ಬುಧವಾರ, ಸೆಪ್ಟೆಂಬರ್ 16, 2015

PRESS NOTE OF 17092015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0074/2015
(CODE OF CRIMINAL PROCEDURE, 1973 U/s 110(E)(G) )
16/09/2015 Under Investigation
CrPC - Security For Good Behaviour (Sec 110)
Brief Facts :  ದಿನಾಂಕಃ 15-9-2015 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಆಪಾದಿತನು ಮೃತ್ಯುಂಜಯ ನಗರದ ಮುಖ್ಯರಸ್ತೆಯಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಟಕಾ ಜೂಜಾಟ ಆಡಿರಿ 1 ರೂಗೆ 80 ರೂ ಬರುತ್ತದೆ. ಸಾಹುಕಾರರಾಗಿರಿ ಎಂದು ಹೇಳಿ ಜನರಲ್ಲಿ ಆಸೆ ಹುಟ್ಟಿಸುತ್ತಾ, ಸಾರ್ವಜನಿಕರಿಗೆ ಮಟಕಾ ಜೂಜಾಟದ ದುಶ್ಚಟಕ್ಕೆ ಬೀಳುವಂತೆ ಪ್ರಚೋದನೆ ಮಾಡುತ್ತಾ, ಮಟಕಾ ಜೂಜಾಟದ ಆಸೆ ಹುಟ್ಟಿಸುತ್ತಿದ್ದುದು ಕಂಡು ಬಂದಿದ್ದರಿಂದ ಆ ವ್ಯಕ್ತಿಯನ್ನು ಹೀಗೆಯೇ ಬಿಟ್ಟಲ್ಲಿ ಈತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಈತನನ್ನು ಹಿಡಿದು ಈತನ ವಿರುದ್ದ ಮುಂಜಾಗ್ರತೆಗಾಗಿ ಪ್ರಕರಣ ದಾಖಲಿಸಿಕೊಂಡಿದೆ
Bellary Rural PS
2 Cr.No:0391/2015
(INDIAN MOTOR VEHICLES ACT, 1988 U/s 187 ; IPC 1860 U/s 279,304(A) )
16/09/2015 Under Investigation
MOTOR VEHICLE ACCIDENTS FATAL - Other Roads
Brief Facts :  ದಿನಾಂಕ: 16-9-2015 ರಂದು ಬೆಳಗಿನ ಜಾವ 2-00 ಗಂಟೆಗೆ ಶ್ರೀ.  ಜೆ ವೀರನಗೌಡ, ವಾಸ: ಕಮ್ಮರಚೇಡು ಗ್ರಾಮ ರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ದಿನಾಂಕ: 15-9-2015 ರಂದು ರಾತ್ರಿ 10-45 ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಬಳ್ಳಾರಿ-ರೂಪನಗುಡಿ ರಸ್ತೆ ಕಮ್ಮರಚೇಡು ಗ್ರಾಮದ ಬಳಿ ಇರುವ ವಿಘ್ನೇಶ್ವರ ಕ್ಯಾಂಪಿನಲ್ಲಿ ತನ್ನ ಸಂಬಂಧಿ ಜೆ. ವಿರೇಶನು ಮೋಟರ್ ಸೈಕಲ್ ನಂ: ಕೆಎ-34-ಇಸಿ-9149 ನ್ನು ಚಲಾಯಿಸಿಕೊಂಡು ಬಳ್ಳಾರಿ ಕಡೆಯಿಂದ ಕಮ್ಮರಚೇಡು ಗ್ರಾಮದ ಕಡೆಗೆ ಹೋಗುವಾಗ ಎದುರಾಗಿ ಅಂದರೆ ಕಮ್ಮರಚೇಡು ಗ್ರಾಮದ ಕಡೆಯಿಂದ ಒಂದು ಬಿಳಿ ಬಣ್ಣದ ಬುಲೆರೋ ಪಿಕಪ್ ಲಗೇಜ್ ವಾಹನ ನಂಬರ್ ಎಪಿ-02-ಟಿಸಿ-0671 ನ್ನು ಇದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೆ. ವಿರೇಶನ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದರಿಂದ ಜೆ. ವಿರೇಶನು ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದಾಗ ತಲೆಗೆ, ಎದೆಗೆ, ಬಲಕೈಗೆ ಪೆಟ್ಟುಗಳು ತಗುಲಿ ಗಾಯಗಳು ಆಗಿದ್ದರಿಂದ ತಾವು ಕೂಡಲೇ ಸ್ಥಳಕ್ಕೆ 108 ಅಂಬುಲೆನ್ಸ್ ನಲ್ಲಿ ಕರೆಯಿಸಿ, ಅದರಲ್ಲಿ ತಾವು ವಿರೇಶನನ್ನು ಕೂಡಿಸಿಕೊಂಡು ಈ ದಿನ ದಿನಾಂಕ 16-09-2015 ರಂದು ಬೆಳಗಿನ ಜಾವ 00-45 ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆಂದು ತಿಳಿಸಿದರೆಂದು ಅಪಘಾತ ಮಾಡಿದ ಬುಲೆರೋ ಪಿಕಪ್ ಲಗೇಜ್ ವಾಹನ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.
3 Cr.No:0392/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) 
16/09/2015 Under Investigation
ACT 1957 U/s 21(1) ; IPC 1860 U/s 379 )
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 16-9-2015 ರಂದು ಬೆಳಿಗ್ಗೆ 9-30 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 16-9-2015 ರಂದು ಬೆಳಿಗ್ಗೆ ಠಾಣೆಯ ಸರಹದ್ದಿನ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಕೆಲವು ಜನರು ಒಂದು ಟ್ರಕ್ಟರ್ ಟ್ರಾಲಿಯಲ್ಲಿ ನಿಲ್ಲಿಸಿಕೊಂಡು ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-119 ಪಿ.ಸಿ-324 ರವರೊಂದಿಗೆ ಇಲಾಖೆಯ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಹೆಚ್.ಸಿ-43 ರವರೊಂದಿಗೆ ಬೆಳಿಗ್ಗೆ 7-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಮರಳನ್ನು ತುಂಬುತ್ತಿದ್ದ ಜನರು ಟ್ರಾಕ್ಟರ್ ಟ್ರಾಲಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆಂದು ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕರು ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದರಿಂದ ಟ್ರಾಕ್ಟರ್ ನಂಬರ್ : ಕೆ.ಎ-34-ಟಿ-4321 ಮತ್ತು  ಟ್ರಾಲಿ ಚಾಸಿ ನಂಬರ್: 25105,  ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು, ಸ್ಯಾಂಪಲ್ ಮರಳು ತುಂಬಿದ 2 ಚೀಲಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಬಂದಿದ್ದು ಮೇಲ್ಕಂಡವರ ಮೇಲೆ ಕ್ರಮ ಜರುಗಿಸಲು ಕೋರಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
4 Cr.No:0393/2015
(IPC 1860 U/s 504,143,147,148,149,323,324 )
16/09/2015 Under Investigation
RIOTS - Others
Brief Facts :  ದಿನಾಂಕ 15-09-2015 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾಧಿದಾರರಾದ ಶ್ರೀಮತಿ ಸುಶೀಲಮ್ಮ ಗಂಡ ಲೇಟ್. ರಾಜಣ್ಣ ವ: 45 ವರ್ಷ, ವಾಸ: ವೆಲ್ ಕಮ್ ಗೇಟ್ ಹತ್ತಿರ, 5 ನೇ ವಾರ್ಡ್, ಕೊಳಗಲ್ಲು ಗ್ರಾಮ ರವರು ತನ್ನ ಮಕ್ಕಳಾದ ರಮೇಶ್ ಮತ್ತು ಗಿರಿಜಾ ರವರೊಂದಿಗೆ ಮನೆಯ ಮುಂದೆ ಇದ್ದಾಗ, ಆರೋಪಿತರಾದ ಶಶಿಕಲಾ, ಅಂಬಮ್ಮ, ಶೇಖರ, ನಾರಮ್ಮ ಮತ್ತು ಮಸ್ತಾನ್ ರವರು ಮನೆಯ ಮುಂದೆ ಬಂದು ಈ ಮನೆ ನನ್ನದು, ನೀವು ಏಕೆ ಇದ್ದೀರಿ ಸೂಳೇರೆ ಅಂತ ಆರೋಪಿ ಶಶಿಕಲಾ ಬೈದಾಡಿದ್ದು, ಆಗ ಫಿರ್ಯಾಧಿದಾರರು ಇದು ನನ್ನ ಮನೆ ನಮಗೆ ಸಹ ಭಾಗ ಇದೆ ಅಂತ ಹೇಳಿದ್ದರಿಂದ ಶಶಿಕಲಾ, ಅಂಬಮ್ಮ, ನಾರಮ್ಮ ರವರು ಕೈಗಳಿಂದ ಫಿರ್ಯಾಧಿದಾರರ ತಲೆಗೆ, ಮೈಮೇಲೆ ಹೊಡೆದು ಕೆಳಗೆ ಹಾಕಿಕೊಂಡು ಕಾಲುಗಳಿಂದ ತುಳಿದಿದ್ದು, ಫಿರ್ಯಾಧಿದಾರರ ಮಗ ರಮೇಶನಿಗೆ ಶೇಖರ ಮತ್ತು ಮಸ್ತಾನ್ ರವರು ಕೈಗಳಿಂದ ಮೈ ಮೇಲೆ ಹೊಡೆದಿದ್ದು, ಬಿಡಿಸಲು ಬಂದ ಫಿರ್ಯಾಧಿದಾರರ ಮಗಳು ಗಿರಿಜಾಳಿಗೆ ಶಶಿಕಲಾಳು ಕಟ್ಟಿಗೆಯಿಂದ ಹೊಡೆಯಲು ಹೋದಾಗ, ಗಿರಿಜಾಳು ಕೈ ಅಡ್ಡ ಇಟ್ಟಾಗ ಆ ಏಟು ಗಿರಿಜಾಳ ಬಲ ಕೈ ಹೆಬ್ಬೆರಳಿಗೆ ತಗುಲಿ ಗಾಯ ಆಗಿದ್ದು, ನಾರಮ್ಮಳು ಬಾಯಿಂದ ಗಿರಿಜಾಳ ಎಡ ಕೈಯ ಮಧ್ಯ ಬೆರಳಿಗೆ ಕಚ್ಚಿರುತ್ತಾಳೆಂದು ಸದರಿಯವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ದೂರು ಇರುತ್ತದೆ.
