Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Gandhinagar PS | ||||||||||||||||
1 | Cr.No:0187/2015 (IPC 1860 U/s 420 ) |
02/09/2015 | Under Investigation | |||||||||||||
CHEATING - CHEATING | ||||||||||||||||
Brief Facts : | ದಿನಾಂಕ:22.09.2014 ರಂದು ಆರೋಪಿತನು ಫಿರ್ಯಾಧಿದಾರರಿಂದ ಡೆಪಾಸಿಟ್ ಆಗಿ ಡಿಡಿ ಮುಖಾಂತರ ರೂ 1,00,000/-ಗಳನ್ನು ಪಡೆದುಕೊಂಡು ಬಳ್ಳಾರಿ ನಗರದ ಕಪ್ಪಗಲ್ ರೋಡ್ ನಲ್ಲಿರುವ ಬಂಗಾರು ಸಿದ್ದಪ್ಪ ಕಾಂಪ್ಲೇಕ್ಸ್ ನಲ್ಲಿರುವ ನಂದಿ ಪತ್ತಿನ ಸಹಕಾರಿ ಸಂಘದಲ್ಲಿ ಫಿರ್ಯಾಧಿದಾರರ ಮಗನಿಗೆ ಕೆಲಸ ಕೊಡುತ್ತೇನೆಂದು ಹೇಳಿ ಕೆಲಸಕ್ಕೆ ನೇಮಿಸಿಕೊಂಡು 3 ತಿಂಗಳು ಕೆಲಸ ಮಾಡಿಸಿಕೊಂಡು ಒಂದು ತಿಂಗಳು ಸಂಬಳ ಮಾತ್ರ ಕೊಟ್ಟಿದ್ದು, ಉಳಿದ 2 ತಿಂಗಳ ಸಂಬಳವನ್ನು ಕೊಡದೇ ಹಾಗೂ ಡೆಪಾಸಿಟ್ ಹಣ 1,00,000/-ಗಳನ್ನು ವಾಪಾಸ್ಸು ಕೊಡದೇ ಮೋಸ ಮಾಡಿರುತ್ತಾನೆಂದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ | |||||||||||||||
Hirehadagali PS | ||||||||||||||||
2 | Cr.No:0157/2015 (IPC 1860 U/s 143,147,149,323,504,506 ) |
02/09/2015 | Under Investigation | |||||||||||||
RIOTS - Others | ||||||||||||||||
Brief Facts : | ಫಿರ್ಯಾದಿದಾರರ ಮೊಮ್ಮಗ ಈರಾನಾಯ್ಕನು ಆರೋಪಿ ಲಕ್ಷ್ಮಿಬಾಯಿ ಮಕ್ಕಳಿಗೆ ತೊಂದರೆ ಕೊಡುತ್ತಾನೆಂದು ಆರೋಪಿ ಲಕ್ಷ್ಮಿಬಾಯಿ ಮತ್ತು ಗಂಗಾನಾಯ್ಕರವರು ಫಿರ್ಯಾದಿಯ ಮಗ ಸೇವ್ಯನಾಯ್ಕನ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದು, ಈ ಬಗ್ಗೆ ತಾಂಡದ ದೈವಸ್ಥರು ಮತ್ತು ಯಜಮಾನರು ಸೇರಿ ಬುದ್ದಿವಾದ ಹೇಳಿ ರಾಜಿ ಮಾಡಿದ್ದು, ಆಗ ಫಿರ್ಯಾದಿ ಆರೋಪಿ ಲಕ್ಷ್ಮಿಬಾಯಿಗೆ ಸುಮ್ಮ ಸುಮ್ಮನೆ ಆಪಾದನೆ ಮಾಡಬೇಡ ಅಂತ ಹೇಳಿದ್ದು, ಇದೇ ವಿಷಯಕ್ಕೆ ಸಂಭಂಧಿಸಿದಂತೆ ದಿನಾಂಕ 31-08-2015 ರಂದು ರಾತ್ರಿ 08.30 ಗಂಟೆ ಸುಮಾರಿಗೆ ಆರೋಫಿತರೆಲ್ಲಾ ಅಕ್ರಮ ಗುಂಪು