ಸೋಮವಾರ, ಅಕ್ಟೋಬರ್ 12, 2015

PRESS NOTE OF 12/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0428/2015
(IPC 1860 U/s 364A )
11/10/2015 Under Investigation
KIDNAPPING AND ABDUCTION - For Ransom - Of Others
Brief Facts  ದಿನಾಂಕ 11-10-2015 ರಂದು ರಾತ್ರಿ 10-30 ಗಂಟೆಗೆ ಶ್ರೀ ಆರ್. ಗಾದಿಗೌಡ ವಾಸ: ಕಾಳಮ್ಮ ಗುಡಿಹತ್ತಿರ, ನೆಣಿಕಿಗ್ರಾಮ, ಅಲೂರು ತಾಲ್ಲೂಕು, ಕರ್ನೂಲ್ ಜಿಲ್ಲೆ. ಎಪಿ. ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು, ಸಾರಾಂಶ : ದಿನಾಂಕ: 10-10-2015 ರಂದು ತಾನು ಬಳ್ಳಾರಿಗೆ ಬಂದಿದ್ದೆನು. ಮದ್ಯಾಹ್ನ 3-30 ಗಂಟೆ ಸುಮಾರಿಗೆ ಕುಂದನಗುರ್ತಿ ಹರಿಶ್ಚಂದ್ರನು  ಸೇಲ್ ನಂ: 08886150747 ರಿಂದ ತನ್ನ ಸೇಲ್ ನಂ: 08897965097 ಗೆ ಕರೆ ಮಾಡಿ ತಾನು ಬಳ್ಳಾರಿ ಅನಂತಪುರ ರಸ್ತೆ ಬುಲೇಟ್ ಷೋ ರೂಂನಲ್ಲಿದ್ದೆನೆ ತನಗೆ ಮೋಟಾರ್ ಸೈಕಲ್ ಬೇಕು ಕೊಡಿಸುಬಾ ಅಂತಾ ಕರೆದನು. ನಾನು ಬುಲೆಟ್ ಷೋ ರೂಂ ಮುಂದೆ ಹೋದಾಗ ಅಲ್ಲಿ 1]. ಕುಂದನ ಗುರ್ತಿ ಹರಿಶ್ಚಂದ್ರ 2]. ಹರಿಕೇರಿ ವೆಂಕಟೇಶ, 3]. ಹಣ್ಣು ಮಾರುವ ವೆಂಕಣ್ಣನ ಮಗ ವಿರೇಶ, ಮತ್ತು ಮೋಕಾ ಗ್ರಾಮದ ವಾಸಿಯಾದ 4]. ಕೊಳ್ಳಿ ಕೃಷ್ಣಪ್ಪರವರು ಇದ್ದರು ಇವರೆಲ್ಲಾ ಕೂಡಿ ತನಗೆ ಕೈಕಾಲುಗಳಿಂದ ಹೊಡೆದರು. ಬುಲೇಟ್ ಷೋ ರೂಂನವರು ಬಿಡಿಸಲು ಬಂದಾಗ ಈ ನಾಲ್ಕು ಜನರು ತಾವು ತಂದಿದ್ದ ಒಂದು ಜೀಪಿನಲ್ಲಿ ತನಗೆ ಒತ್ತಾಯ ಮಾಡಿ ಹತ್ತಿಸಿಕೊಂಡು ಜೀಪ್ ಚಾಲಕನಿಗೆ ಅನಂತಪುರ ರಸ್ತೆ ಕಡೆಗೆ ನಡೆ ಅಂತಾ ಹೇಳಿದರು. ಅನಂತಪುರ ರಸ್ತೆಯಲ್ಲಿ ಹೋಗುವಾಗ ಈ  ನಾಲ್ಕು ಜನರು ಜೀಪಿನಲ್ಲಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಗಳಿಗೆ ಹಗ್ಗ ಕಟ್ಟಿ, ಕೈಗಳಿಂದ ತನಗೆ ಹೊಡೆದರು. ಈ ಮೇಲ್ಕಂಡ 04 ಜನರು ಹಣದ ಸಲುವಾಗಿ ತನಗೆ ಅಪಹರಣ ಮಾಡಿಕೊಂಡು ಹೋಗಿದ್ದು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿ ಹಣ ರೂ: 10,00,000/- ಗಳಿಗೆ ಸ್ಟಾಂಪ್ ಪೇಪರ್ ನಲ್ಲಿ, ಮತ್ತು ಪ್ರಾಂಸರಿ ನೋಟುಗಳಲ್ಲಿ ತನ್ನಿಂದ ಬರೆಯಿಸಿಕೊಂಡು ರಾತ್ರಿ 10-00 ಗಂಟೆಗೆ ಬಳ್ಳಾರಿಯ ಸುಬ್ಬಾರಾವ್ ಆಸ್ಪತ್ರೆಯ ಬಿಟ್ಟು ಹೋಗಿರುತ್ತಾರೆಂದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿದೆ.
Bellary Traffic PS
2 Cr.No:0155/2015
(IPC 1860 U/s 279,338 ; INDIAN MOTOR VEHICLES ACT, 1988 U/s 187 )
11/10/2015 Under Investigation
MOTOR VEHICLE ACCIDENTS NON-FATAL - Other Roads
Brief Facts  ದಿನಾಂಕ: 09-10-2015 ರಂದು ಪಿರ್ಯಾದಿದಾರರಾದ  ಡಿ.ಜಯರಾಮುಲು ತಂದೆ ನಾಗಣ್ಣ ವ: 52 ವರ್ಷ, ಕಮ್ಮ ಜನಾಂಗ, ವ್ಯವಸಾಯ, ವಾಸ: ವಾರ್ಡ್ ನಂ. 31, ಸರಕಾರಿ ಶಾಲೆಯ ಪಕ್ಕದಲ್ಲಿ, ಶಾಂತಿ ನಗರ, ಬಳ್ಳಾರಿ ರವರು ತಮ್ಮ ಮನೆಯಿಂದ ಮೋಟರ್ ಸೈಕಲ್ ನಂಬರ್ ಕೆಎ-34/ವಿ-6949 ನೇದ್ದರಲ್ಲಿ ಬಳ್ಳಾರಿ ಸಿಟಿ ಕಡೆಗೆ ಬಂದು ಕೆಲಸ ಮುಗಿಸಿಕೊಂಡು ವಾಪಾಸ್ ಮನೆಗೆ ಹೋಗಲು ಸುದಾ ಕ್ರಾಸ್ ಮೂಲಕ ಓ.ಪಿ.ಡಿ ಮುಂದೆ ಇರುವ ಅಮಲ ನಿವಾಸ ಕಾಂಪ್ಲೆಕ್ಸ್ ನಲ್ಲಿರುವಟೀ ಸ್ಟಾಲಿನಿಲ್ಲಿ  ಟೀ ಕುಡಿಯಲೆಂದು ಬೆಳಿಗ್ಗೆ 11-40 ಗಂಟೆ ಸುಮಾರಿಗೆ ತಮ್ಮ ಮೋಟರ್ ಸೈಕಲ್ ಅನ್ನು ನಿಧಾನವಾಗಿ ಬಲಗಡೆ ಹೋಗಲು ಇಂಡಿಕೇಟರ್ ಹಾಕಿ ಕೈ ಸನ್ನೆ ಮಾಡಿ ಬಲಗಡೆ ಕಟ್ ಮಾಡುತ್ತಿರುವಾಗ ಅದೇ ವೇಳೆಗೆ ಫಿರ್ಯಾದಿದಾರರ ಹಿಂದಿನಿಂದ ಅಂದರೆ ಸುಧಾ ಕ್ರಾಸ್ ಕಡೆಯಿಂದ  ಮೋಟರ್ ಸೈಕಲ್  ಮೋಟರ್ ಸೈಕಲ್ ನಂಬರ್ ನೋಡಲು ಕೆಎ-34/ಇಸಿ-1453  ನ ಹಿಂಬದಿಯಲ್ಲಿ  ರಾಜೇಶ ಗೌಡ ಈತನನ್ನು   ಕೂಡಿಸಿಕೊಂಡು ಅದರ ಚಾಲಕನಾದ  ಇ.