Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0388/2015 (KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 ) |
15/09/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ: 15-9-2015 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 15-9-2015 ರಂದು ಬೆಳಿಗ್ಗೆ ಠಾಣೆಯ ಸರಹದ್ದಿನ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಕೆಲವು ಜನರು ಒಂದು ಟ್ರಕ್ಟರ್ ಟ್ರಾಲಿಯಲ್ಲಿ ನಿಲ್ಲಿಸಿಕೊಂಡು ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-119 ಪಿ.ಸಿ-324 ರವರೊಂದಿಗೆ ಇಲಾಖೆಯ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಬೆಳಿಗ್ಗೆ 8-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಮರಳನ್ನು ತುಂಬುತ್ತಿದ್ದ ಜನರು ಟ್ರಾಕ್ಟರ್ ಟ್ರಾಲಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕರು ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದರಿಂದ ಟ್ರಾಕ್ಟರ್ ಚಾಸಿ ಸಂಖ್ಯೆ 39.1340/ಹೆಚ್.ಎಂ005753 ಟ್ರಾಲಿ ನೊಂದಣಿ ಸಂಖ್ಯೆ ಕೆ.ಎ-35-ಟಿ-6100 ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು, ಸ್ಯಾಂಪಲ್ ಮರಳು ತುಂಬಿದ 2 ಚೀಲಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಬಂದಿದ್ದು ಮೇಲ್ಕಂಡವರ ಮೇಲೆ ಕ್ರಮ ಜರುಗಿಸಲು ಕೋರಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. | |||||||||||||||
2 | Cr.No:0389/2015 (KARNATAKA PREVENTION OF DISTRUCTION & LOSS OF PROPERTY ACT 1981 U/s 2(B) ; IPC 1860 U/s 427,143,147,149 ) |
15/09/2015 | Under Investigation | |||||||||||||
KARNATAKA STATE LOCAL ACTS - Other Local Acts | ||||||||||||||||
Brief Facts : | ದಿನಾಂಕ 15-9-2015 ರಂದು ಬೆಳಿಗ್ಗೆ 11-30 ಗಂಟೆಗೆ ಶ್ರೀಮತಿ ವಿ. ನಾಗರತ್ನ ಮುಖ್ಯ ಗುರುಗಳು, ಸಕರ್ಾರಿ ಪ್ರಾಥಮಿಕ ಶಾಲೆ, ಶಂಕರೆಬಂಡೆ ಗ್ರಾಮ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸಾರಾಂಶ: ಶಂಕರ್ ಬಂಡಗ್ರಾಮದ ಲ್ಲಿರುವ ಸುಂಕ್ಲಮ್ಮ ಗುಡಿಯ ಮುಂದುಗಡೆ ಹಳೆಯ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಇದ್ದು ಈ ಶಾಲೆಯ ದಾಖಲಾತಿಗಳು ತಮ್ಮ ಬಳಿ ಇರುತ್ತವೆ. ದಿನಾಂಕ: 3-7-2015 ರಂದು ಬೆಳಿಗ್ಗೆ 11-00 ಗಂಟೆಗೆ ಶಂಕರಬಂಡ ಗ್ರಾಮದ ವಾಸಿಗಳಾದ 1]. ಕರಂಗಿ ವೆಂಕಟೇಶ್ 2]. ಕುರಿ ರಾಜಶೇಖರ್ ಗೌಡ 3]. ಭೀಮಣ್ಣ 4]. ದೊಡ್ಡಬಸಪ್ಪ 5]. ಸಣ್ಣ ಬಸಪ್ಪ 6]. ಉಮಾಪತಿ 7]. ಹಮಾಲಿ ವೆಂಕಟೇಶ್ರವರು ಜೆ.ಸಿ.ಬಿ. ವಾಹನದಿಂದ ಶಂಕರಬಂಡ ಗ್ರಾಮದಲ್ಲಿರುವ ಹಳೇ ಸಕರ್ಾರಿ ಶಾಲೆ ಕಟ್ಟಡವನ್ನು ಕೆಡವಲು ಬಂದಾಗ ತಾನು ಈ ಸಕರ್ಾರಿ ಶಾಲೆ ಕಟ್ಟಡ ತಮ್ಮ ಇಲಾಖೆಗೆ ಸಂಬಂಧಪಟ್ಟಿದ್ದು ಈ ಕಟ್ಟಡದ ದಾಖಲಾತಿಗಳು ತಮ್ಮ ಬಳಿ ಇವೆ ಕಟ್ಟಡವನ್ನು ಕೆಡವ ಬೇಡಿರಿ ಎಂದು ಹೇಳಿದಾಗ ಅವರು ಈ ಕಟ್ಟಡವನ್ನು ಕೆಡವಿ ಇಲ್ಲಿ ಸಮುದಾಯ ಭವನ ಕಟ್ಟಿಸುತ್ತೇವೆ ನಿಮಗೇನು ಸಂಬಂಧ ಇಲ್ಲ ಇದು ಊರಿಗೆ ಸಂಬಂಧಪಟ್ಟಿದ್ದು ಅಂತಾ ಹೇಳಿದಾಗ ತಾನು ಕೆಡವ ಬೇಡಿರಿ ಎಂದು ಎಷ್ಟು ಬೇಡಿಕೊಂಡರು ಈ ಮೇಲ್ಕಂಡ 7 ಜನರು | |||||||||||||||
ಜೆ.ಸಿ.ಬಿ. ವಾಹನದಿಂದ ಈ ಶಾಲೆಯ ಮೂರು ಕೋಣೆಗಳನ್ನು ತನ್ನ ಮುಂದೆಯೇ ಕೆಡವಿ ಇಲಾಖೆಗೆ ಅಂದಾಜು ರೂ: 7,50,000/- ನಷ್ಟವನ್ನುಂಟು ಮಾಡಿರುತ್ತಾರೆಂದು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ. | ||||||||||||||||
Chittavadagi PS | ||||||||||||||||
3 | Cr.No:0046/2015 (CODE OF CRIMINAL PROCEDURE, 1973 U/s 109 ) |