Bellary Traffic PS
5 Cr.No:0136/2015
(IPC 1860 U/s 279,338 ; INDIAN MOTOR VEHICLES ACT, 1988 U/s 187 )
16/09/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ: 15-09-2015 ರಂದು ಫಿರ್ಯಾಧಿದಾರರಾದ ತಿಮ್ಮಪ್ಪ ತಂದೆ ದಿ||ಯಲ್ಲಪ್ಪ ವ: 45 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯವಸಾಯ ಕೆಲಸ ವಾಸ: ಗಲಗಲ್ ಗ್ರಾಮ, ಬೊಮ್ಮಘಟ್ಟ ಮಂಡಲಂ, ರಾಯದುರ್ಗ ತಾ, ಅನಂತಪುರ ಜಿಲ್ಲೆ. ಹಾಲಿವಾಸ: ಶ್ರೀನಗರ. ಭತ್ರಿ ರೋಡ್ ಬಳ್ಳಾರಿ. ರವರು  ಬಳ್ಳಾರಿ ನಗರದ ವಿಧ್ಯಾನಗರದ 4 ನೇ ಕ್ರಾಸ್ ಹತ್ತಿರ ವೀರಾಂಜಿನೇಯ ಗುಡಿ ಹತ್ತಿರ ನಿಂತುಕೊಂಡಿದ್ದಾಗ ಫಿರ್ಯಾದಿದಾರರ ಮಕ್ಕಳಾದ ಅನಿತಾ @ ಲಲಿತಾ ಹಾಗು ಲಕ್ಷ್ಮಿದೇವಿ ರವರು ನಡೆದುಕೊಂಡು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಂಜೆ 5-40 ಗಂಟೆಗೆ ಎದುರುಗಡೆಯಿಂದ ಅಂದರೆ ಬತ್ರಿ ರಸ್ತೆ ಕಡೆಯಿಂದ ಒಂದು ಟಿ.ವಿ.ಎಸ್ ಎಕ್ಸೆಲ್ ಮೊಪೆಡ್ ಅನ್ನು ಅದರ ಚಾಲಕನಾದ ಬಸವರಾಜ ವಾಸ: ಬಳ್ಳಾರಿ ಈತನು ಸದರಿ ಮೊಪೆಡನ್ನು ರಸ್ತೆಯ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗದೇ ಸಂಪೂರ್ಣ ಬಲಬದಿಗೆ ಚಲಾಯಿಸಿಕೊಂಡು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನಿತಾ @ ಲಲಿತಾ ವ: 10 ವರ್ಷ, ಈಕೆಗೆ ಡಿಕ್ಕಿ ಹೊಡೆಸಿದ್ದರಿಂದ ಅನಿತಾ @ ಲಲಿತಾಳು ಕೆಳಗೆ ಬಿದ್ದಿದ್ದು, ಪರಿಣಾಮ ಅನಿತಾ @ ಲಲಿತಾಳ ಬಲಗಾಲಿನ ಮೊಣಕಾಲಿನ ಕೆಳಗೆ ಬಾವು ಬಂದು ಮೂಳೆ ಮುರಿದು ಗಾಯಗಳಾಗಿದ್ದು, ಅಪಘಾತವಾದ ಗಾಬರಿಯಲ್ಲಿ ಮೊಪೆಡ್ ನಂಬರ್ ನೋಡಿರುವುದಿಲ್ಲವೆಂದು ಈ ಅಪಘಾತ ಪಡಿಸಿದ ಟಿ.ವಿ.ಎಸ್ ಎಕ್ಸೆಲ್ ಮೊಪೆಡ್ ನೇದ್ದರ ಚಾಲಕನಾದ ಬಸವರಾಜ ಈತನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ದೂರು ಇರುತ್ತದೆ.
6 Cr.No:0137/2015
(IPC 1860 U/s 279,337 )
16/09/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ನಿನ್ನೆ ದಿನ ದಿನಾಂಕ: 15-09-2015 ರಂದು ಫಿರ್ಯಾಧಿದಾರ ಮೊಹಮ್ಮದ್ ಇರ್ಫಾನ್ ತಂದೆ ಲೇಟ್. ಶೇಕ್ಷಾವಲಿ, ವಯಸ್ಸು: 30 ವರ್ಷ, ಮುಸ್ಲಿಂ ಜನಾಂಗ, ಟೈಲರ್ ಕೆಲಸ, ವಾಸ: ಮನೆ ನಂಬರ್: 241/ಎ, ಸರ್ಕಾರಿ ಆಸ್ಪತ್ರೆಯ ಹತ್ತಿರ, ರಾಣಿತೋಟ, ಬಳ್ಳಾರಿರವರು ಅಂದ್ರಾಳ್ ನಿಂದ ತಮ್ಮ ರಾಣಿತೋಟದ ಕಡೆಗೆ ಬರಲು ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ಬಳ್ಳಾರಿ ನಗರದ ಅಂದ್ರಾಳ್ ರಸ್ತೆಯ ಗೋ ಶಾಲೆ ಹತ್ತಿರ ಇರುವ ಹಳ್ಳದ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅದೇ ಸಮಯದಲ್ಲಿ ಫಿರ್ಯಾಧಿದಾರರ ಎದುರುಗಡೆಯಿಂದ ರಾಣಿ ತೋಟದ ಕಡೆಯಿಂದ ಫಿರ್ಯಾಧಿದಾರರ ಮನೆಯ ಹತ್ತಿರ ವಾಸವಾಗಿರುವ ಅಸ್ಲಾಂ ಬಾಷ ಈತನು ಮೋಟಾರ್ ಸೈಕಲ್ ನಂಬರ್: ಕೆಎ-34 ಎಲ್-4806 ನೇದ್ದರ ಹಿಂದಿನ ಸೀಟಿನಲ್ಲಿ ತನ್ನ ತಾಯಿಯಾದ ಶ್ರೀಮತಿ.ರಾಬಿಯಾ ಬೀ ರವರನ್ನು ಕೂಡಿಸಿಕೊಂಡು ಚಾಲಕನಾದ ಅಸ್ಲಾಂ ಬಾಷ ಈತನು ಸದರಿ ಮೋಟಾರ್ ಸೈಕಲನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಅಂದ್ರಾಳ್ ರಸ್ತೆಯ ಗೋಶಾಲೆಯ ಹತ್ತಿರ ಇರುವ ಹಳ್ಳದ ಬಳಿ ಇಳಿಜಾರಿನಲ್ಲಿ ಏಕಾ-ಏಕಿ ಮೋಟಾರ್ ಸೈಕಲ್ ನ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶ್ರೀಮತಿ.ರಾಬಿಯಾ ಬೀ ರವರು ಆಯಾ ತಪ್ಪಿ ಮೋಟಾರ್ ಸೈಕಲ್ ನಿಂದ ಕೆಳಗೆ ರಸ್ತೆಯ ಮೇಲೆ ಬಿದ್ದಿದ್ದರಿಂದ ಶ್ರೀಮತಿ.ರಬಿಯಾ ಬೀ ರವರ ತಲೆಯ ಹಿಂಭಾಗದ ಬಲಭಾಗದಲ್ಲಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿರುತ್ತಾರೆಂದು, ಈ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಚಾಲಕ ಅಸ್ಲಾಂ ಬಾಷ ಈತನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ದೂರು ಇರುತ್ತದೆ.
Cowlbazar PS
7 Cr.No:0275/2015
(IPC 1860 U/s 00MP )
16/09/2015 Under Investigation
MISSING PERSON - Man
Brief Facts :  ಈ ದಿನ ದಿನಾಂಕ: 16/09/2015 ರಂದು ಬೆಳಿಗ್ಗೆ 10-30 ಗಂಟೆಗೆ  ಶ್ರೀಮತಿ ಲೈಸಾ ಪಾಲ್. ಗಂಡ ಸುರೇಂದ್ರ ರಾಜ್ ಕುಮಾರ್ ಪಾಲ್ @ ಪಾಲ್. ವ: 30ವರ್ಷ. ಕ್ರಿಶ್ಚಿಯನ್ ಜನಾಂಗ. ಮನೆ ಕೆಲಸ. ವಾಸ: ವಾರ್ಡ ನಂ: 32. ಬಿ.ಸಿ.ಸಿ.ಐ. ಗ್ರೌಂಡ್ ಹತ್ತಿರ ಎಂ.ಪಿ. ಪಕೀರಪ್ಪ ರವರ ಮನೆಯ ಹತ್ತಿರ ಕೋಟೆ ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶದಂತೆ: ಪಿರ್ಯಾದಿದಾಳ ಗಂಡ ಸುರೇಂದ್ರ ರಾಜ್ ಕುಮಾರ್ ಪಾಲ್ @ ಪಾಲ್. ರವರು ಬಳ್ಳಾರಿ ಹಳೇ ಬಸ್ ಸ್ಟಾಂಡ್ ಎದುರಿಗೆ ಇರುವ ಅಮರೇಶ್ವರ ಮೇಡಿಕಲ್ ಸ್ಟೋರ್ ನಲ್ಲಿ ಈ ಹಿಂದೆ  ಕೆಲಸ ಮಾಡುತ್ತಿದ್ದು ಈಗ್ಗೆ ಸುಮಾರು 02 ತಿಂಗಳ ಹಿಂದೆ  ತನಗೆ  ಜ್ವರವಿದ್ದುದ್ದರಿಂದ  ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ದಿನಾಂಕ; 10/07/2015 ರಂದು ಸಂಜೆ 7-40 ಗಂಟೆಯ ಸುಮಾರಿಗೆ  ಸುರೇಂದ್ರ ರಾಜ್ ಕುಮಾರ್ ಪಾಲ್ @ ಪಾಲ್. ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಮರಳಿ ಮನೆಗೆ ಬಾರದೇ ಎಲ್ಲೋ ಕಾಣೆಯಾಗಿರುತ್ತಾರೆ. ಅವರ ಹುಡುಕಾಟಕ್ಕಾಗಿ  ಅವರ ಮೋಬೈಲ್ ನಂಬರ್ ಗೂ ಕರೆಮಾಡಿದಾಗ್ಯೂ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿನೋಡಿದಾಗ್ಯೂ ಪತ್ತೆಯಾಗದೇ ಇದ್ದುದ್ದರಿಂದ ಠಾಣೆಗೆ ತಡವಾಗಿ ಬಂದು ತನ್ನ ಗಂಡನನ್ನು ಹುಡುಕಿ ಕೊಡುವಂತೆ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿದೆ.
