ಶುಕ್ರವಾರ, ಅಕ್ಟೋಬರ್ 16, 2015

PRESS NOTE OF 16/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0435/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
16/10/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿನಾಂಕ: 16-10-2015 ರಂದು ಬೆಳಿಗ್ಗೆ 6-30 ಗಂಟೆಗೆ ಶ್ರೀ. ಕೆ. ಹೊಸಕೇರಪ್ಪ, ಪಿ.ಎಸ್.ಐ., ಗ್ರಾಮೀಣ ಪೊಲೀಸ್ ಠಾಣೆ, ಬಳ್ಳಾರಿರವರು ದೂರು ನೀಡಿದ್ದು ಸಾರಾಂಶ ದಿನಾಂಕ: 16-10-2015 ರಂದು ತಾವು ಸಿಬ್ಬಂದಿಯವರಾದ ಹೆಚ್-43, ಪಿಸಿ-810-414 ರವರೊಂದಿಗೆ ಪೊಲೀಸ್ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಗಸ್ತಿನಲ್ಲಿದ್ದಾಗ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಕೆಲವು ಜನರು ಒಂದು ಟ್ರಕ್ಟರ ಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದಿದ್ದು ಈ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಬೆಳಿಗಿನ ಜಾವ 4-50 ಗಂಟೆಗೆ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಹೋಗಿ ನೋಡಲು ಹಗರಿ ಹಳ್ಳದಲ್ಲಿ ಕೆಲವು ವ್ಯಕ್ತಿಗಳು 03 ಟ್ರಾಕ್ಟರ್-ಟ್ರಾಲಿಗಳನ್ನು ಸಾಲಾಗಿ ನಿಲ್ಲಿಸಿಕೊಂಡು ಮರಳನ್ನು ತುಂಬುತ್ತಾ ಇದ್ದುದು ಕಂಡು ಬಂದಿದ್ದರಿಂದ ದಾಳಿ ಮಾಡಲು ಅಲ್ಲಿದ್ದ ಜನರು ಸ್ಥಳದಿಂದ ಓಡಿ ಹೋಗಿದ್ದು ಅವರುಗಳು ಕಮ್ಮರಚೇಡು ಗ್ರಾಮದ ಬಳಿ ಇರುವ ಹಗರಿ ಹಳ್ಳದಲ್ಲಿ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದರಿಂದ ಟ್ರಾಕ್ಟರ್ ನಂಬನರ್ 1] ನೊಂದಣಿ ಸಂಖ್ಯೆ: ಕೆ.ಎ-34-ಟಿಎ-0210 ಟ್ರಾಲಿ ನೊಂದಣಿ ಸಂಖ್ಯೆ: ಕೆ.ಎ-34-ಟಿಎ-0121 2] ನೊಂದಣಿ ಸಂಖ್ಯೆ ಕೆಎ-34-ಟಿಎ-0066 ಟ್ರಾಲಿ ನೊಂದಣಿ ಸಂಖ್ಯೆ: ಕೆ.ಎ-34-ಟಿ-2331 3] ಟ್ರಾಕ್ಟರ್ ನೊಂದಣಿ ಸಂಖ್ಯೆ ಇರುವುದಿಲ್ಲ. ಇಂಜಿನ್ ನಂಬರ್ ಎಸ್ಬಿಡಬ್ಲ್ಯೂ0ಎಲ್2467 ಅಂತಾ ಇರುತ್ತದೆ. ಟ್ರಾಲಿ ಕೆಂಪು ಬಣ್ಣದಿದ್ದು ನೊಂದಣಿ ಸಂಖ್ಯೆ ಆಗಲೀ, ಚಾಸ್ಸಿ ನಂಬರ್ ಆಗಲೀ ಇರುವುದಿಲ್ಲ ಮೊದಲನೆ ಟ್ರಾಕ್ಟರ್ ನ  ಟ್ರಾಲಿಯಲ್ಲಿನ ರೂ. 100/- ಬೆಲೆಯ ಅಂದಾಜು 10 ಪುಟ್ಟಿಯಷ್ಟು ಮರಳು ಮತ್ತು ಸ್ಯಾಂಪಲ್ ಮರಳನ್ನು ಪಂಚರ ಸಮಕ್ಷಮ ಜಪ್ತುಮಾಡಿಕೊಂಡು ಬಂದಿದ್ದಾಗಿ ಮೇಲ್ಕಂಡವರ ಮೇಲೆ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
Hadagali PS
2 Cr.No:0097/2015
(IPC 1860 U/s 506,341,504,149 )
16/10/2015 Under Investigation
CRIMINAL INTIMIDATION - Criminal Intimidation
Brief Facts :  J
Kampli  PS
3 Cr.No:0133/2015
(KARNATAKA MINOR MINERAL CONSISTENT RULE 1994 U/s 
