ಬುಧವಾರ, ಸೆಪ್ಟೆಂಬರ್ 23, 2015

PRESS NOTE OF 23/09/2015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0188/2015
(IPC 1860 U/s 341,504,143,147,148,149,323,324,506(2) )
23/09/2015 Under Investigation
RIOTS - Others
Brief Facts :  ದಿನಾಂಕ: 18-09-15 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಪಿರ್ಯಾಯಾದಿದಾರರು ಬಳ್ಳಾರಿ ನಗರದ ರೂಪನಗುಡಿ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಮೆಡಿಕಲ್ ಸ್ಟೋರ್ ಹೋಗಿ ಮಾತ್ರ್ರೆಗಳನ್ನು ತಗೆದುಕೊಂಡು ಬರಲು ಹೋಗುತ್ತಿದ್ದಾಗ ಆಪಾದಿತರಾದ 1] ದುರ್ಗಣ್ಣ 2] ಗೋವಿಂದ 3] ರಾಜು 4] ರಘುರಾಮ್ 5] ನರಸಿಂಹ  6] ಬಾಬು 7] ಪ್ರಸಾದ್ 8] ಬಸವರಾಜ್ 9] ದುರ್ಗಾಪ್ರಸಾದ್ 10] ಹನುಮಂತ 11] ಮಹೇಂದ್ರ ರವರುಗಳು ಗುಂಪು ಕಟ್ಟಿಕೊಂಡು ಬಂದು ತಡೆದು ನಿಲ್ಲಿಸಿ ಈ ಹಿಂದೆ ಶ್ರೀರಾಂಪುರ ಕಾಲೋನಿಯ ಮತ್ತು ಉಮಾಶಂಕರ್ ಕಾಲೋನಿಯ ಹುಡುಗರಿಗೆ ಗಲಾಟೆಯಾಗಿದು, ಈಗ ಶ್ರೀರಾಂಪುರ ಕಾಲೋನಿಯ ಹುಡುಗ ಸಿಕ್ಕಿದ್ದಾನೆ ಈ ಸೂಳೆ ಮಗನನ್ನು ಇವತ್ತು ಪ್ರಾಣದಿಂದ ಬಿಡುವುದು ಬೇಡಾ ಅಂತಾ ಅನ್ನುತ್ತಾ ಅವರಲ್ಲಿ ದುರ್ಗಣ್ಣನು ಮಚ್ಚಿನಿಂದ ತಲೆಗೆ,  ಕುತ್ತಿಗೆಗೆ, ಎಡ ಕಪಾಳಕ್ಕೆ ಹೊಡೆದು ಗಾಯಪಡಿಸಿದ್ದು, ನಂತರ ಗೋವಿಂದನು ಕಬ್ಬಿಣದ ರಾಡ್‌ನಿಂದ ಹೊಟ್ಟೆಗೆ ಹೊಡೆದು ಗಾಯಪಡಿಸಿದ್ದು, ನಂತರ ರಾಜುನು ಕಟ್ಟಿಗೆಯಿಂದ ಮೈಕೈಗೆ ಹೊಡೆದು ಒಳ ನೋವು ಪಡಿಸಿದ್ದು ಅಲ್ಲದೇ ಇನ್ನೂಳಿದವರು ಕೈಗಳಿಂದ ಮೈ ಕೈಗೆ ಹೊಡೆಬಡೆ ಮಾಡಿ ಪ್ರಾಣಭಯ ಹಾಕಿರುತ್ತಾರೆಂತಾ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದೆ.
Gadiganur PS
2 Cr.No:0098/2015
(IPC 1860 U/s 341,504,323,308,355,506,34 )
23/09/2015 Under Investigation
CASES OF HURT - Simple Hurt
Brief Facts :  ಫಿರ್ಯಾದಿಯು ದಿನಾಂಕ:21.09.2015 ರಂದು ಮಧ್ಯಾಹ್ನ 1:30  ಗಂಟೆ ಸುಮಾರಿಗೆ ಕಾರ್ ನಂ:ಕೆಎ.35/ಎನ್.3290 ನೇದ್ದನ್ನು ತಗೆದುಕೊಂಡು ಕಾರ್ ಮಾಲೀಕ ಮನೆಯ ಬಳಿಗೆ ಹೋಗುತ್ತಿರುವಾಗ್ಗೆ ಆರೋಪಿ- ಗಂಗಣ್ಣನು ಕಾರ್ ಗೆ ರಸ್ತೆಯಲ್ಲಿ ಅಡ್ಡ ನಿಂತುಕೊಂಡಿದ್ದರಿಂದ ರಸ್ತೆಯಿಂದ ಸ್ವಲ್ಪ ಸರಿದು ನಿಂತುಕೋ ಎಂದು ಹೇಳಿದ್ದಕ್ಕೆ ಫಿರ‍್ಯಾದಿಗೆ ಅವಾಚ್ಯಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಒಂದು ಕಲ್ಲಿನಿಂದ ಫಿರ್ಯದಿಗೆ ಹೊಡೆದರೆ ಸಾಯಬಹುವುದೆಂದು ಗೊತ್ತಿದ್ದರು ಕಲ್ಲನ್ನು ಫಿರ‍್ಯಾದಿಯ ಕಡೆಗೆ ಬೀಸಿದಾಗ ಆ ಕಲ್ಲಿನಿಂದ ಫಿರ್ಯಾಧಿಯು ತಪ್ಪಿಸಿಕೊಂಡಿದ್ದರಿಂದ ಕಾರ್ ನ ಮುಂದಿನ ಗ್ಲಾಸ್ ಗೆ ಬಡಿದು ಗ್ಲಾಸ್ ಹೊಡೆದಿರುತ್ತದೆ,ನಂತರ ಮತ್ತೆ ಆರೋಪಿಯು ಇನ್ನೋಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಫಿರ್ಯಾದಿಗೆ ಕೈ,ಕಾಲುಗಳಿಂದ ಚಪ್ಪಲಿಯಿಂದ ಹೊಡೆದಿರುತ್ತಾರೆ,ಈ ಬಗ್ಗೆ ಪೊಲೀಸ್ ಕಂಪ್ಲೇಟ್ ಕೊಟ್ಟರೇ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದರಿಂದ ಗಾಬಾರಿಯಾಗಿ ಫಿರ್ಯಾದಿಗೆ ಜ್ವರ ಬಂದಿದ್ದರಿಂದ ಮನೆಯವರ ಧೈರ್ಯದಿಂದ ಈ ದಿನ ಸ್ವಲ್ಪ ಸುಧಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಲಿಖಿತ ದೂರನ್ನು ನೀಡಿದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.( ದೂರು ಪ್ರತಿಯನ್ನು ಲಗತ್ತಿಸಿದೆ).
