Crime Key Report From To | |||||||||||||||||
Sl. No | FIR No | FIR Date | Crime Group - Crime Head | Stage of case | |||||||||||||
APMC Yard PS | |||||||||||||||||
1 | Cr.No:0071/2015 (IPC 1860 U/s 379 ; KARNATAKA MINOR MINERAL CONSISTENT RULE 1994 U/s 42,43,44 ) |
08/09/2015 | Under Investigation | ||||||||||||||
KARNATAKA STATE LOCAL ACTS - Karnataka Minor Mineral Consistent Rule 1994 | |||||||||||||||||
Brief Facts : | ದಿನಾಂಕ: 08-09-2015 ರಂದು ಠಾಣೆಯ ಪಿ.ಎಸ್.ಐರವರು ಸಿಬ್ಬಂದಿಯೊಂದಿಗೆ ಹನುಮಾನ್ ನಗರದ ಸರ್ಕಾರಿ ಶಾಲೆಯ ಮುಂದೆ ಬೆಳಿಗ್ಗೆ 10-00 ಗಂಟೆಗೆ ಒಂದು ಹಸಿರು ಬಣ್ಣದ ಟ್ರಾಕ್ಟರ್ ನ ಟ್ರಾಲಿಯಲ್ಲಿ ಯಾವುಧೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳನ್ನು ಕಳುವಿನಿಂದ ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ್ ನಂಬರ್ ಕೆ.ಎ-34-ಟಿ.ಎ-0063, ಅದಕ್ಕೆ ಜೋಡಿಸಿದ ನೊಂದಣಿ ಸಂಖ್ಯೆ ಇರದ ಟ್ರಾಲಿಯಲ್ಲಿ ಅದರ ಚಾಲಕ ಅಂದಾಜು ರೂ. 1000/- ಬೆಲೆ ಬಾಳುವ 2 ಮೆಟ್ರಿಕ್ ಟನ್ ಮರಳನ್ನು ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ್, ಟ್ರಾಲಿ, ಟ್ರಾಲಿಯಲ್ಲಿನ ಮರಳು ಮತ್ತು ಸ್ಯಾಂಪಲ್ ಮರಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಬಂದಿದ್ದು ಮೇಲ್ಕಂಡ ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕನ ಪ್ರಕರಣ ದಾಖಲಿಸಲು ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. | ||||||||||||||||
Bellary Traffic PS | |||||||||||||||||
2 | Cr.No:0133/2015 (INDIAN MOTOR VEHICLES ACT, 1988 U/s 187 ; IPC 1860 U/s 279,304(A) ) |
08/09/2015 | Under Investigation | ||||||||||||||