15/09/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ 15/09/2015 ರಂದು ಬೆಳಗಿನ ಜಾವ 5-30 ಗಂಟೆಗೆ ನಾನು, ಹೆಚ್.ಸಿ. 96 ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗುಡ್ ಮಾರ್ನಿಂಗ್ ಬೀಟ್ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಗಸ್ತು ಮಾಡುತ್ತಾ ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಬಸವೇಶ್ವರ ಬಡಾವಣೆಯ ಸಪ್ತಗಿರಿ ಶಾಲೆಯ ಹತ್ತಿರ ಇರುವ ಬಸವರಾಜಪ್ಪ ಮನೆಯ ಹತ್ತಿರ ಬಂದಾಗ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ತನ್ನ ಮುಖವನ್ನು ತನ್ನಷ್ಟಕ್ಕೆ ತಾನೇ ಮರೆಮಾಚಿಕೊಂಡು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ಹೆಸರು ವಿಳಾಸ ಹಾಗೂ ಈ ವೇಳೆಯಲ್ಲಿ ಈ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಲು ಸರಿಯಾದ ಉತ್ತರ ನೀಡದೆ ಇದ್ದುದರಿಂದ ಸದರಿಯವನು ಯಾವುದಾದರೂ ಸ್ವತ್ತಿಗೆ ಸಂಬಂದಿಸಿದ ಅಪರಾಧ ಮಾಡಬಹುದೆಂದು ಶಂಕಿಸಿ ಮುಂಜಾಗ್ರತ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ವಾಪಾಸ್ ಠಾಣೆಗೆ ಬಂದು ಸದ್ರಿ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದೆ. | |||||||||||||||
Gadiganur PS | ||||||||||||||||
4 | Cr.No:0095/2015 (CODE OF CRIMINAL PROCEDURE, 1973 U/s 109 ) |
15/09/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ: 14.09.2015 ರಂದು ರಾತ್ರಿ 11:00 ಗಂಟೆಗೆ ಎ.ಎಸ್.ಐ. ರವರು ಪಿಸಿ.20 ರವರೊಂದಿಗೆ ಸರ್ಕಾರಿ ಮೋಟಾರ್ ಸೈಕಲ್ ನಂ. ಕೆ.ಎ.34/ಜಿ.424 ರಲ್ಲಿ 2ನೇಸೆಕ್ಟರ್ ರಾತ್ರಿ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಪಿ.ಕೆ.ಹಳ್ಳಿಯಿಂದ ಕುರೇಕುಪ್ಪ ಕ್ರಾಸ್ ವರೆಗೂ ಎನ್.ಹೆಚ್.63 ರಸ್ತೆಯಲ್ಲಿ ತಿರುಗುತ್ತಿರುವಾಗ್ಗೆ ಈ ದಿನ ದಿನಾಂಕ:15.09.2015 ರಂದು ಬೆಳಗಿನ ಜಾವ 3:00 ಗಂಟೆ ಸುಮಾರಿಗೆ ಭುವನಹಳ್ಳಿ ಗ್ರಾಮದ ಸಮೀಪವಿರುವ ಎನ್.ಎಚ್.63 ರಸ್ತೆಯ ಪಕ್ಕದಲ್ಲಿರುವ ಗಣೇಶ ದಾಬಾ ಹೋಟೆಲ್ ಮುಂದುಗಡೆ ಲೈಟ್ ಬೆಳಕಿನಲ್ಲಿ 4 ಜನರು ನಿಂತಿದ್ದನ್ನು ನೋಡಲು. ಅವರು ಪೊಲೀಸ್ ಬೈಕ್‌ನ್ನು ನೋಡಿ ತಮ್ಮ ಇರುವಿಕೆಯನ್ನು ಮರೆಮಾಚಿಕೊಂಡಿದ್ದರಿಂದ, ಸದರಿ ದಾಬಾದ ಹೋಟೆಲ್ ಮುಂದುಗಡೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗಳ ಹಿಂದುಗಡೆ ಕತ್ತಲಲ್ಲಿ ಓಡಿ ಹೋಗಿ ಅವಿತುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ್ಗೆ ಎ.ಎಸ್.ಐ ಮತ್ತು ಪಿಸಿ.20 ರವರು. ಕೂಡಲೇ ಮೋಟಾರ್ ಸೈಕಲ್‌ನ್ನು ನಿಲ್ಲಿಸಿ ಇಳಿದು ಓಡಿ ಹೋಗಿ ಹಿಂಬಾಲಿಸಿ ಅವರನ್ನು ಹಿಡಿದು ಕೊಂಡು ಗಣೇಶ ಲಕ್ಮಿ ದಾಬಾದ ಮುಂದಿನ ವಿದ್ಯುತ್ ದೀಪದ ಬೆಳಕಿನಲ್ಲಿ ಕರೆದುಕೊಂಡು ಹೋಗಿ ಅವರ ಹೆಸರು ವಿಳಾಸ ವಿಚಾರಿಸಲು, ತಮ್ಮ ಹೆಸರುಗಳನ್ನು ಸರಿಯಾಗಿ ಹೇಳದೆ, ತಮ್ಮ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೆ ಇದ್ದುದರಿಂದ ಮತ್ತು ಅವರು ಯಾವುದಾದದರೂ ಸಂಜ್ಞೇಯ ಅಪರಾಧ ಮಾಡಬಹುದೆಂದು ಅನುಮಾನ ಕಂಡು ಬಂದಿದ್ದರಿಂದಲೂ ಮತ್ತು ಇತ್ತೀಚಿಗೆ ಕುರೇಕುಪ್ಪ ಗ್ರಾಮದಲ್ಲಿ ಮನೆ ಕಳವು ಪ್ರಕರಣಗಳು ನಡೆದಿದ್ದು ಇದುವರೆವಿಗೂ ಕಳುವಾದ ಮಾಲು ಮತ್ತು ಕಳ್ಳರು ಪತ್ತೆಯಾಗಿರುವುದಿಲ್ಲವಾದ್ದರಿಂದ ಇವರುಗಳ ಮೇಲೆ ಸಾಕಷ್ಟು ಸಂಶಯ ಕಂಡುಬಂದ ಕಾರಣ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ವಿಚಾರಿಸಲಾಗಿ ತಮ್ಮ ಹೆಸರು, ವಿಳಾವನ್ನ ಸರಿಯಗಿ ಹೇಳದೇ ಸದರಿಯವರು ಅಪರಾತ್ರಿ ವೇಳೆಯಲ್ಲಿ ತಮ್ಮ ಇರುವಿಕೆಯನ್ನು ಮರೆಮಾಚಿಕೊಂಡಿದ್ದರಿಂದ ಮತ್ತು ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಇವರನ್ನು ಅಲ್ಲಿಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಈ ದಿನ ದಿನಾಂಕ: 15.09.2015 ರಂದು ಬೆಳಗಿನಜಾವ 03:45 ಗಂಟೆಗೆ ಠಾಣೆಗೆ ಕರೆತಂದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ವಿಶೇಷ ವರದಿಯನ್ನು ನೀಡಿದ್ದರ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ | |||||||||||||||
