ಶುಕ್ರವಾರ, ಅಕ್ಟೋಬರ್ 30, 2015

PRESS NOTE OF 30/10/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0093/2015
(KARNATAKA POLICE ACT, 1963 U/s 78(III) )
30/10/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ: 09-10-2015 ರಂದು ರಾತ್ರಿ 7-00 ಗಂಟೆಯ ಸಮದಯಲ್ಲಿ ಪಿ.ಎಸ್.ಐ ರವರಾದ ಶ್ರೀ.ವೈ.ಎಸ್.ಹನುಮತಪ್ಪರವರಿಗೆ ಠಾಣೆಯ ಸರಹದ್ದು ಬಳ್ಳಾರಪ್ಪ ಕಾಲೋನಿಯಿಂದ ಗರೀಬ್ ನವಾಜ್ ಕಾಲೋನಿಯ ಕಡೆ ಹೋಗುವ ಸರ್ಕಲ್ ನಲ್ಲಿ ಆರೋಪಿತನು ಜನರಿಗೆ ಉದ್ದೇಶಿ ಇದು ನಸೀಬಿನ ಮಟಕಾ ಜೂಜಾಟ ಒಂದು ರೂಪಾಯಿ ಕಟ್ಟಿದರೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಆಡಿರಿ ಎಂದು ರಸ್ತೆಯಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಕೊಂಡು ಪ್ರತಿಯಾಗಿ ಮಟಕಾ ನಂಬರಿನ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೊಪಿಯ ವಶದಲ್ಲಿದ್ದ ಹಣ ರೂ.2310/-ಗಳು ಮತ್ತು 2 ಮಟಕಾ ಚೀಟಿಗಳನ್ನು ಹಾಗೂ ಒಂದು ಬಾಲ್ ಪೆನ್ ಗಳನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು. ಆರೋಪಿಯನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ  ಆತನ ವಿರುದ್ದ 78 ಕ್ಲಾಸ್ (3)  ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 34/2015 ರಲ್ಲಿ ನಮೂದಿಸಿಕೊಂಡಿರುತ್ತದೆ.
ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಪ್ರಕರಣದಲ್ಲಿ ಎಪ್ .ಐ.ಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದ ಪರವಾನಿಗೆ ಕೋರಿದ್ದು ಘನ ನ್ಯಾಯಾಲಯವು ಪರವಾನಿಗೆ ನೀಡಿದ್ದರಿಂದ ಈ ದಿನ ಪ್ರ.ವ.ವರದಿ ದಾಖಲಿಸಿದೆ.
Cowlbazar PS
2 Cr.No:0319/2015
(IPC 1860 U/s 506,504,149,323,324 )
30/10/2015 Under Investigation
CASES OF HURT - Simple Hurt
Brief Facts :  ನಿನ್ನೆ ದಿನ ದಿನಾಂಕ: 29/10/2015 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾಧಿದಾರರು ತನ್ನ ಸ್ನೇಹಿತ ಪ್ರೇಮ್ ಕುಮಾರ್ ನೊಂದಿಗೆ ವೀರಶೈವ ಡಿಗ್ರಿ ಕಾಲೇಜಿಗೆ ಫೀಜ್ ಕಟ್ಟಲೆಂದು ಹೋದಾಗ ಪ್ರೇಮ್ ನ ಸ್ನೇಹಿತ ಮಧುನು ಪ್ರೇಮ್ ನಿಗೆ ಫೋನ್ ಮಾಡಿ ನಿನ್ನೆ ನಮ್ಮ ಕಾಲೇಜಿನ ಆಶೋಕ್ ಎನ್ನುವವನು ನನಗೆ ಹೊಡೆದಿದ್ದಾನೆ ಅವನು ಇಲ್ಲಿ ಇದ್ದಾನೇ ಬಾ ಅಂತ ತಿಳಿಸಿದ್ದರಿಂದ ಫಿರ್ಯಾಧಿ ಮತ್ತು ಆತನ ಸ್ನೇಹಿತ ಪ್ರೇಮ್ ಇಬ್ಬರು ಡಿಪ್ಲೋಮಾ ಕಾಲೇಜು ಹತ್ತಿರ ಹೋಗಿ ಆಶೋಕ್ ನಿಗೆ ಏಕೆ ಮಧುಗೆ ಹೊಡೆದಿದ್ದೀಯಾ ಎಂದು ಕೇಳಿದ್ದಕ್ಕೆ ನೀವು ಯಾರಲೇ ಕೇಳುವುದಕ್ಕೆ ಎಂದು ಹೇಳಿ ಹೋಗಿದ್ದು, ನಂತರ ಫಿರ್ಯಾಧಿ ಮತ್ತು ಪ್ರೇಮ್ ರವರು ಪುನಃ ಬೆಳಿಗ್ಗೆ 9-30 ಗಂಟೆ ಸುಮಾರಿಗೆ ವಾಪಸ್ಸು ಡಿಗ್ರಿ ಕಾಲೇಜಿಗೆ ಬಂದು ಕ್ಯಾಂಟಿನ್ ನಲ್ಲಿ ಟೀ ಕುಡಿಯುತ್ತಾ ಕುಳಿತಿರುವಾಗ ಆರೋಪಿತರು ವಿಕೆಟ್ ಗಳನ್ನು ಹಿಡಿದುಕೊಂಡು ಬಂದು ಪ್ರೇಮ್ ಗೆ ಹೊಡೆ-ಬಡೆ ಮಾಡುತ್ತಿದ್ದಾಗ ಬಿಡಿಸಲು ಹೋದ ಫಿರ್ಯಾಧಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
3 Cr.No:0320/2015
(IPC 1860 U/s 420 )
30/10/2015 Under Investigation
CHEATING - CHEATING
Brief Facts :  ಫಿರ್ಯಾಧಿದಾರರಿಗೆ ರಾಕೇಶ್ ಎನ್ನುವ ಅನಾಮಧೇಯ ವ್ಯಕ್ತಿ ಆತನ ಮೊಬೈಲ್ ನಂ. 8404997923 ನಂಬರ್ ನಿಂದ ಫಿರ್ಯಾಧಿಯ ಮೊಬೈಲ್ ನಂ. 99166-49447 ನೇದ್ದಕ್ಕೆ ಫೋನ್ ಮಾಡಿ, ನಿಮ್ಮ ಎಟಿಎಂ ಲಾಕ್ ಆಗಿದೆ ಅದನ್ನು ಓಪನ್ ಮಾಡಬೇಕು ಎಂದು ನಂಬಿಸಿ, ಫಿರ್ಯಾಧಿಯ ಎ.ಟಿ.ಎಂ.ಕಾರ್ಡ್ ನಂಬರ್ ಗಳಾದ  4591-5101-1965-7273 7273-866 ನೇದ್ದುವುಗಳನ್ನು ಫಿರ್ಯಾಧಿಯಿಂದ ಪಡೆದು, ಫಿರ್ಯಾಧಿಯ ಖಾತೆ ಸಂಖ್ಯೆಯಾದ 33076380636 ನೇದ್ದರಿಂದ 23,680/- ರೂಗಳನ್ನು ವಿತ್ ಡ್ರಾ ಮಾಡಿಕೊಂಡು, ಮೋಸ ಮಾಡಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದೆ.
Gudekote PS
4 Cr.No:0133/2015
(IPC 1860 U/s 34,504,323,324 )
30/10/2015 Under Investigation
CASES OF HURT - Simple Hurt
