ಬುಧವಾರ, ಸೆಪ್ಟೆಂಬರ್ 9, 2015

PRESS NOTE OF 09092015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0179/2015
(CODE OF CRIMINAL PROCEDURE, 1973 U/s 109 )
09/09/2015 Under Investigation
CrPC - Security For Good Behaviour (Sec 109)
Brief Facts :  ಈ ದಿನ ದಿನಾಂಕ:09/09/2015 ರಂದು ಬೆಳಿಗ್ಗೆ 9 ಗಂಟೆಯಿಂದ ಹೆಚ್.ಸಿ.307 ಮತ್ತು ಪಿ.ಸಿ.319,1174 ರವರು ಪಿ.ಐ ಸಾಹೇಬರ ಆದೇಶದ ಮೇರೆಗೆ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ಸರಹದ್ದಿನಲ್ಲಿ ಹಗಲು ಗಸ್ತು ತಿರುಗಾಡುತ್ತಿದ್ದಾಗ ಮದ್ಯಾಹ್ನ 12.15 ಗಂಟೆ ಸುಮಾರಿಗೆ ಬಳ್ಳಾರಿ ನಗರದ ಮೀನಾಕ್ಷಿ ಸರ್ಕಲ್ ನ ಕೆನರಾ ಬ್ಯಾಂಕ್ ಹತ್ತಿರ ಆರೋಪಿತರು ತಮ್ಮ ಇರುವಿಕೆಯನ್ನು ಮರೆ ಮಾಚಿಕೊಂಡು ಓಡಿ ಹೋಗಲು ಪ್ರಯತ್ನಿಸಿದವರನ್ನು ಹಿಡಿದು ಓಡಿ ಹೋದ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡದಿದ್ದರಿಂದ ಹಾಗೂ ಅಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯದಿಂದ ಸದರಿ ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ದ ಕಲಂ:109 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಳ್ಳಲು ನೀಡಿದ ವಿಶೇಷ ವರದಿ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
Hospet Extention PS
2 Cr.No:0042/2015
(IPC 1860 U/s 323,307,504,506 )
09/09/2015 Under Investigation
ATTEMPT TO MURDER - Due To Other Causes
Brief Facts :  ದಿನಾಂಕ; 9/9/2015 ರಂದು ಬೆಳಿಗ್ಗಿನ ಜಾವ 3-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರೆನೇಂದರೆ ಫಿರ್ಯಾದಿದಾರರು ಮತ್ತು ತನ್ನ ಸ್ನೇಹಿತ ಜಾಕೀರ್ ಶರೀಫ್ ಇಬ್ಬರು ನಿನ್ನೆ ದಿನ ದಿನಾಂಕ 8/9/2015 ರಂದು ರಾತ್ರಿ 10-00 ಗಂಟೆಗೆ ಚಪ್ಪರದಹಳ್ಳಿಯಲ್ಲಿರುವ ಕ್ರಿಷ್ಣ ಟೂರಿಸ್ಟ ಹೊಂ ರೂಮ ನಂಬರ್ 15 ರಲ್ಲಿ ಪಾರ್ಟಿ ಮಾಡುತ್ತಾ ಇದ್ದಾಗ ರಾತ್ರಿ 11-30 ಗಂಟೆ ಸುಮಾರಿಗೆ ಎಂ.ಜೆ.