ಗುರುವಾರ, ಸೆಪ್ಟೆಂಬರ್ 24, 2015

PRESS NOTE OF 24/09/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0077/2015
(CODE OF CRIMINAL PROCEDURE, 1973 U/s 109,41 )
24/09/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ:24/09/2015 ರಂದು ಬೆಳಿಗ್ಗೆ 10-00 ಗಂಟೆಗೆ ಕಾಕರ್ಲತೋಟ ಹೊರವಲಯದ ಶ್ರೀ ಸಾಯಿ ಕಾಲೋನಿಯ ಉಮೇಶ ರವರ ಮನೆಯ ಮುಂದೆ ಇಬ್ಬರು ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಡುತ್ತಿದ್ದು ಸಮವಸ್ತದಲ್ಲಿದ್ದ ನಮ್ಮನ್ನು ನೋಡಿ ಅವಿತುಕೊಳ್ಳಲು ನಂತರ ಓಡಿ ಹೋಗಲು ಯತ್ನಿಸಿದವರನ್ನು ಬೆನ್ನಟ್ಟಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ಉತ್ತರ ನೀಡಲು ತಡವರಿಸಿದ್ದು ನಂತರ ಮತ್ತೆ ಮತ್ತೆ ವಿಚಾರಿಸಲು ಆರೋಪಿತರು ಆ ವೇಳೆಯಲ್ಲಿ ಆ ಸ್ಥಳದಲ್ಲಿದ್ದ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಇವರುಗಳನ್ನು ಹೀಗೇಯೇ ಬಿಟ್ಟರೆ ಯಾವುದಾದರು ಕಳುವು ವಗೈರೆಯಂತಹ ಸಂಜ್ಞೆಯ ಅಪರಾಧಗಳನ್ನು ಮಾಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ.
Kudligi PS
2 Cr.No:0163/2015
(IPC 1860 U/s 448,504,323,506(2) ; KARNATAKA MONEY LENDERS ACT 1961 U/s 38,39 ; KARNATAKA PROHIBITION OF CHARGING EXORBITANT INTEREST ACT, 2004 U/s 3,4 )
24/09/2015 Under Investigation
CRIMINAL TRESPASS - House
Brief Facts :  ಈ ದಿನ ದಿನಾಂಕ: ೨೪/೦೯/೨೦೧೫ ರಂದು ಮದ್ಯಾಹ್ನ ೧-೦೦ ಗಂಟೆಗೆ ಫಿರ್‍ಯಾದಿದಾರರಾದ ಶ್ರೀ. ಮಹಾಂತೇಶ್ ತಂದೆ ಕೊಟ್ರೇಶಪ್ಪ, ೨೭ ವರ್ಷ, ನೇವಾರ ಜನಾಂಗ,  ಕೂಲಿ ಕೆಲಸ, ವಾಸ ಕಣಿವಿನಾಯಕನಹಳ್ಳಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತಮ್ಮ ಗ್ರಾಮದ ವೆಂಕಟೇಶ್ ತಂದೆ ಚೋಳಪ್ಪ ಈತನಿಗೆ ಹಾಗೂ ತನಗೆ ಹಣಕೊಡುವ ವಿಚಾರವಾಗಿ ವೈಷಮ್ಯ ಇದ್ದು. ದಿನಾಂಕ ೨೨/೦೯/೨೦೧೫ ರಂದು ಬೆಳಿಗ್ಗೆ ೮-೦೦ ಗಂಟೆಯ ಸುಮಾರಿಗೆ ತಾನು ಕಣಿವಿನಾಯಕನಹಳ್ಳಿ ಗ್ರಾಮದ ನಮ್ಮ ಮನೆಯಲ್ಲಿರುವಾಗ್ಗೆ ವೆಂಕಟೇಶನು ಏಕಾಏಕಿ ತಮ್ಮ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಮಾಡಿ ಆತನು ತನಗೆ ನಾನು ಕೊಟ್ಟ ಹಣವನ್ನು ಕೊಡು ಅಂತ ಹೇಳಿದ್ದು ಅದಕ್ಕೆ ತಾನು ಎಷ್ಟು ಅಂತ ಕೇಳಿದ್ದು ಆತನು ಅಸಲು ಬಡ್ಡಿ ಎಲ್ಲಾ ಸೇರಿ ೭೦೦೦೦/- ರೂ ಹಣ ಕೊಡು ಅಂತ ಹೇಳಿದ್ದು ತಾನು ಈ ಸಮಯದಲ್ಲಿ ನನ್ನ ಬಳಿ ಹಣ ಇಲ್ಲಾ ಕಾರಣ ಮುಂದೆ ಕೊಡುತ್ತೇನೆಂದು ಹೇಳಿದ್ದಕ್ಕೆ. ಆತನು ಇಲ್ಲ ನನಗೆ ಈಗಲೇ ಬೇಕಲೇ ಸೂಳೆ ಮಗನೆ ನೀನು ಏನು ಮಾಡಿ ಕಟ್ಟುತ್ತೀಯೋ ಗೋತ್ತಿಲ್ಲ ನನಗೆ ಹಣ ಕೊಡು ಅಂತ ಅಂದಿದ್ದು ಅದಕ್ಕೆ ತಾನು ದುಡಿದು ಕಟ್ಟುತ್ತೇನೆ ಈಗಲೇ ಅಂದರೆ ಆಗುವುದಿಲ್ಲ ಅಂತಾ ಹೇಳಿದ್ದು, ಅದಕ್ಕೆ ಆತನು ತಾನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕಬ್ಬಿಣದ ಮೊಚ್ಚನ್ನು ತೋರಿಸಿ ಏ ಸೂಳೇಮಗನೇ ನೀನು ಈ ರೀತಿ ಕೇಳಿದರೆ ಕೊಡುವುದಿಲ್ಲ ನಿನ್ನನ್ನು ಇಲ್ಲಿಯೇ ಮುಗಿಸಿಬಿಡುತ್ತೇನೆ ಅಂತಾ ಅಂದು ತನ್ನ ಕುತ್ತಿಗೆಗೆ ಕೈ ಹಾಕಿ ಹೊಡೆಯಲು ಬಂದಾಗ ಇದನ್ನು ನೋಡಿದ ಅಕ್ಕಪಕ್ಕದ ಮನೆಯವರಾದ ವಡ್ಡರಯಮುನಪ್ಪ ತಂದೆ ತಿಪ್ಪಣ್ಣ, ಕೊಟ್ರಣ್ಣ ತಂದೆ ಹನುಮಂತಪ್ಪ, ಮಾರುತೆಪ್ಪ ತಂದೆ ಹನುಮಂತಪ್ಪ,  ಈಶ್ವರಪ್ಪ ತಂದೆ ರಾಮಪ್ಪ ಮತ್ತು ತಮ್ಮ ತಾಯಿ ಶಾಂತಮ್ಮ ಹಾಗೂ ತಮ್ಮ ದೊಡ್ಡಮ್ಮ ಈರಮ್ಮ ರವರುಗಳು ಬಿಡಿಸಿಕೊಳ್ಳಲು ಬಂದಾಗ ವೆಂಕಟೇಶನು ಫಿರ್‍ಯಾದಿದಾರರ ತಾಯಿ ಮತ್ತು ತಮ್ಮ ದೊಡ್ಡಮ್ಮ ರವರಿಗೂ ಸಹ ದುರ್ಭಾಷೆಗಳಿಂದ ಬೈದಾಡಿ ಅವರಿಗೂ ಸಹ ತನ್ನ ಕೈಯಲಿದ್ದ ಮೊಚ್ಚನ್ನು ತೋರಿಸಿ ಇದೇ ಮೊಚ್ಚಿನಿಂದ ನಿಮ್ಮನ್ನೆಲ್ಲಾ ಕೊಲೆ ಮಾಡುತ್ತೇನೆ ಅಂತಾ ಪ್ರಾಣ ಬೆದರಿಕೆಯನ್ನು ಹಾಕಿ, ತಮ್ಮನ್ನು ಹೊಡೆಯಲು ತಂದಿದ್ದ ಮೊಚ್ಚನ್ನು ಅಲ್ಲಿಯೇ ಬಿಸಾಕಿ ಹೋಗಿದ್ದು, ಈ ಬಗ್ಗೆ ಗ್ರಾಮದ ಮೇಲ್ಕಂಡ ಹಿರಿಯರು ಹಣ ಕೊಡು ತೆಗೆದುಕೊಳ್ಳುವ ವಿಚಾರವಾಗಿ ಪಂಚಾಯ್ತಿ ಮಾಡಿ ಸರಿ ಮಾಡೋಣ ಅಂತಾ ಹೇಳಿದ್ದು, ಕಾರಣ ತಾವುಗಳು ಈ ಬಗ್ಗೆ ದೂರು ಕೊಡದೇ ಸುಮ್ಮನಾಗಿದ್ದು, ವೆಂಕಟೇಶನು ಈ ಬಗ್ಗೆ ಇದುವರೆಗೂ ಪಂಚಾಯ್ತಿಗೆ ಬಾರದೇ ಇದ್ದುದರಿಂದ ತಡವಾಗಿ ಬಂದು ದೂರು ಕೊಟ್ಟಿದ್ದು, ಕಾರಣ ವೆಂಕಟೇಶನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಅಂತಾ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Marriyammanahalli PS
3 Cr.No:0126/2015
(IPC 1860 U/s 279 )
24/09/2015 Under Investigation
MOTOR VEHICLE ACCIDENTS NON-FATAL - National Highways
Brief Facts :  ಈ ದಿನ ದಿನಾಂಕ-24/09/2015 ರಂದು ಬೆಳಿಗ್ಗೆ 10.15 ಗಂಟೆಗೆ ಪಿರ್ಯಾದಿ ಸೈಯದ್ ವಾಜೀದ್ ತಂದೆ ಅಬ್ದುಲ್ ಜಬ್ಬಾರ್ ವ.೩೭ ವರ್ಷ ಮುಸ್ಲಿಂ ಜಾತಿ ವ್ಯಾಪಾರ ವೃತ್ತಿ ವಾಸ- ರೂಜಾಬೀ ಖಾಜಾ ಕಾಲೋನಿ ಮನೆ ನಂ. ೫-೪೦೬/೧೧ಸಿ  ಕಲಬುರ್ಗಿ ಇವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ- ತಮ್ಮಲ್ಲಿ ದೂರು ನೀಡುವುದೇನೆಂದರೆ ನಮ್ಮ ಸಂಬಂದಿಕರಾದ ಮಹಮ್ಮದ್ ಫಹೀಮ್‌ಗೆ ಕಾರ್ ಬೇಕಾಗಿದ್ದರಿಂದ ಕಾರ್ ಖರೀದಿ ಮಾಡಲು  ದಾವಣಗೇರಿಯಲ್ಲಿ ನಮ್ಮ ಸ್ನೇಹಿತ ಸೈಯದ್ ಜಹೀರ್ ಇವರು ದಾವಣಗೇರಿಯಲ್ಲಿ ಇನಾವೋ ಕಾರ್ ಇದೆ ಬರ್ರಿ ವ್ಯಾಪಾರ ಮಾಡೋಣ ಎಂದಿದ್ದರಿಂದ ನಾನು  ಮಹಮ್ಮದ್ ಫಹೀಮ್ ಮತ್ತು ಸಹೀರ್ ನಾವೆಲ್ಲ ಕಾರ್ ನಂ ಕೆ.ಎ.೩೨/ಎನ್.೩೪೭೨ ನೇದ್ದರಲ್ಲಿ ದಿನಾಂಕ-೨೩/೦೯/೨೦೧೫ ರಂದು ಬೆಳಗಿನ ಜಾವ ೧.