Brief Facts :  ದಿನಾಂಕ 29/10/2015 ರಂದು ರಾತ್ರಿ 07-10 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ತಾಯಿ ಕಾಳಮ್ಮ, ಚಿಕ್ಕಮಂಗಳೂರುನಲ್ಲಿರುವ ತನಗೆ ಪೋನ್ ಮಾಡಿ ತನ್ನ ತಮ್ಮ ಅಜ್ಜಪ್ಪ ಆತನ ಹೆಂಡತಿ ಸಾಕಮ್ಮ ಮತ್ತು ಆತನ ಮಕ್ಕಳಾದ ಮಂಜುನಾಥ, ಹುಲಿರಾಜ, ಇವರು ತನಗೆ ಕೈಕಾಲುಗಳಿಂದ ಮೈ ಕೈಗೆ ಹೊಡೆದಿರುವುದಾಗಿ ತಿಳಿಸಿದ್ದರಿಂದ ತಾನು ತನ್ನ ಹೆಂಡತಿ ವನಜಾಕ್ಷಿ ತನ್ನ ಹೆಂಡತಿ ತಂಗಿ ಗೀತಾ ಆಕೆಯ ಗಂಡ ಅಣ್ಣಪ್ಪ ಮತ್ತು ಅಳಿಯ ಪರುಶುರಾಮ ಇವರೊಂದಿಗೆ ತನ್ನ ಅತ್ತೆಯನ್ನು ನೋಡಿಕೊಂಡು ಹೋಗಲು ಈ ದಿನ ದಿನಾಂಕ 30/10/2015 ರಂದು ಬೆಳಿಗ್ಗೆ 09-00 ಗಂಟೆಗೆ 
ಬೆಳ್ಳಗಟ್ಟೆ ಗ್ರಾಮಕ್ಕೆ ಬಂದು ತನ್ನ ಅತ್ತೆಯ ತಂದೆ ಹನುಮಂತಪ್ಪ ಇವರ ಮನೆಗೆ ಹೋಗಲು ಮೇಲ್ಕಂಡ ಆರೋಪಿತರ ಮನೆಯ ಮುಂದಿನಿಂದ ಹೋಗುತ್ತಿದ್ದಾಗ ಸಾಕಮ್ಮ ,ತನ್ನ ಹೆಂಡತಿಗೆ ಲೇ ಬೋಸುಡಿ, ಮಿಂಡ್ರಗಾಳಿ, ನಿನಗೆ ಐವತ್ತು ಸಾವಿರ ರೂಪಾಯಿ ಎರಡು ತೋಲ ಬಂಗಾರ ಕೊಟ್ಟಿರುತ್ತೇವೆ ಅದರೂ ಮತ್ತೆ ನಿಮ್ಮ ತಾಯಿ ಅವರ ತಂದೆಯ ಆಸ್ತಿ ಹೊಡೆಯಲು ಪುನಃ ಇಲ್ಲಿಗೆ ಬಂದು ಸೇರಿಕೊಂಡಿದ್ದಾಳೆ ಅಂತಾ ಬೈಯುತ್ತಿದ್ದಾಗ, ತಾನು ನಿನ್ನೆ ನಮ್ಮ ಅತ್ತೆಗೆ ಹೊಡೆದು ಈಗ ತನ್ನ ಹೆಂಡತಿಗೆ ಏಕೆ ಬೈಯತ್ತಿರಿ ಅಂತಾ ಕೇಳಿದ್ದಕ್ಕೆ, ಅಜ್ಜಪ್ಪನ ಮಗ ಮಂಜುನಾಥ ಕಬ್ಬಿಣದ ಹಿಕ್ಕಳದಿಂದ ತನ್ನ ಎಡಗಡೆ ತಲೆಗೆ ಹೊಡೆದು ರಕ್ತಗಾಯ ಮಾಡಿ ಅದೇ ಹಿಕ್ಕಳದಿಂದ, ಗೀತಮ್ಮಳಿಗೆ ಬಲಗಾಲ ಹಿಮ್ಮಡಿಗೆ ಹೊಡೆದು ಪಟ್ಟು ಮಾಡಿದಾಗ ಅಜ್ಜಪ್ಪ, ಸಾಕಮ್ಮ ಮತ್ತು ಹುಲಿರಾಜ ಇವರು ಕೈಕಾಲುಗಳಿಂದ ಮೈ ಕೈಗೆ ಹೊಡೆದಿರುತ್ತಾರೆಂದು ಪಿರ್ಯಾಧಿ ಎಂ ಹನುಮಂತಪ್ಪ ತಂದೆ ಉಡಸಲಪ್ಪ ವಾಸ ಬ್ಯಾಲಕುಂದಿ ಗ್ರಾಮ ಇವರು ನೀಡಿದ ಲಿಖಿತ ದೂರಿನ ಮೇರಿಗೆ ಈ ಪ್ರಕರಣ ದಾಖಲಿಸಿದೆ.
Hosahalli PS
5 Cr.No:0197/2015
(IPC 1860 U/s 279 ; INDIAN MOTOR VEHICLES ACT, 1988 U/s 183 )
30/10/2015 Under Investigation
MOTOR VEHICLE ACCIDENTS NON-FATAL - National Highways
