ಗುರುವಾರ, ಸೆಪ್ಟೆಂಬರ್ 10, 2015

PRESS NOTE OF 10092015

Crime Key Report From   To   
Sl. No FIR No FIR Date Crime Group - Crime Head Stage of case
Chittavadagi PS
1 Cr.No:0043/2015
(IPC 1860 U/s 00MP )
10/09/2015 Under Investigation
MISSING PERSON - Girl
Brief Facts :  ಫಿರ್ಯಾಧಿದಾರರ ಮಳಗಾದ ಕುಮಾರಿ ಅಮೃತವರ್ಷಿಣಿ, 19 ವರ್ಷ, ಈಕೆಯು ಶಂಕರ ಆನಂದ ಸಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಬಿ.ಕಂ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ: 04/09/2015 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಇಲ್ಲಿಯವೆರೆಗೆ ವಾಪಾಸ್ ಮನೆಗೆ ಬಂದಿರುವುದಿಲ್ಲ, ಆಕೆಯ ಇರುವಿಕೆಯ ಬಗ್ಗೆ ಅಲ್ಲಲ್ಲಿ, ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿ, ಹುಡುಕಾಡಲು ಪತ್ತೆಯಾಗಿರುವುದಿಲ್ಲ. ತನ್ನ ಮಗಳು ಚಿತ್ತವಾಡ್ಗಿ ದೇವಿನಗರದ ನಿವಾಸಿಯಾದ ಪ್ರವೀಣ ರವರ ಜೊತೆಯಲ್ಲಿ ಹೋಗಿರಬಹುದೆಂದು ಅನುಮಾನ ಇರುತ್ತದೆ. ಕಾರಣ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಹೊಸಪೇಟೆ ಚಿತ್ತವಾಡ್ಗಿ ಠಾಣೆ ಗುನ್ನೆ ನಂ-37/2015 ಕಲಂ: ಮನುಷ್ಯ ಕಾಣೆ ಎಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Gandhinagar PS
2 Cr.No:0193/2015
(CODE OF CRIMINAL PROCEDURE, 1973 U/s 110(E)(G) )
10/09/2015 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕ: 10.09.2015 ರಂದು ಮಧ್ಯಾಹ್ನ 12.00 ಗಂಟೆಗೆ ಫಿರ್ಯಾಧಿದಾರರು ಠಾಣಾ ಸರಹದ್ದಿನಲ್ಲಿ  ಗಸ್ತು ಮಾಡುತ್ತಿರುವಾಗ್ಗೆ ರೌಡಿ ಶೀಟರ್- ಕೃಷ್ಣ @ ನಾಯಕರ ಕೃಷ್ಣ @ ಪಿಂಕಿ  ತಂದೆ ಸೂರಪ್ಪ ವಯಸ್ಸು 26 ವರ್ಷ, ನಾಯಕರ ಜನಾಂಗ, ಪೇಂಟಿಂಗ್ ಕೆಲಸ, ಸಾ: ಭಗತ್ ಸಿಂಗ್ ನಗರ, ತಾಳೂರು ರಸ್ತೆ, ಬಳ್ಳಾರಿ ಈತನು ಈ ದಿನ ದಿ:10.09.2015 ರಂದು ತಾನು ವಾಸಿಸುವ ಭಗತ್ ಸಿಂಗ್ ನಗರ,ಕನ್ನಡ ನಗರ,ತಾಳೂರು ರಸ್ತೆ,ಕಪ್ಪಗಲ್ ರೋಡ್,ಗಾಂಧಿನಗರ ಮಾರ್ಕೆಟ್ ಏರಿಯಾಗಳಲ್ಲಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಬೆದರಿಸಿ,ಸಾರ್ವಜನಿಕರಿಂದ ಆಪ್ತ ವಸೂಲಿ ಮಾಡುತ್ತಿರುತ್ತಾನೆಂದು ಇದರಿಂದ ಸಾರ್ವಜನಿಕರ ಶಾಂತತೆಗೆ ಭಂಗವನುಂಟು ಮಾಡುತ್ತಿರುತ್ತಾನೆಂದು ತಿಳಿದು ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಮಧ್ಯಾಹ್ನ 02.15 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ  ಈ ಪ್ರಥಮ ವರ್ತಮಾನ ವರದಿ.
