Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0409/2015 (CODE OF CRIMINAL PROCEDURE, 1973 U/s 109 ) |
29/09/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ 28-09-2015 ರಂದು ರಾತ್ರಿ 11-00 ಗಂಟೆಯಿಂದ ಠಾಣಾ ಸರಹದ್ದಿನಲ್ಲಿ ಪಿರ್ಯಾದಿದಾರರು ಸಿಬ್ಬಂದಿಯಾದ ಪಿಸಿ-404 ರವರನ್ನು ಕರೆದುಕೊಂಡು ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತ ಈ ದಿನ ದಿನಾಂಕ : 29/09/2015 ರಂದು ಬೆಳಗಿನ ಜಾವ 4 ಗಂಟೆಗೆ ಹಲಕುಂದಿ ಗ್ರಾಮದ ಗ್ರಾಮ ಪಂಚಾಯ್ತಿ ಮುಂದಿನ ಕಮಾನಿನ ಹತ್ತಿರದ ಕಟ್ಟೆಯ ಹತ್ತಿರ ಹೋದಾಗ ಅಲ್ಲಿ ಮರೆಯಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಸದರಿಯವರನನ್ನು ನೋಡಿ ಅವನ ಬಳಿ ಹೋಗಿ ವಿಚಾರಿಸಲೆಂದು ಹೋದಾಗ ಅವನು ಸಮವಸ್ತ್ರದಲ್ಲಿದ್ದವರನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅವನನ್ನು ಹಿಡಿದುಕೊಂಡು ವಿಚಾರಿಸಲು ತನ್ನ ಹೆಸರು ದಾದಾವಲಿ ತಂದೆ ಮಾಬುಸಾಬ್, ವ : 20 ವರ್ಷ, ಮುಸ್ಲಿಂ ಜಾತಿ, ಬೇಲ್ದಾರ್ ಕೆಲಸ, ವಾಸ : ಆಶ್ರಯ ಕಾಲೋನಿ, ಬಡಾ ಕಮೇಲ ಹತ್ತಿರ, ಬೈಪಾಸ್ ಕೌಲ್ಬಜಾರ್, ಬಳ್ಳಾರಿ ಎಂದು ತಿಳಿಸಿದ್ದು, ಸದರಿಯವನಿಗೆ ಆ ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಕಾರಣ ಈತನನ್ನು ಹಾಗೇ ಬಿಟ್ಟಲ್ಲಿ ಸದರಿ ಏರಿಯಾದಲ್ಲಿ ಯಾವುದಾದರು ಕನ್ನಾ ಕಳವು ಮಾಡಲು ಬಂದಂತೆ ಸಂಶಯ ಬಂದಿದ್ದರಿಂದ ದಸ್ತಗಿರಿ ಮಾಡಿಕೊಂಡು ವಾಪಾಸ್ ಠಾಣೆಗೆ 05-00 ಎ.ಎಂ. ಗಂಟೆಗೆ ಬಂದು ಆರೋಪಿತನ ವಿರುದ್ದ ಮುಂಜಾಗ್ರತ ಕ್ರಮವಾಗಿ ಠಾಣೆಯ ಗುನ್ನೆ ನಂ. 409/2015 ಕಲಂ:109 ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿದೆ. | |||||||||||||||
2 | Cr.No:0410/2015 (CODE OF CRIMINAL PROCEDURE, 1973 U/s 110(E)(G) ) |
29/09/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ಈ ದಿನ ದಿನಾಂಕಃ 29-9-2015 ರಂದು ಬೆಳಿಗ್ಗೆ ನಾನು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 43 ರವರೊಂದಿಗೆ ಇಲಾಖೆ ಜೀಪ್ ನಂಬರ್ ಕೆ.