Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Traffic PS | ||||||||||||||||
1 | Cr.No:0161/2015 (IPC 1860 U/s 279,337 ; INDIAN MOTOR VEHICLES ACT, 1988 U/s 187 ) |
22/10/2015 | Under Investigation | |||||||||||||
MOTOR VEHICLE ACCIDENTS NON-FATAL - Other Roads | ||||||||||||||||
Brief Facts : | ದಿನಾಂಕ: 22-10-2015 ರಂದು ಫಿರ್ಯಾಧಿದಾರರಾದ ನರೇಶಕುಮಾರ ತಂದೆ ಸತ್ಯನಾರಾಯಣರಾಜು, ವ:41 ವರ್ಷ, ಕಮ್ಮ ಜನಾಂಗ, ಟೀ-ಪುಡಿ ವ್ಯಾಪಾರ, ವಾಸ: 5 ನೇ ವಾರ್ಡ, ಮಲ್ಲಮ್ಮಗುಡಿ ಎದುರಿಗೆ, ಕಾಕರ್ಲತೋಟ ಬಳ್ಳಾರಿ ತಮ್ಮ ಮನೆಯಿಂದ ಬೆಳಿಗ್ಗೆ ಟೀ-ವ್ಯಾಪಾರ ಮಾಡಲು ತನ್ನ ಮೋಟಾರ್ ಸೈಕಲ್ ನಂಬರ್ ಎಪಿ.05/ಬಿಜೆ-1589 ನೇದ್ದನ್ನು ಚಲಾಯಿಸಿಕೊಂಡು ಮನೆಯಿಂದ ಎಸ್.ಪಿ. ಸರ್ಕಲ್ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 9-40 ಗಂಟೆಯ ಸುಮಾರಿಗೆ ಸಿರುಗುಪ್ಪ ರಸ್ತೆಯ ಬಸವನಕುಂಟ ಕೆರೆಯ ಹತ್ತಿರ ಸುಬ್ರಮಣ್ಯಂ ನಿಲಯದ ಮನೆಯ ಮುಂದೆ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರುವಾಗ ಅದೇ ವೇಳೆಗೆ ಪಿರ್ಯಾದಿಯ ಹಿಂದುಗಡೆಯಿಂದ ಇನ್ನೋವಾ ಕಾರ್ ಕಾರ್ ನಂಬರ್ ಕೆಎ.34/ಎಂ-5199 ನೇದ್ದನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮೋಟಾರ್ ಸೈಕಲ್ ನ ಹಿಂಬದಿಗೆ ಡಿಕ್ಕಿ ಹೋಡೆಸಿದ್ದು ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಎಡಬುಜದ ಬಳಿ ಒಳಪೆಟ್ಟಾಗಿ ಬಹಳ ನೋವು ಕಂಡಿದ್ದು ಹಾಗು ಎಡಮೊಣಕೈ ಹತ್ತಿರ ತೆರೆಚಿದ ಗಾಯಗಳಾಗಿದ್ದು, ಅಪಘಾತಪಡಿಸಿದ ಕಾರ್ ಚಾಲಕನು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಬರುತ್ತೇನೆಂದು ಹೇಳಿ ಕಾರ್ ಸಮೇತ ಹಾಗೆಯೇ ಹೊರಟು ಹೋಗಿರುತ್ತಾನೆಂದು ಮತ್ತೇ ಆತನನ್ನು ನೋಡಿದರೆ ಗುರುತಿಸುತ್ತೇನೆಂದು ಮೇಲ್ಕಂಡ ಅಪಘಾತಪಡಿಸಿದ ಇನ್ನೋವಾ ಕಾರ್ ನಂ-ಕೆಎ.34/ಎಂ-5199 ನೇದ್ದರ ಚಾಲಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು. | |||||||||||||||
Cowlbazar PS | ||||||||||||||||
2 | Cr.No:0310/2015 (IPC 1860 U/s 229A ) |
22/10/2015 | Under Investigation | |||||||||||||
Failure to appear to Court - 229 A | ||||||||||||||||
Brief Facts : | ಕೌಲ್ ಬಜಾರ್ ಪೊಲೀಸ್ ಠಾಣಾ ಗುನ್ನೆ ನಂ. 268/2012 ಕಲಂ: 323-324-307-120(ಬಿ) ಆಧಾರ 34 ಐಪಿಸಿ ಪ್ರಕರಣದಲ್ಲಿ ಆರೋಪಿ-2 ಎನ್.ನಾಗರಾಜ್ ತಂದೆ ವೆಂಕಟರಮಣ ವ; 36 ವರ್ಷ, ಎಂಬುವನನು ಮಾನ್ಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದು, ನಂತರ ಮಾನ್ಯ ನ್ಯಾಯಾಲಯವು ಬಂಧನದ ವಾರೆಂಟ್ ಹೊರಡಿಸಿದ್ದರೂ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರಿಸಿಕೊಂಡಿದ್ದು, ನ್ಯಾಯಾಲಯದ ಆದೇಶ ಮತ್ತು ನಿಬಂಧನೆಯನ್ನು ಉಲ್ಲಂಘನೆ ಮಾಡಿರುತ್ತಾನೆ. ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪಿ.ಎಸ್.ಐ. ಕಾ.ಸು. ಶ್ರೀ ಮಹಮ್ಮದ್ ಗೌಸ್ ರವರು ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Gadiganur PS | ||||||||||||||||
3 | Cr.No:0107/2015 (IPC 1860 U/s 143,147,341,504,323,506,149 ) |
22/10/2015 | Under Investigation | |||||||||||||
RIOTS - Others | ||||||||||||||||
Brief Facts : | ದಿನಾಂಕ: 21.10.2015 ರಂದು ರಾತ್ರಿ:8:00 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯ ಮುಂದಿನ ಆಂಗಳದಲ್ಲಿ ತನ್ನ ತಾಯಿಯೊಂದಿಗೆ ಇರುವಾಗ್ಗೆ ಆರೋಪಿತರು ಅಕ್ರಮವಾಗಿ ಗುಂಪು ಕೂಡಿಕೊಂಡು ಬಂದು ಫಿರ‍್ಯಾದಿಗೆ ಮತ್ತು ಫಿರ‍್ಯಾದಿಯ ತಾಯಿಗೆ ಅವಾಚ್ಯಶಬ್ದಗಳಿಂದ ಬೈಯುತ್ತಾ ದೇವಸ್ಥಾನದ ಪಟ್ಟಿಯ ಹಣವನ್ನು ತಗೆದುಕೊಳ್ಳದೇ, ಲೇ ರೋಗದ ಸೂಳೇ ಎಂದು ಇತ್ಯಾದಿಯಾಗಿ ಬೈಯುತ್ತಾ ಫಿರ‍್ಯಾದಿಗೆ ಮತ್ತು ಫಿರ‍್ಯಾದಿಯ ತಾಯಿಗೆ ಕೈಯಿಂದ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆಂದು ಲಿಖಿತ ದೂರು ಇದ್ದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ, ( ದೂರು ಪ್ರತಿಯನ್ನು ಲಗತ್ತಿಸಿದೆ). | |||||||||||||||