Brief Facts  ಈ ದಿನ ದಿನಾಂಕ:-೩೦-೧೦-೨೦೧೫ ರಂದು ಮಧ್ಯಾಹ್ನ ೧೨-೦೦ ಗಂಟೆಗೆ ಪಿರ್‍ಯಾದಿದಾರರಾದ ಶ್ರೀ.ರಮೇಶ್ ಎಸ್. ತಂದೆ ಕೆ.ಸೊಕ್ಕನಾದನ್ ವಯಸ್ಸು ೪೭ ವರ್ಷ, ರೆಡ್ಡಿ ಜನಾಂಗ,ಕೆಎ-೦೧ ಎಡಿ-೯೨೦೧ ನಂಬರಿನ  ಲಾರಿ ಡ್ರೈವರ್ ವಾಸ ತಿರುನಿಂಡ್ರವೂರ್, ತಿರುವಳ್ಳವರ್ ತಾಲೂಕು, ತಿರುವಳ್ಳವರ್ ಜಿಲ್ಲೆ. ಚನೈ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-೨೮-೧೦-೨೦೧೫ ರಂದು ತಾನು ಮೇಲ್ಕಂಡ ಲಾರಿಯನ್ನು ರಾತ್ರಿ ೯-೦೦ ಗಂಟೆಗೆ ಚಿತ್ರದುರ್ಗ ಬಿಟ್ಟು ದೆಹಲಿಗೆ ಹೊಸಪೇಟೆ ಮಾರ್ಗವಾಗಿ ಎನ್.ಎಚ್-೧೩ ರಸ್ತೆಯಲ್ಲಿ ಹೋಗುತ್ತಿದ್ದಾಗ ಹೊಸಹಳ್ಳಿಯ ಗ್ರೀನ್ ಪಾರ್ಕ್ ಹೊಟೇಲ್ ಹತ್ತಿರ ರಾತ್ರಿ ಸುಮಾರು ೧೧-೩೦ ಗಂಟೆಗೆ ಹೊಸಪೇಟೆ ಕಡೆಯಿಂದ ಒಂದು ಲಾರಿ ಅದರ ನಂಬರ್:-ಟಿಎನ್-೫೨ ಎಫ್-೫೪೫೮ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದವನೇ ತನ್ನ ಕಂಟೇನರ್ ಲಾರಿಗೆ ಢಿಕ್ಕಿ ಪಡಿಸಿದ್ದರ ಪರಿಣಾಮ ತಮ್ಮ ಲಾರಿಯ ಮುಂದಿನ ಭಾಗವೆಲ್ಲಾ ಜಖಂ ಗೊಂಡಿದ್ದು, ಲಾರಿಯಲ್ಲಿದ್ದ ತಮಗೆ ಯಾವುದೇ ತರಹದ ಗಾಯಪೆಟ್ಟುಗಳಾಗಿರುವುದಿಲ್ಲ.ನಾನು ತಕ್ಷಣ ಲಾರಿಯಿಂದ ಕೆಳಗಿಳಿದು ತಮ್ಮ ಲಾರಿಗೆ ಢಿಕ್ಕಿ ಪಡಿಸಿದ ಲಾರಿಯನ್ನು ನೋಡಲಾಗಿ ಅದರ ಲಾರಿಯ ಮುಂದಿನ ಭಾಗವೆಲ್ಲಾ ಜಖಂ ಗೊಂಡಿದ್ದು ಅದರಲ್ಲಿದ್ದ ಲಾರಿಯ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಕಣ್ಣನ್ ತಂದೆ ಶಕ್ತಿವೇಲ್ ೨೫ ವರ್ಷ ಡ್ರೈವರ್ ಕೆಲಸ ವಾಸ ಅಲಗಂಪಟ್ಟಿ,ನಿಲ್ಲಕೋಟೈ ತಾಲೂಕು, ದಿಂಡುಗಲ್ ಜಿಲ್ಲೆ ಹಾಗೂ ಅದೇ ಲಾರಿಯಲ್ಲಿದ್ದ ಇನ್ನೊಬ್ಬನಿಗೆ ವಿಚಾರಿಸಲು ೨ ನೇ ಡ್ರೈವರ್ ಅಂತ ತಿಳಿಸಿ, ಅವನ ಹೆಸರು ಶಿವಕುಮಾರ್ ಅಂತ ತಿಳಿಸಿದರು. ಸದರಿಯವರಿಗೆ ಯಾವುದೇ ಗಾಯ ಪೆಟ್ಟುಗಳು ಆಗಿರುವುದಿಲ್ಲ. ಈ ಅಪಘಾತದ ಬಗ್ಗೆ ತಮ್ಮ ಲಾರಿಯ ಮಾಲೀಕರಿಗೆ ತಿಳಿಸಿ, ಅಪಘಾತ ಉಂಟು ಮಾಡಿದ ಲಾರಿಯ ಚಾಲಕನ ವಿರುಧ್ದ ದೂರು ಕೊಡಲು ತಿಳಿಸಿದ್ದರಿಂದ ತಾನು ಈ ದಿನ ದಿನಾಂಕ:-೩೦-೧೦-೨೦೧೫ ರಂದು ಹೊಸಹಳ್ಳಿ ಪೊಲೀಸ್ ಠಾಣೆಗೆ ಬಂದು ತನ್ನ ಲಾರಿ ಕೆಎ-೧ ಎಡಿ-೯೨೦೧ ನೇದ್ದಕ್ಕೆ ಢಿಕ್ಕಿ ಪಡಿಸಿದ ಮೇಲ್ಕಂಡ ಲಾರಿ ನಂಬರ್:- ಟಿಎನ್-೫೨ ಎಫ್-೫೪೫೮ ನೇದ್ದರ ಚಾಲಕ ಕಣ್ಣನ್ ತಂದೆ ಶಕ್ತಿವೇಲ್ ೨೫ ವರ್ಷ ಇವನ ವಿರುಧ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ.