Gudekote PS | ||||||||||||||||
5 | Cr.No:0106/2015 (KARNATAKA MINOR MINERAL CONSISTENT RULE 1994 U/s 42,43 ; MMDR (MINES AND MINERALS REGULATION OF DEVELOPMENT) ACT 1957 U/s |
15/09/2015 | Under Investigation | |||||||||||||
4(1),4(1A),21 ; IPC 1860 U/s 379 ) | ||||||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ 15/09/2015 ರಂದು ರಾತ್ರಿ ಸುಮಾರು 02-45 ಗಂಟೆ ಸಮಯದಲ್ಲಿ ಗುಡೇಕೋಟೆ ಠಾಣೆ ಸರಹದ್ದಿನ ಸಿ ಎಸ್ ಪುರ ಗ್ರಾಮದ ಬಸವೇಶ್ವರ ಇವರ ತೋಟದ ಹತ್ತಿರ ಇರುವ ಹಳ್ಳದಲ್ಲಿ ಈ ಮೇಲ್ಕಂಡ ಆರೋಪಿತರು ಸರಕಾರದಿಂದ ಯಾವುದೇ ಅಧಿಕೃತ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುವ ಸಲುವಾಗಿ ಅಂದಾಜು 4000/- ರೂ ಬೆಲೆ ಬಾಳುವ ಅಂದಾಜು 06 ಟನ್ ತೂಕದಷ್ಟು ನೈಸರ್ಗಿಕ ಖನಿಜವಾದ ಮರಳನ್ನು 1) ಸೋನಾಲಿಕ್ ಇಂಟರ್ ನ್ಯಾಷನಲ್ ಡಿ ಎಲ್ 740 ಟ್ಯಾಕ್ಟರ್ ಇಂಜಿನ್ ನಂಬರ್ ಡಿ 75931 ಹಾಗೂ ನೀಲಿ ಬಣ್ಣದ ಟ್ರ್ಯಾಲಿ ನಂಬರ್ ವಗೈರೆ ಇರುವುದಿಲ್ಲ , 2) ಮಹೀಂದ್ರ 575 ಡಿಐ ಟ್ಯಾಕ್ಟರ್ ಇಂಜಿನ್ ನಂಬರ್ ಎನ್ ಕೆ ಬಿ ಸಿ 00266 ನೇದ್ದವುಗಳಲ್ಲಿ ಒಂದೊಂದರಲ್ಲಿ ತಲಾ 03 ಟನ್ ಸಾದಾ ಮರಳನ್ನು ಲೋಡ್ ಮಾಡುತ್ತಿದ್ದಾಗ ಎ ಎಸ್ ಐ (ವಿ) ರವರಿಗೆ ಬಂದ ಮಾಹಿತಿ ಮೇರಿಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಬೆಳಿಗ್ಗೆ 06-00 ಗಂಟೆಗೆ ಠಾಣೆಗೆ ಹಿಂತಿರುಗಿ ಬಂದು ಜಪ್ತು ಮಾಡಿಕೊಂಡು ಬಂದ ಮರಳು ಲೋಡ್ ಮಾಡಿದ ಟ್ಯಾಕ್ಟರ್ ಗಳನ್ನು ಹಾಗೂ ಪಂಚನಾಮವನ್ನು ಒಪ್ಪಿಸಿ ಕ್ರಮ ಜರುಗಿಸುವಂತೆ ನೀಡಿದ ವಿಶೇಷ ವರದಿ ಮೇರಿಗೆ ಈ ಪ್ರಕರಣ ದಾಖಲಿಸಿರುತ್ತದೆ. | |||||||||||||||
Hospet Town PS | ||||||||||||||||
6 | Cr.No:0181/2015 (KARNATAKA POLICE ACT, 1963 U/s 78(3) ) |
15/09/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 15/09/2015 ರಂದು ಮಧ್ಯಾಹ್ನ 3-15 ಗಂಟೆಗೆ ಶ್ರೀ ಡಿ. ಶ್ರೀಧರ್, ಪಿ.ಐ ರವರು ಠಾಣೆಗೆ ಹಾಜರಾಗಿ ತಮ್ಮ ದೂರು, ದೂರಿನೊಂದಿಗೆ ಪಂಚನಾಮೆ, ಪಂಚನಾಮೆಯಲ್ಲಿ ನಮೂದು ಮಾಡಿ ಮುದ್ದೇಮಾಲು ಮತ್ತು ಆರೋಪಿತರನ್ನು ಹಾಜರುಪಡಿಸಿದ್ದು, ದೂರು ಸಾರಾಂಶ ಪಿ.ಐ ರವರಿಗೆ ಬಂದ ಮಾಹಿತಿ ಮೇರೆಗೆ ಹೆಚ್.ಸಿ-37, ಪಿಸಿ-19,497,968,861 ರವರೊಂದಿಗೆ ಮತ್ತು ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯ ಜೀಪ್ ನಂ: ಕೆಎ-34/ಜಿ-532 ನೇದ್ದರಲ್ಲಿ ಜೀಪ್ ಚಾಲಕ ಎ.ಪಿ.ಸಿ-138 ರವರೊಂದಿಗೆ ಹೊಸಪೇಟೆ ನಗರದ ಚಿತ್ರಕೇರಿಯ ಭೂಪಾಲ್ ಜನರಲ್ ಸ್ಟೋರ್ ಮುಂದೆ ನಡೆಯುತ್ತಿದ್ದ ಮಟ್ಕಾ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿ 1) ಎ.ಹೆಚ್.ನಾಗರಾಜ ತಂದೆ ಕೆಂಡಪ್ಪ, ವಯಸ್ಸು 55 ವರ್ಷ, ಮಡಿವಾಳರು ಜನಾಂಗ, ವಾಸ|| 18ನೇ ವಾರ್ಡ್, ಅಗಸರಪೇಟೆ, ಅಂಭಾಭವಾನಿ ಗುಡಿ ಹತ್ತಿರ, ಹೊಸಪೇಟೆ 2) ಸಿ.ಮಾರುತಿ ತಂದೆ ಭರ್ಮಪ್ಪ, ವಯಸ್ಸು 23 ವರ್ಷ, ಕುರುಬರು ಜನಾಂಗ, ವಾಸ|| 32ನೇ ವಾರ್ಡ್, ತಳವಾರಕೇರಿ, ಕೋಟೆ ಬಾವಿ, ಹೊಸಪೇಟೆ 3) ಕಣಿಮೆಪ್ಪ ತಂದೆ ಭೀಮಪ್ಪ, ವಯಸ್ಸು 34 ವರ್ಷ, ನಾಯಕರು ಜನಾಂಗ, ವಾಸ|| ಗರಡಿ ಮನೆಯ ಹತ್ತಿರ, ಮ್ಯಾಸಕೇರಿ, ಹೊಸಪೇಟೆ ರವರುಗಳನ್ನು ಹಿಡಿದುಕೊಂಡಿದ್ದು, ಇನ್ನೊಬ್ಬ 4) ಪರಸ@ಪರಶುರಾಮ ಈತನು ಓಡಿ ಹೋಗಿದ್ದು, ಸದರಿ ಮೇಲ್ಕಂಡ ಮೂರು ಜನರ ಹತ್ತಿರ ಇದ್ದ ನಗದು ಹಣ ರೂ.5010/- ಗಳನ್ನು, 2 ಬಾಲ್ ಪೆನ್ ಹಾಗೂ 2 ಮಟ್ಕಾ ಚೀಟಿಗಳನ್ನು ಹಾಗೂ 2 ಮೊಬೈಲ್ ಗಳು, ಬೆಲೆ ರೂ,150/- ಬಾಳುವುಗಳನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಮುದ್ದೆಮಾಲುಗಳ ಸಮೇತ ಮತ್ತು ಆರೋಪಿ ಸಮೇತ ವಾಪಾಸ್ ಠಾಣೆಗೆ ಬಂದು ಸದರಿ ಇವರುಗಳ ವಿರುದ್ದ ಕ್ರಮ ಜರುಗಿಸಲು ಇದ್ದ ದೂರು ಸಾರಾಂಶದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ. | |||||||||||||||
