Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0075/2015 (CODE OF CRIMINAL PROCEDURE, 1973 U/s 110(E)(G) ) |
18/09/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ದಿನಾಂಕ:18/09/2015 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಆರೋಪಿತನು ಬಂಡಿಮೋಟ್ ನಲ್ಲಿರುವ ಬಾಲಾಜಿ ಚಿಕನ್ ಅಂಗಡಿಯ ಮುಂದೆ ಸಾರ್ವಜನಿಕರನ್ನುದ್ದೇಶಿಸಿ ಮಟಕಾ ಜೂಜಾಟ ಆಡಿರಿ 1 ರೂಗೆ 80 ರೂ ಬರುತ್ತದೆ. ಮಟಕಾ ಜೂಜಾಟ ಆಡಿ ಸಾಹುಕಾರರಾಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟದಲ್ಲಿ ತೊಡಗುವಂತೆ ಪ್ರಚೋದನೆ ಮಾಡುತ್ತಿದ್ದುದರಿಂದ ಆ ವ್ಯಕ್ತಿಯನ್ನು ಹೀಗೆಯೇ ಬಿಟ್ಟಲ್ಲಿ ಈತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಈತನನ್ನು ಮುಂಜಾಗ್ರತೆಗಾಗಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೇನೆ. | |||||||||||||||
Brucepet PS | ||||||||||||||||
2 | Cr.No:0186/2015 (IPC 1860 U/s 00MP ) |
18/09/2015 | Under Investigation | |||||||||||||
MISSING PERSON - Women | ||||||||||||||||
Brief Facts : | ದಿನಾಂಕ: 15/06/15 ರಂದು ಬೆಳಿಗ್ಗೆ 09-00 ಗಂಟೆಯಿಂದ ರಾತ್ರಿ 09-00 ಗಂಟೆಯ ಮದ್ಯದ ಅವದಿಯಲ್ಲಿ ಸೌಮ್ಯಳು ಫೀರ್ಯಾದಿದಾರರ ಮನೆಯಿಂದ ಹೋಗಿದ್ದು, ರಾತ್ರಿ 09-30 ಗಂಟೆಗೆ ಫಿರ್ಯಾದಿದಾರರಿಗೆ ಪೋನ್ ಮಾಡಿ ತಾನು ಕೆ.ಪಂಪಾಪತಿ ಎಂಬಾತನೊಂದಿಗೆ ಹೋಗಿದ್ದು ಮರಳಿ ಬರುವುದಾಗಿ ಹೇಳಿದವಳು ಬರದೆ ದಿನಾಂಕ:17/09/15 ರಂದು ರಾತ್ರಿ 09-31 ಗಂಟೆಗೆ ತನ್ನ ಮೋಬೈಲ್ ನಂ: 9591933780 ನೇದ್ದರಿಂದ ಫಿರ್ಯಾದಿದಾರರು ಮತ್ತು ಫಿರ್ಯಾದಿದಾರರ ಇನ್ನೊಬ್ಬ ತಂಗಿಯ ಮೊಬೈಲ್ ಗೆ "ನನ್ನ ಸಾವಿಗೆ ನನ್ನ ಗಂಡ ಪಂಪಾಪತಿ ಕಾರಣ: ಎಂದು ಮೆಸೇಜ್ ಮಾಡಿದ್ದು, ಈ ಬಗ್ಗೆ ತನ್ನ ತಂಗಿಯನ್ನು ಪತ್ತೆ ಮಾಡಿಕೊಡಲು ನೀಡಿದ ದೂರು. | |||||||||||||||
Cowlbazar PS | ||||||||||||||||
3 | Cr.No:0280/2015 (CODE OF CRIMINAL PROCEDURE, 1973 U/s 109 ) |
18/09/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ 18-09-2015 ರಂದು 4-00 ಗಂಟೆಗೆ ಸಿಬ್ಬಂದಿಯವರೊಂದಿಗೆ ಸೇರಿ ವಿಶೇಷ ಗಸ್ತುಮಾಡುತ್ತಿರುವಾಗ ಬೆಳಗಲ್ ಕ್ರಾಸ್ ನಲ್ಲಿ ಅನುಮಾನ ಸ್ಪದವಾಗಿ ನಿಂತಿದ್ದ 1] ಅರ್ಜುನ್ ಹಾಗೂ 2] ಕರನ್ ರವರನ್ನು ಹಿಡಿದು ವಿಚಾರಿಸಲು ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ. ಇವರನ್ನು ಹಾಗೇ ಬಿಟ್ಗಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ವೆಸಗುವ ಸಂಶಯ ಕಂಡು ಬಂದಿರುವುದರಿಂದ ಸ್ವತ್ತಿನ ಅಪರಾಧಗಳನ್ನು ತಡಗಟ್ಟುವ ನಿಟ್ಟುನಲ್ಲಿ ಮುಂಜಾಗ್ರತಾ ಕ್ರಮಕ್ಕಾಗಿ ಇವರ ವಿರುದ್ದ ಗುನ್ನೆ ದಾಖಲಿಸಿದೆ. | |||||||||||||||
Moka PS | ||||||||||||||||
4 | Cr.No:0138/2015 (IPC 1860 U/s 379 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA MINOR MINERAL CONSISTENT |
18/09/2015 | Under Investigation | |||||||||||||
RULE 1994 U/s 42,43,44 ; KARNATAKA LAND REVENUE(AMENDMENT) ACT-2007 U/s 73,192(a) ) | ||||||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ಈ
ದಿನ ದಿ:18-9-15 ರಂದು ಮದ್ಯಾಹ್ನ 12-45 ಗಂಟೆಗೆ ಎ ಎಸ್ ಐ ಶ್ರೀ.ಅಬ್ದುಲ್ ಗಪೋರ್ ರವರ
ಠಾಣೆಗ ಬಂದು ತಮ್ಮ ವಿಶೇಷ ವರದಿ ಮತ್ತು ತಮ್ಮ ಪಂಚನಾಮೆ ಮತ್ತು ಒಂದು ಲಗೇಜ್ ಆಟೋ ರಿಕ್ಷಾ