Gudekote PS
3 Cr.No:0104/2015
(IPC 1860 U/s 498A,302,34 )
10/09/2015 Under Investigation
MURDER - Due To Sexual Jealousy
Brief Facts :  ದಿನಾಂಕ: 09/09/2015 ಕ್ಕೂ ಈಗ್ಗೆ ಸುಮಾರು 6 ತಿಂಗಳ ಹಿಂದಿನಿಂದ ತಮ್ಮ ಮಾವನಾದ ಬಣಕಾರ ಕೊಟ್ರೇಶನು ತಮ್ಮ ಅಕ್ಕ ಸುನೀತಾಳು ಅವರ ಹೊಲದ ಪಕ್ಕದ ಹೊಲದವನಾದ ಮಂಜುನಾಥ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತಾಳೆಂದು ಸಂಶಯ ಪಟ್ಟು ಆತನ ಅಕ್ಕ ತಂಗಿಯರ ಮಾತು ಕೇಳಿ ದಿನಾಲು ಕಿರುಕುಳ ನೀಡುತ್ತಿದ್ದು ಈ ಸಂಬಂದ ತಮ್ಮ ತಂದೆ ಹಾಗೂ ಚಿಕ್ಕಪ್ಪಂದಿರು ಸೋವೇನಹಳ್ಳಿ ಗ್ರಾಮಕ್ಕೆ ಹೋಗಿ ಆ ಊರಿನ ಹಿರಿಯರ ಸಮ್ಮುಖದಲ್ಲಿ ಪಂಚಾಯ್ತಿ ಮಾಡಿ ಬುದ್ದಿವಾದಿ ಹೇಳಿದ್ದು ದಿ: 09/09/2015 ರಂದು ಸಂಜೆ 5-00 ಗಂಟೆ ಸಮಯದಲ್ಲಿ ತಾನು ಕೆಲಸ ಮೇಲೆ ಸಂಡೂರಿಗೆ ಹೋಗಿರುವಾಗ ತಮ್ಮ ಅಕ್ಕ ಸುನೀತಾಳು ಸೋವೇನಹಳ್ಳಿ ಗ್ರಾಮದ ಹತ್ತಿರ ಅವರ ಹೊಲದಲ್ಲಿ ಕೊಲೆಯಾಗಿ ಸತ್ತುಬಿದ್ದಿದ್ದಾಳೆಂದು ಉಮಾಶಂಕರಗೌಡ ಎಂಬುವರು ತನಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ತಾನು ಕೂಡಲೇ ಬಸ್ಸಿನಲ್ಲಿ ಕೂಡ್ಲಿಗಿಗೆ ಬಂದು ತಮ್ಮೂರಿನಿಂದ ಆಟೋ ಮಾಡಿಕೊಂಡು ಬಂದ ತಮ್ಮ ಸಂಬಂಧಿಕರೊಂದಿಗೆ ಸೇರಿ ಸೋವೇನಹಳ್ಳಿ ಗ್ರಾಮದ ಹತ್ತಿರ ಸಾರಿ ದುರುಗಮ್ಮ ದೇವಿ ಗುಡಿಯ ಬಳಿ ಇರುವ ತಮ್ಮ ಮಾವ ಬಣಕಾರ ಕೊಟ್ರೇಶರವರ ಹೊಲಕ್ಕೆ ಬಂದು ನೋಡಲು ಮೆಕ್ಕೆ ಜೋಳದ ಬೆಳೆಯ ನಡುವೆ ತಮ್ಮ ಅಕ್ಕ ಸುನೀತಾಳು ಸುತ್ತು ಬಿದ್ದಿದ್ದಳು. ಹತ್ತಿರ ಹೋಗಿ ನೋಡಲು ಅಕ್ಕ ಸುನೀತಾಳ ಕುತ್ತಿಗೆಯನ್ನು ಟವೆಲ್ ನಿಂದ ಬಿಗಿದ್ದಿದ್ದು,ಬಾಯಿಂದ ನಾಲಿಗೆ ಹೊರಬಂದು ಹಲ್ಲುಗಳಿಂದ ಕಚ್ಚಕೊಂಡಿದ್ದಳು. ಎರಡೂ ಕಾಲುಗಳು ಒದ್ದಾಡಿ ಮಣ್ಣೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದಿತು. ಆಕೆಯು ಉಟ್ಟುಕೊಂಡಿದ್ದ ಸೀರೆ ತೊಡೆಯವರೆಗೆ ಸರಿದಿದ್ದಿತು. ಮೊಣಕಾಲಿಗೆ ತೆರಚಿದ ಗಾಯಗಳಾಗಿದ್ದವು. ಆಕೆಯು ಒದ್ದಾಡಿದ ವೇಳೆಯಲ್ಲಿ ಸುತ್ತಮುತ್ತಲಿನ ಮೆಕ್ಕೆ ಜೋಳದ ದಂಟುಗಳು ಮುರಿದು ಹೋಗಿದ್ದವು. ತಮ್ಮ ಅಕ್ಕ ಸುನೀತಾಳನ್ನು ಉದ್ದೇಶಪೂರ್ವಕವಾಗಿ ಕುತ್ತಿಗೆಗೆ ಟವೆಲ್ ನಿಂದ ಬಿಗಿದು ಉಸಿರುಗಟ್ಟಿಸಿ  ಸಾಯಿಸಿರುವುದು ಕಂಡು ಬಂದಿತು. ನಮ್ಮ ಅಕ್ಕಳನ್ನು ಆಕೆಯು ಅಕ್ರಮ ಸಂಬಂಧ ಹೊಂದಿರುವುದಾಗಿ ಅನುಮಾನಿಸಿ ಕಿರುಕುಳ ನೀಡುತ್ತಿದ್ದ  ಆಕೆಯ ಗಂಡ ಬಣಕಾರ ಕೊಟ್ರೇಶ ಹಾಗೂ ಆತನ ಭಾವ ಮೈದುನರಾದ ರುದ್ರೇಶ ಮತ್ತು ವಿರುಪಾಕ್ಷಿ ರವರುಗಳು ಸೇರಿ ಈ ದಿನ ಸಂಜೆ 4-30 ಗಂಟೆ ಸಮಯದಲ್ಲಿ ಕೊಲೆ ಮಾಡಿರುತ್ತಾರೆಂದು ಕಾರಣ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಪಿರ್ಯಾದಿ ಶ್ರೀ. ಹಾಲಸ್ವಾಮಿ ತಂದೆ ಸಿದ್ದಲಿಂಗಪ್ಪ, ವಾಸ: ಶಿವಪುರ ಗ್ರಾಮ. ಕೂಡ್ಲಿಗಿ [ತಾ]  ಇವರು ಈ ದಿನ ದಿ: 10/09/2015 ರಂದು ಬೆಳಗಿನ ಜಾವ 2-00 ಗಂಟೆಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿದೆ.
Hadagali PS
4 Cr.No:0084/2015
(IPC 1860 U/s 379 )
10/09/2015 Under Investigation
THEFT - Of Automobiles - Of Lorries/Trucks
Brief Facts :  ಪಿರ್ಯಾದಿ ಲಿಂಬ್ಯನಾಯ್ಕನು NEW HOLLAND  ಟ್ರಾಕ್ಟರನ್ನು ಖರೀದಿ ಮಾಡಿದ್ದು, ಅದರ ನೊಂದಣಿ ಸಂಖ್ಯೆ:ಕೆಎ-35/ಟಿ.ಎ-4151 ಇದ್ದು.ಇದಕ್ಕೆ ಟ್ರಾಲಿಯನ್ನು ಹಡಗಲಿ ''ಶ್ರೀ ವೀರಭದ್ರೇಶ್ವರ ಇಂಜಿನಿಯರ್ ಹಡಗಲಿರವಲ್ಲಿ ಖರೀದಿ ಮಾಡಿದ್ದು ಇದರ ನೊಂದಣಿ ಸಂಖ್ಯೆ: ಕೆಎ-35/ಟಿ.ಎ-4152 ಅಂತ ಇರುತ್ತದೆ.ಲಿಂಬ್ಯಾನಾಯ್ಕನು  ಸದರಿ NEW HOLLAND  ಟ್ರಾಕ್ಟರನ್ನು ನೊಂದಣಿ ಸಂಖ್ಯೆ:ಕೆಎ-35/ಟಿ.ಎ-4151 ಟ್ರಾಲಿ ನೊಂದಣಿ ಸಂಖ್ಯೆ ಕೆಎ-35/ಟಿ.ಎ-4152 ನೇದ್ದನ್ನು ಹಡಗಲಿಯ ಟಿ.ಪರಮೇಶ್ವರಪ್ಪ ರವರ ಹೊಲದಲ್ಲಿ ಹೊಲದಲ್ಲಿರುವ ಮನೆಯ ಹತ್ತಿರ ನಿಲ್ಲಿಸಿದ್ದು, ಪಿರ್ಯಾದಿ ದಿನಾಂಕ:06-07-2015 ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು, ದಿನಾಂಕ 07-09-2015 ರಂದು ರೂಪ್ಲನಾಯ್ಕ ಬೆಳಿಗ್ಗೆ 06-00 ಗಂಟೆಗೆ  ಎಂದಿನಂತೆ ಹೊಲಕ್ಕೆ ಹೋದಾಗ, ಸದರಿ ಟ್ರಾಕ್ಟರ್ ಟ್ರಾಲಿಯ 2 ಟೈರ್ ಸಮೇತ ಡಿಸ್ಕ ಸಮೇತ ಕಳ್ಳತನವಾದ ಬಗ್ಗೆ ಮಾಹಿತಿ ನೀಡಿದ್ದು,  ನಿನ್ನೆ ದಿನಾಂಕ 08-09-2015 ರಂದು ಪಿಯರ್ಾದಿ ಬೆಂಗಳೂರಿನಿಂದ ಸ್ಥಳಕ್ಕೆ ಬಂದು ನೋಡಿದಾಗ ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವದಾಗಿ ಕಂಡು, ಸುತ್ತಮುತ್ತಲ ಹೊಲಗಳಲ್ಲಿ ಮತ್ತು ಸುತ್ತಮುತ್ತಮುತ್ತಲ ಗ್ರಾಮಗಳಲ್ಲಿ ಹುಡುಕಾಡಿದ್ದು, ಸಿಕ್ಕಿರುವದಿಲ್ಲ ಕಳ್ಳತನವಾದ 2 ಎಂ.