Kampli PS | ||||||||||||||||
7 | Cr.No:0118/2015 (KARNATAKA POLICE ACT, 1963 U/s 78 (1)(A)(i) ; PREVENTION OF CRUELTY TO ANIMALS ACT, 1960 U/s 11(1) (A) ) |
15/09/2015 | Under Investigation | |||||||||||||
ANIMAL - Prevention Of Cruelty To Animals Act 1960 | ||||||||||||||||
Brief Facts : | ದಿನಾಂಕ: 13/09/2015ರಂದು ಮದ್ಯಾಹ್ನ 3ಗಂಟೆಗೆ ಮಾನ್ಯ ಪಿ ಎಸ್ ಐ ರವರು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿನ ಕೆ ಎನ್ ಕ್ಯಾಂಪ್ ನ ಎಸ್ ಸಿ ಕಾಲೋನಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಂಚರು & ಸಿಬ್ಬಂದಿ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲು 11ಜನ ಆರೋಪಿತರು ಕೋಳಿಗಳ ಉಗುರುಗಳನ್ನು ಚೂಪಾಗಿ ಮಾಡಿ, 02ಕೋಳಿಗಳನ್ನು ಒಂದೊಕ್ಕೊಂದು ಕಾದಾಡಲು ಬಿಟ್ಟು ಅವುಗಳಿಗೆ ಹಿಂಸೆ ನೀಡುತ್ತಾ & ಎರೆಡು ಕೋಳಿಗಳಲ್ಲಿ ಯಾವುದು ಗೆಲ್ಲುತ್ತದೆಂದು ಹಣವನ್ನು ಪಣಕ್ಕೆ ಕಟ್ಟಿ ನಸೀಬಿನ ಕೋಳಿ ಜೂಜಾಟದಲ್ಲಿ ತೊಡಗಿದ್ದನ್ನು ಕಂಡು ಸಂಜೆ 5.30ಗಂಟೆಗೆ ಆರೋಪಿತರ ಮೇಲೆ ಧಾಳಿ ಮಾಡಿ ಆರೋಪಿತರಿಂದ ಕೋಳಿ ಜೂಜಾಟಕ್ಕೆ ಬಳಸಿದ 1) ರೂ 13900/- ನಗದು ಹಣ 2) ರೂ 300/- ಬೆಲೆಯ ಒಟ್ಟು 8ಕೋಳಿಗಳು ಒಟ್ಟು ಬೆಲೆ ರೂ 2400/- 3) ಮೋಟಾರ್ ಸೈಕಲ್ ನಂ ಕೆಎ34/ಇಡಿ6499 ಇದರ ಬೆಲೆ ರೂ 25000/-ನೇದ್ದವುಗಳನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಮೇಲ್ಕಂಡ ಆರೋಪಿತರನ್ನು ಹಾಗೂ ಮೇಲ್ಕಂಡ ಮಾಲಿನೊಂದಿಗೆ ಠಾಣೆಗೆ ಬಂದು ಮೇಲ್ಕಂಡ 11ಜನರ ಆರೋಪಿತರ ಹಾಗೂ | |||||||||||||||
ಇತರರ ವಿರುದ್ದ ಪ್ರಕರಣ ದಾಖಲಿಸಲು ನೀಡಿದ ದುರಿನ ಮೇರೆಗೆ ಠಾಣಾ ಎನ್ ಸಿ ನಂ 17/2015 ಕಲಂ 78(1) (ಎ) (1) ಕೆ ಪಿ ಯಾಕ್ಟ್ ಹಾಗೂ ಕಲಂ 11(1) (ಎ) ಪ್ರಿವೆನ್ಷನ್ ಆಪ್ ಕ್ರ್ಯೂಯಾಲಿಟಿ ಟು ಅನಿಮಲ್ ಯಾಕ್ಟ್ - 1960ರೀತ್ಯಾ ಪ್ರಕರಣ ದಾಕಲಿಸಿಕೊಂಡಿದ್ದು ಈ ದಿನ ಮಾನ್ಯ ನ್ಯಾಯಾಲಯದ ಅನುಮತಿ ಮೇರೆಗೆ ಪ್ರ.ವ ವರಧಿಯನ್ನು ದಾಖಲಿಸಿದೆ. | ||||||||||||||||
Kottur PS | ||||||||||||||||
8 | Cr.No:0121/2015 (IPC 1860 U/s 506,34,498A,504,323,354 ) |
15/09/2015 | Under Investigation | |||||||||||||
CRUELTY BY HUSBAND - Husband And Relative(S) In Law | ||||||||||||||||
Brief Facts : | ದಿನಾಂಕ 15-09-2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ದೂರು ಸಾರಾಂಶ, ಈಗ್ಗೆ 2 ವರ್ಷಗಳ ಹಿಂದೆ ತನಗೆ ಹರಾಳು ಗ್ರಾಮದ ವಾಸಿ ಮತ್ತಿಹಳ್ಳಿ ದುರುಗಪ್ಪ ಎಂಬುವವರಿಗೆ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿದ್ದು, ಗಂಡನ ಮನೆಯಲ್ಲಿ ಗಂಡ ಮತ್ತು ಅತ್ತೆ, ನಾದಿನಿ ಈ 3 ಜನ ಸ್ವಲ್ಪ ದಿನ ಒಳ್ಳೆಯ ರೀತಿಯಿಂದ ಬಾಳುವೆ ಮಾಡಿಸಿಕೊಂಡು ತಾನು ಗರ್ಭಿಣಿ ಆದ ನಂತರ ಮಾನಸಿಕಿ ಮತ್ತು ದೈಹಿಕ ಹಿಂಸೆ ನೀಡಿ ತವರು ಮನೆಗೆ ಕಳಿಸಿದ್ದು ನಂತರ ತನಗೆ ಗಂಡು ಮಗು ಜನನವಾದ ನಂತರ 2-3 ಬಾರಿ ಗಂಡ ದುರುಗಪ್ಪ ತವರು ಮನೆಗೆ ಬಂದು ದುರ್ಭಾಷೆಗಳಿಂದ ಬೈದು ಹೊಡೆ ಬಡೆ ಮಾಡಿ ಹೋಗಿದ್ದು ದಿನಾಂಕ 14-09-2015 ರಂದು ರಾತ್ರಿ 8-00 ಗಂಟೆಗೆ ಪುನಃ ಮೇಲ್ಕಂಡ 3 ಜನರು ತವರು ಮನೆಗೆ ಬಂದು ತನ್ನ ಗಂಡ ಕೂದಲು ಹಿಡಿದು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಾಗ ಅತ್ತೆ ಮತ್ತು ನಾದಿನಿ ಕೈ ಕಾಲುಗಳಿಂದ ಹೊಡೆದಿರುತ್ತಾರೆ, ಈ ಬಗ್ಗೆ ಕ್ರಮ ಜರುಗಿಸಲು ಇದ್ದ ದೂರು ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Kudligi PS | ||||||||||||||||