ಮತ್ತು ಒಬ್ಬ ಆರೋಪಿಯನ್ನು ಠಾಣೆಯಲ್ಲಿ ಹಾಜರಾಗಿ ಕೊಟ್ಟ ವಿಶೇಷ ವರದಿ ಏನಂದರೇ, ಈ ದಿನ ದಿ:೧೭-೯-೧೫ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀಗಣೇಶ ಹಬ್ಬದ ಪ್ರಯುಕ್ತ ೨ನೇ ಗ್ರಾಮ ಗಸ್ತು ಕರ್ತವ್ಯಕ್ಕೆ ನನ್ನ ಜೊತೆಯಲ್ಲಿ ಹೆಚ್.ಸಿ.೩೨೨ ಶ್ರೀ. ಪಂಪಾಪತಿರವರೊಂದಿಗೆ ನಮ್ಮ ಇಲಾಖೆಯ ಜೀಪ್‌ನಲ್ಲಿ ಹೊರಟು ಹೊಸಮೋಕಾ, ಗೋಟೂರು, ಬಾಣಪುರ,ಕರ್ಚೇಡು ಗ್ರಾಮಕ್ಕೆ ಬೆಳಿಗ್ಗೆ ೧೦-೩೦ ಗಂಟೆಗೆ ಹೋಗಿದ್ದಾಗ ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ ಒಂದು ಲಗೇಜೆ ಆಟೋ ರಿಕ್ಷಾದಲ್ಲಿ ಚಾಲಕ ಮರಳನ್ನು ತುಂಬಿಕೊಂಡು ಕರ್ಚೇಡು ಕ್ರಾಸ್‌ಗೆ ಕಡೆಗೆ ಬರುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ನಾನು ಕೊಡಲೇ ಕರ್ಚೇಡು ಗ್ರಾಮದ ಬಸ್ಸ್ಯಾಂಡ್‌ನಲ್ಲಿದ್ದ ಇಬ್ಬರು ಪಂಚರನ್ನು ನೋಟಿಸ್ ಜಾರಿ ಮಾಡಿ ಪಂಚರಂತ ಹೇಳಿ ಬರಮಾಡಿಕೊಂಡು ವಿಷಯ ತಿಳಿಸಿ ಸದ್ರಿ ಪಂಚರಿಗೆ ದಾಳಿಗೆ ಪಂಚರಾಗಿ ವಿವರವಾದ ಪಂಚನಾಮೆ ಬರೆಯಿಸಿ ಕೊಡಲು ತಿಳಿಸಿ ಕೇಳಿಕೊಂಡ ಮೇರೆಗೆ ಉಭರು ಪಂಚರಾಗ ಒಪ್ಪಿಕೊಂಡರು. ನಂತರ ನಾವು ಮತ್ತು ಪಂಚರು ನಮ್ಮ ಜೀಪ್‌ನಲ್ಲಿ ಬೆಳಿಗ್ಗೆ ೧೦-೪೫ ಗಂಟೆಗೆ ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ ಹೋದಾಗ ಒಂದು ಲಗೇಜ್ ಆಟೋ ರಿಕ್ಷಾದಲ್ಲಿ ಮರಳನ್ನು ತುಂಬಿಕೊಂಡು ನಮ್ಮ ಎದುರಿಗೆ ಹಗರಿಯಲ್ಲಿ ಬರುತ್ತಿರುವಾಗ ಪಂಚರೊಂದಿಗೆ ಬೆಳಿಗ್ಗೆ ೧೧ ಗಂಟೆಗೆ ದಾಳಿ ಮಾಡಲು ಮಾಡಿ ಲಗೇಜ್ ಆಟೋ ರಿಕ್ಷಾ ಚಾಲಕ ಆಟೋ ರಿಕ್ಷಾಯೊಂದಿಗೆ ಸಿಕ್ಕಿದನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ಕೇಳಲು ಅಗಸರ ನಾರಾಯಣೆ ತಂದೆ ಲೇಟ್ ಹನುಮಂತಪ್ಪ ವ:೪೦ವರ್ಷ ಅಗರಸ ಜನಾಂಗ, ಲಗೇಜ್ ಆಟೋ ಚಾಲಕ ವಾಸ: ದುರ್ಗಮ್ಮ ಗುಡಿಯ ಮುಂದೆ ಬೆಣಕಲ್ಲು ಗ್ರಾಮ ಅಂತ ತಿಳಿಸಿದನು. ನಂತರ ಲಗೇಜ್ ಆಟೋ ರಿಕ್ಷಾವನ್ನು ಪರಿಶೀಲಿಸಿ ನೋಡಲು ೧)ಲಗೇಜ್ ಆಟೋ ರಿಕ್ಷಾ ನಂ:ಏಂ೩೫ಖಿಂ೦೨೯೩ ಅಂತ ಇರುತ್ತದೆ. ಮತ್ತು ಇದರಲ್ಲಿ ಮರಳು ತುಂಬಿರುತ್ತದೆ. ಸದ್ರಿ ಅಪಾದಿತನನ್ನು ಈ ಮರಳನ್ನು ಅಲ್ಲೇ ತುಂಬಿದ್ದು