ಗುರುವಾರ, ಅಕ್ಟೋಬರ್ 1, 2015

PRESS NOTE OF 01/10/2015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0192/2015
(KARNATAKA EXCISE ACT, 1965 U/s 34 )
01/10/2015 Under Investigation
KARNATAKA STATE LOCAL ACTS - Karnataka Excise Act 1965
Brief Facts :  ದಿನಾಂಕ:೦೧/೧೦/೧೫ ರಂದು ಬೆಳಿಗ್ಗೆ ೬-೩೦ ಗಂಟೆಯಿಂದ ೯-೧೫ ಗಂಟೆಯ ಮಧ್ಯದ ಕಾಲಾವಧೀಯಲ್ಲಿ ಬಳ್ಳಾರಿ ನಗರದ ಮಿಲ್ಲರ್‌ಪೇಟೆ ಏರಿಯಾದಲ್ಲಿರುವ ಆಪಾದಿತರು ತಮ್ಮ, ತಮ್ಮ ಮನೆಗಳ ಮುಂದಿನ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರು ಸೇರಿ ದಾಳಿ ನೆಡೆಸಿ ರೂ. ೨೭,೩೫೫/-ಬೆಲೆ ಬಾಳುವ ವಿವಿಧ ಮಧ್ಯವನ್ನು, ನಗದು ಹಣ ರೂ. ರೂ. ೧೪೯೦/-ಗಳನ್ನು ಪಂಚನಾಮೆ ಅಡಿಯಲ್ಲಿ ಜಪ್ತು ಪಡಿಸಿಕೊಂಡಿರುತ್ತದೆ. ಈ ಬಗ್ಗೆ ಆಪಾದಿತರ ವಿರುದ್ದ ಪ್ರಕರಣ ದಾಖಲಿಸಿದೆ.
Kamalapur PS
2 Cr.No:0085/2015
(KARNATAKA POLICE ACT, 1963 U/s 87 )
01/10/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ 30/09/2015 ರಂದು ಸಂಜೆ 04-30 ಸಮಯದಲ್ಲಿ ಸಿ.ಪಿ.ಐ ಕಂಪ್ಲಿ ವೃತ್ತ ಕಂಪ್ಲಿ ರವರು ಕಮಲಾಪುರ ಪೊಲೀಸ್ ಠಾಣೆಯಲ್ಲಿರುವಾಗ ಕಮಲಾಪುರ ಠಾಣಾ ಸರಹದ್ದಿಗೆ ಒಳಪಡುವ ಕಮಲಾಪುರ-ಪಿ.ಕೆ ಹಳ್ಳಿ ರಸ್ತೆಯಲ್ಲಿ ಬರುವ ಕಸ್ತೂರಿ ಬಾ ವಸತಿ ಶಾಲೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಎಂಬ ನಸೀಬಿನ ಜೂಜಾಟ ನಡೆಯುತ್ತಿದೆ, ಎಂದು ಖಚಿತ ವರ್ತಮಾನ ಬಂದ ಮೇರೆಗೆ ಅಧಿಕಾರಿಗಳು, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸಂಜೆ 05-10 ಗಂಟೆಗೆ ದಾಳಿ ಮಾಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 05 ಜನರನ್ನು ಹಿಡಿದಿದ್ದು, ಒಟ್ಟು ನಗದು ಹಣ 5060/- ರೂ,  ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಕಣದಲ್ಲಿ ಹಾಸಿದ್ದ ಹಳೆ ದಿನ ಪತ್ರಿಕೆಯನ್ನು ಪಂಚರ ಸಮಕ್ಷಮದಲ್ಲಿ ಪಂಚೆನಾಮೆ ಮೂಲಕ ಜಪ್ತು ಮಾಡಿಕೊಂಡಿದ್ದು, ಮಾಲು ಮತ್ತು 05 ಜನ ಆರೋಪಿತರನ್ನು ವಶಕ್ಕೆ ತಗೆದುಕೊಂಡು ಸಂಜೆ 06-30  ಗಂಟಗೆ ಠಾಣೆಗೆ ಕರೆತಂದು ಆರೋಪಿತರ ವಿರುದ್ಧ ಪ್ರಕರಣವನ್ನು ದಾಖಲು ಮಾಡಲು ವರದಿ ನೀಡಿದ್ದು, ಇದು ಆಸಂಜ್ಞೆಯ ಅಪರಾಧವಾಗಿದ್ದು, ಈ ಬಗ್ಗೆ ಠಾಣಾ ಎನ್.ಸಿ ನಂಬರ್ 03/2015 ರಲ್ಲಿ ನಮೂದಿಸಿಕೊಂಡು ನ್ಯಾಯಾಲಯದ ಆದೇಶ ಪಡೆದು ಆರೋಪಿತರ ವಿರುದ್ಧ ಪ್ರ.ವ ವರದಿ
