ಬುಧವಾರ, ಅಕ್ಟೋಬರ್ 7, 2015

PRESS NOTE OF 07/10/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0080/2015
(CODE OF CRIMINAL PROCEDURE, 1973 U/s 41,109 )
07/10/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ:07/10/2015 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಇಂಡಸ್ಟ್ರಿಯಲ್ ಏರಿಯಾದ ಸುಜಾತ ಆರ್ಮ್ಸ ಪ್ಯಾಕ್ಟರಿಯ ಗೋಡೆಯ ಪಕ್ಕದಲ್ಲಿ ಆರೋಪಿತನು ಸಂಶಯಾಸ್ಪದವಾಗಿ ನಿಂತುಕೊಂಡಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದರಿಂದ ನಮಗೆ ಆ ವ್ಯಕ್ತಿಯ ಮೇಲೆ ಸಂಶಯ ಬಂದಿದ್ದರಿಂದ ಸದರಿಯವನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲು ಮೊದಲು ತನ್ನ ಹೆಸರು ವಿಳಾಸ ಹೇಳಲು ತಡವರಿಸಿದ್ದು, ಆ ವೇಳೆಯಲ್ಲಿ ಆ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಲಾಗಿ ಸಮರ್ಪಕವಾದ ಉತ್ತರ ತಿಳಿಸದೇ ಇದ್ದುದರಿಂದ ಸದರಿಯವನು ಯಾವುದಾದರೂ ಕಳವು, ವಗೈರೆಗೆ ಸಂಬಂದಿಸಿದ ಸಂಜ್ಞೆಯ ಅಪರಾಧ ಮಾಡಲು ಬಂದಿರಬಹುದೆಂದು ಮುಂಜಾಗ್ರತೆಗಾಗಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೇನೆ.
Itagi PS
2 Cr.No:0051/2015
(CODE OF CRIMINAL PROCEDURE, 1973 U/s 110(E)(G) )
07/10/2015 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕ 07-10-2015 ರಂದು 8-30 ಎ.ಎಂ ಗಂಟೆ ಸುಮಾರಿಗೆ ಠಾಣಾ ಪಿ,,ಸಿ 879 ರವರನ್ನು ಕರೆದುಕೊಂಡು ಮರಳು ನಿಗಾವಣೆ ಕುರಿತು ಅಲಬೂರು, ಚಿಮ್ಮನಹಳ್ಳಿಯ ಹಗರಿ ಹಳ್ಳದ ಕಡೆಗೆ ಹೋಗಿ ಮರಳಿ ಬರುತ್ತಿರುವಾಗ  9-15 ಎ.ಎಂ ಗಂಟೆ ಸುಮಾರಿಗೆ ಕೊಟ್ಟೂರು ರಸ್ತೆಯ ಕನ್ನಿಹಳ್ಳಿ ಕ್ರಾಸ್ ನಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ದುಬರ್ಾಷೆಗಳಿಂದ ಬೈದಾಡುತ್ತಾ, ಜೊತೆಗೆ ತನ್ನ ದೇಹ ಪ್ರದರ್ಶನದ ಮೂಲಕ ಭಯ-ಭೀತಿಯನ್ನು ಉಂಟು ಮಾಡುತ್ತಾ ನಿಂತಿದ್ದು, ಈತನಿಗೆ ನಾನು ತಿಳುವಳಿಕೆ ನೀಡಿ ಮನೆಗೆ ಮರಳುವಂತೆ ಎಚ್ಚರಿಕೆ ನೀಡಿದ್ದಾಗ್ಯೂ ಸಹಾ ಇವನು ಅದೇ ರೀತಿ ವರ್ತನೆ ಮುಂದುವರಿಸುತ್ತಾ ತನ್ನ ದೇಹದ ದೃಢತೆ ಹಾಗೂ ವರ್ತನೆಯಿಂದ ಸಾರ್ವಜನಿಕರಿಗೆ ದುಬರ್ಾಷೆಗಳಿಂದ ಬೈದಾಡುತ್ತಾ ಭಯ ಭೀತಿ ಉಂಟು ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು ಈತನ ಹೆಸರು ವಿಳಾಸವನ್ನು ಪಡೆಯಲಾಗಿ ತನ್ನ ಹೆಸರು ಸಾಸ್ವಿಹಳ್ಳಿ ಕೊಟ್ರೇಶ ತಂದೆ ಲೇಟ್ ಬನ್ನಿಗೌಡ, 36 ವರ್ಷ, ಲಿಂಗಾಯ್ತ ಜನಾಂಗ, ವ್ಯವಸಾಯ, ಸಾ.6 ನೇ ವಾರ್ಡ, ಇಟ್ಟಿಗಿ ಗ್ರಾಮ, ಹಡಗಲಿ ತಾಲೂಕು ಬಳ್ಳಾರಿ ಜಿಲ್ಲೆ ಎಂದು  ತಿಳಿಸಿದ್ದು ಸದರಿ ಆಸಾಮಿಯು ಸಾರ್ವಜನಿಕ ಶಾಂತತೆಗೆ ಹಾಗೂ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನು ಉಂಟು ಮಾಡುವವನಾಗಿದ್ದು, ಜೊತೆಗೆ ಸಾರ್ವಜನಿಕರಿಗೆ ಭಯ-ಭೀತಿಯನ್ನೂ ಸಹಾ ಉಂಟು ಮಾಡುವವನಾಗಿದ್ದರಿಂದ ಇವನನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ 9-30 ಎ.ಎಂ ಗಂಟೆಗೆ ಮರಳಿ ಠಾಣೆಗೆ ಬಂದು ಇವನ ಮೇಲೆ ಮುಂಜಾಗ್ರತಾ ಕ್ರಮವಾಗಿ ಸಾರಾಂಶದನ್ವಯ ಠಾಣಾ ಗುನ್ನೆ ನಂ 51/2015 ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.
Kampli  PS
3 Cr.No:0129/2015
(CODE OF CRIMINAL PROCEDURE, 1973 U/s 109 )
07/10/2015 Under Investigation
CrPC - Security For Good Behaviour (Sec 109)
Brief Facts :  ಈ ದಿನ ದಿನಾಂಕ 07-10-2015 ರಂದು ಬೆಳಿಗ್ಗೆ 04-30 ಗಂಟೆಗೆ ನಾನು ಪಿ.ಸಿ695  ರವರಿಗೆ ಕರೆದುಕೊಂಡು ಪಟ್ಟಣದಲ್ಲಿ ಮಾರ್ನಿಂಗ್ ಬೀಟ್ ಕರ್ತವ್ಯ  ಮಾಡುತ್ತಿರುವಾಗ ಬೆಳಿಗ್ಗೆ 05-30 ಗಂಟೆಗೆ ಕಂಪ್ಲಿಯ ಎ.ಪಿ.ಎಂ.ಸಿ ಹತ್ತಿರ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಇಬ್ಬರು ವ್ಯಕ್ತಿಗಳು ತಮ್ಮ ಇರುವಿಕೆಯನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸಿದವರಿಗೆ ಬೆಳಿಗ್ಗೆ 05-45 ಗಂಟೆಗೆ ಹಿಡಿದು ಮೊದಲನೆಯವನಿಗೆ ವಿಚಾರಿಸಲು ಅಬೀಬುಲ್ಲ ತಂದೆ ಮುಲಾಲಿ, ಎರಡನೆಯವನು ತನ್ನ ಹೆಸರು ರೆಹಮುತ್ತುಲ್ಲ ತಂದೆ ಮಾಬುಸಾಬ್ ಇಬ್ಬರೂ ವಾಸ ಗಂಗಾವತಿ ಹೆಸರು  ಅಂತ ತಿಳಿಸಿದ್ದು, ಅನುಮಾನ ಬಂದು ಪುನಃ ವಿಚಾರಿಸಲು, ಮೊದನೆಯವನು  ತನ್ನ ಹೆಸರು ಇನಾಯತ್ ತಂದೆ ಮೆಹಬೂಬ್ ಸಾಬ್ 25ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, ಸಾ// ಕೆ.ಇ.ಬಿ.ಹತ್ತಿರ ಕಂಪ್ಲಿಲೂ, ಎರಡನೆಯವನು ತನ್ನ ಹೆಸರು ಹಮಾಲಿ ಹುಸೇನ್ ತಂದೆ ಲೇಟ್ ಅಬ್ಬಾಸ್ ಅಲಿ 23ವರ್ಷ, ಮುಸ್ಲಿಂ ಜನಾಂಗ, 