8 Cr.No:0276/2015
(CODE OF CRIMINAL PROCEDURE, 1973 U/s 110(E)(G) )
16/09/2015 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕ: 16/09/2015 ರಂದು ಬೆಳಿಗ್ಗೆ 11-00 ಗಂಟೆಗೆ ಕೌಲ್ ಬಜಾರ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹೆಚ್.ಸಿ. 363-143 ರವರೊಂದಿಗೆ ಹಗಲು ಗಸ್ತು ಕರ್ತವ್ಯದಲ್ಲಿರುವಾಗ ಆರೋಪಿತನಾದ ಸಲೀಂ @ ಶರತ್ ರವರು ಖೂನಿಠಾಣಾ ಮಸೀದಿ ಏರಿಯಾದಲ್ಲಿ ನಾನು ಈ ಏರಿಯಾದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ಧೇನೆ. ಒಂದು ನಂಬರ್ ಗೆ ಹಣ ಕಟ್ಟಿದರೇ ಅದೇ ನಂಬರ್ ಬಂದರೆ 80 ರೂಗಳನ್ನು ಕೊಡುವುದಾಗಿ ಹೇಳಿ, ಮಟಕಾ ಜೂಜಾಟವಾಡುವಂತೆ ಪ್ರೋಚೋದನೆ ಮಾಡುತ್ತಿದ್ದರಿಂದ ಬೆಳಿಗ್ಗೆ 11-30 ಗಂಟೆಗೆ ವಶಕ್ಕೆ ಪಡೆದು, ಏಕೆ ಸಾರ್ವಜನಿಕರಿಗೆ ಜೂಜಾಟವಾಡುವಂತೆ ಉತ್ತೇಜನ ನೀಡುತ್ತಿದ್ದಯಾ ಎಂದು ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೇ ಇದ್ದುದ್ದರಿಂದ, ಸ
9 Cr.No:0277/2015
(IPC 1860 U/s 363 )
16/09/2015 Under Investigation
KIDNAPPING AND ABDUCTION - Others
Brief Facts :  ಈ ದಿನ  ದಿನಾಂಕ: 16/09/2015 ರಂದು ಸಂಜೆ 4-30  ಗಂಟೆಗೆ ಶ್ರೀಮತಿ ಸುಶೀಲಾ ಗಂಡ ಲೇಟ್ ಸತೀಶ್ ವಾಸ: ಸುಮಾ ಮೇಡಿಕಲ್ ಸ್ಟೋರ್ ಹಿಂದೆ ಕೌಲ್ ಬಜಾರ್ ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಸಾರಾಂಶವೆನೆಂದರೆ;  ನಿನ್ನೆ ದಿನ ದಿನಾಂಕ: 15/09/2015 ರಂದು ರಾತ್ರಿ 7-00 ಗಂಟೆಯಿಂದ 8-00 ಗಂಟೆಯ ಮಧ್ಯದ ಅವಧಿಯಲ್ಲಿ  ತನ್ನ  ಅಪ್ರಾಪ್ತ ವಯಸ್ಸಿನ ಮಗಳಾದ   ಆಶಾಲತ   ವ;16ವರ್ಷ ಈಕೆಯನ್ನು  ತಮ್ಮ ಓಣಿಯ ವಾಸಿಯಾದ ಹೊನ್ನೂರನು ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು. ತನ್ನ ಮಗಳನ್ನು ಪತ್ತೆಮಾಡಿ ಕೊಡುವಂತೆ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿದೆ.
10 Cr.No:0278/2015
(IPC 1860 U/s 506,34,504,409,420,323,324 )
16/09/2015 Under Investigation
CHEATING - CHEATING
Brief Facts :  ಫಿರ್ಯಾಧಿದಾರರಾದ ಕೋಟ್ರೇಶ್ ರವರಿಗೆ ಆರೋಪಿತನಾಧ ಹೆಚ್.ಡಿ. ಶಿವರಾಂ ರವರು ಎಲ್.ಐ.ಸಿ. ಕಛೇರಿಯಲ್ಲಿ ಪರಿಚಯವಾಗಿದ್ದು, ಎಲ್.ಐ.ಸಿ. ಮೈಕ್ರೋ ಇನ್ಸೂರೇನ್ಸ್  ಪಾಲಿಸಿ ಮಾಡಿಸಲಿಕ್ಕೆ ಪ್ರೇರೆಪಿಸಿದರು, ಅದರಂತೆ ತಾನು 2012 ನೇ ಇಸ್ಚಿಯ ಜೂನ್ ತಿಂಗಳಿಂನಿಂದ ಹೆಚ್.ಡಿ. ಶಿವರಾಂ ರವರ ಕೆಳಗೆ ಸಬ್ ಏಜೇಂಟ್ ಆಗಿ ನೇಮಕ ಮಾಡಿಕೊಂಡಿದ್ದು, ಮೈಕ್ರೋ ಇನ್ಸುರೇನ್ಸ್ ಗೆ ಜನರು ಹಣವನ್ನು ತನ್ನ ಹತ್ತಿರ ಕಟ್ಟುತ್ತಿದ್ದು, ಹಣದೊಂದಿಗೆ ಕಾರ್ಡ್ ನ್ನು ಸಹ ಕೊಡುತ್ತಿದ್ದರು. ತಾನು ಹಣ ಮತ್ತು ಕಾರ್ಡ್ ನೊಂದಿಗೆ ಹೆಚ್.ಡಿ. ಶಿವರಾಂ ರವರ ಹತ್ತಿರ ಹೋದಾಗ ಹೆಚ್.ಡಿ.  ಶಿವರಾಂ ರವರು   ಹಣವನ್ನು ಪಡೆದು ಕಾರ್ಡ್ ನಲ್ಲಿ ಹಣ ಸ್ವೀಕರಿಸಿದ ಬಗ್ಗೆ ನಮೂದಿಸಿಕೊಡುತ್ತಿದ್ದರು. ನಂತರ ಹೆಚ್.ಡಿ. ಶಿವರಾಂ ರವರು ಪಾಲಸಿದಾರರಿಂದ ಹಣವನ್ನು ತನ್ನ ಮೂಲಕ ಪಡೆದಿದ್ದು, ಆದರೆ ಪಾಲಸಿದಾರರ ಖಾತೆಗೆ ಹಣ ಸಂದಾಯ ಮಾಡಿರುವುದಿಲ್ಲ. ನಂತರ ಪಾಲಸಿದಾರರ ಖಾತೆ ಹಣ ಸಂದಾಯವಾಗಿರುವುದಿಲ್ಲವೆಂದು 2014 ನೇ ಇಸ್ವಿಯ ಡಿಸೆಂಬರ್ ತಿಂಗಳಿನಲ್ಲಿ ಗೋತ್ತಾಗಿದ್ದು, ನಂತರ ಸದರಿ ಹಣದ ಬಗ್ಗೆ ಕೇಳಲು ಅವರ ಮನೆಯ ಹತ್ತಿರ, ಎಲ್.ಐ.ಸಿ. ಆಫೀಸ್ ಹತ್ತಿರ ಹೋದರು ಸಿಕ್ಕರಲಿಲ್ಲ. ನಂತರ ದಿನಾಂಕ: 28/06/2015 ರಂದು ಶಿವರಾಂ ರವರ ಮನೆಯ ಹತ್ತಿರ ತಾನು, ತನ್ನ ಹೆಂಡತಿ, ಮಾವ ಸೇರಿ ಹೋಗಿದ್ದು,ನಂತರ  ಸಂಜೆ 7-30 ಗಂಟೆಗೆ ಹೆಚ್.ಡಿ. ಶಿವರಾಂ ರವರು ಬಂದಿದ್ದು, ಆಗ ಅವರಿಗೆ ಪಾಲಸಿದಾರರ ಹಣವನ್ನು ಪಾಲಿಸಿದಾರರ ಖಾತೆಗೆ ಕಟ್ಟಿರುವುದಿಲ್ಲವೆಂದು ಕೇಳಿದ್ದಕ್ಕೆ ಹೆಚ್.ಡಿ. ಶಿವರಾಂ ರವರು ಏನಲೇ ಸೂಳೇ ಮಗನೇ ಮನೆಯ ಹತ್ತಿರ ಗಲಾಟೆ ಮಾಡುತ್ತಿಯಾ,ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಮೈಮೇಲೆ ಬಂದು, ಕಟ್ಟಿಗೆ ರಾಡ್ ಗಳಿಂದ ಹಲ್ಲೇ ಮಾಡಿರುತ್ತಾರೆ. ಅಲ್ಲೇ ಇದ್ದ ಮಲ್ಲಯ್ಯ ಎನ್ನುವರು ಚಾಕುವನ್ನು ತೋರಿಸಿ, ನಿನ್ನನ್ನು ಸಾಯಿಸಿಬಿಡುತ್ತೇನೆಂದರು, ಎಸ್.ಬಿ.ಎಂ. ಜಕ್ರಿಯಾ ರವರು ಕಬ್ಬಿಣದ ರಾಡ್ ನಿಂದ ತನ್ನ ಮಾವನವರ ಮೇಲೆ ಹಲ್ಲೇ ಮಾಡಿದರು, ಶಿವರಾಂ ರವರ ಹೆಂಡತಿ ಲಕ್ಷ್ಮಿ ತನ್ನ ಹೆಂಡತಿಗೆ ಕೈಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದಿದರು, ನೀವು ಬಳ್ಳಾರಿಯಲ್ಲಿ ತಿರುಗಾಡಲು ಬಿಡುವುದಿಲ್ಲ ನಿಮ್ಮನ್ನು ಸಾಯಿಸಿ ಬಿಡುತ್ತೇನೆಂದರು, ನೀವು ಏನಾದರೂ ಪೊಲೀಸರಿಗೆ ಕೇಸು ನೀಡಿದರೆ ನಿಮ್ಮ ವಿರುದ್ದ ಜಾತಿನಿಂದನೆ ಕೇಸು ಹಾಕುತ್ತೇನೆಂದು ಬೆದರಿಸಿರುತ್ತಾನೆ. ತನ್ನನ್ನು ನಂಬಿ ಹಣ ಕಟ್ಟಿದ ಜನರಿಗೆ ಮತ್ತು ತನ್ನಂತೆ ಏಜೆಂಟ್ ಮಾಡಿಕೊಂಡವರಿಂದ ಹಣವನ್ನು ಪಡೆದು, ಪಾಲಸಿದಾರರ ಖಾತೆಗೆ ಕಟ್ಟದೇ ತನಗೆ ಮತ್ತು ಇತರೇ ಏಜೆಂಟ್ ರಿಗೆ ಮತ್ತು ಜನರಿಗೆ ಮೋಸ ಮಾಡಿರುತ್ತಾನೆಂದು,  ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ.
