ಶನಿವಾರ, ಅಕ್ಟೋಬರ್ 3, 2015

PRESS NOTE OF 03/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0417/2015
(IPC 1860 U/s 398 )
03/10/2015 Under Investigation
ROBBERY - Attempt To Commit
Brief Facts :  ಈ ದಿನ ದಿನಾಂಕ: 3-10-2015 ರಂದು ಬೆಳಿಗ್ಗೆ 6-10 ಗಂಟೆಗೆ ಶ್ರೀಮತಿ. ಹನುಮಕ್ಕ, ವಾಸ: ಸಂಗನಕಲ್ಲು ಗ್ರಾಮರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 3-10-2015 ರಂದು ಬೆಳಗಿನ ಜಾವ 4-00 ಗಂಟೆ ಸುಮಾರಿಗೆ ತನ್ನ ಮೊಮ್ಮಗ ಅನೀಲ್ ವ: 10 ವರ್ಷ ಇತನು ದೊಡ್ಡಿಗೆ ಹೋಗುತ್ತೇನೆಂದು ಹೇಳಿದ್ದರಿಂದ ತಾನು ತಮ್ಮ ಮನೆಯ ಪಕ್ಕದಲ್ಲಿ ತನ್ನ ಮೊಮ್ಮಗನಿಗೆ ದೊಡ್ಡಿಗೆ ಕೂಡಿಸಿ ನಿಂತಿದ್ದಾಗ ಒಬ್ಬ ವ್ಯಕ್ತಿ ತನ್ನ ಹತ್ತಿರ ಬಂದು ಒಂದು ಕಬ್ಬಿಣದ ರಾಡ್ನ್ನು ತೋರಿಸಿ ನಿನ್ನ ಹತ್ತಿರ ಇರುವ ಹಣ ಮತ್ತು ಬಂಗಾರ ಕೊಡು ಎಂದು ಹೇದರಿಸಿದಾಗ ತಾನು ತನ್ನ ಬಳಿ ಹಣ ಇಲ್ಲ, ಬಂಗಾರ ಇಲ್ಲ ಅಂತಾ ಹೇಳಿದಾಗ ಸದರಿ ವ್ಯಕ್ತಿ ತನ್ನ ಕಿವಿಯಲ್ಲಿರುವ ಬಂಗಾರದ ಹರಳನ್ನು ಕಿತ್ತಿಕೊಳ್ಳಲು ಕಿವಿಯನ್ನು ಹಿಡಿದುಕೊಂಡಾಗ ತಾನು ಗಟ್ಟಿಯಾಗಿ ಕೂಗುತ್ತಾ ಸದರಿ ವ್ಯಕ್ತಿಯ ಕೈಯನ್ನು ಹಿಡಿದುಕೊಂಡಿದ್ದು ಸದರಿ ವ್ಯಕ್ತಿ ಕಬ್ಬಿಣದ ರಾಡ್ನಿಂದ ತನ್ನ ಬಲಕೈ ಮಣಿಕಟ್ಟಿಗೆ ಬಲವಾಗಿ ಹೊಡೆದಿದ್ದರಿಂದ ತಾನು ಆತನ ಕೈ ಬಿಟ್ಟಿದ್ದು ಅಷ್ಟರಲ್ಲಿ, ತನ್ನ ಮಗ, ಸೊಸೆ, ತಮ್ಮ ಕೇರಿಯ ಜನರು ಬಂದಿದ್ದು ನೋಡಿ ಸದರಿ ವ್ಯಕ್ತಿ ಅಲ್ಲಿಂದ ಓಡಿ ಹೋಗುತ್ತಿದ್ದಾಗ ತಮ್ಮ ಕೇರಿಯ ಜನರು ಆತನ ಬೆನ್ನತ್ತಿ ಆತನಿಗೆ ಹಿಡಿದುಕೊಂಡಿದ್ದು ಆತನ ಹೆಸರು ವಿಚಾರಿಸಲು ದೊಡ್ಡಸುಂಕಪ್ಪ @ ಸುಂಕಯ್ಯ ತಂದೆ ಸಿದ್ಧೇನರ ಬಸಪ್ಪ, ವ: 28 ವರ್ಷ, ವಾಸ: ಸಿರುವಾರಗ್ರಾಮ ಅಂತಾ ತಿಳಿಸಿದನೆಂದು ತಮ್ಮ ಕೇರಿಯ ಹಿರಿಯರೆಲ್ಲಾ ಬಂದು ಪೊಲೀಸ್ ಕಂಪ್ಲೇಂಟ್ ಕೊಡಬೇಕೆಂದು ಪಕ್ಕದಲ್ಲಿ ಗುಂಪಾಗಿ ನಿಂತು ಮಾತನಾಡುತ್ತಿದ್ದಾಗ ದೊಡ್ಡಸುಂಕಪ್ಪ @ ಸುಂಕಯ್ಯನು ಅಲ್ಲಿಂದ ಓಡಿ ಹೋಗಿರುತ್ತಾನೆಂದು ಇತನು ತನಗೆ ಕಬ್ಬಿಣದ ರಾಡ್ನ್ನು ತೋರಿಸಿ ತನ್ನ ಕಿವಿಯಲ್ಲಿದ್ದ ಬಂಗಾರದ ಹರಳನ್ನು ಸುಲಿಗೆ ಮಾಡಲು ಪ್ರಯತ್ನಿಸಿ, ತನ್ನ ಮೇಲೆ ಹಲ್ಲೇ ಮಾಡಿರುತ್ತಾನೆಂದು ಇತನ ಮೇಲೆ ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೇನೆ.