ಆರ್.ಎಫ್ ಕಂಪನಿಯ ಟೈರ್ ಮತ್ತು 2 ಡಿಸ್ಕ್ ಸೇರಿ ಅಂದಾಜು ಬೆಲೆ 35,000-00/ರೂ ಇದ್ದು, ಕಳ್ಳರನ್ನು ಪತ್ತೆ ಹಚ್ಚಿ ಕಳ್ಳತನವಾದ 2 ಟೈರ್ ಮತ್ತು ಡಿಸ್ಕ ನ್ನು ಪತ್ತೆ ಮಾಡಿಕೊಡುವಂತೆ  ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪತ್ತೆಕಾರ್ಯಕೈಗೊಂಡಿದ
Hospet Rural PS
5 Cr.No:0143/2015
(CODE OF CRIMINAL PROCEDURE, 1973 U/s 109,41 )
10/09/2015
CrPC - Security For Good Behaviour (Sec 109)
Brief Facts :  ದಿನಾಂಕ: 10/09/2015  ರಂದು ನಾನು ಮತ್ತು ಸಿಬ್ಬಂದಿಯವರು ಬೆಳಿಗ್ಗೆ 10-00 ಗಂಟೆಗೆ ಠಾಣಾ ಸರಹದ್ದಿನ ಎಂ.ಪಿ.ಪ್ರಕಾಶ ನಗರದ ಬಾಶ್ ಶೋ ರೂಂ ಹತ್ತಿರ  ಗಸ್ತಿನಲ್ಲಿರುವಾಗ್ಗೆ ಯಾರೋ ಒಬ್ಬ  ವ್ಯಕ್ತಿಯು ಸದರಿ ಶೋ ರೂಂ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ಗಳನ್ನು ಅಲುಗಾಡಿಸುತ್ತಿದ್ದು,  ನಮ್ಮನ್ನು ನೋಡಿ ತನ್ನ ಮುಖವನ್ನು ಮರೆಮಾಚಿಕೊಂಡು ಅನುಮಾನ ಬರುವಂತೆ ವತರ್ಿಸುತ್ತಿದ್ದು ನಾವು ಹತ್ತಿರ ಹೋಗುತ್ತಿದ್ದಂತೆ ಓಡಲು ಪ್ರಯತ್ನಿಸಿದನು. ಅಷ್ಟರಲ್ಲಿ ಅವನನ್ನು ಸಿಬ್ಬಂದಿಯವರು ಬೆನ್ನುಹತ್ತಿ ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿದ್ದು ಅವನ ಹೆಸರು ವಿಳಾಸ ವಿಚಾರಿಸಲು ಮೊದಲು ವಿಧವಿಧವಾಗಿ ನುಡಿದಿದ್ದು ಪುನಃ ವಿಚಾರಿಸಲು ಮೇಲಿನಂತೆ  ತಿಳಿಸಿದನು. ಸದರಿಯವನಿಗೆ ಸದರಿ ಸ್ಥಳದಲ್ಲಿ ಈ ಸಮಯದಲ್ಲಿ ಇರುವಿಕೆಯ ಬಗ್ಗೆ, ಗಾಡಿಗಳ ಹ್ಯಾಂಡಲ್ಗಳನ್ನು ಅಲುಗಾಡಿಸುತ್ತಿದ್ದರ ಬಗ್ಗೆ, ತನ್ನ ಮುಖವನ್ನು ಮರೆಮಾಚಿಕೊಂಡಿದ್ದರ ಬಗ್ಗೆ, ನಮ್ಮನ್ನು ನೋಡಿ ಓಡಿದ ಬಗ್ಗೆ ಮತ್ತು ಅನುಮಾನ ಬರುವಂತೆ ವತರ್ಿಸುತ್ತಿದ್ದರ ಬಗ್ಗೆ ವಿಚಾರಿಸಲು ಸಮಪರ್ಕವಾದ ಉತ್ತರ ನೀಡಲಿಲ್ಲ. ಸದರಿ ಆಪಾದಿತನನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆಪಾದಿತನನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಈತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