ವಿನೋದ್ ಕುಮಾರ್ ತಂದೆ ದತ್ತಾತ್ರೇಯ ವಾಸ: ಲಕ್ಷ್ಮಿ ನಗರ ಕ್ಯಾಂಪ್ ಬಳ್ಳಾರಿ ಈತನು ಮೋಟರ್ ಸೈಕಲ್ ಅನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಬಲಗಡೆ ಕೈ ಸನ್ನೆ ಮಾಡಿ ಅಮಲ ನಿವಾಸ ಕಾಂಪ್ಲೆಕ್ಸ್ ಕಡೆಗೆ ಕಟ್ ಮಾಡುತ್ತಿದ್ದ ಫಿರ್ಯಾದಿದಾರರ  ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆಸಿದ್ದರಿಂದ ಫಿರ್ಯಾದಿ ಮತ್ತು ಡಿಕ್ಕಿ ಹೊಡೆಸಿದ ಮೋಟರ್ ಸೈಕಲ್ ಚಾಲಕ ಎಲ್ಲರೂ ಮೋಟರ್ ಸೈಕಲ್ಗಳ  ಸಮೇತ ಕೆಳಗಡೆ ಬಿದ್ದಿದ್ದು  ಈ ಅಪಘಾತದಿಂದ ಫಿರ್ಯಾದಿದಾರರಿಗೆ ನಿಲ್ಲಲು ಬಾರದೇ ನನ್ನ ಬಲಗಾಲಿನ ಮೊಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿದಿರುವುದಾಗಿ ಮೇಲ್ಕಂಡ ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂ: ಕೆಎ-34 ಇಸಿ-1453 ನೇದ್ದರ ಚಾಲಕನಾದ ಇ.ವಿನೋದ್ ಕುಮಾರ್ ಈತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ದೂರು.
3 Cr.No:0156/2015
(IPC 1860 U/s 279,337 ; INDIAN MOTOR VEHICLES ACT, 1988 U/s 187 )
11/10/2015 Under Investigation
MOTOR VEHICLE ACCIDENTS NON-FATAL - Other Roads
Brief Facts  ದಿನಾಂಕ: 11-10-2015 ರಂದು ಫಿರ್ಯಾಧಿದಾರರಾದ ಎಂ.ಚಂದ್ರಶೇಖರ್ ತಂದೆ ಎಂ. ಮರಿಯಪ್ಪ, ವಯಸ್ಸು: 66 ವರ್ಷ, ಕ್ರಿಶ್ಚಿಯನ್ ಜನಾಂಗ, ನಿವೃತ್ತ ನೌಕರರು, ವಾಸ: ಮನೆ ನಂಬರ್: 77/ಸಿ, 1ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಕುಂವೆಂಪು ನಗರ, ಬಳ್ಳಾರಿರವರು ತಮ್ಮ ಹಿರೋ ಹೊಂಡಾ 
Brief Facts :  ಸ್ಪ್ಲೆಂಡರ್ ಮೋಟಾರ್ ಸೈಕಲ್ ಪ್ಲಸ್ ನಂಬರ್: ಕೆಎ-34 ವೈ-2106 ನೇದ್ದರಲ್ಲಿ ತಮ್ಮ ಮನೆಯಿಂದ ಕೌಲ್ ಬಜಾರ್ ಗೆ ಬಂದು ಮೆಡಿಕಲ್ ಸ್ಟೋರ್ ನಲ್ಲಿ ಔಷದಿ ತೆಗೆದುಕೊಂಡು ವಾಪಾಸ್ ತಮ್ಮ ಮನೆಗೆ ಹೋಗಲು ಸಂಜೆ ಸುಮಾರು 6-40 ಗಂಟೆಯ ಸಮಯದಲ್ಲಿ ಎರ್ರಿತಾತ ಬೇಕರಿ ರಸ್ತೆಯಲ್ಲಿರುವ ಗಣೇಶಗುಡಿ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಅದೇ ಸಮಯದಲ್ಲಿ ಎದುರುಗಡೆಯಿಂದ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರ್ ನಂಬರ್: ಕೆಎ-34 / 4240 ನೇದ್ದನ್ನು ಅದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡಸಿದ ಪರಿಣಾಮ ಫಿರ್ಯಾಧಿದಾರರು ತಮ್ಮ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬೀಳುವ ಸಮಯದಲ್ಲಿ ಮೋಟಾರ್ ಸೈಕಲ್ ನ ಹ್ಯಾಂಡಲ್ ಫಿರ್ಯಾಧಿದಾರರ ಎದೆಯ ಎಡಭಾಗದಲ್ಲಿ ಬಡಿದಿದ್ದರಿಂದ ಎದೆಯ ಭಾಗದಲ್ಲಿ ಒಳಪೆಟ್ಟಾಗಿರುತ್ತದೆಂದು, ಅಪಘಾತ ಪಡಿಸಿದ ಕಾರ್ ಚಾಲಕನು ಸ್ಥಳದಲ್ಲಿ ಕಾರನ್ನು ನಿಲ್ಲಿಸದೇ ಹಾಗೇ ಹೊರಟು ಹೋಗುತ್ತಿರುವಾಗ ನೋಡಲು ಹಿಂಬದಿಯ ಗ್ರಾಸ್ ನ ಮೇಲೆ G.V ಅಂತ ಬರೆದಿರುತ್ತದೆಂದು, ಕಾರ್ ಚಾಲಕನ ಹೆಸರು ಮತ್ತು ವಿಳಾಸ ತಿಳಿದುಬಂದಿರುವುದಿಲ್ಲವೆಂದು, ನೋಡಿದಲ್ಲಿ ಗುರ್ತಿಸುತ್ತೇನೆಂದು ಅಪಘಾತ ಪಡಿಸಿದ ಕಾರ್ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
Cowlbazar PS
4 Cr.No:0297/2015
(CODE OF CRIMINAL PROCEDURE, 1973 U/s 110(E)(G) )