ನಗರ ಹೊಸಪೇಟೆ ವಾಸಿ ನೂರುಲ್ಲಾ ಹಸೇನ ಎಂಬುವನು ತಮ್ಮ ರೂಮ್ ಗೆ ಬಂದು ಪಾರ್ಟಿ ಮಾಡುತ್ತಿದ್ದ ತಮ್ಮೊಂದಿಗೆ ಮಾತನಾಡುತ್ತಾ, ಕ್ರಿಷ್ಣ ಟೂರಿಸ್ಟ್ ಹೋಂ ಮಾಲಿಕರಾದ ಗೋವಿಂದರಾಜ್ ಎಂಬುವರ ಬಗ್ಗೆ ಕೆಟ್ಟದಾಗಿ ಮಾತನಾಡುವ ವಿಚಾರದಲ್ಲಿ ಫಿರ್ಯಾದಿಯು ನೂರಲ್ಲಾ ಹಸೇನ್ ಗೆ ಅನ್ನ ಕೊಡುವ ಧಣಿಗೆ ಕೆಟ್ಟದಾಗಿ ಮಾತನಾಡಬೇಡ ಅಂತಾ ಕೇಳಿದಕ್ಕೆ ಆರೋಪಿಯು ಪಿರ್ಯಾಧಿದಾರರನಿಗೆ ಅವಾಚ್ಯ ಶಬ್ದಗಳಿಂದ ನೀನು ಯಾರಲೇ ಸೂಳೆ ಮಗನೇ ಎಂದು ಹೇಳಲು ಅಂತಾ ಬೈದು ಕೈ ಯಿಂದ ಕಪಾಳಕ್ಕೆ ಹೊಡಿದಿದ್ದು, ಯಾಕೇ ಹೊಡೆಯುತ್ತಿಯಾ ಅಂತ ಕೇಳಿದಕ್ಕೆ ಪುನಃ ಬೈಯುತ್ತಾ ಏಕಾಎಕಿಯಾಗಿ ಟೇಬಲ್ ಮೇಲಿದ್ದ ಬೀರ್ ಬಾಟಲನ್ನು ತೆಗೆದುಕೊಂಡು ನಿನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಬೈದಾಡುತ್ತಾ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಆಗ ಸ್ಥಳದಲ್ಲಿದ್ದ ಜಾಕೀರ್ ಶರೀಫ್ ಮತ್ತು ಕ್ರಿಷ್ಣ ಟೂರಿಸ್ಟ್ ಹೋಂ ನ ಮ್ಯಾನೇಜರ್ ಅಲಿ ಎಂಬುವರು ಬಿಡಿಸಿಕೊಂಡಿದ್ದು ಆರೋಪಿಯು ಫಿರ್ಯಾದಿದಾರರಿಗೆ ಕೊಲೆ ಮಾಡುವ ಉದ್ದೇಶದಿಂದ ಬೀರ್ ಬಾಟಲ್ ನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಸಿದಲ್ಲದೆ ಪ್ರಾಣಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ.
Moka PS
3 Cr.No:0135/2015
(IPC 1860 U/s 379 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE(AMEND
09/09/2015 Under Investigation
MENT) ACT-2007 U/s 73,192(a) )
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿನಾಂಕ: 09-9-15 ರಂದು ಬೆಳಿಗ್ಗೆ 11-45 ಗಂಟೆಗೆ ಶ್ರೀ.ಅಬ್ದುಲ್ ಗಪೋರ್ ಎ.ಎಸ್.ಐ. ಮೋಕಾ ಪೊಲೀಸ್‌ ಠಾಣೆ ರವರು ತಮ್ಮ ವಿಶೇಷ ವರದಿ ನೀಡಿದ್ದನ್ನು ಪಡೆದುಕೊಂಡು ಪರಿಶೀಲಿಸಿ ನೋಡಲು   ಈ ದಿನ ದಿ:೦೯-೯-೧೫ ರಂದು  ಬೆಳಿಗ್ಗೆ ೮-೪೫ ಗಂಟೆಗೆ  ನಾನು ಠಾಣೆಯಲ್ಲಿದ್ದಾಗ  ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ  ೦೩ ಟ್ರಾಕ್ಟರ್ ಟ್ರಾಲಿಗಳಲ್ಲಿ ಚಾಲಕರು ಅಕ್ರಮವಾಗಿ ಮರಳನ್ನು ತುಂಬುತ್ತಿದ್ದಾರೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ  ಸದ್ರಿ ದಾಳಿಗೆ  ಠಾಣೆಯಲ್ಲಿದ್ದ  ಸಿಬ್ಬಂದಿರವರಾದ ಹೆಚ್.ಸಿ.೩೨೨  ಹೆಚ್.ಸಿ.೮೩ ಪಿಸಿಸ್೧೭೫-೧೧೩೬ರವರೊಂದಿಗೆ ನಮ್ಮ ಖಾಸಗಿ ಮೋಟಾರ್ ಸೈಕಲ್‌ನಲ್ಲಿ  ಬೆಳಿಗ್ಗೆ ೯-೦೦ ಗಂಟೆಗೆ ಠಾಣೆಯನ್ನು ಬಿಟ್ಟು  ಬೆಳಿಗ್ಗೆ ೯-೨೦ ಗಂಟೆಗೆ ಕರ್ಚೆಡು ಕ್ರಾಸ್‌ನಲ್ಲಿ ಹೋಗಿ ಅಲ್ಲಿದ್ದ ಇಬ್ಬರು ಪಂಚರನ್ನು ಬರಮಾಡಿಕೊಂಡು ಸದ್ರಿ  ಪಂಚರಿಗೆ ದಾಳಿಗೆ ಪಂಚರಾಗಿ ವಿವರವಾದ ಪಂಚನಾಮೆ  ಬರೆಯಿಸಿ ಕೊಡಲು ತಿಳಿಸಿ ಕೇಳಿಕೊಂಡ ಮೇರೆಗೆ ಉಭರು ಪಂಚರಾಗ ಒಪ್ಪಿಕೊಂಡರು.