16/10/2015 Under Investigation
42,44 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A) ; IPC 1860 U/s 379 )
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ಈ ದಿನ ದಿನಾಂಕ: 16/10/2015ರಂದು ಬೆಳಗಿನ ಜಾವ 4.15ಗಂಟೆಗೆ ಪಿಎಸ್ ಐ (ಕಾ & ಸು) ರವರಿಗೆ ಕಂಪ್ಲಿ ಪೋಲಿಸ್ ಠಾಣಾ ಸರಹದ್ದಿನ ಇಟಗಿ ಗ್ರಾಮದ ಬಳಿಯ ನಾರಿಹಳ್ಳದಿಂದ ಟ್ರಾಕ್ಟರ್ -ಟ್ರಾಲಿಗಳಲ್ಲಿ ಕಳ್ಳತನದಿಂದ  ಅಕ್ರಮವಾಗಿ ಮರಳನ್ನ್ನು  ತುಂಬಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ ಎಸ್ ಐ ರವರು  ಪಂಚರು & ಸಿಬ್ಬಂದಿಯವರ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಕಂಪ್ಲಿ ಇಟಗಿ ರಸ್ತೆಯಲ್ಲಿ ಟ್ರಾಕ್ಟರ್ - ಟ್ರಾಲಿಗಳಲ್ಲಿ ಮರಳನ್ನ್ನು ತುಂಬಿಕೊಂಡು ಬರುತ್ತಿದ್ದ ವಾಃನಗಳನ್ನು ನಿಲ್ಲಿಸಲು ಸೂಚಿಸಿದ್ದು ಸೋನಾಲಿಕಾ ಕಂಪನಿಯ ಟ್ರಾಕ್ಟರ್ ಟ್ರಾಲಿ ಚಾಲಕನು ಓಡಿ ಹೋಗಿದ್ದು,  ಜಾನ್ ಡೀರ್ ಕಂಪನಿಯ ಟ್ರಾಕ್ಟರ್ ನಂ ಕೆಎ34/ಟಿಎ0805- ಟ್ರಾಲಿ ನಂ ಕೆಎ35/ಎಂ 460ನೇದ್ದರ  ಚಾಲಕ ನಾಗರಾಜ ಸಿಕ್ಕಿದ್ದು ಎರೆಡು  ಟ್ರಾಕ್ಟರ್  ಎರೆಡು ಟ್ರಾಲಿಗಳನ್ನ್ನು ಅದರಲ್ಲಿದ್ದ  ಮರಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಮರಳಿ ಠಾಣೆಗೆ ಬಂದು ಎರೆಡೂ ಟ್ರಾಕ್ಟರ್ - ಟ್ರಾಲಿಗಳ ಚಾಲಕರ, ಮಾಲಿಕರ ಮೇಲೆ ಕಾನೂನುನ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ
4 Cr.No:0134/2015
(IPC 1860 U/s 00MP )
16/10/2015 Under Investigation
MISSING PERSON - Women
Brief Facts :  ದಿನಾಂಕ: 14/10/2015ರಂದು ಬೆಳಿಗ್ಗೆ 10ಗಂಟೆಗೆ ಪಿರ್ಯಾದಿದಾರರ ಮಗಳು ಕು. ಸ್ವರೂಪಳು ಕಂಪ್ಲಿ ಕೊಟ್ಟಾಲ್ ನ ತಮ್ಮ ಮನೆಯಿಂದ  ಕಂಪ್ಲಿಗೆ ಹೋಗಿ ಪೋಟೋ ತೆಗಸಿಕೊಂಡು ಬರುವುದಾಗಿ ಹೇಳಿ ಹೋದವಳು ವಾಪಾಸು ಮನೆಗ ಬಾರದೇ ಕಾಣೆಯಾಗಿದ್ದು ಕಾಣೆಯಾದ ತನ್ನ ಮಗಳನ್ನು ಈವರೆಗೆ ಹುಡುಕಾಡಿದ್ದು  ಸಿಗದೇ ಇದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ
Kottur PS
5 Cr.No:0143/2015
(IPC 1860 U/s 506,504,307,323,324 )
16/10/2015 Under Investigation
ATTEMPT TO MURDER - Due To Other Causes
Brief Facts :  ದಿನಾಂಕ 16-10-2015 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿಠಾಣೆಗೆ ಹಾಜರಾಗಿ ಕೊಟ್ಟ ದೂರು ಸಾರಾಂಶ . ಈಗ್ಗೆ 10 ವರ್ಷಗಳ ಹಿಂದೆ ಪಿರ್ಯಾದಿಯ ತಂಗಿ ಸುಮಳಿಗೆ ಅರಸನಹಾಳು ಗ್ರಾಮದ ವಾಸಿ ಶಿವಪ್ರಕಾಶಗೌಡ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು ಆಕೆಗೆ ಶಿವಪ್ರಕಾಶಗೌಡನು ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿದ್ದರಿಂದ ಈಗ್ಗೆ 6 ತಿಂಗಳ ಹಿಂದೆ ತನ್ನ ಹೆಂಡತಿ ಸುಮಳು ಹಲವಾಗಲು ಠಾಣೆಯಲ್ಲಿ ಗಂಡ ಶಿವಪ್ರಕಾಶಗೌಡನ  ವಿರುದ್ದ ದೂರು ಕೊಟ್ಟು ತನ್ನ ತವರು ಮನೆ ಕಂದಗಲ್ಲು ಗ್ರಾಮಕ್ಕೆ ತನ್ನ ಮಗಳೊಂದಿಗೆ ಬಂದಿದ್ದು, ಈ ದಿನ ದಿನಾಂಕ 16-10-2015 ರಂದು ಬೆಳಿಗ್ಗೆ 10-45 ಗಂಟೆಗೆ ಶಿವಪ್ರಕಾಶಗೌಡನು ಮೋಟಾರ್ ಸೈಕಲ್ ನಲ್ಲಿ ಕಂದಗಲ್ಲು ಗ್ರಾಮಕ್ಕೆ  ಬಂದು ಮೋಟಾರ್ ಸೈಕಲ್ ಶೀಟಿನ ಕೆಳಗಡೆ ಇಟ್ಟಿದ್ದ  ಮಚ್ಚನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಮನೆಯ ಮುಂದೆ ಕೂಗಿ ಕರೆದು ಬೈಯುವಾಗ ಪಿರ್ಯಾದಿ ಮತ್ತು ತನ್ನ ತಾಯಿ ಶಾರದಮ್ಮ ಬಿಡಿಸಿಕೊಳ್ಳಲು ಪ್ರಯತ್ನಿಸುವಾಗ  ಶಾರದಮ್ಮಳಿಗೆ ಕಾಲಿನಿಂದ  ಕೆಳ ಹೊಟ್ಟೆಗೆ ಒದ್ದು ಕಬ್ಬಿಣದ ಮಚ್ಚಿನಿಂದ ಮರಣಾಂತಿಕ ಹಲ್ಲೆ ಮಾಡಲು ಪ್ರಯತ್ನಿಸುವಾಗ ಜಗಳ ಬಿಡಿಸಿಕೊಳ್ಳಲು ಬಂದ ಜಗದೀಶಗೌಡ ಎಂಬುವವರಿಗೂ ಸಹ ಗಾಯಾಗೊಳಿಸಿದ್ದು ಈ ಬಗ್ಗೆ ಶಿವಪ್ರಕಾಶಗೌಡನ ವಿರುದ್ದ ಕಾನೂನು ಕ್ರಮಜರುಗಿಸಲು ಇದ್ದ ದೂರು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
Kurugod PS
6 Cr.No:0170/2015
(IPC 1860 U/s 279,337 ; INDIAN MOTOR VEHICLES ACT, 1988 U/s 187 )
16/10/2015 Under Investigation
MOTOR VEHICLE ACCIDENTS 
NON-FATAL - State Highways
Brief Facts :  ದಿನಾಂಕ: 05/10/2015 ರಂದು ಮದ್ಯಾಹ್ನ 03:00 ಗಂಟೆಗೆ ನಾನು, ನನ್ನ ಮಗಳಾದ ಮುಮ್ತಾಜ್ ಳೊಂದಿಗೆ ಶ್ರೀನಿವಾಸನಗರದ ಬಸ್ನಿಲ್ದಾಣದ ಮುಂದೆ ಕುರುಗೋಡು-ಕಂಪ್ಲಿ ರಸ್ತೆ ದಾಟುತ್ತಿದ್ದಾಗ ಕುರುಗೋಡು ಕಡೆಯಿಂದ ಟಾಟಾ ಎಸಿ. ಆಟೋ ನಂ. ಕೆ.ಎ.14 ಎ-5605 ನೇದ್ದರ ಚಾಲಕ ಅಂಜನೇಯನು ತನ್ನ ಆಟೋವನ್ನು ಅತಿವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳ ಮುಮ್ತಾಜ್ಳಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಆಟೋದೊಂದಿಗೆ ಪರಾರಿಯಾಗಿರುತ್ತಾನೆ. ಕಾರಣ ಅಪಘಾತ ಮಾಡಿದ ಆಟೋ ಚಾಲಕ ಅಂಜನೇಯನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.
Siruguppa PS
7 Cr.No:0212/2015
(IPC 1860 U/s 34,418,406,409,420 )
16/10/2015 Under Investigation
CHEATING - CHEATING
Brief Facts :  ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ಈಗ್ಗೆ ಸುಮಾರು 10-12 ವರ್ಷಗಳಿಂದ ಸಿರುಗುಪ್ಪ ಪಟ್ಟಣದಲ್ಲಿ ಭತ್ತದ ವ್ಯಾಪಾರವನ್ನು ಮಾಡುತ್ತಿದ್ದು ರೈತರಿಂದ ಖರೀದಿ ಮಾಡಿ ನಂತರ ಶ್ರೀ ಲಕ್ಷ್ಮೀಶ್ರೀನಿವಾಸ ರೈಸ್ ಇಂಡಸ್ಟ್ರೀಸ್ ನಲ್ಲಿ ಕೃಷಿಂಗ್  ಮಾಡಿಸಿ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದು, ಅದೇ ರೀತಿ ಸಿರುಗುಪ್ಪ ಪಟ್ಟಣದ ಮಹಾಂತೇಶ್ @ ಮೈಲಾರಿ ಈತನು ನನಗೆ ಸುಮಾರು 8-10 ವರ್ಷದಿಂದ ಪರಿಚಯವಿದ್ದು ಈತನು ಸಿರುಗುಪ್ಪದಲ್ಲಿ ಅಕ್ಕಿ ಬ್ರೋಕರ್ ಕಲಸ ಮಾಡುತ್ತಿದ್ದು ಈತನು ಬೇರೆ ಬೇರೆ ಕಡೆಗೆ ಆರ್ಡರ್ ತೆಗೆದುಕೊಂಡು ಪಿರ್ಯಾದಿಯ ಅಕ್ಕಿಯನ್ನು ಕಳುಹಿಸಿ ಆ ಹಣವನ್ನು ಅಕ್ಕಿ ಖರೀದಿ ಮಾಡಿದವರಿಂದ ತಾನೇ ತೆಗೆದುಕೊಂಡು ಬಂದು  ಪಿರ್ಯಾದಿಗೆ ನೀಡುತ್ತಾ ವ್ಯವಹಾರ ಮಾಡಿ ಪಿರ್ಯಾದಿಯೊಂದಿಗೆ ನಂಬಿಕೆ ಇಟ್ಟುಕೊಂಡು ಬಂದಿರುತ್ತಾನೆ. ಇದೇ ರೀತಿ ದಿ. 28-09-15 ರಂದು ಪಿರ್ಯಾದಿಯು ರೈಸ್ ಮಿಲ್ಲಿನಲ್ಲಿದ್ದಾಗ ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಬಂದು ಬಿಜಾಪುರದ ರಾಜ್ ಗುರು ಟ್ರೇಡರ್ಸ್ ಇವರಿಗೆ 25 ಕೆಜಿಯ 200 ಅಕ್ಕಿ ಪಾಕೆಟ್ ಗಳು ಮತ್ತು ಸಂದೀಪ್ ಟ್ರೇಡರ್ಸ್ ಇವರಿಗೆ 25 ಕೆಜಿಯ 200 ಅಕ್ಕಿ ಪಾಕೆಟ್ ಗಳು, ಶಾಂತಿ ಟ್ರೇಡರ್ಸ್ ಇವರಿಗೆ 25 ಕೆಜಿಯ 200 ಅಕ್ಕಿ ಪಾಕೆಟ್ ಗಳು, ಮತ್ತು ಎಂ.ಪಿ. ಟ್ರೇಡರ್ಸ್ ಇವರಿಗೆ 25 ಕೆಜಿಯ 200 ಅಕ್ಕಿ ಪಾಕೆಟ್ ಗಳು ಬೇಕಾಗಿವೆ ಹಾಗೂ ಇದರ ಹಣವನ್ನು  10-15 ದಿನಗಳ ನಂತರ ತಾನೇ ತಂದು ಕೊಡುವುದಾಗಿ ಹೇಳಿದ್ದರಿಂದ ಪಿರ್ಯಾದಿಯು ಲಕ್ಷ್ಮೀ ಶ್ರೀನಿವಾಸ ರೈಸ್ ಇಂಡಸ್ಟ್ರೀಸ್ ಹೆಸರಿನಲ್ಲಿ ಬಿಲ್ಲು ತೆಗೆದುಕೊಂಡು ಮಹಾಂತೇಶ್ ಈತನು ಸೊಲ್ಲಾಪುರದ ಲಾರಿ ನಂ.ಕೆಎ-28/ಎ-7261 ನೇದ್ದರಲ್ಲಿ ರಾತ್ರಿ 8-30 ಗಂಟೆಗೆ ಲೋಡ್ ಮಾಡಿಸಿ ಲಾರಿ ಚಾಲಕ ಶಿವುಕುಮಾರ್ ಈತನೊಂದಿಗೆ ಸುಮಾರು ರೂ. 6,42,400/- ರೂಪಾಯಿಗಳ ಬೆಲೆ ಬಾಳುವ ಅಕ್ಕಿಯನ್ನು ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಸೇರಿ ಲಾರಿಯನ್ನು ಕಳುಹಿಸಿರುತ್ತಾರೆ.
    ನಂತರ ಪಿರ್ಯಾದಿಯು ಮಹಾಂತೇಶನಿಗೆ ಹಲವಾರು ಬಾರಿ ಪೋನ್ ಮಾಡಿ ಅಕ್ಕಿಯ ಹಣವನ್ನು ಕೇಳಿದಾಗ ಪ್ರತಿಬಾರಿಯು ನಾಳೆ ಕೊಡುತ್ತೇನೆ ಎಂದು ಹೇಳುತ್ತಾ ಇದ್ದನು. ಕಳೆದ ವಾರದಿಂದ ಮಹಾಂತೇಶ್ ಈತನ ಮೋಬೈಲ್ ಫೊನ್ ನಾಟ್ ರೀಚೆಬಲ್ /ಸ್ವಿಚ್ ಆಫ್ ಆಗಿದ್ದು ಅನುಮಾನ ಬಂದು ಎಪಿಎಂಸಿಯಲ್ಲಿ ವಿಚಾರಿಸಲಾಗಿ ಅಕ್ಕಿ ಬ್ರೋಕರ್ ಮಹಾಂತೇಶ್ @ ಮೈಲಾರಿ ಈತನು  ಪಿರ್ಯಾದಿಯು ದಿ. 28-09-15 ರಂದು ರಾತ್ರಿ 8-03  ಗಂಟೆಗೆ ಹಾಕಿದ ಅಕ್ಕಿ ಬಲ್ ಬದಲಿಗೆ ಮಹಾಂತೇಶ್ ಈತನು ಎಪಿಎಂಸಿಯಿಂದ ಅದೇ ದಿನ ದಿ. 28-09-15 ರಂದು ರಾತ್ರಿ 7-34 ಗಂಟೆಗೆ ವಿಜಯಲಕ್ಷ್ಮೀ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಪರವಾನಿಗೆ ಪಡೆದು ಅದೇ ಲಾರಿ ನಂಬರ್ ಬರೆಸಿ ಸೊಲ್ಲಾಪುರದ ಸಿದ್ದಿವಿನಾಯಕ ಕ್ಯಾನ್ವರ್ಸಿಂಗ್ ಮಾಲೀಕ ಮಲ್ಲು ಇವರ ಮುಖಾಂತರ ಎಪಿಎಂಸಿ ಯಾರ್ಡ್ ನಲ್ಲಿರುವ ವಾಣಿಗೋತ್ರ ಸೇಲ್ಸ್ ಕಾರ್ಪೋರೇಶನ್ ಇವರಿಗೆ 25 ಕೆಜಿಯ 800 ಅಕ್ಕಿ ಪಾಕೆಟ್ ಗಳನ್ನು ಮಾರಾಟ ಮಾಡಿ ಸುಮಾರು ರೂ. 6,42,400/- ಗಳನ್ನು ಮೋಸ ಮಾಡಿರುತ್ತಾನೆ.