MOTOR VEHICLE ACCIDENTS FATAL - National Highways | |||||||||||||||||
Brief Facts : | ದಿನಾಂಕ: 07-09-2015 ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ: 08-09-2015 ರಂದು ಬೆಳಿಗಿನ ಜಾವ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಬಳ್ಳಾರಿನಗರದ ಅನಂತಪುರ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಯಾವುದೋ ಒಂದು ವಾಹನವನ್ನು ಅದರ ಚಾಲಕನು ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾಧಿದಾರರಾದ ಹುಸೇನಪ್ಪ ತಂದೆ ರಾಮಯ್ಯ, ವಯಸ್ಸು: 65 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ: ಎಂ.ಆರ್.ಆರ್. ಕಾಂಪೌಂಡ್, ಅನಂತಪುರ ರಸ್ತೆ ಬಳ್ಳಾರಿರವರ ಮಗನಾದ ಮುತ್ತು ವಯಸ್ಸು: ಸುಮಾರು 36 ವರ್ಷ, ಎಂ.ಆರ್.ಆರ್. ಕಂಪನಿಯಲ್ಲಿ ಫೋರ್ ಮೆನ್ ಕೆಲಸ ಈತನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮುತ್ತು ಈತನಿಗೆ ತಲೆಗೆ ಮತ್ತು ಮುಖದ ಭಾಗದಲ್ಲಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು, ಅಪಘಾತ ಪಡಿಸಿ ಸ್ಥಳದಲ್ಲಿಯೇ ವಾಹವನ್ನು ನಿಲ್ಲಿಸದೇ ಹಾಗೇ ಹೊರಟು ಹೋಗಿರುವ ವಾಹನ ಯಾವುದು ಮತ್ತು ಅದರ ಚಾಲಕನು ಯಾರೆಂದು ಪತ್ತೇ ಹಚ್ಚಿ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ. | ||||||||||||||||
Brucepet PS | |||||||||||||||||
3 | Cr.No:0175/2015 (IPC 1860 U/s 341,324,323,504,506,34 ) |
08/09/2015 | Under Investigation | ||||||||||||||
CASES OF HURT - Simple Hurt | |||||||||||||||||
Brief Facts : | ದಿನಾಂಕಃ08-09-15 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ರೂಪನಗುಡಿ ರಸ್ತೆಯ ಹುಲಿಗೆಮ್ಮ ಗುಡಿ ಹತ್ತಿರದಲ್ಲಿರುವ ಪ್ರಶಾಂತ್ ಹೋಟೆಲ್ ಮುಂದುಗಡೆಯಿಂದ ಪಿರ್ಯಾದಿದಾರರಾದ ಬಿ.