ಹಮಾಲಿ ಕೆಲಸ, ಸಾ// ಕೆ.ಇ.ಬಿ.ಹತ್ತಿರ ಅಂತ ತಿಳಿಸಿದ್ದು, ಸದರಿ ಇಬ್ಬರೂ ಆಸಾಮಿಗಳು ಕಂಪ್ಲಿಯಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ಶಂಕಿಸಿ, ಬೆಳಿಗ್ಗೆ 06-30 ಗಂಟೆಗೆ ಮರಳಿ ಠಾಣೆಗೆ ಬಂದು ಆಸಾಮಿಯ ವಿರುದ್ದ ಗುನ್ನೆ ನಂ  129/2015 ಕಲಂ 109 ಸಿಆರ್ ಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಮಾನ್ಯ ತಹಶಿಲ್ದಾರರು ಹಾಗೂ ತಾಲೂಕು ದಂಡಾಧೀಕಾರಿಗಳು ಹೊಸಪೇಟೆ ರವರ ಸನ್ನಿಧಿಗೆ ವರದಿಯೊಂದಿಗೆ ನಿವೇದಿಸಿಕೊಂಢಿರುತ್ತದೆ.
4 Cr.No:0130/2015
(KARNATAKA POLICE ACT, 1963 U/s 78(3) )
07/10/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ 05-10-2015 ರಂದು ಸಂಜೆ 6.30 ಗಂಟೆಗೆ ಪಿ.ಎಸ್.ಐ(ಕಾ&ಸು) ಕಂಪ್ಲಿ ರವರು ಕಂಪ್ಲಿ ಠಾಣಾ ಸರಹದ್ದಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಪಿಸಿ85,724,910 ರವರೊಂದಿಗೆ ಗಸ್ತಿನಲ್ಲಿದ್ದಾಗ ಸದರಿ ಗ್ರಾಮದ  ಅಂಗಡಿ ಯರ್ರಿಸ್ವಾಮಿ ರವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಸೀಬಿನ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಪಿ.ಎಸ್.ಐ ರವರು ಪಿಸಿ85 ರವರೊಂದಿಗೆ ಪಂಚರನ್ನು ಕರೆಯಿಸಿಕೊಂಡು ಮೇಲ್ಕಂಡ ಸಿಬ್ಬಂದಿ ಮತ್ತು ಪಂಚರ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ  ಸಂಜೆ 7.00 ಗಂಟೆಗೆ ಹೋಗಿ ನಸೀಬಿನ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಅಂಗಡಿ ಯರ್ರಿಸ್ವಾಮಿ  ತಂದೆ ರಾಮಚಂದ್ರಪ್ಪ ನ ಮೇಲೆ ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ಒಂದು ಮಟಕಾ ಪಟ್ಟಿ, 2) ಒಂದು ಬಾಲ್ ಪೆನ್ನು 3) ನಗದು ಹಣ ರೂ. 850/- ಅನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಮರಳಿ ಠಾಣೆಗೆ ಬಂದು ಆರೋಪಿ ವಿರುದ್ಧ ಕ್ರಮ ಜರುಗಿಸಲು ನೀಡಿದ ಜ್ಞಾಪನ ಪಡೆದು ಠಾಣೆಯ ಎನ್.ಸಿ ನಂ: 18/2015 ಕಲಂ 78(ಎ) ಕೆ.ಪಿ ಯಾಕ್ಟ್ ದಾಖಲಿಸಿದೆ.ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದು ಈ ದಿನ ಮಾನ್ಯ ನ್ಯಾಯಾಲಯದ ಅನುಮತಿ ಮೇರೆಗೆ ಪ್ರ.ವ ವರಧಿಯನ್ನು ದಾಖಲಿಸಿದೆ.