ಕಟ್ಟಿಕೊಂಡು ಫಿರ್ಯಾದಿದಾರರ ಮನೆ ಹತ್ತಿರ ಹೋಗಿ, ನೀವು ಏನು ಕೇಸು ಕೊಟ್ಟರೂ ಸಹ ಲಕ್ಷ ಖಚರ್ು ಮಾಡಿ ಬೇಲ್ ತರುತ್ತೇವೆಂದು ಹೇಳಿ ನಿಮ್ಮ ಮೊಮ್ಮಗನಿಗೆ ಕುಮ್ಮಕ್ಕು ಕೊಡುತ್ತಿರಾ ಅಂತ ಅವಾಚ್ಯ ಶಬ್ದಗಳಿಂದ ಬೈದಾಡಿ, ಫಿರ್ಯಾದಿಗೆ ಆರೋಪಿ ಲಕ್ಷ್ಮೀಬಾಯಿ, ತಾವರಿಬಾಯಿ, ಶೀಲಾಬಾಯಿ ರವರು ಕೈಗಳಿಂದ ಮೈಮೇಲೆ ಹೊಡೆಯುವಾಗ ಬಿಡಿಸಲು ಬಂದ ಫಿರ್ಯಾಧಿಯ ಮಗಳು ಶಾಂತಿಬಾಯಿಗೆ ಶೀಲಾಬಾಯಿ ಮತ್ತು ಲಕ್ಷ್ಮೀಬಾಯಿ ಗಂಡ ಭೋಜ್ಯನಾಯ್ಕ ರವರು ಕೈಗಳಿಂದ ಹೊಡೆಯುವಾಗ ಬಿಡಿಸಲು ಬಂದ ಫಿರ್ಯಾಧಿಯ ಮಗ ಸೇವ್ಯಾನಾಯ್ಕ ರವರಿಗೆ ಗಂಗಾನಾಯ್ಕ, ಜ್ಯೋತಿನಾಯ್ಕ,, ಭೋಜ್ಯನಾಯ್ಕ, ವಾಲ್ಯನಾಯ್ಕ, ಗಿಡ್ಡನಾಯ್ಕ ರವರುಗಳು ಕೈ ಕಾಲುಗಳಿಂದ ಮೈ ಮೇಲೆ ಹೊಡೆದು, ಆರೋಪಿತರೆಲ್ಲಾ ಸೇರಿ ಫಿರ್ಯಾದಿ ಮತ್ತು ಆಕೆಯ ಮಕ್ಕಳಿಗೆ ಪ್ರಾಣ ಬೆದರಿಕೆ ಹಾಕಿದ್ದು ಈ ಬಗ್ಗೆ ತಾಂಡದ ಹಿರಿಯರು ಸದರಿಯವರಿಗೆ ಕರೆಯಿಸಿ ಪಂಚಾಯಿತಿ ಮಾಡುವುದಾಗಿ ಹೇಳಿದ್ದು ಆರೋಪಿತರು ಪಂಚಾಯಿತಿಗೆ ಬರದಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿದ್ದರ ಮೇರೆಗೆ ,ಪ್ರಕರಣ ದಾಖಲಿಸಿದೆ. | |||||||||||||||
Kamalapur PS | ||||||||||||||||
3 | Cr.No:0075/2015 (KARNATAKA POLICE ACT, 1963 U/s 78(3) ) |
02/09/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ-02/09/2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿಸಿ 1232 ಇವರುಗಳು ಮಾನ್ಯ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಹೊಸಪೇಟೆ ರವರಿಂದ ಹಾಜರುಪಡಿಸಿದ ಆದೇಶದ ಸಾರಾಂಶ: ದಿನಾಂಕ: 01/09/2015 ರಂದು ಸಂಜೆ 05-10 ಗಂಟೆಯ ಸಮಯದಲ್ಲಿ ಪಿ.ಎಸ್.ಐ (ಅ.ವಿ) ರವರು ಪ್ರಭಾರದಲ್ಲಿದ್ದಾಗ ಕಮಲಾಪುರ ಠಾಣಾ ಸರಹದ್ದಿನ ಕಿರೀಟ ಯಲ್ಲಮ್ಮ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಎಂಬ ನಸೀಬಿನ ಜೂಜಾಟ ನಡೆಯುತ್ತಿದೆ, ಎಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸಂಜೆ 06-40 