ಸೋಮವಾರ, ಸೆಪ್ಟೆಂಬರ್ 21, 2015

PRESS NOTE OF 21/09/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0400/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
21/09/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 21-9-2015 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಪ್ರಸಾದ್ ಕೆ. ಗೋಖಲೆ ಸಿಪಿಐ, ಬಳ್ಳಾರಿ ಗ್ರಾಮೀಣ ವೃತ್ತ ರವರು ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 21-9-2015 ರಂದು ಬೆಳಿಗ್ಗೆ ತನಗೆ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಅನಧಿಕೃತವಾಗಿ ಮರಳನ್ನು ಟ್ರಾಕ್ಟರ್-ಟ್ರಾಲಿಗಳಲ್ಲಿ ತುಂಬುತ್ತಿರುತ್ತಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ತಾನು, ಪಂಚರು ಮತ್ತು ತಮ್ಮ ಸಿಬ್ಬಂದಿಯವರಾದ ಹೆಚ್.ಸಿ. 72, ಪಿ.ಸಿ. 109, ರವರೊಂದಿಗೆ ಪೊಲೀಸ್ ಜೀಪ್ ನಂ: ಕೆಎ:34/ಜಿ/331 ರಲ್ಲಿ ಚಾಲಕ ಎಪಿಸಿ 244 ರೊಂದಿಗೆ ಬೆಳಿಗ್ಗೆ 8-00 ಗಂಟೆಗೆ ಕಮ್ಮರಚೇಡು ಗ್ರಾಮದ ಬಳಿ ಇರುವ ಹಗರಿ ಹಳ್ಳಕ್ಕೆ ಹೋಗಿ ನೋಡಲು ಕೆಲವು ಜನರು ಮೂರು ಟ್ರಾಕ್ಟರ್ಗಳನ್ನು ನಿಲ್ಲಿಸಿಕೊಂಡು ಮರಳು ತುಂಬುತ್ತಿದ್ದು ಕಂಡು ಬಂದಿದ್ದರಿಂದ ಕೂಡಲೇ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿಮಾಡಿದಾಗ ಮರಳು ತುಂಬುತ್ತಿದ್ದವರು ಓಡಿ ಹೋಗಿದ್ದು ಅಲ್ಲಿದ್ದ ಚತ್ರಯ್ಯರವರಿಗೆ ವಿಚಾರಿಸಲು 1]. ಟ್ರಾಕ್ಟರ್ ಇಂಜಿನ್ ನಂಬರ್ 391354ಎಫ್ಎ000438ಎ ಟ್ರಾಲಿ ಚಾಸಿ ನಂಬರ್ ಜೆಇಡಬ್ಲ್ಯೂ/01/2015-16 ಇದರ ಚಾಲಕ ಹುಸೇನಿ, ಮಾಲೀಕ ಮೋಹನ್ 2]. ಟ್ರಾಕ್ಟರ್ ಇಂಜಿನ್ ನಂಬರ್ ಜಿ27241 ಚಾಸಿ ನಂಬರ್ 923013125258 ಅಂತಾ ಇದ್ದು, ಟ್ರಾಲಿ ಚಾಸಿ ನಂಬರ್ ಬಿಎಫ್ಇ/45/2015 ಇದರ ಚಾಲಕ ಗಾದಿಲಿಂಗ ಮಾಲೀಕ ರವಿ,  3] ಟ್ರಾಕ್ಟರ್ ಸಂಖ್ಯೆ ಕೆಎ-34-ಟಿಎ-3244 ಟ್ರಾಲಿ ನಂಬರ್ ಎಪಿ-02-ಟಿಎ-9861 ಇದರ ಚಾಲಕ ಅಂಜಿನೇಯಲು ಮಾಲೀಕ ಸುಂಕಣ್ಣ ಎಂದು ತಿಳಿಸಿರುತ್ತಾನೆ. ಮೂರು ಟ್ರಾಕ್ಟರ್ ಟ್ರಾಲಿಗಳು, ಅದರಲ್ಲಿಯ ರೂ: 6000/- ಬೆಲೆಯ 6 ಮೇಟ್ರಿಕ್ ಟನ್ ಮರಳು, ಸ್ಯಾಂಪಲ್ ಮರಳನ್ನು ಜಪ್ತು ಮಾಡಿಕೊಂಡು ಬಂದಿದ್ದಾಗಿ ಟ್ರಾಕ್ಟರ್ ಗಳ ಚಾಲಕರು ಮತ್ತು ಮಾಲೀಕರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮರಳನ್ನು ಕಳುವು ಮಾಡಿ ಸಾಗಾಣಿಕೆ ಮಾಡುತ್ತಿದ್ದರಿಂದ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.