ಅಂತ ವಿಚಾರಿಸಲು ಮೇಲ್ಕಂಡ ಲಗೇಜ್ ಆಟೋ ರಿಕ್ಷಾದಲ್ಲಿ ತಾನು ಬೆಳಿಗ್ಗೆ ೧೦ ಗಂಟೆಯಿಂದ ೧೦-೩೦ಗಂಟೆಯವರೆಗೆ ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ ಮರಳನ್ನು ತುಂಬಿರುತ್ತೇನೆ ಅಂತ ತಿಳಿಸಿದನು. ಈ ಪಂಚನಾಮೆಯನ್ನು ಬೆಳಿಗ್ಗೆ ೧೧ ಗಂಟೆಯಿಂದ ಬೆಳಿಗ್ಗೆ ೧೨ಗಂಟೆಯವರೆಗೆ ಮರಳು ತುಂಬಿದ ಕೃತ್ಯ ನಡೆದ ಸ್ಥಳದಲ್ಲಿ & ಮರಳು ತುಂಬಿದ ಲಗೇಜ್ ಆಟೋ ಸಿಕ್ಕ ಸ್ಥಳದಲ್ಲಿ ಮತ್ತು ಜಪ್ತು ಪಂಚನಾಮೆ ಮಾಡಿಕೊಂಡಿದೆ. ಠಾಣೆಗೆ ಮದ್ಯಾಹ್ನ ೧೨-೩೦ ಗಂಟೆಗೆ ಬಂದು ಮೇಲ್ಕಂಡ ಲಗೇಜ್ ಆಟೋ ರಿಕ್ಷಾ ಚಾಲಕ ಮತ್ತು ಮಾಲಿಕನಾದ ಅಗಸರ ನಾರಾಯಣನನ್ನು ಮತ್ತು ಮರಳು ತುಂಬಿದ ಲಗೇಜ್ ಆಟೋ ರಿಕ್ಷಾದ ಮೇಲೆ ಕಾನೂನು ಕ್ರಮ ಜರುಗಿಸಲು ಈ ಎ ಎಸ್ ಐ ಅಬ್ದುಲ್ ಗಪೋರ್ ಎ ಎಸ್ ಐ ರವರು ತಮ್ಮ ವಿಶೇಷ ವರದಿಯನ್ನು ನನಗೆ ನೀಡಿದರಿಂದ ಮೇಲ್ಕಂಡ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. |
|||||||||||||||
Sandur PS | ||||||||||||||||
5 | Cr.No:0147/2015 (IPC 1860 U/s 279,337 ; INDIAN MOTOR VEHICLES ACT, 1988 U/s 187 ) |
18/09/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ 17.09.2015 ರಂದು ರಾತ್ರಿ 11-30 ಗಂಟೆಗೆ ಸಂಡೂರು- ಹೊಸಪೇಟೆ ಮೇನ್ ರಸ್ತೆ ಹೊಸಪೇಟೆ ಬೈಪಾಸ GVR ಪ್ಲಾಟ್ ನ ಬಳಿ ಇರುವ ಗುಡಿಯ ಹತ್ತಿರ ಸುಶೀಲಾನಗರದಿಂದ ಬೈಪಾಸ್ ಬಳಿ ಇರುವ ನಂದಿ ಪೆಟ್ರೋಲ್ ಬಂಕ್ ನಲ್ಲಿ ಡೀಜೆಲ್ ನ್ನು ಹಾಕಿಸಿಕೊಂಡು ಬರಲು ಟಿಂಪರರಿ ನೊಂದಣಿ ಇರುವ ಹೊಸ ಹೀರೊ ಮೋಟಾರ್ ಸೈಕಲ್ ನಲ್ಲಿ ಪಿರ್ಯಾದಿದಾರರು ಹಿಂದೆ ಲಾರಿ ಕ್ಲೀನರ್ ಅಬ್ದುಲ್ ರವರನ್ನು ಕೂಡಿಸಿಕೊಂಡು ಮೋಟಾರ್ ಸೈಕಲ್ ನ್ನು ಸುಶೀಲಾನಗರದಿಂದ ರಸ್ತೆಯ ಎಡ ಪ ಕ್ಕದಲ್ಲಿ ನಡೆಸಿಕೊಂಡು ಹೋಗುವಾಗ್ಗೆ ಎದುರುಗಡೆಯಿಂದ ಸಂಡೂರು ಕಡೆಯಿಂದ ಸುಶೀಲಾನಗರದ ಕಡೆಗೆ ಹೋಗಲು ಟಿಪ್ಪರ್ ಲಾರಿ ನಂಬರ್ K.A.35/A775 ನೇ ದ್ದ ನ್ನು ಅದರ ಚಾಲಕನಾದ ಸುಭಾನಿ ರವರು ಅತಿ ಜೋರಾ ಗಿ ನಿರ್ಲಕ್ಷ್ಯತನದಿಂದ ನಡೆಸಿ ಪಿರ್ಯಾಧಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದ ರಿಂದ ಮೋಟಾರ್ ಸೈಕಲ್ ಜಖಂ ಆಗಿ ಪಿರ್ಯಾದಿದಾರರಿಗೆ ಹಾಗು ಹಿಂದೆ ಕೂತಿದ್ದ ಅಬ್ದುಲ್ ರವರಿಗೆ ತಲೆಗೆ ಕೈ ಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆಂದು ಅಪಗಾತದ ನಂತರ ಅದರ ಚಾಲಕನು ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹಾಗೇ ಹೋಗಿರುತ್ತಾನೆಂದು ದೂರು ಇರುತ್ತದೆ. | |||||||||||||||
Sirigeri PS | ||||||||||||||||
6 | Cr.No:0137/2015 (MMDR (MINES AND MINERALS |
18/09/2015 | Under Investigation | |||||||||||||
REGULATION OF DEVELOPMENT) ACT 1957 U/s 21(1) ; IPC 1860 U/s 379 ) | ||||||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಎಎಸ್ ಐರವರು ದಿನಾಂಕಃ17/09/2015 ರಂದು ರಾತ್ರಿ 11:00ಗಂಟೆಗೆ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಣೇಶ ಹಬ್ಬದ ಪ್ರಯುಕ್ತ ರಾತ್ರಿ ಗಸ್ತುವಿನಲಿದ್ದಾಗ, ಬೆಳಿಗ್ಗೆ 5:30ಗಂಟೆಗೆ ಮಣ್ಣೂರು ಗ್ರಾಮದ ತುಂಗಭದ್ರ ನದಿಯಲ್ಲಿ ಟ್ರಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ಕಳ್ಳ ಸಾಗಾಟ ಮಾಡುತ್ತಿದ್ದಾರೆಂದು ಎಂದು ಖಚಿತ ಮಾಹಿತಿ ಬಂದ ಮೇರೆಗೆ, ನಾನು ಹೆಚ್ಸಿ-46 ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಅವರ ಒಪ್ಪಿಗೆ ಪಡೆದು, ನಾನು ಸಿಬ್ಬಂದಿಗಳಾದ ಹೆಚ್ಸಿ-46 ಪಿಸಿ-124,1162ರವರು ಪಂಚರು ಸೇರಿ ಬೆಳಿಗ್ಗೆ 6:00ಗಂಟೆಗೆ ಮಣ್ಣೂರು ಗ್ರಾಮದ ತುಂಗಭದ್ರ ನದಿ ದಡದಲ್ಲಿ ನಿಂತು ನೋಡಲಾಗಿ ಸದರಿ ನದಿಯಲ್ಲ್ಲಿ ಒಂದು ಟ್ರಾಕ್ಟರ್ ಆಕ್ರಮವಾಗಿ ಮರಳು ತುಂಬಿಕೊಂಡು