ಗಂಟೆಗೆ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವಿ. ಅಬ್ದುಲ್ ನಬಿ ಈತನನ್ನು ಹಿಡಿದಿದ್ದು, ಆತನ ಆಂಗ ಶೋಧನೆ ಮಾಡಲಾಗಿ ಆತನ ಬಳಿ ನಗದು ಹಣ 1470/- ರೂ ಹಾಗೂ ಮಟ್ಕಾ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಪಂಚೆನಾಮೆ ಮೂಲಕ ಜಪ್ತು ಮಾಡಿಕೊಂಡು ಆರೋಪಿತನನ್ನು ಠಾಣೆಗೆ ಕರೆತಂದು ಆರೋಪಿತನ ವಿರುದ್ಧ ಪ್ರಕರಣವನ್ನು ದಾಖಲು ಮಾಡಲು ವರದಿ ನೀಡಿದ್ದು, ಇದು ಆಸಂಜ್ಞೆಯ ಅಪರಾಧವಾಗಿದ್ದು, ಈ ಬಗ್ಗೆ ಠಾಣಾ ಎನ್.ಸಿ ನಂಬರ್ 01/2015 ರಲ್ಲಿ ನಮೂದಿಸಿಕೊಂಡು ನ್ಯಾಯಾಲಯದ ಆದೇಶ ಪಡೆದು ಆರೋಪಿತನ ವಿರುದ್ಧ ಪ್ರ.ವ ವರದಿ | |||||||||||||||
Kottur PS | ||||||||||||||||
4 | Cr.No:0115/2015 (IPC 1860 U/s 00MP ) |
02/09/2015 | Under Investigation | |||||||||||||
MISSING PERSON - Man | ||||||||||||||||
Brief Facts : | ದಿನಾಂಕ 02-09-2015 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಗಣಕ ಯಂತ್ರದಿಂದ ತಯಾರಿಸಿದ ದೂರು ಸಾರಾಂಶ: ಪಿರ್ಯಾದಿಯ ತಂದೆ ಹೊಸದುರ್ಗದ ಸತ್ಯಪ್ಪ ತಂದೆ ಲೇಟ್ ಹುಲುಗಪ್ಪ, 58 ವರ್ಷ ಇವರು ದಿನಾಂಕ 01-09-2015 ರಂದು ಬೆಳಿಗ್ಗೆ 10-00 ಗಂಟೆಗೆ ಗುಳಿಗೆ ತರಲು ಮಲ್ಲನಾಯಕನಹಳ್ಳಿಯಿಂದ ಕೊಟ್ಟೂರಿಗೆ ಆಟೋದಲ್ಲಿ ಹೋದವರು ರಾತ್ರಿಯಾದರೂ ವಾಪಾಸ್ ಬಂದಿರುವುದಿಲ್ಲ. ಪಿರ್ಯಾದಿ ಮತ್ತು ಇತರರು ಎಲ್ಲಾ ಕಡೆ ಹುಡುಕಾಡಿದ್ದು ಕಂಡಿರುವುದಿಲ್ಲ. ದಿನಾಂಕ 31-08-2015 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪಿರ್ಯಾದಿಯ ಸಂಬಂಧಿಕರಾದ ರಾಜಪ್ಪ, ಕೂಡ್ಲಿಗಿ ರಾಜಪ್ಪ, ಕೊಲ್ಲೇಶಿ, ಬಿಟ್ಟಿಕಾಯಿ ಹನುಮಂತಪ್ಪ, ದೊಡ್ಡ ಹನುಮಂತಪ್ಪ, ರಾಜಪ್ಪ, ಹುಲುಗಪ್ಪ ಇವರುಗಳು ಪಿರ್ಯಾದಿ ಮನೆಯ ಹತ್ತಿರ ಬಂದು ಹೊಲದ ವಿಚಾರದಲ್ಲಿ ಬಾಯಿ ಮಾತಿನ ಗಲಾಟೆ ಮಾಡಿ ಹೋಗಿದ್ದು, ಈ ಕಾರಣದಿಂದಾಗಿ ನಮ್ಮ ತಂದೆ ಕಾಣೆಯಾಗಿದ್ದಾನೆ ಎಂಬ ಅನುಮಾನವಿದೆ ಪತ್ತೆ ಮಾಡಿ ಕೊಡಿ ಅಂತ ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | |||||||||||||||