       ನಂತರ ನಾವು ಮತ್ತು ಪಂಚರು ನಮ್ಮ ನಮ್ಮ ಮೋಟಾರ್ ಸೈಕಲ್‌ನಲ್ಲಿ  ಬೆಳಿಗ್ಗೆ ೯-೩೦ ಗಂಟೆಗೆ ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ   ಹೋದಾಗ  ೦೩ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು  ನಮ್ಮ ಎದುರಿಗೆ ಹಗರಿಯಲ್ಲಿ   ಬರುತ್ತಿರುವಾಗ  ಪಂಚರೊಂದಿಗೆ   ಬೆಳಿಗ್ಗೆ ೯-೪೫ ಗಂಟೆಗೆ ದಾಳಿ ಮಾಡಲು ಹೋದಾಗ ನಮ್ಮ ಪೊಲೀಸ್ ಸಮವಸ್ರ್ತವನ್ನು  ನೋಡಿ ಟ್ರಾಕ್ಟರ್ ಟ್ರಾಲಿಯ ಚಾಲಕರು  ಸ್ಥಳದಲ್ಲಿ  ತಮ್ಮ ಟ್ರಾಕ್ಟರ್ ಟ್ರಾಲಿಗಳು  ಬಿಟ್ಟು ಓಡಿ  ಹೋಗಿರುತ್ತಾರೆ.
     ಅಲ್ಲೇದ್ದ ಹಗರಿ ಕಡೆಯಲ್ಲಿ ಬಟ್ಟೆಗಳನ್ನು ತೊಳೆಯುತ್ತಿದ್ದ ಶ್ರೀ. ಲೋಕನಗೌಡ ತಂದೆ ದೊಡ್ಡಬಸಪ್ಪ ವ:೩೮ವರ್ಷ ಕುರುಬರು ಜನಾಂಗ, ಬೇಸಾಯ ವಾ: ಕರ್ಚೇಡು ಗ್ರಾಮರವರನ್ನು ಮೇಲ್ಕಂಡ ಟ್ರಾಕ್ಟರ ಟ್ರಾಲಿಗಳ ಮಾಲಿಕರ & ಚಾಲಕರ ಹೆಸರು ವಿಚಾರಿಸಲು  
೧)   ಟ್ರಾಕ್ಟರ್ ನಂ:ಕೆ:ಎ:೩೪:ಟಿಎ:೦೭೭೩ ಮತ್ತು ಟ್ರಾಲಿ ನಂಬರ್ ನೋಡಲು ರಿಜಿಷ್ಟರ್ ನಂಬರ್ ಇರುವುದಿಲ್ಲ.  ಈ ಟ್ರಾಕ್ಟರ್ ಟ್ರಾಲಿಯ ಮಾಲಿಕರಾದ  ವೆಂಕಟೇಶ ತಂದೆ ನೆಣೆಕೆಪ್ಪ ಮತ್ತು ಚಾಲಕ ಕರಿಬಸಪ್ಪ ತಂದೆ ಓಂಕಾರಿಪ್ಪ ಇಬ್ಬರು ವಾಸ: ಡಿ.ನಾಗಹಳ್ಳಿ ಗ್ರಾಮ ಅಂತ ತಿಳಿಸಿದನು.
