ಮಂಗಳವಾರ, ಸೆಪ್ಟೆಂಬರ್ 22, 2015

PRESS NOTE OF 22/09/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0401/2015
(IPC 1860 U/s 511,380,457 )
22/09/2015 Under Investigation
BURGLARY - NIGHT - At Residential Premises
Brief Facts :  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ : 21/09/2015 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ : 22/09/2015 ರ ಬೆಳಗಿನ ಜಾವ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ತನ್ನ ಅಣ್ಣ ಹುಲುಗಪ್ಪರವರ ಮನೆಯ ಬಾಗಿಲಿನ ಬೀಗವನ್ನು ಯಾವುದೋ ವಸ್ತುವಿನಿಂದ ಮೀಟಿ ಜಖಂಗೊಳಿಸಿ ಬಾಗಿಲನ್ನು ತೆಗೆದು ಒಳಗಡೆ ಪ್ರವೇಶಿಸಿ ಮನೆಯ ಒಳಗಡೆ ಟ್ರಂಕಿನಲ್ಲಿಟ್ಟಿದ್ದ ಒಂದು ಒಂದೂವರೆ ತೊಲೆ ಬಂಗಾರದ ಚೈನು,  ಒಂದು ಜೊತೆ ಬೆಂಡೋಲೆ ಹಾಗು 3 ಜೊತೆ ಬೆಳ್ಳಿಯ ಕಾಲು ಚೈನುಗಳು ಎಲ್ಲಾ ಒಟ್ಟು ಅಂದಾಜು ಬೆಲೆ 43000/- ಗಳಷ್ಟು ಬಾಳುವ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲದೆ ಇನ್ನೊಬ್ಬ ಅಣ್ಣ ಮಲ್ಲೇಶಪ್ಪರವರ ಮನೆಯ ಬಾಗಿಲನ್ನು ಸಹ ಮುರಿಯಲು ಪ್ರಯತ್ನಿಸಿದ್ದು, ಸದರಿ ಕಳ್ಳರನ್ನು ಪತ್ತೆ ಹಚ್ಚಿ ಸ್ವತ್ತುಗಳನ್ನು ಹುಡುಕಿಕೊಟ್ಟು ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಠಾಣಾ ಗುನ್ನೆ ನಂ : 401/2015 ಕಲಂ 457-380-511 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ.
Hirehadagali PS
2 Cr.No:0167/2015
(INDIAN MOTOR VEHICLES ACT, 1988 U/s 183 ; IPC 1860 U/s 279,304(A) )
22/09/2015 Under Investigation
MOTOR VEHICLE ACCIDENTS FATAL - State Highways
Brief Facts :  ಫಿರ್ಯಾದಿ ಹಾಗು ಶ್ರೀನಿವಾಸ ರವರು ತಮ್ಮ ಗ್ರಾಮದಲ್ಲಿ ಕೂಡಿಸಿದ ಗಣಪತಿ ವಿಸರ್ಜನೆ ಸಂಭಂಧ ಪಟಾಕಿ ತರಲು ಹಡಗಲಿಗೆ ಹೋದವರು ಪಟಾಕಿ ತೆಗೆದುಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಬರಲು ತಮ್ಮ ಮೋಟಾರ್ ಸೈಕಲ್ನಲ್ಲಿ ಬರುವಾಗ, ದಿನಾಂಕ 21-09-2015 ರಂದು ಸಂಜೆ 6.15 ಪಿ.ಎಂ. ಗಂಟೆ ಸುಮಾರಿಗೆ ಹಡಗಲಿ-ಹಿರೇಹಡಗಲಿ ಮುಖ್ಯರಸ್ತೆಯಲ್ಲಿ ವಡ್ಡಿನಹಳ್ಳಿ ತಾಂಡ ಕ್ರಾಸ್ ಹತ್ತಿರ ಹೋಗುವಾಗ, ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆ.ಎ-34 ಎಫ್-1022 ನೇದ್ದನ್ನು ಅದರ ಚಾಲಕನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿದಾರರ ಮೋಟಾರ್ ಸೈಕಲ್ ಮುಂದೆ ತನ್ನ ಮೋಟಾರ್ ಸೈಕಲ್ ನಂ. ಕೆ.ಎ-26 ಎಸ್-1979 ನೇದ್ದನ್ನು ಚಲಾಯಿಸಿಕೊಂಡು  ಹೋಗುತ್ತಿದ್ದ ಹಗರನೂರು ಗ್ರಾಮದ ಬಳಗಾನುರು ಅಂಜಿನಪ್ಪನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆಸಿದ್ದರಿಂದ ಮೋಟಾರ್ ಸೈಕಲ ಚಲಾಯಿಸುತ್ತಿದ್ದ ಅಂಜಿನಪ್ಪನ ತಲೆಗೆ, ಮುಖಕ್ಕೆ ಬಲವಾದ ಪೆಟ್ಟು ಬಿದ್ದು, ತಲೆ ಒಡೆದು ಮಿದುಳು ಹೊರಬಂದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಬಸ್ಸನ್ನು ಚಲಾಯಿಸಿ ಅಪಘಾತಪಡಿಸಿದ ಬಸ್ಸಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Kampli  PS
3 Cr.No:0122/2015
(CODE OF CRIMINAL PROCEDURE, 1973 U/s 107,151 )
22/09/2015 Under Investigation
CrPC - Preventive Arrest (Sec 151)
Brief Facts :  ಈ ದಿನ ದಿನಾಂಕ: 22/09/2015ರಂದು ಮದ್ಯಾಹ್ನ 12.30ಗಂಟೆಗೆ  ಕಂಪ್ಲಿ ಪಟ್ಟಣದ ಸಾರ್ವಜನಿಕರು ಠಾಣೆಗೆ ಮೇಲ್ಕಂಡ ಪ್ರತಿವಾದಿಗಳನ್ನು ಈ ದಿನ ಬೆಳಿಗ್ಗೆ 9.30ಗಂಟೆ ವೇಳೆಯಲ್ಲಿ  ಕಂಪ್ಲಿ ಕಲ್ಮಠದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರೆಂದು ಕರೆದುಕೊಂಡು ಬಂದು ಠಾಣೆಯಲ್ಲಿ ಹಾಜರು ಮಾಡಿದ್ದು ಮೇಲ್ಕಂಡ ಪ್ರತಿವಾದಿಗಳನ್ನು ಹಿಡಿಯುವಾಗ ದಬ್ಬಾಟದಲ್ಲಿ ಪ್ರತಿವಾದಿಗಳಿಗೆ ಪೆಟ್ಟಾಗಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡ ಪ್ರತಿವಾದಿಗಳು  ತಮ್ಮನ್ನು ಹಿಡಿದುಕೊಟ್ಟರೆಂದು ಸಾರ್ವಜನಿಕರೊಂದಿಗೆ ಜಗಳ ತೆಗೆದು ಸಾರ್ವಜನಿಕ ಶಾಂತಿಗೆ ಧಕ್ಕೆಯನ್ನುಂಟು ಮಾಡುವ ಸಂಭವ ಕಂಡು ಬಂದಿರುತ್ತದೆ. & ಸದ್ರಿ ಪ್ರತಿವಾದಿಗಳು ಹಂದಿಯನ್ನು ಹಿಡಿಯಲು ಬಂದಿದ್ದು ಹಂದಿಕಳ್ಳತನ & ಇತರೇ ಸಂಜ್ಞೇಯ ಅಪರಾಧ ಮಾಡುವ ಸಂಭವ ಇದೆಯೆಂದು ಬಾತ್ಮಿ ಇದ್ದು  ಸದ್ರಿಯವರನ್ನು ದಸ್ತಗಿರಿ ಮಾಡದೇ ಬೇರೆ ಮಾರ್ಗದಿಂದ ಸದ್ರಿಯವರಿಂದ ಮುಂದಾಗುವ ಸಂಜ್ಞೇಯ ಅಪರಾಧಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಕಂಡು ಬಂದಿದ್ದರಿಂದ ಈ ದಿನ ಮಧ್ಯಾಹ್ನ 3.15ಗಂಟೆಗೆ  ನಾನು ಮೇಲ್ಕಂಡ ಆರೋಪಿತರ  ವಿರುದ್ದ   ಗುನ್ನೆ ನಂ : 122/2015 ಕಲಂ 107, 151 ಸಿ ಆರ್ ಪಿಸಿ ರೀತ್ಯಾ ಪ್ರ ವ ವರದಿ ದಾಖಲಿಸಿ ತಾಲೂಕಾ ದಂಡಾಧಿಕಾರಿಗಳಲ್ಲಿ ಮುಂದಿನ ಕ್ರಮಕ್ಕೆ ನಿವೇದಿಸಿರುತ್ತೇನೆ.