Hagaribommanahalli PS | ||||||||||||||||
4 | Cr.No:0159/2015 (IPC 1860 U/s 379 ) |
22/10/2015 | Under Investigation | |||||||||||||
THEFT - Of Cattle | ||||||||||||||||
Brief Facts : | ದಿನಾಂಕ 22-10-15 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿ ಹಾಜರಾಗಿ ಕೊಟ್ಟ ಹೇಳಿಕೆ ದೂರನ್ನು ಪಡೆದಿದ್ದು, ಸಾರಾಂಶವೇನೆಂದರೆ, ಪಿರ್ಯದಿದಾರರು ತಮ್ಮ ಮನೆ ಮುಂದೆ ಕಟ್ಟಿದ್ದ ಸುಮಾರು 10000 ಸಾವಿರ ರೂ ಬೆಲೆ ಬಾಳುವ ಆಕಳನ್ನು ಮತ್ತು ಸುಮಾರು | |||||||||||||||
7000 ರೂ ಬೆಲೆ ಬಾಳುವ ಒಂದು ಕಪ್ಪು ಬಣ್ಣದ ಹೋರಿ ಕರುವನ್ನು ದಿನಾಂಕ 17-10-15 ರಂದು ರಾತ್ರಿ 10-00 ಗಂಟೆಯಿಂಧ ದಿನಾಂಕ 18-10-15 ರಂದು ಬೆಳಿಗ್ಗೆ 7-00 ಗಂಟೆಯ ಮಧ್ಯದ ಅವಧಿಯಲ್ಲಿ ಮತ್ತು ಪತ್ರಿ ಬಸವೇಶ್ವರ ದೇವಸ್ಥಾನ ಕಮಿಟಿಯ ಸುಮಾರು 5000 ರೂ ಬೆಲೆಯ ಕಪ್ಪು ಬಣ್ಣದ ಆಕಳು ಕರುವನ್ನು ಮೇಲ್ಕಂಡ ಆರೋಪಿಯು ಕಳವು ಮಾಡಿಕೊಂಢು ಹೋಗಿರುತ್ತಾನೆಂದು, ಪಿರ್ಯಾದಿದಾರರು ಹುಡುಕಾಡುತ್ತಾ ಹೋದಾಗ ಆರೋಪಿಯ ಮನೆ ಮುಂದೆ ಹೋರಿಕರು ಮತ್ತು ಆಕಳು ಕರುವನ್ನು ನೋಡಿರುವುದಾಗಿ, ಈ ವಿಷಯದ ಬಗ್ಗೆ ತಮ್ಮ ಮನೆಯಲ್ಲಿ ಚರ್ಚಿಸಿ ಈ ದಿನ ತಡವಾಗಿ ದೂರು ನೀಡಲು ಬಂದಿರುವುದಾಗಿ, ಮೇಲ್ಕಂಡ ಆರೋಪಿ ಮೇಲೆ ಕಾನೂನು ಕ್ರಮ ಜರುಗಿಸಿ ತನ್ನ ಆಕಳು ಮತ್ತು ಕರುವನ್ನು ಹಾಗೂ ಪತ್ರಿ ಬಸವೇಶ್ವರ ದೇವಸ್ಥಾನ ಕಮಿಟಿಯ ಆಕಳು ಕರುವನ್ನು ಪತ್ತೆ ಮಾಡಿಕೊಡಬೇಕೆಂದು ಇದ್ದ ಸಾರಾಂಶದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. | ||||||||||||||||
Hirehadagali PS | ||||||||||||||||
5 | Cr.No:0178/2015 (IPC 1860 U/s 143,147,149,323,504,506 ) |
22/10/2015 | Under Investigation | |||||||||||||
RIOTS - Others | ||||||||||||||||
Brief Facts : | ಫಿರ್ಯಾದಿದಾರರು 2007 ನೇ ಸಾಲಿನಲ್ಲಿ ತಮ್ಮ ಗ್ರಾಮದ ಆರೋಪಿ ಇಬ್ರಾಹಿಂ ಸಾಬ್ ರವರ ಸವರ್ೆ ನಂ. 253/ಬಿ ರಲ್ಲಿಯ 3 ಎಕರೆ ಜಮೀನನ್ನು ಖರೀದಿ ಮಾಡಿದ್ದು, ಆಗಿನಿಂದ ಸದರಿ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಆದರೆ ಈಗ್ಗೆ ಸುಮಾರು ಒಂದು ವರ್ಷದಿಂದ ಆರೋಪಿಯು ತಾನು ಆ ಜಮೀನು ಮಾರಾಟ ಮಾಡಿಲ್ಲವೆಂದು ತಕರಾರು ಮಾಡುತ್ತಾ ಬಂದಿದ್ದರಿಂದ ಫಿರ್ಯಾದಿಯು ಮಾನ್ಯ ನ್ಯಾಯಾಲಯದ ಆದೇಶ ಪಡೆದು ಸದರಿ ಜಮೀನಿನಲ್ಲಿ ಈಗ್ಗೆ ಸುಮಾರು 3 ತಿಂಗಳ ಕೆಳಗೆ ಗೋವಿನ ಜೋಳದ ಬೆಳೆ ಬಿತ್ತಿದ್ದು, ದಿನಾಂಕ 20-10-2015 ರಂದು ಬೆಳಿಗ್ಗೆಯಿಂದ ಫಿರ್ಯಾದಿ ತನ್ನ ಮಗ ನಾಗರಾಜ ಮತ್ತು ಹೆಂಡತಿ ಶೇಕವ್ವ ರವರೊಂದಿಗೆ ಆಳುಗಳ ಮೂಲಕ ತಮ್ಮ ಗೋವಿನ ಜೋಳದ ತೆನೆ ಮುರಿಯುತ್ತಿದ್ದಾಗ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರೋಪಿತರೆಲ್ಲಾ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಈ ಹೊಲ ತಮ್ಮದು ತೆನೆ ಮುರಿಯಬೇಡಿ ಅಂತ ಅವಾಚ್ಯ ಶಬ್ದಗಳಿಂದ ಬೈದಾಡಿ ಫಿರ್ಯಾದಿಗೆ, ಆತನ ಮಗನಿಗೆ ಕೈಗಳಿಂದ ಮೈಮೇಲೆ ಹೊಡೆದಿದ್ದು ಹಾಗು ಫಿರ್ಯಾದಿಯ ಹೆಂಡತಿಗೆ ಆರೋಪಿ ಪಾತೆವ್ವ ರವರು ಕೂದಲು ಹಿಡಿದು ಎಳೆದಾಡಿ ಹೊಡೆದಿದ್ದು, ಹಾಗು ಫಿರ್ಯಾದಿಗೆ ಮತ್ತು ಆತನ ಮಗ ಮತ್ತು ಹೆಂಡತಿಗೆ ಆರೋಪಿತರೆಲ್ಲಾ ಸೇರಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Hosahalli PS | ||||||||||||||||
6 | Cr.No:0188/2015 (IPC 1860 U/s 143,147,148,504,324,506,149 ) |