Hosahalli PS
3 Cr.No:0168/2015
(IPC 1860 U/s 143,147,148,504,323,324,325,307,149 )
23/09/2015 Under Investigation
ATTEMPT TO MURDER - Over Property Dispute
Brief Facts :  ದಿನಾಂಕ:೨೩/೦೯/೨೦೧೫ ರಂದು ಬೆಳಿಗ್ಗೆ ೯ ಗಂಟೆಗೆ ಹೆಚ್.ಸಿ.೨೫೧ ರವರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ.ಅನುಸೂಯ ಗಂಡ ಪಿ.ಸಣ್ಣೆಪ್ಪ,ವ:೩೬ ವರ್ಷ,ಲಿಂಗಾಯತರು,ಮನೆ ಕೆಲಸ,ವಾಸ: ಚೌಡಾಪುರ ಗ್ರಾಮ,ಕೂಡ್ಲಿಗಿ ತಾಲೂಕು.ಎಂಬುವರ ಹೇಳಿಕೆಯ ದೂರನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಒಪ್ಪಿಸಿದ್ದನ್ನು ಸ್ವೀಕರಿಸಿ ನೋಡಲಾಗಿ ಗಾಯಾಳು ಅನುಸೂಯ ರವರು ತನ್ನಹೇಳಿಕೆಯ ದೂರಿನಲ್ಲಿ ನನ್ನ ಗಂಡನಿಗೆ ಮತ್ತು ನನ್ನ ಗಂಡನ ಅಣ್ಣನಾದ ಬಸವರಾಜನಿಗೆ ಈಗ್ಗೆ ಸುಮಾರು ೫-೬ ವರ್ಷಗಳಿಂದ ಜಮೀನು ಪಾಲು ವಿಭಾಗದ ವಿಷಯದಲ್ಲಿ ವೈಶಮ್ಯ ಉಂಟಾಗಿದ್ದು ಇರುತ್ತದೆ. ದಿನಾಂಕ:೨೨/೦೯/೨೦೧೫ ರಂದು ರಾತ್ರಿ ೭-೩೦ ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕುಳಿತು ಕೊಂಡಿದ್ದಾಗ ನಮ್ಮ ಗ್ರಾಮದಲ್ಲಿರುವ ಉಜಿನಪ್ಪನ ಗುಡಿ ಹಿಂಭಾಗದಲ್ಲಿ ನನ್ನ ಗಂಡು ಜೋರಾಗಿ ಕೂಗಿಕೊಂಡಿದ್ದನ್ನು ಕೇಳಿ ನಾನು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ೧] ಮಲ್ಲಿಕಾರ್ಜುನ ತಂದೆ ಬಸವರಾಜ,೨] ಮಂಜಪ್ಪ ತಂದೆ ವೀರಭದ್ರಪ್ಪ ೩] ಶಾಂತಮ್ಮ ಗಂಡ ಮಹೇಶ ೪] ಗೌರಮ್ಮ ಗಂಡ ಬಸವರಾಜ ೫] ಬಸವರಾಜ ತಂದೆ ಸಿದ್ದಪ್ಪ ೬] ಸುವರ್ಣ ಗಂಡ ಕೊಟ್ರೇಶ ೭] ಪತ್ರೆಮ್ಮ ಗಂಡ ಮುಪ್ಪಿನಪ್ಪ ೮] ರೇಖಮ್ಮ ಗಂಡ ಲೋಕೇಶ ೯] ಭದ್ರಪ್ಪ ತಂದೆ ಸಿದ್ದಪ್ಪ ಇವರೆಲ್ಲರೂ ಗುಂಪುಕಟ್ಟಿಕೊಂಡು ಬಂದು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗಂಡನಿಗೆ ಏನಲೇ ಸೂಳೆ ಮಗನೆ ಪದೇ ಪದೇ ಹೊಲದ ವಿಚಾರದಲ್ಲಿ ಭಾಗ ಕೇಳಲು ಬರುತ್ತೀ ಏನಲೇ ಅಂತ ದುರ್ಬಾಷೆಗಳಿಂದ ಬೈಯ್ಯುತ್ತಾ ಮೇಲ್ಕಂಡ ವ್ಯಕ್ತಿಗಳ ಪೈಕಿ ಮಲ್ಲಿಕಾರ್ಜುನನು ತನ್ನ ಕೈಯ್ಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಗಂಡನ ತಲೆಗೆ,ಗದದ ಹತ್ತಿರ ಹೊಡೆದು ರಕ್ತಗಾಯ ಮಾಡಿದನು.ನನ್ನ ಗಂಡನ 
ಅಣ್ಣನಾದ ಬಸವರಾಜನು ಮರ ಕಟ್ಟ ಮಾಡುವ ಗರಗಸದಿಂದ ನನ್ನ ಗಂಡನ ಎಡ ಹಣೆಗೆ,ಎಡಗಡೆ ತಲೆಗೆ,ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು.ನನ್ನ ಗಂಡನ ಅಣ್ಣ ಭದ್ರಪ್ಪನು ಬಸವರಾಜನ ಕೈಯ್ಯಲ್ಲಿದ್ದ ಗರಗಸ ತೆಗೆದು ಕೊಂಡು ನನ್ನ ಗಂಡನ ಬಲಗೈ ಮುಂಗೈಗೆ ಹೊಡೆದು ರಕ್ತಗಾಯ ಮಾಡಿದನು.ಗೌರಮ್ಮ, ಸುವರ್ಣ ಇವರಿಬ್ಬರು ನನ್ನ ಗಂಡನ ಮರ್ಮಾಂಗಕ್ಕೆ ಕೈ ಹಾಕಿ ಹಿಸುಕಿ ನೋವು ಮಾಡಿದರು.ಮಂಜಪ್ಪನು ಕೈ ಮುಷ್ಟಿ ಮಾಡಿ ನನ್ನ ಗಂಡನ ಬಾಯಿಗೆ ಗುದ್ದಿದ್ದರಿಂದ ನನ್ನ ಗಂಡನ ಮೇಲಿನ ೪ ಹಲ್ಲುಗಳು ಉದಿರಿರುತ್ತವೆ.ಅಷ್ಟರಲ್ಲಿ ನಾನು ನನ್ನ ಗಂಡನಿಗೆ ಬಿಡಿಸಿ ಕೊಳ್ಳಲು ಹೋದಾಗ ಭದ್ರಪ್ಪನು ಗರಗಸದಿಂದ ನನ್ನ ಎಡ ಹಣೆಗೆ,ತಲೆಯ ಮೇಲೆ ಬೆನ್ನಿಗೆ,ಎರಡು ಕಿವಿಗಳಿಗೆ ಹೊಡೆದು ರಕ್ತಗಾಯ ಮಾಡಿದನು.