ಕಾರಣ ಅಕ್ಕಿ ಬ್ರೋಕರ್ ಮಹಾಂತೇಶ್ @ ಮೈಲಾರಿ, ಮತ್ತು ಈತನ ಗುಮಾಸ್ತ ಶಬರಿ, ಲಾರಿ ನಂ. ಕೆಎ-28/ಎ-7261 ನೇದ್ದರ ಚಾಲಕ ಶಿವುಕುಮಾರ್ , ವಿಜಯಲಕ್ಷ್ಮೀ ಟ್ರೇಡರ್ಸ್ ಮಾಲೀಕ ಬಿ. ವೀರಾರೆಡ್ಡಿ ಮತ್ತು ಬಿಲ್ ಬದಲಿಸಿದ ಎರ್ರೆಪ್ಪ ಈ 5 ಜನರು ಕೂಡಿಕೊಂಡು ಪಿರ್ಯಾದಿಗೆ ಸುಮಾರು ರೂ. 6,42,400/- ಗಳನ್ನು ಮೋಸ ಮಾಡಿದ 5 ಜನರ ಮೇಲೆ ಕಾನೂರು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
8 Cr.No:0213/2015
(IPC 1860 U/s 34,418,406,409,420 )
16/10/2015 Under Investigation
CHEATING - CHEATING
Brief Facts :  ಪಿರ್ಯಾದಿದಾರರು ಠಾಣೆಗೆ ಹಾಜರ್ ಆಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಪಿರ್ಯಾದಿದರಾರಿಗೆ ಮಹಾಂತೇಶ್ @ ಮೈಲಾರಿ ಈತನು ನನಗೆ ಸುಮಾರು ಕಳೆದ 10-12 ವರ್ಷದಿಂದ ಪರಿಚಯವಿದ್ದು ಈತನು ಸಿರುಗುಪ್ಪದಲ್ಲಿ ಅಕ್ಕಿ ಬ್ರೋಕರ್ ಕೆಲಸ ಮಾಡುತ್ತಿದ್ದು ಈತನು ಬೇರೆ ಬೇರೆ ಕಡೆಗೆ ಅರ್ಡರ್ ತೆಗೆದುಕೊಂಡು ನಮ್ಮ ರೈಸ್ ಮಿಲ್ಲಿನಿಂದ ಅಕ್ಕಿಯನ್ನು ಕಳುಹಿಸಿ ಆ ಹಣವನ್ನು ಸದರಿ ಅಕ್ಕಿ ಖರೀದಿ ಮಾಡಿದವರಿಂದ ತಾನೇ ತೆಗೆದುಕೊಂಡು ಬಂದು ನಮಗೆ ನೀಡುತ್ತಾ ವ್ಯವಹಾರ ಮಾಡಿ ನಮ್ಮೊಂದಿಗೆ ನಂಬಿಕೆ ಇಟ್ಟುಕೊಂಡು ಬಂದಿರುತ್ತಾನೆ. ಇದೇ ರೀತಿ ದಿ: 05-07-15 ರಂದು ನಾನು ಮತ್ತು ನಮ್ಮ ಗುಮಾಸ್ತ ಬಸವನ ಗೌಡ ಇಬ್ಬರು ನಮ್ಮ ಮಿಲ್ ಆಫೀಸ್ನಲ್ಲಿದ್ದಾಗ ಸದರಿ ಮಹಾಂತೇಶ@ಮೈಲಾರಿ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಸುಮಾರು ಸಾಯಂಕಾಲ 5-30 ಗಂಟೆಗೆ ಬಂದು ಬಿಜಾಪುರದ ಪಿ.ಐ. ಹಿರೇಮಠ ಇವರಿಗೆ 25 ಕೆಜಿಯ 250 ಅಕ್ಕಿ ಪಾಕೆಟ್ಗಳನ್ನು, ಮಹಾವೀರ್ ಕಿರಾಣ ಸ್ಟೋರ್ ಇವರಿಗೆ 25 ಕೆಜಿಯ 230 ಅಕ್ಕಿ ಪಾಕೆಟ್ಗಳನ್ನು ಹಾಗೂ ಜೀವರಾಂ ಟ್ರೇಡರ್ಸ್ ಇವರಿಗೆ 25 ಕೆಜಿಯ 200 ಅಕ್ಕಿ ಪಾಕೆಟ್ಗಳು ಬೇಕಾಗಿವೆ ಹಾಗು ಇದರ ಹಣವನ್ನು ತಾನೇ 10-15 ದಿನಗಳ ನಂತರ ತಂದು ಕೊಡುವುದಾಗಿ ಹೇಳಿದ್ದರಿಂದ ಮಹಾಂತೇಶನು ಸಿಂಧನೂರಿನ ಕರ್ನಾಟಕ ಟ್ರಾನ್ಸ್ ಪೋರ್ಟ್ ನ ಮಾಲೀಕ ಯಾಶೀನ್ ತಂದೆ ರೆಹಮಾನ್ ಸಾಬ್ರವರಿಂದ ತರಿಸಿಕೊಂಡಿದ್ದ ಲಾರಿ ನಂ. ಕೆಎ-28/ಎ-8275 ನೇದ್ದರಲ್ಲಿ ರಾತ್ರಿ 8-30 ಗಂಟೆಗೆ ಲೋಡ್ ಮಾಡಿದ್ದು ಪಿ.