9 | Cr.No:0159/2015 (IPC 1860 U/s 279,337,338 ; INDIAN MOTOR VEHICLES ACT, 1988 U/s 183 ) |
15/09/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಈ ದಿನ ದಿನಾಂಕ 15/09/2015 ರಂದು ಮದ್ಯಾಹ್ನ 1-00 ಗಂಟೆಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಎಂ.ಎಲ್.ಸಿ ಮಾಹಿತಿ ಮೇರೆಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳುವಿನ ಹೇಳಿಕೆಯನ್ನು ಮದ್ಯಾಹ್ನ 1-15 ಗಂಟೆಯಿಂದ 1-50 ಗಂಟೆಯ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ ಮದ್ಯಾಹ್ನ 2-00 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶದಲ್ಲಿ ಪಿರ್ಯಾದುದಾರರು ಮತ್ತು ಆರೋಪಿಯು ಮೋಟಾರ್ ಸೈಕಲ್ ನಂಬರ್ ಕೆ.ಎ 35 ಯು 7355 ನೇದ್ದದ್ದರಲ್ಲಿ ಗೋವಿಂದಗಿರಿ ಗೊಲ್ಲರಹಟ್ಟಿಗೆ ಸಂಭಂದಕರನ್ನು ಹಬ್ಬಕ್ಕೆ ಕರೆಯಲೆಂದು ಹೋಗಿದ್ದು ಮರಳಿ ಕೂಡ್ಲಿಗಿ ಕಡೆಗೆ ಬರುತ್ತಿರುವಾಗ ಆರೋಪಿಯು ಮೋಟಾರ್ ಸೈಕಲ್ ಅನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೂಡ್ಲಿಗಿ ಹತ್ತಿರದ ಮಲ್ಲನಾಯಕನಕಟ್ಟೆಯ ಕ್ರಾಸ್ ಬಳಿ ತಗ್ಗಿನಲ್ಲಿ ಮೋಟಾರ್ ಸೈಕಲ್ ಹಿಡಿತ ತಪ್ಪಿ ಬಿಳಿಸಿದ್ದರಿಂದ ಮೋಟಾರ್ ಸೈಕಲ್ ಸಮೇತ ತಿರುವಿನ ತಗ್ಗಿನಲ್ಲಿ ಬಿದ್ದ ಪಿರ್ಯಾದುದಾರರಿಗೆ ಬಲ ಮೊಣಕಾಲಿಗೆ ರಕ್ತಗಾಯ. ಬಲ ಹಣೆಗೆ ರಕ್ತಗಾಯ, ಮೂಗಿಗೆ ರಕ್ತಗಾಯವಾಗಿದ್ದು ಆರೋಪಿಗೆ ಎಡ ಕಣ್ಣಿನ ಹತ್ತಿರ ಬಲವಾದ ರಕ್ತಗಾಯ, ಎಡ ಕಪಾಳಕ್ಕೆ ಹಾಗು ಇತರ ಕಡೆಗಳಲ್ಲಿ ರಕ್ತಗಾಯ ಮತ್ತು ಒಳ ಪೆಟ್ಟುಗಳಾಗಿರುತ್ತವೆಂದು ಪಿರ್ಯಾದುದಾರರು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Kurugod PS | ||||||||||||||||
10 | Cr.No:0156/2015 (IPC 1860 U/s 380,457 ) |
15/09/2015 | Under Investigation | |||||||||||||
BURGLARY - NIGHT - At Residential Premises | ||||||||||||||||
Brief Facts : | ಪಿರ್ಯಾದಿದಾರರು ದಿನಾಂಕ 14/09/2015 ರಂದು ಬೆಳಿಗ್ಗೆಯಿಂದ ಹಣ್ಣಗಳನ್ನು ಮಾರಾಟ ಮಾಡಿ ಉಳಿದ ಹಣ್ಣನ್ನು ಮತ್ತು ನಗದು ಹಣ 2200/- ರೂ.ಗಳನ್ನು ರಾತ್ರಿ 8:00 ಗಂಟೆಗೆ ಗೋಡಾನ್ನಲ್ಲಿಟ್ಟು ಗೋಡಾನ್ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ದಿನಾಂಕ: 15/09/2015 ರಂದು ಬೆಳಿಗ್ಗೆ 8:00 ಗಂಟೆಗೆ ಗೋಡಾನ್ ಗೆ ಹೋದಾಗ ಗೋಡಾನ್ನ ಬಾಗಿಲಿಗೆ ಹಾಕಿದ ಬೀಗದ ಪತ್ತವನ್ನು ಯಾರೋ ಕಳ್ಳರು ಕಲ್ಲಿನಿಂದ ಜಜ್ಜಿ ಗೋಡಾನ್ನಲ್ಲಿಟ್ಟಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿಸಾಡಿ, ಒಂದು ಪ್ರೈಡ್ ಕಂಪನಿಯ ಮಿಕ್ಸಿ ಇದರ ಅಂದಾಜು ಬೆಲೆ 2800/- ರೂ.ಗಳು, ಮತ್ತೊಂದು ಸುಮೋ ಕಂಪನಿಯ ಮಿಕ್ಸಿ ಇದ್ದು ಇದರ ಅಂದಾಜು ಬೆಲೆ 3200/- ರೂ.ಗಳು, ಮತ್ತು ವಿ-ಗಾರ್ಡ ಕಂಪನಿಯ ಯುಪಿಎಸ್ ಬ್ಯಾಟರಿ ಇದರ ಅಂದಾಜು ಬೆಲೆ 3500/-ರೂ, ಗಳು, ಹಾಗೂ ನಗದು ಹಣ 2200/-ರ.ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಾರಣ ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಇದರೊಂದಿಗೆ ಪಿರ್ಯಾದಿದಾರರು ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ. | |||||||||||||||
Moka PS | ||||||||||||||||
11 | Cr.No:0136/2015 (CODE OF |
15/09/2015 | Under Investigation | |||||||||||||