22/10/2015 | Under Investigation | |||||||||||||
RIOTS - Others | ||||||||||||||||
Brief Facts : | ದಿನಾಂಕ:೨೨/೧೦/೨೦೧೫ ರಂದು ಬೆಳಿಗ್ಗೆ ೧೦-೦೦ ಗಂಟೆಗೆ ಫಿರ್‍ಯಾದಿದಾರರಾದ ಶ್ರೀ.ಜಿ.ಓಬಯ್ಯ ತಂದೆ ಲೇಟ್ ದೊಡ್ಡ ಓಬಯ್ಯ,೫೫ ವರ್ಷ,ವಾಲ್ಮೀಕಿ ಜನಾಂಗ,ವ್ಯವಸಾಯ,ವಾಸ:ಮೀನಕೆರೆ ಗ್ರಾಮ ಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ, ನಮ್ಮ ಗ್ರಾಮದ ಮಲ್ಲಿಕಾರ್ಜುನ ಎಂಬುವರು ಕಾವೇರಿ/ಸೋಮೇಶ್ವರ ಸಂಘದಲ್ಲಿ ಕೆಲಸ ಮಾಡುತ್ತಾ ಸದಸ್ಯರ ಹೆಸರು ಬರೆದು ಕೊಳ್ಳುವುದು ಮತ್ತು ಅವರಿಗೆ ಸಂಘದಿಂದ ಸಾಲದ ಹಣ ಎಷ್ಟು ಬಂತು ಅನ್ನುವುದರ ಬಗ್ಗೆ ಸದಸ್ಯರಿಗೆ ಹೇಳುವುದು ಮಾಡುತ್ತಾನೆ.ದಿನಾಂಕ:೨೧/೧೦/೨೦೧೫ ರಂದು ಸಾಯಂಕಾಲ ೫-೦೦ ಗಂಟೆಯ ಸುಮಾರಿಗೆ ಕಾವೇರಿ/ಸೋಮೇಶ್ವರ ಸಂಘದ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಬಂದು ಸಂಘದ ಸದಸ್ಯರಿಗೆ ಕೊಟ್ಟಂತಹ ಸಾಲದ ಹಣವನ್ನು ಕಟ್ಟಿಸಿಕೊಳ್ಳಲು ಬಂದಿದ್ದರು.ಆ ಸಮಯದಲ್ಲಿ ನಮ್ಮ ಗ್ರಾಮದ ಸಾಕಮ್ಮ ಗಂಡ ತಿಪ್ಪೇರುದ್ರಪ್ಪ,ಕಾಮಾಕ್ಷಿ ಗಂಡ ಡ್ರೈವರ್ ಓಬಣ್ಣ, ಇವರುಗಳು ಸಂಘದ ಅಧಿಕಾರಿಗಳಿಗೆ ಸಾಲ ಕೊಡಿರಿ ಎಂದು ಕೇಳಿದ್ದು ಆಗ ಸಂಘದ ಅಧಿಕಾರಿಗಳು ಅವರಿಬ್ಬರಿಗೆ ನೀವು ಸಾಲ ತೆಗೆದು ಕೊಂಡ ಹಣವನ್ನು ಸರಿಯಾಗಿ ಕಟ್ಟುವುದಿಲ್ಲ ಕಾರಣ ನಿಮಗೆ ಸಂಘದಿಂದ ಸಾಲವನ್ನು ಕೊಡುವುದಿಲ್ಲವೆಂದು ಹೇಳಿರುತ್ತಾರೆ.ಸಂಘದ ಅದಿಕಾರಿಗಳು ವಾಪಾಸ್ ಹೋದ ನಂತರ ನಿನ್ನೆಯ ದಿನ ರಾತ್ರಿ ೮-೩೦ ಗಂಟೆಯ ಸುಮಾರಿಗೆ ನಾನು ನನ್ನ ಅಳಿಯನಾದ ಮಲ್ಲಿಕಾರ್ಜುನನ ಇಬ್ಬರು ನನ್ನ ಅಳಿಯ ಮಲ್ಲಿಕಾರ್ಜುನನ ಮನೆಯ ಮುಂದಿನ ರಸ್ತೆಯಲಿ ನಾನು ಮತ್ತು ನನ್ನ ಅಳಿಯ ಮಲ್ಲಿಕಾರ್ಜುನ ನನ್ನ ತಮ್ಮನಾದ ಜಿ.ಬಸವರಾಜ,ನನ್ನ ಮಗ ಗೋವಿಂದರಾಜ,ನನ್ನ ಮಗಳು ವಿಶಾಲಾಕ್ಷಿ,ನಮ್ಮ ಸಂಬಂಧಿ ಕೆ.ಚಂದ್ರಣ್ಣ ನಾವೆಲ್ಲರೂ ಸೇರಿಕೊಂಡು ಸಂಘದ ಬಗ್ಗೆ ಮಾತನಾಡುತ್ತಾ ನಿಂತುಕೊಂಡಿದ್ದಾಗ ಅದೇ ಸಮಯಕ್ಕೆ ನಮ್ಮ ಗ್ರಾಮದ ೧] ಮಾರಮ್ಮನ ಗುಡಿ ಪೂಜಾರಿ ರುದ್ರೇಶ ತಂದೆ ಬಸಣ್ಣ,೨] ತಿಪ್ಪೇರುದ್ರ ತಂದೆ ತಿಪ್ಪಯ್ಯ ೩] ಓಬಣ್ಣ ತಂದೆ ತಿಪ್ಪಯ್ಯ,೪] ಬಸಣ್ಣ ತಂದೆ ತಿಪ್ಪಯ್ಯ ೫] ಚನ್ನವೀರ ತಂದೆ ತಿಪ್ಪೇಸ್ವಾಮಿ ೬] ಬಸವರಾಜ ತಂದೆ ತಿಪ್ಪೇಸ್ವಾಮಿ ೭] ತಿಪ್ಪೇರುದ್ರ @ ನೇಮಣ್ಣ ತಂದೆ ಮಲ್ಲಯ್ಯ ೮] ಡ್ರೈವರ್ ಓಬಣ್ಣ ತಂದೆ ಮುದ್ದಲು ಓಬಯ್ಯ ೯] ಮಲ್ಲಿಕಾರ್ಜುನ ತಂದೆ ಮುದ್ದಲು ಓಬಯ್ಯ ೧೦] ಮುದ್ದಲು ಓಬಯ್ಯ ತಂದೆ ಲೇಟ್ ಬಸಯ್ಯ ೧೧] ಮಹೇಶ ತಂದೆ ಡ್ರೈವರ್ ಓಬಯ್ಯ ೧೨] ನಾಗೇಶ ತಂದೆ ಡ್ರೈವರ್ ಓಬಯ್ಯ ೧೩] ಮಹದೇವ ತಂದೆ ಕುಂಟಯ್ಯ ೧೪] ರುದ್ರಮ್ಮ ಗಂಡ ಮಹದೇವ ೧೫] ಮಾರಣ್ಣ ತಂದೆ ಲೇಟ್ ಕರಿಯಣ್ಣ ೧೬] ತಿಪ್ಪಕ್ಕ ಗಂಡ ತಿಪ್ಪೇಸ್ವಾಮಿ ೧೭] ಬಂಗಿ ಚಂದ್ರ ಬಂಗಿ ಓಬಯ್ಯ ೧೮] ಬಂಗಿ ರೇವಣ್ಣ ಬಂಗಿ ಓಬಯ್ಯ ೧೯] ಬಂಗಿ ಮಾರಕ್ಕ ಗಂಡ ಬಂಗಿ ಓಬಯ್ಯ ೨೦] ಬಂಗಿ ಓಬಕ್ಕ ಗಂಡ ಬಸಯ್ಯ ೨೧] ಕಾಕಲು ಓಬಳೇಶ ತಂದೆ ತಿಪ್ಪೇಸ್ವಾಮಿ ೨೨] ಕಾಕಲು ನಾಗರಾಜ ತಂದೆ ತಿಪ್ಪೇಸ್ವಾಮಿ ೨೩] ಮಾರಮ್ಮನ ಪೂಜಾರಿ ರುದ್ರಯ್ಯ ೨೪] ನೆಟ್ಟೆಕಾಯಿ ಬಸಣ್ಣ ತಂದೆ ಲೇಟ್ ಬಸಯ್ಯ ೨೫] ರಾಮಚಂದ್ರ ತಂದೆ ನೆಟ್ಟೆಕಾಯಿ ಬಸಣ್ಣ ೨೬] ಬಶ್ಯ ತಂದೆ ನೆಟ್ಟೆಕಾಯಿ ಬಸಣ್ಣ ೨೭] ಬಸವರಾಜ ತಂದೆ ಕಾಟಯ್ಯ ೨೮] ಕೃಷ್ಣಪ್ಪ ತಂದೆ ಕಾಟಯ್ಯ ೨೯] ಮೀನಾಕ್ಷಿ ಗಂಡ ಕಾಕಲು ಚಂದ್ರ ೩೦] ಓಮಾಕ್ಷಿ ಗಂಡ ಕಾಕಲು ಓಬಳೇಶ ೩೧] ಮಮತ ಗಂಡ ತಿಪ್ಪೇರುದ್ರಪ್ಪ ಇವರುಗಳು ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲು, ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದು ಏನ್ರಲೇ ಸೂಳೆ ಮಕ್ಕಳೆ ಸಂಘದವರು ನಮ್ಮ ಊರಿಗೆ ಬಂದ್ರೆ ನೀವು ನಮ್ಮ ಕಡೆಯವರಿಗೆ ಸಂಘದವರಿಗೆ ಸಾಲ ಕೊಡಬೇಡಿರಿ ಅಂತ ಹೇಳುತ್ತೀರೇನ್ರಲೇ ಅಂತ ದುರ್ಬಾಷೆಗಳಿಂದ ಬೈದಾಡುತ್ತಾ ಅವರುಗಳ ಪೈಕಿ ರುದ್ರೇಶ ತಂದೆ ಬಸಣ್ಣ ಎಂಬುವನು ತನ್ನ ಕೈಯ್ಯಲ್ಲಿದ್ದ ಕಟ್ಟಿಗೆಯಿಂದ ನನ್ನ ಎಡ ಮೊಣಕೈಹತ್ತಿರ ಹೊಡದು ಬಾವು ಗಾಯ ಮಾಡಿದನು.ನನಗೆ ಬಿಡಿಸಲು ಬಂದ ನನ್ನ ತಮ್ಮ ಬಸವರಾಜನಿಗೆ ಓಬಣ್ಣ ತಂದೆ ತಿಪ್ಪಯ್ಯನು ಕಲ್ಲಿನಿಂದ ಬಸವರಾಜನ ಮೂಗಿನ ಮೇಲೆ ಗುದ್ದಿ ರಕ್ತಗಾಯ ಮಾಡಿದನು, ಬಂಗೇರ ಚಂದ್ರ ಎಂಬುವನು ಕಲ್ಲಿನಿಂದ ನನ್ನ ಮಗ ಗೋವಿಂದರಾಜನ ಬಲ ಕೆನ್ನೆಗೆ ಗುದ್ದಿ ಗಾಯ ಮಾಡಿದನು.ಓಮಾಕ್ಷಿ ಎಂಬುವಳು ಕಲ್ಲಿನಿಂದ ನನ್ನ ಮಗಳಾದ ವಿಶಾಲಕ್ಷಿಯ ಬಲ ಮುಂಗೈಗೆ ಗುದ್ದಿ ಗಾಯ ಮಾಡಿದಳು.ತಿಪ್ಪೇರುದ್ರ ತಂದೆ ತಿಪ್ಪಯ್ಯ ಎಂಬವನು ಕಟ್ಟಿಗೆಯಿಂದ ನನ್ನ ಅಳಿಯ ಮಲ್ಲಿಕಾರ್ಜುನನಿಗೆ ಬಲಗಡೆಯ ಸೊಂಟಕ್ಕೆ | |||||||||||||||