ಎ-34ಜಿ-303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಗಸ್ತು ಮಾಡುತ್ತಾ ಬೆಳಿಗ್ಗೆ 7-30 ಗಂಟೆ ಸಮಯಕ್ಕೆ ಕಾರ್ಕಲತೋಟ ಗ್ರಾಮದ ಆಚೆ ಇರುವ ಪಾತ್ರಿಬೂದಿಹಾಳು ಗ್ರಾಮಕ್ಕೆ ಹೋದಾಗ ಅಲ್ಲಿ ಜನರು ಗುಂಪಾಗಿ ನಿಂತಿದ್ದು ನೋಡಿ ನಾನು ಜೀಪ್ ನಿಲ್ಲಿಸಿ ಸಿಬ್ಬಂದಿಯವರೊಂದಿಗೆ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಉದ್ದೇಶಿಸಿ ಮಟಕಾ ಜೂಜಾಟ ಆಡಿರಿ ಒಂದು ರೂಪಾಯಿಗೆ ನೂರು ರೂಪಾಯಿ ಬರುತ್ತದೆ. ಮಟಕಾ ಜೂಜಾಟ ಅಡಿರಿ ಸಾಹುಕಾರರು ಅಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟದ ದುಷ್ಟಟಗಳಿಗೆ ಬಿಳುವಂತೆ ಪ್ರಚೋದನೆ ಮಾಡುತ್ತಿದ್ದು, ಜನರಲ್ಲಿ ಮಟಕಾ ಜೂಜಾಟ ಅಡುವ ಆಸೆ ಹುಟ್ಟಿಸುತ್ತಿದ್ದು ಕಂಡು ಬಂದಿತು. ಈ ವ್ಯಕ್ತಿಯನ್ನು ಹಿಗೇಯೇ ಬಿಟ್ಟಲ್ಲಿ ಇತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಇತನನ್ನು ಹಿಡಿದುಕೊಂಡು ಇತನ ಹೆಸರು ವಿಚಾರಿಸಲು ವಿ. ಕೇಶವ ತಂದೆ ಗುರುಸ್ವಾಮಿ, ವ: 34 ವರ್ಷ, ವಡ್ಡರಜಾತಿ, ವಾಸ: ಪಾತ್ರಬೂದಿಹಾಳುಗ್ರಾಮ, ಬಳ್ಳಾರಿ ತಾಲ್ಲೂಕು ಅಂತಾ ತಿಳಿಸಿದನು. ಇತನು ಠಾಣೆಯ ಗುನ್ನೆ ನಂ: 176/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ಮಟಕಾ ಜೂಜಾಟದ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಇತನನ್ನು ಹಿಗೆಯೇ ಬಿಟ್ಟಲ್ಲಿ ಸಾರ್ವಜನಿಕರಿಗೆ ದುಷ್ಟಟಗಳಿಗೆ ಬಿಳುವಂತೆ ಮಾಡಿ, ಸಾರ್ವಜನಿಕರು ಸಂಜ್ಞೆಯ ಅಪರಾದಗಳಲ್ಲಿ ತೊಡಗುವಂತೆ ಮಾಡಿ ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಈತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬೆಳಿಗ್ಗೆ 8-30 ಗಂಟೆಗೆ ಬಂದು ಈತನ ಮೇಲೆ ಠಾಣೆ ಗುನ್ನೆ ನಂ: 410/2015 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ. | |||||||||||||||
Gandhinagar PS | ||||||||||||||||
3 | Cr.No:0204/2015 (IPC 1860 U/s 34,406,420 ) |
29/09/2015 | Under Investigation | |||||||||||||
CHEATING - CHEATING | ||||||||||||||||
Brief Facts : | 2007ನೇ ವರ್ಷದಲ್ಲಿ ಆರೋಪಿತರು ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಶ್ರೀ.