ಇನ್ನುಳಿದವರು ಸೇರಿಕೊಂಡು ಕೈಕಾಲುಗಳಿಂದ ನನ್ನ ಮೈ ಮೇಲೆ ಹೊಡೆದು ಒಳ ನೋವು ಮಾಡಿದರು.ಅಷ್ಟರಲ್ಲಿ ನಮ್ಮ ಗ್ರಾಮದ ತಳವಾರ ಚಂದ್ರಪ್ಪ,ಮೌನೇಶ,ತಳವಾರ ಪ್ರಕಾಶ, ಇವರುಗಳು ಬಂದು ಜಗಳ ಬಿಡಿಸಿದರು. ಗಾಯ ಗೊಂಡ ನನಗೆ ಮತ್ತು ನನ್ನ ಗಂಡನಿಗೆ,ನಮ್ಮ ಗ್ರಾಮದ ಪ್ರಕಾಶ್ ಮತ್ತು ಮೌನೇಶ ಇವರ ತಮ್ಮ ಮೋಟಾರ್ ಸೈಕಲ್ ಗಳಲ್ಲಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿದರು.ನನಗೆ ಮತ್ತು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ನಮಗೆ ಮರಣಾಂತಿಕ ಹಲ್ಲೆ ಮಾಡಿ ಗಾಯಪಡಿಸಿದ ಮೇಲ್ಕಂಡ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Hospet Rural PS
4 Cr.No:0147/2015
(IPC 1860 U/s 302,201 )
23/09/2015 Under Investigation
MURDER - Due To OtherCauses
Brief Facts :  ಪಿರ್ಯಾದಿದಾರರಾದ ಶ್ರೀ ಅಶೋಕ್ ಕುಮಾರ್ ಯಾದವ್ ತಂದೆ ಸೋನಾ ಯಾದವ್ ವ: 52 ವರ್ಷ, ಯಾದವ ಜನಾಂಗ, ಕೋಬ್ರಾ ಸೆಕ್ಯೂರಿಟಿ ಸರ್ವೀಸಸ್ ನ ಮಾಲಿಕ, ವಾಸ: 7 ನೇ ಕ್ರಾಸ್, ಗಾಂದೀಕಾಲೋನಿ, ಹೊಸಪೇಟೆ ಇವರು ಈ ದಿನ 23/09/2015 ರಂದು ಬೆಳಿಗ್ಗೆ 11-15 ಗಂಟೆಗೆ ಠಾಣೆಗೆ ಬಂದು ಹೇಳಿಕೆಯ ದೂರನ್ನು ನೀಡಿದ್ದು ಸಾರಾಂಶ: ತನ್ನ ಸೆಕ್ಯೂರಿಟಿ ಏಜನ್ಸಿಯಲ್ಲಿ ಆತನ ಹೆಂಡತಿಯ ಅಕ್ಕಳ ಗಂಡನಾದ ಅನಿಲ್ ಪ್ರಸಾದ್ ಯಾದವ್ ವ: 42 ವರ್ಷ, ವಾಸ: ಲಕ್ಷ್ಮಿ ಗ್ರಾಮ ಜಾರ್ಖಂಡ್ ರಾಜ್ಯ ಇತನು ಈಗ್ಗೆ 3 ತಿಂಗಳಿನಿಂದ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡಿಕೊಂಡಿದ್ದು ಶಂಕರ್ ನಗರ ಕ್ಯಾಂಪ್ ಹತ್ತಿರ ಇರುವ ಪಿ.ಬಿ.ಎಸ್. ಮೈನ್ಸ್ ನಲ್ಲಿ ಕೆಲಸ ಮಾಡುತ್ತಾ ಮೈನ್ಸನಲ್ಲಿರುವ ಒಂದು ರೂಂನಲ್ಲಿ ವಾಸವಾಗಿರುತ್ತಿದ್ದನೆಂದು ನಿನ್ನೆ ದಿನ 22/09/2015 ರಂದು ಸೆಕೆಂಡ್ ಸಿಪ್ಟ್ ಡ್ಯೂಟಿಗೆ ಕ್ಯಾಂಪಿನ ಹಳೇ ಗ್ಯಾರೇಜ್ ಹತ್ತಿರ ನೇಮಿಸಿದ್ದಾಗಿ ಈ ದಿನ ಬೆಳಿಗ್ಗೆ ಪಸ್ಟ್ ಸಿಪ್ಟ್ ಕರ್ತವ್ಯಕ್ಕೆ ಬಂದಿದ್ದ ರಾಮ್ ನರೇಶ್ ಮುರುಮ ಇತನು ಬೆಳಿಗ್ಗೆ 8-30 ಗಂಟೆಗೆ ಗ್ಯಾರೇಜ್ ಹತ್ತಿರ ಕಾಂಪೌಂಡ್ ಗೋಡೆಯ ಬಳಿ ಅನಿಲ್ ಪ್ರಸಾದ್ ಯಾದವನ ಶವವನ್ನು ನೋಡಿ ವಿಷಯ ತಿಳಿಸಿದಾಗ ಪಿರ್ಯಾದಿದಾರರು ಹೋಗಿ ನೋಡಿದ್ದಾಗಿ ಅನಿಲ್ ಪ್ರಸಾದ್ ಯಾದವ್ ನಿಗೆ ಯಾರೋ ದುಷ್ಕರ್ಮಿಗಳು ಯಾವುದೇ ಕೆಟ್ಟ ಉದ್ದೇಶದಿಂದ ಆತನ ಕತ್ತು ಕೋಯ್ದು ಕೊಲೆ ಮಾಡಿದ್ದು ಶವವನ್ನು ಕಂಪೌಂಡ್ ಗೋಡೆಯ ಬಳಿ ಗಿಡ ಮರಳಗಳ ಸಂದಿನಲ್ಲಿ ಬಿಸಾಡಿ ಹೋಗಿರುತ್ತಾರೆಂದು ಆತನ ಶರ್ಟ ಬಿಚ್ಚಿದ್ದು ಮುಖದ ಮೇಲೆ ಹೊಚ್ಚಿರುವುದಾಗಿ ಹಾಗೂ ಆತನ ಪ್ಯಾಂಟ್ ಮತ್ತು ಚೆಡ್ಡಿಯನ್ನು ಮೋಣಕಾಲಿನ ವರೆಗೆ ಬಿಚ್ಚಿರುವುದು ಕಂಡು ಬರುತ್ತಿದೆ ಈ ಘಟನೆಯು ನಿನ್ನೆ ದಿನ ಸಂಜೆ 6-30 ರಿಂದ ಈ ದಿನ ಬೆಳಿಗ್ಗೆ 8-30 ರ ಮದ್ಯಾವದಿಯಲ್ಲಿ ನೆಡೆದಿರಬಹುದಾಗಿದ್ದು ಕೊಲೆ ಮಾಡಿರುವ ಆರೋಪಿತರನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಠಾಣೆಯ ಗುನ್ನೆ ನಂಬರ್ : 147/2015 ಕಲಂ: 302-201 ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Hospet Town PS