ಹೊಡೆದು ನೋವು ಮಾಡಿದನು.ಚನ್ನವೀರ ತಂದೆ ತಿಪ್ಪೇಸ್ವಾಮಿ ಎಂಬುವನು ಕಲ್ಲಿನಿಂದ ನನ್ನ ತಂದೆ ಚಂದ್ರಪ್ಪನ ಎಡ ಮುಂಗೈ ಹತ್ತಿರ ಹೊಡೆದು ನೋವು ಮಾಡಿದನು. ಅಷ್ಟರಲ್ಲಿ ನಮ್ಮ ಗ್ರಾಮದ ಕೆ.ಮಾರಣ್ಣ ತಂದೆ ಲೇಟ್ ಕೊಟಗಿ ಬಸದಪ್ಪ,ವಲಸೆ ಮಲ್ಲಿ ತಂದೆ ನಿಂಗಯ್ಯ,ಅಗಸರ ನಾಗರಾಜ ತಂದೆ ಬಸವರಾಜ, ಮತ್ತು ಇತರರು ಸೇರಿಕೊಂಡು ಜಗಳವನ್ನು ಬಿಡಿಸಿದರು.ಮೇಲ್ಕಂಡವ ವ್ಯಕ್ತಿಗಳು ನಮಗೆ ಪ್ರಾಣ ಭಯ ಹಾಕಿ ಹೋದರೆಂದು,ಗಾಯಗೊಂಡ ಬಸವರಾಜ,ಗೋವಿಂದರಾಜ, ಮಲ್ಲಿಕಾರ್ಜುನ,ವಿಶಾಲಕ್ಷಿ,ಕೆ.ಚಂದ್ರಪ್ಪ ಇವರಿಗೆ ಚಿಕಿತ್ಸೆ ಸಲುವಾಗಿ ವಾಹನ ಅನುಕೂಲ ಮಾಡಿ ಮೊಳಕಾಲ್ಮುರ ಆಸ್ಪತ್ರೆಗೆ ಕಳುಹಿಸಿ ಕೊಟ್ಟೆನು.ನಾನು ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಈ ಘಟನೆಯ ಬಗ್ಗೆ ನಮ್ಮ ಬಂದುಗಳೊಂದಿಗೆ ಚರ್ಚಿಸಿ ಈಗ ಠಾಣೆಗೆ ತಡವಾಗಿ ಬಂದು ಈ ನನ್ನ ದೂರನ್ನು ನೀಡಿರುತ್ತೇನೆ. ನಮಗೆ ಹೊಡೆದು ಗಾಯ ಪಡಿಸಿದ ಮೇಲ್ಕಂಡ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ. | ||||||||||||||||
7 | Cr.No:0189/2015 (IPC 1860 U/s 143,506,147,148,504,323,324,149 ) |
22/10/2015 | Under Investigation | |||||||||||||
RIOTS - Others | ||||||||||||||||
Brief Facts : | ದಿನಾಂಕ:೨೨/೧೦/೨೦೧೫ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಫಿರ್‍ಯಾದಿದಾರರಾದ ಶ್ರೀ.ಓಬಣ್ಣ ತಂದೆ ಓಬಯ್ಯ,ವ:೪೩ ವರ್ಷ,ವಾಲ್ಮೀಕಿ ಜನಂಗ,ವ್ಯವಸಾಯ,ವಾಸ:ಮೀನಕೆರೆ ಗ್ರಾಮಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ, ನಮ್ಮ ಗ್ರಾಮದ ಮಲ್ಲಿಕಾರ್ಜುನ ಎಂಬುವರು ಕಾವೇರಿ/ಸೋಮೇಶ್ವರ ಸಂಘದಲ್ಲಿ ಕೆಲಸ ಮಾಡುತ್ತಾ ಸದಸ್ಯರ ಹೆಸರು ಬರೆದು ಕೊಳ್ಳುವುದು ಮತ್ತು ಅವರಿಗೆ ಸಂಘದಿಂದ ಸಾಲದ ಹಣ ಎಷ್ಟು ಬಂತು ಅನ್ನುವುದರ ಬಗ್ಗೆ ಸದಸ್ಯರಿಗೆ ಹೇಳುವುದು ಮಾಡುತ್ತಾನೆ.ದಿನಾಂಕ:೨೧/೧೦/೨೦೧೫ ರಂದು ಸಾಯಂಕಾಲ ೫-೦೦ ಗಂಟೆಯ ಸುಮಾರಿಗೆ ಕಾವೇರಿ/ಸೋಮೇಶ್ವರ ಸಂಘದ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಬಂದು ಸಂಘದ ಸದಸ್ಯರಿಗೆ ಕೊಟ್ಟಂತಹ ಸಾಲದ ಹಣವನ್ನು ಕಟ್ಟಿಸಿಕೊಳ್ಳಲು ಬಂದಿದ್ದರು.ಆ ಸಮಯದಲ್ಲಿ ನಮ್ಮ ಗ್ರಾಮದ ಸಾಕಮ್ಮ ಗಂಡ ತಿಪ್ಪೇರುದ್ರಪ್ಪ,ಕಾಮಾಕ್ಷಿ ಗಂಡ ಡ್ರೈವರ್ ಓಬಣ್ಣ, ಇವರುಗಳು ಸಂಘದ ಅಧಿಕಾರಿಗಳಿಗೆ ಸಾಲ ಕೊಡಿರಿ ಎಂದು ಕೇಳಿದ್ದು ಆಗ ಸಂಘದ ಅಧಿಕಾರಿಗಳು ಅವರಿಬ್ಬರಿಗೆ ನೀವು ಸಾಲ ತೆಗೆದು ಕೊಂಡ ಹಣವನ್ನು ಸರಿಯಾಗಿ ಕಟ್ಟುವುದಿಲ್ಲ ಕಾರಣ ನಿಮಗೆ ಸಂಘದಿಂದ ಸಾಲವನ್ನು ಕೊಡುವುದಿಲ್ಲವೆಂದು ಹೇಳಿರುತ್ತಾರೆ.ಸಂಘದ ಅದಿಕಾರಿಗಳು ವಾಪಾಸ್ ಹೋದ ನಂತರ ನಿನ್ನೆಯ ದಿನ ರಾತ್ರಿ ೮-೩೦ ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಬಸಣ್ಣ,ಕೃಷ್ಣಪ್ಪ,ಸುನಿತಮ್ಮ,ಓಬಕ್ಕ,ಓಬಣ್ಣ ತಂದೆ ಲೇಟ್ ತಿಪ್ಪಯ್ಯ ನಾವೆಲ್ಲರೂ ಸೇರಿಕೊಂಡು ನಮ್ಮ ಗ್ರಾಮದಲ್ಲಿರುವ ಮಲ್ಲಿಕಾರ್ಜುನನ ಮನೆಯ ಮುಂದುಗಡೆ ರಸ್ತೆಯಲ್ಲಿದ್ದ ಓಬಯ್ಯನಿಗೆ ಸಂಘದವರು ಸಾಲು ಕೊಡಲು ನಮ್ಮ ಗ್ರಾಮಕ್ಕೆ ಬಂದಾಗ ನೀವು ನಮ್ಮ ಕಡೆಯವರಿಗೆ ಸಾಲ ಕೊಡಬೇಡಿರಿ ಅಂತ ಯಾಕೆ ಹೇಳಿದಿರಿ ನಮ್ಮ ಕಡೆಯವರು ಸಾಲವನ್ನು ತೀರಿಸಿದ್ದಾರೆ ನೀವು ವಿನಾ ಕಾರಣ ನಮ್ಮ ಕಡೆಯವರಿಗೆ ಸಾಲ ಕೊಡಬೇಡಿರಿ ಅಂತ ಹೇಳಿ ನಮ್ಮ ಕಡೆಯವರಿಗೆ ದಸರಾ ಹಬ್ಬವನ್ನು ಮಾಡದಂತೆ ಮಾಡಿದಿರಿ ಅಂತ ಕೇಳಿದ್ದಕ್ಕೆ ನಮ್ಮ ಗ್ರಾಮದ ೧] ಕೆ.