11 Cr.No:0279/2015
(CODE OF CRIMINAL PROCEDURE, 1973 U/s 107,151 )
16/09/2015 Under Investigation
CrPC - Preventive Arrest (Sec 151)
Brief Facts :  ಈ ದಿನ ದಿನಾಂಕ: 16/09/2015 ರಂದು ಮದ್ಯಾಹ್ನ 3-50 ಗಂಟೆಗೆ ಕೌಲ್ ಬಜಾರ್ ಪೊಲೀಸ್ ಠಾಣಾ ಸರಹದ್ದಿನ ಬಂಡಿಹಟ್ಟಿಯಲ್ಲಿ ಗಲಾಟೆಯಾಗುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂಧಿಯವರಾದ ಎಎಸ್ಐ. ಯರ್ರಿಸ್ವಾಮಿ, ಪಿಸಿ-871, 1185 ರವರೊಂದಿಗೆ ವರ್ತಮಾನ ಸ್ಥಳಕ್ಕೆ ಸಂಜೆ 4-10 ಗಂಟೆಗೆ ಹೋದಾಗ ರಾಮುಲಮ್ಮ ಗುಡಿಯ ಮುಂದೆ ಮೂವರು ವ್ಯಕ್ತಿಗಳು ರೋಡ್ಗೆ ಅಡ್ಡವಾಗಿ ನಿಂತುಕೊಂಡು ಸರ್ವೆ ಮಾಡದಂತೆ ತಡೆಯಬೇಕು ಎಂದು ರೋಡ್ ನಲ್ಲಿ ಬರು ಹೋಗುವ ಜನರಿಗೆ ತೊಂದರೆ ಮಾಡುತ್ತಿದ್ದು, ಒಂದು ವೇಳೆ ನೀವು ಸರ್ವೆ ಮಾಡದಂತೆ ತಡೆಯದಿದ್ದರೆ ಮುಂದಿನ ಕತೆ ನೋಡಿ ಎಂದು ಹೇಳಿ ಭಯ ಬೀಳಿಸಿ, ಸಾರ್ವಜನಿಕರ ನೆಮ್ಮದಿಗೆ ತೊಂದರೆ ಮಾಡುತ್ತಿದ್ದರಿಂದ, ಸದರಿಯವರನ್ನು ವಶಕ್ಕೆ ಪಡೆದು, ಏಕೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ ತೊಂದರೆ ಮಾಡುತ್ತಿದ್ದೀಯ ಎಂದು ವಿಚಾರಿಸಿದರೆ ಸರಿಯಾಗಿ ಉತ್ತರಿಸದೇ ಉದ್ದಟ್ಟತನ ತೋರಿಸಿದ್ದರಿಂದ ಸದರಿಯವರನ್ನು ಸ್ಥಳದಲ್ಲಿಯೇ ಬಿಟ್ಟರೆ ಏನಾದರೂ ಅನಾಹುತ ಮಾಡಬಹುದೆಂದು, ಅನುಮಾನಿಸಿ ಮುಂಜಾಗೃತಾ ಕ್ರಮಕ್ಕಾಗಿ ಠಾಣಾ ಗುನ್ನೆ ನಂ. 279/2015 ಕಲಂ: 151-107 ಸಿ.ಆರ್.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ.
Gandhinagar PS
12 Cr.No:0196/2015
(IPC 1860 U/s 379 )
16/09/2015 Under Investigation
THEFT - Of Automobiles - Of Two Wheelers
Brief Facts :  06/09/2015 ರಂದು ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ನ್ನು ರಾತ್ರಿ 8-00 ಗಂಟೆ ಸುಮಾರಿಗೆ ಬಳ್ಳಾರಿ ನಗರದ ಗಾಂಧಿನಗರ 3ನೇ ಕ್ರಾಸಿನಲ್ಲಿರುವ ಬ್ರಹ್ಮಿಣಿ ಬಿಲ್ಡಿಂಗ್ ನ ಕಾಂಪೌಂಡ್ ನಲ್ಲಿ ತನ್ನ ಮನೆಯ ಮುಂದೆ ತನ್ನ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ. ಕೆಎ 34/ಇಸಿ-8549 ಬೆಲೆ ಅಂದಾಜು 48,000/- ರೂ. ಬಾಳುವುದನ್ನು ನಿಲ್ಲಿಸಿ ಬೀಗ ತೆಗೆದುಕೊಂಡು ಹೋಗಿ ಮನೆಯಲ್ಲಿ ಮಲಗಿಕೊಂಡು ದಿನಾಂಕ; 07/09/2015 ರಂದು ಬೆಳಿಗ್ಗೆ 6-30 ಗಂಟೆಗೆ ನೋಡಲಾಗಿ ಸ್ಥಳದಲ್ಲಿ ನಿಲ್ಲಿಸಿದ್ದ ತನ್ನ ಮೋಟಾರ್ ಸೈಕಲ್ ಕಾಣಲಿಲ್ಲ.  ಅದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ, ಅದನ್ನು ಇಷ್ಟುದಿನ ಅಲ್ಲಲ್ಲಿ ಹುಡುಕಾಡಿ ನೋಡಲಾಗಿ ಸಿಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಕಳ್ಳತನವಾದ ತನ್ನ ಮೋಟಾರ್ ಸೈಕಲ್ ನ್ನು ಪತ್ತೆ ಮಾಡಿಕೊಡಬೇಕೆಂದು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ.
Gudekote PS
13 Cr.No:0107/2015
(IPC 1860 U/s 306,34 )
16/09/2015 Under Investigation
SUICIDE - Attempt to commit suicide
Brief Facts :  ದಿನಾಂಕ: 29/12/2014 ರಂದು ಸಂಜೆ 7-00 ಗಂಟೆ ಸುಮಾರಿಗೆ ತನ್ನ ಮಗನಾದ E.M. ಹುಲಿರಾಜನು ತಾನು 9 ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿರುವ ಚೋರನೂರು ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೇಣು ಹಾಕಿಕೊಂಡಿದ್ದು ತಾವು ಚೋರನೂರು. ಕೂಡ್ಲಿಗಿ ಆಸ್ಪತ್ರೆಗಳಲ್ಲಿ ತೋರಿಸಿದ್ದು ಆದರೆ ಇಲ್ಲಿ ಸರಿಯಾದ ಅನುಕೂಲತೆ ಇಲ್ಲ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಬಳ್ಳಾರಿಗೆ ಕರೆದಕೊಂಡು ಬರುತ್ತಿರುವುದಾಗಿ ನೀವು ಸಹಾ ಬಳ್ಳಾರಿಗೆ ಬರುವಂತೆ ಮುರಾರ್ಜಿ ದೇಸಾಯಿ ಶಾಲೆಯವರು ತಿಳಿಸಿದಂತೆ 
ಅದೇ ದಿನ ರಾತ್ರಿ 10-45 ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಬಂದು ನೋಡಲು ತನ್ನ ಮಗನ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು ಪ್ರಜ್ಞಾಹೀನನಾಗಿದ್ದರಿಂದ ಆತನು ಚೇತರಿಸಿಕೊಂಡ ನಂತರ ವಿಷಯ ತಿಳಿದು ಮುಂದುವರೆಯೋಣವೆಂದು ಸುಮ್ಮನಾಗಿದ್ದು ಆದರೆ ಹುಲಿರಾಜನ ದಿ: 01/01/2015 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಗುಣವಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರಿಂದ ತನ್ನ ಮಗ ಹುಲಿರಾಜನ ಸಾವಿಗೆ ಮುರಾರ್ಜಿ ದೆಸಾಯಿ ಶಾಲೆಯ ಸಿಬ್ಬಂಧಿಯವರೇ ಕಾರಣ ಅವರ ವಿರುದ್ದ ಕ್ರಮ ಜರುಗಿಸುವಂತೆ ಗುಡೇಕೋಟೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಯು.ಡಿ.ಆರ್ ನಂ: 01/2015 ಕಲಂ: 174(C) ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿದ್ದು ಇರುತ್ತದೆ. ನಂತರ ತನ್ನ ಮಗ ಹುಲಿರಾಜನು ಶಾಲೆಯಲ್ಲಿ ಉಪಯೋಗಿಸುತ್ತಿದ್ದ ಪುಸ್ತಕಗಳನ್ನು ಚೆಕ್ ಮಾಡುತ್ತಿರುವಾಗ ದಿ: 26/08/2015 ರಂದು ಹುಲಿರಾಜನ ಒಂದು ನೋಟ್ ಪುಸ್ತಕದಲ್ಲಿ ಆತನು ತನ್ನ ಸಾವಿಗೆ ಈ ಮೇಲ್ಕಂಡ ಆರೋಪಿತರೆ ಕಾರಣ ಅಂತಾ ಬರೆದಿಟ್ಟ ಡೆತ್ ನೋಟ್ ಸಿಕ್ಕಿರುತ್ತದೆ. ಆದುದರಿಂದ ತನ್ನ ಮಗ ಹುಲಿರಾಜನ ಸಾವಿಗೆ ಕಾರಣರಾದ ಈ ಮೇಲ್ಕಂಡ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಪಿರ್ಯಾದಿ ಶ್ರೀ. ಈಡಿಗರ ಮಲ್ಲೇಶಪ್ಪ ತಂದೆ ಹರಿಶ್ಚಂದ್ರಪ್ಪ. ವಾಸ: ಎಂ. ಗಂಗಲಾಪುರ ಗ್ರಾಮ ಇವರು ಈ ದಿನ ದಿ: 16/09/2015 ರಂದು ಬೆಳಿಗ್ಗೆ 9-15 ಗಂಟೆಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿದ್ದು ಇರುತ್ತದೆ.