Moka PS
5 Cr.No:0143/2015
(IPC 1860 U/s 143,147,148,324,341,504,506,149 )
07/10/2015 Under Investigation
RIOTS - Others
Brief Facts :  ಈ ದಿನ ದಿ:೦೭-೧೦-೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮೇಲ್ಕಂಡ ಪಿರ‍್ಯಾದಿದಾರರ ಖುದ್ದಾಗಿ ಠಾಣೆಗೆ ಬಂದು  ಕೊಟ್ಟ ಗಣಕೀಕೃತ ದೂರು ಏನಂದರೇ, ತಮ್ಮಗೂ ಮತ್ತು ಆರೋಪಿತರಿಗೂ ಹೊಲಗಳಲ್ಲಿ ನೀರು ಬಿಡುವ ವಿಷಯದಲ್ಲಿ ಆರೋಪಿತರು   ತಮ್ಮಗೂ ಹೊಡೆ ಬಡೆ ಮಾಡಿದ್ದು  ಮತ್ತೆ ಇದೇ ವಿಷಯಕ್ಕೆ ದಿನಾಂಕ:೦೬-೧೦-೨೦೧೫ ರಂದು ಬೆಳಿಗ್ಗೆ ೬ ಗಂಟೆಗೆ ನಾನು ನನ್ನ  ಅಣ್ಣನಾದ ಎಸ್. ಮಲ್ಲಿಕಾರ್ಜುನ ಇಬ್ಬರು ಮೇಣಿಸಿನ ಹೊಲಕ್ಕೆ ಕ್ರಿಮಿನಾಶಕ ಔಷದಿ ಹೊಡೆದುಕೊಂಡು ವಾಪಸ್ಸು ಮನೆಗೆ ಬರುತ್ತಿರುವಾಗ ಬೆಳಿಗ್ಗೆ ೮-೩೦ ಗಂಟೆಗೆ  ದೇಯಾಲ ವೆಂಕಟೇಶರವರ ಹೊಲದ ಬಳಿ   ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ ಏಕಾಎಕಿಯಾಗಿ (೧) ಹೆಚ್. ದೊಡ್ಡಬಸಪ್ಪ ತಂದೆ ಹೀರಾಳ್ ದೇವೇಂದ್ರ (೨) ಹೆಚ್. ಪಂಪಾಪತಿ ತಂದೆ ಹೀರಾಳ್ ದೇವೇಂದ್ರ (೩) ಪೋನ್ನೂರು ಮಲ್ಲಿಕಾರ್ಜುನ ತಂದೆ ಪೋನ್ನೂರು ಹುಲಿಗೆಪ್ಪ (೪) ಪೋನ್ನೂರು ನಾಗಣ್ಣ ತಂದೆ ಪೋನ್ನೂರು ಮಲ್ಲಯ್ಯ (೫)  ಹೀರಾಳ್ ಗೋವಿಂದ ತಂದೆ ಹೀರಾಳ್ ಮಲ್ಲಣ್ಣ ಇವರೆಲ್ಲಾರು ಅಕ್ರಮಕೂಟ ಗುಂಪು ಕಟ್ಟಿಕೊಂಡು ಬಂಡಿಗೂಟಗಳನ್ನು ಕೈಯಲ್ಲಿ ಹಿಡಿದುಕೊಂಡು ನಮ್ಮ ಮೋಟಾರ್ ಸೈಕಲ್‌ಗೆ ಅಡ್ಡ ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ  ನನಗೆ ನನ್ನ ಅಣ್ಣನಾದ ಎಸ್. ಮಲ್ಲಿಕಾರ್ಜುನರವರಿಗೆ ಬಂಡಿಗೂಟಗಳಿಗೆ ಸಿಕ್ಕಪಟ್ಟಿ ನನಗೆ ತಲೆಗೆ ಮೈ ಕೈಗಳಿಗೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು ನನ್ನ ಅಣ್ಣನಿಗೆ ಕೈ ಮೈಗೆ ಹೊಡೆದು ಒಳ ಪೆಟ್ಟು ಮತ್ತು ರಕ್ತಗಾಯ ಮಾಡಿದ್ದು ಮತ್ತು ದುರ್ಬಾಷೆಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ  ಆಗ ನನ್ನ ತಮ್ಮನಾದ ಎಸ್. ಆಂಜಿನೇಯ್ಯ ಯಾವುದೋ ಆಟೋರಿಕ್ಷಾದಲ್ಲಿ ನನಗೆ ಮತ್ತು ನನ್ನ ಅಣ್ಣನಾದ  ಎಸ್.ಮಲ್ಲಿಕಾರ್ಜುನನ್ನು  ಕರೆದುಕೊಂಡು  ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಬೆಳಿಗ್ಗೆ ೧೧ ಗಂಟೆ ದಾಖಲಿಸಿದನು. ನಿನ್ನೆ ಸಂಜೆ ವಿಮ್ಸ್  ಆಸ್ಪತ್ರೆಯಿಂದ ಚಿಕಿತ್ಸೆ ಮಾಡಿಸಿಕೊಂಡು ಮತ್ತು ನಮ್ಮ ಹಿರಿಯರಿಗೆ ವಿಷಯ ತಿಳಿಸಿ  ಈ ದಿನ ತಡವಾಗಿ  ಠಾಣೆಗೆ ಬಂದು ನಮಗೆ ಮೇಲ್ಕಂಡ ೦೫ ಜನರು ಹೊಡೆದಿದ್ದು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ನೀಡಿದ್ದರಿಂದ ಮೇಲ್ಕಂಡ ಕಲಂ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಗೊಂಡಿದೆ.
T.B. Dam PS
6 Cr.No:0026/2015
(IPC 1860 U/s 279,338,304(A) ; INDIAN MOTOR VEHICLES ACT, 1988 U/s 183,187 )
07/10/2015 Under Investigation
MOTOR VEHICLE ACCIDENTS FATAL - National Highways
Brief Facts :  ದಿನಾಂಕ:- 07/10/2015 ರಂದು ಮಧ್ಯರಾತ್ರಿ ಸುಮಾರು 00-05 ಗಂಟೆಗೆ ಮೃತ ವಿ. ಸತೀಶ್ ಮತ್ತು ಅವರ ಸ್ನೇಹಿತ ಗಾಯಾಳು ಗುರುರಾಜ ರವರು ಟಿ.ಬಿ.ಡ್ಯಾಂ ಗಣೇಶ್ ಗುಡಿ ಬಳಿ ಗಾಳೆಪ್ಪ ಟೀ. ಅಂಗಡಿ ಹತ್ತಿರದಲ್ಲಿ ಚಿತ್ರದುರ್ಗ-ಸೊಲ್ಲಾಪುರ ರಾಷ್ಠ್ರೀಯ ಹೆದ್ದಾರಿಯಲ್ಲಿ ಬುಲೆಟ್ ಮೋ.ಸೈಕಲ್ ಕೆ.ಎ. 35 ವೈ. 9641 ನೇದ್ದನ್ನು ಟಿ.ಬಿ.ಡ್ಯಾಂ ಕಡೆ ಮುಖಮಾಡಿ ರಸ್ತೆ ಎಡಗಡೆ ನಿಲ್ಲಿಸಿಕೊಂಡು ಮೊಬೈಲ್ ಫೋನ್ ನಲ್ಲಿ ಏನೋ ನೋಡುತ್ತಿರುವಾಗ ಅದೇ ಸಮಯಕ್ಕೆ  ಕೆ.ಎ. 18/3924 ಲಾರಿಯ ಚಾಲಕ ಲಾರಿಯನ್ನು ಚಿತ್ರದುರ್ಗ-ಸೊಲ್ಲಾಪುರ ರಸ್ತೆಯಲ್ಲಿ ಅತಿವೇಗ ಮತ್ತು 
ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಬುಲೆಟ್ ಮೋ.ಸೈಕಲ್ ಗೆ ಮತ್ತು ಮೃತ ಸತೀಶ್. ಮತ್ತು ಗಾಯಾಳು ಗುರುರಾಜ್ ರವರಿಗೆ ಡಿಕ್ಕಿಪಡಿಸಿರುವುದರಿಂದ ಮೃತ ಸತೀಶ್ ರವರಿಗೆ ಮತ್ತು ಗುರುರಾಜ್ ರವರಿಗೆ ಗಂಭೀರಸ್ವರೂಪದ ರಕ್ತಗಾಯಗಳು ಸಂಭವಿಸಿ ಸತೀಶ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ದೂರು ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