2 Cr.No:0418/2015
(IPC 1860 U/s 380,457 )
03/10/2015 Under Investigation
BURGLARY - NIGHT - Temple Theft
Brief Facts :  ಪಿಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ : 01/10/2015 ರಂದು ಸಂಜೆ 7-00 ಗಂಟೆಗೆ ಎಂದಿನಂತೆ ಕನಕ ದುರ್ಗಮ್ಮ ದೇವಸ್ಥಾನದ ಪೂಜೆಯನ್ನು ಮುಗಿಸಿ ನಂತರ ರಾತ್ರಿ 8-00 ಗಂಟೆಗೆ ರಾಮಾಲಯದ ದೇವಸ್ಥಾನದ ಪೂಜೆಯನ್ನು ಮುಗಿಸಿ ಎರಡು ದೇವಸ್ಥಾನದ ಲಾಕ್ ಮಾಡಿ ಹೋಗಿದ್ದು, ದಿನಾಂಕ : 02/10/2015 ರಂದು ಬೆಳಿಗ್ಗೆ 6-00 ಗಂಟೆಗೆ ಪೂಜೆ ಮಾಡಲು ಬಂದು ನೋಡಲು ದೇವಸ್ಥಾನದ ಗ್ರಿಲ್ಸ್ ಡೋರಗಳನ್ನು ಮುರಿದು ತೆಗೆದು ಎರಡು ದೇವಸ್ಥಾನದ ಒಳಗೆ ಇದ್ದ ಹುಂಡಿಗಳನ್ನು ಯಾವುದೋ ವಸ್ತವಿನಿಂದ ಮೀಟಿ ಒಡೆದು ಅದರೊಳಗೆ ಇದ್ದ ಸುಮಾರು 10000/- ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಸದರಿಯವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಕೋರಿ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Kurugod PS
3 Cr.No:0166/2015
(INDIAN MOTOR VEHICLES ACT, 1988 U/s 187 ; IPC 1860 U/s 279,337,304(A) )
03/10/2015 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕಃ 02/10/2015 ರಂದು ಪಿಯರ್ಾದಿದಾರ ಪಿ.ಶೇಕ್ಷಾವಲಿ ತನ್ನ ಹೆಂಡತಿಯ ಅಕ್ಕನ ಮಗಳ ಮಾಬುನ್ನಿರವರ ಮದುವೆ ಕಾರ್ಯಕ್ರಮ ಇದ್ದುದ್ದರಿಂದ ಪಿರ್ಯಾದಿ ಮತ್ತು ಆತನ ಸಂಬಂಧಿಕರು ಅರಿಸಿಣ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಊಟ ಆದ ನಂತರ ಎಮ್ಮಿಗನೂರಿನ ಜಡೇಶ ನಗರದ ಮುಖ್ಯ ರಸ್ತೆ ಪಕ್ಕದಲ್ಲಿ ರಾತ್ರಿ 08-45 ಗಂಟೆ ಸುಮಾರಿಗೆ ತನ್ನ ಅಣ್ಣ ದಾದಾವಲಿ ತನ್ನ ಅತ್ತೆ ಖಾದರಭೀ ಕಲೆತು ರಸ್ತೆಯ ಪಕ್ಕದಲ್ಲಿ ನಿಂತು ಮಾತನಾಡುತ್ತಿರುವಾಗ ಅದೇ ಸಮಯಕ್ಕೆ ಕಂಪ್ಲಿ ಕಡೆಯಿಂದ ಒಂದು ವಾಹನ ಜೋರಾಗಿ ಬಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಖಾದರಭೀ ಗೆ ತಗಲಿಸಿ ಅದೇ ರಭಸದಲ್ಲಿ ಅಲ್ಲಿಯೇ ಪಕ್ಕದಲ್ಲಿದ್ದ ದಾದವಲಿಗೆ ಡಿಕ್ಕಿ ಹೊಡೆದು ಆತನ ಪಕ್ಕದಲ್ಲಿ ನಿಂತಿದ್ದ ಪಿಯರ್ಾದಿ ಶೇಕ್ಷಾವಲಿಗೆ ತಗಲಿಸಿ ವಾಹನ ನಿಲ್ಲಿಸದೇ ಜೋರಾಗಿ ಎಮ್ಮಿಗನೂರು-ಕುರುಗೋಡು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಪಿಯರ್ಾದಿಗೂ ಹಾಗೂ ಆತನ ಅತ್ತೆಯ ಸೊಂಟಕ್ಕೆ ಒಳಪೆಟ್ಟಾಗಿದ್ದು, ದಾದಾವಲಿಯ ತಲೆಗೆ, ಹಣೆಗೆ, ಬಲಗಾಲಿಗೆ, ಭಾರಿ ಗಾಯಗಳುಂಟಾಗಿ ರಕ್ತ ಸೋರಿ ದಾದಾವಲಿಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು.  ಮೃತ ದಾದಾವಲಿಯ ಅಣ್ಣ-ತಮ್ಮಂದಿರಿಗೆ ವಿಷಯ ತಿಳಿಸಿ ಅವರು ಬಂದ ನಂತರ ಚಚರ್ಿಸಿ ಠಾಣೆಗೆ ಬಂದು ಅಜಾಗರೂಕತೆಯಿಂದ, ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದು ಸಾವುಂಟು ಮಾಡಿ ಪರಾರಿಯಾದ ಅಪರಿಚಿತ ವಾಹನ ಮತ್ತು ಚಾಲಕನ ವಿರುದ್ದ ಮುಂದಿನ ಕ್ರಮಕ್ಕಾಗಿ ದೂರು ನೀಡಿರುತ್ತದೆ.
Sirigeri PS
4 Cr.No:0148/2015
(MMDR (MINES 
03/10/2015 Under Investigation
AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ಪಿಎಸ್ ಐರವರು ದಿನಾಂಕಃ03/10/2015 ರಂದು ಬೆಳಿಗ್ಗೆ 5:00ಗಂಟೆಗೆ ಠಾಣಾ ಸರಹದ್ದಿನ ಮಾಟಸೂಗೂರು ಗ್ರಾಮದ ವೇದಾವತಿ ಹಗರಿ ನದಿಯಲ್ಲಿ ಟ್ರಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ಕಳ್ಳ ಸಾಗಾಟ ಮಾಡುತ್ತಿದ್ದಾರೆಂದು ಎಂದು ಖಚಿತ ಮಾಹಿತಿ ಬಂದ ಮೇರೆಗೆ, ನಾನು ಪಿಸಿ-638 ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಅವರ ಒಪ್ಪಿಗೆ ಪಡೆದು,  ನಾನು ಸಿಬ್ಬಂದಿಗಳಾದ  ಪಿಸಿ-638.770,709.1162 ರವರು ಪಂಚರು ಸೇರಿ ಬೆಳಿಗ್ಗೆ 5:15ಗಂಟೆಗೆ ಬಿಟ್ಟು ಬೆಳಿಗ್ಗೆ 6:00ಗಂಟೆಗೆ ಮಾಟಸೂಗೂರು ಗ್ರಾಮದ ವೇದಾವತಿ ಹಗರಿ ನದಿ ದಡದಲ್ಲಿ ನಿಂತು ನೋಡಲಾಗಿ ಸದರಿ ಹಗರಿಯಲ್ಲಿ ಒಂದು ಟ್ರಾಕ್ಟರ್  ಆಕ್ರಮವಾಗಿ ಮರಳು ತುಂಬಿಕೊಂಡು ನಿಂತಿದ್ದು ಕಂಡುಬಂದಿದ್ದು, ನಾನು ಮತ್ತು ಸಿಬ್ಬಂದಿಗಳಾದ  ಪಿಸಿ-638.770,709.1162 ರವರು ಹಾಗೂ ಪಂಚರ ಸಮಕ್ಷಮ ಸದರಿ ಹಗರಿಯಲ್ಲ್ಲಿ ದಾಳಿ ಮಾಡಲಾಗಿ ಒಂದು ಮರಳು ತುಂಬಿದ ಟ್ರಾಕ್ಟರ್ ಮತ್ತು ಟ್ರಾಲಿ ಸಿಕ್ಕಿಬಿದ್ದಿದ್ದು, ಅದರ ಚಾಲಕ ಸಿಕ್ಕಿ ಬಿದ್ದಿದ್ದು, ಸದರಿ ಟ್ರಾಕ್ಟರ್ನ್ನು ಪರಿಶೀಲಿಸಲು ನೀಲಿ ಬಣ್ಣದ ಸೋನಾಲಿಕ ಡಿಐ-740 ಕಂಪನಿಯ ಇಂಜಿನ್ ಇದ್ದು ಇದರ ನಂ:ಎಪಿ21ಟಿಯು7729, ಟ್ರಾಲಿ ನಂ:ಎಪಿ21/ಯು5533 ಎಂದು ಬರೆದಿತ್ತು, ಟ್ರಾಲಿಯಲ್ಲಿ ಸುಮಾರು 400ರೂ ಬೆಲೆ ಬಾಳುವ ಮರಳು ತುಂಬಿತ್ತು, ಸದರಿ ಟ್ರಾಕ್ಟರ್ ಸು 1ಲಕ್ಷರೂ ಬೆಲೆಬಾಳಬಹುದು, ಸದರಿ ಟ್ರಾಕ್ಟರ್ ಚಾಲಕನನ್ನು ವಿಚಾರಿಸಲು 1) ತನ್ನ ಹೆಸರು ಸನಾವುಲ್ಲಾ ತಂದೆ ಸಲಾಂ, 25ವರ್ಷ, ಮುಸ್ಲಿಂ ಜನಾಂಗ, ಟ್ರಾಕ್ಟರ್ ಚಾಲಕ, ವಾಸ:ಹೊಳಗುಂದ(ಎಪಿ) ಎಂದು ತಿಳಿಸಿದನು, ಸದರಿ ಟ್ರಾಕ್ಟರ್ ಮಾಲೀಕರ ಹೆಸರು ಸಲಾಂ ತಂದೆ ಶೇಕ್ಷಾವಲಿ, 55ವರ್ಷ,ವಾಸ:ಹೊಳಗುಂದ ಎಂದು ತಿಳಿಸಿದನು, ಈತನಿಗೆ ಮರಳು ಸಾಗಾಟ ಮಾಡಲು ಪರವಾನಗೆ ಕೇಳಲು ಯಾವುದೇ ಪರವಾನಗೆ ಹೊಂದಿರುವುದಿಲ್ಲವೆಂದು ತಿಳಿಸಿದನು,  ಕಾರಣ ಸದರಿ ಟ್ರಾಕ್ಟರ್ ಚಾಲಕ ಮರಳು ಸಾಗಾಟ ಮಾಡಲು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಸಕರ್ಾರಕ್ಕೆ ರಾಜಧನ ಕಟ್ಟದೆ ನಷ್ಠವನ್ನುಂಟು ಮಾಡಿ ಅಕ್ರಮವಾಗಿ ಸುಮಾರು  ರೂ, 400/- ಬೆಲೆ ಬಾಳುವ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ  ಒಂದು ಟ್ರ್ಯಾಕ್ಟ್ರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ ಬೆಳಿಗ್ಗೆ 8:00ಗಂಟೆಗೆ ಬಂದು ಸದರಿ ಚಾಲಕ ಮತ್ತು ಮಾಲೀಕರ ವಿರುದ್ಧ ಕಲಂ: 21(1) ಎಂಎಂಡಿಆರ್ ಕಾಯ್ದೆ ಆಧಾರ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