ರಾಮು ರವರು ಕೆಲಸಕ್ಕೆ ಹೋಗುತ್ತಿದ್ದಾಗ ಆಪಾದಿತರಾದ ಬಾಬು, ವಂಶಿ, ಮಧು ಮತ್ತು ಶಿವ ರವರು ಬಂದು ತನ್ನನ್ನು ತಡೆದು ನಿಲ್ಲಿಸಿ ಏನಲೇ ಸೂಳೆ ಮಗನೇ ನಿನ್ನೆ ದಿನ ರಾತ್ರಿ ನಿಮ್ಮ ಮಾವನಿಗೆ ಸಪೋರ್ಟ್ ಮಾಡುತ್ತೀಯಾ ಈಗ ನಿನಗೆ ಯ್ಯಾವನು ಸಪೋರ್ಟ್ ಮಾಡುತ್ತಾರೆ ನೋಡುತ್ತೇವೆ ಅಂತಾ ಬೈದಾಡಿ ಅವರಲ್ಲಿ ಬಾಬುನು ತನ್ನ ಕೈಯಲ್ಲಿದ್ದ ರಾಡ್‌ನಿಂದ ತನ್ನ ಎಡ ಕೆನ್ನೆಗೆ ಹೊಡೆದು ಗಾಯ ಪಡಿಸಿದ್ದು, ನಂತರ ಅದೇ ರಾಡ್‌ನಿಂದ ಬಲ ಕಿವಿಯ ಹಿಂದೆ ಹೊಡೆದಿದ್ದು, ನಂತರ ಮಧುನು ತನ್ನ ಕೈಯಲ್ಲಿದ್ದ ಪಂಚ್‌ನಿಂದ ಬಲ ಕಿವಿಗೆ ಹೊಡೆದಿದ್ದು, ವಂಶಿ ಮತ್ತು ಶಿವಾ ರವರು ತನಗೆ ಕೈಗಳಿಂದ ಮೈಕೈಗೆ ಹೊಡೆದುಕೊಂಡು ಪ್ರಾಣ ಭಯ ಹಾಕಿರುತ್ತಾರೆ ಅಂತಾ ದೂರು. | ||||||||||||||||
Cowlbazar PS | |||||||||||||||||
4 | Cr.No:0266/2015 (IMMORAL TRAFFIC PREVENTION ACT, 1956 U/s 5(D) ; INFORMATION TECHNOLOGY ACT 2008 U/s 67(A) ; IPC 1860 U/s 354A(1)(ii),354A(1)(iii),506,34,504 ) |
08/09/2015 | Under Investigation | ||||||||||||||
IMMORAL TRAFFIC - Un-Organised | |||||||||||||||||
Brief Facts : | ಈಗ್ಗೆ ಮೂರು ತಿಂಗಳ ಹಿಂದೆ ಫಿರ್ಯಾಧಿದಾರರು ವಿ.ಎಸ್.ಆರ್. ಲಾ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಾ, ಸಪ್ತಗಿರಿ ಫಂಕ್ಷನ್ ಹಾಲ್ ನ ಹತ್ತಿರದ ಬಿ.ಸಿ.ಎಂ. ಹಾಸ್ಟೇಲ್ ವಾಸವಾಗಿದ್ದಾಗ ಫಿರ್ಯಾಧಿದಾರರ ಮೊಬೈಲ್ ನಂ. 9686719897 ನೇದ್ದಕ್ಕೆ ಆರೋಪಿತನಾದ ಮಾಂತೇಶ್ ತನ್ನ ಮೊಬೈಲ್ ನಂ. 9035511121 ನೇದ್ದರಿಂದ ಪೋನ್ ಮಾಡಿ ತನ್ನ ಹತ್ತಿರ ಮಲಗಿಕೊಳ್ಳು ಬಾ ಎಂದು ಅವಾಚ್ಯ ಶಬ್ದಗಳಿಂದ ಬೈಯುವುದು, ಆಶ್ಲೀಲ ಮೇಸೇಜ್ ಗಳನ್ನು ಕಳುಹಿಸುವುದು ಮಾಡಿದಾಗ ಫಿರ್ಯಾಧಿದಾರರು ಜಯಲಕ್ಷ್ಮಿ ಯವರಿಗೆ ಫೋನ್ ಮಾಡಿ, ನಿಮ್ಮ ಮಗ ಈ ರೀತಿ ಮಾತನಾಡುತ್ತಿದ್ದಾನೆಂದು ಹೇಳಿದಾಗ, ಜಯಲಕ್ಷ್ಮಿಯು ಏನು ಆಗೋದಿಲ್ಲ, ತನ್ನ ಮಗನ ಹತ್ತಿರ ಬಂದು ಮಲಗು, 2000/-ರೂಗಳನ್ನು ಕೊಡುತ್ತಾನೆ ಬಾ ಎಂದು ಹೇಳಿ, ತನಗೆ ಬೈದಿರುತ್ತಾಳೆಂದು ಮತ್ತು ಇತರೇ ಆರೋಪಿತರಾದ ಮನು, ಕೇಂಚಪ್ಪ, ಚಂದ್ರಶೇಕರ್ ರವರು ಸಹ ಇದೇ ತರ ಮೇಸೇಜ್ ಮತ್ತು ಪೋನ್ ಮಾಡಿ ಬೈಯುವುದು ಮಾಡಿದ್ದು, ಅಲ್ಲದೇ ಮನು ಎನ್ನುವವನು ಆಶ್ಲೀಲ ಚಿತ್ರಗಳನ್ನು ತನ್ನ ಮೊಬೈಲ್ ಗೆ ಕಳುಹಿಸಿ, ಮಾನಸಿಕ ಮತ್ತು ದೈಹಿಕವಾಗಿ ಕುರುಕುಳ ನೀಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ. | ||||||||||||||||
Gandhinagar PS | |||||||||||||||||
5 | Cr.No:0190/2015 (INFORMATION TECHNOLOGY ACT 2008 U/s 66(D),66(C) ; IPC 1860 U/s 420 ) |
08/09/2015 | Under Investigation | ||||||||||||||
CYBER CRIME - Information Technology Act 2000, 2009 | |||||||||||||||||
Brief Facts : | ದಿನಾಂಕಃ 06-5-15 ರಂದು ಬೆಳಿಗ್ಗೆ 8-45 ಗಂಟೆ ಸುಮಾರಿಗೆ ಪಿರ್ಯಾದಿದಾರರು ತಮ್ಮ ಕೆಲಸಕ್ಕೆಂದು ಬಳ್ಳಾರಿ ನಗರದ ಕಪ್ಪಗಲ್ ರಸ್ತೆಯ ಮಾರ್ಗವಾಗಿ ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ಮುಂದುಗಡೆಯಿಂದ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಯು ತನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ ನಾವು ಎಸ್.ಬಿ.ಐ. ಡೆಲ್ಲಿ ಎ.ಟಿ.ಎಂ. ಬ್ರಾಂಚ್ ನಿಂದ ಮಾತಾಡುತ್ತಿದ್ದು, ನಿಮ್ಮ ಎ.ಟಿ.ಎಂ. ಕಾರ್ಡ್ ಈದಿನ ಎಕ್ಸೆಪೆರಿ ಆಗುತ್ತದೆ. ನಿಮ್ಮ ಕಾರ್ಡ್ ನಂಬರ್ ನಮಗೆ ಕೊಟ್ಟರೆ ಇವತ್ತೇ ರಿನಿವಲ್ ಮಾಡಿ ಕೊಡುತ್ತೇವೆ ಅಂತಾ ತಿಳಿಸಿದ್ದಕ್ಕೆ ಪಿರ್ಯಾದಿದಾರರು ಅವರ ಮಾತಿಗೆ ಮರುಳಾಗಿ ಎ.ಟಿ.ಎಂ. ಕಾರ್ಡ್ ನಂ: 6220180081700157647 ನೇದ್ದನ್ನು ತಿಳಿಸಿದ್ದು, ನಂತರ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಮೊಬೈಲ್ ಗೆ ಬರುವ ಮಸೇಜ್ ನಲ್ಲಿರುವ ಪಿನ್ ನಂಬರ್ ಮತ್ತು ಟ್ರಾನ್ ಜಕ್ಷನ್ ನಂಬರ್ ಹೇಳುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಬೆಳಿಗ್ಗೆ 8-55 ಗಂಟೆ ಸುಮಾರಿಗೆ ತಿಳಿಸಿ ನಂತರ ತಮ್ಮ ಕಛೇರಿಗೆ ಹೋಗಿ ಪಿರ್ಯಾದಿದಾರರು ತಮಗೆ ಬಂದ ಮಸೇಜ್ ಗಳನ್ನು ಪರಿಶೀಲಿಸಿ ನೋಡಲು ಅವುಗಳಲ್ಲಿ ಕ್ರಮವಾಗಿ ರೂ. 