Hospet Rural PS
6 Cr.No:0156/2015
(INDIAN MOTOR VEHICLES ACT, 1988 U/s 183,187 ; IPC 1860 U/s 279,337 )
30/10/2015 Under Investigation
MOTOR VEHICLE ACCIDENTS NON-FATAL - National Highways
Brief Facts  ದಿನಾಂಕ:25/10/2015 ರಂದು  ಬೆಳಿಗ್ಗೆ 10-30  ಗಂಟೆಗೆ ಹೊಸಪೇಟೆ  ಸರ್ಕಾರಿ  ಆಸ್ಪತ್ರೆಯಿಂದ ಬಂದ ಎಂ.ಎಲ್.ಸಿ. ಮಾಹಿತಿ ಮೇರೆಗೆ   ಹೋಗಿ  ಗಾಯಾಳು ಮಲ್ಲಪ್ಪ ಹೇಳಿಕೆ ಪಡೆದಿದ್ದು ಸಾರಾಂಶ  ದಿನಾಂಕ:30/10/2015 ರಂದು  ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಪಿರ್ಯಾದಿಯು ಹಾಗು ಇತರರು  ಆಟೋ ನಂ: ಕೆ.ಎ:35/ 9122 ರಲ್ಲಿ  ತರಕಾರಿಯನ್ನು   ತುಂಬಿಕೊಂಡು ತಾಳೂರು ಕಡೆಗೆ ಹೋಗುತ್ತಿದ್ದಾಗ   ಎನ್.ಹೆಚ್-63  ರಸ್ತೆಯಲ್ಲಿ  ಇಂಗಳಗಿ ಕ್ರಾಸ್ ಹತ್ತಿರ    ಲಾರಿ ನಂ: ಆರ್.ಜೆ.-14 ಜಿ.ಜಿ.-2963  ರ ಚಾಲಕ ತನ್ನ ಲಾರಿಯನ್ನು  ಅತೀ  ಜೋರಾಗಿ ಮತ್ತು ನಿರ್ಲಕ್ಷತೆಯಿಂದ  ನಡೆಸಿ ಅಪಘಾತ ಪಡಿಸಿದ್ದರಿಂದ    ಪಿರ್ಯಾದಿ  ಹಾಗು ಇತರರಿಗೆ  ರಕ್ತಗಾಯ ಹಾಗು ಒಳ ನೋವುಗಳು ಆಗಿರುವುದಾಗಿ ದೂರು   ಚಾಲಕನು  ಲಾರಿಯನ್ನು ಅಲ್ಲಿಯೇ  ಬಿಟ್ಟು ಓಡಿ ಹೋಗಿರುವುದಾಗಿ  ಮುಂದಿನ ಕ್ರಮಕ್ಕಾಗಿ  ಇದ್ದ ದೂರಿನ ಮೇರೆಗೆ   ಪ್ರಕರಣ ದಾಖಲು  ಮಾಡಿ ತನಿಖೆ   ಕೈ ಗೊಳ್ಳಲಾಗಿದೆ.
Moka PS
7 Cr.No:0150/2015
(IPC 1860 U/s 279,337 )
30/10/2015 Under Investigation
MOTOR VEHICLE ACCIDENTS NON-FATAL - State Highways
Brief Facts  ಈ ದಿನ ದಿನಾಂಕ:30-10-15 ರಂದು ಬೆಳಿಗ್ಗೆ 11 ಗಂಟೆಗೆ  ಪಿರ್ಯದಿದಾರರಾದ ಶ್ರೀ.ಟಿ.ಅಂಬ್ರಷ್ ತಂದೆ ಟಿ.ಗೋವಿಂದಪ್ಪ ವ:೨೦ವರ್ಷ, ವಾಲ್ಕೀಕಿ  
Brief Facts :  ಜನಾಂಗ, ಬೇಸಾಯ ಕೆಲಸ,ವಾಸ: ಹೊಸ  ಮೋಕಾ ಗ್ರಾಮ ಕೊಟ್ಟ ಗಣಕೀಕೃತ ದೂರು ಏನಂದರೇ, ನಿನ್ನೆ ದಿನಾಂಕ:೨೯-೧೦-೧೫ ರಂದು ಸಂಜೆ ೫ ಗಂಟೆಗೆ  ತಾನು ಮತ್ತು ಇತರರೊಂದಿಗೆ  ಕೂಲಿ ಕೆಲಸ ಮಾಡಿಕೊಂಡು ವಾಪಸ್ಸು ಮನೆಗೆ ಹೋಗುತ್ತಿರುವಾಗ ತನ್ನ  ತಂದೆ ಟಿ.