ಶಿವಸಾಯಿ ಡೆವಲಪರ್ಸ್ ಹೆಸರಿನ ನಿವೇಶನಗಳನ್ನು ವಿಸ್ತೀರ್ಣಕ್ಕನುಗುಣವಾಗಿ ಕಂತುಗಳಲ್ಲಿ ಹಣವನ್ನು ಕಟ್ಟಿದರೆ ನಿವೇಶನಗಳನ್ನು ಕೊಡುವುದಾಗಿ ಕರಪತ್ರಗಳನ್ನು ಹಂಚಿಕೆ ಮಾಡಿದ್ದರಿಂದ ಫಿರ್ಯಾಧಿದಾರರು ಆರೋಪಿತರ ಹತ್ತಿರ ನಿವೇಶನ ಪಡೆಯುವುದಕ್ಕಾಗಿ ಆರೋಪಿತರಿಗೆ ಮುಂಗಡವಾಗಿ 3,000/-ಗಳು ಮತ್ತು ಪ್ರತಿ ತಿಂಗಳು 1,000/-ಗಳಂತೆ ಒಟ್ಟು 50 ತಿಂಗಳು ರೂ.50,000/- ಗಳು ಒಟ್ಟು ರೂ.53.000/- ಗಳನ್ನು ಕಟ್ಟಿದ್ದು, ಆರೋಪಿತರು ಕಂತು ಮುಗಿದರೂ ಪ್ಲಾಟ್ ಗಳನ್ನು ನೊಂದಣಿ ಮಾಡಿಸಿ ಕೊಡದೇ ಇದ್ದುದ್ದಕ್ಕೆ ಫಿರ್ಯಾದಿದಾರರು ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಆರೋಪಿತರ ಕಛೇರಿಗೆ ಹೋಗಿ | |||||||||||||||
ವಿಚಾರಿಸಿದಾಗ ಅವರು ಪ್ಲಾಟ್ ಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡು ರೂ.53,000/-ಗಳಿಗೆ ಆ-2 ರವರ ಸಹಿ ಇರುವ ಕರೂರು ವೈಶ್ಯ ಬ್ಯಾಂಕ್ ಚೆಕ್ ಕೊಟ್ಟಿದ್ದು, ಕೆಲವು ದಿನಗಳ ನಂತರ ಈ ಬಗ್ಗೆ ಆ-1 ರವರಿಗೆ ವಿಚಾರಿಸಲು ಸದರಿಯವರು "ನೀವು ಬ್ಯಾಂಕ್ ಗೆ ಹೋಗಬೇಡಿ ನಾವೇ ದುಡ್ಡು ಕೊಡುತ್ತೇವೆಂದು ತಿಳಿಸಿದ್ದು ಸದರಿಯವರು ಫಿರ್ಯಾದಿದಾರರಿಗೆ ಪ್ಲಾಟ್ ಕೊಡುತ್ತೇವೆಂದು ರೂ.53 ಸಾವಿರಗಳನ್ನು ಮೋಸ ಮಾಡುವ ಉದ್ದೇಶದಿಂದ ಕಟ್ಟಿಸಿಕೊಂಡು ಇಲ್ಲಿಯವರೆಗೆ ಪ್ಲಾಟ್ ಕೊಡದೇ ಹಾಗೂ ಹಣವನ್ನು ವಾಪಸ್ಸು ಕೊಡದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ನಂಬಿಸಿ ಮೋಸ ಮಾಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ | ||||||||||||||||
Gudekote PS | ||||||||||||||||
4 | Cr.No:0110/2015 (CODE OF CRIMINAL PROCEDURE, 1973 U/s 107 ) |
29/09/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈಗ್ಗೆ ಸುಮಾರು 3 ದಿನಗಳಿಂದ ಗುಡೇಕೋಟೆ ಠಾಣಾ ಸರಹದ್ದಿನಲ್ಲಿ ಬರುವ ಚೋರನೂರು, ಜಿಗೇನಹಳ್ಳಿ, ಯರ್ರದಮ್ಮನಹಳ್ಳಿ, ಶೆಲಿಯಪ್ಪನಹಳ್ಳಿ ಗ್ರಾಮಗಳಲ್ಲಿ ಕ್ರಿಶ್ಚಿಯನ್ ಫಾಸ್ಟರ್ ಗಳು ಹಿಂದುಳಿದ ಜನರಿಗೆ ಸಂಬಂದಿಸಿದ ಜಾಗಗಳನ್ನು ಅವರ ಅನುಮತಿ ಮೇಲೆ ಪಡೆದು ಚರ್ಚ್ ಗಳನ್ನು , ಪ್ರಾರ್ಥನಾ ಮಂದಿರಗಳನ್ನು ಕಟ್ಟಿಕೊಂಡು ಪ್ರತಿ ದಿನ ಹಿಂದೂ ಸಮುದಾಯಕ್ಕೆ ಸೇರಿದ ಹಿಂದುಳಿದ ಜನಾಂಗದವರನ್ನು ಆಕರ್ಷಿಸಿ ಪ್ರಾರ್ಥನೆಗೆ ಬರುವಂತೆ ಮಾಡಿಕೊಂಡು ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಾರೆಂದು ಆರೋಪಿಸಿ ಈ ಮೇಲ್ಕಂಡ ಪ್ರತಿವಾದಿಗಳೆಲ್ಲರೂ ಸೇರಿ ಸದರಿ ಗ್ರಾಮಗಳ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಫಾಸ್ಟರ್ ಗಳಿಗೆ ತಮ್ಮ ಪ್ರಾರ್ಥನಾ ಮಂದಿರಗಳನ್ನು ಮುಚ್ಚಿಕೊಂಡು ಊರು ಬಿಟ್ಟು ಹೋಗುವಂತೆ ಗಲಾಟೆ ಮಾಡಿದ್ದು ಈ ಸಂಬಂಧ ಫಾಸ್ಟರ್ ಗಳ ಕಡೆಯ ಕ್ರಿಶ್ಚಿಯನ್ ಸಮುದಾಯದವರಿಗೂ ಹಾಗೂ ಆಯಾ ಗ್ರಾಮಗಳ ಹಿಂದೂ ಸಮುದಾಯದ ಜನರ ನಡುವೆ ವೈಮನಸ್ಸು ಉಂಟಾಗಿದ್ದು ಈ ಸಂಬಂಧ ಎರಡೂ ಸಮುದಾಯದವರನ್ನು ಕರೆಸಿ ನಿನ್ನೆ ದಿನ ದಿ: 28/09/2015 ರಂದು ಕೂಡ್ಲಿಗಿ ಡಿ.ವೈ.ಎಸ್.ಪಿ ಸಾಹೇಬರು ಶಾಂತಿ ಸಭೆ ನಡೆಸಿ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಕಳುಹಿಸಿದ್ದು ಆದರೂ ಸಹಾ ಈ ಎರಡೂ ಸಮುದಾಯದವರ ನಡುವೆ ಯಾವ ಸಮಯದಲ್ಲಾದರೂ ಪುನಃ ಗಲಾಟೆಗಳು ಸಂಭವಿಸಿ ಸಾರ್ವಜನಿಕರ ಶಾಂತತೆಗೆ, ನೆಮ್ಮದಿಗೆ ಭಂಗವುಂಟಾಗುವ, ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟಾಗುವ ಸಂಭವವಿರುವುದಾಗಿ ಮಾಹಿತಿ ತಿಳಿದು ಬಂದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಈ ಮೇಲ್ಕಂಡ ಪ್ರತಿವಾದಿಗಳ ವಿರುದ್ದ ಈ ದೂರು ದಾಖಲಿಸಿರುತ್ತದೆ. | |||||||||||||||
Hospet Town PS | ||||||||||||||||
5 | Cr.No:0188/2015 (IPC 1860 U/s 354(B),355,504,506,323,34 ) |
29/09/2015 | Under Investigation | |||||||||||||
MOLESTATION - Public Place | ||||||||||||||||
Brief Facts : | ದಿನಾಂಕ: 29/09/2015 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾಧಿದಾರಳು ಠಾಣೆಗೆ ಹಾಜರಾಗಿ ಕೊಟ್ಟ ಬರವಣಿಗೆ ದೂರು ಸಾರಾಂಶವೇನೆಂದರೆ ಹೊಸಪೇಟೆಯಲ್ಲಿರುವ ತಮ್ಮ ಮಗ ಸೋಮಶೇಖರ್ ರವರ ಮನೆಗೆ ಬಂದು ಇರುವ ಕಾಲಕ್ಕೆ ದಿನಾಂಕ: 27-09-2015 ರಂದು ತಮ್ಮ ಮಗನ ಮನೆಯ ಮುಂದೆ ಕಟ್ಟೆ ಕಟ್ಟಿಸುವ ಕಾಲಕ್ಕೆ ಮದ್ಯಾಹ್ನ 2-00 ಗಂಟೆಗೆ ತನ್ನ ಮೈದುನ ಪಿ.ಪ್ರಭಾಕರ, ಪ್ರಭಾಕರ ಇವರ ತಂಗಿ ಗಂಗಮ್ಮ ಇವರಿಬ್ಬರು ಮನೆಯ ಮುಂದಿನ ಕಟ್ಟೆಯನ್ನು ಕಟ್ಟುತ್ತಿದ್ದ ಮೇಸ್ತ್ರಿಗಳಿಗೆ ಕಟ್ಟೆ ಕಟ್ಟಬಾರದೆಂದು ಗದರಿಸಿದಾಗ ಫಿರ್ಯಾದಿದಾರಳು ಮನೆಯ ಮುಂದೆ ಕಟ್ಟೆ ಕಟ್ಟಿದರೆ ನಿಮಗೇನು ತೊಂದರೆ ಎಂದು ಕೇಳಿದ್ದಕ್ಕೆ ಫಿರ್ಯಾದಿದಾರಳ ಮೈದುನನಾದ ಪ್ರಭಾಕರ ಈತನು ಏನೇ ಕಂತ್ರಿ ಸೂಳೆ ಯಾರಪ್ಪನ ಜಾಗ ಅಂತಾ ಕಟ್ಟೆ ಕಟ್ಟುತ್ತೀಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಈಕೆಯ ಜಡೆ, ಸೀರೆ ಹಿಡಿದು ಎಳೆದಾಡಿ ಅವಮಾನಪಡಿಸಿ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿ ಗಂಗಮ್ಮಳು