9,999/-, 5000/-, 4999/-, 4990/-, 20,000/- ಗಳಷ್ಟು ಹಣವನ್ನು ತನ್ನ ಎಸ್.ಬಿ.ಐ. ಮೇನ್ ಬ್ರಾಂಚ್ ನಿಂದ ಎಸ್.ಬಿ.ಐ.ಅಕೌಂಟ್ ನಂ: 20017494071 ನೇದ್ದರಿಂದ ಕಡಿತಗೊಂಡಿದ್ದು ಇರುತ್ತದೆ. ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಪೋನ್ ಮಾಡಿ ತನ್ನ ಎ.ಟಿ.ಎಂ. ನಂಬರ್ ನ್ನು ಮೋಸದಿಂದ ಹಣ ಪಡೆದು ತನ್ನ ಖಾತೆಯಿಂದ ತನಗೆ ತಿಳಿಯದಂತೆ ರೂ. 44,988/- ಗಳನ್ನು ಡ್ರಾ ಮಾಡಿಕೊಂಡಿರುತ್ತಾರೆ.ಕಾರಣ ಸದರಿಯವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ | ||||||||||||||||
Kottur PS | |||||||||||||||||
6 | Cr.No:0116/2015 (IPC 1860 U/s 506,504,324 ) |
08/09/2015 | Under Investigation | ||||||||||||||
CASES OF HURT - Simple Hurt | |||||||||||||||||
Brief Facts : | ಈ ದಿನ ದಿನಾಂಕ 08-09-2015 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಗಣೀಕೃತ ದೂರು ಸಾರಾಂಶ: ನಿನ್ನೆ ದಿನ ದಿನಾಂಕ 07-09-2015 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿ ಕೂಲಿ ಹಣ ಕೇಳಲು ದೊಡ್ಡ ಹುಲುಗಪ್ಪನ ಮನೆಯ ಹತ್ತಿರ ಹೋದಾಗ ಅಲ್ಲೇ ಇದ್ದ ಪಿರ್ಯಾದಿ ತಮ್ಮ ರಾಮಪ್ಪನು ಜಮೀನಿನ ವಿಚಾರದಲ್ಲಿ ಜಗಳ ತೆಗೆದು ಲೇ ಸೂಳೆ ಮಗನೆ ನನಗೆ ಭೂಮಿ ಪಾಲು ಮಾಡುವಾಗ ಕಡಿಮೆ ಜಮೀನು ಕೊಟ್ಟಿದ್ದೀಯ ಅಂತ ಜಗಳ ತೆಗೆದು ಅಲ್ಲೇ ಇದ್ದ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿ ಬಲಭುಜಕ್ಕೆ ಹಾಗೂ ಹಣೆಗೆ ಹೊಡೆದು ಒಳಪೆಟ್ಟು ಮತ್ತು ರಕ್ತಗಾಯ ಮಾಡಿ ಇಲ್ಲಿಗೆ ಬಿಡುವುದಿಲ್ಲ ಪ್ರಾಣ ತೆಗೆಯುವುದಾಗಿ ಪ್ರಾಣ ಭಯ ಹಾಕಿರುತ್ತಾನೆ. ರಾಮಪ್ಪನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ಕೊಟ್ಟ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | ||||||||||||||||
Sandur PS | |||||||||||||||||