ರಾಜ ತಂದೆ ಕೆ.ಚಂದ್ರಣ್ಣ, ೨] ಸರಸ್ವತಿ ಗಂಡ ರಾಜ ೩] ಕೆ.ಚಂದ್ರಣ್ಣ ೪] ಕೊಟಗಿ ಮಾರಣ್ಣ ೫] ರಮೇಶ ತಂದೆ ಕೊಟಗಿ ಮಾರಣ್ಣ ೬] ಗುರುಮೂರ್ತಿ ತಂದೆ ಆರ್.ಕೆ.ಪಾಲಯ್ಯ ೭] ವಲಸೆ ಮಲ್ಲಿಕಾರ್ಜುನ ತಂದೆ ಗುಡ್ಲ ನಿಂಗಯ್ಯ ೮] ಲಲಿತಮ್ಮ ೯] ಜಿ.ಓಬಣ್ಣ ೧೦] ಭಾಗ್ಯಮ್ಮ ೧೧] ಕೊಟಗಿ ಮಲ್ಲಿಕಾರ್ಜುನ ತಂದೆ ಚಂದ್ರಣ್ಣ ೧೨] ಜಿ.ಸೋಮಣ್ಣ ತಂದೆ ದೊಡ್ಡ ಓಬಯ್ಯ ೧೩] ಗೋವಿಂದ ತಂದೆ ಜಿ.ಓಬಯ್ಯ ೧೪] ಜಿ.ಓಬಳೇಶ ತಂದೆ ಜಿ.ಓಬಯ್ಯ ೧೫] ಭಾಗ್ಯಮ್ಮ ಗಂಡ ಓಬಯ್ಯ ೧೬] ಸುಲೋಚನ ಗಂಡ ಗುರುಮೂರ್ತಿ ೧೭] ಜಿ.ಬಸವರಾಜ ತಂದೆ ದೊಡ್ಡ ಓಬಯ್ಯ ೧೮] ಕೊಟಗಿ ಬಸವರಾಜ ತಂದೆ ಲೇಟ್ ರಾಜಣ್ಣ ಇವರೆಲ್ಲಗೂ ಗುಂಪುಕೊಟ್ಟಿಕೊಂಡು ಕೈಗಳಲ್ಲಿ ಕಲ್ಲು, ಕಟ್ಟಿಗೆ ಹಿಡಿದುಕೊಂಡು ಬಂದು ಏನ್ರಲೇ ಸೂಳೆ ಮಕ್ಕಳೆ ನಾವೇಕೆ ಸಂಘದವರಿಗೆ ನಿಮಗೆ ಹಣ ಕೊಡಬೇಡಿರಿ ಅಂತ ಹೇಳಿದ್ದೇವೆ ನಮಗೇನು ಸಂಬಂಧ ಅಂತ ನಮ್ಮೊಂದಿಗೆ ಜಗಳ ತೆಗೆದು ಬಾಯಿಗೆ ಬಂದಂತೆ ದುರ್ಬಾಷೆಗಳಿಂದ ಬೈದಾಡಿ ಅವರ ಪೈಕಿ ಗೋವಿಂದರಾಜು ಎಂಬುವನು ಕೈಯ್ಯಲ್ಲಿದ್ದ ಕಲ್ಲಿನಿಂದ ನನ್ನ ಎಡ ಹಣೆಗೆ,ಗದ್ದಕ್ಕೆ,ಎಡ ಪಕ್ಕೆಗೆ ಗುದ್ದಿ ನೋವುಮಾಡಿದನು.ನನಗೆ ಬಿಡಿಸಲು ಬಂದ ನಮ್ಮ ಸಂಬಂಧಿ ಬಸಣ್ಣನಿಗೆ ಜಿ.ಓಬಣ್ಣ ಎಂಬುವನು ಕಟ್ಟಿಗೆಯಿಂದ ಬಸಣ್ಣನ ತಲೆಗೆ ಹೊಡೆದು ರಕ್ತಗಾಯ ಮಾಡಿದನು.ಜಿ.ಓಬಳೇಶನು ಕಲ್ಲಿನಿಂದ ಕೃಷ್ಣಪ್ಪನ ತಲೆಗೆ ಹೊಡೆದು ಹೊಡೆದು ರಕ್ತಗಾಯ ಮಾಡಿದನು.ಭಾಗ್ಯಮ್ಮ,ಸುಲೋಚನಮ್ಮ, ಇವರು ಸೇರಿಕೊಂಡು ಕೈಗಳಿಂದು ಸುನಿತಮ್ಮಳ ಬೆನ್ನಿಗೆ ಗುದ್ದಿ ನೋವು ಮಾಡಿದರು.ಸರಸ್ವಿತಿ ಕಲ್ಲಿನಿಂದ ಓಬಕ್ಕಳ ಎಡ ಕಣ್ಣಿನ ಕೆಳಗೆ ಗುದ್ದಿ ನೋವು ಮಾಡಿದರು.ಕೊಟಿಗಿ ಬಸವರಾಜ ಎಂಬುವನು ಕಲ್ಲಿನಿಂದ ಓಬಣ್ಣ ತಂದೆ ಲೇಟ್ ತಿಪ್ಪಯ್ಯನ ಬಲ ಭುಜಕ್ಕೆ,ಮುಂಗೈ ಹತ್ತಿರ ಗುದ್ದಿನೋವು ಮಾಡಿದನು.ಅಷ್ಟರಲ್ಲಿ ಜಿ.ಸೋಮಣ್ಣ ತಂದೆ ಬಸವನಾಯಕ,ಜಿ.ಡಿ.ಮಹಂತೇಶ ತಂದೆ ಲೇಟ್ ದೇವೇಂದ್ರಪ್ಪ, ಸೀನಪ್ಪ ತಂದೆ ಗೌಡ್ರ ಓಬಯ್ಯ ಮತ್ತು ಇತರರು ಸೇರಿಕೊಂಡು ಜಗಳವನ್ನು ಬಿಡಿಸಿದರು. ನಂತರ ನಮಗೆ ಹೊಡೆದ ಮೇಲ್ಕಂಡ ವ್ಯಕ್ತಿಗಳು ಇನ್ನೊಮ್ಮೆ ಸಂಘದ ಬಗ್ಗೆ ನಮ್ಮ ಬಳಿ ಕೇಳಲು ಬಂದರೆ ನಿಮ್ಮ ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಭಯ ಹಾಕಿ ಹೋದರು.ಗಾಯಗೊಂಡ ನಾವೆಲ್ಲರೂ ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈ ಘಟೆನಯ ಬಗ್ಗೆ ನಮ್ಮ ಬಂದುಗಳೊಂದಿಗೆ ಚರ್ಚಿಸಿ ಠಾಣೆಗೆ ತಡವಾಗಿ ಬಂದು ಈ ನನ್ನ ದೂರು ನೀಡಿರುತ್ತೇನೆ. ನಮಗೆ ಹೊಡೆದು ನೋವುಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ. | |||||||||||||||
Hospet Town PS | ||||||||||||||||
8 | Cr.No:0207/2015 (IPC 1860 U/s 341,379,324 ) |
22/10/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ:22/10/2015 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರಾದ ನಾಣಿಕೇರಿ ರಾಮ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರು ಸಾರಾಂಶ ಈ ದಿನ ಬೆಳಗಿನ ಜಾವ ನಮ್ಮ ಮನೆಯಿಂದ ಬನ್ನಿ ಮಹಾಂಕಾಳಿ ದೇವಸ್ತಾನಕ್ಕೆ ಹೋಗಲು ಹೊರಟು ಸಂಡೂರ್ ರಸ್ತೆಯ ನೇಕಾರ ಸಂಘದ ಹತ್ತಿರದ ಆಟೋ ನಿಲ್ದಾಣದ ಬಳಿ ಹೋಗುತ್ತಿದ್ದಾಗ ಯಾರೋ ಅಪರಿಚಿತರು ಹಾಲಿನ ವಾಹನದ ತರಹದ ಬಿಳಿ ಮತ್ತು ನೀಲಿ ಬಣ್ಣದ ಕ್ಯಾಂಪರ್ ವಾಹನದಲ್ಲಿ ದನಗಳನ್ನು ಹಾಕಿಕೊಂಡು ಹೋಗಲು ಬಂದಿರುವುದನ್ನು ನೋಡಿ ಬೆಳಗಿನ ಜಾವ 01-25 ಗಂಟೆಯ ಸಮಯದಲ್ಲಿ ಅವರನ್ನು ಏನು ಮಾಡುತ್ತಿದ್ದೀರಿ ಅಂತ ವಿಚಾರ ಮಾಡಿದಾಗ ವಾಹನದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಕೆಳಗೆ ಇಳಿದು ಬಂದು ನನ್ನನ್ನು ತಡೆದು ನಿಲ್ಲಿಸಿ ಏಕಾ ಏಕಿ ಕಲ್ಲಿನಿಂದ ನನ್ನ ತಲೆಯ ಎಡಗಡೆ ಮತ್ತು ಎಡಕಿವಿಗೆ ಹೊಡೆದು ಗಾಯಗೊಳಿಸಿ ಬೊಲೆರೋ ಕ್ಯಾಂಪರ್ ವಾಹನದಲ್ಲಿ ಹತ್ತಿಕೊಂಡು ವಾಲ್ಮಿಕಿ ಸರ್ಕಲ್ ಕಡೆ ಹೊರಟು ಹೋಗಿದ್ದು, ಇದಲ್ಲದೆ ಇನ್ನೊಂದು ಮಿನಿ ಲಾರಿ ಟಾಟಾ 407 ಬಿಳಿ ಮತ್ತು ಗ್ರೇ ಕಲರಿನದಿದ್ದು, ಮಿನಿ ಲಾರಿಯು ನಾನು ಮನೆಯ ಹತ್ತಿರ ಬರುವಾಗಲೇ ವಾಲ್ಮಿಕಿ ಸರ್ಕಲ್ ಕಡೆ ಹೊರಟು ಹೋಗಿದ್ದು, ಈ ಎರಡು ವಾಹನಗಳಿಗೆ ಹಿಂಬದಿ ತಾಡಪಾಲ್ ಹಾಕಿ ಮುಚ್ಚಿದ್ದು, ಅವುಗಳ | |||||||||||||||
