ಶನಿವಾರ, ಸೆಪ್ಟೆಂಬರ್ 5, 2015

PRESS NOTE OF 05/09/2015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0172/2015
(REPRESENTATION OF PEOPLE ACT, 1950,1951,1989 U/s 31 )
05/09/2015 Under Investigation
 REPRESENTATION OF PEOPLE ACT 1951 & 1988 - Other Elected Bodies
Brief Facts :  ಕೆ.ಶಶಿಕಲಾ ಗಂಡ ಕೆ.ಕೃಷ್ಣಮೋಹನ್ ರವರು 94-ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮತ್ತು ಆಂದ್ರ ಪ್ರದೇಶದ 147-ಆಲೂರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಎರಡೂ ಕಡೆ ನೊಂದಾಯಿಸಿಕೊಂಡಿದ್ದು ಇರುತ್ತದೆ. ಸದರಿ ಕೆ.ಶಶಿಕಲ ರವರು ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿರುವುದು ಪ್ರಜಾ ಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದು, ಸದರಿಯವರ ಮೇಲೆ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ನಂ:34/15 ಕಲಂ:31 ಆರ್.ಪಿ.ಆಕ್ಟ್-1950 ರೀತ್ಯ ಪ್ರಕರಣ ದಾಖಲಿಸಿಕೊಂಡು ನಂತರ ಘನ ನ್ಯಾಯಾಲಯದಿಂದ ಪ್ರ.ವ.ವರದಿಯನ್ನು ದಾಖಲಿಸಿ ತನಿಖೆ ಕೈಗೊಳ್ಳಲು  ಪರವಾನಿಗೆ ಪಡೆದು ಠಾಣೆಯ ಗುನ್ನೆ ನಂ:172/15 ಕಲಂ:31 ಆರ್.ಪಿ.ಆಕ್ಟ್-1950 ರೀತ್ಯಾ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
Hirehadagali PS
2 Cr.No:0160/2015
(MMDR (MINES AND MINERALS REGULATION OF DEVELOPMENT) ACT 1957 U/s 4(1),4(1A) ; KARNATAKA MINOR MINERAL CONSISTENT RULE 1994 U/s 42,44 ; IPC 1860 U/s 379 )
05/09/2015 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ದಿನಾಂಕ 05-09-2015 ರಂದು ಮಧ್ಯಾಹ್ನ 12.50 ಗಂಟೆ ಸುಮಾರಿಗೆ ಆರೋಪಿ 1 ರವರು ಸ್ವರಾಜ್ ಕಂಪನಿಯ 735 FE ಮಾಡಲಿನ ನೋಂದಣಿ ಸಂಖ್ಯೆ ಇರದ ಟ್ರಾಕ್ಟರ್ ಮತ್ತು ಟ್ರೇಲರ್ ನಲ್ಲಿ ಹಾಗು ಆರೋಪಿ 2 ರವರು ಮಹೀಂದ್ರ ಕಂಪನಿಯ B 275 DI ಮಾಡಲಿನ ನೋಂದಣಿ ಸಂಖ್ಯೆ ಇರದ ಟ್ರಾಕ್ಟರ್ ಮತ್ತು ಟ್ರೇಲರ್ ನಲ್ಲಿ  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು  ಹಿರೇಹಡಗಲಿ ಮಾಗಳ ರಸ್ತೆಯಲ್ಲಿ ಕಾಳೇನಹಳ್ಳಿ ಕ್ರಾಸ್ ಹತ್ತಿರ ಬರುವಾಗ, ಫಿರ್ಯಾಧಿದಾರರು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎರಡೂ ಟ್ರಾಕ್ಟರ ಗಳ ಚಾಲಕರಿಗೆ ಹಿಡಿದಿದ್ದು, ಆರೋಪಿತರು ಅಕ್ರಮವಾಗಿ ಕಳ್ಳತನದಿಂದ ಮರಕಬ್ಬಿ ಗ್ರಾಮದ ಹತ್ತಿರ ತುಂಗಭದ್ರ ನದಿ ದಂಡೆಯಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಎರಡೂ ಟ್ರಾಕ್ಟರ್ ಮತ್ತು ಟ್ರೇಲರ್ಗಳನ್ನು, ಟ್ರೇಲರ್ ನಲ್ಲಿದ್ದ ಸುಮಾರು ತಲಾ 3 ಟನ್ ಮರಳು ಅಂದಾಜು ಬೆಲೆ ರೂ. 