CRIMINAL PROCEDURE, 1973 U/s 109 ) | ||||||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ:೧೪-೯-೧೫ ರಂದು ರಾತ್ರಿ ರೂರಲ್ ಸೇಕ್ಟರ್ ಕರ್ತವ್ಯಕ್ಕೆ ನಾನು ಮತ್ತು ಹೆಚ್.ಸಿ.೨೩೩ ಶ್ರೀ.ದೇವೇಂದ್ರ ರವರೊಂದಿಗೆ ನಮ್ಮ ಇಲಾಖೆ ವಾಹನದಲ್ಲಿ ರಾತ್ರಿ ೧೦ ಗಂಟೆಗೆ ಠಾಣೆಯನ್ನು ಬಿಟ್ಟು ಗೋಟೂರು,ವಣೇನೂರು, ಕರ್ಚೇಡು, ಬಸರಕೋಡು, ಹಡ್ಲಿಗಿ ಚಾನಾಲ್ ಕ್ರಾಸ್ ಮೂಖಾಂತರ ಹಂದಿಹಾಳ್ ಗ್ರಾಮಕ್ಕೆ ದಿನಾಂಕ:೧೫-೯-೧೫ ರಂದು ಬೆಳಗಿನ ಜಾವ ೩-೦೦ ಗಂಟೆಗೆ ಹಂದಿಹಾಳ್ ಗ್ರಾಮದ ಶಿವಪ್ಪ ತಾತಾನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮ್ಮ ಪೊಲೀಸ್ ಜೀಪ್‌ನ್ನು ನೋಡಿದ ಒಬ್ಬ ವ್ಯಕ್ತಿ ತನ್ನ ಇರುವಿಕೆಯನ್ನು ಮರೆ ಮಾಚಿಕೊಂಡು ಕತ್ತಲಲ್ಲಿ ಓಡಿ ಹೋಗಲು ಪ್ರಯತ್ನಿಸಿದಾಗ ತಕ್ಷಣ ನಾನು ಮತ್ತು ಹೆಚ್.ಸಿ. ೨೩೩ ರವರು ಜೀಪ್‌ನಿಂದ ಇಳಿದು ಓಡಿ ಹೋಗುತ್ತಿದ್ದವನಿಗೆ ಸುತ್ತುವರೆದು ಹಿಡಿದುಕೊಂಡು ಆತನ ಹೆಸರು ಕೇಳಲು ಆತನು ಸರಿಯಾಗಿ ಮಾತನಾಡದೇ ತೊದಲುತ್ತಿದ್ದು, ಆತನಿಗೆ ಬೆಳಿಕಿನ ಕಡೆ ಕರೆ ತಂದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಮಸ್ತನ್‌ವಲಿ@ಮಸ್ತನ್ ತಂದೆ ಲೇಟ್ ಹೊನ್ನೂರ ಸಾಬ್ ವ:೪೦ವರ್ಷ,ಮುಸ್ಲಿಂ ಜನಾಂಗ, ಗುಜ್ಜರಿ ವ್ಯಾಪರ ವಾಸ:ಜಾಗೃತಿ ನಗರ ಗೈಯುಬ್ ಗುಜ್ಜರಿ ಹತ್ತಿರ & ಜಮ್ಮ ಮಸೀದಿ ಹತ್ತಿರ ಬಳ್ಳಾರಿ ಅಂತಾ ತಿಳಿಸಿದ್ದು, ರಾತ್ರಿ ವೇಳೆಯಲ್ಲಿ ನಮ್ಮನ್ನು ನೋಡಿ ಓಡಿ ಹೋಗಲು ಕಾರಣ ಏನು? ಅಪರಾತ್ರಿ ವೇಳೆಯಲ್ಲಿ ಸದರಿ ಸ್ಥಳದಲ್ಲಿ ಹಾಜರ್ ಇರುವ ಬಗ್ಗೆ ವಿಚಾರಿಸಲು ಸದರಿಯವನು ಸರಿಯಾಗಿ ಉತ್ತರ ನೀಡದೇ ಇದ್ದು, ಸದರಿ ವ್ಯಕ್ತಿಯನ್ನು ಸ್ಥಳದಲ್ಲಿಯೇ ಬಿಟ್ಟರೆ ರಾತ್ರಿ ವೇಳೆಯಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಇದೆ ಎಂದು ಅನುಮಾನ ಬಂದು ಮಂಜಾಗ್ರತೆ ಕ್ರಮಕ್ಕಾಗಿ ಸದರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಾಪಾಸ್ಸು ಠಾಣೆಗೆ ಬೆಳಿಗಿನ ಜಾವ ೪-೩೦ ಗಂಟೆಗೆ ಠಾಣೆಗೆ ಬಂದು ಸರಕಾರದ ಪರವಾಗಿ ನಾನು ಪಿರ‍್ಯಾದಿದಾರನಾಗಿ ಠಾಣೆಯ ಗುನ್ನೆ ನಂಬರ್ ೧೩೬-೧೫ ಕಲಂ ೧೦೯ ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೇನೆ. | |||||||||||||||
Sandur PS | ||||||||||||||||
12 | Cr.No:0143/2015 (IPC 1860 U/s 506,498A ; DOWRY PROHIBITION ACT, 1961 U/s 3,4 ) |
15/09/2015 | Under Investigation | |||||||||||||
CRUELTY BY HUSBAND - Dowry Harasement | ||||||||||||||||
Brief Facts : | ಫಿರ್ಯಾದಿದಾರರು ಈದಿನ ದಿನಾಂಕ : 15-09-2015 ರಂದು ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರ್ ಮುದ್ರಿತ ದೂರನ್ನು ಸ್ವೀಕರಿಸಿ, ಸಾರಾಂಶವು:- ನಮ್ಮ ತಂದೆ ತಾಯಿಗೆ ನಾವು 3 ಹೆಣ್ಣು ಮಕ್ಕಳು ಒಬ್ಬನೇ ಗಂಡು ಮಗನಿದ್ದು ಅವರಲ್ಲಿ [1] ವರಲಕ್ಷ್ಮಿ [2] ಭುವನೇಶ್ವರಿ [3] ನಾನು ಯೋಗೇಶ್ವರಿ [4] ನನ್ನ ತಮ್ಮ ಕಾರ್ತಿಕ್ ಅಂತ ಇದ್ದು ಅವರಲ್ಲಿ ನನ್ನ ಹಿರಿಯ ಅಕ್ಕ ವರಲಕ್ಷ್ಮಿಯು ಈಗ್ಗೆ ಸುಮಾರು 16 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ.ನನ್ನ ಅಕ್ಕ ಭುವನೇಶ್ವರಿಯನ್ನು ಮೊಳಕಾಲ್ಮೂರು ತಾಲೂಕು ಸಿದ್ದಯ್ಯನ ಕೋಟೆ ಗ್ರಾಮದ ವಿ.ನಾಗೇಶ್ ರವರ ಸಂಗಡ ಮದುವೆ ಆಗಿರುತ್ತದೆ. ನನ್ನ ಮದುವೆಯು ದಿನಾಂಕ 14-07-013 ರಂದು ತುಮಕೂರು ಜಿಲ್ಲಾದ ಗುಬ್ಬಿ ತಾಲೂಕು ಅಳಿಲು ಘಟ್ಟ ಗ್ರಾಮದ ಮಲ್ಲಿಕಾರ್ಜುನಯ್ಯ ರವರ ಹಿರಿಯ ಮಗನಾದ ಎ.ಎಂ. ಭಗವಾನ್ ರವರ ಸಂಗಡ ನಮ್ಮ ಕುಲಪದ್ದತಿ ಪ್ರಕಾರ ಮದುವೆಯನ್ನು ಸಂಡೂರಿನ ಮರಾಠ ಸಮಾಜದಲ್ಲಿ ಮಾಡಿದ್ದು ಇರುತ್ತದೆ. ಮದುವೆ ಕಾಲಕ್ಕೆ ವರನ ಕಡೆಯವರು ಅಂದರೆ ನನ್ನ ಗಂಡನ ತಂದೆ, ತಾಯಿ ರವರು ಕೇಳಿದ ವರದಕ್ಷಿಣೆ ಅಂತ ನಗದು ಹಣ 2 ಲಕ್ಷ ರೂಗಳು, 80 ಗ್ರಾಮ್ ಬಂಗಾರ , 250 ಗ್ರಾಂ ಬೆಳ್ಳಿ , ಇವುಗಳನ್ನು ಕೊಟ್ಟು ಮದುವೆ ಮಾಡಿರುತ್ತಾರೆ ಮದುವೆ ಮಾತುಕತೆ ಸಮಯದಲ್ಲಿ ಹಾಗು ವರದಕ್ಷಿಣೆ ಕೊಡುವ ಸಮಯದಲ್ಲಿ ನಮ್ಮ ಹಿರಿಯರಾದ ಕೆ.