೩೦ ಗಂಟೆಗೆ ಕಲಬುರ್ಗಿಯಿಂದ ಹೊರೆಟು ಬೆಳಿಗ್ಗೆ ೧೦.೦೦ ಗಂಟೆಗೆ  ದಾವಣಗೇರಿ ತಲುಪಿದೆವು. ದಾವಣಗೇರಿಯಲ್ಲಿ ಇನಾವೋ ಕಾರ್ ಮಾಲಿಕ ಮಹೇಶ ಹೆಚ್.ಸಿ. ರವರು ತಮ್ಮ ಕಾರ್ ನಂ ಕೆ.ಎ ೧೭/ಎನ್.೬೪೦೮  ನೇದ್ದನ್ನು ನಮ್ಮ  ಸ್ನೇಹಿತ ಸೈಯದ್ ಜಹೀರ್ ರವರ ಮಧ್ಯಸ್ಥಿಕೆಯಲ್ಲಿ ೧೨ ಲಕ್ಷ ರೂಪಾಯಿಗೆ ಕಾರ್ ಖರೀದಿ ಮಾಡಿಕೊಂಡು ನಾವು ಪುನಃ ರಾತ್ರಿ ೯  ಗಂಟೆಗೆ ದಾವಣಗೇರಿಯಿಂದ ಇನಾವೋ ಕಾರ್ ನಲ್ಲಿ ನಾನು ಮತ್ತು ಸಹೀರ್ ಇದ್ದು ನಾನು ಚಾಲನೆ ಮಾಡುತ್ತಿದ್ದೆ  ನಾವು ಕಲಬುರ್ಗಿಯಿಂದ ತಂದ ಕಾರ್‌ನ್ನು ಮಹಮ್ಮದ್ ಫಹೀಮ್ ನಡೆಸಿಕೊಂಡು ಮುಂದೆ ಹೋಗುತ್ತಿದ್ದನು. ಈ ದಿನ ಬೆಳಗಿನ ಜಾವ ೧.೦೦ ಗಂಟೆಯ ಸುಮಾರಿಗೆ ನಾನು ಇನಾನೋ ಕಾರ್ ನಡೆಸುತ್ತಾ ಎನ್.ಹೆಚ್.೧೩ ರಸ್ತೆಯಲ್ಲಿ ಸ್ಮಯರ್  ಫ್ಯಾಕ್ಟರಿ ಹತ್ತಿರ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಹೊಸಪೇಟೆ ಕಡೆಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ದುಡುಕುತನದಿಂದ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಕಾರಿಗೆ ಬಲಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಸದರಿ ಅಪಘಾತದಿಂದಾಗಿ ನಮಗೆ ಯಾವುದೇ ಗಾಯಗಳು ಆಗಲಿಲ್ಲ. ನಮ್ಮ ಕಾರಿನ ಬಲಭಾಗವು ಸಂಪೂರ್ಣ ಜಖಂಗೊಂಡಿತು. ನಮ್ಮ ಕಾರಿಗೆ ಅಪಘಾತಪಡಿಸಿದ ಲಾರಿ ಮುಂದೆ ನಿಂತಿದ್ದು ಅದರ ನಂಬರ್ ನೋಡಲು  ಟಿ.ಎನ್.೫೨/ಎಫ್.೭೫೪೫  ಇದ್ದು ಚಾಲಕನ ಹೆಸರು ಕೇಳಲು ತನ್ನ ಹೆಸರು ಫಳನೀಸ್ವಾಮಿ ವಾಸ- ಚೆನೈ ಎಂದು ತಿಳಿಸಿದನು. ಕಾರಣ ಅಪಘಾತಪಡಿಸಿದ  ಲಾರಿ ನಂಬರ್ ಟಿ.ಎನ್. ೫೨/ಎಫ್. ೭೫೪೫ ನೇದ್ದರ ಚಾಲಕ ಫಳನೀಸ್ವಾಮಿ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮನವಿ.  ಎಂದು ದೂರಿನ ಮೇರೆಗೆ ಗುನ್ನೆ ದಾಖಲಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