ನಿಂತಿದ್ದು ಕಂಡುಬಂದಿದ್ದು, ನಾನು ಮತ್ತು ಸಿಬ್ಬಂದಿ ಹೆಚ್ಸಿ-46 ಪಿಸಿ-124,1162ರವರು ಹಾಗೂ ಪಂಚರ ಸಮಕ್ಷಮ ಸದರಿ ನದಿಯಲ್ಲಿ ದಾಳಿ ಮಾಡಲಾಗಿ ಒಂದು ಮರಳು ತುಂಬಿದ ಟ್ರಾಕ್ಟರ್ ಮತ್ತು ಟ್ರಾಲಿ ಸಿಕ್ಕಿಬಿದ್ದಿದ್ದು, ಅದರ ಚಾಲಕ ಸಿಕ್ಕಿಬಿದ್ದಿದ್ದು, ಸದರಿ ಟ್ರಾಕ್ಟರ್ನ್ನು ಪರಿಶೀಲಿಸಲು 1) ಹಸಿರು ಬಣ್ಣದ ಜಾನ್ ಡೀರೆ ಕಂಪನಿಯ ಟ್ರಾಕ್ಟರ್ ಇದ್ದು, ಇದರ ನೊಂದಣಿ ನಂ:ಕೆಎ34/ಟಿ4121, ಎಂದು ಇತ್ತು, ಟ್ರಾಲಿ ನಂ:ಬರೆದಿರುವುದಿಲ್ಲ ಟ್ರಾಲಿಯಲ್ಲಿ ಸುಮಾರು 400/ರೂ ಬೆಲೆ ಬಾಳುವ ಮರಳು ತುಂಬಿತ್ತು, ಸದರಿ ಟ್ರಾಕ್ಟರ್ ಸು 1ಲಕ್ಷರೂ ಬೆಲೆಬಾಳಬಹುದು, ಸದರಿ ಟ್ರಾಕ್ಟರ್ ಚಾಲಕನನ್ನು ವಿಚಾರಿಸಲು ತನ್ನ ಹೆಸರು ಬಸವ ತಂದೆ ದಾನಪ್ಪ, 27ವರ್ಷ, ಕಬ್ಬೇರು ಜನಾಂಗ, ಟ್ರಾಕ್ಟರ್ ಚಾಲಕ, ವಾಸ:ವೀರಾಪುರ ಗ್ರಾಮ, ಎಂದು ತಿಳಿಸಿದನು, ಸದರಿ ಟ್ರಾಕ್ಟರ್ ಚಾಲಕನಿಗೆ ಮರಳು ಸಾಗಾಟ ಮಾಡಲು ಯಾವುದದರೂ ಪರವಾನಗೆ ಇದೆಯೇ ಎಂದು ಕೇಳಲು ಯಾವುದೇ ಪರವಾನಗೆ ಇರುವುದಿಲ್ಲವೆಂದು ತಿಳಿಸಿದನು, ಕಾರಣ ಸದರಿ ಟ್ರಾಕ್ಟರ್ ಚಾಲಕ ಮರಳು ಸಾಗಾಟ ಮಾಡಲು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಸಕರ್ಾರಕ್ಕೆ ರಾಜಧನ ಕಟ್ಟದೆ ನಷ್ಠವನ್ನುಂಟು ಮಾಡಿ ಅಕ್ರಮವಾಗಿ ಸುಮಾರು ರೂ, 400/- ಬೆಲೆ ಬಾಳುವ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಒಂದು ಟ್ರ್ಯಾಕ್ಟ್ರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ ಬೆಳಿಗ್ಗೆ 8:00ಗಂಟೆಗೆ ಬಂದು ಸದರಿ ಚಾಲಕನ ವಿರುದ್ಧ ಕಲಂ: 21(1) ಎಂಎಂಡಿಆರ್ ಕಾಯ್ದೆ ಆಧಾರ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಸೂಚಿಸಿದ ಮರೆಗೆ ಪ್ರಕರಣ ದಾಖಲಿಸಿರುತ್ತದೆ. | |||||||||||||||
ಶುಕ್ರವಾರ, ಸೆಪ್ಟೆಂಬರ್ 18, 2015
PRESS NOTE OF 18/09/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