ಫಿರ್ಯಾದಿದಾರಳಿಗೆ ಚಪ್ಪಲಿಯಿಂದ ಹೊಡೆದು ಜಗಳ ಮಾಡುವಾಗ ಜಗಳದಲ್ಲಿದ್ದ ಫಿರ್ಯಾದಿದಾರಳನ್ನು ಬಿಡಿಸಲು ಬಂದ ಗಂಡ ಮತ್ತು ಸೋಮಶೇಖರ್ ಇವರಿಗೆ ಪ್ರಭಾಕರ ಈತನು ಕೈಗಳಿಂದ ಹೊಡೆದು ಜಗಳ ಮಾಡಿದ್ದು ಈ ಜಗಳದಲ್ಲಿ ಫಿರ್ಯಾದಿದಾರಳಿಗೆ ಮತ್ತು ಅಕೆಯ ಗಂಡನಿಗೆ ಆದ ಗಾಯಗಳ ಬಗ್ಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡು ಠಾಣೆಗೆ ಹಾಜರಾಗಿ ಕೊಟ್ಟ ದೂರು ಸಾರಂಶದ ಮೆರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Kuduthini PS | ||||||||||||||||
6 | Cr.No:0129/2015 (IPC 1860 U/s 279,304(A) ; INDIAN MOTOR VEHICLES ACT, 1988 U/s 187 ) |
29/09/2015 | Under Investigation | |||||||||||||
MOTOR VEHICLE ACCIDENTS FATAL - National Highways | ||||||||||||||||
Brief Facts : | ದಿನಾಂಕ:- 27.09.2015 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಬಳ್ಳಾರಿ-ಹೊಸಪೇಟೆ ಎನ್.ಹೆಚ್, 63 ರಸ್ತೆಯಲ್ಲಿ ವಾಸಪ್ಪ ಡಾಬಾದ ಮುಂದೆ ಹತ್ತಿರ ಲಾರಿ ನಂ, ಎಪಿ-03/ಟಿಟಿ-3349 ನೇದ್ದರ ಚಾಲಕ ಮತ್ತು ಲಾರಿ ಕ್ಲೀನರ್ ಇವರು ಲಾರಿಯನ್ನು ನಿಲ್ಲಿಸಿದ್ದು, ಲಾರಿ ಕ್ಲೀನರ್ ನು ಪಿರ್ಯಾದಿದಾರನ ಹೋಟಲ್ ಹತ್ತಿರ ಬಂದು ಅಗಲ್ ವಾಲ್ ಫ್ಯಾಕ್ಟರಿಗೆ ಹೋಗುವ ಬಗ್ಗೆ ದಾರಿಯನ್ನು ಕೇಳಿದ್ದು, ನಂತರ ಸ್ವಲ್ಪ ಒತ್ತಿನ ನಂತರ | |||||||||||||||
ಲಾರಿ ಡ್ರೈವರ್ ನು ರಸ್ತೆಯನ್ನು ದಾಟುತ್ತಿರುವಾಗ ಬಳ್ಳಾರಿ ಕಡೆಯಿಂದ ಕುಡತಿನಿ ಕಡೆಯಿಂದ ಬಂದ ಮೋಟರ್ ಸೈಕಲ್ ಚಾಲಕನು ಮೋಟರ್ ಸೈಕಲ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿ ಡ್ರೈವರ್ ಗೆ ಡಿಕ್ಕಿ ಹೊಡೆಸಿದ್ದರಿಂದ ತಲೆಗೆ ಒಳಪೆಟ್ಟು ಅಗಿದ್ದು, ನಂತರ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಗೆ ಹೋಗಿ ಚಿಕಿತ್ಸೆ ಫಲಕಾರಿಯಾಗಧೇ ಮೃತಪಟ್ಟಿರುತ್ತಾನೆ. ಅದ್ದರಿಂದ ಲಾರಿ ಡ್ರೈವರ್ ಗೆ ಡಿಕ್ಕಿ ಹೊಡೆದ ಮೋಟರ್ ಸೈಕಲ್ ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ರತಿ ಲಗತ್ತಿಸಿದೆ) | ||||||||||||||||
Sirigeri PS | ||||||||||||||||
7 | Cr.No:0142/2015 (KARNATAKA POLICE ACT, 1963 U/s 78(III) ) |