7 | Cr.No:0141/2015 (IPC 1860 U/s 379,511 ) |
08/09/2015 | Under Investigation | ||||||||||||||
Attempting to commit offences - Attempting to commit offences | |||||||||||||||||
Brief Facts : | ದಿನಾಂಕ 8.9.2015 ರಂದು .ಕುಮಾರ್ ಸ್ವಾಮಿ ತಂದೆ ಲೇಟ್ ಶರಣಪ್ಪ ವಃ 62 ವರ್ಷ ನಿವೃತ್ತ P.S.I. ಸೂಪರ್‌ವೈಜರ್ ನಿಶಾ ಪ್ರವೇಟ್ ಲಿಮಿಟೆಡ್ ವಾಸಃ-6 ನೇ ಕ್ರಾಸ್ M.J.ನಗರ ಹೊಸಪೇಟೆ.ರವರು ದೂರು ಕೊಟ್ಟಿದ್ದು ಸಾರಾಂಶವು ನಾನು M. ಕುಮಾರ್ ಸ್ವಾಮಿ ಸೂಪರ್‌ವೈಜರ್ ಆಗಿ ನಿಶಾ ಸೆಕುರಿಟಿ ಪ್ರವೇಟ್ ಲಿಮಿಟೆಡ್ ಬೆಂಗಳೂರುರವರಲ್ಲಿ ಈಗ್ಗೆ 6 ತಿಂಗಳಿನಿಂದ ಕೆಲಸ ಮಾಡಿಕೊಂಡಿರುತ್ತೇನೆ. ನಾನು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುತ್ತೇನೆ. ಸು ಮಾರು 319 ಟವರ್ ನನ್ನ ಸುಪರ್ದಿಗೆ ಬರುತ್ತವೆ.ಈ ದಿನ ದಿನಾಂಕ 08.09.2015 ರಂದು ಬೆಳಿಗ್ಗೆ 10-00 ಗಂಟೆಗೆ ಸಿದ್ದಾಪುರ ಗ್ರಾಮದ ಟವರ್ ಐ.ಡಿ ನಂಬರ್ 1258633 ರಲ್ಲಿ ಸೆಕುರಿಟಿ ಗಾರ್ಡ ಆಗಿ ಕೆಲಸ ಮಾಡುವ ಹುಲುಗಪ್ಪರವರು ನನಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದೇನೆಂದರೆ ಈ ದಿನ ದಿನಾಂಕ 9.೦9.2015 ರಂದು ಬೆಳಿಗ್ಗೆ 7-00 ಗಂಟೆ ಗೆ ಸೆಕುರಿಟಿ ಕರ್ತವ್ಯಕ್ಕೆ ಹೋಗಿ ಸ್ವಲ್ಪ ಹೊತ್ತು ಇದ್ದು ನಂತರ ಬೆಳಿಗ್ಗೆ 9-30 ಗಂಟೆಗೆ ಸಿದ್ದಾಪುರ ಊರಲ್ಲಿ ಬಂದು ಟೀ ಕುಡಿದು ವಾಪಾಸ್ಸು 10-00 ಗಂಟೆಗೆ ಏರ್‌ಟೇಲ್ ಟವರ್ ಕಡೆಗೆ ಹೋದಾಗ ಅಲ್ಲಿ ಇಬ್ಬರು ಅಪರಿಚಿತ ವ್ಯೆಕ್ತಿಗಳು ಟವರ್‌ನ ಫೆನ್ಸಿಂಗ್ ಒಳಗಡೆ ಇರುವ ಬ್ಯಾಟರಿ ಬ್ಯಾಂಕ್‌ನ ಡೋರ್‌ಗೆ ಅಳವಡಿಸಲಾದ ಕ್ಲಾಂಪ್‌ಗಳನ್ನು ಪಾನರ್‌ಗಳಿಂದ ಬಿಚ್ಚುತ್ತಿದ್ದಾಗ ನಾನು ಮತ್ತು ನನ್ನ ಜೊತೆಯಲ್ಲಿದ್ದ ನನ್ನ ಅಳಿಯ ನಾಗರ್ಜುನ ಸೇರಿ ಅವರನ್ನು ನೀವು ಯಾರೆಂದು ಪ್ರಶ್ನಿಸಲು ತಾವಿಬ್ಬರೂ ಏರ್‌ಟೇಲ್ ಕಂಪನಿಯ ಟೆಕ್ನಿಶೀಯನ್‌ಗಳೆಂದು ತಿಳಿಸಿ ಚೆಕ್ ಮಾಡಲು ಬಂದಿರುವುದಾಗಿ ಹೇಳಿದ್ದು .