Moka PS
4 Cr.No:0140/2015
(IPC 1860 U/s 279,337 )
22/09/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ಈ ದಿನ ದಿನಾಂಕ: 22-9-15 ರಂದು ಮದ್ಯಾಹ್ನ 1 ಗಂಟೆಗೆ  ಪಿರ್ಯಾದಿದಾರರಾದ ಶ್ರೀ.ಎಂ.ಶೇಖಣ್ಣ ತಂದೆ ಅಯ್ಯಳಪ್ಪ ವ:೩೧ವರ್ಷ,ವಾಲ್ಮೀಕಿ ಜನಾಂಗ, ಬೇಸಾಯ ಕೆಲಸ ವಾಸ:ಹಡ್ಲಗಿ ಗ್ರಾಮ ರವರು ಠಾಣೆಗೆ ಬಂದು ಕೊಟ್ಟ ಗಣಕೀಕೃತ ದೂರು ಏನಂದರೇ,  ನನಗೆ ಮೂವರು  ಮಕ್ಕಳು ಇದ್ದು ಇವರಲ್ಲಿ ೧) ಮಾರೆಯಮ್ಮ ವ:೦೭ (೨) ಇಂಧು ವ:೦೪ (೩) ಶ್ರೀಕಾಂತ ವ:೦೯ ಅಂತ ಮಕ್ಕಳು ಇರುತ್ತಾರೆ. ದಿನಾಂಕ: ೨೯-೮-೧೫ ರಂದು ಬೆಳಿಗ್ಗೆ ೧೧-೩೦ ಗಂಟೆಗೆ  ನಾನು ನನ್ನ ಮಗಳಾದ ಇಂಧು ಇಬ್ಬರು ಮನೆಯ ಮುಂದೆ ಇದ್ದಾಗ ನನ್ನ ಮಗಳು ಇಂಧು ಮನೆ ಮುಂದೆ ಅಂಗಳದಲ್ಲಿ ಆಟವಾಡುತ್ತಿರುವಾಗ  ಊರು ಕಡೆಯಿಂದ ನಮ್ಮ  ಗ್ರಾಮದ ಕುರುಗೋಡು ತಿಮ್ಮಪ್ಪರವರ ಮಗನಾದ ಹೇಮಂತ ಈತನು  ತನ್ನ ಡಿಸ್ಕವರಿ ಬಜಾಜ್ ಮೋಟಾರ್ ಸೈಕಲ್ ನಂ:ಕೆ:ಎ:೩೪: ಇ.ಬಿ.೧೩೩೮ ನೇದ್ದನ್ನು ಅತೀವೇಗ ಮತ್ತು ಅಜಾಗರುಕೆಯಿಂದ ನಡೆಸಿಕೊಂಡು ಬಂದು  ನನ್ನ ಮಗಳು ಆಟ ಆಡುತ್ತ ರಸ್ತೆಯನ್ನು ದಾಟುತ್ತಿರುವಾಗ ಹೇಮಂತನು ತನ್ನ ಮೇಲ್ಕಂಡ ಮೋಟಾರ್ ಸೈಕಲ್‌ನಿಂದ  ನನ್ನ ಮಗಳಾದ ಇಂಧುಳಿಗೆ ಡಿಕ್ಕಿ ಹೊಡೆದಾಗ  ನನ್ನ ಮಗಳು ರಸ್ತೆಯಲ್ಲಿ ಬಿದ್ದಾಗ ನಾನು ಮತ್ತು  ಎಂ.