29/09/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 28-09-2015 ರಂದು ಸಂಜೆ 5.15 ಗಂಟೆಗೆ ಶ್ರೀ.ಎನ್ ಲೊಕೇಶ್ವರಪ್ಪ ಸಿಪಿಐ., ತೆಕ್ಕಲಕೋಟ ವೃತ್ತ, ರವರು ಠಾಣೆಗೆ ಬಂದು ಮೂಲ ಪಂಚನಾಮೆ, ಮಾಲು, ಮತ್ತು ದೂರನ್ನು ನೀಡಿದ್ದು ಸಾರಾಂಶ: ದಿನಾಂಕ: 28-09-2015 ರಂದು ಮಾನ್ಯ ಸಿಪಿಐ ತೆಕ್ಕಲಕೋಟರವರಿಗೆ ಠಾಣೆಯ ಸರಹದ್ದಿನ ಎಂ ಸೂಗೂರು ಗ್ರಾಮದ ಪರಮಣ್ಣ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಸೀಬಿನ ಮಟ್ಕಾ ಜೂಜಾಟ ನೆಡೆಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ತೆಕ್ಕಲಕೋಟ ರವರು ಸಿಬ್ಬಂದಿಗಳಾದ ಎಎಸ್ಐ ಜೀವರತ್ನಂ ಎಎಸ್ಐ ಹೆಚ್ಸಿ-46 ಪಿಸಿ-1162 ಮತ್ತು ಪಂಚರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-533 ರಲ್ಲಿ ಮಧ್ಯಾಹ್ನ 3:30ಗಂಟೆಗೆ ಠಾಣೆಯಿಂದ ಹೊರಟು ಮಧ್ಯಾಹ್ನ 3:45 ಗಂಟೆಗೆ ಎಂ ಸೂಗೂರು ಗ್ರಾಮದ ಪರಮಣ್ಣ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಲು ಸೇರಿದ ಜನರ ಗುಂಪಿನ ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಕಲ್ದಾರಿ ವಿರೇಶ ತಂದೆ ದೊಡ್ಡಬಸಪ್ಪ, 40ವರ್ಷ, ಕಬ್ಬೇರು ಜನಾಂಗ, ವ್ಯವಸಾಯ, ವಾಸ : ಎಂ ಸೂಗೂರು ಗ್ರಾಮ ರವರನ್ನು ಹಿಡಿದುಕೊಂಡು, ಸದರಿ ಮಟ್ಕಾ ಜೂಜಾಟದಲ್ಲಿ ದೊರೆತ ಒಟ್ಟು ನಗದು ಹಣ ರೂ. 340/-, ಒಂದು ಮಟಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ ಇವುಗಳನ್ನು ಪಂಚನಾಮೆ ಅಡಿಯಲ್ಲಿ ಜಪ್ತು ಮಾಡಿಕೊಂಡು ಬಂದಿದ್ದಾಗಿ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಎನ್ ಸಿ ನಂ :06/2015 ಕಲಂ : 78 ಕ್ಲಾಸ್ [3] ಕೆ.ಪಿ. ಅಕ್ಟ್ ರಲ್ಲಿ ನೊಂದಾಯಿಸಿಕೊಂಡಿರುತ್ತದೆ. | |||||||||||||||
8 | Cr.No:0143/2015 (KARNATAKA POLICE ACT, 1963 U/s 78(III) ) |
29/09/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 29-09-2015 ರಂದು ರಾತ್ರಿ8:00 ಗಂಟೆಗೆ ಶ್ರೀ.