ಅವರ ನಡುವ ಳಿಕೆ ಮೇಲೆ ಅನುಮಾನ ಬಂದು ಅವರಿಗೆ ನಮ್ಮ ಕಂಪನಿಯ ಸಂ ಭಂಧಪಟ್ಟ ಟೆಕ್ನಿಶಿಯನ್ ತಿಪ್ಪೇಶ್‌ರವರಿಗೆ ದೂರವಾಣಿ ಮಾತಾನಾಡಲು ತಿಳಿಸಿದಾಗ ಅವರು ಮಾತಾನಾಡದೇ ಭಯಪಟ್ಟುಕೊಂಡು ಬ್ಯಾಟರಿಗಳನ್ನು ಕಳುವು ಮಾಡ ಲು ಬಂದಿದ್ದೇವೆ. ದಯಾಮಾಡಿ ಬಿಟ್ಟು ಬಿಡಿ ಎಂದು ಕೇಳಿಕೊಂಡರು. ಆಗ ಅವರ ಹೆಸರು ಕೇಳಲಾಗಿ [1] ಪತ್ತಾರ ಮಂಜುನಾಥ ತಂದೆ ದೊಡ್ಡಬಸಪ್ಪ ವಯಸ್ಸು 21 ವ ರ್ಷ ಟೆಕ್ನಿಶಿಯನ್ ಕೆಲಸ ವಾಸಃ-ನಂಬರ್ 10 ಮುದ್ಲಾಪುರ ಕಂ ಪ್ಲಿ [2] ಕುರುಗೋಡ ಬಸವರಾಜ ತಂದೆ ನಾರಾಯಣಪ್ಪ ವಯಸ್ಸು 23 ವರ್ಷ ಎಲೆಕ್ಟ್ರಿಶಿಯನ್ ಕೆಲಸ ಗೊಲ್ಲರಜಾತಿ ವಾಸಃ 10 ಮುದ್ಲಾಪುರ ಕಂಪ್ಲಿ ಎಂದು ತಿಳಿಸಿರುತ್ತಾರೆ. ಅವರುಗಳು ಕೆಂಪು ಬಣ್ಣದ ಬಜಾಜ್ ಪಲ್ಸ್‌ರ್ ಮೋಟಾರ್ ಸೈಕಲ್ ನಂಬರ್ K.A.34-U 0989 ರಲ್ಲಿ ಬಂದಿದ್ದಾರೆ ನಾವು ಅವರಿಬ್ಬರನ್ನು ಹಿಡಿದುಕೊಂಡು ಕೂಡಿಸಿದ್ದೇವೆ. ನೀವು ಬನ್ನಿರಿ ಎಂದು ನನಗೆ ತಿಳಿಸಿದ್ದರಿಂದ ನಾನು ತಕ್ಕಣ ಸಿದ್ದಾಪುರ ಗ್ರಾಮದ ಬಳಿ ಇರುವ ಟವರ್ ಬಳಿ ಬಂದು ನೋಡಲಾಗಿ ಬ್ಯಾಟರಿ ಬ್ಯಾಂಕ್‌ನ ಡೋರ್‌ನ ಕ್ಲಾಂಪ್‌ಗಳನ್ನು ಪಾನರ್‌ಗಳಿಂದ ಬಿಚ್ಚಿರುವುದು ಕಂಡು ಬಂದಿದ್ದು ಕಳು ವು ಮಾಡಲು ಬಂದಿದ್ದವರ ಹೆಸರು ವಿಳಾಸ ಕೇಳಲಾಗಿ [1] ಮಂಜುನಾಥ [2] ಕುರುಗೋಡ್ ಬಸವರಾಜ್ ಎಂದು ತಿಳಿಸಿದರು. ಅವರನ್ನು ಚೆಕ್ ಮಾಡಲು ಅವರ ಬಳಿ 2 ಪಾನರ್‌ಗಳು ಇದ್ದವು. ವಿಚಾರಿಸಲಾಗಿ ತಮಗೆ ದುರಬ್ಯಾಸಗಳಿದ್ದು ಹಣದ ಅವಶ್ಯಕತೆ ಇರುವ ಕಾರಣದಿಂದ ಬ್ಯಾಟರಿಗಳನ್ನು ಕಳುವ ಮಾಡಲು ಬಂದಿರುವುದಾಗಿ ತಿಳಿಸಿದರು. ಅವರು ಕಳುವು ಮಾಡಲು ತಂದಿದ್ದ ಮೋಟಾರ್ ಸೈಕಲ್ ಸಮೇತ ಕಳುವು ಮಾಡಲು ಬಂದಿದ್ದವರನ್ನು ಈ ದಿನ ಸಂಡೂರು ಪೊಲೀಸ್ ಠಾಣೆಗೆ ಬೆಳಿಗ್ಗೆ 11-45 ಗಂಟೆಗೆ ಬಂದು ನಿಮ್ಮ ಸ್ವಾಧೀನಕ್ಕೆ ಕೊಡುತ್ತಿದ್ದು ಸದ್ರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಲಾಗಿದೆ.ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. | ||||||||||||||||
Thoranagal PS | |||||||||||||||||
8 | Cr.No:0141/2015 (IPC 1860 U/s 379 ) |