೨) ಟ್ರಾಕ್ಟರ್ ನಂ:ಕೆ;ಎ:೩೪:ಟಿ:ಎ:೪೧೮೮ ಮತ್ತು ಟ್ರಾಲಿ ನಂ:ಕೆ:ಎ:೩೪:ಟಿ:ಎ: ಕೆ:ಎ:೩೪:ಟಿ:ಎ:೪೧೮೯  ಅಂತ ಇದ್ದು ಇದರ ಮಾಲಿಕರ ಮತ್ತು ಚಾಲಕರವರಾದ ತಿಮ್ಮಪ್ಪ ತಂದೆ ನೆಣಿಕಪ್ಪ ವಾಸ: ಕರ್ಚೇಡು ಗ್ರಾಮ ಅಂತ ತಿಳಿಸಿದನು.
೩) ಟ್ರಾಕ್ಟರ್ ನಂಬರ್ ಇರುವುದಿಲ್ಲ  ಇದರ ಇಂಜಿನಿ ನಂ::NDNW3197      ಅಂತ ಇದ್ದು ಇದರ ಟ್ರಾಲಿ ನಂ: ಕೆ:ಎ:೩೪:ಟಿ:೩೮೭೬ ಅಂತ ಇರುತ್ತದೆ ಇದರ ಮಾಲಿಕ ಮತ್ತು ಚಾಲಕನ ಹೆಸರು ಅನ್ವರ ಬಾಷ ವಾಸ: ಬಳ್ಳಾರಿ ಅಂತ ಇರುತ್ತದೆ. ಮತ್ತು ಮೂರು ಟ್ರಾಲಿಗಳಲ್ಲಿ ಮರಳು ತುಂಬಿರುತ್ತದೆ.
ಸದ್ರಿ ಸಾಕ್ಷಿದಾರರಿಗೆ  ಮರಳನ್ನು ಅಲ್ಲೇ ತುಂಬಿದ್ದು ಅಂತ ವಿಚಾರಿಸಲು  ಮೇಲ್ಕಂಡ ಟ್ರಾಕ್ಟರ್ ಟ್ರಾಲಿಗಳು  ಚಾಲಕರು ಬೆಳಿಗ್ಗೆ ೮ ಗಂಟೆಯಿಂದ ೦೯ ಗಂಟೆಯವರೆಗೆ  ಬೆಣಕಲ್ಲು  ಗ್ರಾಮದ ವೇದಾವತಿ ಹಗರಿಯಲ್ಲಿ  ಮರಳನ್ನು ತುಂಬಿರುತ್ತಾರೆ ಅಂತ ತಿಳಿಸಿದನು. ಈ ಪಂಚನಾಮೆಯನ್ನು ಬೆಳಿಗ್ಗೆ ೧೦ ಗಂಟೆಯಿಂದ ಬೆಳಿಗ್ಗೆ ೧೧ ಗಂಟೆಯವರೆಗೆ  ಟ್ರಾಕ್ಟರ್ ಟ್ರಾಲಿಗಳು ಕೃತ್ಯ ನಡೆದ ಸ್ಥಳದಲ್ಲಿ & ಟ್ರಾಕ್ಟರ ಟ್ರಾಲಿ ಸಿಕ್ಕ ಸ್ಥಳದಲ್ಲಿ  ಮತ್ತು ಜಪ್ತು ಪಂಚನಾಮೆ  ಮಾಡಿಕೊಂಡಿದೆ.                                             
       ಕಾರಣ ಮೇಲ್ಕಂಡ ಟ್ರಾಕ್ಟರ್ ಟ್ರಾಲಿಗಳ  ಚಾಲಕ & ಮಾಲಿಕರು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಬೆಣಕಲ್ಲು ಹಗರಿ ನದಿಯಲ್ಲಿನ ಸರ್ಕಾರಿ ಜಮೀನಿನಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಟ್ರಾಕ್ಟರ ಟ್ರಾಲಿಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಮೇಲ್ಕಂಡ ಟ್ರಾಕ್ಟರ್ ಮಾಲಿಕರು ಮತ್ತು ಚಾಲಕರ ವಿರುದ್ಧ ಮೇಲ್ಕಂಡ ಕಲಂ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಳ್ಳಲು  ಎ ಎಸ್ ಐ ರವರು ತಮ್ಮ ವಿಶೇಷ ವರದಿ & ಪಂಚನಾಮೆ  ಆಧೇಶಿಸಿದ್ದನ್ನು ನೀಡಿದ್ದನ್ನು ಪಡೆದುಕೊಂಡು ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