Hadagali PS
2 Cr.No:0086/2015
(IPC 1860 U/s 363 )
21/09/2015 Under Investigation
KIDNAPPING AND ABDUCTION - Others
Brief Facts :  ನಿನ್ನೆ ದಿನಾಂಕ 20-09-2015 ರಂದು ರವಿವಾರ ಇದ್ದುದರಿಂದ ಶಾಲೆಯು ರಜೆ ಇರುತ್ತದೆ. ನಿನ್ನೆ  ದಿನಾಂಕ 20-09-2015 ರಂದು ಮಧ್ಯಹ್ನ 02-00 ಗಂಟೆ ಸುಮಾರಿಗೆ ತನ್ನ ಮಗ ವೆಂಕಟೇಶನು ಗಣಪತಿ ನೋಡುತ್ತೇನೆಂದು ಮನೆಯಿಂದ ಹೊರಗಡೆ ಹೋದನು. ತಾನು ಗಣಪತಿಯನ್ನು ನೋಡಿಕೊಂಡು ವಾಪಸ್ ಬರುತ್ತಾನಲ್ಲ ಅಂತ ಸುಮ್ಮನಾದೆನು, ಸಾಯಂಕಾಲ 07-00 ಗಂಟೆಯಾದರೂ ತನ್ನ ಮಗ ಮನೆಗೆ ಬಾರದೆ ಇದ್ದುದರಿಂದ ಅನುಮಾನಗೊಂಡು ತಾನು ತಮ್ಮ ಓಣಿಯಲ್ಲಿ ತನ್ನ ಮಗನನ್ನು ಕಂಡಿಲ್ಲ ಅಂತಾ ಹೇಳಿದರು, ನಂತರ ತಾನು ಮತ್ತು ತನ್ನ ಮಗಳಾದ ಸಂಗೀತ ಇಬ್ಬರು ಸೇರಿ ಹಡಗಲಿ ಪಟ್ಟಣದಲ್ಲಿ ಗಣಪತಿ ಕೂಡಿಸಿದ ಕಡೆಗೆಲ್ಲಾ ಹುಡುಕಾಡಿದರೂ ತನ್ನ ಮಗ ಕಂಡು ಬರಲಿಲ್ಲ. ನಂತರ ತಾನು ಈ ವಿಷಯವನ್ನು ತಮ್ಮ ತಂದೆಗೆ ತಿಳಿಸಿದೆನು, ಆತನು ಸಹ ಹಡಗಲಿ ಪಟ್ಟಣಕ್ಕೆ ಬಂದು ಹುಡುಕಾಡಿದ್ದು ಆದಾಗ್ಯೂ ನನ್ನ ಮಗ ವೆಂಕಟೇಶ ಸಿಕ್ಕಿರುವುದಿಲ್ಲ,
            ನಿನ್ನೆ ದಿನಾಂಕ 20-09-2015 ರಂದು ಮಧ್ಯಹ್ನ 02-30 ಗಂಟೆಯಿಂದ ರಾತ್ರಿ 09-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ದುರುದ್ದೇಶದಿಂದ ತನ್ನ ಮಗನನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿ ಕೊಡಲು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿದೆ
Sirigeri PS
3 Cr.No:0138/2015
(KARNATAKA POLICE ACT, 1963 U/s 87 )
21/09/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 20/09/2015 ರಂದು ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಯಲ್ಲಿದ್ದಾಗ ಮದ್ಯಾಹ್ನ 01:00 ಗಂಟೆಯ ಸುಮಾರಿಗೆ ಸಿರಿಗೇರಿ ಗ್ರಾಮ ಹುಚ್ಚೇಶ್ವರ ನಗರದಲ್ಲಿರುವ ಗಣೇಶ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ್ -ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂದು ಬಂದು ಖಚಿತ ಮಾಹಿತಿಯನ್ನು ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಗಳಾದ ಪಿಸಿ 137, 709, 638, 124, 890, 770, 1149 ರವರೊಂದಿಗೆ ಸ್ಥಳಕ್ಕೆ ಹೋಗಿ ಮಧ್ಯಾಹ್ನ 01:15 ಗಂಟೆಯ ಸುಮಾರಿಗೆ ಅಂದಾರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರ ಮೇಲೆ ದಾಳಿಮಾಡಿ, 15 ಜನ ಆರೋಪಿತಗಳನ್ನು ಹಿಡಿದುಕೊಂಡು  ಇವರಿಂದ 52 ಇಸ್ಪೀಟ್ ಎಲೆಗಳನ್ನು ಮತ್ತು 8590/- ರೂಗಳನ್ನು ಜಪ್ತುಪಡಿಸಿಕೊಂಡು ಠಾಣೆಗೆ ಬಂದು ಠಾಣಾದಿಕಾರಿಗಳಿಗೆ ಜ್ಞಾಪನವನ್ನು ನೀಡಿದ್ದು, ಸದರಿ ಶ್ರೀ ಚಿನ್ನ ಓಬಳೇಶ ಹೆಚ್.