11/10/2015 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕ: 11/10/2015 ರಂದು ಬೆಳಿಗ್ಗೆ 10-30 ಗಂಟೆಗೆ ಬಳ್ಳಾರಿ ಕೌಲ್ ಬಜಾರ್ ನ ಕುಂಬಾರ್ ಬೀದಿ, ಕೊರಚರ ಬೀದಿ, ಜಾಗೃತಿನಗರ ಏರಿಯಾಗಳಲ್ಲಿ ಹೆಚ್.ಸಿ. 344, ಪಿಸಿ-1241, ರವರೊಂದಿಗೆ ಹಗಲು ಗಸ್ತಿನಲ್ಲಿರುವಾಗ ಕೌಲ್ ಬಜಾರ್ ನ ಬಳ್ಳಾರಿ ಶಾದಿ ಮಹಲ್ ಮುಂದೆ ಇಬ್ಬರು ವ್ಯಕ್ತಿಗಳು ಜನರು ಗುಂಪುಕಟ್ಟಿಕೊಂಡು ಕುಂಬಾರ್ ಬೀದಿಯಲ್ಲಿ ತಿರುಗಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ತೊಂದರೆ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಮೆಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-00 ಗಂಟೆಗೆ ಹೋಗಿ ನೋಡಲು ಷಾಷಾ @ ಷಾಷಾವಲಿ ಮತ್ತು ಮೆಹಬೂಬ್ ಬಾಷ ರವರು ಶಾದಿಮಹಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಗುಂಪು ಕೂಡಿಕೊಂಡು ನಿಂತು ದಾರಿಯಲ್ಲಿ ಬರು ಹೋಗುವವರನ್ನು ತಡೆದು, ದುರ್ಭಾಷೆಗಳಿಂದ ಬೈದು, ಕೂಗಾಡುತ್ತಾ, ಈ ಏರಿಯಾದಲ್ಲಿ ನಾವೇ ರೌಡಿ, ನಾವು ಹೇಳಿದಂತೆ ಕೇಳಬೇಕು ಇಲ್ಲ ಅಂದ್ರೆ ಸರಿ ಇರುವುದಿಲ್ಲ ಎಂದು ಜನರನ್ನು ಭಯ ಬೀಳಿಸುತ್ತಿದ್ದುನ್ನು ಕಂಡು ಸದರಿಯವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ, ನಂತರ ಏಕೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ ತೊಂದರೆ ಮಾಡುತ್ತಿದ್ದೀರಾ ಎಂದು ವಿಚಾರಿಸಿದರೆ ಸರಿಯಾಗಿ ಉತ್ತರಿಸದೇ ಉದ್ದಟ್ಟತನ ತೋರಿಸಿರುತ್ತಾರೆ. ಅಲ್ಲದೇ ಇವರು ಮಟಕಾ ದಂಧೆಯಲ್ಲಿ ಭಾಗಿಯಾಗಿ, ಸಾರ್ವಜನಿಕರಿಗೆ ಮಟಕಾ ಜೂಜಾಟದಲ್ಲಿ ತೊಡಗುವಂತೆ ಪ್ರಚೋದನೆ ನೀಡುತ್ತಿದ್ದಾರೆಂದು ಮಾಹಿತಿ ಇದೆ. ಸದರಿಯವರನ್ನು ಸ್ಥಳದಲ್ಲಿಯೇ ಬಿಟ್ಟರೆ ಏನಾದರೂ ಅನಾಹುತ ಮಾಡಬಹುದೆಂದು ಮತ್ತು ಬೇರೆಯವರ ಪ್ರಾಣಕ್ಕೆ ಹಾನಿಮಾಡಬಹುದೆಂದು ಅನುಮಾನಿಸಿ ಮುಂಜಾಗ್ರತ ಕ್ರಮಕ್ಕಾಗಿ ಪ್ರಕರಣ ದಾಖಲಿಸಿದೆ.
5 Cr.No:0298/2015
(IPC 1860 U/s 380 )
11/10/2015 Under Investigation
THEFT - Electronic Goods (Radio,TV,VCR,ACs,Office Automation Equipments)
Brief Facts :  ದಿನಾಂಕ 09/10/2015 ರಂದು ಪಿರ್ಯಾದಿದಾರರು ಬಿ.ಎಸ್.ಸಿ ಪರೀಕ್ಷೆ ಬರೆಯಲು ಬಳ್ಳಾರಿಗೆ ಬಂದು ವಿಧ್ಯಾನಗರದ ವೆಂಕಟೇಶ್ವರ ಪೇಯಿಂಗ್ ಗೆಸ್ಟ್ ಕೇಂದ್ರದಲ್ಲಿ ಸಂಜೆ 6-00 ಗಂಟೆಗೆ ರೂಮ್ ನಂ. -9 ರಲ್ಲಿ ತಮ್ಮೂರಿನವರೊಂದಿಗೆ ಉಳಿದುಕೊಂಡಿದ್ದು, ಪಿರ್ಯಾದಿದಾರರು ರಾತ್ರಿ  ಮಲಗಿದ ನಂತರ ವೆಂಕಟೇಶ್ ಎನ್ನುವ ಜಿಂದಾಲ್ ನಲ್ಲಿ ಕೆಲಸ ಮಾಡುವವರು ಬಂದು ರೂಮ್ ನಲ್ಲಿ ಮಲಗಿಕೊಂಡಿರುತ್ತಾರೆ. ಮರುದಿನ ದಿ: 10/10/2015 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿ ಮತ್ತು ಜೊತೆಯಲ್ಲಿದ್ದ ಪ್ರಕಾಶ್ ಗೌಡ ಎಂಬುವವರು ಕೂಡಿ ತಿಂಡಿ ತಿನ್ನಲು ಬೇರೆ ಕೋಣೆಗೆ ಹೋಗುವಾಗ ಸುಮಾರು 7,000/- ರೂ ಗಳು ಬೆಲೆ ಬಾಳುವ ಲೆನೆವೋ ಎ-6000 ಮೊಬೈಲ್ ಪೋನ್ , ಐ.ಎಂ.ಇ.ಐ ನಂ.1]  867124025021395 2] 867124025021403 ಸಿಮ್ ನಂ. 1] 9880255988 2] 9108528116 (ಏರ್ ಟೆಲ್) ನೇದ್ದನ್ನು ರೂಮ್ ನಲ್ಲೆ ಚಾರ್ಜಿಂಗ್ ಇಟ್ಟು ತಿಂಡಿ ತಿನ್ನಲು ಹೋಗಿದ್ದು, ಹೋಗುವಾಗ ವೆಂಕಟೇಶ್ ರವರು ರೂಮ್ ನಲ್ಲಿ ಇರುತ್ತಾರೆ. ಪಿರ್ಯಾದಿದಾರರು ತಿಂಡಿ ತಿಂದು ಸ್ನೇಹಿತನೊಂದಿಗೆ ವಾಪಾಸ್ಸು ರೂಮ್ ಗೆ ಬಂದು ನೋಡಿದಾಗ ಮೊಬೈಲ್ ಇರಲಿಲ್ಲ. ಚಾರ್ಜರ್ ಮಾತ್ರ ಇದ್ದು ರೂಮ್ ನಲ್ಲಿದ್ದ ವೆಂಕಟೇಶ್  ರವರು ಸಹ ಇರಲಿಲ್ಲ. ಆದ್ದರಿಂದ ಕಳುವಾದ ತನ್ನ ಮೊಬೈಲ್ ನ್ನು ಪತ್ತೆ ಮಾಡಿಕೊಡ ಬೇಕೆಂದು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ.
Gandhinagar PS
6 Cr.No:0214/2015
(IPC 1860 U/s 00MP )
11/10/2015 Transfered( Brucepet PS)
MISSING PERSON - Women
Brief Facts :  ಫಿರ್ಯಾಧಿದಾರ ತಾಯಿಯಾದ ಎಂ.ಲಕ್ಷ್ಮಮ್ಮ,85 ವರ್ಷ ರವರು ದಿನಾಂಕ:08.10.2015 ರಂದು ಬೆಳಿಗ್ಗೆ 10.30 ಗಂಟೆಗೆ ಎಮ್ಮಿಗನೂರಿನಿಂದ ಹೊರಟು ಮಧ್ಯಾಹ್ನ 02.30 ಗಂಟೆ ಸುಮಾರಿಗೆ  ಬಳ್ಳಾರಿ ನಗರದ ಎಂ.ಜಿ ಪೆಟ್ರೋಲ್ ಬಂಕ್ ಹತ್ತಿರ ಇಳಿದು ನಮ್ಮ ಮನೆಗೆ ಬಾರದೇ  ವಾಪಾಸ್ಸು ಎಮ್ಮಿಗನೂರಿಗೆ ಹೋಗದೇ ಕಾಣೆಯಾಗಿದ್ದು ಕಾಣೆಯಾದ ತನ್ನ ತಾಯಿಯನ್ನು ಪತ್ತೆ ಪತ್ತೆ ಮಾಡಿಕೊಡಬೇಕೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ
7 Cr.No:0215/2015
(IPC 1860 U/s 506,34,504,324 )
11/10/2015 Under Investigation
CASES OF HURT - Grievous  Hurt
Brief Facts :  ಫಿರ್ಯಾಧಿದಾರರು ದಿನಾಂಕ:09.10.2015 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಬಳ್ಳಾರಿ ನಗರದ ಕೋಲಚಲಂ ಕಾಂಪೌಂಡ್ ನಲ್ಲಿರುವ ಆರ್.ಆರ್ ಹೋಟೆಲ್ ಗೆ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದು ಊಟ ಮಾಡಿದ ನಂತರ ಫಿರ್ಯಾಧಿದಾರರು ಸೀಗರೇಟು ಸೇದಲು ಲೈಟರ್ ಕೆಳಗಡೆ ಬಿದ್ದಿದೆ ಕೊಡಿ ಅಂತಾ ಕೇಳಿದ್ದಕ್ಕೆ ಆರೋಪಿತರು ಏಕಾಏಕಿ ಬೀರ್ ಬಾಟಲ್ ನಿಂದ ಫಿರ್ಯಾಧಿದಾರರ ತಲೆಗೆ, ಮುಖಕ್ಕೆ,ಹಣೆಗೆ ಹೊಡೆದು ರಕ್ತಗಾಯ ಮಾಡಿ,ಲೇ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ  ಬೈದು, ನಿನ್ನನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ
Hadagali PS
8 Cr.No:0091/2015
(INDIAN MOTOR VEHICLES ACT, 1988 U/s 183 ; IPC 1860 U/s 279,337 )
11/10/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಈ ದಿನ ದಿನಾಂಕ 11-10-2015 ರಂದು ಮದ್ಯಹ್ನ 02-30 ಪಿ.ಎಂ ಗಂಟೆಗೆ ಮುಂಡರಗಿಯಿಂದ ಹಡಗಲಿ ಕಡೆಗೆ ಬರುವಾಗ, ಹಡಗಲಿ-ಮುಂಡರಗಿ ಮುಖ್ಯ ರಸ್ತೆಯಲ್ಲಿ ಕೊಟ್ನಕಲ್ ಕ್ಯಾಂಪ್ ಹತ್ತಿರ ರಸ್ತೆಯಲ್ಲಿ   ಈಶ್ಯಾನ್ಯ ಕರ್ನಾಟಕ ಬಸ್ ನಂ ಕೆಎ-34 ಎಪ್-618 ನೇದ್ದರ ಚಾಲಕ ಅಬ್ದುಲ್ ಮಜೀದ್ ತನ್ನ ಬಸನ್ನು  ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲಯಿಸಿ, ರಸ್ತೆಯ ಎಡಬದಿಯ ಮರಕ್ಕೆ ಡಿಕ್ಕಿಹೊಡೆಯಿಸಿದ್ದರ ಪರಿಣಾಮ ಮೇಲ್ಕಂಡ ಬಸ್ಸಿನಲ್ಲಿ ಪ್ರಮಾಣಿಸುತ್ತಿದ್ದ ಪೀರ್ಯಾದಿ ಬಲಪಕ್ಕೆಗೆ ಒಳಪೆಟ್ಟಾಗಿರುತ್ತದೆ, ಹಾಗೂ ಗಾಯಾಳುಗಳಿಗೆ ಕೂಡ ಒಳಪೆಟ್ಟು ಆಗಿ  ಬಸ್ ಚಾಲಕ ಅಬ್ದುಲ್ ಮಜೀದ್ ಸಹ ಗಾಯಗೊಂಡಿದ್ದು ಈತನ ಮೇಲೆ ಕಾನೂನು ಕ್ರಮಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದೆ
Hirehadagali PS
9 Cr.No:0173/2015
(IPC 1860 U/s 506,504,143,147,148,149,447,323,324,354 )
11/10/2015 Under Investigation
RIOTS - Others
Brief Facts :  ಫಿರ್ಯಾದಿ ಹಾಗು ಅವರ ಮೂರು ಜನ ತಮ್ಮಂದಿರಿಗೆ ಕುರುವತ್ತಿ ಗ್ರಾಮದ ಹತ್ತಿರ ಸರ್ವೆ ನಂ. 135/5 ರಲ್ಲಿ ಸುಮಾರು 6 ಎಕರೆ ಪಿತ್ರಾರ್ಜಿತ ಜಮೀನು ಇದ್ದು, ಸದರಿ ಜಮೀನಿನ ಮೇಲೆ ಮಾಡಿದ ಸಾಲ ತೀರಿಸುವ ಸಲುವಾಗಿ ದಿನಾಂಕ 08-06-2015 ರಂದು ಫಿರ್ಯಾದಿ ಮತ್ತು ಅವರ ತಮ್ಮಂದಿರು ಹೊಳಲು ಗ್ರಾಮದ ಪೂಜಾರಿ ಪ್ರಸನ್ನ ತಂದೆ ಪೂಜಾರ ಚಂದ್ರಶೇಖರ ರವರಿಗೆ ಮಾರಾಟ ಮಾಡಿದ್ದು, ಆ ಸಮಯದಲ್ಲಿ ಸದರಿ ಜಮೀನಿನಲ್ಲಿದ್ದ ಕಬ್ಬಿನ ಬೆಳೆಯನ್ನು ಕಟಾವು ಮಾಡಿಕೊಂಡು ತೆಗೆದುಕೊಳ್ಳಲು ಖರೀದಿದಾರರು ಒಪ್ಪಿದ್ದರು. ಮಾರಾಟ ಮಾಡಿದ ವಿಷಯ ತಿಳಿದ ಆರೋಪಿತರು ಫಿರ್ಯಾದಿದಾರರಿಗೆ ಯಾಕೆ ಮಾರಾಟ ಮಾಡಿದೆ ಅಂತ ತಕರಾರು ಮಾಡಿ, ಆಗಿನಿಂದ ದ್ವೇಷ ಸಾಧಿಸುತ್ತಿದ್ದು, ನಿನ್ನೆ ದಿನ ದಿನಂಕ 10-10-2015 ರಂದು ಫಿರ್ಯಾದಿಯು ಕೂಲಿ ಆಳುಗಳ ಮೂಲಕ ಕಬ್ಬು ಕಟಾವು ಮಾಡಿಸುತ್ತಿದ್ದಾಗ ಆರೋಪಿ ಕಡ್ಲಿಗೌಡರ ಮಲ್ಲನಗೌಡ ಮತ್ತು ಆತನ ಮಗ ಬಸವನಗೌಡ ರವರು ಬಂದು ಕಟಾವು ಮಾಡಬೇಡಿರಿ ಅಂತ ತಕರಾರು ಮಾಡಿ ಹೋಗಿದ್ದು, ನಂತರ ಈ ದಿನ ದಿನಾಂಕ 11-10-2015 ರಂದು ಫಿರ್ಯಾದಿಯು ಕುರುವತ್ತಿ ಗ್ರಾಮದ ಹತ್ತಿರ ಸವರ್ೆ ನಂ. 