ ನಾಲ್ಕು ಚಕ್ರದ ಟಾಟಾ ಎಸ್ ಕಂಪನಿಯ ನಂ-ಕೆಎ-34 ಎ-7896 ನೇದ್ದಾಗಿದ್ದು, ಇದರಲ್ಲಿ 12ಜನರಿದ್ದು, ಪೊಲೀಸರು ವಾಹನವನ್ನು ನಿಲ್ಲಿಸುತ್ತಿದ್ದಂತೆ ಇಳಿದು ಹೋದರು. ನಂತರ ಡ್ರೈವರ್ ನನ್ನು ವಿಚಾರಿಸಲಾಗಿ ತನ್ನ ಹೆಸರು ಮಂಜುನಾಥ ಡಿ ತಂದೆ ಎರ್ರಿಸ್ವಾಮಿ 25ವರ್ಷ, ಕುರುಬರು ಜನಾಂಗ, ಸಾ-ಹೆಚ್.ಎಲ್.ಸಿ ಕಾಲೋನಿ, ಕುಡುತಿನಿ ಪಟ್ಟಣ, ಬಳ್ಳಾರಿ (ಜಿ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ನಂತರ 7)ಒಂದು ಬಿಳಿ ಬಣ್ಣದ ಟಾಟಾ ಜೀಪ್ ವಾಹನ ನಂ-ಕೆಎ-34 ಎ-7060ನೇದ್ದಾಗಿದ್ದು, ಇದರಲ್ಲಿ 3 ಜನರಿದ್ದು ಪೊಲೀಸರು ವಾಹನವನ್ನು ನಿಲ್ಲಿಸಿದ ತಕ್ಷಣ ಅದರಲ್ಲಿ ಜನರು ಇಳಿದು ಹೋದರು, ನಂತರ ಡ್ರೈವರ್ ನನ್ನು ವಿಚಾರಿಸಲಾಗಿ ತನ್ನ ಹೆಸರು ಡಿ ಚಂದ್ರಶೇಖರ್ ತಂದೆ ದೊಡ್ಡ ಎರ್ರಿಸ್ವಾಮಿ, 34ವರ್ಷ, ಕುರುಬರು ಜನಾಂಗ, ಸಾ-ರ2, ವಾರ್ಡ್ ನಂ-2 ಏಳು ಬೆಂಚೆ (ಗ್ರಾ) ಬಳ್ಳಾರಿ (ತಾ) ಎಂದು ತಿಳಿಸಿದನು. ನಂತರ ವಾಹನದಲ್ಲಿದ್ದ ಜನರನ್ನು ಜಿಂದಾಲ್ ಕಾರ್ಖಾನೆಯ ಹತ್ತಿರ ಗೇಟ್ ಹತ್ತಿರ ಬಿಡಲುಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಸದರಿ ಮೇಲ್ಕಂಡ 7 ವಾಹನಗಳನ್ನು ಪೊಲೀಸರು ಸರಕು ಸಾಗಾಣಿಕೆ ಮಾಡುವ ವಾಹನದಲ್ಲಿ ಪರವಾನಿಗೆ ಉಲ್ಲಂಘಿಸಿ, ಜನರನ್ನು ಸಾಗಾಣಿಕೆ ಮಾಡುತ್ತಿದ್ದರಿಂದ ಮುಂದಿನ ಕ್ರಮಕ್ಕಾಗಿ ತಮ್ಮ ವಶಕ್ಕೆ ಸ್ಥಳದಲ್ಲಿ ಪಡೆದುಕೊಂಡು, ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನಾನು ಸರ್ಕಾರದ ಪರವಾಗಿ ಮೇಲ್ಕಂಡ ಆರೋಪಿಗಳ ವಿರುದ್ದ ಈ ದಿನ ದಿನಾಂಕ-28-09-2015ರಂದು ಬೆಳಗ್ಗೆ 10.15ಗಂಟೆಗೆ ಠಾಣಾ ಗುನ್ನೆ ನಂ-149/2015 ಕಲಂ 279 ಐಪಿಸಿ ಮತ್ತು 192(ಎ) ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ, ಮಾನ್ಯ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