ನಂಬರ್ ನೋಡಿರುವುದಿಲ್ಲ, ಈ ಎರಡು ವಾಹನಗಳಲ್ಲಿ ಯಾರೋ 4-5 ಜನರು ದನಗಳನ್ನು ಹಾಕಿಕೊಂಡು ಹೋಗಲು ಬಂದು ರಸ್ತೆಯಲ್ಲಿ ಮಲಗಿದ್ದ ಜಂಗಳ ದನಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ನನಗೆ ಕಲ್ಲಿನಿಂದ ಹೊಡೆದ ವ್ಯಕ್ತಿಯನ್ನು ನಾನು ಸರಿಯಾಗಿ ನೋಡಿರುವುದಿಲ್ಲ, ಕಾರಣ ನನಗೆ ತಡೆದು ನಿಲ್ಲಿಸಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೇ ಕೈಗೊಂಡಿದೆ | ||||||||||||||||
Kottur PS | ||||||||||||||||
9 | Cr.No:0150/2015 (IPC 1860 U/s 506,34,504,324 ) |
22/10/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ 22-10-2015 ರಂದು ಸಂಜೆ 7-45 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರಿನ ದೂರು ಸಾರಾಂಶ, ದಿನಾಂಕ 22-10-2015 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿರ್ಯಾದಿ ಮನೆಯ ಮುಂದೆ ಬಂದು ಲೇ ತುಡುಗು ಸೂಳೆ ನನ್ನ ಸೊಸೆ ಯಲ್ಲಮ್ಮಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿರುತ್ತಿ ಎಂದು ಬೈದಾಡಿದ್ದು ಆಗ ಪಿರ್ಯಾದಿ ಆಕೆಯ ಗಂಡ ಇಬ್ಬರು ಆತನಿಗೆ ಯಲ್ಲಮ್ಮಳ ಗಂಡನಾದ ನಾಗೇಶಿಗೆ ಹೇಳೆ ಕರೆದುಕೊಂಡು ಹೋಗಿರುವುದು ಎಂದು ಹೇಳಿದ್ದು ನಂತರ ಸಂಜೆ 6-00 ಗಂಟೆಗೆ ಆರೋಪಿತರು ಬಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು ಕಟ್ಟಿಗೆಯಿಂದ ಬಲ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಇದ್ದ ದೂರು ಮೇರೆಗ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | |||||||||||||||
10 | Cr.No:0151/2015 (IPC 1860 U/s 506,34,504,307,323,324 ) |
22/10/2015 | Under Investigation | |||||||||||||
CASES OF HURT - Grievous Hurt | ||||||||||||||||
Brief Facts : | ದಿನಾಂಕ
22-10-2015 ರಂದು ರಾತ್ರಿ 08-30ರಿಂದ 9-00
ಗಂಟೆಯ ವರೆಗೆ ಕೊಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಿರ್ಯಾದುದಾರರು ಕೊಟ್ಟ ಹೇಳಿಕೆ ದೂರು
ಸಾರಾಂಶ ,ಈ ದಿನ ಸಂಜೆ 05-30 ಗಂಟೆಗೆ ನಾವು ಯಾರೂ ಇರದ ಸಮಯದಲ್ಲಿ ನನ್ನ ತಾಯಿ ನಾಗಮ್ಮಳಿಗೆ
ಹುಲಿಯಪ್ಪ ಮತ್ತು ಆತನ ಹೆಂಡತಿ ಹಿರಿಯಮ್ಮ ಿಬ್ಬರೂ ಸೇರಿ ಯಲ್ಲಮ್ಮಳಿಗೆ ಕೂಲಿ ಕೆಲಸಕ್ಕೆ
ಕರೆದುಕೊಂಡು ಹೋದ ವಿಚಾರದಲ್ಲಿ ಬೈದು ಒನಕೆಯಿಂದ ನನ್ನ ತಾಯಿಗೆ ಹೊಡೆದು ರಕ್ತ ಗಾಯ
ಮಾಡಿದ್ದರಿಂದ ನನ್ನ ತಂದೆ ಆಕೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ನಂತರ,ನಾನು ಮತ್ತು ನನ್ನ
ಚಿಕ್ಕಪ್ಪ ಇಬ್ಬರೂ 07-30 ಘಂಟೆಗೆ ಮನೆಯ ಮುಂದೆ ಇರುವಾಗ ಹುಲಿಯಪ್ಪನ ಸೊಸೆ ಯಲ್ಲಮ್ಮ ಇವರಿಗೆ
ನನ್ನ ತಾಯಿ ನಾಗಮ್ಮಳು ಕೂಲಿ ಕೆಲಸಕ್ಕೆ ಕರೆದುಕೊಢು ಹೋದ ವಿಚಾರದಲ್ಲಿ
,ಮಲ್ಲೆಮಂಜಪ್ಪ@ಗಿತ್ತಮಂಜಪ್ಪ,ಪ್ರಶಾಂತ,ಅಶೋಕ,ಶಶಿಕುಮಾರ,ಇವರು ನಾಲ್ಕು ಜನರು ಬಂದು ಏಕಾ-ಏಕಿ
ನಿಮ್ಮ ತಂದೆ-ತಾಯಿ ಎಲ್ಲಿ ಹೋಗಿದ್ದಾರೆ ಅಂತಾ ಬಾಯಿಗೆ ಬಂದಂತೆ ದುರ್ಭಾಷೆಗಳಿಂದ ಬೈದು, ನನಗೆ ಕಟ್ಟಿಗೆಗಳಿಂದ ಮತ್ತು ಕೈ-ಕಾಲುಗಳಿಂದ
ಹೊಡೆಯುವಾಗ ನನ್ನ ಚಿಕ್ಕಪ್ಪನಾದ ಮೂಗಪ್ಪನು ಬಿಡಿಸಿಕೊಳ್ಳಲು ಬಂದಾಗ ಅವೇ ಕಟ್ಟಿಗೆಗಳಿಂದ
ಮತ್ತು ಕೈಯಿಂದ ಮೇಲ್ಕಂಢ ನಾಲ್ಕೂ ಜನರೂ ತಲೆಗೆ ಮತ್ತು ಮೈ ಮೇಲೆ ಹೊಡೆದು,ಪ್ರಾಣ ಭಯ
ಹಾಕಿ,ಮಾರಣಾಂತಿಕ ಗಾಯ ಉಂಟುಮಾಡಿದ್ದರಿಂದ ನಮ್ಮ ಚಿಕ್ಕಪ್ಪನಿಗೆ ತಲೆಗೆ ಕ್ಟಿಗೆಗಳಿಂದ ಹೊಡೆದು
ಬಾರಿ ರಕ್ತಗಾಯ ಮಾಡಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ, ನಮ್ಮ