ಐ. ಹಿರೇಮಠ ಇವರಿಗೆ ರೂ.1,81,563/- ರೂಗಳಿಗೆ, ಮಹಾವೀರ್ ಕಿರಾಣ ಸ್ಟೋರ್ ಇವರಿಗೆ ರೂ.1,67,037/- ಮತ್ತು ಜೀವರಾಂ ಇವರಿಗೆ ರೂ.1,45,250/- ರೂಪಾಯಿಗಳಿಗೆ ಬಿಲ್ಲನ್ನು ಶ್ರೀ ಸಾಯಿ ರೈಸ್ ಇಂಡಸ್ಟ್ರೀಸ್ನಿಂದ ಹಾಕಿರುತ್ತೇನೆ.  ನಂತರ ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಸೇರಿ  ಲಾರಿಯನ್ನು ಕಳುಹಿಸಿದರು.
ಅದೇ ರೀತಿ ದಿನಾಂಕ; 16-07-15 ರಂದು ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ನಮ್ಮ ಆಫೀಸಿಗೆ ಸಾಯಂಕಾಲ 6-00 ಗಂಟೆಗೆ 
ಬಂದು  ಪುನಃ ಬಿಜಾಪುರದ 1] ಆರ್.ಎ. ಕೊಟಾರಿ ಇವರಿಗೆ-25 ಕೆಜಿಯ 140 ಪಕೆಟ್ಗಳು, 2] ಹೀರಲಾಲ್ ದೇವಿ ಚಂದ್ ಇವರಿಗೆ- 25 ಕೆಜಿಯ 150 ಅಕ್ಕಿ ಪಾಕೆಟ್ಗಳು, 3] ಸಿ.ಜಿ. ಗುಂಡಗಿ ಇವರಿಗೆ 25 ಕೆಜಿಯ 250 ಪಾಕೆಟ್ಗಳು, ಮತ್ತು 4] ಪೃಥ್ವೀರಾಜ್ ಆಶೋಕ್ ಕುಮಾರ್ ಇವರಿಗೆ 25 ಕೆಜಿಯ 60 ಅಕ್ಕಿನುಚ್ಚು ಪಾಕೆಟ್ಗಳು ಬೇಕಾಗಿವೆ ಹಾಗು ಇದರ ಹಣವನ್ನು ದಿ: 05-07-15 ರಂದು ಕಳುಹಿಸಿದ ಅಕ್ಕಿಯ ಬಾಕಿ ಹಣವನ್ನು ಸಹ  ತಾನೇ 10-15 ದಿನಗಳ ನಂತರ ತಂದು ಕೊಡುವುದಾಗಿ ಹೇಳಿದ್ದರಿಂದ ಮಹಾಂತೇಶನು ಸಿಂಧನೂರಿನ ಕರ್ನಾಟಕ  ಟ್ರಾನ್ಸ್ ಪೋರ್ಟ್ ನ ಮಾಲೀಕ ಯಾಶೀನ್ ತಂದೆ ರೆಹಮಾನ್ ಸಾಬ್ರವರಿಂದ ತರಿಸಿಕೊಂಡಿದ್ದ ಲಾರಿ ನಂ. ಕೆಎ-16/ಎ-5499 ನೇದ್ದರಲ್ಲಿ ರಾತ್ರಿ 08-00 ಗಂಟೆಗೆ ಲೋಡ್ ಮಾಡಿದ್ದು ಆರ್.ಎ. ಕೊಟಾರಿ ಇವರಿಗೆ ರೂ.1,01,780/- ರೂಗಳಿಗೆ, ಹೀರಾಲಾಲ್ ದೇವಿಚಂದ್ ಇವರಿಗೆ, ರೂ. 1,09,050/- ರೂಗಳಿಗೆ, ಸಿ.ಜಿ. ಗುಂಡಗಿ ಇವರಿಗೆ ರೂ. 1,82,750/- ರೂಗಳಿಗೆ, ಮತ್ತು ಪೃಥ್ವೀರಾಜ್ ಆಶೋಕ್ ಕುಮಾರ್ ಇವರಿಗೆ, ರೂ. 22,170/- ರೂಗಳೀಗೆ ಬಿಲ್ಲನ್ನು ನಮ್ಮ ಮಿಲ್ ಫರ್ಮ್ ನಿಂದ ಹಾಕಿರುತ್ತೇನೆ.  ನಂತರ ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಸೇರಿ ಲಾರಿಯನ್ನು ಕಳುಹಿಸಿದರು.