Hospet Rural PS
14 Cr.No:0144/2015
(IPC 1860 U/s 323,324,504,506,34 )
16/09/2015 Under Investigation
CASES OF HURT - Simple Hurt
Brief Facts :  ಹೊಸಪೇಟೆ  ಸರ್ಕಾರಿ   ಆಸ್ಪತ್ರೆಯಿಂದ  ಎಂಎಲ್.ಸಿ.  ಮಾಹಿತಿ ಮೇರೆಗೆ ಹೋಗಿ   ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳು ಮಹಮದ್ ಜಾವಿದ್ದ  ರವರ ಹೇಳಿಕೆಯನ್ನು ಪಡೆದು ನೋಡಲಾಗಿ ಸಾರಾಂಶ ಏನೆಂದರೆ ತನ್ನ ದೂರದ  ಸಂಬಂದಿಯಾದ  ತಸ್ಲಿಂ ಎನ್ನುವ  ಹುಡುಗಿಯನ್ನು  ಜಿಲಾನ್  ಎನ್ನುವವನಿಗೆ  ಮದುವೆ ಮಾಡಿ ಕೊಟ್ಟಿದ್ದು  ಸರಿಯಾಗಿ ನೋಡಿಕೊಳ್ಳದಿದ್ದರಿಂದ  ಬುದ್ದಿ ಮಾತನ್ನು  ಹೇಳಿ ಅವರ ತಂದೆ  ಬಾಂಬೆಯಿಂದ ಬಂದ ಮೇಲೆ  ಪಂಚಾಯ್ತಿ  ಮಾಡಿ  ಸರಿ ಮಾಡುತ್ತೇವೆಂದು  ಹೇಳಿದ್ದರಿಂದ ಇದೇ  ವಿಷಯವನ್ನು ಮಾತನಾಡುವುದಿದೆ   ಬಳ್ಳಾರಿ  ರಸ್ತೆಯಲ್ಲಿರುವ ಮೀರ್ ಆಲಂ ದಗರ್ಾದ ಹಿಂದೆ ಇರುವ   ಬಯಲು ಜಾಗಕ್ಕೆ ಬಾ  ಅಂತಾ  ಕರೆಸಿಕೊಂಡು  ಮಾತನಾಡುತ್ತಾ ಇದ್ದಾಗ  ಏಕಾ ಏಕಿ ಸಿಟ್ಟಿಗೆ ಬಂದು  ಕೈಗೆ  ಹಾಕಿಕೊಳ್ಳುವ  ಸ್ಟೀಲಿನ ಪಂಚಿನಿಂದ  ಬಲಗಣ್ಣಿನ  ಕೆಳಗೆ  ಹೊಡೆದು  ರಕ್ತಗಾಯ ಮಾಡಿ ಆತನ ಜೊತೆಯಲ್ಲಿದ್ದ ಇತರೇ  ಮೂರು  ಜನರು  ಸಹಾ ಕೈ  ಗಳಿಂದ  ಹೊಡೆದು  ನಿನ್ನನ್ನು  ಜೀವ  ಸಹಿತ  ಬಿಡುವುದಿಲ್ಲ ಅಂತಾ  ಪ್ರಾಣ ಬೆದರಿಕೆ ಹಾಕಿರುತ್ತೇರೆಂದು ಮುಂದಿನ ಕ್ರಮಕ್ಕಾಗಿ   ನೀಡಿದ  ದೂರಿನ ಮೇರೆಗೆ  ಠಾಣೆಗೆ   ವಾಪಾಸ್ಸು  ಬಂದು ಗುನ್ನೆ  ದಾಖಲು ಮಾಡಿ  ತನಿಖೆ  ಕೈ ಗೊಳ್ಳಲಾಗಿದೆ.
Hospet Town PS
15 Cr.No:0182/2015
(IPC 1860 U/s 379 )
16/09/2015 Under Investigation
THEFT - Of Automobiles - Of Cars/Jeeps
Brief Facts :  ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಏನಂದರೆ, ನನ್ನ ಸ್ವಂತ  ಕೆಲಸದ ನಿಮಿತ್ತವಾಗಿ ನನ್ನ ಸ್ನೇಹಿತನಾದ ಮೊಹಮ್ಮದ್ ಮಸೂದ್ವುದ್ದಿನ್ ರವರ Toyata Fortuner  AP-15/BE- 0414   ಕಾರನ್ನು  ತೆಗೆದುಕೊಂಡು ನಾನು ನಿನ್ನೆ ದಿನ ದಿನಾಂಕ: 15/09/2015 ರಂದು ಧಾರವಾಡಕ್ಕೆ ಹೋಗಿ ಅಲ್ಲಿಂದ ವಾಪಾಸು ಸಂಜೆ 5-00 ಗಂಟೆಗೆ ನಾನು ಮತ್ತು ನನ್ನ ತಮ್ಮನಾದ ವಿಕಾಸ್ ರೆಡ್ಡಿ ಈತನೊಂದಿಗೆ ವಾಪಾಸು ಹೊಸಪೇಟೆ ನಗರದ ಸ್ವಾತಿ ಹೊಟೇಲ್ನ ಪಾಕರ್ಿಂಗ್ ಸ್ಥಳದಲ್ಲಿ ಹೊಟೇಲ್ ಕೆಳಗೆ ಬಿಟ್ಟು ಸ್ವಾತಿ ಹೊಟೇಲ್ನಲ್ಲಿ ರೂಂ; 306 ಮಾಡಿಕೊಂಡು ವಾಸ್ತವ್ಯ ಮಾಡಿರುತ್ತೇವೆ. ನಂತರ ಈ ದಿನ ದಿನಾಂಕ; 16/09/2015 ರಂದು ಬೆಳಿಗ್ಗೆ  ಸುಮಾರು 6-00 ಗಂಟೆಗೆ ವಾಪಾಸು ಊರಿಗೆ ಹೋಗಲು ನಾನು ಬಂದು ನಿಲ್ಲಿಸಿದ್ದ ಸ್ವಾತಿ ಹೊಟೇಲ್ನ ಕೆಳಗೆ ಪಾಕರ್ಿಂಗ್ ಸ್ಥಳದಲ್ಲಿ ಬಂದು ನೋಡಲಾಗಿ ಸದರಿ Toyata Fortuner  AP-15/BE- 0414 ನೇದ್ದು ಇರಲಿಲ್ಲ ಸದರಿ ಕಾರಿನ ಅಂದಾಜು ಬೆಲೆ ರೂ: 22,00,000/-  ಮತ್ತು ಕಾರಿನಲ್ಲಿ ಇಟ್ಟಿದ್ದ 1) ನಗದು ಹಣ ರೂ: 90,000/- (1000ಘಿ90=90,000)  2) ಒಂದು ಬಂಗಾರದ ಚೈನ್ ಸರ ಇದರ ಅಂದಾಜು ತೂಕ; 30 ಗ್ರಾಂ  ಇದರ ಅಂದಾಜು ಬೆಲೆ ರೂ: 75,000/- 3) ವೆಂಕಟೇಶ್ವರ ದೇವರು ಇರುವ ಒಂದು ಬಂಗಾರದ ಉಂಗುರ ಇದರ ಅಂದಾಜು ತೂಕ 10 ಗ್ರಾಂ,  ಇದರ ಅಂದಾಜು ಬೆಲೆ ರೂ: 25,000/- 4) ಒಂದು ಬಂಗಾರ ಬ್ರಸ್ಲೇಟ್ ಇದರ ಅಂದಾಜು ತೂಕ 30 ಗ್ರಾಂ ಇದರ ಅಂದಾಜು ಬೆಲೆ ರೂ; 75,000/- ಎಲ್ಲಾ ಒಟ್ಟು 70 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣ ಎಲ್ಲಾ ಒಟ್ಟು ರೂ: 2,15,000/- ಮತ್ತು ಇತರೆ ದಾಖಲಾತಿ ಪತ್ರಗಳು  ಎಲ್ಲಾ ಒಟ್ಟು ರೂ: 24,15,000/- ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ರತಾರೆಂದು ನೀಡಿದ ದೂರಿನ ಮೇರೆಗೆ.
Itagi PS
16 Cr.No:0045/2015
(IPC 1860 U/s 143,147,148,442,323,504,506,354,149 )
16/09/2015 Under Investigation
RIOTS - Others
Brief Facts :  ಕೋಗಳಿ ತಾಂಡಾದಲ್ಲಿ ಫಿರ್ಯಾದುದಾರಳ ಮನೆ ಹಾಗೂ ಮನೆಗೆ ಹೊಂದಿಕೊಂಡ ಚಿಕ್ಕದಾದ ಗುಡಿಸಲು ಇದ್ದು, ಇವರ ಮನೆಯ ಪಕ್ಕ 1999 ನೇ ಸಾಲಿನಲ್ಲಿ ದೇವಸ್ಥಾನ ನಿಮರ್ಣವಾಗಿದ್ದು, ಈ ದೇವಸ್ಥಾನಕ್ಕೆ ತಮ್ಮ ಗುಡಿಸಲು ಅಡ್ಡಿ ಆಗಿರುತ್ತದೆ ಎಂದು ಹಾಗೂ ತಮ್ಮ ಗುಡಿಸಲನ್ನು ತೆಗೆದುಹಾಕಿದರೆ ದೇವಸ್ಥಾನಕ್ಕೆ ಆ ನಿವೇಶನವನ್ನು ಬಳಸಿಕೊಳ್ಳಬಹುದೆಂದು ದಿನಾಂಕ 29-06-2015 ರಂದು 11-00 ಎ.ಎಂ ಗಂಟೆ ಸುಮಾರಿಗೆ ತನ್ನ ಗಂಡ ಮನೆಯಲ್ಲಿ ಇಲ್ಲದಿರುವಾಗ  ಮೇಲ್ಕಂಡ ಆರೋಪಿತರೆಲ್ಲರೂ ಗುಂಪು ಕೂಡಿಕೊಂಡು ತಮ್ಮ ಮನೆಯ ಮುಂದೆ ಬಂದು ತನಗೆ ಮನೆಯಿಂದ ಹೊರಗೆ ಬರುವಂತೆ ಹೇಳಿ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ಕೂಗಾಡುತ್ತಾ, ಕಿರುಚಾಡುತ್ತಾ, ಬೋಸುಡಿಸೂಳೆ, ದೇವಸ್ಥಾನ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಸೂಳೆಗಾರಿಕೆ ಮಾಡುತ್ತೀಯಾ ಮರ್ಯಾದೆಯಿಂದ ಗುಡಿಸಲಿನಿಂದ ಹೊರಗೆ ಹೋಗಿ ಇಲ್ಲವಾದರೆ ನಿಮ್ಮನ್ನು ಗುಡಿಸಲಿನಿಂದ 
ಹೊರಗೆ ಹಾಕುತ್ತೇವೆ ಎಂದು ದೌರ್ಜನ್ಯದಿಂದ ಆ ಗುಡಿಸಲಲ್ಲಿ ಇಟ್ಟಿದ್ದ 2 ಚೀಲ ಜೋಳ, 25 ಕೆ.ಜಿ ತೂಕದ 4 ಚೀಲ ಅಕ್ಕಿ ನುಚ್ಚು, 1 ಹಳೆಯ ಸೈಕಲ್ ಹಾಗೂ ಮನೆಯ ಬಾಗಿಲು ತೋಳು, ಕಿಟಕಿ ತಯಾರಿಗಾಗಿ ಕೋಡಿಟ್ಟ ಸುಮಾರು 30,000/- ರೂ ಬೆಲೆ ಬಾಳುವ ಬೇವಿನ ಮರದ ಕಟ್ಟಿಗೆಗಳನ್ನು ಕಿತ್ತು ಬೀಸಾಡಿ ಇದನ್ನು ತಾನು ತಡೆಯಲು ಹೋದಾಗ ನಿನ್ನನ್ನು ಮಾನಭಂಗ ಮಾಡಿ ಇಲ್ಲಿಯೇ ಕಟ್ಟಿಗೆ ಹಾಕಿ ಸುಟ್ಟು ಬಿಡುತ್ತೇವೆ ಉಷಾರ್ ಎಂದು ಪ್ರಾಣ ಬೆದರಿಕೆಯನ್ನು ಹಾಕಿದ್ದು ತಾವು ಈ ಕೃತ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿರುವದಾಗಿ ಫಿರ್ಯಾದುದಾರಳು ಮಾನ್ಯ ಹಗರಿಬೊಮ್ಮನಹಳ್ಳಿ ನ್ಯಾಯಾಲಯಕ್ಕೆ ನೀಡಿದ ಖಾಸಗೀ ದೂರನ್ನು, ಮಾನ್ಯ ನ್ಯಾಯಾಲಯವು ಈ ಬಗ್ಗೆ ಕಂ 143, 147, 148, 323, 504, 506, 354 ಆಧಾರ 149 ಐ.ಪಿ.ಸಿ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದರಿಂದ ಸಾರಾಂಶದನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.