Kottur PS
3 Cr.No:0138/2015
(IPC 1860 U/s 506,504,143,147,149,323,354 )
01/10/2015 Under Investigation
CASES OF HURT - Simple Hurt
Brief Facts :  ದಿನಾಂಕ 01-10-2015 ರಂದು  ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರಿನಲ್ಲಿ ತಯಾರಿಸಿದ ದೂರು ಸಾರಾಂಶ, ದಿನಾಂಕ 28-09-2015 ರಂದು ಸಂಜೆ 4-30 ಗಂಟೆ ಸಮಯದಲ್ಲಿ  ಪಿರ್ಯಾದಿ ಮತ್ತು ಆಕೆಯ ಗಂಡ ಮಹಂತೇಶನು ತಮ್ಮ ಮನೆಯ ಹತ್ತಿರ ನಿಂತಿರುವಾಗ ಪಿರ್ಯಾದಿಯ ತವರು ಮನೆ ಕಡೆಯವರಾದ ಆರೋಪಿತರೆಲ್ಲರೂ ಅಲ್ಲಿಗೆ ಏಕಾಎಕಿ  ಬಂದು ನಮ್ಮ ಮಗಳನ್ನು ಕಳುಹಿಸಿಕೊಡು ಎಂದು ಪಿರ್ಯಾದಿ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ   ಹೊಡೆಯುವಾಗ  ಬಿಡಿಸಲು ಹೋದ ಪಿರ್ಯಾದಿಗೆ ಎಳೆದಾಡಿ ಹೊಡೆದು ನೂಕಿದ್ದರಿಂದ  ಇಬ್ಬರಿಗೂ ರಕ್ತಗಾಯ ಒಳಪೆಟ್ಟುಗಳಾಗಿದ್ದು ಅಲ್ಲದೆ ಪಿರ್ಯಾದಿಯು ಮದುವೆಗೂ ಮುಂಚೆ ಆತೋಪಿತರಿಂದ ಸಾಕಷ್ಟು ಕಷ್ಟ ನೋವು ಅನುಭವಿಸಿದ್ದು, ಗಂಡನ ಮನೆಯಲ್ಲಿ ಸುಖವಾಗಿ ಜೀವನ ಮಾಡುತ್ತಿದ್ದು, ಹಾಗೂ ಆರೋಪಿತರು  ಜೀವ ಬೆದರಿಕೆಯನ್ನು ಹಾಕಿದ್ದ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ.
Sandur PS
4 Cr.No:0159/2015
(IPC 1860 U/s 279,337,304(A) ; INDIAN MOTOR VEHICLES ACT, 1988 U/s 187 )
01/10/2015 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕ1.10.2015 ರಂಧು ಮದ್ಯಾಹ್ನ 3-15 ಗಂಟೆಗೆ ಪಿರ್ಯಾದಿದಾರರಾದ ಶಿವರಾಮ್ ವಾಸಃ- ಸಿದ್ದಾಪುರ ಗ್ರಾಮ ರವರು ಠಾಣೆಗೆ ಬಂದು ದೂರು ಕೊಟ್ಟಿದ್ದು ಸಾರಾಂಶವುಃ- ನಮ್ಮ ತಂದೆ ತಾಯಿಗೆ ನಾವು ಮೂವರು ಮಕ್ಕಳಿದ್ದು [೧] ಮಂಜುನಾಥ ವಯಸ್ಸು ೨೩ ವರ್ಷ [೨] ಮಾರುತಿ ವಯಸ್ಸು ೨೨  [೩]  ನಾನು ಪೂಜಾರಿ ಶಿವ ರಾಮ್ ಅಂತ ಇರುತ್ತೇವೆ.