ಭಾನುವಾರ, ಸೆಪ್ಟೆಂಬರ್ 20, 2015

PRESS NOTE OF 20/09/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0076/2015
(IPC 1860 U/s 399,402 )
20/09/2015 Under Investigation
DACOITY - Preparation And Assembly For Dacoity
Brief Facts :  ದಿನಾಂಕ:20/09/2015 ರಂದು ಬೆಳಗಿನ ಜಾವ 2-00 ಗಂಟೆ ಸಮಯದಲ್ಲಿ ಆರೋಪಿತರು ಕಾಕರ್ಲತೋಟ ಗ್ರಾಮದ ಶ್ರೀ ಸಾಯಿ ಕಾಲೋನಿ ಹೊರ ವಲಯದಲ್ಲಿರುವ ಕ್ರಿಷ್ಟಪ್ಪ ರವರ ಮನೆಯಿಂದ ಸ್ವಲ್ಪ ದೂರದ ಖಾಲಿ ಜಾಗದಲ್ಲಿ ಆರೋಫಿತರು ಮರಗಿಡಗಳ ಮರೆಯಲ್ಲಿ ಒಂದು ಆಟೋ ನಿಲ್ಲಿಸಿಕೊಂಡು ಕುಡಿಯುತ್ತಾ ಕುಳಿತಿದ್ದು ಯಾವುದಾದರೂ ಮನೆಯನ್ನು ದರೋಡೆ ಮಾಡಬೇಕೆಂದು ಮಾತನಾಡುತ್ತಾ ಇದ್ದು ಅವರನ್ನು ಹಿಡಿದು ವಿಚಾರಿಸಲಾಗಿ ದರೋಡೆ ಮಾಡಲು ತಯಾರಿ ನಡೆಸಿರುವುದಾಗಿ ಕಂಡು ಬಂದಿದ್ದರಿಂದ ಅವರನ್ನು ವಶಕ್ಕೆ ಪಡೆದು ದರೋಡೆಗೆ ಸಂಬಂದಿಸಿದ ಆಟೋದಲ್ಲಿದ್ದ ಮಾರಕಾಸ್ತ್ರಗಳನ್ನು, ಕಾರದ ಪುಡಿಯನ್ನು ಮತ್ತು 5  ಮಂಕಿಕ್ಯಾಪ್ ಗಳನ್ನು ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Kottur PS
2 Cr.No:0124/2015
(INDIAN MOTOR VEHICLES ACT, 1988 U/s 183 ; IPC 1860 U/s 279,337,304(A) )
20/09/2015 Under Investigation
MOTOR VEHICLE ACCIDENTS FATAL - Other Roads
Brief Facts :  ದಿನಾಂಕ 20-09-2015 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು,  ನಿನ್ನೆ ದಿನ ದಿನಾಂಕ 19-09-2015 ರಂದು ಸಂಜೆ ಪ್ಯಾಸೆಂಜರ್ ಆಟೋ ನಂ. ಕೆಎ-34/ಎ-6126ನೇದ್ದರಲ್ಲಿ ಕೊಟ್ಟೂರಿನಿಂದ ಗೊಲ್ಲರಹಳ್ಳಿಗೆ ದೂಪದಹಳ್ಳಿ ಮುಖಾಂತರ ಹೋಗುತ್ತಿದ್ದಾಗ ಸಂಜೆ 6-30 ಗಂಟೆಗೆ  ಗೊಲ್ಲರಹಳ್ಳಿ ಕ್ರಾಸ್ ಹತ್ತಿರ ಮೇಟಿ ಚಂದ್ರಪ್ಪರವರ ಹೊಲದ ಸಮೀಪ ಆರೋಪಿ ಟ್ರಾಕ್ಟರ್ ನಂ. ಕೆಎ-35/ಟಿಎ-2130 ನೇದ್ದನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿದ್ದರಿಂದ ಆಟೋದಲ್ಲಿದ್ದ ವೀರೇಶ್ ನಿಗೆ ಬಲಕೈಗೆ, ಮೊಣಕೈ ಕೆಳಗೆ, ಎರಡು ಕಾಲುಗಳ ಮೀನು ಖಂಡದ ಹತ್ತಿರ  ಭಾರಿ ಗಾಯ ಮತ್ತು ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇತರೆ  ಪ್ರಯಾಣಿಕರಾದ ಶಾರದಮ್ಮ, ರತ್ನಮ್ಮ , ರೇಣುಕಮ್ಮ, ಹಾಗೂ ಪಿರ್ಯಾದಿಗೂ ಸಹ ಪೆಟ್ಟಾಗಿರುತ್ತದೆ.  ಟ್ರಾಕ್ಟರ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
T.B. Halli PS
3 Cr.No:0032/2015
(IPC 1860 U/s 379 )
20/09/2015 Under Investigation
THEFT - Of Cattle
Brief Facts :  ಬನ್ನಿಕಲ್ಲು ಗ್ರಾಮದ ಗ್ರಾಮ ಪಂಚಾಯ್ತಿಯ ಹತ್ತಿರದಲ್ಲಿರುವ ಫಿರ್ಯಾದಿದಾರರ ಕುರಿಹಟ್ಟಿಯಲ್ಲಿರುವ ಅಂದಾಜು 16,000/- ರೂ ಮೌಲ್ಯದ 4 ಕುರಿಗಳು ಹಾಗೂ ಅಂದಾಜು 6,000/- ರೂ ಮೌಲ್ಯದ 1 ಟಗರು ಒಟ್ಟು 22,000/- ರೂ ಮೌಲ್ಯದ ಕುರಿಗಳನ್ನು  ದಿನಾಂಕ : 19-09-2015 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ : 20-09-2015 ರ ಬೆಳಗ್ಗೆ 04-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಾರಣ ಕುರಿಗಳನ್ನು ಹುಡುಕಿ ಕೊಡಲು ಹಾಗೂ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಗಣಕೀಕೃತ ದೂರಿನ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