135/5 ರಲ್ಲಿಯ ತಮ್ಮ ಕಬ್ಬನ್ನು ಕಟಾವು ಮಾಡಿಸುತ್ತಿದ್ದಾಗ ಬೆಳಿಗ್ಗೆ 11.45 ಗಂಟೆ ಸುಮಾರಿಗೆ ಆರೋಪಿತರೆಲ್ಲಾ ಅಕ್ರಮ ಗುಂಪು ಕಟ್ಟಿಕೊಂಡು ಬಂದವರೇ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಸದರಿ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಫಿರ್ಯಾದಿಗೆ ಕಡ್ಲಿಗೌಡರ ಶಂಕರಗೌಡನು ಕಲ್ಲಿನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದು, ಹಾಗು ಕಡ್ಲಿಗೌಡರ ಬಸವನಗೌಡನು ತನ್ನ ಬಲಗೈ ಮುಷ್ಠಿ ಮಾಡಿ ಎದೆಗೆ ಜೋರಾಗಿ ಗುದ್ದಿ ಗಾಯಪಡಿಸಿದ್ದು, ಇನ್ನುಳಿದವರು ಕೆಳಗೆ ದೂಕಿ ಕೈಕಾಲುಗಳಿಂದ ಮೈಮೇಲೆ ಹೊಡೆದಿದ್ದು, ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ನಾಗವ್ವ ರವರಿಗೆ ಆರೋಪಿ ಕಡ್ಲಿಗೌಡರ ಬಸವನಗೌಡನು ಅವಾಚ್ಯ ಶಬ್ದಗಳಿಂದ ಬೈದಾಡಿ ಆಕೆಯ ಸೀರೆ ಹಿಡಿದು ಎಳೆದು, ಕೂದಲಿಗೆ ಕೈ ಹಾಕಿ ಎಳೆದಾಡಿ ಹಲ್ಲೆ ಮಾಡಿ ಆರೋಪಿತರೆಲ್ಲಾ ಸೇರಿ ಪ್ರಾಣ ಬೆದರಿಕೆ ಹಾಕಿದ್ದು, ಫಿರ್ಯಾದಿ ಮತ್ತು ಆತನ ಹೆಂಡತಿ ಹಡಗಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Hosahalli PS
10 Cr.No:0182/2015
(IPC 1860 U/s 279 ; INDIAN MOTOR VEHICLES ACT, 1988 U/s 183 )
11/10/2015 Under Investigation
MOTOR VEHICLE ACCIDENTS 
NON-FATAL - National Highways
Brief Facts :  ದಿನಾಂಕ:11-10-2015 ರಂದು ಮದ್ಯಾಹ್ನ 03.00ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಬಿ.ಟಿ.ರಾಜಣ್ಣ ತಂದೆ ಲೇಟ್ ತಿಮ್ಮಪ್ಪ, ವ:54ವರ್ಷ,ಒಕ್ಕಲಿಗರು ಜನಾಂಗ,ಲಾಜಿಸಸ್ ಇಂಡಿಯಾ ಲಿ.ಕಂಪನಿಯಲ್ಲಿ ಟ್ರಾಪಿಕ್ ಮ್ಯಾನೇಜರ್ ಸಾ;ಬಸವನ ಮತ್ತಿಕೆರೆ ಗ್ರಾಮ,ಕುಣಿಗಲು ತಾಲೂಕು, ತುಮಕೂರು ಜಿಲ್ಲೆ ಹಾಲಿ :ಮನೆ ನಂ:1192/1,3ನೇ ಕ್ರಾಸ್.ಶೃತಿ ನಿಲಯ, ಕಲ್ಯಾಣನಗರ,ಟಿ.ದಾಸರಹಳ್ಳಿ ,ಬೆಂಗಳೂರು -57 ಇವರು ಠಾಣೆಯಲ್ಲಿ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಂಶವೆನೆಂದರೆ  ಸದರಿ ಕಂಪನಿಯಲ್ಲಿ ಟ್ರಾಪಿಕ ಮ್ಯಾನೆಜರ್ ಅಗಿ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮ ಕಂಪನಿಯಲ್ಲಿ ಸರಕು ಸಾಗಣಿಕೆ ಉಸ್ತುವಾರಿ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ.ಸದರಿ ಕಂಪನಿಗೆ ಸಂಬಂದಿಸಿದ ಲಾರಿ ನಂ:ಹೆಚ್.ಅರ್.38/ ಕ್ಯೂ-8474 ನೇದ್ದರ ಚಾಲಕನಾಗಿ ವಾಜಿದ್ ತಂದೆ ಸಮುಸಿದ್ದಿನ್ ,ವ:24ವರ್ಷ,ಮುಸ್ಲಿಂ ಜನಾಂಗ, ಚಾಲಕ, ಸಾ:ಲಪುರಿ ಗ್ರಾಮ,ಪುನಾನ ತಾಲೂಕು, ಮೇವಾತ್  ಜಿಲ್ಲೆ ಹರಿಯಾಣ ರಾಜ್ಯ ರವರು ಚಾಲಕನಾಗಿರುತ್ತಾನೆ. ಸದರಿ ಲಾರಿಯಲ್ಲಿ  ಕಚ್ಚಾ ಮಾಲನ್ನು ಹಾಕಿಕೊಂಡು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿರುವಾಗ  ದಿನಾಂಕ:10-10-2015 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ನಮ್ಮಲಾರಿಯ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಹೊಸಹಳ್ಳಿ ಗ್ರಾಮ ದಾಟಿದ ನಂತರ ಅಲೂರು ಕ್ರಾಸ್ ದಾಟಿದ ನಂತರ ಚಿತ್ರದುರ್ಗದ ಕಡೆಯಿಂದ ಒಂದು ಲಾರಿಯು ಎದುರಿಗೆ ಬಂದಿದ್ದರಿಂದ ಸದರಿ ಲಾರಿಗೆ ಸೈಡ್ ಕೊಡಲು ಎಡಕ್ಕೆ ಒಮ್ಮೆಲೇ ಕಟ್ಟು ಮಾಡಿದ್ದರಿಂದ ನಮ್ಮ ಲಾರಿಯ ಎಡಮಗ್ಗಲಾಗಿ ಬಿದ್ದು ಎಡಬಾಗ ಜಖಂಗೊಂಡಿರುತ್ತದೆ.ಸದರಿ ಲಾರಿಯಲ್ಲಿದ್ದ  ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ .ಈ ಘಟನೆಯ ನಂತರ ಚಾಲಕ ನನಗೆ ಪೋನ್ ಮಾಡಿ ತಿಳಿಸಿದ್ದರಿಂದ  ನಾನು ಬಂದು ಈ ಘಟನೆಯ ಬಗ್ಗೆ ತಿಳಿದುಕೊಂಡು, ಈಗ ತಡವಾಗಿ ಈ ಅಪಘಾತ ಮಾಡಿದ ನಮ್ಮ ಲಾರಿಯ ಚಾಲಕ ಜಾವಿದ್ ನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.
