Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0384/2015 (KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 ) |
12/09/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ: 12-9-2015 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 12-9-2015 ರಂದು ಬೆಳಿಗ್ಗೆ ಠಾಣೆಯ ಸರಹದ್ದಿನ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಕೆಲವು ಜನರು ಒಂದು ಟ್ರಕ್ಟರ್ ಟ್ರಾಲಿಯಲ್ಲಿ ನಿಲ್ಲಿಸಿಕೊಂಡು ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-65-1096-987 ರವರೊಂದಿಗೆ ಇಲಾಖೆಯ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಬೆಳಿಗ್ಗೆ 8-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಮರಳನ್ನು ತುಂಬುತ್ತಿದ್ದ ಜನರು ಟ್ರಾಕ್ಟರ್ ಟ್ರಾಲಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕರು ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದರಿಂದ ಟ್ರಾಕ್ಟರ್ ನಂಬರ್ ಕೆ.ಎ-34-9868 ಮತ್ತು ಟ್ರಾಲಿ ಚಾಸಿ ನಂಬರ್ ಹೆಚ್.ಎಂ.ಜೆ/15/2010, ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು, ಸ್ಯಾಂಪಲ್ ಮರಳು ತುಂಬಿದ 2 ಚೀಲಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಬಂದಿದ್ದು ಮೇಲ್ಕಂಡವರ ಮೇಲೆ ಕ್ರಮ ಜರುಗಿಸಲು ಕೋರಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. | |||||||||||||||
Gandhinagar PS | ||||||||||||||||
2 | Cr.No:0195/2015 (IPC 1860 U/s 420 ) |
12/09/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಫಿರ್ಯಾಧಿದಾರರ ಮಗನಾದ ಕೋಟಿರೆಡ್ಡಿ ರವರಿಗೆ ಆರೋಪಿತಳು ಬಳ್ಳಾರಿಯ ತಾಲ್ಲುಕು ಕಛೇರಿಯಲ್ಲಿ ಟೈಪಿಸ್ಟ್ ಕೆಲಸ ಹಾಗೂ ಫಿರ್ಯಾಧಿದಾರರ ಅಕ್ಕನ ಮಗನಾದ ಹನುಮಂತರೆಡ್ಡಿ ಯವರಿಗೆ ಎಫ್.ಡಿ.ಸಿ ಕೆಲಸ ಕೊಡಿಸುತ್ತೇನೆಂದು ಹೇಳಿ ಬಳ್ಳಾರಿಯ ಗಣೇಶ ಕಾಲೋನಿಯಲ್ಲಿರುವ ಆರೋಪಿತಳು ತನ್ನ ಮನೆಯಲ್ಲಿ ಫಿರ್ಯಾಧಿದಾರರಿಂದ ದಿನಾಂಕ:28.03.2014 ರಂದು ರೂ.5,50,000/-ಗಳನ್ನು ಪಡೆದುಕೊಂಡು ಕೆಲಸ ಕೊಡಿಸದೇ ಹಾಗು ಸದರಿ ಹಣವನ್ನು ವಾಪಾಸ್ಸು ಕೊಡದೇ ಮೋಸ ಮಾಡಿರುತ್ತಾಳೆಂದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ | |||||||||||||||