17 Cr.No:0046/2015
(KARNATAKA MINOR MINERAL CONSISTENT RULE 1994 U/s 42,43 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21 ; IPC 1860 U/s 379 )
16/09/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಮಾನ್ಯ ಡಿ.ಎಸ್.ಪಿ ಸಾಹೇಬರು, ಕೂಡ್ಲಿಗಿ, ಪ್ರಭಾರ ಹಡಗಲಿ, ಹಾಗೂ ಸಿ.ಪಿ.ಐ ಸಾಹೇಬರು ಹಗರಿಬೊಮ್ಮನಹಳ್ಳಿ, ಪ್ರಭಾರ ಹಡಗಲಿ. ರವರ ಮಾರ್ಗದರ್ಶನದ ಮೇರೆಗೆ ಈ ದಿನ ದಿನಾಂಕ 16-09-2015 ರಂದು 2-00 ಪಿ.ಎಂ ಗಂಟೆ ಸುಮಾರಿಗೆ ಮಾನ್ಯ ಪಿ.ಎಸ್.ಐ ಸಾಹೇಬರು ಬಾತ್ಮಿ ಮೇಲ್ಕಂಡ ಸ್ಥಳದಲ್ಲಿ ಚಾಲಕ ಆರೋಪಿ 1 ಮತ್ತು ಟ್ರ್ಯಾಕ್ಟರ್ ಮಾಲಿಕನ ಮಗನಾದ ಆರೋಪಿ 2 ರವರು ಮಹಿಂದ್ರಾ ಕಂಪನಿಯ ಕೆಂಪು ಬಣ್ಣದ  ಟ್ರ್ಯಾಕ್ಟರ್ ನಂ ಕೆ.ಎ 35/ಟಿ-8188 ಮತ್ತು  ಕೆಂಪು ಬಣ್ಣದ ಟ್ರ್ಯಾಲಿ ನಂ ಕೆ.ಎ 35/ಟಿ-8189 ನೇದ್ದರಲ್ಲಿ ಅಂದಾಜು 2,000/- ರೂ ಗಳಷ್ಟು ಬೆಲೆ ಬಾಳುವ ಮರಳನ್ನು ಅಲಬೂರು ಗ್ರಾಮದ ಬಳಿ ಇರುವ ಹಗರಿ ಹಳ್ಳದಲ್ಲಿ ತುಂಬಿಕೊಂಡು ಸಕರ್ಾರಕ್ಕೆ ಯಾವುದೇ ರಾಜಸ್ವವನ್ನು ಕಟ್ಟದೆ ಅಕ್ರಮವಾಗಿ ಮರಳು ಲೋಡ್ ಮಾಡಿಕೊಂಡು ಕಳ್ಳತನದಿಂದ ಇಟ್ಟಿಗಿ-ಕೊಟ್ಟೂರು ಎಸ್.ಹೆಚ್-45 ಟಾರ್ ರಸ್ತೆಯಲ್ಲಿ ಅಲಬೂರು ಗ್ರಾಮದ ಆಚೆಯ ಹಗರಿಹಳ್ಳದ ಸೇತುವೆಯ ಮೇಲೆ ಸಾಗಾಣಿಕೆ ಮಾಡುತ್ತಿದ್ದಾಗ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು, ಓಡಿ ಹೋದ ಆರೋಪಿ 1 ಟ್ರ್ಯಾಕ್ಟರ್ ಚಾಲಕನ ಮೇಲೆ ಹಾಗೂ ಸಿಕ್ಕಿಬಿದ್ದ ಟ್ರ್ಯಾಕ್ಟರ್ ಮಾಲಿಕನ ಮಗನಾದ ಆರೋಪಿ 2 ರವರ ಮೇಲೆ  ಕಾನೂನು ಕ್ರಮ ಜರುಗಿಸಲು ಜಪ್ತುಪಡಿಸಿಕೊಂಡ ಟ್ರ್ಯಾಕ್ಟರ್ ಹಾಗೂ ಅದರಲ್ಲಿಯ ಮರಳಿನ ಸಮೇತ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.
Kuduthini PS
18 Cr.No:0119/2015
(IPC 1860 U/s 279,304(A) ; INDIAN MOTOR VEHICLES ACT, 1988 U/s 187 )
16/09/2015 Under Investigation
MOTOR VEHICLE ACCIDENTS FATAL - National Highways
Brief Facts :  ದಿನಾಂಕ:- 15.09.2015 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಪಿರ್ಯಾದಿದಾರನು ಬಳ್ಳಾರಿ ಕಡೆಯಿಂದ ಕುಡತಿನಿ ಕಡೆಗೆ ಬೆನಕನಹಳ್ಳ ಬ್ರಿಡ್ಜ್ ಹತ್ತಿರ ಬರುತ್ತಿರುವಾಗ ಅದೇ ವೇಳೆಗೆ ಸ್ವಲ್ಪ ದೂರದಲ್ಲಿ ಒಬ್ಬ ವಾಹನ ಚಾಲಕನು ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಅದೇ ವೇಳೆಗೆ ಕುಡತಿನಿ ಕಡೆಯಿಂದ ಬಳ್ಳಾರಿ ಕಡೆಗೆ ಬರುತ್ತಿರ ಮೋಟರ್ ಸೈಕಲ್ ನಂ, ಕೆಎ-34/ಯು-2499 ನೇದ್ದರ ಚಾಲಕ ಸಾಯಿ ಕುಮಾರ್ ನ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ್ದರಿಂದ ಸಾಯಿ ಕುಮಾರ್ ನಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿರುತ್ತಾನೆ. ಸದರಿ ಮೋಟರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಸಿದ ಅಪರಿಚಿತ ವಾಹನದ ಚಾಲಕನು ವಾಹನವನ್ನು ನಿಲ್ಲಿಸಿದೇ ಪರಾರಿಯಾಗಿರುತ್ತಾನೆ. ಸದರಿ ವಾಹನವನ್ನು ಪತ್ತೆ ಮಾಡಿ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ರತಿಯನ್ನುಲಗತ್ತಿಸಿದೆ)
19 Cr.No:0120/2015
(IPC 1860 U/s 279,337 ; INDIAN 
16/09/2015 Under Investigation
MOTOR VEHICLES ACT, 1988 U/s 187 )
MOTOR VEHICLE ACCIDENTS NON-FATAL - National Highways
Brief Facts :  ಪಿರ್ಯಾದಿದಾರನು ತನ್ನ ಬೊಲೊರೊ ನಂ, ಕೆಎ-17/ಎಂ.5287 ನೇದ್ದರಲ್ಲಿ ತಾನು ತನ್ನ ತಾಯಿ, ಅಕ್ಕ ಮತ್ತು ಪಕ್ಕದ ಮನೆಯವರಾದ ಸುನೀತ ಇನ್ನೊಬ್ಬ ವ್ಯಕ್ತಿ ಒಟ್ಟು 5 ಜನ  ಸೇರಿ ತಾಡಪತ್ರಿಯಿಂದ ಕಂಪ್ಲಿಗೆ ದಿನಾಂಕ:- 15.09.2015 ರಂದು ರಾತ್ರಿ 11 ಗಂಟೆ ಸುಮಾರಿಗೆ ಬಳ್ಳಾರಿ-ಹೊಸಪೇಟೆ ಎನ್.ಹೆಚ್. 63 ರಸ್ತೆಯಲ್ಲಿ ರೆಡ್ಡಿ ಹಾಸ್ಟಲ್ ಹತ್ತಿರ ಕುಡತಿನಿ ಕಡೆಗೆ ಎದುರುಗಡೆಯಿಂದ ಬಂದ ಲಾರಿ ನಂ, ಕೆಎ-34/6777 ನೇದ್ದರ ಚಾಲಕ ಟಿಪ್ಪರ್ ಲಾರಿಯನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಬೊಲೊರೊಗೆ ಡಿಕ್ಕಿ ಹೊಡೆಸಿದ್ದರಿಂದ ಬೊಲೊರೋದಲ್ಲಿದ್ದವರಿಗೆ ಗಾಯಳಾಗಿರುತ್ತವೆ. ಮತ್ತು ಡಿಕ್ಕಿ ಹೊಡೆಸಿದ ನಂತರ ಟಿಪ್ಪರ್ ಚಾಲಕನು ಪರಾರಿಯಾಗಿರುತ್ತಾನೆಂದು ಇತ್ಯಾದಿಯಾಗಿ ದೂರಿನ ಮೇರೆಗೆ. ( ದೂರಿನ ಪ್ರತಿಯನ್ನು ಲಗತ್ತಿಸಿದೆ)
20 Cr.No:0121/2015
(IPC 1860 U/s 279,337 ; INDIAN MOTOR VEHICLES ACT, 1988 U/s 187 )
16/09/2015 Under Investigation
MOTOR VEHICLE ACCIDENTS NON-FATAL - National Highways
Brief Facts :  ದಿನಾಂಕ:- 16.09.2015 ರಂದು ಬೆಳಿಗ್ಗೆ 6:15 ಗಂಟೆ ಸುಮಾರಿಗೆ ಬಳ್ಳಾರಿ-ಹೊಸಪೇಟೆ ಎನ್.ಹೆಚ್. 63 ರಸ್ತೆಯಲ್ಲಿ ಗ್ರೀನ್ ಲ್ಯಾಂಡ್ ಡಾಬಾದ ಹತ್ತಿರ ಮೋಟರ್ ಸೈಕಲ್ ನಂ, ಕೆಎ-34/ಎಸ್-4362 ನೇದ್ದರ ಚಾಲಕ ಬಳ್ಳಾರಿ ಕಡೆಯಿಂದ ತೋರಗಲ್ಲು ಕಡಗೆ ಹೋಗುವಾಗ ಅದೇ ವೇಳೆಗೆ ತೋರಣಗಲ್ಲು ಕಡೆಯಿಂದ ಬಂದ ಲಾರಿ ನಂ, ಕೆಎ-25/ಸಿ-5117 ನೇದ್ದರ ಚಾಲಕ ಲಾರಿಯನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿರುವ ತಗ್ಗನ್ನು ತಪ್ಪಿಸಲು ಹೋಗಿ ಲಾರಿಯನ್ನು ಏಕಾಏಕಿಯಾಗಿ ಬಲಗಡೆ ತಿರುಗಿಸಿದ್ದರಿಂದ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಬಲಗಾಲಿ ರಕ್ತಗಾಯ ಮತ್ತು ಹಣೆಗೆ ಒಳೆಪೆಟ್ಟು ಅಗಿರುತ್ತದೆ. ಮತ್ತು ಡಿಕ್ಕಿ ಹೊಡೆಸಿದ ಲಾರಿ ಚಾಲಕನು ಲಾರಿಯನ್ನು ಬಿಟ್ಟು ಪರಾರಿಯಾಗಿರುತ್ತಾನೆ. ಅದ್ದರಿಂದ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ತತಿಯನ್ನು ಲಗತ್ತಿಸಿದೆ)