    ಅದೇ ರೀತಿ ದಿ.29-07-15 ರಂದು ಮಾಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ನಮ್ಮ ಆಫೀಸಿಗೆ ರಾತ್ರಿ 7-00 ಗಂಟೆಗೆ ಬಂದು ಪುನಃ ಬಿಜಾಪುರದ 1] ವಿಧಿ ಟ್ರೇಡಸರ್್ ಇವರಿಗೆ 25 ಕೆಜಿಯ ಅಕ್ಕಿನುಚ್ಚು 92 ಪಾಕೆಟ್ಗಳನ್ನು 2] ಗೌತಂಚಂದ್ ಜಯಂತಿಲಾಲ್ ಇವರಿಗೆ 25 ಕೆಜಿಯ 180 ಅಕ್ಕಿ ಪಾಕೆಟ್ಗಳನ್ನು ಮತ್ತು 3] ಎಂ.ಪಿ. ಟ್ರೇಡಸರ್್ ಇವರಿಗೆ 25 ಕೆಜಿಯ 205 ಅಕ್ಕಿ ಪಾಕೆಟ್ಗಳು ಬೇಕಾಗಿವೆ ಎಂದು ಹೇಳಿ ಇದರ ಹಣವನ್ನು ತಾನೇ 10-15 ದಿನಗಳ ನಂತರ ತಂದು ಕೊಡುವುದಾಗಿ ಹೇಳಿದ್ದರಿಂದ ಮಹಾಂತೇಶನು ಸಿಂಧನೂರಿನ ಕನರ್ಾಟಕ ಟ್ರಾನ್ಸ್ಪೋಟರ್್ನ ಮಾಲೀಕ ಯಾಶೀನ್ ತಂದೆ ರೆಹಮಾನ್ ಇವರಿಂದ ತರಿಸಿಕೊಂಡಿದ್ದ ಲಾರಿ ನಂ. ಕೆಎ-09/9677 ನೇದ್ದರಲ್ಲಿ ರಾತ್ರಿ 9-00 ಗಂಟೆ ಲೋಡ್ ಮಾಡಿದ್ದು ವಿದಿ ಟ್ರೇಡಸರ್್ ಇವರಿಗೆ ರೂ.33925/- ರೂಗಳಿಗೆ, ಗೌತಂಚಂದ್ ಜಯಂತಿಲಾಲ್ ಇವರಿಗೆ ರೂ. 1,30,725/- ರೂಗಳಿಗೆ, ಮತ್ತು ಎಂ.ಪಿ. ಟ್ರೇಡಸರ್್ ಇವರಿಗೆ ರೂ. 1,49,906/- ರೂಗಳಿಗೆ ತಮ್ಮ ಚನ್ನಬಸವೇಶ್ವರ ರೈಸ್ ಮಿಲ್ಲಿನ ಫರ್ಮ್ ನಿಂದ ಬಿಲ್ಲನ್ನು ಹಾಕಿರುತ್ತೇನೆ. ನಂತರ ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಸೇರಿ ಲಾರಿಯನ್ನು ಕಳುಹಿಸಿದರು.
        ಅದೇ ರೀತಿ ದಿನಾಂಕ; 13-08-15 ರಂದು ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ನಮ್ಮ ಆಫೀಸಿಗೆ ಸಾಯಂಕಾಲ 6-30 ಗಂಟೆಗೆ ಬಂದು ಪುನಃ ಬಿಜಾಪುರದ 1] ಹೀರಾಲಾಲ್ ದೇವಿಚಂದ್ ಇವರಿಗೆ 25 ಕೆಜಿಯ 120 ಅಕ್ಕಿ ಪಾಕೆಟ್ಗಳನ್ನು, 2] ಜೈನ್ ಫುಡ್ಸ್ ಇವರಿಗೆ 25 ಕೆಜಿಯ 190 ಅಕ್ಕಿ ಪಾಕೆಟ್ಗಳನ್ನು 3] ಆರ್.ಕೆ. ಸ್ಟೋಸರ್್ ಇವರಿಗೆ 25 ಕೆಜಿಯ 250 ಅಕ್ಕಿ ಪಾಕೆಟ್ಗಳು ಬೇಕಾಗಿವೆ ಎಂದು ಹೇಳಿ ಇದರ ಹಣವನ್ನು ತಾನೇ 10-15 ದಿನಗಳ ನಂತೆ ಕೊಡುವುದಾಗಿ ಹೇಳಿದ್ದರಿಂದ ಮಹಾಂತೇಶನು ಸಿಂಧನೂರು ಟ್ರಾನ್ಸ್ ಪೋರ್ಟ್ ನ ಮಾಲೀಕ ಯಾಶೀನ್ ತಂದೆ ರೆಹಮಾನ್ ಇವರಿಂದ ತರಿಸಿಕೊಂಡಿದ್ದ ಲಾರಿ ನಂ. ಕೆಎ-32/3468 ನೇದ್ದರಲ್ಲಿ ರಾತ್ರಿ 9-00 ಗಂಟೆ ಲೋಡ್ ಮಾಡಿದ್ದು ರೀರಾಲಾಲ್ ಇವರಿಗೆ ರೂ.87,900/-ರೂಗಳಿಗೆ, ಜೈನ್ ಫುಡ್ಸ್ ಇವರಿಗೆ ರೂ. 1,39,175/- ಮತ್ತು ಆರ್.ಕೆ. ಸ್ಟೋರ್ಸ್  ಇವರಿಗೆ ರೂ. 1,83,125/- ರೂಗಳಿಗೆ ತಮ್ಮ ಚನ್ನಬಸವೇಶ್ವರ ರೈಸ್ ಮಿಲ್ಲಿನ ಫಮರ್್ನಿಂದ ಬಿಲ್ಲನ್ನು ಹಾಕಿರುತ್ತೇನೆ. ನಂತರ ಮಹಾಂತೇಶ್ ಮತ್ತು ಈತನ ಗುಮಾಸ್ತ ಶಬರಿ ಇಬ್ಬರು ಸೇರಿ ಲಾರಿಯನ್ನು ಕಳುಹಿಸಿದರು.