Hospet Rural PS
11 Cr.No:0148/2015
(KARNATAKA POLICE ACT, 1963 U/s 87 )
11/10/2015 Under Investigation
 KARNATAKA POLICE ACT 1963 - Street Gambling (87)
Brief Facts :  ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ನಸೀಬಿನ ಇಸ್ಪೀಟ್ ಜುಜಾಟವನ್ನು ಹಣ ಪಣಕ್ಕಿಟ್ಟುಆಡುತ್ತಿರುವ ಬಗ್ಗೆ ಮಾಹಿತಿಯ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಯವರಾದ ಎ.ಎಸ್.ಐ ನಾಗಪ್ಪ, ಹಾಗು ಇತರರು  ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅರೋಪಿತ ರಿಂದ ಮತ್ತು ಪಣಕ್ಕಿಟ್ಟಿದ್ದ ಒಟ್ಟು ಜೂಜಾಟದ ಹಣ 12,700/- ರೂಗಳನ್ನು 52 ಇಸ್ಪೀಟ್ ಎಲೆಗಳನ್ನು  ಜಪ್ತು ಮಾಡಿಕೊಂಡು ಬಂದು ಆರೋಪಿತರ ಮೇಲೆ ಪ್ರಕರಣ ದಾಖಲು ಮಾಡಲು   ನೀಡಿದ ಜ್ಞಾಪನದ ಮೇರೆಗೆ ಗುನ್ನೆ ದಾಖಲು ಮಾಡಿ  ಕ್ರಮ ಜರುಗಿಸಿದೆ.
Hospet Traffic PS
12 Cr.No:0054/2015
(INDIAN MOTOR VEHICLES ACT, 1988 U/s 183 ; IPC 1860 U/s 279,337,338,304(A) )
11/10/2015 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕ:11-10-2015 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಹೊಸಪೇಟೆಯಿಂದ ಹಂಪಿಗೆ ಹೋಗುವ ಎಸ್ ಹೆಚ್-49 ರಸ್ತೆಯಲ್ಲಿರುವ, ಕೊಂಡನಾಯಕನಹಳ್ಳಿ ಗ್ರಾಮದಲ್ಲಿನ ಮಾರುತಿನಗರ ಕ್ರಾಸ್ ಹತ್ತಿರ ತಾರ್ ರಸ್ತೆಯಲ್ಲಿ ಈ ಕೇಸಿನ ಫಿರ್ಯಾಧಿ ರಂಜನ್ ಕುಮಾರ್ ಮತ್ತು ಇತರರು ತಮ್ಮ ತಮ್ಮ ಕಾರುಗಳಲ್ಲಿ ಕುಟುಂಬ ಸಮೇತ ಹೊಸಪೇಟೆಯಿಂದ ಹಂಪಿ ವಿಶ್ವವಿದ್ಯಾಲಯಕ್ಕೆ ಪಿಕ್ನಿಕ್ ಗೆ ಹೋಗುತ್ತಿದ್ದಾಗ ಕೆಎ.35/ಎಂ7935 ಮಾರುತಿ ವ್ಯಾಗನ್ ಆರ್ ಕಾರನ್ನು ಅದರ ಚಾಲಕನಾದ ಕೃಷ್ಣಪ್ರಸಾದ್ ಎಂಬಾತನು ಸದ್ರಿ ಕಾರಿನಲ್ಲಿ ತನ್ನ ಹೆಂಡತಿ ಶ್ರೀವಾಣಿ, ಮಗ ಶ್ರೀವತ್ಸ ಹಾಗೂ ತನ್ನ ಮನೆಯಲ್ಲಿ ಬಾಡಿಗೆ ಇರುವ ವೆಂಕಟೇಶ್ ಬಾಬು, ಪದ್ಮಾವತಿ ಹಾಗೂ ವಿನೋದ್ ಕುಮಾರ್ ಎಂಬ ಹುಡುಗ ಎಲ್ಲರನ್ನೂ ಕೂಡಿಸಿಕೊಂಡು ಸದ್ರಿ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಹೋಗಿ ಅದೇ ವೇಳೆಗೆ ರಸ್ತೆಯನ್ನು ದಾಟುತ್ತಿದ್ದ ನವಲೀ ಈರಪ್ಪ ಎಂಬ ಪಾದಾಚಾರಿಗೆ ಢಿಕ್ಕಿ ಹೊಡೆಸಿ, ಅದೇವೇಗದಲ್ಲಿ ರಸ್ತೆಯ ಮದ್ಯೆ ಇರುವ ರೋಡ್ ಡಿವೈಡರ್ ಢಿಕ್ಕಿ ಹೊಡೆಸಿ ಅಪಘಾತ ಮಾಡಿದ ಪರಿಣಾಮ ಪಾದಾಚಾರಿ ನವಲೀ ಈರಪ್ಪನಿಗೆ ಹಾಗೂ ಕಾರಿನಲ್ಲಿದ್ದ ಎಲ್ಲರಿಗೂ ಸಾಧಾರಣಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ಈ ಪೈಕಿ ಬಿ.ವಿನೋದ್ ಕುಮಾರ್ ನ ಕುತ್ತಿಗೆಗೆ ಕಾರಿನ ಗ್ಲಾಸ್ ಹರಿದು ಭಾರೀ ರಕ್ತಗಾಯವಾಗಿದ್ದು, ಕಾರ್ ಅಪಘಾತ ಮಾಡಿದ ಕಾರಿನ ಚಾಲಕ ಕೃಷ್ಣ ಪ್ರಸಾದ್ ನ ಮೇಲೆ ಕಾನೂನು ಕ್ರಮ ಜರುಗಿಸಲು ಫಿರ್ಯಾದಿಯು ಖುದ್ದಾಗಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದೆ.