ಎನ್ ಲೊಕೇಶ್ವರಪ್ಪ ಸಿಪಿಐ., ತೆಕ್ಕಲಕೋಟ ವೃತ್ತ, ರವರು ಠಾಣೆಗೆ ಬಂದು ಮೂಲ ಪಂಚನಾಮೆ, ಮಾಲು, ಮತ್ತು ದೂರನ್ನು ನೀಡಿದ್ದು ಸಾರಾಂಶ: ದಿನಾಂಕ: 29-09-2015 ರಂದು ಮಾನ್ಯ ಸಿಪಿಐ ತೆಕ್ಕಲಕೋಟರವರಿಗೆ ಠಾಣೆಯ ಸರಹದ್ದಿನ ಕರೂರು ಗ್ರಾಮದ ಮಠದ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಸೀಬಿನ ಮಟ್ಕಾ ಜೂಜಾಟ ನೆಡೆಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ತೆಕ್ಕಲಕೋಟ ರವರು ಸಿಬ್ಬಂದಿಗಳಾದ ಎಎಸ್ಐ ಜೀವರತ್ನಂ ಎಎಸ್ಐ ಹೆಚ್ಸಿ-46 ಪಿಸಿ-1162 ಮತ್ತು ಪಂಚರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-533 ರಲ್ಲಿ ಸಂಜೆ 5:45ಗಂಟೆಗೆ ಠಾಣೆಯಿಂದ ಹೊರಟು ಸಂಜೆ 6:15 ಗಂಟೆಗೆ ಕರೂರು ಗ್ರಾಮದ ಮಠದ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಲು ಸೇರಿದ ಜನರ ಗುಂಪಿನ ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಹಡಪದ ದೇವರಾಜ ತಂದೆ ಮಹಾದೇವಪ್ಪ, 35ವರ್ಷ, ವಾಸ:ಕರೂರು ಗ್ರಾಮ ರವರನ್ನು ಹಿಡಿದುಕೊಂಡು, ಸದರಿ ಮಟ್ಕಾ ಜೂಜಾಟದಲ್ಲಿ ದೊರೆತ ಒಟ್ಟು ನಗದು ಹಣ ರೂ. 920/-, ಒಂದು ಮಟಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ ಇವುಗಳನ್ನು ಪಂಚನಾಮೆ ಅಡಿಯಲ್ಲಿ ಜಪ್ತು ಮಾಡಿಕೊಂಡು ಬಂದಿದ್ದಾಗಿ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಎನ್ ಸಿ ನಂ :07/2015 ಕಲಂ : 78 ಕ್ಲಾಸ್ [3] ಕೆ.ಪಿ. ಅಕ್ಟ್ ರಲ್ಲಿ ನೊಂದಾಯಿಸಿಕೊಂಡಿರುತ್ತದೆ. | |||||||||||||||
Tekkalkota PS | ||||||||||||||||
9 | Cr.No:0096/2015 (IPC 1860 U/s 341,323,355,504 ) |
29/09/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಎಮ್ಮೆಯ ಮಲಮೂತ್ರದಿಂದ ವಾಸನೆ ಹೆಚ್ಚಾಗಿ ಸೊಳ್ಳೆ ಹೆಚ್ಚಾಗಿವೆ ಎಂದು ಹೇಳಿದ್ದಕ್ಕೆ ಪಕ್ಕದ ಮನೆಯ ಈರಣ್ಣನ್ನು ಪಿರ್ಯಾರದಿದಾರರ ಗಂಡನಿಗೆ ದಿನಾಂಕ; 26/09/2015 ರಂದು ರಾತ್ರಿ 8-30 ಗಂಟೆಗೆ ಮೈಲಾಪುರ ಗ್ರಾಮದಲ್ಲಿ ಪಿರ್ಯಾ ದಿ ಮನೆಯ ಮುಂದಿನ ಅಂಗಳದಲ್ಲಿ ಪಿರ್ಯಾದಿ ಗಂಡನನ್ನು ತಡೆದು ನಿಲ್ಲಿಸಿ, ದುರ್ಬಾಷೆಗಳಿಂದ ಬೈದು, ಚಪ್ಪಲಿಯಿಂದ ಹೊಡೆದು ನೋವು ಪಡಿಸಿ, ಪಿರ್ಯಾನದಿಗೂ ದಬ್ಬಾಡಿದ್ದಾಗಿ ಆರೋಪಿ ಈರಣ್ಣನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ದೂರು ಪಡೆದು ಠಾಣಾ ಗುನ್ನೆ ನಂಬರ್ 96/2015 ಕಲಂ 341-323-355-504 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿದೆ. | |||||||||||||||
ಮಂಗಳವಾರ, ಸೆಪ್ಟೆಂಬರ್ 29, 2015
PRESS NOTE OF 29/09/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