Kurugod PS
21 Cr.No:0157/2015
(IPC 1860 U/s 379 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) )
16/09/2015 Under Investigation
KARNATAKA STATE LOCAL ACTS - Other Local Acts
Brief Facts :  ದಿನಾಂಕ: 16/09/2015 ರಂದು ಬೆಳಿಗ್ಗೆ 6:00 ಗಂಟೆಗೆ ಪಿಎಸ್ಐ ಠಾಣೆಯಲ್ಲಿದ್ದಾಗ ಬಾದನಹಟ್ಟಿ ಗ್ರಾಮದ ಯರ್ರಿಂಗಿಳಿ ರಸ್ತೆಯಲ್ಲಿರುವ ಹೀರೆ ಹಳ್ಳದ ಕಡೆಯಿಂದ ಎರಡು ಟ್ರ್ಯಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬಾದನಹಟ್ಟಿ ಗ್ರಾಮದ ಕಡೆಗೆ ಬರುತ್ತಿದ್ದಾರೆ ಎಂದು ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ, ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರ ಸಂಗಡ ಇಲಾಖಾ ಜೀಪ್ ನಂಬರ್ ಕೆಎ-34 ಜಿ-487 ನೇದ್ದರಲ್ಲಿ  ಬೆಳಿಗ್ಗೆ 6:30 ಗಂಟೆಗೆ ಹೊರಟು, ಬಾದನಹಟ್ಟಿ ಗ್ರಾಮದ ಕಾಲುವೆ ಹತ್ತಿರ ಬೆಳಿಗ್ಗೆ 6:50 ಗಂಟೆಗೆ ತಲುಪಿ ನಮ್ಮ ಜೀಪ್ನ್ನು ಸ್ವಲ್ಪ ಮರೆಮಾಚಿ ನಿಲ್ಲಿಸಿ ಕಾಯುತ್ತಾ ನಿಂತಿದ್ದಾಗ ಬೆಳಿಗ್ಗೆ 7:10 ಗಂಟೆ ಸುಮಾರಿಗೆ ಹೀರೆಹಳ್ಳದ ಕಡೆಯಿಂದ ಬಾದನಹಟ್ಟಿ ಗ್ರಾಮದ ಕಡೆಗೆ ಮರಳು ತುಂಬಿದ ಎರಡು ಟ್ರ್ಯಾಕ್ಟರ್ಗಳು ಬರುತ್ತಿದ್ದು, ಆಗ ಪಿ.ಎಸ್.ಐ.ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಅವುಗಳನ್ನು ತಡೆದು ನಿಲ್ಲಿಸಿದ್ದು ಎರಡು ಟ್ರ್ಯಾಕ್ಟರ್ ಚಾಲುಕರುಗಳಿಗೆ ಮರಳು ಸಾಗಿಸಲು ಅಧಿಕೃತ ಪರವಾನಿಗೆ ಮತ್ತಿತರ ದಾಖಲಾತಿಗಳ ಬಗ್ಗೆ ಹಾಗೂ ಟ್ರ್ಯಾಕ್ಟರ್ಗಳ ದಾಖಲಾತಿಗಳ ಬಗ್ಗೆ ವಿಚಾರಿಸಲು ತಮ್ಮ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದು, ಟ್ರ್ಯಾಕ್ಟರ್ಗಳನ್ನು ಪರಿಶೀಲಿಸಲು ಟ್ರ್ಯಾಕ್ಟರ್ ನಂ ಕೆಎ-33 ಟಿ-2119 ಎಂದು ಇದ್ದು, ಟ್ರಾಲಿ ನಂ-ಕೆಎ-25 ಟಿ-1246 ಎಂದು ಇರುತ್ತದೆ. ಅದರ ಚಾಲಕ ತಿಪ್ಪೆಸ್ವಾಮಿ ತಂದೆ ಪೆದ್ದಣ್ಣ, ವಾಸ: ಶಾಂತಿನಗರ, ಬಳ್ಳಾರಿ. ಟ್ರ್ಯಾಕ್ಟರ್ ಮಾಲಿಕನ ಹೆಸರು ತಿಮ್ಮಪ್ಪ ವಾಸ:  ಶಾಂತಿನಗರ, ಬಳ್ಳಾರಿ ಎಂದು ತಿಳಿಸಿದ್ದು, ಇದರಲ್ಲಿ 03 ಟನ್ ಮರಳಿದ್ದು ಎರಡನೇ ಟ್ರ್ಯಾಕ್ಟರ್ನ್ನು ಪರಿಶೀಲಿಸಲು ಟ್ರ್ಯಾಕ್ಟರ್ ನಂ-ಎಪಿ-02 ಡಬ್ಲ್ಯೂ-6338 ಎಂದು ಇದ್ದು, ಟ್ರಾಲಿಯನ್ನು ಪರಿಶೀಲಿಸಲು ನಂ-ಎಪಿ-02 ಡಬ್ಲ್ಯೂ-6339 ಎಂದು ಇರುತ್ತದೆ ಅದರ ಚಾಲಕನ ಹೆಸರು ಕೆಂಚಪ್ಪ ತಂದೆ ದುರುಗಪ್ಪ ವಾಸ: ಶಾಂತಿನಗರ, ಬಳ್ಳಾರಿ ಮತ್ತು ಟ್ರ್ಯಾಕ್ಟರ್ ಮಾಲಿಕನ ಹೆಸರು ವಾಸು ವಾಸ: ಏರ್ ಫೋರ್ಟ ಹತ್ತಿರ, ಶಾಂತಿನಗರ, ಬಳ್ಳಾರಿ ಎಂದು ತಿಳಿಸಿರುತ್ತಾರೆ. ಸದರಿ ಎರಡು ಟ್ರ್ಯಾಕ್ಟರ್ ಚಾಲಕರು ಮತ್ತು ಮಾಲಿಕರು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿ ಸಕರ್ಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದರಿಂದ  ಪಿಎಸ್ಐ ರವರು ಸದರಿ ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು, ಟ್ರ್ಯಾಕ್ಟರ್ ಚಾಲಕ ಮತ್ತು  ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಪಿಯರ್ಾಧಿಯನ್ನು ನೀಡಿದ ಮೇರೆಗೆ
22 Cr.No:0158/2015
(IPC 1860 U/s 279,304(A) ; INDIAN MOTOR VEHICLES ACT, 1988 U/s 187 )
16/09/2015 Under Investigation
MOTOR VEHICLE ACCIDENTS FATAL - State Highways
Brief Facts :  ಈ ದಿನ ದಿನಾಂಕ 16/09/2015 ರಂದು ಪಿರ್ಯಾದಿದಾರರು ತಮ್ಮ ಹೊಲಕ್ಕೆ ಹೋಗುತ್ತಿರುವಾಗ ಉದಯಗೌಡ ರವರ ಗೋಡಾನ್ ಮುಂದಿನ  ಶಿರುಗುಪ್ಪ-ಬಳ್ಳಾರಿ ಹೆದ್ದಾರಿ  ರಸ್ತೆಯ ಎಡಭಾಗದಲ್ಲಿ ಒಬ್ಬ ವ್ಯಕ್ತಿ ಬಿದ್ದಿದ್ದು  ಆತನ ತಲೆಗೆ ಬಾರಿ ರಕ್ತಗಾಯವಾಗಿದ್ದು, ಮೈಗೆ ಕೈಗೆ ತೆರೆಚಿದ ಗಾಯಗಳಾಗಿದ್ದವು ಈತನ ವಯಸ್ಸು 55-56 ವರ್ಷ ಇರಬಹುದು, ಬಹುಶ: ಈತನಿಗೆ  ಯಾವೊದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು  ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೊರಟಿರಬಹುದಾದ  ಈ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದು ರಕ್ತಗಾಯಗಳನ್ನುಂಟು ಮಾಡಿ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರಬಹುದು, ಅಥವಾ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಈ ವ್ಯಕ್ತಿಯು ಬಿದ್ದು ಗಾಯಗೊಂಡಿರಬಹದಾದ ಸಾಧ್ಯತೆಗಳಿರುತ್ತವೆ. ಡಿಕ್ಕಿ ಹೊಡೆದ  ಅಪರಿಚಿತ ವಾಹನ ಮತ್ತು ವಾಹನ ಚಾಲಕನ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ ಮತ್ತು ಗಾಯಗೊಂಡ ವ್ಯಕ್ತಿ ಯಾರೆಂಬುದು ತಿಳಿದುಬಂದಿರುವುದಿಲ್ಲ ಪಿರ್ಯಾದಿದಾರರು ಸ್ಥಳಕ್ಕೆ ಬಂದ 108 ಅಂಬ್ಯೂಲೆನ್ಸ್ನಲ್ಲಿ ಸದರಿ ವ್ಯಕ್ತಿಯನ್ನು ಹಾಕಿ ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು. ನಂತರ ಸದರಿ ವ್ಯಕ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ಬೆಳಿಗ್ಗೆ 7:30 ಗಂಟೆಗೆ ಅಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಎಂದು ತಿಳಿಯಿತು. ಕಾರಣ ಅಪಘಾತಮಾಡಿದ ಅಪರಿಚಿತ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. ಇದರೊಂದಿಗೆ ಪಿರ್ಯಾದಿ ನಿಡಿದ ದುರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ.
