ಶನಿವಾರ, ಅಕ್ಟೋಬರ್ 3, 2015

PRESS NOTE OF 04/10/2015

Crime Key Report From   To   
Sl. No FIR No FIR Date Crime Group - Crime Head Stage of case
Hospet Extention PS
1 Cr.No:0047/2015
(MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ; IPC 1860 U/s 379 )
04/10/2015 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ಈ ದಿನ ದಿನಾಂಕ: 4-10-2015 ರಂದು ಫಿರ್ಯಾಧಿದಾರರು ಬೆಳಿಗ್ಗೆ ಗುಡ್ ಮಾರ್ನಿಂಗ್ ಪೆಟ್ರೋಲಿಂಗ್ ಮಾಡುತ್ತಾ, ಎನ್.ಸಿ ಕಾಲೋನಿಯಲ್ಲಿ ಬೀಟ್ ಕರ್ತವ್ಯದಲ್ಲಿದ್ದ ಪಿ.ಸಿ-564 ರವರನ್ನು ಕರೆದುಕೊಂಡು ಎನ್.ಸಿ ಕಾಲೋನಿಯಲ್ಲಿ ಗುಡ್ ಮಾರ್ನಿಂಗ್ ಬೀಟ್ ಮಾಡುತ್ತಾ, ಬೆಳಿಗ್ಗೆ 7-15 ಗಂಟೆಗೆ ಡ್ಯಾಂ ರಸ್ತೆಯಲ್ಲಿರುವ ಶ್ರೀ.ಸುಂದಾ ಮಾತಾ ಟ್ರೇಡರ್ಸ್ ಕಾಂಪ್ಲೆಕ್ಸ್ ಎದುರುಗಡೆ ಇದ್ದಾಗ ಧಾರವಾಡ ಚೆಕ್ ಪೋಸ್ಟ್ ಕಡೆಯಿಂದ ಆರೋಪಿ ಮೂರ್ತಿ ನಾಯ್ಕ್ ತಂದೆ ಓಬ್ಯನಾಯ್ಕ್, 23 ವರ್ಷ, ಟ್ರಾಕ್ಟರ್ ನಂ: ಕೆ.ಎ.35/ಎ-5240, ಟ್ರಾಲಿ ನಂ: ಕೆ.ಎ.35/ಎ-5241 ನೇದ್ದರಲ್ಲಿ ಅನಾಧಿಕೃತವಾಗಿ ಸುಮಾರು 3 ಟನ್ ಅಂದಾಜು ಬೆಲೆ ರೂ.1,800/-  ಉಳ್ಳ ಮರಳನ್ನು ಎಂ.ಎಂ ಹಳ್ಳಿಯಲ್ಲಿ ಕೂಡ್ಲಿಗಿ ರೋಡಿನ ಪಕ್ಕದಲ್ಲಿ ಇರುವ ಹಳ್ಳದಿಂದ ತುಂಬಿಕೊಂಡು ಬಂದಿದ್ದನ್ನು ಹಿಡಿದಿದ್ದು, ಪಂಚರ ಸಮಕ್ಷಮ ಬೆಳಿಗ್ಗೆ 7-30 ಗಂಟೆಯಿಂದ 8-00 ಗಂಟೆಯವರೆಗೆ ಪಂಚನಾಮ ಮೂಲಕ ಮರಳು ತುಂಬಿದ ಟ್ರಾಕ್ಟರ್ ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ದೂರು, ದೂರುನೊಂದಿಗೆ ಪಂಚನಾಮ, ಪಂಚನಾಮೆಯಲ್ಲಿ ನಮೂದು ಮಾಡಿದ ಮುದ್ದೇಮಾಲು ಹಾಗೂ ಆರೋಪಿ ಮೂರ್ತಿನಾಯ್ಕ್ ಇವರನ್ನು ಹಾಜರು ಪಡಿಸಿದ್ದು ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Moka PS