ಎರಿಸ್ವಾ ಮಿ, ರಂಗಪ್ಪ, ವೆಂಕಟೇಶ್, ಮಲ್ಲಿಕಾರ್ಜುನ, ಸುಬ್ರಮಣ್ಯ, ಹಾಗು ನನ್ನ ಗಂಡನ ಕಡೆಯರಾದ ರಾಗಪ್ಪ, ತಿಮ್ಮಜ್ಜ, ರವರು ಇದ್ದರು. ಮದುವೆ ಆದ ನಂತರ ನಾನು 1 ದಿನ ಅಳಿಲು ಘಟ್ಟದಲ್ಲಿ ಇದ್ದೆವು. ನಂತರ ಬೆಂಗಳೂರುನಲ್ಲಿ 4-5 ದಿನ ಇದ್ದು ನಂತರ ಆಷಾಡ ಇದ್ದುದ್ದರಿಂದ ನಾನು ನನ್ನ ತವರೂರು ಕಮತೂರುಗೆ ಬಂದೆನು. ನಾನು 1 ತಿಂಗಳು ಇದ್ದು ನಂ ತರ ನನ್ನ ಗಂಡ ಬಂದು 2 ದಿನ ಇದ್ದು ನಂತರ ನನ್ನನ್ನು ಬೆಂಗಳೂರ್‌ಗೆ ಕರೆದುಕೊಂಡು ನನ್ನ ಮಾವನ ಮನೆಯಲ್ಲಿ ಪೊಲೀಸ್ ವಸತಿ ಗೃಹದಲ್ಲಿ ಇದ್ದೆವು. ಹೀಗಿರುವಾಗ್ಗೆ ನನ್ನ ಗಂಡ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿದ್ದನು. ನನ್ನ ಗಂಡ ಮತ್ತು ನನ್ನ ಮಾವ ಮಲ್ಲಿಕಾರ್ಜುನಯ್ಯ, ನನ್ನ ಅತ್ತೆ ಭದ್ರಮ್ಮ, ರವರು ನನಗೆ ಅವರು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ.ನೋಡಲು ನೀನು ಚೆನ್ನಾಗಿಲ್ಲ ಅಂತ ನೆವ ಮಾಡಿ ಬೈಯ್ಯುತ್ತಾ ವಿನಾಕಾರಣ ನನಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು. ಮತ್ತು ನಿನ್ನ ತವರು ಮನೆಯಿಂದ ಇನ್ನೂ ಹೆಚ್ಚಿನ 1 ಲಕ್ಷ ರೂ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ನನಗೆ ಪೀಡಿಸುತ್ತಿದ್ದರು. ನಾನು ಎಷ್ಟೇ ತಾಳ್ಮೆಯಿಂದ ಸುದಾರಿಸಿಕೊಂಡು ಹೋದರೂ ಸಹ ಅವರು ಅವರು ಕೆಳಿದಂತಹ ಹೆಚ್ಚಿನ ವರದಕ್ಷಿಣೆ ಹಣ ತಂದಿಲ್ಲವೆಂದು ಆಗಾಗ್ಗೆ ಕೈಯಿಂದ ನನಗೆ ಹೊಡೆಬಡೆ ಮಾಡಿ ಕಿರುಕುಳ ಕೊಡುತ್ತಿದ್ದರು. ಅವರ ಕಿರುಕುಳದಿಂದ ನಾನು ಬೇಸೆತ್ತು ಕೊಂಡು ನನ್ನ ತಮ್ಮ ಕಾತೀಕ್ ನಿಗೆ ವಿಷಯ ತಿಳಿಸಿದ್ದು ನನ್ನ ತಮ್ಮ ಹಾಗು ನಮ್ಮ ಹಿರಿಯರಾದ ಕೆ.ಎರಿಸ್ವಾಮಿ, ರಂಗಪ್ಪ, ವೆಂಕಟೇಶ್, ಮಲ್ಲಿಕಾರ್ಜುನ, ಕರಿಯಪ್ಪ, ಚಂದ್ರಪ್ಪ ರವರು ನನ್ನ ಗಂಡ ಅತ್ತೆ ಮಾವರವರಿಗೆ ತಿಳಿ ಹೇಳಿ ಹೋದರು. ನನ್ನ ಗಂಡ,ಅತ್ತೆ ಮಾವ, ರವರು ಕೆಲವು ದಿನ ಸುಮ್ಮನಿದ್ದು ಪುನಃ ಅದೇ ರೀತಿ ಹಣವನ್ನು ತರುವಂತೆ ನನಗೆ ಕಿರುಕುಳ ಕೊಡುತಿದ್ದರು.ನಂತರ ನನ್ನ ಗಂಡ ನನಗೆ ಬೆಂಗಳೂರ್ ನಲ್ಲಿ ರುವ ಜಕ್ಕಸಂದ್ರ ಏರಿಯಾದಲ್ಲಿರುವ ಗೌರಮ್ಮ ರವರ ಮನೆಯಲ್ಲಿ ತಿಂಗಳಿಗೆ 6,500/- ರೂ ಬಾಡಿಗೆಗೆ 3 ತಿಂಗಳ ಇದ್ದೆವು. ಮನೆ ಬಾಡಿಗೆ ಕೊಡಲು ದುಡ್ಡಿನ ತೊಂದರೆಯಿಂದ ನನ್ನ ಗಂಡ ನನ್ನ ಕೊರಳಲ್ಲಿನ ಬಂಗಾರದ ಚೈನು ಹಾಗು ಒಂದು ಬಂಗಾರದ ಉಂಗುರ ಒತ್ತೆ ಇಟ್ಟು 60 ಸಾವಿರ ತೆಗೆದುಕೊಂಡು ಮನೆ ಬಾಡಿಗೆ ಅಡ್ವಾನ್ಸ ಹಾಗು ಮನೆ ಬಳಕೆ ಸಾಮಾನುಗಳನ್ನು ತಂದರು. ನನ್ನ ಗಂಡ ಕೆಲಸಕ್ಕೆ ಹೋಗದೇ ಇದ್ದ ಕಾರಣ ಅನಿವಾರ್ಯ ವಾಗಿ ನಮ್ಮ ಮನೆ ಬಾಡಿಗೆ ಕೊಟ್ಟ ಗೌರಮ್ಮರವರ ಸಹಾಯದಿಂದ ನಾನು ಬೆಂಗಳೂರಿನ ಕೋರಮಂಗಲ ವಿಪ್ರೋ ಪಾರ್ಕನ ಬಳಿ ಇರುವ 5 ಬ್ಲಾಕ್ ನಲ್ಲಿರುವ ದೀಪಕ್ ಪಾರ್ಮಸಿಸ್ಟ್ ನಲ್ಲಿ ಕೆಲಸಕ್ಕೆ ಸೇರಿಕೊಂಡೆನು ಅವರು ನನಗೆ ತಿಂಗಳಿಗೆ 8800/- ರೂ ಸಂಬಳ ಕೊಡುತ್ತಿದ್ದರು. ಆಗ ನನ್ನ ಗಂಡ ನನಗೆ ತವರೂರುನಿಂದ ಹಣವನ್ನು ಕಿರುಕುಳ ಕೊಡುತ್ತಾ ಇದ್ದನು. 3 ತಿಂಗಳ ನಂತರ ಪುನಃ ನನ್ನ ಮಾವ ಮಲ್ಲಿಕಾರ್ಜುನ, ನನ್ನ ಅತ್ತ ಭದ್ರಮ್ಮ. ರವರು ಬಂದು ನಮ್ಮನ್ನು ಪುನಃ ಅವರ ಮನೆಗೆ ಕರೆದುಕೊಂಡು ಹೋದರು.ಅವರು ನಮ್ಮ ಮಾವನವರು ಇರುವ ಪೊಲೀಸ್ ವಸತಿ ಗೃಹದಲ್ಲಿ ಪುನಃ ಅದೇ ರೀತಿ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದರು. ನಂತರ ಯುಗಾದಿ | |||||||||||||||
ಹಬ್ಬಕ್ಕೆಂದು 2005 ಮಾರ್ಚ ತಿಂಗಳಲ್ಲಿ ನನ್ನ ತಮ್ಮ ಕಾರ್ತಿಕ, ಮತ್ತು ನನ್ನ ದೊಡ್ಡಮ್ಮನ ಮಗನಾದ ಶಿವಮೂರ್ತಿ, ನನ್ನ ಸೋದರತ್ತೆ ಮಗನಾದ ವೆಂಕಟೇಶ್ ರವರು ಬಂದು ನನ್ನನ್ನು ಕಮತೂರ್‌ಗೆ ಕರೆದುಕೊಂಡು ಬಂದರು. ನಂತರ ಅವರು ನನ್ನನ್ನು ಕರೆಯಲು ಬಂದಿರುವುದಿಲ್ಲ.