ಚಿಕ್ಕಪ್ಪನಿಗೆ ಬಲ ಕಿವಿಯಿಂದ ರಕ್ತ ಹೊರ ಬಂದು
ಎಚ್ಚರ ತಪ್ಪಿದ್ದರಿಂದ ಆತನಿಗೆ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಿದ್ದು, ಅವರ
ವಿರುಧ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರು ಮೇರೆಗೆ ಪ್ರಕರಣ ದಾಖಲಿಸಿ,ತನಿಖೆ ಕೈ
ಗೊಂಡಿದೆ. ಈ ಬಗ್ಗೆ ವಿಶೇಷ ವರದಿಯನ್ನು ಸಲ್ಲಿಸಲಾಗುವುದು |
|||||||||||||||
11 | Cr.No:0152/2015 (KARNATAKA POLICE ACT, 1963 U/s 78(3) ) |
23/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ 21-10-2015 ರಂದು ಸಂಜೆ 4-45 ಗಂಟೆಗೆ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ದೂಪದಹಳ್ಳಿ ಗ್ರಾಮದ ಕಾರ್ಪೋರೇಷನ್ ಬ್ಯಾಂಕ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನೆಡೆಯುತ್ತಿದೆ ಖಚಿತ ಮಾಹಿತಿ ಬಂದ ಮೇರಗೆ ಇದೇ ದಿನ ದಿನಾಂಕ 21-10-2015 ರಂದು ಸಂಜೆ 6-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸಿಬ್ಬಂದಿಗಳು ಹಾಗು ಪಂಚರೊಂದಿಗೆ ದಾಳಿನೆಡೆಸಿ ಪಂಚನಾಮೆ ಮುಖಾಂತರ ಆರೋಪಿ1) ಎಂ.ಮಂಜುನಾಥ ತಂದೆ ಹನುಮಂತಪ್ಪ, 30 ವರ್ಷ,ವಾಸ; ದೂಪದಹಳ್ಳಿ ಗ್ರಾಮ. ಕೂಡ್ಲಿಗಿ ತಾ:ಇವರಿಗೆ ಹಿಡಿದುಕೊಂಡಿದ್ದು ಅವರ ಅಂಗಶೋದನೆ ಮಾಡಲು ಅವರ ಬಳಿ ಜೂಜಾಟಕ್ಕೆ ಸಂಬಂದಿಸಿದ ಹಣ 325=೦೦ ರೂ 1 ಮಟಕಾ ಪಟ್ಟಿ, 1 ಬಾಲ್ ಪೆನ್ , ಅನ್ನು ಪಂಚನಾಮೆ ಮೂಲಕ ಜಪ್ತು ಪಡಿಸಿ ಕೊಂಡು ಸಿಕ್ಕಿಬಿದ್ದ ಆರೋಪಿತರ ವಿರುದ್ದ ಕ್ರಮಕೈಗೊಳ್ಳುವಂತೆ ರಾತ್ರಿ 8-00 ಗಂಟೆಗೆ ಠಾಣೆಗೆ ಬಂದು ವರದಿ ನೀಡಿದ್ದನ್ನು ಸ್ವೀಕರಿಸಿ ಇದು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣಾ ಡಿ.ಪಿ.341/2015 ರಲ್ಲಿ ನೊಂದಾಯಿಸಿಕೊಂಡಿದ್ದು. ಆರೋಪಿತರ ವಿರುದ್ದ ಕಲಂ 78(3) ಕೆ.ಪಿ ಆಕ್ಟ್ ರೀತ್ಯ ಪ್ರ.ವ.ವರದಿಯನ್ನು ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿಗಾಗಿ ಮನವಿಯನ್ನು ನೀಡಿದ್ದು ಮಾನ್ಯ ನ್ಯಾಯಾಲಯವು ಈ ದಿನಾಂಕ 23-10-2015 ರಂದು ಆದೇಶ ನೀಡಿದ್ದನ್ನು ಪಿ.ಸಿ 958 ರವರು ಬೆಳಿಗ್ಗೆ 10-15 ಗಂಟೆಗೆ ತಂದು ಹಾಜರ್ ಪಡಿಸಿದ್ದರ ಮೇರೆಗೆ ಠಾಣಾ ಗುನ್ನೆ ನಂ. 152/2015 ಕಲಂ 78(3) ಕೆ.ಪಿ ಆಕ್ಟ್ ರೀತ್ಯ ಪ್ರರಕಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ. | |||||||||||||||
Marriyammanahalli PS | ||||||||||||||||
12 | Cr.No:0134/2015 | 22/10/2015 | Under | |||||||||||||
(SC AND THE ST (PREVENTION OF ATTROCITIES) ACT, 1989 U/s 3(1)(ii)(X) ; IPC 1860 U/s 506,504,143,147,148,149,323,324 ) | Investigation | |||||||||||||||
SCHEDULED CASTE AND THE SCHEDULED TRIBES - Scheduled Caste | ||||||||||||||||
Brief Facts : | ಈ
ದಿನ ದಿನಾಂಕ- 22/10/2015 ರಂದು ಮಧ್ಯಾಹ್ನ 3.00 ಗಂಟೆಗೆ ಪಿರ್ಯಾದಿ ಶ್ರೀ, ಸಣ್ಣ ಸೋಮಣ್ಣ ಇವರು ಠಾಣೆಗೆ
ಹಾಜರಾಗಿ ನೀಡಿದ ಕಂಪ್ಯೂಟರ್ ದೂರಿನ ಸಾರಾಂಶ - ನಾವು ನಮ್ಮ ತಂದೆಗೆ ೫ ಜನ ಗಂಡು ಮಕ್ಕಳು
ಒಬ್ಬರು ಹೆಣ್ಣು ಮಗಳು ಇರುತ್ತೇವೆ.ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ
ದಿನಾಂಕ-೧೪/೧೦/೨೦೧೫ ರಂದು ಬೆಳಿಗ್ಗೆ ೮.೦೦
ಗಂಟೆಯ ಸಮಯಕ್ಕೆ ಗಂಗಾನ ಹೆಂಡತಿ ರೇಣುಕಾ ಇವರು ನಮ್ಮ ಮನೆಯ ಅಂಗಳದಲ್ಲಿ ಪಾತ್ರೆ
ಸಾಮಾನುಗಳನ್ನು ತೊಳೆಯುತ್ತಿದ್ದಳು. ಇಲ್ಲಿ ತೊಳೆಯಬೇಡ ಎಂದು ನಾನು ಹೇಳಿದ್ದಕ್ಕೆ ಬಾಯಿ ಮಾತಿನ
ಜಗಳವಾಯಿತು. ನನ್ನ ಅಣ್ಣಂದಿರು ತಮ್ಮ ತಮ್ಮ ಕೆಲಸಗಳಿಗೆ ಹೊಲಕ್ಕೆ ಹೋಗಿದ್ದರು. ನನಗೆ
ಹುಷಾರಿಲ್ಲದ ಕಾರಣ ನಾನು ಮನೆಯಲ್ಲಿಯೇ ಇದ್ದೆ. ಆಗ ಬೆಳಿಗ್ಗೆ ೧೧.೦೦ ಗಂಟೆಯ ಸುಮಾರಿಗೆ ನಮ್ಮ ಊರಿವನರೇ ಆದ ೧. ಸುಣಗಾರ ಗಂಗ ೨. ಸುಣಗಾರ
ಮಾರ್ಗ ೩. ಸುಣಗಾರ ಸ್ವಾಮಿ ೪. ಸುಣಗಾರ ಹನುಮಂತ ೫. ಸುಣಗಾರ ಹನುಮಕ್ಕ ಗಂಡ ಭರಮಪ್ಪ ೬.