ನಂತರ ನಾನು ಮಹಾಂತೇಶ ಈತನಿಗೆ ಹಲವಾರು ಬಾರಿ ಫೋನ್ ಮುಖಾಂತರ ಅಕ್ಕಿಯ ಹಣವನ್ನು ಕೇಳಿದಾಗ ಪ್ರತಿಬಾರಿಯು ನಾಳೆ ಕೊಡುತ್ತೇನೆ ಎಂದು ಹೇಳುತ್ತಾ ಇದ್ದನು. ಕಳೆದ ವಾರದಿಂದ ಮಹಾಂತೇಶ್ ಈತನ ಮೊಬೈಲ್ ಫೋನ್ 'ನಾಟ್ ರೀಚೆಬಲ್/ಸ್ವಿಚ್ ಆಫ್' ಎಂದು ಬರುತಿದ್ದು ನನಗೆ ಅನುಮಾನ ಬಂದು ಎಪಿಎಮ್ಸಿಯಲ್ಲಿ ವಿಚಾರಿಸಲಾಗಿ ಅಕ್ಕಿ ಬ್ರೋಕರ್ ಮಹಾಂತೇಶ್ @ ಮೈಲಾರಿ ಈತನು ನಾವು ದಿ: 05-07-15, ದಿ. 16-07-15 , ಮತ್ತು ದಿ. 29-07-15 ರಂದು ಹಾಗೂ ದಿ. 13-08-15 ರಂದು ಹಾಕಿದ ಬಿಲ್ಲನ್ನು ಬದಲಿಸಿ ಸಿರುಗುಪ್ಪ ಎ.ಪಿ.ಎಂ.ಸಿ.ಯಿಂದ ವಿಜಯಲಕ್ಷ್ಮೀ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಪರವಾನಿಗೆ ಪಡೆದು ನಾವು ಕಳಿಸಿದ ಅಕ್ಕಿಯನ್ನು ಬಿಜಾಪುರದ ವಿಕ್ರಂ ಟ್ರೇಡರ್ಸ್ , ಬಿಜಾಪುರದ ಎಂ.ಕೆ. ಟ್ರೇಡರ್ಸ್ ಮತ್ತು ಬೇರೆ ಬೇರೆ ಟ್ರೇಡರ್ಸ್ ಗಳಿಗೆ  ಅಕ್ಕಿಯನ್ನು ಕಳುಹಿಸಿದ್ದಾಗಿ ತಿಳಿದುಬಂದಿರುತ್ತದೆ.
ಅಕ್ಕಿ ಬ್ರೋಕರ್ ಮಹಾಂತೇಶ್ @ ಮೈಲಾರಿ ಮತ್ತು ಈತನ ಗುಮಾಸ್ತ ಶಬರಿ, ಲಾರಿ ನಂ.ಕೆಎ-28/ಎ-8275 ನೇದ್ದರ ಚಾಲಕ , ಲಾರಿ ನಂ. ಕೆಎ-16/ಎ-5499 ನೇದ್ದರ ಚಾಲಕ, ಲಾರಿ ನಂ. ಕೆಎ-09/9677 ನೇದ್ದರ ಚಾಲಕ, ಲಾರಿ ನಂ. ಕೆಎ-32/3468 ನೇದ್ದರ ಚಾಲಕರು , ಸಿಂಧನೂರಿನ ಕರ್ನಾಟಕ ಟ್ರಾನ್ಸ್ ಪೋರ್ಟ್ ನ ಮಾಲೀಕ ಯಾಶೀನ್ ತಂದೆ ರೆಹಮಾನ್ ಸಾಬ್, ಮತ್ತು ವಿಜಯ ಲಕ್ಷ್ಮೀ ಟ್ರೇಡರ್ಸ್ ನ ಮಾಲೀಕ ಬಿ. ವೀರಾರೆಡ್ಡಿ ಮತ್ತು ಎರ್ರೆಪ್ಪ ತಂದೆ ಮಲ್ಲಪ್ಪ ಈ 9 ಜನರು ಕೂಡಿಕೊಂಡು ನನಗೆ ಸುಮಾರು ರೂ.16,34,356/-ಗಳನ್ನು ಮೋಸ ಮಾಡಿದ ಈ ಮೇಲ್ಕಂಡ 9 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