ಸಿ 291 ರವರು ಠಾಣಾ ಎನ್.ಸಿ ನಂಬರ್ 04/15 ಕಲಂ 87 ಕೆ.ಪಿ.ಯಾಕ್ಟ್ ರೀತ್ಯಾ ಪ್ರಕರಣದ ದಾಖಲಿಸಿಕೊಂಡು , ನಂತರ ಸದರಿ 15 ಜನ ಆರೋಪಿಗಳಿಗೆ ಪೊಲೀಸ್ ನೋಟೀಸ್ ನೀಡಿ ಕಳುಹಿಸಿದ್ದು, ನಂತರ ಮಾನ್ಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಸಿರುಗುಪ್ಪ ರವರಿಗೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನುಕೈಗೊಳ್ಳಲು ಅನುಮತಿ ನೀಡಬೇಕೆಂದು ಮನವಿ ಪತ್ರವನ್ನು ದಿನಾಂಕ: 21/09/2015 ರಂದು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಈ ದಿನ ದಿನಾಂಕ: 21/09/2015 ರಂದು ಅನುಮತಿಯನ್ನು ನೀಡಿದ್ದರ ಮೇರೆಗೆ ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.
4 Cr.No:0139/2015
(KARNATAKA POLICE ACT, 1963 U/s 78 (1)(A)(i) )
21/09/2015 Under Investigation
 KARNATAKA POLICE ACT 1963 - others
Brief Facts :  ದಿನಾಂಕ: 20/09/2015 ರಂದು ಮದ್ಯಾಹ್ನ 4.45 ಗಂಟೆಗೆ ಮಾನ್ಯ ಪಿಎಸ್ಐ ಸಾಹೇಬರು ಮತ್ತು ಎಎಸ್ಐ (ಎಸ್ ) ಸಿಬ್ಬಂದಿಗಳಾದ ಪಿಸಿ-709, 638, 890, 425, 124, 770, ರವರು ಮತ್ತು ಇಬ್ಬರು ಪಂಚರೊಂದಿಗೆ ನಡವಿ ಗ್ರಾಮದ ಬಸ್ ನಿಲ್ದಾಣ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಜೂಜಾಟ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿ ಒಟ್ಟು 12 ಜನರನ್ನು ಹಿಡಿದು ಅವರಿಂದ ನಗದು ಹಣ 8970/-ರೂಗಳನ್ನು ಮತ್ತು ಜೂಜಾಟಕ್ಕೆ ಬಳಿಸಿದ 4 ಕೋಳಿ ಹುಂಜಗಳನ್ನು ಮತ್ತು ಇವುಗಳಿಗೆ ಕಟ್ಟುವ ನಾಲ್ಕು ಚಾಕುಗಳನ್ನು ಜಪ್ತುಪಡಿಸಿಕೊಂಡು ಬಂದು ನಿನ್ನೆ ದಿನಾಂಕ:-20/09/2015 ರಂದು ಸಂಜೆ 6:30 ಗಂಟೆಗೆ ಜ್ಞಾಪನ ಮತ್ತು ಮುದ್ದೆಮಾಲುಗಳನ್ನು ನೀಡಿದ್ದರ ಮೇರೆಗೆ ಠಾಣಾ ಎನ್ ಸಿ ನಂ 05/15 ರಲ್ಲಿ ದಾಖಲಿಸಿಕೊಂಡಿದ್ದು ನಂತರ 12 ಜನ ಆರೋಪಿಗಳಿಗೆ ಪೊಲೀಸ್ ನೋಟಿಸನ್ನು ನೀಡಿ ಕಳುಹಿಸಿದ್ದು ಈ ದಿನ  ದಿನಾಂಕ:-21/09/2015 ರಂದು ಮಾನ್ಯ ನ್ಯಾಯಾಲಯಕ್ಕೆ ಪ್ರ.ವ.ವರದಿಯನ್ನು ದಾಖಲಿಸಿಕೊಳ್ಳು ಅನುಮತಿಯನ್ನು ನೀಡಲು ಕೋರಿದ್ದು ಮಾನ್ಯ ಘನ ನ್ಯಾಯಾಲಯವು ಪ್ರ.ವ.ವರದಿಯನ್ನು ದಾಖಲಿಸಲು ಅನುಮತಿಯನ್ನು ನೀಡಿದ್ದರ  ಮೇರೆಗೆ ಮೇಲ್ಕಂಡಂತೆ ಪ್ರಕರಣ ದಾಖಲಿಸಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