Kamalapur PS | ||||||||||||||||
3 | Cr.No:0078/2015 (IPC 1860 U/s 34,504,323,324 ) |
12/09/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಈ ದಿನ ದಿನಾಂಕ:12/09/2015 ರಂದು ಹೊಸಪೇಟೆ ಸರಕಾರಿ ಆಸ್ಪತ್ರೆಯಿಂದ ದೂರವಾಣಿ ಬಂದ ಮೇರೆಗೆ ಹೊಸಪೇಟೆಯ ಸರಕಾರಿ ಆಸ್ಪತ್ರೆಗೆ ಭೇಟಿನೀಡಿ ಫಿರ್ಯಾದಿದಾರರ ಹೇಳಿಕೆಯನ್ನು ಪಡೆದುಕೊಂಡು ಬೆಳೆಗ್ಗೆ 06-15 ಗಂಟೆಗೆ ಠಾಣೆಗೆ ಬಂದು ಪಿಯರ್ಾದಿದಾರರ ಹೇಳಿಕೆಯ ಸಾರಾಂಸ ದಿನಾಂಕ 20/08/2015 ರಂದು ಹೊಸ ಚಿನ್ನಾಪುರದಲ್ಲಿ ಸಣ್ಣ ಪಂಪಾಪತಿ ರವರು ಕುರಿಯ ಮಾಂಸವನ್ನು ಶಂಭುಲಿಂಗಪ್ಪರವರಿಗೆ 200/-ರೂಗೆ ಮಾರಾಟ ಮಾಡಿದ್ದು, ದಿನಾಂಕ:11/09/2015ರಂದು ಸಣ್ಣ ಪಂಪಾಪತಿರವರ ಮನೆಯ ಹತ್ತಿರ ವಿರುಪಾಕ್ಷಿ, ಚಂದ್ರ ರೋಂದಿಗೆ | |||||||||||||||
ಶಂಭುಲಿಂಗಪ್ಪರವರು ಹೋಗುತ್ತಿರುವಾಗ ಸಣ್ಣ ಪಂಪಾಪತಿಯು ಶಂಭುಲಿಂಗಪ್ಪರವರನ್ನು ಮಾಂಸದ ಹಣ 200/- ರೂನ್ನು ಕೇಳಿದ್ದಕ್ಕೆ ಏನಲೆ ಮಗನೆ ಎಲ್ಲೆಂದರಲ್ಲಿ ಹಣವನ್ನು ಕೇಳುತ್ತಿಯಾ ಎಂದು ದುರ್ಭಾಷೆಗಳಿಂದ ಬೈಯುತ್ತಾ ದಾರಿಯಲ್ಲಿನ ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು ಸಣ್ಣ ಪಂಪಾಪತಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿದ ಜಗಳ ಬಿಡಿಸಲು ಬಂದ ಪಿರ್ಯಾದಿದಾರರ ಹಣೆಗೆ ವಿರುಪಾಕ್ಷಿ ಹೊಡೆದು ರಕ್ತಗಾಯ ಪಡಿಸಿದ ಹಾಗು ಚಂದ್ರನು ಪಿಯಾಱದಿದಾರರ ಮುಖಕ್ಕೆ ಕೈಯಿಂದ ಗಿಂಜಿ ಗಾಯ ಪಡಿಸಿದ್ದು, ದುಭರ್ಾಷೆಗಳಿಂದ ಬೈದು ಗಾಯಪಡಿಸಿದವರ ಮೇಲೆ ಸೂಕ್ತ ಕ್ರಮಕ್ಕೆ ದೂರು ಇದ್ದ ಮೇರೆಗೆ ಪ್ರ. ವ. ವರದಿ | ||||||||||||||||
4 | Cr.No:0079/2015 (IPC 1860 U/s 323,354,504,34 ) |
12/09/2015 | Under Investigation | |||||||||||||
MOLESTATION - Public Place | ||||||||||||||||