5 Cr.No:0186/2015
(IPC 1860 U/s 363 )
23/09/2015 Under Investigation
KIDNAPPING AND ABDUCTION - Others
Brief Facts :  ದಿನಾಂಕ 23-09-2015 ರಂದು ಮದ್ಯಾಹ್ನ 1-00 ಗಂಟೆಗೆ ಈ ಕೇಸಿನ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರು ಸಾರಂಶವೇನೆಂದರೆ ತನ್ನ ಹೆಂಡತಿಯಾದ ಶ್ರೀಮತಿ ರಾಜಮಾಬೀ, 40 ವರ್ಷ ಈಕೆಯನ್ನು ಈಗ್ಗೆ 25 ವರ್ಷಗಳ ಹಿಂದೆ ಮದುವೆಯಾಗಿದ್ದು ತಮಗೆ ಒಟ್ಟು 6 ಜನ ಮಕ್ಕಳಿದ್ದು ದಿನಾಂಕ 17-09-2015 ರಂದು ಮದ್ಯಾಹ್ನ 1-00 ಗಂಟೆಗೆ ಮನೆಯಿಂದ ಹೊರಗಡೆಗೆ ಹೋಗಿ ವಾಪಸ್ ಮನೆಗೆ ಬಾರದೇ ಇದ್ದ ಕಾರಣ ನನ್ನ ಹೆಂಡತಿಯನ್ನು ನಮ್ಮ ಸಂಬಂದಿದಕರ ಊರುಗಳಿಗೆ ಹೋಗಿ ವಿಚಾರಿಸಿದರೂ  ಬಂದಿರುವುದಿಲ್ಲವೆಂದು ತಿಳಿಸಿದಾಗ ನಾನು ಮನೆಗೆ ಬಂದು ಮನೆಯ ಬೀರುವಿಲ್ಲಿಟ್ಟಿದ್ದ ನಗದು ರೂ 300000/- [ಮೂರು ಲಕ್ಷ] ಹಣ ಹಾಗೂ ಎರಡು ತೊಲೆಯ ಬಂಗಾರದ ಒಡವೆ ಇರಲಿಲ್ಲ. ದಿನಾಂಕ 22-09-2015 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಸಂಬಂದಿಕನಾ ಮಸ್ತಾನ್ ಮತ್ತು ಖಾಜಾ ಇವರು ನನಗೆ ತಿಳಿಸಿದ್ದೇನೆಂದರೆ ನನ್ನ ಹೆಂಡತಿಯನ್ನು ನಮ್ಮ ಓಣಿಯ ಮುಸ್ತಾಕ್ ತಂದೆ ಅನ್ವರ್ ಭಾಷ, 25 ವರ್ಷ, ಈತನು ಹಿರೋ ಹೊಂಡಾ ಸ್ಪ್ಲೆಂಡರ್ ಮೋ/ಸೈ ನಂ ಕೆ.ಎ 35/ಇಬಿ-6511 ನೇದ್ದರಲ್ಲಿ ಬಳ್ಳಾರಿ ರಸ್ತೆ ಕಡೆಗೆ ಹೋದ ಬಗ್ಗೆ ನೋಡಿ ಈ ವಿಷಯ ನನಗೆ ತಿಳಿಸಿದಾಗ ನಾನು ಈ ವಿಷಯದ ಬಗ್ಗೆ ನಮ್ಮ ಓಣಿಯ ಯಜಮಾನರು ಮತ್ತು ಸಂಬಂದಿಕರೊಂದಿಗೆ ಮುಸ್ತಾಕ್ ಇವರ ಮನೆಗೆ ಹೋಗಿ ಅವರ ತಾಯಿ ಮತ್ತು ಮನೆಯವರಿಗೆ ವಿಚಾರಿಸಿದಾಗ ಇದರ ಬಗ್ಗೆ ತಮಗೇನು ಗೊತ್ತಿಲ್ಲವೆಂದು ತಿಳಿಸಿದ್ದು ನನ್ನ ಹೆಂಡತಿಯನ್ನು ಅಪಹರಣ ಮಾಡಿಕೊಂಡು ಹೋದ ಮುಸ್ತಾಕ್ ಈತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೊಟ್ಟ ದೂರು ಸಾರಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
Kampli  PS
6 Cr.No:0123/2015
(KARNATAKA MINOR MINERAL CONSISTENT RULE 1994 U/s 42,44 ; MMDR (MINES AND MINERALS 
23/09/2015 Under Investigation
REGULATION OF DEVELOPMENT) ACT 1957 U/s 4(1),4(1A) ; IPC 1860 U/s 379 )