4000/- ನೇದ್ದನ್ನು ಜಪ್ತುಪಡಿಸಿಕೊಂಡು, ಸಿಕ್ಕಿಬಿದ್ದ ಆರೋಪಿತರೊಂದಿಗೆ ಠಾಣೆಗೆ ಬಂದು ಇಬ್ಬರು ಆರೋಪಿತರನ್ನು ಮತ್ತು ಟ್ರಾಕ್ಟರ್  ಮತ್ತು ಟ್ರೇಲರ್ಗಳನ್ನು ಒಪ್ಪಿಸಿ ಯಾವುದೇ ಪಾರವಾನಿಗೆ ಇಲ್ಲದೇ ಕಳ್ಳತನದಿಂದ ಮರಳು ಸಾಗಿಸುವಾಗ ಸಿಕ್ಕಿ ಬಿದ್ದ ಇಬ್ಬರು ಆರೋಪಿತರು ಹಾಗು ಸದರಿ ಟ್ರಾಕ್ಟರ್ ಮತ್ತು ಟ್ರೇಲರ್ ನ ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ
Hospet Town PS
3 Cr.No:0175/2015
(IPC 1860 U/s 465,468,470,420 )
05/09/2015 Under Investigation
CHEATING - CHEATING
Brief Facts :  ಫಿರ್ಯಾದಿದಾರಾದ ಶ್ರೀ ಎಂ.ತುಕರಾಮ್ ನಾಯ್ಡು ರವರು ಈ ದಿನ ದಿನಾಂಕ 05-09-15 ರಂದು ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ  ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಂಶ ಸದರಿಯವರು ದಿನಾಂಕ 26-06-2006 ರಂದು ಹೊಸಪೇಟೆ ತಾಲೂಕಿನ ನಂದಿಬಂಡಿ ಗ್ರಾಮದ ವಾಸಿಗಳಾದ ರಾಮಪ್ಪನವರ ಜಮೀನು ಸರ್ವೇ ನಂ 200/ಬಿ/6, ನೇದ್ದರ ವಿಸ್ತೀರ್ಣ 5-16 ಎಕರೆ ಜಮೀನನ್ನು ಖರೀದಿಸಿ ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದು ಸದರಿ ಜಮೀನನ್ನು ಆರೋಪಿ-1 ಗೋಪಾಲನಾಯ್ಕ ಇವರು ತಾನೆ ತುಕರಾಂ ಎಂದು ಫಿರ್ಯದಿಯ ನಕಲಿ ಮತದಾರರ ಗುರುತಿನ ಚೀಟಿಯನ್ನು ಸೃಷ್ಠಿಸಿ ಆರೋಪಿ-2 ಚಿದಾನಂದ ಕರಿಬಸವನವರ್ ಇವರಿಗೆ ಮಾರಾಟ ಮಾಡಿರುತ್ತಾರೆ.  ಆರೋಪಿತರು ತಮಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸದರಿ ಜಮೀನನ್ನು ಮಾರಾಟ ಮಾಡಿದ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Thoranagal PS
4 Cr.No:0140/2015
(INDIAN MOTOR VEHICLES ACT, 1988 U/s 187 ; IPC 1860 U/s 279,338 )
05/09/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ನಿವೇಧನೆ:-
             ಪಿರ್ಯಾಧಿದಾರರ ದೂರಿನ ಸಾರಾಂಶ ಏನೆಂದರೆ " ನಮ್ಮ ಅಣ್ಣನಾದ ಶರಣಪ್ಪ ಹೆಗಡೆ ತಂದೆ ಹನುಮಂತಪ್ಪ, 40ವರ್ಷ, ಈತನು ಜಿಂದಾಲ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕರ್ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 06-07-15 ರಂದು ಸಂಡೂರಿನಿಂದ ತೋರಣಗಲ್ಲು ಗ್ರಾಮಕ್ಕೆ ತನ್ನ ಕೆಲಸಕ್ಕೆ ಹೋಗಿದ್ದು, ಆ ದಿನ ನಾನು ಸಹ ನನ್ನ ಕೆಲಸದ ನಿಮಿತ್ತ  ಅಲ್ಲಿಗೆ ಹೋಗಿದ್ದೆನು. ಅಲ್ಲಿ ಕೆಲಸ ಮುಗಿದ ನಂತರ ಸದರಿ ದಿನ ನಾವಿಬ್ಬರೂ ತೋರಣಗಲ್ಲು ಆರ್.