Kamalapur PS
13 Cr.No:0088/2015
(IPC 1860 U/s 279,337 )
11/10/2015 Under Investigation
MOTOR VEHICLE ACCIDENTS 
NON-FATAL - State Highways
Brief Facts :  ಈ ದಿನ ದಿನಾಂಕ: 11/10/2015 ರಂದು ಫಿರ್ಯಾದಿದಾರರು ಠಾಣೆಯಲ್ಲಿ ಹಾಜರಾಗಿ ಹೇಳಿಕೆ ದೂರು ನೀಡಿದ ಸಾರಾಂಶ: ಫಿರ್ಯಾದಿದಾರರು ಮತ್ತು ಇತರರು ರಾಮಾಂಜಿನಿ ರವರ ಮಿನಿಡೋರ್ ಆಟೋ ನಂಬರ್ ಕೆ.ಎ 35 ಎ 3430 ನೇದ್ದರಲ್ಲಿ ಬೆಳಿಗ್ಗೆ 08-45 ಗಂಟೆಗೆ ತಿರುಪತಿ ದೇವಸ್ಥಾನಕ್ಕೆಂದು ಕಮಲಾಪುರವನ್ನು ಬಿಟ್ಟು ಹೊಸಪೇಟೆ ಕಡೆಗೆ ಹೊರಟಿದ್ದು, ಕಮಲಾಪುರದ ಕೆರೆಕಟ್ಟೆ ಮೇಲೆ ಹೋಗುತ್ತಿರುವಾಗ ಕಟ್ಟೆ ಭರಮಪ್ಪ ದೇವಸ್ಥಾನ ಹತ್ತಿರ ಬೆಳಿಗ್ಗೆ ಅಂದಾಜು 09-00 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಹೊಸಪೇಟೆ ಕಡೆಯಿಂದ ಮೋಟಾರ್ ಸೈಕಲ್ ನಂ ಕೆ.ಎ 33 ಕೆ 5523  ನೇದ್ದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಆಟೋಗೆ ಎಡಭಾಗಕ್ಕೆ ಬಂದು ಡಿಕ್ಕಿ ಹೊಡೆಸಿದ ಪರಿಣಾಮವಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶ್ರೀನಿವಾಸ, ಕಾರ್ತಿಕ ಹಾಗೂ ಅಜಯ್ ಕುಮಾರನಿಗೆ ಗಾಯಾಗಳಾಗಿ ವಾಹನಗಳ ಜಖಂಗೊಂಡಿರುತ್ತವೆ. ಈ ಅಪಘಾತಕ್ಕೆ ಕಾರಣವಾದ ಮೋಟಾರ್ ಸೈಕಲ್ ಸವಾರ ಮಲ್ಲಿಕಾರ್ಜುನ ಮನ್ಪಡೆ ರವರ ಮೇಲೆ ಸೂಕ್ತ ಕ್ರಮ ಜರುಗಿಸಲು ದೂರು ಇದ್ದ ಮೇರೆಗೆ ಪ್ರ. ವ ವರದಿ
Kampli  PS
14 Cr.No:0131/2015
(IPC 1860 U/s 379 )
11/10/2015 Under Investigation
THEFT - Of Automobiles - Of Two Wheelers
Brief Facts :  ಈ ದಿನ ದಿನಾಂಕ 11-10-2015 ರಂದು ಸಂಜೆ 05-30 ಗಂಟೆಗೆ ಶ್ರೀ,ಕೇಶವ ಎನ್.ಕತ್ರಿ ಸಾ// ಶ್ರೀರಾಂ ನಗರ ಗಂಗಾವತಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶೇನೆಂದರೇ ದಿನಾಂಕ, ದಿನಾಂಕ 09-10-2015 ರಂದು ಬೆಳಿಗ್ಗೆ 08-00 ಗಂಟೆಯಿಂದ ಮಧ್ಯಾಹ್ನ 02-30 ಗಂಟೆಯ ಮಧ್ಯದ ಅವಧಿಯಲ್ಲಿ 40.000/- ರೂ ಬೆಲೆ ಬಾಳುವ ತನ್ನ Black colour Hero Honda Hunk Moter cycle, No KA37/R 7878, Cha No-MBLKC13EDAGF03418, Eng No-KC13EDAGF03262  ಮೋಟಾರ್ ಸೈಕಲ್ಲನ್ನು ಯಾರೋ ಕಳ್ಳರು, ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನ ಮತ್ತು ಮೋಟಾರ್ ಸೈಕಲ್ಲನ್ನು ಪತ್ತೇ ಮಾಡಿ, ಕಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಇದ್ದ ಮೇರೆಗೆ ಗುನ್ನೆ ನಂ 131/2015 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Kottur PS
15 Cr.No:0141/2015
(IPC 1860 U/s 379 )
12/10/2015 Under Investigation
THEFT - Electronic Goods (Radio,TV,VCR,ACs,Office Automation Equipments)
Brief Facts :  ದಿನಾಂಕ 12-10-2015 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರ್ ನಲ್ಲಿ ತಯಾರಿಸಿದ ದೂರು ಸಾರಾಂಶ,  ದಿನಾಂಕ 06-10-2015 ರಂದು ಬೆಳಿಗ್ಗೆ 11-45 ಗಂಟೆಗೆ ಹರಪನಹಳ್ಳಿಯಿಂದ ಕೊಟ್ಟೂರಿಗೆ ಬಂದು ಬಸ್ ಇಳಿಯುವಾಗ ಬಸ್ ನಿಲ್ದಾಣದಲ್ಲಿ ಜನರ ನೂಕು ನುಗ್ಗಲಿನಲ್ಲಿ ಜೇಬಿನಲ್ಲಿದ್ದ ಲಾವಾ ಪ್ಲೇಯರ್ Z1 ಕಪ್ಪು ಬಣ್ಣದ  Android ಮೊಬೈಲ್   ಸೆಟ್ ನಂ IMEI 911452700207989  ಹಾಗೂ SN No FZ1415,F0010120  ಸದರಿ ಮೊಬೈಲಿನಲ್ಲಿದ್ದ ಇದ್ದ  ಟಾಟಾ ಡೊಕೊಮೊ ಸಿಮ್ ನಂ 7899961600 ಮತ್ತು ವೊಡಾಪೋನ್ ಸಿಮ್ ನಂ 9902693929 ಅಂತಾ ಇದ್ದು ಮೊಬೈಲ್ ಮತ್ತು ಸಿಮ್ ಗಳ ಅಂದಾಜು ಬೆಲೆ 6000/- ರೂ ಗಳಾಗುತ್ತದೆ,ಇದನ್ನು ಪತ್ತೆ ಮಾಡಿಕೊಡಬೇಕೆಂದು  ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Kudligi PS
16 Cr.No:0174/2015
(IPC 1860 U/s 279,337 ; INDIAN MOTOR VEHICLES ACT, 1988 U/s 183 )