ಗೋವಿಂದಪ್ಪರವರು ತಮ್ಮ ಮೋಟಾರ್ ಸೈಕಲ್ ನಂ;ಕೆ:ಎ:34:ಇಎ:7368 ನೇದ್ದನ್ನು ಚಲಾಯಿಸಿಕೊಂಡು ತಮ್ಮ ಗದ್ದೆಗೆ ನೀರು ಕಟ್ಟಲು   ಹೋಗುತ್ತಿರುತ್ತಿರುವಾಗ  ತನ್ನ ತಂದೆ ತನ್ನ ಮೋಟಾರ್ ಸೈಕಲ್‌ನ್ನು  ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ತಮ್ಮ ಮುಂದೆ ಬರುತ್ತಿರುವಾಗ ಮಜ್ಜಿಗೆ ಸುಂಕಪ್ಪರವರ ಗದ್ದೆ ಹತ್ತಿರ ಮೋಕಾ ಬಳ್ಳಾರಿ ರಸ್ತೆಯಲ್ಲಿ ತನ್ನ ತಂದೆ ತನ್ನ ಮೋಟಾರ್ ಸೈಕಲ್ ವೇಗ ಕಡಿಮೆ ಮಾಡದೇ  ಅದೇ ವೇಗದಲ್ಲಿ ಹೋಗುತ್ತಿರುವಾಗ  ತಮ್ಮ ತಂದೆಗೆ ತಮ್ಮ ಮೋಟಾರ ಸೈಕಲ್  ಹಿಡಿತ ತಪ್ಪಿ ಸ್ಕಿಡ್ ಆಗಿ ರಸ್ತಯ ಮೇಲೆ ಬಿದ್ದಾಗ ಇವೆಲ್ಲಾರು ಮತ್ತು  ಇತರೆ ದಾರಿಗೆ ಹೋಗುವವರು  ಹೋಗಿ ತನ್ನ ತಂದೆಗೆ ನೋಡಲು ತನ್ನ ತಂದೆಗೆ ತಲೆಗೆ ರಕ್ತಗಾಯವಾಗಿದ್ದು, ಮತ್ತು ಕಿವಿಗಳಲ್ಲಿ ರಕ್ತ ಬರುತ್ತಿದ್ದು, ಬಲಗಾಲಿ ಪಾದದ ಬೆರಳುಗಳಿಗೆ ಮತ್ತು ಮೈತುಂಬ ತೆರಿಚಿದ ರಕ್ತಗಾಯವಾಗಿ ತನ್ನ  ತಂದೆ ಮಬ್ಬು ಬಂದು ಬಿದ್ದಿರುತ್ತಾರೆ ಆಗ ತಾನು ತಮ್ಮ ಗ್ರಾಮದ ಗಾದಿರವರ ಆಟೋ ರಿಕ್ಷಾವನ್ನು ಸ್ಥಳಕ್ಕೆ ಕರೆಯಿಸಿ ಈ ಆಟೋ ರಿಕ್ಷಾದಲ್ಲಿ ತನ್ನ ತಂದೆಗೆ ತಾನು, ಮತ್ತು  ವೀರುಪಾಕ್ಷಿ ಮತ್ತು ಸಿದ್ದು ಇವೆಲ್ಲಾರು ಕಲೆತು ಹಾಕಿಕೊಂಡು ಸಂಜೆ ೫-೫೦ ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ತನ್ನ ತಂದೆ ಕೋಮದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
   ತನ್ನ ತಂದೆ ತನ್ನ ಮೋಟಾರ್ ಸೈಕಲ್‌ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬಳ್ಳಾರಿ ರಸ್ತೆಯಲ್ಲಿ ಹೋಗುತ್ತಿರುವಾಗ   ತನ್ನ ತಂದೆಗೆ ತನ್ನ ಮೋಟಾರ್ ಸೈಕಲ್  ವೇಗವನ್ನು ಕಡಿಮೆ ಮಾಡದೇ ಅದೇ ವೇಗ ಹೋಗಿದ್ದರಿಂದ  ಮೋಟಾರ್ ಸೈಕಲ್ ಹಿಡಿತ ತಪ್ಪಿ ಏಕಾಎಕಿಯಾಗಿ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದುದ್ದರಿಂದ ತನ್ನ ತಂದೆಗೆ ತಲೆಗೆ,ಕೈಕಾಲುಗಳಿಗೆ  ಮೈತುಂಬು ರಕ್ತಗಾಯ ಮತ್ತು ತೆರಚಿತ ಗಾಯವಾಗಿರುತ್ತವೆ. ಮತ್ತು ಮೋಟಾರ್ ಸೈಕಲ್ ಸಹ ಜಖಂಗೊಂಡಿದೆ. ಕಾರಣ ತನ್ನ ತಂದೆಯ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿಗಿಸಲು ಕೊಟ್ಟ ಗಣಕೀಕೃತ ದೂರಿನ ಮೇರೆಗೆ, ಮತ್ತು ಇದಕ್ಕೆ ಪಿರ್ಯಾದಿದಾರರು ಕೊಟ್ಟ ಗಣಕೀಕೃತ ದೂರು ಲಗತ್ತಿಸಿದೆ.