08/09/2015 | Under Investigation | ||||||||||||||
THEFT - Of Automobiles - Of Two Wheelers | |||||||||||||||||
Brief Facts : | ನಿವೇದನೆ:- ಈ ದಿನ ದಿನಾಂಕ; 8/9/2015 ರಂದು 3;00 ಪಿ.ಎಂ.ಗೆ ಪಿರ್ಯಾದಿ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂದರೆಈಶ್ವರಚಂದ್ರ ಯಾದವ್ ತಮ್ಮಲ್ಲಿ ಮನವಿ ಮಾಡಿಕೊಳ್ಳವುದೆನೆಂದರೆ ನಾನು ಜಿಂದಾಲ್ ನಲ್ಲಿ ಪೀಟರ್ ಕೆಲಸ ಮಾಡಿಕೊಂಡು ಬಂದಿರುತ್ತೇನೆ.ನಾನು ಸುಮಾರು 2 ವರ್ಷಗಳ ಹಿಂದೆ ನಮ್ಮ ಅಣ್ಣನಾದ ಬೇಚನ್ ಪ್ರಸಾದ್ ಯಾದವ್ ರವರ ಬಜಾಜ್ ಡಿಸಕವರ್ ನಂ MH/01/BC/6470 ನೇದ್ದನ್ನು ನನಗೆ ಅನುಕೂಲದ ಸಲುವಾಗಿ ಬಾಂಬೇಯಿಂದ ರೈಲ್ ನಲ್ಲಿ ಪರ್ಸಲ್ ಮಾಡಿಕೊಂಡು ತರಸಿಕೊಂಡಿರುತ್ತೇನೆ. ನಾನು ದಿನಾಂಕ: 22/8/2015 ರಂದು ರಾತ್ರಿ 9;20 ಪಿ.ಎಂ.ಸಮಯದಲ್ಲಿ ನಾನು ನಮ್ಮ ಸ್ನೇಹಿತನಾದ ಅಕಲೇಂದ್ರ ಯಾದವ್ ರವರನ್ನು ನನ್ನ ಮೋಟರ್ ಸೈಕಲ್ ನಂ MH/01/BC/6470 ನೇದ್ದರಲ್ಲಿ ಕುಳ್ಳರಿಸಿಕೊಂಡು ತೋರಣಗಲ್ಲು ಆರ್. ಎಸ್.ನ ರೈಲ್ವೆ ಸ್ಟೇಷನ್ ಗೆ ಬಿಡಲು ಹೋಗಿದ್ದು ಮೋಟರ್ ಸೈಕಲ್ ನ್ನು ಕಾಯಿಪಲ್ಲೆ ಮಾರ್ಕೆಟ್ ಹತ್ತಿರ ಬಿಟ್ಟು ಹೋಗಿದ್ದು ನಂತರ ದಿ:22/8/2015 ರಂದು 10;00 ಪಿ.ಎಂ.ಗೆ ಬಂದು ನೋಡಲು ನನ್ನ ಮೋಟರ್ ಸೈಕಲ್ ನಂ MH/01/BC/6470 (CH.NO.MD2DSPAZZUWK40399 ENGI NO.JBMBUK 77531) CLOUR; BLACK AND RED ಅಂದಾಜು ಬೆಲೆ 30,000 ರೂ. ಬಾಳುವುದಾನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಬೇರೆ ಕಡೆಗಳಲ್ಲಿ ವಿಚಾರಮಾಡಿ ಬಂದು ಈ ದಿನ ಬಂದು ಕಳುವಾದ ಮೋಟರ್ ಸೈಕಲ್ ಪತ್ತೆ ಮಾಡಿ ಕಳವು ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ಎಂದು ನೀಡಿದ ದೂರಿನ ಮೇರೆಗೆ ಈ ಗುನ್ನೆದಾಖಲು ಮಾಡಿ ತನಿಖೆ ಕೈಗೊಂಡಿದೆ.(ಪ್ರ.ವ.ವಗೆ ಪಿರ್ಯಾದಿ ದೂರನ್ನು ಲಗತ್ತಿಸಿದೆ) |
||||||||||||||||
ಮಂಗಳವಾರ, ಸೆಪ್ಟೆಂಬರ್ 8, 2015
PRESS NOTE OF 08/0/92015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