ಸೋಮವಾರ, ಸೆಪ್ಟೆಂಬರ್ 14, 2015

PRESS NOTE OF 14/09/2015

Crime Key Report From   To   
Sl. No FIR No FIR Date Crime Group - Crime Head Stage of case
Chittavadagi PS
1 Cr.No:0044/2015
(IPC 1860 U/s 457,380,511 )
14/09/2015 Under Investigation
BURGLARY - NIGHT - At Residential Premises
Brief Facts :  ದಿನಾಂಕ 14-09-2015 ರಂದು ಬೆಳಿಗ್ಗೆ 6-30 ಗಂಟೆಗೆ ಫಿರ್ಯಾದಿದಾರರು ಠಾಣಾ ಸರಹದ್ದಿನಲ್ಲಿ ಗುಡ್ ಮಾರ್ನಿಂಗ್ ಬೀಟ್ ಸಿಬ್ಬಂದಿಯವರನ್ನು ಚೆಕ್ ಮಾಡಲು ಹೋದಾಗ, ಬಸವೇಶ್ವರ ಬಡಾವಣೆಯಲ್ಲಿ ನಿನ್ನೆ ರಾತ್ರಿ ಮನೆಗಳು ಕಳ್ಳತನವಾಗಿರುತ್ತವೆಂದು ತಿಳಿದು ಬಂದ ಮೇರೆಗೆ, ಸದರಿಯವರು ಕೂಡಲೇ ಸಿಬ್ಬಂದಿಯವರೊಂದಿಗೆ ಸದರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ದಿನಾಂಕ 13-09-2015 ರ ರಾತ್ರಿಯಿಂದ ಈ ದಿನ ಬೆಳಗಿನ ಸಮಯದವರೆಗೆ ಮನೆಗೆ ಬೀಗ ಹಾಕಿದ ಮನೆಗಳವರ ಬಾಗಿಲ ಬೀಗ ಒಡೆದು ಯಾರೋ ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ್ದು, ಆದರೆ ಸದರಿ ಘಟನೆಗಳ ಬಗ್ಗೆ ಮನೆಗಳ ಮಾಲೀಕರುಗಳು ದೂರು ನೀಡಲು ಮುಂದೆ ಬಾರದೇಯಿದ್ದುದರಿಂದ ಮತ್ತು ಈ ಕುರಿತು ಸರಹದ್ದಿನಲ್ಲಿ ನಡೆದ ಕಳ್ಳತನದ ಪ್ರಯತ್ನಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಠಿಯಿಂದ ಹಾಗೂ ಈ ರೀತಿಯಾಗಿ ಮನೆ ಬೀಗ ಒಡೆದು ಸ್ವತ್ತಿನ ಅಪರಾಧಗಳನ್ನು ನಡೆಸುವ ವ್ಯಕ್ತಿಗಳ ಪತ್ತೆ ಕುರಿತು ಕ್ರಮ ಜರುಗಿಸಲು ಕೊಟ್ಟ ಜ್ಞಾಪನ ದೂರಿನ ಮೇರೆಗೆ  ಠಾಣೆ ಗುನ್ನೆ ನಂ. 44/2015 ಕಲಂ 457, 380, ರೆ/ವಿ 511 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದೆ.
Hirehadagali PS
2 Cr.No:0163/2015
(INDIAN MOTOR VEHICLES ACT, 1988 U/s 183 ; IPC 1860 U/s 279,337 )
14/09/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ದಿನಾಂಕ 13-09-2015 ರಂದು ಅಮಾವಾಸೆ ಪ್ರಯುಕ್ತ ಶ್ರೀ. ಕುರುವತ್ತಿ ಬಸವೇಶ್ವರ ದೇವರ ದರ್ಶನ ಮಾಡಿಕೊಂಡು ಬರಲು ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂ. ಕೆ.ಎ-01 ಎಕ್ಸ-1254 ನೇದ್ದರಲ್ಲಿ ತಮ್ಮ ಚಿಕ್ಕಮ್ಮ ಈರಮ್ಮ ಹಾಗು ತಮ್ಮ ಅಕ್ಕನ ಮಗಳು 8 ವರ್ಷದ ಚೆನ್ನಮ್ಮಳೊಂದಿಗೆ ತಮ್ಮ ಗ್ರಾಮದಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಿಟ್ಟು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಹೊಳಲಿನಿಂದ ಮೈಲಾರಕ್ಕೆ ಹೋಗುವ ರಸ್ತೆಯಲ್ಲಿ ಸಾಧನಾ ಶಾಲೆ ಹತ್ತಿರ ಹೋಗುವಾಗ ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆ.ಎ-42 ಎಫ್-576 ನೇದ್ದರ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನೇ  ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆಸಿದ್ದರಿಂದ ಫಿರ್ಯಾದಿಗೆ ಬಲಗಾಲ ಮೊಣಕಾಲ ಹತ್ತಿರ, ಎಡ ಚಪ್ಪೆಯ ಹತ್ತಿರ, ಬಲಗೈ ಮುಂಗೈ ಬಲಿ ಪೆಟ್ಟು ಬಿದ್ದು ಒಳನೋವು ಆಗಿದ್ದು, ಹಿಂದೆ ಕುಳಿತಿದ್ದ ಫಿರ್ಯಾದಿಯ ಚಿಕ್ಕಮ್ಮ ಈರಮ್ಮ ರವರಿಗೆ ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದು ಮೂಗು ಮತ್ತು ಎಡಕಿವಿಯಲ್ಲಿ ರಕ್ತ ಬಂದಿದ್ದು, ಹಾಗು ಬಲಭುಜಕ್ಕೆ, ಸೊಂಟಕ್ಕೆ ಒಳಪೆಟ್ಟು ಆಗಿದ್ದು, 8 ವರ್ಷದ ಚೆನ್ನಮ್ಮಳಿಗೆ ಬಲಗಡೆ ತೊಡೆಗೆ, ಸೊಂಟಕ್ಕೆ ಒಳಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಹಾವೇರಿ ಆಸ್ಪತ್ರೆಗೆ ಹೋಗಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾಗಿ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