ಎಸ್.ನಿಂದ ಸಂಡೂರಿಗೆ  ಹೊರಟಿದ್ದ ಟ್ರ್ಯಾಕ್ಸ್ ನಂ.ಕೆಎ-35/ಎ.9468 ರಲ್ಲಿ ಹತ್ತಿಕೊಂಡು ಬಂದಿದ್ದು, ಸದರಿ ಟ್ರ್ಯಾಕ್ಸ್  ದಿ:06-07-15 ರಂದು ರಾತ್ರಿ 7-00 ಗಂಟೆ ಸುಮಾರಿನಲ್ಲಿ ತೋರಣಗಲ್ಲು -ಸಂಡೂರು ರಸ್ತೆಯಲ್ಲಿ ವಿಧ್ಯಾನಗರ ಹತ್ತಿರ ಹೊರಟಿದ್ದಾಗ ಚಾಲಕ ನಿಂಗಪ್ಪ ತಂದೆ ಈರಪ್ಪ ಈತನು ಟ್ರ್ಯಾಕ್ಸನ್ನು ಅತೀ ವೇಗವಾಗಿ ಮತ್ತು ಅಜಾಗೂರಕತೆಯಿಂದ ನಡೆಸಿಕೊಂಡು ಹೊರಟಿದ್ದನು. ವಿಧ್ಯಾನಗರ  ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ನಿರ್ಲಕ್ಷತೆಯಿಂದ  ಬ್ರೇಕ್ ಹಾಕಿದನು. ಹಿಂದೆ ಕುಳಿತಿದ್ದ ನಮ್ಮಣ್ಣ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ರಭಸಕ್ಕೆ   ಜೋರಾಗಿ ಮುಂದಕ್ಕೆ ಜಾರಿ ಬಂದು ಕಂಬಿಗೆ ಬಿದ್ದನು. ಇದರಿಂದ ನಮ್ಮಣ್ಣ ಬಲಗಾಲು ಮೊಣಕಾಲು ಜಾಯಿಂಟ್ ಹತ್ತಿರ ಬಲವಾದ ಪೆಟ್ಟು ಬಿದ್ದಿತು. ಅದರಲ್ಲಿದ್ದ ನನಗೆ & ಇತರರಿಗೆ ಯಾವುದೇ ಗಾಯಗಳು ಆಗಿರಲಿಲ್ಲ. ನಮ್ಮಣ್ಣನನ್ನು ಬಸ್ಸಿನಲ್ಲಿ ಸಂಡೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿದೆವು. ನಂತರ ದಿ:07-07-15 ರಂದು ನೋವು ಜಾಸ್ತಿಯಾಗಿದ್ದರಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡೆವು. ಅಲ್ಲಿ ಚಿಕಿತ್ಸೆ ನೀಡಿದ ವೈಧ್ಯರು ಎಕ್ಸರೇ ಮಾಡಿ ಬಹಳ ಪೆಟ್ಟಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಅಲ್ಲಿ ಮತ್ತು ಪ್ರವೇಟ್ ಕ್ಲಿನಿಕನಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ಈ ಬಗ್ಗೆ ನಮಗೆ ದೂರು ಕೊಡುವ ವಿಚಾರ ಗೊತ್ತಿರಲಿಲ್ಲ.  ಬಗ್ಗೆ ಟ್ರ್ಯಾಕ್ಸ್ ಮಾಲೀಕರಾದ ಮಹಾಂತೇಶ್ ಇವರು ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದರು. ಆದರೆ ಬಹಳ ಪೆಟ್ಟಾಗಿದ್ದರಿಂದ ನಮಗೆ ನಮ್ಮ ಸ್ನೇಹಿತರು ದೂರು ದಾಖಲಿಸಲು ತಿಳಿಸಿದ್ದು, ನಮ್ಮ ಅಣ್ಣನವರಿಗೆ ಓಡಾಡಲು ತೊಂದರೆ ಆಗುತ್ತಿದ್ದುದರಿಂದ ಈ ಬಗ್ಗೆ ದೂರು ಕೊಡಲು ತಿಳಿಸಿದ್ದರಿಂದ ನಾನು ಈ ದಿನ ತಡವಾಗಿ ಠಾಣೆಗೆ  ಬಂದಿರುತ್ತೇನೆ. ಕಾರಣ  ಅತೀವೇಗ ಮತ್ತು ನಿರ್ಲಕ್ಷತೆಯಿಂದ ಟ್ರ್ಯಾಕ್ಟ್ ನಂ. ಕೆಎ-35/ಎ.9468 ನಡೆಸಿ ಅಪಘಾತಪಡಿಸಿದ ಚಾಲಕ ನಿಂಗಪ್ಪ ತಂದೆ ಈರಪ್ಪ, ಸಾ: ಕುಡಿತಿನಿ ಈತನ ಮೇಲೆ ಕ್ರಮ ಜರುಗಿಸಲು ಈ ನನ್ನ ದೂರು ನೀಡುತ್ತಿದ್ದೇನೆ" ಎಂದು ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