Sirigeri PS
8 Cr.No:0160/2015
(IPC 1860 U/s 420 )
30/10/2015 Under Investigation
CHEATING - CHEATING
Brief Facts :  ಪಿರ್ಯಾಧಿದಾರರು ದಿ:-30/10/2015 ರಂದು ಮಧ್ಯಾಹ್ನ 3:00ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪರಿಶೀಲಿಸಲು ದಿ:24/10/2015 ರಂದು ಬೆಳಿಗ್ಗೆ 9:30ಗಂಟೆಗೆ ನಾನು ಸಿರಿಗೇರಿ ಬಸ್ಸ್ ನಿಲ್ದಾಣದ ಹತ್ತಿರದ ನಮ್ಮ ಬೀಡಿ ಅಂಗಡಿಯಲ್ಲಿದ್ದಾಗ, ನಮ್ಮ ಅಂಗಡಿಯಲ್ಲಿಟ್ಟಿದ್ದ ಎಸ್ಬಿಐ ಬ್ಯಾಂಕ್ನ ಎಟಿಎಂ ಕಾಡರ್್ ಹಾಗೂ ಅದರ ಪಿನ್ ಕೋಡ್ ಫಾರಂ ಕಾಣಲಿಲ್ಲ,  ನಾನು ಅಂಗಡಿಯಲ್ಲಿ ಹಾಗೂ ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಾಡಿ ನೋಡಲು ಸಿಗಲಿಲ್ಲ, ಅಕ್ಕಪಕ್ಕದವರನ್ನು ವಿಚಾರ ಮಾಡಲು ಸಿಗಲಿಲ್ಲ, ನಂತರ ನಮ್ಮ ಮನೆಯಲ್ಲಿ ನಾನು ನನ್ನ ಮಕ್ಕಳು ಸೇರಿ ಹುಡುಕಾಡಿ ನೋಡಲು ಅಲ್ಲಿಯೂ ಕೂಡ ಸಿಗಲಿಲ್ಲ, ನಂತರ ಎಲ್ಲಿಯಾದರೂ ಬಿದ್ದಿರಬಹುದಾಗಿ ಸುಮ್ಮನಾದೆನು, ದಿ:26/10/2015 ರಂದು ಬೆಳಿಗ್ಗೆ 11ಗಂಟೆಗೆ ನಾನು ಎಸ್ಬಿಐ ಬ್ಯಾಂಕ್ ಖಾತೆ ಪುಸ್ತಕ ತೆಗೆದುಕೊಂಡು ಹೋಗಿ ಬ್ಯಾಂಕ್ನಲ್ಲಿ ಚೆಕ್ ಮಾಡಿಸಲು ನನ್ನ ಬ್ಯಾಂಕ್ ಖಾತೆಯಿಂದ 43.000/ರೂಗಳನ್ನು ಸಿರಿಗೇರಿ, ಬಳ್ಳಾರಿ ಎಟಿಎಂ ಕೇಂದ್ರಗಳಲ್ಲಿ ಹಣವನ್ನು ಬಿಡಿಸಿಕೊಂಡಿದ್ದು ಕಂಡು ಬಂದಿದ್ದು, ಈ ಬಗ್ಗೆ ಬ್ಯಾಕ್ನಲ್ಲಿ ವಿಚಾರಿಸಲು ಎಟಿಎಂ ಬಳಸಿಕೊಂಡು ಹಣವನ್ನು ಬಿಡಿಸಿಕೊಂಡಿರುತ್ತ್ತಾರೆಂದು ತಿಳಿಸಿದರು, ಪುನ: ನನ್ನ ಎಟಿಎಂ ಕಾರ್ಡ  ಬಗ್ಗೆ ಹುಡುಕಾಡಿ ವಿಚಾರಿಸಲು ಯಾವುದೇ ಮಾಹಿತಿ ಸಿಗಲಿಲ್ಲ, ಈ ಬಗ್ಗೆ ನಮ್ಮ ಹಿರಿಯವರನ್ನು ವಿಚಾರಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು  ನನ್ನ ಹೆಸರಿನ ಎಸ್ಬಿಐ ಬ್ಯಾಂಕ್ನ ಎಟಿಎಂ ಕಾರ್ಡ  ಹಾಗೂ ಅದರ ಪಿನ್ ಕೋಡನ್ನು ಯಾರೋ ವ್ಯಕ್ತಿ ಬಳಸಿಕೊಂಡು ಖಾತೆಯಲ್ಲಿದ್ದ 43000/ರೂಗಳನ್ನು ಎಟಿಎಂ ಕೇಂದ್ರಗಳಲ್ಲಿ ಬಿಡಿಸಿಕೊಂಡು ನನಗೆ ಮೋಸ ಮಾಡಿದ್ದು, ಕಾರಣ ನನಗೆ ಮೋಸ ಮಾಡಿದರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಿ, ನನ್ನ ಹಣವನ್ನು ನಮಗೆ ಕೊಡಿಸಬೇಕೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ
Thoranagal PS
9 Cr.No:0162/2015
(IPC 1860 U/s 00MP )
30/10/2015 Under Investigation
MISSING PERSON - Women
Brief Facts :  ನಿವೇದನೆ:-
     ಈ ದಿನ ದಿನಾಂಕ: 30/10/2015 ರಂದು  1;00ಪಿ.ಎಂ. ನಾನು ಠಾಣೆಯಲ್ಲಿರುವಾಗ ಪಿರ್ಯಾದಿ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂಧರೆಎನ್. ಲಕ್ಷ್ಮಿ ಅದ ನಾನು ಮನವಿ ಮಾಡಿಕೊಳ್ಳುವುದೆನೆಂದರೆ ನಾನು  ಸುಮಾರು ವರ್ಷಗಳಿಂದ  ತೋರಣಗಲ್ಲು ಗ್ರಾಮದಲ್ಲಿ ನನ್ನ ಗಂಡ ಮತ್ತು ಅತ್ತೆ ಎನ್. ಲಕ್ಷ್ಮಿದೇವಿ ರವರೊಂದಿಗೆ ವಾಸವಾಗಿದ್ದು  ಮನೆ ಕೆಲಸ ಮಾಡಿಕೊಂಡು ಬಂದಿರುತ್ತೇನೆ.