ರಾಮಚಂದ್ರಪ್ಪ ತಂದೆ ಹನುಮಂತಪ್ಪ ಮತ್ತು  ಬೆಣಕಲ್ಲು ಮಾರೆಪ್ಪ  ಮತ್ತು ಅಗರ ಈಶ್ವರಪ್ಪ ನಾವೆಲ್ಲಾರು ಹೋಗಿ ನಾನು ನನ್ನ ಮಗಳನು ನೋಡಲು ನನ್ನ ಮಗಳ ಬಲಗಾಲಿ ಪಾದ ಮೇಲೆ ರಕ್ತ ಗಾಯವಾಗಿ  ನಡೆಯಲು ಆಗಲ್ಲಿಲ್ಲ  ಹೇಮಂತನು ತನ್ನ  ಮೇಲ್ಕಂಡ ಮೋಟಾರ್ ಸೈಕಲ್‌ನ್ನು  ಸ್ಥಳದಲ್ಲಿ ಬಿಟ್ಟು ಹೋದನು. 
   ಆಗ ನಾನು, ನಮ್ಮ ಗ್ರಾಮಸ್ಥರ ಸಮಕ್ಷಮ ಪಂಚಾಯಿತಿ ಹಾಕಿದಾಗ ಹೇಮಂತನು ಮತ್ತು ಇವರ ತಂದೆ ತಾಯಿರವರು ಚಿಕಿತ್ಸೆ ಮಾಡುಸುತ್ತವೆ ಅಂತ ಹೇಳಿದರು. ಅಲ್ಲಿವರೆಗೆ ಮೋಟಾರ್ ಸೈಕಲ್ ಇಟ್ಟುಕೊಳ್ಳಿರಿ ಅಂತ ಮೋಟಾರ ಸೈಕಲ್ ನಮ್ಮ ಮನೆಯ ಮುಂದೆ ಬಿಟ್ಟು ಹೋದರು. ಅದರೆ ಇಲ್ಲಿವರೆಗೆ ಆದಾರೂ ಹೇಮಂತ ಮತ್ತು ಇವರ ತಂದೆ ತಾಯಿರವರು ಚಿಕಿತ್ಸೆಗೆ ಕರೆದುಕೊಂಡು ಹೋಗಲ್ಲಿಲ್ಲ. ನಂತರ ನಾನು   ಚಿಕಿತ್ಸೆ ಮಾಡಿಸಿರಿ ಅಥವಾ ಚಿಕಿತ್ಸೆಯ ವಚ್ಚೆವನ್ನು ಕೂಡರಿ ಅಂತ ಕೇಳಿದಕ್ಕೆ ಹೇಮಂತನು ಯಾವುದೇ ವೈದ್ಯಕೀಯ ಖರ್ಚು ಕೊಡುವುದಿಲ್ಲ ನೀವು  ಕೇಸ್ ಮಾಡಿಕೊಳ್ಳಿರಿ ಅಂತ ಹೇಳಿದನು  ಅದಕ್ಕೆ ನಾನು ತಡವಾಗಿ ಈ ದಿನ ಠಾಣೆಗೆ ಬಂದು ಹೇಮಂತ ಮತ್ತು ಈತನ ಮೋಟಾರ್ ಸೈಕಲ್ ನಂ:ಕೆ:ಎ:೩೪:ಇ.ಬಿ.೧೩೩೮ನೇದ್ದರ ಮೇಲೆ ಕಾನೂನು ಕ್ರಮ  ಜರುಗಿಸಲು  ಮತ್ತು ನನ್ನ ಮಗಳಿಗೆ ಚಿಕಿತ್ಸೆ ಮಾಡಿಸಲು ಕೋರಿದ ಮೇರೆಗೆ ಮತ್ತು ಇದಕ್ಕೆ ಪಿರ್ಯಾದಿದಾರರ ಹೇಳಿಕೆ ಲಗತ್ತಿಸಿದೆ.