ಈ ದಿನ ದಿನಾಂಕ 1.10.2015 ರಂದು ಬೆಳಿಗ್ಗೆ ನನ್ನ ಅಣ್ಣ ಮಾರುತಿಯು ಸಂಡೂರುಗೆ ಹೊಸ ಸಿನಿಮಾ ಐರಾವತ ನೋಡಲು ನಮ್ಮೂರಿ ನ ತನ್ನಗೆಳೆಯ ನಾಗರಾಜ್‌ನನ್ನುಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂಬರ್  K.A.37-U521 ರಲ್ಲಿ ಹಿಂದುಗಡೆ ಕೂಡಿಸಿಕೊಂಡು ಮಾರುತಿಯು ಬೈಕ್‌ನ್ನು ನಡೆ ಸಿ ಕೊಂಡು ಸಂಡೂರು ಕಡೆಗೆ ಹೋದರು. ನಂತರ ನನಗೆ ವಿಷಯ ತಿಳಿದು ಬಂದಿದ್ದೇನೆಂದರೆ ಮಾರುತಿಯು ನಂದಿಹಳ್ಳಿ ಲಾರಿ ಮಾಲೀಕರಲ್ಲಿ ತಾನು ಕ್ಲೀನರ್ ಕೆಲಸ ಮಾಡುವ ಸಂಬಳ ಹಣವನ್ನು ತೆಗೆದುಕೊಂಡು ವಾಪಾಸ್ಸು ಬೈಪಾಸ್ ರಸ್ತೆಯಲ್ಲಿ ಬರುವಾಗ್ಗೆ ಪೆಟ್ರೋಲ್ ಬಂಕ್ ಬಳಿ ಮದ್ಯಾಹ್ನ 12-00 ಗಂಟೆಗೆ ಹೋಗುವಾಗ್ಗೆ ಅಷ್ಟರಲ್ಲಿ ಆತನ ಎದುರುಗಡೆಯಿಂದ ಧರ್ಮಾಪುರ H.R.G. ಬೈಪಾಸ್ ಕಡೆಯಿಂದ ಸೀನಬಸಪ ಕ್ಯಾಂಪ್ ಕಡೆಗೆ ಹೋಗಲು ಮೈನ್ಸ್ ಲೋಡಿನ ಒಂದು ಟಿಪ್ಪರ್ ಲಾರಿ ನಂಬರ್ K.A.35-A8587 ನೇದ್ದನ್ನು ಅದರ ಚಾಲಕನು ಲಾರಿಯನ್ನುಅತಿ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ಮಾರುತಿಯ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆಸಿ ಅಪಗಾತ ಮಾಡಿದ್ದರಿಂದ ಲಾರಿ ಹೊಡೆದ ರಭಸಕ್ಕೆ ಬೈಕ್ ನಡೆಸುತ್ತಿದ್ದ ಮಾರುತಿಗೆ ತಲೆಗೆ,ಎದೆಗೆ,ಎಡಮೊಣಕಾಲಿಗೆ ಭಾರಿ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಬೈಕ್‌ನಲ್ಲಿ ಹಿಂದೆ ಕೂತಿದ್ದ ನಾಗರಾಜ್‌ನಿಗೆ ತಲೆಗೆ. ಗದ್ದಕ್ಕೆ, ಕೈಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾ ಗಿರುತ್ತ ವೆಂದು ಈ ಅಪಘಾತವನ್ನು ದಾರಿಯಲ್ಲಿ ಮೈನ್ಸ್ ಲೋಡಿಗೆ ಹೋಗಿ ಬರುವ  ಲಾರಿ ಚಾಲಕರುಗಳಾದ ಶ್ರೀಕಾಂತ್, ಯೂನೂಸ್,ಪರಶೂರಾಮ್,ಹಸೇನ್ ಶೇಕ್ ಎಂಬುವವರು  ನೋಡಿರುತ್ತಾರೆಂದು ಮಾರುತಿ,ನಾಗರಾಜ್‌ರವರನ್ನು ಸಂಡೂರು ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿರುತ್ತಾರೆಂದು ಅಪಘಾತ ಮಾಡಿದ ಟಿಪ್ಪರ್ ಲಾರಿ ಚಾಲಕನು ಅಪಘಾತ ಮಾಡಿ ಲಾರಿ ನಿಲ್ಲಿಸಿ ಅಲ್ಲಿಂದ ಓಢಿ ಹೋಗಿರುತ್ತಾನೆಂದು ಗೊತ್ತಾಯಿತು. ಟಿಪ್ಪರ್ ಲಾರಿಯನ್ನು ಅದರ ಚಾಲಕ ವಾಹ ನ ವನ್ನು  ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ನನ್ನ ಅಣ್ಣ ಮಾರುತಿ ರವರ  ಸಾವಿಗೆ ಕಾರಣನಾದ ಲಾರಿ ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ದ  ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಕೇಳಿ ಕೊಳ್ಳುತ್ತೇನೆ.ಎಂದು ಇದ್ದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