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ನಿನ್ನೆ ದಿನ ದಿನಾಂಕ 22-09-2015 ರಂದು ರಾತ್ರಿ 9-30 ಗಂಟೆಗೆ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಸಣಾಪುರ ಕಡೆಯಿಂದ ಕಂಪ್ಲಿ ಕೊಟ್ಟಾಲ್ ಕಡೆಗೆ ಎರಡು ಟ್ರಾಕ್ಟರ್ ಟ್ರಾಲಿಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮಾಹಿತಿಯಂತೆ ಕಂಪ್ಲಿ ಕೊಟ್ಟಾಲ್ ಕಡೆಗೆ ಹೋಗಿ ರಾತ್ತಿ 10-30 ಗಂಟೆಗೆ  ಕಂಪ್ಲಿ ಕೊಟ್ಟಾಲ್ ನ ಪೋತಲು ಕಟ್ಟೆಯ ಹತ್ತಿರ ಟ್ರಾಕ್ಟರ್ ನಂ ಕೆಎ35/ಟಿ-9718 ನ ಟ್ರಾಲಿಯಲ್ಲಿ ಅಂದಾಜು 04 ಟನ್ ಮರಳನ್ನು (ಟ್ರಾಕ್ಟರ್, ಟ್ರಾಲಿ, ಮರಳಿನ ಒಟ್ಟು ಮೌಲ್ಯ ರೂ 152000/-) ಮತ್ತು ಇನ್ನೊಂದು  ನಂಬರು ಇಲ್ಲದ ಹಸಿರು ಬಣ್ಣದ ಜಾನ್ ಡೀರ್ ಕಂಪನಿಯ ಟ್ರಾಕ್ಟರ್, ಟ್ರಾಲಿ, ಅದರಲ್ಲಿದ್ದ ಮರಳು ಅಂದಾಜು 04 ಟನ್ ಮರಳು ಒಟ್ಟು ಮೌಲ್ಯ ರೂ 152000/- ಇವುಗಳನ್ನು ಹಾಗೂ ಆರೋಪಿ ಲಿಂಗಪ್ಪನ್ನು ಪಂಚೆನಾಮೆ ಮೂಲಕ ವಶಕ್ಕೆ ಪಡೆದುಕೊಂಡು ಈ ದಿನ ಮಧ್ಯ ರಾತ್ತಿ 00-20 ಗಂಟೆಗೆ ಮರಳಿ ಠಾಣೆಗೆ ಬಂದು ಚಾಲಕ ಲಿಂಗಪ್ಪ ಮತ್ತು ಓಡಿ ಹೋದ ಇನ್ನೂಂದು ಟ್ರಾಕ್ಟರ್ ಚಾಲಕ ಡಿ.ವೆಂಕಟೇಶ ಹಾಗೂ ಎರಡು ಟ್ರಾಕ್ಟರ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲು  ಜ್ಞಾಪನ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ.
Marriyammanahalli PS
7 Cr.No:0124/2015
(IPC 1860 U/s 504,143,147,148,149,323,324 )
23/09/2015 Under Investigation
RIOTS - Due To Village Disputes
Brief Facts :  ಈ ದಿನ ದಿ: 23-09-15 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿ ಗಣಕೀಕೃತ ದೂರಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರು ಸ್ವೀಕರಿಸಿ ಪರಿಶೀಲಿಸಿ ನೋಡಲು, ಸಾರಾಂಶ ಈ ಕೆಳಕಂಡಂತೆ ಇರುತ್ತದೆ.
         ರಮೇಶನಾಯ್ಕ ತಂದೆ ಧನುಂಜಯನಾಯ್ಕ ವ: ೩೦ ವರ್ಷ ಲಂಬಾಣಿ ಜಾತಿ ಆಟೋ ಚಾಲಕ ವಾಸ: ಎಂ.ಎಂ. ಹಳ್ಳಿ ತಾಂಡ. ಹೊಸಪೇಟೆ (ತಾ) ಆದ ನಾನು ತಮ್ಮಲ್ಲಿ ಕೇಳಿಕೊಳ್ಳವುದೇನೆಂದರೆ, ನಮ್ಮ ತಾಂಡ ಸಮೀಪದಲ್ಲಿ ಎನ್.;ಹೆಚ್. ೧೩ ರಸ್ತೆಯ ಪಕ್ಕದಲ್ಲಿ ಕಸನನಾಯ್ಕ ರವರ ಮಗ ಸೇವಾನಾಯ್ಕನು ನ್ಯೂ ಪಂಜಾಬ್ ಡಾಬಾ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಇರುತ್ತಾನೆ. ಈಗ್ಗೆ ೧೦ ದಿನಗಳ ಹಿಂದೆ ಕಸನನಾಯ್ಕ ರವರ ಡಾಬಾ ಎದುರುಗಡೆಗೆ ಎನ್.ಹೆಚ್. ೧೩ ರಸ್ತೆಯ ಪಕ್ಕದ ನಮ್ಮ ಜಾಗದಲ್ಲಿ ಹೊಸ ಡಾಬಾ ಹಾಕಿರುತ್ತೇನೆ. ನಾವು ಹೊಸ ಡಾಬಾ ಮಾಡಿದ್ದಕ್ಕೆ ಕಸನನಾಯ್ಕ ರವರಿಗೆ ಮತ್ತು ನಮಗೆ ದ್ವೇಷ ಇರುತ್ತದೆ. ನಮ್ಮ ಡಾಬಾವನ್ನು ನಮ್ಮ ಸಂಬಂದಿಕರಾದ ಬಾಲಾಜಿನಾಯ್ಕ ರವರಿಗೆ ವ್ಯಾಪಾರ ಮಾಡಿಕೊಂಡು ಇರಲು ಕೊಟ್ಟಿರುತ್ತೇನೆ.  ಈ ದಿನ ದಿ:೨೩-೦೯-೧೫ ರಂದು ಬೆಳಿಗ್ಗೆ ೧೧-೦೦ ಗಂಟೆ ಸುಮಾರಿಗೆ ನಮ್ಮ ಢಾಬಾದಲ್ಲಿ ಕೆಲಸ ಮಾಡುವ ಪವನ್ ಆಚಾರ್ ಮತ್ತು ಸಣ್ಣ ಗೌರಿಬಾಯಿ ಇವರುಗಳು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದೆರೆ,  ವೆಂಕಟೇಶನಾಯ್ಕ, ಬಾಲಾಜಿನಾಯ್ಕ ಮತ್ತು ನಾವು ಹೋಟೆಲ್‌ನಲ್ಲಿ ಇವರುವ ಕಾಲಕ್ಕೆ ೧) ಕಸನನಾಯ್ಕ ೨) ಸೇವಾನಾಯ್ಕ ೩) ತಿಪ್ಪಾನಾಯ್ಕ ೪) ಪಕ್ಕೀರಿಬಾಯಿ ೫) ಜೂಮಿಬಾಯಿ ೬) ರಮೇಶ್‌ನಾಯ್ಕ ಇವರುಗಳು ಗುಂಪು