ನನ್ನ ಅತ್ತೆಯಾದ ಎನ್. ಲಕ್ಷ್ಮಿದೇವಿ ರವರು  ಪ್ರತಿ ವಾರದಂತೆ ನಮ್ಮ ತೋರಣಗಲ್ಲು ಗ್ರಾಮದ ನಮ್ಮ ಮನೆಯಿಂದ ದಿನಾಂಕ: 25/10/2015 ರಂದು 10;30   ಬಳ್ಳಾರಿಗೆ ಚಿಕಿತ್ಸೆ ಪಡೆಯುವ ಮತ್ತು ಅಂಗಡಿ ಸಾಮಾನುಗಳನ್ನು ತರಲು ಬಳ್ಳಾರಿಗೆ ಹೋಗಿದ್ದು  ಇಲ್ಲಿಯವರಗೆ ಹಿಂದಿರುಗಿ ಬಂದಿರುವುದಿಲ್ಲ ನಾವುಗಳು ನಮ್ಮ ಸಂಬಂದಿಕರಿ ಗ್ರಾಮಗಳಾದ ಏಳು ಬೆಂಚೆ, ಸಿದ್ದಮ್ಮನಹಳ್ಳಿ, ತಕ್ಕಲಕೋಟೆ ಗಳಲ್ಲಿ ವಿಚಾರಣೆ ಮಾಡಲು  ಯಾವುದೇ ಮಾಹಿತಿ ಸಿಕ್ಕಿವುದಿಲ್ಲ ಕಾರಣ  ಕಾಣೆಯಾದ  ಈ ಕೆಳಕಂಡ ಮಾಹಿತಿ ವುಳ್ಳ  ಎನ್. ಲಕ್ಷ್ಮಿ ದೇವಿ ರವರನ್ನು ಹುಡಿಕಿ ಕೊಡಲು ಮನವಿ. ಬೇರೆ ಬೇರೆ ಕಡೆಗಳಲ್ಲಿ ಹುಡಿಕಿ ಬಂದು ದೂರು ನೀಡಿದ್ದರಿಂದ ತಡವಾಗಿದೆ.
1)ಹೆಸರು:ಎನ್. ಲಕ್ಷ್ಮಿದೇವಿ  ಗಂಡ ಎನ್. ಶಂಕ್ರಪ್ಪ 60 ವರ್ಷಗಳು ವಾಲ್ಮೀಕಿ ಜನಾಂಗ  ಮನೆ ಕೆಲಸ (ಅಂಗಡಿ ಕೆಲಸ)  ವಾಸ: ರಾಮಲಿಂಗಮ್ಮ ಗುಡಿಯ ಹತ್ತಿರ 4ನೇ ವಾರ್ಡ ತೋರಣಗಲ್ಲು ಗ್ರಾಮ ಸಂಡೂರು ತಾಲೂಕು ಬಳ್ಳಾರಿ  ಚಹರೆ;- ಗುಂಡು ಮುಖ ಎತ್ತರ; 5 ಅಡಿ, ಗೋದಿ  ಮೈ ಬಣ್ಣ , ಬಲಗಣ್ಣಿನ ಹತ್ತಿರ ಕಪ್ಪು ಮಚ್ಚೆ, ಕನ್ನಡಕ ದರಿಸಿರುತ್ತಾರೆ. ದರಿಸಿದ ಉಡಪುಗಳು;-ಸಿಮೆಂಟು ಬಣ್ಣದ ಕಾಟನ್  ಸೀರೆಯಲ್ಲಿ ಕೆಂಪು ಹೊ  ಇದ್ದು ಹಳದಿ ಬಣ್ಣದ ಕುಪ್ಪಸ ಕಪ್ಪು-ಬಿಳಪು ತೆಲೆ ಕೂದಲು  ಎಂದು ನೀಡಿದ ದೂರಿನ ಮೇರೆಗೆ  ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.( ಪ್ರ.ವ.ವಗೆ ಪಿರ್ಯಾದಿ ದೂರು ಲಗತ್ತಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