Brief Facts : | ಫಿರ್ಯಾದಿದಾರರು ಈ ದಿನ ದಿನಾಂಕ: 12/09/2015 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣೆಯಲ್ಲಿ ಹಾಜರಾಗಿ ದೂರು ನೀಡಿದ ಸಾರಾಂಶ: ಫಿರ್ಯಾದಿದಾರರು ದಿನಾಂಕ: 11/09/2015 ರಂದು ರಾತ್ರಿ 08-00 ಗಂಟೆಯ ಸಮಯದಲ್ಲಿ ಫಿರ್ಯಾದಿದಾರರ ತಮ್ಮನಾದ ಈಗ್ಗೆ ಒಂದು ವಾರದ ಕೆಳಗೆ ಸಣ್ಣ ಪಂಪನ ಹತ್ತಿರ ಮಾಂಸವನ್ನು ತೆಗೆದುಕೊಂಡಿದ್ದು, ಶಂಭುಲಿಂಗನು ಹಣವನ್ನು ಕೊಟ್ಟಿಲ್ಲದ ಕಾರಣ ಹಣದ ವಿಷಯವಾಗಿ ಜಗಳ ನಡೆಯುತ್ತಿದ್ದು, ಶಂಭುಲಿಂಗನೊಂದಿಗೆ ಸಣ್ಣ ಪಂಪ, ದೊಡ್ಡ ಪಂಪ, ಚಿದಾನಂದ ಇವರುಗಳು ಜಗಳ ಮಾಡುತ್ತಿರುವಾಗ ಫಿರ್ಯಾದಿದಾರರು ಹೋಗಿ ಜಗಳ ಬಿಡಿಸಲು ಹೋಗಿದ್ದಕ್ಕಾಗಿ ಫಿರ್ಯಾದಿದಾರಳನ್ನು ಮೇಲ್ಕಂಡ ಮೂರು ಜನ ಆರೋಪಿತರು ಫಿರ್ಯಾದಿದಾರಳ ಮೇಲೆ ಹಾಗೂ ಫಿರ್ಯಾದಿ ತಮ್ಮನಾದ ಶಂಭುಲಿಂಗನ ಮೇಲೆ ಹಲ್ಲೆ ಮಾಡಿರುತ್ತಾರೆಂದು ದೂರು ಇದ್ದ ಮೇರೆಗೆ ಪ್ರ.ವ ವರದಿ. | |||||||||||||||
Kurugod PS | ||||||||||||||||
5 | Cr.No:0153/2015 (IPC 1860 U/s 143,147,148,341,324,504,506(2),149 ) |
12/09/2015 | Under Investigation | |||||||||||||
RIOTS - Others | ||||||||||||||||
Brief Facts : | ದಿನಾಂಕ 08/9/2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಆರೋಪಿ-1 ಶೇಖಪ್ಪನು ಪಿರ್ಯಾಧಿ ಮಾರೆಮ್ಮಳ ಮನೆ ಹತ್ತಿರ ಹೋಗಿ, ಲೇ ತುಡುಗು ಸೂಳೆ ನೀನು ನಮ್ಮ ಕೇರಿಯ ಮಯರ್ಾದೆ ಕಳೆಯುತ್ತೀಯಾ ನೀನು ನಮ್ಮ ಕೇರಿಯಲ್ಲಿ ಇರಬೇಡ ಎಂದು ಬೈದಾಗ, ಪಿರ್ಯಾಧಿದಾರರು ನನಗೆ ಹೇಳಲಿಕ್ಕೆ ನೀನು ಯಾರು ನಾನು ನನ್ನ ಇಷ್ಟದಂತೆ ಇರುತ್ತೇನೆ ಎಂದು ಹೇಳಿದ್ದಕ್ಕೆ ಆರೋಪಿ-1 ಶೇಖಪ್ಪನು ನೀನು ನಮ್ಮ ಕೇರಿಯಲ್ಲಿ ಇರುತ್ತೀಯಿ ನೋಡುತ್ತೇನೆ ಎಂದು ಬೈದು ಹೋಗಿ, ರಾತ್ರಿ 10-30 ಗಂಟೆ ಸುಮಾರಿಗೆ ಆರೋಪಿ-1. ಶೇಖಪ್ಪ, 2.ಭೀಮ, 3. ಗಾದಿಲಿಂಗ, 4. ರಾಮ, 5. ಹುಸೇನಿ, 6. ಹನುಮಂತ, 7. ಜನಕ, ಇವರೆಲ್ಲರು ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆ ಮುಂದೆ ಬಂದು, ಶೇಖಪ್ಪನು ಲೇ ತುಡುಗಿ ನೀನು ನಮ್ಮ ಕೇರಿಯಲ್ಲಿ ಇರಬೇಡ ನೀನು ನಮ್ಮ ಕೇರಿ ಬಿಟ್ಟು ಹೋಗು ಎಂದು ಬೈದನು, ಆಗ ನಾನು ನಾನು ಕೇರಿ ಬಿಟ್ಟು ಹೋಗಲ್ಲ ಎಂದು ಹೇಳುತ್ತಿದ್ದಾಗ, ಶೇಕಪ್ಪನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾಧಿದಾರರ ಬೆನ್ನಿಗೆ, ಮೈಗೆ ಹೊಡೆದಿರುತ್ತೇನೆ. ಆರೋಪಿ-2 