ಕೂಡಿಕೊಂಡು ಬಂದು  ನಮ್ಮ  ಲೇ ಸೂಳೆ ಮಕ್ಕಳೆ ಡಾಬಾದ ಮುಂದೆ ನೀವು ಯಂಗ್ ಹೊಸ ಡಾಬಾ ಮಾಡಿದ್ದೀರಿ ಈ ಜಾಗ ನಮ್ಮದು ಎಂದು ಬೈಯುತ್ತಾ ಜಗಳ ಮಾಡಿ ಕಟ್ಟಿಗೆಯಿಂದ ಹೊಡೆದಿದ್ದಾರೆ. ಎಂದು ಮಾಹಿತಿ ತಿಳಿಸಿದರು. ಕೂಡಲೆ ನಾನು ನಮ್ಮ ಆಟೋದಲ್ಲಿ ಡಾಬಾದ ಬಳಿ ಬಂದೆನು. ವೆಂಕಟೇಶನಾಯ್ಕ ಮತ್ತು ಬಾಲಾಜಿನಾಯ್ಕ ಇಬ್ಬರು ನೆಲಕ್ಕೆ ಬಿದ್ದಿದ್ದರು. ನಾನು ಬಂದು ವೆಂಕಟೇಶನಾಯ್ಕನಿಗೆ ವಿಚಾರಿಸಲು, ಕಸನನಾಯ್ಕ ಮತ್ತು ಆತನ ಮಗ ಸೇವಾನಾಯ್ಕ ಇವರು ಕಟ್ಟಿಗೆಯಿಂದ ನನಗೆ ಮತ್ತು ಬಾಲಾಜಿನಾಯ್ಕನಿಗೆ ಕಟ್ಟಿಗೆಯಿಂದ ಮೈಕೈಗೆ ಹೊಡೆದು ಒಳಪೆಟ್ಟು ಮಾಡಿದರು. ತಿಪ್ಪಾನಾಯ್ಕ, ಪಕ್ಕೀರಬಾಯಿ, ಜೂಮಿಬಾಯಿ, ಹಾಗು ರಮೇಶನಾಯ್ಕ ಇವರುಗಳು ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಒಳಪೆಟ್ಟು ಗಾಯ ಮಾಡಿದರು. ಎಂದು  ತಿಳಿಸಿದನು. ಅಷ್ಟರಲ್ಲಿ ಪವನ್ ಆಚಾರಿ ಮತ್ತು ಇತರರು ಬಂದು ಜಗಳ ಬಿಡಿಸಿಕೊಂಡರು. ಎಂದು ತಿಳಿಸಿದನು. ಇವರ ನರಳಾಟವನ್ನು ನೋಡಿ ಕೂಡಲೆ ನಮ್ಮ ಆಟೋದಲ್ಲಿ ಹಾಕಿಕೊಂಡು ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಿಸಿದೆನು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಹೊಸಪೇಟೆಗೆ ಹೋಗಲು ತಿಳಿಸಿದ್ದರಿಂದ ಅಂಬುಲೆನ್ಸ್‌ನಲ್ಲಿ ಹೊಸಪೇಟೆಗೆ ಕಳಿಸಿದೆನು.   ನಾವು, ಕಸನನಾಯ್ಕ ರವರ ಡಾಬಾದ ಎದುರುಗಡೆಗೆ ನಾವು ಹೊಸ ಡಾಬಾ ಹಾಕಿದ್ದಕ್ಕೆ ನಮ್ಮ ಮೇಲೆ ದ್ವೇಷ ಇಟ್ಟುಕೊಂಡು ಬಂದು ನಮ್ಮ ಬಾಲಾಜಿನಾಯ್ಕನಿಗೆ ಮತ್ತು ವೆಂಕಟೇಶನಾಯ್ಕನಿಗೆ ಬೈದು ಕಟ್ಟಿಗೆಯಿಂದ ಮತ್ತು ಕೈಗಳಿಂದ ಹಾಗು ಕಾಲಿನಿಂದ ಹೊಡೆದು ಹಲ್ಲೆ ಪಡಿಸಿರುತ್ತಾರೆ. ಕಾರಣ ಈ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.    ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Tekkalkota PS
8 Cr.No:0090/2015
(KARNATAKA POLICE ACT, 1963 U/s 78(III) )
23/09/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ಈ ದಿನ ದಿನಾಂಕ: 23/09/2015 ರಂದು ಬೆಳಿಗ್ಗೆ 7-30 ಗಂಟೆಗೆ ಆರೋಪಿತರು ತೆಕ್ಕಲಕೋಟೆಯ  ಪಟ್ಟಣದ ಷಾಬಾದಿ ಸುದಾಕರ್ ರವರ ಮನೆಯ ಹತ್ತಿರ ಕ್ರಾಸ್ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಚೀಟಿಗಳನ್ನು ಬರೆದುಕೊಡುತ್ತಿರುವಾಗ ಪಿಎಸ್ ಐ ತೆಕ್ಕಲಕೋಟೆ ಇವರು ಮಾಹಿತಿ ಸಂಗ್ರಹಿಸಿ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ಕಡೆಯಿಂದ ೧] ನಗದು ಹಣ ರೂ. 11,500/- ಹಾಗೂ ಮಟಕಾ ಸಾಮಾಗ್ರಿಗಳನ್ನು ಜಪ್ತು ಪಡಿಸಿಕೊಂಡು ಒಬ್ಬ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ, ನೀಡಿದ ದೂರನ್ನು ಪಡೆದು ಆರೋಪಿತರಾದ ೧] ಕಾಯಿಕಡೆ ಹೊನ್ನೂರ್ ಸಾಬ್ ಮತ್ತು ೨] ಹಚ್ಚೊಳ್ಳಿ ಜಲಾಲಿ ಇವರ ವಿರುದ್ದ ಕಲಂ ೭೮ [೩] ಕೆಪಿಯಾಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿದೆ.