ನಂತರ ನಾನು ನನ್ನ ಗಂಡನಿಗೆ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರೂ ನನಗೆ ಕರೆಯಲು ಬರಲಿಲ್ಲ. ಇದಾದ ನಂತರ 18-03-2015 ರಂದು ನನ್ನ ಗಂಡ ಅತ್ತೆ, ಮಾವ ಮೂವರು ಕಮತೂರ್ ನಮ್ಮ ಮನೆಗೆ ಬಂದು ನೀನು ನಾವು ಹೇಳಿದ ವರದಕ್ಷಿಣೆ ಹೆಚ್ಚಿನ ಹಣ ತರಲಿಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಎಂದು ಹೇಳಿ ಹೋದರು. ನಂತರ ನಾನು ದಿನಾಂಕ 04-05-2015 ರಂದು ಸಂಡೂರುನ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಕಚೇರಿಯಲ್ಲಿ ದೂರನ್ನು ಕೊಟ್ಟಿರುತ್ತೇನೆ. ಅದೇ ದಿನ ನನ್ನ ಮಾವ ಮಲ್ಲಿಕಾರ್ಜುನಯ್ಯ ರವರು ಬಂದು ವರದಕ್ಷಿಣೆ ಹಣ ತರುವಂತೆ ಒತ್ತಾಯ ಮಾಡಿ ಹೋದರು. ದಿನಾಂಕ 09-06-2015 ರಂದು ನನ್ನ ಗಂಡ ಭಗವಾನ್ ಹಾಗು ನನ್ನ ಅತ್ತೆ ಭದ್ರಮ್ಮ ರವರು ಸಂಡೂರಗೆ ಬಂದು ಸಂಡೂರಿನ ಪ್ರಗತಿ ಸಮಗ್ರ ಅಭಿವೃದ್ದಿ ಸಂಸ್ಥೆ ಮಹಿಳಾ ಸಾಂತ್ವಾನದಲ್ಲಿ ಹಾಜರಾಗಿದ್ದು ಅಲ್ಲಿ ಸಮಸ್ಯೆ ಬಗೆಹರಿಯದೆ ಇದ್ದು ಅವರು ನಂತರ ನಮ್ಮ ಮನೆಗೆ ಬಂದು ನನಗೆ ನೀನು ನಮ್ಮ ಮೇಲೆ ಏನು ಕಂಪ್ಲೇಟ್ ಕೊಡುತ್ತೀಯಾ ಕೊಡು ನಮಗೇನು ಮಾಡಲಿಕ್ಕಾಗುವುದಿಲ್ಲ ನಮ್ಮ ಮೇಲೆ ಕಂಪ್ಲೇಟ್ ಮಾಡಿದರೆ ನೀನು ಬೆಂಗಳೂರ್‌ಗೆ ಬಾ ನಿನ್ನನ್ನು ಒಂದು ಗತಿ ಕಾಣಿಸುತ್ತೇವೆಂದು ಜೀವ ಬೆದರಿಕೆ ಹಾಕಿ ಹೋದರು. ನಂತರ ದಿನಾಂಕ 01-07-2015 ರಂದು ನನ್ನ ಮಾವ, ಸಂಡೂರು ಪ್ರಗತಿ ಸಮಗ್ರ ಅಭಿವೃದ್ದಿ ಸಂಸ್ಥೆ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಂದಿದ್ದು ನಾನು ಸಹ ಹೋದಾಗ ಅಲ್ಲಿ ಯಾವುದೇ ತೀರ್ಮಾನಕ್ಕೆ ಬರದೇ ನಂತರ ಬರುವುದಾಗಿ ಹೇಳಿ ಹೋದರು. ನನಗೆ ವರದಕ್ಷಿಣೆ ಹೆಚ್ಚಿನ ಹಣವನ್ನು ತರುವಂತೆ ಪೀಡಿಸಿ ನಾನು ಹಣವನ್ನು ಅವರಿಗೆ ಕಡದೇ ಇದ್ದಾಗ ಅವರು ನನಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಸದ್ರಿ 3 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. | ||||||||||||||||
Siruguppa PS | ||||||||||||||||
13 | Cr.No:0197/2015 (IPC 1860 U/s 00MP ) |
15/09/2015 | Under Investigation | |||||||||||||
MISSING PERSON - Man | ||||||||||||||||
Brief Facts : | ಈ ದಿನ ದಿನಾಂಕ 15-09-2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೆಂಕಟೇಶ ರವರು ಠಾಣೆಗೆ ಹಾಜರ್ ಆಗಿ ನೀಡಿದ ಮೌಖೀಕ ದೂರಿನ ಸಾರಾಂಶವೆನೆಂದರೆ, ದಿನಾಂಕ 05-09-2015 ರಂದು ಪಿರ್ಯಾದಿಯು ತನ್ನ ತಂದೆ ಈರಣ್ಣ ಇರೊಂದಿಗೆ ಉರಕುಂದಿ ಈರಣ್ಣ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ರಾತ್ರಿ ಅಲ್ಲೆ ವಾಸತಿ ಮಾಡಿಕೊಂಡು ಬರು ದಿನ ದ:06-09-2015 ರಂದು ಮದ್ಯಹ್ನ 02-00 ಗಂಟೆ ಸುಮಾರಿಗೆ ಸಿರುಗುಪ್ಪಕ್ಕೆ ಬಂದಿದ್ದು. ದಿನಾಂಕ 07-09-2015 ರಂದು ಮನೆಯಲ್ಲಿ ಪೂಜೆ ಇರುವುದರಿಂದ ಪಿರ್ಯಾದಿಯು ಕೆಲಸಕ್ಕೆ ಹೋಗದೆ ತನ್ನ ತಂದೆಯೊಂದಿಗೆ ಮನೆಯಲ್ಲಿಯೇ ಇದ್ದು. ಮದ್ಯಹ್ನ 02-00 ಗಂಟೆ ಸುಮಾರಿಗೆ ಪಿರ್ಯಾದಿಯ ತಂದೆ ಈರಣ್ಣ ಈತನು ಮನೆಯಲ್ಲಿ ಊಟ ಮಾಡಿ ಹೊರಗಡೆ ಹೋಗಿದ್ದು. ಸಾಯಂಕಲ 05-00 ಗಂಟೆಗೆ ಮನೆಗೆ ವಾಪಾಸ್ಸು ಬರಬೇಕಾಗಿದ್ದು. ಮನೆಗೆ ಬಾರದೇ ಇದ್ದುದ್ದರಿಂದ ತಮ್ಮ ಸಂಬಂದಿಕರ ಮನೆಗಳಲ್ಲಿ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ನಂತರ ಮರು ದಿನ ದಿ:08-09-2015 ರಂದು ನಮ್ಮ ಸಂಬಂದಿಕರ ಊರುಗಳಾದ ಸಿಂದನೂರು, ಕೋಸಿಗಿ, ರಾಮದುರ್ಗ, ಮದ್ದಿಕೇರಿ, ಗುಂತಕಲ್ಲು, ಆಲೂರು, ಪತ್ತಿಕೊಂಡ ಗಳಲ್ಲಿ ವಿಚಾರಿಸಲು ತಮ್ಮ ತಂದೆಯ ಯಾವುದೇ ಮಾಹಿತಿ ಸಿಗದೇ ಇದ್ದು. ನಂತರ ಪಿರ್ಯಾದಿಯು ತಮ್ಮ ತಂದೆಯನ್ನು ಹುಡುಕಲು ಮಂತ್ರಾಲಯ, ಉರಕುಂದಿ ಈರಣ್ಣ, ಅಂಬಮ್ಮನ ಮಠ, ರಾರಾವಿ ಮತ್ತು ಕೋಸಿಗಿ ಮತ್ತಿತರ ಕಡೆಗಳಲ್ಲಿ ಹೋಗಿ ಹುಡುಕಾಡಲು ಯಾವುದೇ ಮಾಹಿತಿ ಸಿಗದೆ ಇದ್ದುದ್ದರಿಂದ ಈ ದಿನ ದಿನಾಂಕ 15-09-2015 ರಂದು ತಡವಾಗಿ ಠಾಣೆಗೆ ಬಂದು ತಮ್ಮ ತಂದೆಯನ್ನು ಹುಡುಕಿಕೋಡಬೇಕೆಂದು ನೀಡಿದ ಮೌಖೀಕ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. | |||||||||||||||
ಮಂಗಳವಾರ, ಸೆಪ್ಟೆಂಬರ್ 15, 2015
PRESS NOTE OF 15/09/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