Sandur PS
5 Cr.No:0152/2015
(IPC 1860 U/s 00MP )
22/09/2015 Under Investigation
MISSING PERSON - Women
Brief Facts :  ಈದಿನ ದಿನಾಂಕ 22-09-2015 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ಏನೆಂದರೆ:- ಮೊದಲನೇ ಮಗಳು ಅನಿತಾಳು ಎ.ಪಿ.ಎಂ.ಸಿ. ಕಾಲೇಜ್ ನಲ್ಲಿ ಬಿ.ಎ. ಮಾಡಿ ಮನೆಯಲ್ಲಿ ಇರುತ್ತಾಳೆ. ಅನಿತಾಳು ಎಫ್.ಡಿ.ಎ / ಎಸ್.ಡಿ.ಎ. ಪರೀಕ್ಷೆ ಕಟ್ಟಿದ್ದು, ಈ ಪರೀಕ್ಷೆ ಸಂಬಂಧ ನಿನ್ನೆ ದಿನ ದಿನಾಂಕ: 21-09-2015 ರಂದು ಮಧ್ಯಾಹ್ನ 3-00 ಗಂಟೆಗೆ ಇಂಟರ್ ನೆಟ್ ನೋಡುವುದಿದೆ ಆದ್ದರಿಂದ ನೆಟ್ ಕೆಫೆ ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ, ಒಂದು ಪ್ಲಾಸ್ಟಿಕ್ ಕವರಿನಲ್ಲಿ ತನ್ನ ಮಾರ್ಕ್ಸ್ ಕಾರ್ಡ್ ಮತ್ತು ಇನ್ನಿತರೆ ಕಾಗದ ಪತ್ರಗಳನ್ನು ಮತ್ತು ಸಮ್ ಸಂಗ್ ಕಂಪನಿಯ (ಡ್ಯುಯೆಲ್ ಸಿಮ್) ಒಂದು ಮೊಬೈಲ್ ಅದರಲ್ಲಿ ಐಡಿಯಾ ಸಿಮ್ ನಂ: 8971018717, ಇದ್ದು ಮತ್ತೊಂದು ಸಿಮ್ ಸಂ: 888418302 ಅನ್ನು ಪ್ರತ್ಯೇಕವಾಗಿ ತನ್ನ ಪರ್ಸ್‌ನಲ್ಲಿ ಇಟ್ಟುಕೊಂಡು ಹೋದವಳು ವಾಪಾಸ್ ಮನೆಗೆ ಬಂದಿರುವುದಿಲ್ಲ. ಅನಿತಾಳು ರಾತ್ರಿ 9-00 ಗಂಟೆಯ ತನಕ ಅನಿತಾಳು ಮನೆಗೆ ವಾಪಾಸ್ ಬರದಿದ್ದರಿಂದ ಮನೆಯಲ್ಲಿ ಎಲ್ಲರೂ ಗಾಭರಿಗೊಂಡು ಸಂಡೂರು ಪಟ್ಟಣದಲ್ಲಿ ಹುಡುಕಾಡಲಾಗಿ ಮತ್ತು ನಮ್ಮ ಸಂಬಂಧಿಕರು ಇರುವ ಊರುಗಳಲ್ಲಿ ಫೋನ್ ಮಾಡಿ ವಿಚಾರ ಮಾಡಿ. ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಕಾರಣ ದಿನಾಂಕ: 21-09-2015 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನನ್ನ ಮಗಳು ಅನಿತಾಳು ಮನೆಯಿಂದ ನೆಟ್ ಕೆಫೆ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ, ಮನೆಯಿಂದ ಹೊರಗೆ ಹೋದವಳು ವಾಪಾಸ್ ಬಂದಿರುವುದಿಲ್ಲ. ಆದ್ದರಿಂದ ಕಾಣೆಯಾದ ಅನಿತಾಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