Thoranagal PS | ||||||||||||||||
5 | Cr.No:0138/2015 (IPC 1860 U/s 287,304(A) ) |
02/09/2015 | Under Investigation | |||||||||||||
NEGLIGENT ACT - Machinery - Related | ||||||||||||||||
Brief Facts : | ನಿವೇದನೆ:- ಈ ದಿನ ದಿನಾಂಕ 2/9/2015 ರಂದು 11;00 ಎ.ಎಂ.ಗೆ ಪಿರ್ಯಾದಿ ಠಾಣೆಗೆ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂದರೆರಘುಲಾಲ್ ಭಗತ್ ಅದ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ ನಾನು ಸುಮಾರು 4 ವರ್ಷಗಳಿಂದ ಟಿಟಿಪಿಎಸ್ ನಲ್ಲಿ ರೀಗ್ಗರ್ ಕೆಲಸ ಮಾಡಿಕೊಂಡು ಬಂದಿದ್ದು ನಮ್ಮ ಕಂಪನಿಯು ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಬರುವುದರಿಂದ ನಾನು ಜಿಂದಾಲ್ ಕಾರ್ಖಾನೆಯಲ್ಲಿ ಆರ್.ಎಂ.ಹೆಚ್.ಎಸ-2(ಎ) 7.ಎಂ.ಟಿ. ಸ್ಟೋರ್ ನಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ದಿನಾಂಕ: 21/8/2015 ರಂದು ಪ್ರತಿ ದಿನದಂತೆ ನಮ್ಮ ಕಂಪನಿಯ ಕೆಲಸ ಮಾಡಲು ಜಿಂದಾಲ್ ಕಾರ್ಖಾನೆಯ ಆರ್.ಎಂ.ಹೆಚ್.ಎಸ-2(ಎ) 7.ಎಂ.ಟಿ. ಸ್ಟೋರ್ ನಲ್ಲಿಗೆ ಹೋಗಿದ್ದು ಅಲ್ಲಿಗೆ ನಮ್ಮ ಕಂಪನಿಯ ಅಮರೇಂದ್ರ, ರಾಜೇಶ್ ರಾಮ್, ಜಹೇರವುದ್ದಿನ್ ಮಹಂತೇಶ್ ಮತ್ತು ಆರ್.ಟಿ.ಎಸ್. ಕಂಫನಿಯ ಚಿನ್ನ. ಟಿ. ಪಾಯಜ್ಅಹಮದ್, ರಮೇಶ್, ನೀಲಕಂಠ ಮತ್ತು ಪಪ್ಪು ಕುಮಾರ್ ಸಿಂಗ್ ತಂದೆ ಬಲಿರಾಮ್ ಸಿಂಗ್ 36 ವರ್ಷಗಳು ರಾಜಪೂತ್ ಜನಾಂಗ ರೀಗ್ಗರ್ ವಾಸ: ತೋರಣಗಲ್ಲು ಆರ್. ಎಸ್. ಸಂಡೂರು ತಾಲೂಕು ರವರು ಬಂದಿರುತ್ತಾರೆ. ಆರ್.ಎಂ.ಹೆಚ್.ಎಸ-2(ಎ) 7.ಎಂ.ಟಿ. ಸ್ಟೋರ್ ನಲ್ಲಿ ದಿ:21/8/2015 ರಂದು 3;30 ಪಿ.ಎಂ. ಸಮಯದಲ್ಲಿ ಪಪ್ಪು ಕುಮಾರ್ ಸಿಂಗ್ ಕೆಲಸ ಮಾಡಿಕೊಂಡು ಬರುವ ಸಮಯುದಲ್ಲಿ ಸ್ಟೋರ್ ನಲ್ಲಿ ಸಾಮಾನುಗಳನ್ನು ತೆಗೆದು ಕೊಂಡು ಬೇರೆ ಕಡೆ ಇಟ್ಟು ಬರುತ್ತಿರುವಾಗ ಒಮ್ಮೇಗೇ ಹಿಮ್ಮೂಖವಾಗಿ ಕೆಳಗೆ ಬಿದಿದ್ದು ತೆಲೆಯೊಳಗೆ ಪೆಟ್ಟು ಆಯಿತು ಎಂದು ಕೊಗಿಕೊಂಡನು. ಅಲ್ಲಿಂದ ತಕ್ಷಣ ಅಂಬ್ಯೂಲೆನ್ಸ್ ನಲ್ಲಿ ತಿಪ್ಪೇಸ್ವಾಮಿ ರವರು ಚಿಕಿತ್ಸೆಗೆ ಕರೆದು ಕೊಂಡು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲು ಹೋಗಿರುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಾಣ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ನಂತರ ತೋರಣಗಲ್ಲು ಗೆ ದಿ:28/8/2015 ರಂದು ಬಂದಿದ್ದು, ನನಗೆ ತೋರಣಗಲ್ಲು ಪೋಲಿಸ್ ಠಾಣೆಗೆ ಹೋಗಿ ದೂರು ನೀಡುವುದಾಗಿ ತಿಳಿಸಿದನು. ನಂತರ ಒಮ್ಮಗೇ ದಿನಾಂಕ:30/8/2015 ರಂದು ತೆಲೆಗೆ ಆದ ಗಾಯಗಳು ಪುನ: ನೋವು ಹೆಚ್ಚಾಗಿದ್ದರಿಂದ ಬಳ್ಳಾರಿ ಧಾನಮ್ಮ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಿದ್ದು ಚಿಕಿತ್ಸೆಯಲ್ಲಿ ಗುಣಮುಖನಾಗದೇ ಈ ದಿನ ದಿನಾಂಕ;2/9/2015 ರಂದು ಬೆಳಗಿನ ಜಾವಾ 6;15 ಎ.ಎಂ.ಗೆ ಮೃತ ಪಟ್ಟಿರುತ್ತಾರೆ. ಈ ಘಟನೆಯು ಅಲ್ಲಿದ್ದ 1) ಸೌರವ್ ಶೀಪ್ಟ್ ಇನ್ ಚಾರ್ಜ್ ಆರ್.ಎಂ.ಹೆಚ್.ಎಸ್.-2 2) ವಿಶ್ವನಾಥ್ ಶೀಪ್ಟ್ ಇನ್ ಚಾರ್ಜ್ ಆರ್.ಎಂ.ಹೆಚ್.ಎಸ್.-2 3) ರಾಜಾಬಾಬು ಸೇಪ್ಟೀ ಆದಿಕಾರಿ ಜಿಂದಾಲ್ ಕಾರ್ಖಾನೆ, 4) ಪ್ರಶಾಂತ್ ಸೇಪ್ಟೀ ಆದಿಕಾರಿ ಆರ್.ಟಿ.ಎಸ್. ಕಂಪನಿ ರವರುಗಳು ಮಾನವನ ಪ್ರಾಣಕ್ಕೆ ಅಪಾಯವಾಗುವಂತಹ ಕೆಲಸವನ್ನು ಯಾವುದೇ ಮುಂಜಾಗ್ರತ ಕ್ರಮಗಳನ್ನು ಮತ್ತು ಸುರಕ್ಷತಾ ಸಲಕರಣೆಗಳನ್ನು ನೀಡದೇ ಕೆಲಸಮಾಡಿಲು ನೂರಿತ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡದೇ ಸ್ಥಳದಲ್ಲಿ ನಿಂತು ಮಾನವನ ಪ್ರಾಣಕ್ಕೆ ಅಪಾಯವಾಗದಂತೆ ಮುಂಜಾಗ್ರತ ಕ್ರಮ ವಹಿಸದೇ ನಿರ್ಲಕ್ಷತನ ತೋರಿದ್ದರಿಂದ ಘಟನೆ ಜರುಗಿರುತ್ತದೆ. ಕಾರಣ ಸದ್ರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ತಮ್ಮಲ್ಲಿ ಕೇಳಿ ಕೊಳ್ಳುತ್ತೇನೆ. ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.( ಪ್ರ.ವ.ವಗೆ ಪಿರ್ಯಾದಿಯ ದೂರನ್ನು ಲಗತ್ತಿಸಿದೆ) |
|||||||||||||||
ಬುಧವಾರ, ಸೆಪ್ಟೆಂಬರ್ 2, 2015
PRESS NOTE OF 02/09/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