Moka PS
23 Cr.No:0137/2015
(IPC 1860 U/s 237,279,304(A) )
16/09/2015 Under Investigation
MOTOR VEHICLE ACCIDENTS FATAL - State Highways
Brief Facts :  ಈ ದಿನ ದಿನಾಂಕ:16-9-15 ರಂದು ರಾತ್ರಿ 10 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ದಾನಮ್ಮ ಗಂಡ ಮಲ್ಲಿಕ್ ವ:21 ವರ್ಷ ಅಗಸರ ಜನಾಂಗ ಕುಲವೃತ್ತಿ ಕೆಲಸ ವಾಸ: ಗೂಳ್ಯಂ ರವರ ಠಾಣೆಗ ಬಂದು ಕೊಟ್ಟ ಗಣಕೀಕೃತ ದೂರು ಏನಂದರೆ,   ನನ್ನ ಗಂಡನಾದ ಮಲ್ಲಿಕನು ತನ್ನ ಮೋಟಾರ್ ಸೈಕಲ್ ನಂ:AP21AX6710 ನೇದ್ದರಲ್ಲಿ ನನ್ನ ಮಗನಾದ ಸುರೇಶನನ್ನು ಮುಂದೆ ಕೂಡಿಸಿಕೊಂಡು  ರಾತ್ರಿ 7-30 ಗಂಟೆಗೆ  ಹೊಸ ಎರ್ರಿಗುಡಿ ಗ್ರಾಮದ ಬೆಣ್ಣೆ ಶಿವಪ್ಪರವರ ಮನೆಯ ಮುಂದೆ ಮೋಕಾ ಟು ಆಲೂರು ರಸ್ತೆಯಲ್ಲಿ ಮೋಟಾರ್ ಸೈಕಲ್‌ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು  ಹೋಗುತ್ತಿರುವಾಗ ಎದುರಿಗೆ ಯಾವುದೋ ವಾಹನ ಬಂದಿದ್ದರಿಂದ ವಾಹನಕ್ಕೆ ಸೈಡ ಕೊಡಲು  ನನ್ನ ಗಂಡ ತನ್ನ ಮೋಟಾರ ಸೈಕಲ್ ನ  ವೇಗ ಕಡಿಮೆ ಮಾಡದೇ ಹಾಗೇ  ಅದೇ ವೇಗದಲ್ಲಿ ನಡೆಸಿಕೊಂಡು  ಹೋಗಿ   ರಸ್ತೆಯ ಬದಿಯಲ್ಲಿ ಹಾಕಿದ ಗರ್ಸ್‌ನ ಕುಪ್ಪೆಯ  ಮೇಲೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗಿದ್ದರಿಂದ ಮೋಟರ್ ಸೈಕಲ್ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೀತ ಕೆಳಗೆ ಬಿದ್ದಾಗ ನನ್ನ ಮಗನಾದ ಸುರೇಶನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ. ಮತ್ತು ನನ್ನ ಗಂಡನಿಗೆ  ತಲೆಗೆ ಮುಖಕ್ಕೆ ಮೈಕೈಗೆ ರಕ್ತಗಾಯವಾಗಿರುತ್ತದೆ. ಕಾರಣ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಲು ಈ ಗಣಕೀಕೃತ ದೂರು ನೀಡಿದ ಮೇರೆಗೆ  ಮತ್ತು ಪಿರ್ಯಾದಿದಾರರ ಗಣಕೀಕೃತ ದೂರು ಇದಕ್ಕೆ ಲಗತ್ತಿಸಿದೆ.
Sandur PS
24 Cr.No:0144/2015
(IPC 1860 U/s 279,304(A) )
16/09/2015 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕ 16.9.2015 ರಂಧು ಸಂಜೆ 4-30 ಗಂಟೆಗೆ P.ಬಾಷು ಸಾಬ್ ತಂದೆ P.ಇಮಾಮ್ ಸಾಬ್ ಪ್ರಾಯ 66 ವರ್ಷ ಮುಸ್ಲಿಂ ಜಾತಿ, ಜಿರಾಯ್ತಿ ಕೆಲಸ.ವಾಸಃ- 1 ನೇ ವಾರ್ಡ ಕ್ರಿಷ್ಣನಗರ ಸಂಡೂರು ತಾಲೂಕು ರವರು ಠಾಣೆಗೆ ಬಂದು ದೂರು ಕೊಟ್ಟಿದ್ದೇನೆಂಧರೆ ನನಗೆ 4 ಜನ ಮಕ್ಕಳಿದ್ದು ಅವರಲ್ಲಿ 1 ಹೆ ಣ್ಣು 3 ಗಂಡು ಮಕ್ಕಳಿದ್ದು [1] ಬಾಬು [2] ಇಮಾಮ್ [3] ಮಾಲನ್ [4] ಸಾದೀಕ್  ಅಂತ ಇರುತ್ತಾರೆ ನನ್ನ ಕೊನೆಯ ಮಗನಾದ ಸಾದೀಕನು ಬೇಲ್ದಾರ್ ಕೆಲಸ ಮಾಡುತ್ತಿದ್ದನು.ಆತನಿಗೆ ನರಸಾಪುರ ಗ್ರಾಮದ ಇಬ್ರಾಹೀಮ್ ರವರ ಮಗಳಾದ ಸಲೀಮಾ ರವರ ಸಂಗಡ ಸುಮಾರು 4 ವರ್ಷದ ಹಿಂದೆ ಮದುವೆ ಮಾಡಿದ್ದು 1 ಗಂಡು ಮಗು ಇರುತ್ತದೆ. ದಿನಾಂಕ:16.9. 2015 ರಂದು ಮದ್ಯಾಹ್ನ 3-00 ಗಂಟೆಗೆ ನನ್ನ ಮಗ ಸಾದೀಕ್‌ನು ಹೊಸಪೇಟೆ ಬಳಿ ಇರುವ ನನ್ನ ಮಗಳು ಮಾಲನ್ ರವರನ್ನು ಮಾತಾನಾಡಿಸಿಕೊಂಡು ಬರುವುದಾ ಗಿ ನನಗೆ ಮನೆಯಲ್ಲಿ ಹೇಳಿ ಕ್ರಿಷ್ಣನಗರದ ರೆಹಮಾನ್ ರವರ ಹೀರೊಹೊಂಡಾ ಮೋಟಾರ್ ಸೈಕಲ್ ನಂಬರ್ K.A.35-W 6421 ರನ್ನು ನಡೆಸಿಕೊಂಡು ಹೊಸಪೇಟೆ ಕಡೆಗೆ ಹೋದನು.ಆತನು ಹೋದ ಸ್ವಲ್ಪ ಸಮಯದ ನಂತರ ನನಗೆ ವಿಷಯ ತಿಳಿದು ಬಂದಿದ್ದೇನೆಂದರೆ ಸಾದೀಕ್‌ನು ಸಂಡೂರನಿಂದ ಹೊಸಪೇಟೆಗೆ ಮೋ ಟಾರ್ ಸೈ ಕಲ್ ನಂಬರ್ K.A.35-W 6421 ರನ್ನು ನಡೆಸಿಕೊಂಡು ಹೋಗುವಾಗ್ಗೆ ಸುಶೀಲಾನಗರ ಬಳಿ ಇರುವ ಅಂಬೇಡ್ಕರ್ ಭವನದ ಹತ್ತಿರ ಇರುವ ಚಂದ್ರನಾಯ್ಕ ರವರ ಮನೆಯ ಬಳಿ ಮದ್ಯಾಹ್ನ 3-20 ಗಂಟೆಗೆ ಸಾದೀ ಕ್‌ನು ಮೋಟಾರ್ ಸೈಕಲ್‌ನ್ನು ಅತಿ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಬಲಪಕ್ಕದ ದೊಡ್ಡ ಕಲ್ಲು ಗುಂಡಿಗೆ ಡಿಕ್ಕಿ ಹೊಡೆಸಿದ ನಂತರ ನಿಯಂತ್ರಣ ತಪ್ಪಿ ರಸ್ತೆಯ ಬಲಪಕ್ಕಕ್ಕೆ ಇರುವ ಇನ್ನೊಂದು ದೊಡ್ಡ ಕಲ್ಲು ಗುಂಡಿಗೆ ಡಿಕ್ಕಿ ಹೊಡೆಸಿದ್ದರಿಂದ ಮೋಟಾರ್ ಸೈಕಲ್ ಸಮೇತ ಕಲ್ಲಿಗೆ ಆತನ ತಲೆ ಬಡಿದು ತಲೆಗೆ ಮತ್ತು ಕಾಲುಗಳಿಗೆ ಭಾರಿ ಪೆಟ್ಟು ಬಿದ್ದು ತೀವ್ರ  ಸ್ವರೂಪದ 
ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಅಪಗಾತವನ್ನು ಸುಶೀಲಾನಗರ ಗ್ರಾಮದ ಚಂದ್ರ್ರನಾಯ್ಕ, ಶಂಕರ್‌ನಾಯ್ಕ. ಶಿವಮೂರ್ತಿ, ರಾಮುನಾಯ್ಕ, ಗೋಪಿನಾ ಯ್ಕ, ಮನೋಹರ್ ರವರು ನೋಡಿರುವುದಾಗಿ ತಿಳಿಯಿತು.ನಂತರ ನಾನು ಬಂದು ನೋಡಿದೆನು. ನನ್ನ ಮಗ ಸಾದೀಕ್‌ನು ಮೋಟಾರ್ ಸೈಕಲ್‌ನ್ನು ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಸಿ ಅಪಘಾತ ಮಾಡಿ ತನ್ನ ಸಾವಿಗೆ ತಾನೇ ಕಾರಣನಾಗಿರುತ್ತಾನೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ಎಂದು ಇದ್ದ ದೂರಿನಂತೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದೆ.
T.B. Dam PS
25 Cr.No:0025/2015
(CODE OF CRIMINAL PROCEDURE, 1973 U/s 41,109 )
16/09/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ: 16-09-15 ರಂದು ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯ  ಶ್ರಿ.ಎಂ.ಬಸಪ್ಪ ಎ.ಎಸ್.ಐ ಮತ್ತು ಪಿ.ಸಿ 59 ರವರು ಟಿ.ಬಿ.ಡ್ಯಾಂ ನ ಅಫೀಶಿಯಲ್ ಕಾಲೋನಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಸುಮಾರು 10-30 ಎ.ಎಂ. ಗಂಟೆ  ಸಮಯದಲ್ಲಿ  ಪೋಸ್ಟ್ ಆಫೀಸ್ ಹತ್ತಿರ ಒಬ್ಬ ವ್ಯಕ್ತಿಯನ್ನು ಪೊಲೀಸ ರನ್ನು ಕಂಡು ತನ್ನ ಇರುವಿಕೆಯನ್ನು ಮರೆಮಾಚುತ್ತಾ ಇರುವಾಗ ಎ.ಎಸ್.ಐ ರವರು ಅನುಮಾನಗೊಂಡು ಸದರಿ ವ್ಯಕ್ತಿಯನ್ನು ಹಿಡಿದು ವಿಚಾರಣೆ ಮಾಡಿದಾಗ  ತನ್ನ ಹೆಸರು & ವಿಳಾಸವನ್ನು ಸರಿಯಾಗಿ ಹೇಳದೇ ಇದ್ದುದರಿಂದ ಸದರಿ ವ್ಯಕ್ತಿಯು ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು  ಠಾಣೆಗೆ ಕರೆದು ತಂದು ಹಾಜರು ಪಡಿಸಿ ನೀಡಿದ ವರದಿ ಮೇರೆಗೆ ಮೇಲ್ಕಂಡ ಕಲಂ ರಿತ್ಯ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