2 Cr.No:0142/2015
(ESSENTIAL COMMODITIES ACT, 1955 U/s 3,7 ; PDS CONTROLING ORDER, 1992 U/s 18(2) )
04/10/2015 Under Investigation
CONSUMER - Essential Commodites Act 1955
Brief Facts :  ಈ ದಿನ ದಿನಾಂಕ: ೦೪-೧೦-೧೫ ರಂದು ರಾತ್ರಿ ೦೦-೩೦ ಗಂಟೆಗೆ ಶ್ರೀಶರಣ ಬಸಯ್ಯ ಪ್ರಭಾರಿ ಆಹಾರ ನಿರೀಕ್ಷಕ ಬಳ್ಳಾರಿರವರ ಕೊಟ್ಟ ದೂರು ಏನಂದರೆ, ಈ ದಿನ ದಿ:೦೩-೧೦-೧೫ ರಾತ್ರಿ ೦೯ ಗಂಟೆಗೆ ನಾನು ಮನೆಯಲ್ಲಿದ್ದಾಗ ಅಶೋಕಕ್ಯಾಂಪ್‌ನಲ್ಲಿರುವ ಮಲ್ಲಿಕಾರ್ಜುನ ರೆಡ್ಡಿ ಎಂಬುವವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಸರ್ಕಾರ ಪಡಿತರ ಅಕ್ಕಿ ಮತ್ತು ಗೋದಿಯನ್ನು ಸಂಗ್ರಹಣೆ ಮಾಡಿರುತ್ತಾರೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ರಾತ್ರಿ ೯-೩೦ ಗಂಟೆಗೆ ಮೋಕಾ ಪೊಲೀಸ್ ಠಾಣೆಗೆ ಬಂದು ಪಿ ಎಸ್ ಐ & ಇವರ ಸಿಬ್ಬಂದಿರವರಿಗೆ ವಿಷಯ ತಿಳಿಸಿ  ದಾಳಿಗೆ ಕರೆದುಕೊಂಡು  ಠಾಣೆಯನ್ನು ರಾತ್ರಿ ೯-೪೫ ಗಂಟೆಗೆ ಬಿಟ್ಟು ರಾತ್ರಿ ೧೦-೦೫ ಗಂಟೆಗೆ ಆಶೋಕ ನಗರ ಕ್ಯಾಂಪ್‌ಗೆ ಹೋಗಿ    ಪಂಚರ ಸಮಕ್ಷಮ  ರಾತ್ರಿ ೧೦-೨೦ ಗಂಟೆಗೆ ದಾಳಿ ಮಾಡಲು  ಮಲ್ಲಿಕಾರ್ಜುನರವರು ತಮ್ಮ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಪರಾರಿಯಾಗಿರುತ್ತಾರೆ. ಆಗ  ಪಂಚರ ಸಮಕ್ಷಮ ಮನೆಯ ಬೀಗವನ್ನು  ಮುರಿದು  ಮನೆಯ ಒಳಗೆ  ಹೋಗಿ ನೋಡಲು ಮನೆಯಲ್ಲಿ ಪಡಿತರ ಅಕ್ಕಿ ಚೀಲ ತುಂಬಿದ ಪ್ಯಾಕೇಟ್‌ಗಳು ಮತ್ತು ಗೋದಿ ತುಂಬಿದ ಪ್ಯಾಕೇಟುಗಳು ಇರುತ್ತವೆ.
   ಆಗ  ಪಂಚರ ಸಮಕ್ಷಮ  ಅಕ್ಕಿ & ಗೋದಿಯನ್ನು ಪರಿಶೀಲಿಸಿ ನೋಡಲು ೧) ಒಂದು ಪ್ಲಾಸ್ಟೀಕ್ ಚೀಲದಲ್ಲಿ ಸುಮಾರು ೪೦ ಕೆ.ಜಿ.ಯಷ್ಟ  ಪಡಿತರ ಅಕ್ಕಿ ಇದ್ದು ಈ ಚೀಲವನ್ನು ಬಾಯಿ ಕಟ್ಟಿರುತ್ತದೆ. ಒಂದು ಚೀಲನ ಬೆಲೆ ಅಂದಾಜು ೪೦೦=೦೦ ರೂ ಇರುತ್ತದೆ  ಇದರಂತೆ ಮನೆಯಲ್ಲಿ ೧೬೪  ಚೀಲ ಪ್ಯಾಕೇಟ್ ಅಕ್ಕಿ ಇದ್ದು ಒಟ್ಟು ೧೬೪ ಘಿ ೪೦ = ೬೫ಕಿಂಟ್ವಾಲ್ ೬೦ ಕೆ.ಜಿ.  ಅಕ್ಕಿ ಚೀಲಗಳು ಇರುತ್ತವೆ. ಇದರ ಬೆಲೆ ಅಂದಾಜು ೬೫,೬೦೦=೦೦ ಈ ಎಲ್ಲಾ ಅಕ್ಕಿಯ ಚೀಲಗಳ  ಬಾಯಿ ಕಟ್ಟಿರುತ್ತದೆ. ಮತ್ತು ೨) ಒಂದು ಪ್ಲಾಸ್ಟೀಕ್ ಚೀಲದಲ್ಲಿ ಸುಮಾರು ೪೦ ಕೆ.ಜಿ.ಯಷ್ಟ ಪಡಿತರ ಗೋದಿ ಇದ್ದು ಚೀಲವನ್ನು ಬಾಯಿ ಕಟ್ಟಿರುತ್ತದೆ. ಒಂದು ಚೀಲನ ಬೆಲೆ ಅಂದಾಜು ೩೬೦=೦೦ ರೂ ಇರುತ್ತದೆ  ಇದರಂತೆ  ಮನೆಯಲ್ಲಿ ೬೦ ಚೀಲ ಪ್ಯಾಕೇಟ್ ಗೋದಿ ಚೀಲಗಳು  ಇದ್ದು ಒಟ್ಟು ೬೦ ಘಿ ೪೦ = ೨೪ ಕಿಂಟ್ವಾಲ್ ಗೋದಿ ಇರುತ್ತದೆ ಇದರ ಬೆಲೆ ಅಂದಾಜು ೨೧,೬೦೦=೦೦ರೂ  ಇರುತ್ತದೆ.
       ಈ ಪಂಚನಾಮೆಯನ್ನು ಈ ದಿನ ದಿ:೦೩-೧೦-೧೫ ರಂದು ರಾತ್ರಿ೧೦-೨೦ ಗಂಟೆಯಿಂದ  ದಿ:೦೪-೧೦-೧೫ ರಂದು ೦೦-೦೦ ಗಂಟೆಯವರೆಗೆ    ಕೃತ್ಯ ನಡೆದ ಸ್ಥಳದಲ್ಲಿ  ಬೀದಿ ವಿದ್ಯುತ್ತ ಲೈಟಿನ ಬೆಳಕಿನಲ್ಲಿ &  ಪೊಲೀಸ್ ಜೀಪಿನ ಲೇಟಿನ ಬೆಳಕಿನಲ್ಲಿ    ಜಪ್ತು ಪಂಚನಾಮೆ ಮಾಡಲಾಯಿತು.
    ಕಾರಣ ಮೇಲ್ಕಂಡ  ಆರೋಪಿ ಮಲ್ಲಿಕಾರ್ಜುನ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ನೀಡಿದ ಮೇರೆಗೆ ಠಾಣೆಯ ಗುನ್ನೆ 
ನಂ:೧೪೨-೧೫ಕಲಂ:೩ &೭ ಇ.ಸಿ.ಯಾಕ್ಟ್ ಮತ್ತು ಕಲಂ:೧೮ (೨) ಪಿ.ಡಿ.ಎಸ್‌ಕಂಟ್ರೂಲ್ ರೂಲ್ಸ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ಮತ್ತು ಇದಕ್ಕೆ  ಪಿರ‍್ಯಾದಿದಾರರ ದೂರು ಲಗತ್ತಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