11/10/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ಈ ದಿನ ದಿನಾಂಕ 11/10/2015 ರಂದು ಸಂಜೆ 5-00 ಗಂಟೆಗೆ  ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಿಂದ ಅಪಘಾತದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ  ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಹೋಗಿ  ಪಿರ್ಯಾದಿ ನೀಡಿದ ಹೇಳಿಯನ್ನು ಸಂಜೆ 5-30 ಗಂಟೆಗೆ ಪಡೆದುಕೊಂಡು ಮರಳಿ ಠಾಣೆಗೆ 5-45 ಗಂಟೆಗೆ ಬಂದು  ಪ್ರಕರಣ ದಾಖಲಿಸಿದ್ದರ ಸಾರಾಂಶದಲ್ಲಿ ಈ ದಿನ ಸಾಯಂಕಾಲ 4 ಗಂಟೆಯ ಸುಮಾರಿಗೆ  ಬಸವರಾಜಪ್ಪ ತಂದೆ ಬಸಪ್ಪ  ಈತನು ಮೋಟಾರ್ ಸೈಕಲ್ ನಂಬರ್ ಕೆ,ಎ 35  ಆರ್ 9362  ಟಿ.ವಿ.ಎಸ್. ಎಕ್ಸ್ ಎಲ್  ಮೋಟಾರ್ ಸೈಕಲ್ ನಲ್ಲಿ  ಕೂಡ್ಲಿಗಿ ಕಡೆಯಿಂದ ಎ.ಡಿ.ಗುಡ್ಡದ ಕಡೆಗೆ  ಹೋಗುತ್ತಿದ್ದಾಗ  ಎ.ಡಿ.ಗುಡ್ಡದ ಕಡೆಯಿಂದ  ಬಂದ  ಮೋಟಾರ್ ಸೈಕಲ್  ನಂಬರ್ ಕೆ.ಎ 35 ವೈ 9542 ನೇದ್ದನ್ನು ರಾಘವೇಂದ್ರ  ಈತನು  ಪಿರಾಮಿಡ್ಡ್ ಹತ್ತಿರ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರಿಂದ ಬಸವರಾಜಪ್ಪಈತನಿಗೆ ಎಡ ಕಣ್ಣಿನ ಹತ್ತಿರ ಮತ್ತು  ಎಡ ಮೊಣಕಾಲಿಗೆ ರಕ್ತಗಾಯಳಾಗಿರುತ್ತವೆಂದು  ಈ ಅಪಘಾತದಲ್ಲಿ ಅಪಘಾತ ಪಡಿಸಿದ ಚಾಲಕನಿಗೂ ಸಹ  ಗಾಯ ಪೆಟ್ಟುಗಾಳಗಿರುತ್ತವೆಂದು  ಈ ಬಗ್ಗೆ ಅಪಘಾತ ಪಡಿಸಿದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಪಿರ್ಯಾದುದಾರರು  ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ.
Thoranagal PS
17 Cr.No:0154/2015
(IPC 1860 U/s 
11/10/2015 Under Investigation
200,203,406,420,423,468,488,506 )
CHEATING - CHEATING
Brief Facts :  ನಿವೇದನೆ:-
ಶ್ರೀಮತಿ ದೇವಮ್ಮ ಗಂಡ  ಲೇಟ್ ಪರಮೇಶ್ವರಪ್ಪ55 ವರ್ಷಗಳು ವ್ಯವಸಾಯ ವಾಸ: ಜಿ. ಬಸಾಪುರ ಗ್ರಾಮ ಸಂಡೂರು ತಾಲೂಕು ಬಳ್ಳಾರಿ ರವರು ಮಾನ್ಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಲಯ ಸಂಡೂರು ರವರಲ್ಲಿಗೆ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂದರೆ  ಸಂಡೂರು ತಾಲೂಕಿನ ಗುಂಡ್ಲಳ್ಳಿ ಗ್ರಾಮದ ಸರ್ವೆ ನಂ 74/ಎ/3.50 ಎಕರೆ ಜಮೀನುನ್ನು  9.21 ಎಕರೆಯಲ್ಲಿರುವುದನ್ನು ಪರಮೇಶ್ವರಪ್ಪ ತಂದೆ ಹನುಮಯ್ಯ ರವರ ಹೆಸರಿನಲ್ಲಿದ್ದು ಪರಮೇಶ್ವರ ರವರ ಹೆಂಡತಿ ಶ್ರೀಮತಿ ದೇವಮ್ಮ ರವರು  ತನ್ನ ಗಂಡ ಮೃತ ಪಟ್ಟ ನಂತರ ಸರ್ವೆ ನಂ 74/ಎ ರಲ್ಲಿ ಜಮೀನನ್ನು ಕಾನೂನು ರೀತಿಯಲ್ಲಿ ಅವರಿಗೆ ಬರಬೇಕಾದದನ್ನು ಅವರ ಸಂಬಂದಿಕರಾದ  ಗಾದೇಪ್ಪ ತಂದೆ ತಿಪ್ಪಣ್ಣ 49 ವರ್ಷಗಳು ವ್ಯವಸಾಯ ವಾಸ: ಜಿ. ಬಸಾಪುರ ಗ್ರಾಮ  ಸಂಡೂರು ತಾಲೂಕು ಬಳ್ಳಾರಿ ರವರು ಸದ್ರಿ ವಿಷಯ ಸುಳ್ಳೇಂದು ತಿಳಿದು ಸತ್ಯವೇಂದು ಪರಿಗಣಿಸಿ ಸದ್ರಿ ವಿಷಯವನ್ನು  ಕೊಟ್ಟು, ಪಿರ್ಯಾದಿಗೆ ನಂಬಿಕೆ ದ್ರೋಹ ಮಾಡಿ ಭೊಮಿಗೆ ಸಂಬಂದ ಪಟ್ಟ ದಾಖಲಾತಿಗಳನ್ನು  ಸಂಬಂದ ಪಟ್ಟ ಸಂಡೂರು ತಾಲೂಕೊ ದಂಡದಾಕಾರಿಗಳ  ಕಛೇರಿಯಲ್ಲಿ ತನ್ನ ಹೆಸರಿಗೆ  ಸೃಷ್ಟಿಸಿಕೊಂಡು  ಬಂದಿದ್ದು ದಿನಾಂಕ:4/8/2015 ರಂದು   ಪಿರ್ಯಾದಿ ಮನೆಯ ಹತ್ತಿರ ಹೋಗಿ ಜಮೀನು ವಿಷಯದಲ್ಲಿ ನನ್ನ ತಂಟೆಗೆ ಬಂದರೆ ಚೆನ್ನಾಗಿ ಇರುವುದಿಲ್ಲ  ಪ್ರಾಣ ಸಹಿತ ಉಳಿಸುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಎಂದು ದೂರನ್ನು  ಮಾನ್ಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಲಯ ಸಂಡೂರು ರವರ ಸಿ.ಪಿ.ಐ. ಸಂಡೂರು ರವರಿಗೆ  ಕಳುಹಿಸಿಕೊಟ್ಟಿದ್ದನ್ನು  ಪಿ.ಸಿ. 823 ರವರು ಈ ದಿನ ದಿನಾಂಕ: 11/10/2015 ರಂದು  10;15 ಎ.ಎಂ.ಗೆ ಹಾಜುರುಪಡಿಸಿದ ಮೇರೆಗೆ ಈ  ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.(ಪ್ರ.ವ.ವಗೆ ಪಿರ್ಯಾದಿ ದೂರು ಲಗತ್ತಿಸಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