9 Cr.No:0091/2015
(KARNATAKA POLICE ACT, 1963 U/s 78(III) )
23/09/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ಈ ದಿನ ದಿನಾಂಕ: ೨೩/೦೯/೨೦೧೫ ರಂದು ಬೆಳಿಗ್ಗೆ ೯-೪೫ ಗಂಟೆಗೆ ಆರೋಪಿತರು ತೆಕ್ಕಲಕೋಟೆಯ  ಪಟ್ಟಣದ ೧೧ನೇ ವಾರ್ಡನ ಸಿನಿಮಾ ಟಾಕೀಸ್ ಹತ್ತಿರ ಕ್ರಾಸ್ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಚೀಟಿಗಳನ್ನು ಬರೆದುಕೊಡುತ್ತಿರುವಾಗ ಪಿಎಸ್ ಐ ತೆಕ್ಕಲಕೋಟೆ ಇವರು ಮಾಹಿತಿ ಸಂಗ್ರಹಿಸಿ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ಕಡೆಯಿಂದ ೧] ನಗದು ಹಣ ರೂ. ೮,೩೦೦/- ಹಾಗೂ ೨] ಮಟಕಾ ಸಾಮಾಗ್ರಿಗಳನ್ನು  ೩] ಒಂದು ಕೆಂಪು ಬಣ್ಣದ ಕಾರ್ಬನ್ ಕಂಪನಿಯ ಮೊಬೈಲ್ ಬೆಲೆ ೨೦೦/- ರೂ. ಜಪ್ತು ಪಡಿಸಿಕೊಂಡು ಒಬ್ಬ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ, ನೀಡಿದ ದೂರನ್ನು ಪಡೆದು ಆರೋಪಿತರಾದ ೧] ಅಲಿ @ ಆಟೋ ಅಲಿ ಮತ್ತು ೨] ರಂಜು @ ರಂಜಾನ್ ಸಾಬ್ ರವರ ವಿರುದ್ದ ಕಲಂ ೭೮ [೩] ಕೆಪಿಯಾಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿದೆ.
Thoranagal PS
10 Cr.No:0145/2015
(IPC 1860 U/s 381 )
23/09/2015 Under Investigation
THEFT - Servant Theft
Brief Facts :  ನಿವೇದನೆ:-
      ಈ ದಿನ  ದಿನಾಂಕ: 1;30  ಪಿ.ಎಂ.ಗ  ನಾನು ಠಾಣೆಯಲ್ಲಿರುವಾಗ ಪಿರ್ಯಾದಿ ಎಸ್.ಎಂ. ಕೊಟ್ರೇಶ್ ರವರು ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂದರೆಎಸ್.ಎಂ. ಕೊಟ್ರೇಶ್ ಆದ ನಾನು ಮನವಿ ಮನವಿ ಮಾಡಿಕೊಳ್ಳವುದೆನೆಂದರೆ ನಾನು ಮತ್ತು ಬಲ್ ಬಿರ್  ರವರು ಮದೂರ್ ಗೋಯಲ್   ರವರ ಮನೆಯಲ್ಲಿ ನಾನು ಸೂಪರ್ ವೈಜರ್ ಮತ್ತು ಬಲ್ ಬೀರ್ ಸಿಂಗ್  ಅಡುಗೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಬಂದಿರುತ್ತೇವೆ.
      ದಿನಾಂಕ: 16/9/2015 ರಂದು  6;30 ಪಿ.ಎಂ. ಸಮಯದಲ್ಲಿ ಹೊರಗಡೆಯಿಂದ ಮಾರ್ಕೆಟ್ ಗೆ ಹೋಗಿ ಬಂದು ನನ್ನ ಹತ್ತಿರ ಉಳಿದ 24,500 ರೂ.ಗಳು ನಾನು ಮದೂರ್ ಗೋಯಲ್ ರವರ ಮನೆ ನಂ ಬಿ/17 ರ ಹಾಲ್ ನಲ್ಲಿ ಬರುವ ಕಪಾಟ ನಲ್ಲಿ ಇಟ್ಟು  ನಾನು  ತೋರಣಗಲ್ಲು ಅರ್.ಎಸ್.ಗೆ ಬಂದೆನು. ಮನೆಯಲ್ಲಿ ಅಡುಗೆ ಮಾಡಿಕೊಂಡು ಬಂದ ಬಲ್ ಬೀರ್ ರವರು ಒಬ್ಬರೇ ಮನೆಯಲ್ಲಿ ಇರುತ್ತಾರೆ. ನಂತರ ತೋರಣಗಲ್ಲು ಆರ್. ಎಸ್.ಗೆ ಬಂದು ನೋಡಲಾಗಿ  ಬಲ್ ಬೀರ್ ರವರು ಹೊರಗಡೆ  ಹೋಗಿದ್ದನು. ನಾನು ಕಪಾಟು ನಲ್ಲಿ ಇಟ್ಟಿದ್ದ ಹಣವನ್ನು ನೋಡಲಾಗಿ ಹಣ ಇರುವುದಿಲ್ಲ. ನಂತರ ಬಲಬೀರ್ ರವರು ಮನಗೆ ಹಿಂದುರುಗಿ ಬಂದಿರುವುದಿಲ್ಲ. ಇಲ್ಲಿಯವರಿಗೆ ಹುಡುಕಾಡಲಾಗಿ  ಬಲ್ ಬೀರ್ ಸಿಂಗ್ ರವರು ಹಿಂದಿರುಗಿ ಬಂದಿಲ್ಲದ ಕಾರಣ ಕಪಾಟು ನಲ್ಲಿ ಇಟ್ಟಿದ್ದು ನಗದು ಹಣ 24,500 ರೂ.ಗಳನ್ನು ಮದೂರು ಗೋಯಲ್  ರವರ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಬಲ್ ಬೀರ್ ಸಿಂಗ್  ತಂದೆ  ಕಲ್ಲು ರಾಮ್ ರವರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅವರ  ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಲು ತಮ್ಮಲ್ಲಿ ಕೋರಲಾಗಿದೆ.ವಿಷಯವನ್ನು ಮನೆ ಮಾಲೀಕರಿಗೆ  ತಿಳಿಸಿ ಬಂದು  ದೂರು ನೀಡಿದ್ದರಿಂದ ತಡವಾಗಿದೆ. ಎಂದು ನೀಡಿದ ದೂರಿನ ಮೇರೆಗೆ  ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.(ಪ್ರ.ವ.ವಗ ಪಿರ್ಯಾದಿ ದೂರು ಲಗತ್ತಿಸಿದೆ)
11 Cr.No:0146/2015
(IPC 1860 U/s 323,354,504,506,34 )
23/09/2015 Under Investigation
CASES OF HURT - Simple Hurt
Brief Facts :  ನಿವೇದನೆ:-
     ಈ ದಿನ ದಿನ ದಿನಾಂಕ: 23/9/2015 ರಂದು 4;15 ಪಿ.ಎಂ.ಗೆ ನಾನು ಠಾಣೆಯಲ್ಲಿರುವಾಗ ಪಿರ್ಯಾದಿ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂದರೆಶ್ರೀಮತಿ ಜಿ. ಗಂಗಮ್ಮ ಆದ ನಾನು ಮನವಿ ಮಾಡಿಕೊಳ್ಳವುದೆನೆಂದರೆ ಸುಮಾರು ದಿನಗಳಿಂದ ತುಮ್ಮಟಿ ಗ್ರಾಮದಲ್ಲಿ  ಮನೆ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ವಾಸವಾಗಿರುತ್ತೇನೆ.
          ದಿನಾಂಕ: 21/9/2015 ರಂದು 9;00 ಎ.ಎಂ. ಸಮಯದಲ್ಲಿ  ನಾನು ಮತ್ತು ನಮ್ಮ ತಾಯಿ ಗೌರಮ್ಮ ಮನೆಯ ಹತ್ತಿರ ಇರುವಾಗ  ನಮ್ಮ ಗ್ರಾಮದ ನಮ್ಮ ಜನಾಂಗದವರಾದ  ಹೊನ್ನೂರಸ್ವಾಮಿ ತಂದೆ ಹನುಮಂತಪ್ಪ ಮತ್ತು ಅತನ ಹೆಂಡತಿ ಲಕ್ಷ್ಮಿ  ರವರು ನಮ್ಮ ಮನೆಯ ಹತ್ತಿರ ಬಂದು  ಚರಂಡಿ ನೀರು ಹೆಚ್ಚಾಗಿ ಬಿಡ  ಬೇಡಿ  ನಮ್ಮ  ಮನೆಯ ಹತ್ತಿರ ಹೆಚ್ಚಾಗಿ ಸೊಳ್ಳೆ ಬರುತ್ತವೆ. ಎಂದು ಕೇಳಿದಕ್ಕೆ  ಚರಂಡಿ ನೀರು ಚರಂಡಿ ಬಿಡಬೇಕು ಅದಕ್ಕೆ ಬಿಡುತ್ತೇವೆ.  ಎಂದು ಹೇಳಿದ್ದಕ್ಕೆ  ಕತ್ತೆ ಸೂಳೇ ನಿನ್ನ ಗಂಡ  ಮೆಂಬರ್ ಎಂದು ಈ ರೀತಿ ಹೇಳುತ್ತೀಯಾ ಎನ್ನುತ್ತಾ  ಲಕ್ಷ್ಮಿ  ಬಂದು ಕೈ ಗಳಿಂದ  ತೆಲೆ ಕೂದಲು ಹಿಡಿದು ಬಡಿದು ಹೊನ್ನೂರ ಸ್ವಾಮಿ  ಕೈ ಗಳಿಂದ  ಬಡಿದು ನೀವು ಗ್ರಾಮದಲ್ಲಿ ಹೇಗೆ ಜೀವನ ಮಾಡತ್ತೀರಿ ನಿಮ್ಮನ್ನು ನೋಡಿಕೊಳ್ಳುತ್ತೇವೆ. ಎನ್ನುತ್ತಿರುವಾಗ ನಮ್ಮ ಗ್ರಾಮದವರಾದ  ಶ್ರೀನಿವಾಸ, ವೆಂಕಟೇಶ್,ತಾಯೇಶ್  ರಮೇಶ್ ರವರು ಬಂದು ಜಗಳ ಬಿಡಿಸಿ ಕಳುಹಿಸಿದರು. ನಂತರ ನನ್ನ ಗಂಡ ಬಂದನಂತರ ನಡೆದ ವಿಷಯ ತಿಳಿಸಿದ್ದು, ನನಗೆ  ಸೊಂಟದ ಹತ್ತಿರ ಒಳ ಪೆಟ್ಟುಗಳು ಆಗಿದ್ದರಿಂದ ನನ್ನ ಗಂಡ   ಹೊನ್ನೂರಸ್ವಾಮಿ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿದನು. ನಾನು ಚಿಕಿತ್ಸೆ ಪಡೆದು ಕೊಂಡು ಬಂದು ನನ್ನ ಮೇಲೆ ಹಲ್ಲೆ ಮಾಡಿದ 
ಹೊನ್ನೂರಸ್ವಾಮಿ ತಂದೆ ಹನುಮಂತಪ್ಪ ಮತ್ತು ಲಕ್ಷ್ಮಿ ಗಂಡ ಹೊನ್ನೂರಸ್ವಾಮಿ  ವಾಸ: ತುಮ್ಮಟಿ ಗ್ರಾಮ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ತಮ್ಮಲ್ಲಿ ಕೇಳಿ ಕೊಳ್ಳುತ್ತೇನೆ.ಎಂದು ನೀಡಿದ ದೂರಿನ ಮೇರೆಗೆ ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.( ಪ್ರ.ವ.ವ.ಗೆ ಪಿರ್ಯಾದಿಯ ದೂರನ್ನು ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