ಭೀಮ, 6. ಹನುಮಂತ, 4. ರಾಮ ರವರು ನನ್ನನ್ನು ಮುಂದಕ್ಕೆ ಹೋಗದಂತೆ ತಡೆದು ಲೇ ಬೋಸುಡಿ ನೀನು ನಾವು ಹೇಳಿದಂತೆ ಇರುವುದಾದರೆ ನಮ್ಮ ಕೇರಿಯಲ್ಲಿ ಇರು ಇಲ್ಲದಿದ್ದರೆ ನಿನ್ನನ್ನು ಒದ್ದು ಓಡಿಸುತ್ತೇವೆ ಎಂದು ಬೈದಿರುತ್ತಾರೆ. ಆರೋಪಿ 7. ಜನಕ ಮತ್ತು 5. ಹುಸೇನಿ ರವರು ಈ ಸೂಳೆಯನ್ನು ಏನು ಕೇಳುತ್ತೀರಿ ಹೊಡೆಯಿರಿ ಎಂದು ಬೈದಿರುತ್ತಾರೆ. ಆರೋಪಿ 3. ಗಾದಿಲಿಂಗನು ಶೇಖಪ್ಪನ ಕೈಯಲ್ಲಿದ್ದ ಕಟ್ಟಿಗೆಯನ್ನು ಕಸಿದುಕೊಂಡು ಕಟ್ಟಿಗೆ ತೋರಿಸಿ ಲೇ ತುಡುಗಿ ನೀನು ನಮ್ಮ ಕೇರಿಯನ್ನು ಬಿಡದಿದ್ದರೆ ನಿನ್ನನ್ನು ಹೊಡೆದು ಸಾಯಿಸುತ್ತೇವೆ ಅಂತ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿರುತ್ತದೆ. ಇದರೊಂದಿಗೆ ಪಿರ್ಯಾದಿದಾರರು ನಿಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ. | |||||||||||||||
6 | Cr.No:0154/2015 (IPC 1860 U/s 279,337 ; INDIAN MOTOR VEHICLES ACT, 1988 U/s 187 ) |
12/09/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಪಿರ್ಯಾದಿದಾರರು ಈ ದಿನ ದಿನಾಂಕ: 12/09/2015 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ ಎಪಿ-02 ಎಡಬ್ಲ್ಯೂ-5542 ನೇದ್ದರಲ್ಲಿ ಎಮ್ಮಿಗನೂರು ಗ್ರಾಮದಿಂದ ಬಳ್ಳಾರಿಗೆ ಹೋಗಲು ಕುರುಗೊಡು ಮಾರ್ಗವಾಗಿ ಬರುತ್ತಿದ್ದಾಗ ಯಲ್ಲಾಪುರ ಕ್ರಾಸ್ ಹತ್ತಿರ ಕುರುಗೊಡು ಕಡೆಯಿಂದ ಕಾರ್ ನಂ ಕೆಎ-34 ಬಿ-1366 ನೇದ್ದರ ಚಾಲಕ ಪ್ರಕಾಶನು ತನ್ನ ಕಾರ್ನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದ್ದರಿಂದ ಪಿರ್ಯಾದಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಪಿರ್ಯಾದಿ ಬಲಗಾಲಿನ ಮೊಣಕಾಲಿನ ಹತ್ತಿರ ರಕ್ತಗಾಯವಾಗಿದ್ದು ಸದರಿ ಕಾರ್ ಚಾಲಕ ಪ್ರಕಾಶನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನಿಡಿದ ದುರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ ಇದರೊಂದಿಗೆ ಪಿರ್ಯಾದಿ ನಿಡಿದ ದುರಿನ ಅಸಲು ಪ್ರತಿಯನ್ನು ಲಗತ್ತಿಸಿರುತ್ತೇನೆ. | |||||||||||||||
ಶನಿವಾರ, ಸೆಪ್ಟೆಂಬರ್ 12, 2015
PRESS NOTE OF 12/09/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