ರೇಣುಕಾ ಗಂಡ ಗಂಗಾ ೭. ಕೆ.ಕರಿಯಜ್ಜ ೮. ಭರಮಪ್ಪ ೯. ಕೆ.ಚಿನ್ನಾಪುರಿ ೧೦. ಕೆ.ವೆಂಕಟೇಶ ೧೧. ಕೆ.ಸೋಮಜ್ಜ ೧೨. ಕೆ.ಹನುಮಂತ
೧೩. ಕೆ.ಮಂಜು ೧೪. ತಿರುಪತೆಪ್ಪ ೧೫. ಪ್ರೇಮಕ್ಕ ೧೬. ಸುಣಗಾರ ಪ್ರಕಾಶ ಇವರುಗಳು ಸೇರಿ ನನ್ನ
ಮೇಲೆ ಹಲ್ಲೆ ಮಾಡಿರುತ್ತಾರೆ. ಕಾರಣ ನಮ್ಮ ಮನೆಯ ಮುಂದೆ ಅವರ ಮನೆಯಿಂದ ಬರುವ ಚರಂಡಿ ನೀರನ್ನು
ಗಲೀಜು ನೀರನ್ನು ನಮ್ಮ ಮನೆಯ ಮುಂದೆ ಬಿಡ ಬೇಡಿರಿ ಎಂದು ನಾನು ಹೇಳಿದೆ ಆಗ ಅವರು ನನ್ನ ಮೇಲೆ
ಹಳೇ ದ್ವೇಷ ಇರುವುದರಿಂದ ನನಗೆ ಮೇಲೆ ಹೇಳಿದ ಇವರೆಲ್ಲರೂ ಒಂದುಗೂಡಿ ಲೇ ದನ ತಿನ್ನೋ ಬ್ಯಾಡರ ಸೂಳೆ ಮಗನೆ ದನದ ಮಾಂಸ ತಿನ್ನುತ್ತೀರಿ ಆದರಿಂದ ನಿಮಗೆ ಏನೂ
ಆಗಲ್ಲ ಚರಂಡಿ ನೀರಿಂದ ಎನು ಆಗುತ್ತೆ ಎಂದು
ಬೈದರು. ಈಗ ನಿನ್ನ ಅಣ್ಣಂದಿರು ಯಾರು ನಿನನಗೆ ನಾವು ಹೊಡೆಯುತ್ತೇವೆ ಎಂದು ಕೂಗುತ್ತಾ ಅವರುಗಳ
ಕೈಯಲ್ಲಿ ಕಬ್ಬಿಣದ ರಾಡು ಕೊಡ್ಲಿ. ಕಣಗ
ಕೋಲುಗಳನ್ನು ತಂದಿದ್ದರು. ಆದ್ದರಿಂದ ನನ್ನ ಮೇಲೆ ಸುಣಗಾರ ಮಾರ್ಗ ಇವನು ಕಭ್ಭಿಣದ ರಾಡಿನಿಂದ ಎಡಗಡೆ ಭುಜಕ್ಕೆ
ಹೊಡೆದಿರುತ್ತಾನೆ. ಕರಿಯಜ್ಜ ಕಣಗದಿಂದ ನನ್ನ ಬೆನ್ನಿಗೆ ಹೊಡೆದನು.ಕೆ.ಸೋಮಣ್ಣನು ಕೊಡ್ಲಿಗಿಯಿಂದ
ನನ್ನ ಎದೆಯ ಮೇಲೆ ಉಲ್ಟಾ ಮಾಡಿ ಹೊಡೆದನು. ಚಿನ್ನಾಪುರಿ ಕಲ್ಲಿನಿಂದ ತೆಲೆಗೆ
ಹೊಡೆದನು.ಉಳಿದವರು ಈ ಬ್ಯಾಡರ ಸೂಳೆ iಗನನ್ನು ಸಾಯಿಸಿ ಬಿಡಬೇಕು ಎಂದು ಪ್ರಾಣ ಬೆದರಿಕೆ
ಹಾಕಿದರು ನಾನು ಕೇಳಗೆ ಬಿದ್ದಾಗ ನಮ್ಮೂರಿನ ಭೀಮಪ್ಪ ಮತ್ತು ಅಂಬಮ್ಮ ಇವರುಗಳು ಬಂದು ಜಗಳ
ಬಿಡಿಸಿಕೊಂಡರು. ನಾನು ಪ್ರಜ್ಞೆ ತಪ್ಪಿದಾಗ ನನಗೆ ನಮ್ಮ ಅಣ್ಣ ದೊಡ್ಡ ಸೋಮಪ್ಪ ಇವರುಗಳು
ಬಂದು ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ
ನಂತರ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಓ.ಪಿ.ಡಿ ಹೋಗಿರುತ್ತೇನೆ. ನಂತರ ನಾನು ದಿನಾಂಕ-೧೯/೧೦/೨೦೧೫ ರಂದು ಓ.ಪಿ.ಡಿ ಯಿಂದ ಊರಿಗೆ ಬಂದಿರುತ್ತೇನೆ. ನಾನು ಘಟನೆಯ ಬಗ್ಗೆ ನಮ್ಮ ಅಣ್ಣಂದಿರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದಿದ್ದು ಕಾರಣ ನನ್ನ ಮೇಲೆ ಹಲ್ಲೇ ಮಾಡಿದವರು ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.ಎಂದು ದೂರಿ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿದೆ. |
|||||||||||||||
Moka PS | ||||||||||||||||
13 | Cr.No:0146/2015 (CODE OF CRIMINAL PROCEDURE, 1973 U/s 107 ) |
22/10/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಮಾನ್ಯರಲ್ಲಿ
ನಿವೇದಿಸಿಕೊಳ್ಳವುದೇನೆಂದರೆ, ಮೋಕ ಪೊಲೀಸ್ ಠಾಣೆ ಸರಹದ್ದಿನಲ್ಲಿ ಬರುವ ತಂಬ್ರಹಳ್ಳಿ-
ಬ್ಯಾಲಚಿಂತೆ ಗ್ರಾಮದ ಮದ್ಯವಿರುವ ವೇದಾವತಿ ಹಗರಿಯಲ್ಲಿ ಸರ್ಕಾರದಿಂದ ಪರವಾನಿಗೆ
ಪಡೆದುಕೊಂಡು ಮರಳು ಗಣಿಗಾರಿಯ ಕಾಮಗಾರಿಯಲ್ಲಿ
ಲಾರಿಗಳಲ್ಲಿ ಮರಳನ್ನು ತುಂಬಿಕೊಂಡು ಇವುಗಳಿಗೆ ಸರ್ಕಾರದವತಿಯಿಂದ ಪರ್ಮಿಟ್ ನೀಡಿ ಸಾಗಣೆಕೆ
ಮಾಡುತ್ತಿರುವಾಗ ಮೇಲ್ಕಂಡ ಪ್ರತಿವಾದಿಗಳು
ಮರಳು ತುಂಬಿದ ಲಾರಿಗಳಲ್ಲಿ ಲಾರಿ ಮಾಲಿಕರಿಂದ ಮತ್ತು ಚಾಲಕರಿಂದ ೧೦೦=೦೦ ರಿಂದ ೫೦೦=೦೦
ರೂಗಳನ್ನು ದೌರ್ಜನ್ಯವಾಗಿ ಮತ್ತು ಭಯ ಬೀತರನ್ನಾಗಿ ಮಾಡಿ ಹಣ ವಸೂಲಿ ಮಾಡುತ್ತಿರುತ್ತಾರೆ ಅಂತ ನನ್ನ
ಬಾತ್ಮೀದಾರರಿಂದ ಮಾಹಿತಿ ಬಂದಿರುತ್ತದೆ. ಈ ದಿನ ಮದ್ಯಾಹ್ನ ೧೨-೩೦ ಗಂಟೆಗೆ ನಾನು ತಂಬ್ರಹಳ್ಳಿ-ಬ್ಯಾಲಚಿಂತೆ- ಮೋಕಾ ಗ್ರಾಮದಲ್ಲಿ ಗಸ್ತು ತಿರುಗಾಡುತ್ತಿರುವಾಗ ಮೇಲ್ಕಂಡ ವಿಷಯದ ಬಗ್ಗೆ ನಾನು ನನ್ನ ಬಾತ್ಮೀದಾರರಿಗೆ ವಿಚಾರಿಸಲು ಮೇಲ್ಕಂಡ ಪ್ರತಿವಾದಿಗಳು ಮರಳು ಗಣಿಗಾರಿಕೆ ಸಮಯದಲ್ಲಿ ಲಾರಿ ಮಾಲಿಕರಿಂದ ಮತ್ತು ಚಾಲಕರಿಂದ ಹಣವನ್ನು ವಸೂಲಿ ಮಾಡುವ ವಿಷಯದಲ್ಲಿ ಲಾರಿ ಚಾಲಕ & ಮಾಲಿಕರು ಹಾಗೂ ಮೇಲ್ಕಂಡ ಪ್ರತಿವಾದಿಗಳು ಯಾವ ಸಮಯದಲ್ಲಾದರೂ ಜಗಳ ಮಾಡಿ ಹೊಡೆದಾಡಿಕೊಳ್ಳುವ ಹಾಗೂ ಮಾರಣಾಂತಿಕ ಹಲ್ಲೆಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳು ಇರುತ್ತವೆ ಅಂತಾ ಬಾತ್ಮಿದಾರರಿಂದ ಮಾಹಿತಿ ದೊರೆತಿರುತ್ತದೆ. ಮೇಲ್ಕಂಡ ಪ್ರತಿವಾದಿಗಳು ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಹೊಡೆದಾಡಿ ಮಾಡಿಕೊಂಡು ಗ್ರಾಮದ ಶಾಂತತೆಗೆ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳು ಹೆಚ್ಚಾಗಿದ್ದು, ಗ್ರಾಮದ ಶಾಂತತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮಕ್ಕಾಗಿ ಮದ್ಯಾಹ್ನ ೨ ಗಂಟೆಗೆ ಠಾಣೆಗೆ ಬಂದು ಸರ್ಕಾರದ ಪರವಾಗಿ ನಾನು ಫಿರ್ಯಾದಿಯಾಗಿ ಪ್ರತಿವಾದಿಗಳ ವಿರುದ್ಧ ಠಾಣೆಯ ಗುನ್ನೆ ನಂ:೧೪೬-೧೫ ಕಲಂ ೧೦೭ ಸಿಆರ್.ಪಿ.ಸಿ. |
|||||||||||||||
ಪ್ರಕಾರ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ. ಮಾನ್ಯರು ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ ಪ್ರತಿವಾದಿಗಳಿಂದ ಗ್ರಾಮದ ಶಾಂತಿಗೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭಾರಿ ಮೊತ್ತದ ಮುಚ್ಚಳಿಕೆ ಪಡೆಯಬೇಕೆಂದು ಮಾನ್ಯರಲ್ಲಿ ಪ್ರಾರ್ಥನೆ. |
||||||||||||||||
ಗುರುವಾರ, ಅಕ್ಟೋಬರ್ 22, 2015
PRESS NOTE OF 23/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