Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0091/2015 (CODE OF CRIMINAL PROCEDURE, 1973 U/s 107,151 ) |
26/10/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ದಿನಾಂಕ:26/10/2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಅಂದ್ರಾಳ್ ಗ್ರಾಮದ ಹತ್ತಿರ ಇರುವ ಶ್ರೀ ಗುರುಶಾಂತೆಶ್ವರ ಜಿನ್ನಿಂಗ್ ಮಿಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರ ಗುಂಪನ್ನುದ್ದೇಶೀಸಿ ಜೋರು ಜೋರಾಗಿ ಕೂಗಾಡುತ್ತಾ ತಾನು ಹೇಳಿದ ಹಾಗೇ ಎಲ್ಲರೂ ಕೇಳಬೇಕು ನಮ್ಮ ಮಿಲ್\ ಗೇ ಕೆಲಸಕ್ಕೆ ಬರಬೇಕು ಬೇರೆ ಯಾರ ಕೆಲಸಕ್ಕೂ ಹೋಗಬಾರದು ಎಂದು ಜೋರು ಜೋರಾಗಿ ಕೂಗಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ಮಾಡುತ್ತಿದ್ದುದು ಕಂಡು ಬಂದಿದ್ದರಿಂದ ಮುಂಜಾಗ್ರತಾ ಕ್ರಮಾಕ್ಕಾಗಿ ಈತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೇನೆ. | |||||||||||||||
Bellary Rural PS | ||||||||||||||||
2 | Cr.No:0446/2015 (IPC 1860 U/s 279,337 ) |
25/10/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ: 25-10-2015 ರಂದು ಮದ್ಯಾಹ್ನ 3-00 ಗಂಟೆಯಿಂದ 3-45 ಗಂಟೆವರೆಗೆ ಬಳ್ಳಾರಿ ವಿಮ್ಸ್ನಲ್ಲಿ ಫಿರ್ಯಾದಿ ಶ್ರೀ.ವೈ.ರವಿ ತಂದೆ ರಾಮಾಂಜಿನೇಯುಲು ವಯಸ್ಸು 25 ವರ್ಷ, ವಾಸ. ಕಲ್ಯಂ ಗ್ರಾಮ, ಡಿ.ಹಿರೇಹಾಳು ಮಂಡಲ, ಅನಂತಪುರ ಜಿಲ್ಲೆರವರ ಹೇಳಿಕೆ ದೂರನ್ನು ಪಡೆದುಕೊಂಡು ಸಂಜೆ 4-15 ಗಂಟೆಗೆ ವಾಪಾಸ್ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿದ್ದು ಸಾರಾಂಶ: ದಿನಾಂಕ: 25-10-2015 ರಂದು ಮದ್ಯಾಹ್ನ ಬಳ್ಳಾರಿ ಕಡೆಯಿಂದ ಮೋಟಾರ್ ಸೈಕಲ್ ನಂಬರ್ ಕೆ.ಎ-34-ಇ-8963 ರಲ್ಲಿ ಹಿಂದುಗಡೆ ತನ್ನ ಅಣ್ಣ ನರಸಿಂಹುಲುರವರನ್ನು ಕೂಡಿಸಿಕೊಂಡು ತನ್ನ ಸಂಬಂದಿ ಸಿ.ಕೃಷ್ಣರವರು ಮೋಟಾರ್ ಸೈಕಲ್ ಚಲಾಯಿಸಿಕೊಂಡು ತಮ್ಮ ಗ್ರಾಮಕ್ಕೆ ಹೋಗಲು ಬಳ್ಳಾರಿ-ಬೆಂಗಳೂರು ರಸ್ತೆ ಹಲಕುಂದಿ ಗ್ರಾಮದ ಬಳಿ ಇರುವ ಆಂಜಿನೇಯ ರೈಸ್ ಮಿಲ್ ಎದುರಿಗೆ ಹೋಗುತ್ತಿದ್ದಾಗ ಮದ್ಯಾಹ್ನ 1-30 ಗಂಟೆಗೆ ಎದುರಾಗಿ ಬೆಂಗಳೂರು ರಸ್ತೆ ಕಡೆಯಿಂದ ಅಶೋಕ್ ಲೈಲ್ಯಾಂಡ್ ಮಿನಿ ಗೂಡ್ಸ್ ವಾಹನ ಸಂಖ್ಯೆ ಕೆ.ಎ-34-ಬಿ-3097 ನೇದ್ದನ್ನು ಅದರ ಚಾಲಕ ಚಿನ್ನಪ್ಪ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಪೂರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪ್ರಯುಕ್ತ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ತನ್ನ ಅಣ್ಣ ನರಸಿಂಹುಲುರವರಿಗೆ ಮತ್ತು ಸಿ.ಕೃಷ್ಣರವರಿಗೆ ಪೆಟ್ಟಾಗಿ ರಕ್ತಗಾಯಗಳಾಗಿರುತ್ತವೆಂದು. ಅಪಘಾತ ಮಾಡಿದ ಗೂಡ್ಸ್ ವಾಹನ ಚಾಲಕನಾದ ಚಿನ್ನಪ್ಪ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಚಿನ್ನಪ್ಪ ಎನ್ನುವವರಿಗೆ ಪೆಟ್ಟಾಗಿ ರಕ್ತಗಾಯಗಳಾಗಿರುತ್ತವೆಂದು ಅಪಘಾತ ಮಾಡಿದ ಗೂಡ್ಸ್ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. | |||||||||||||||
3 | Cr.No:0447/2015 (INDIAN MOTOR VEHICLES ACT, 1988 U/s 187 ; IPC 1860 U/s 279,337 ) |
25/10/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ: : 25-10-2015 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿ ಶ್ರೀ. ಎನ್. ರಮೇಶ ತಂದೆ ನೀಲಕಂಠಪ್ಪ ವ: 24 ವರ್ಷ, ವಾಸ: ಕಕ್ಕಬೇವಿನಹಳ್ಳಿ ಗ್ರಾಮ, ಬಳ್ಳಾರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಬೇವಿನಹಳ್ಳಿ ಗ್ರಾಮವಾಸಿ ರಾಜರವರು ತನ್ನ ಲಾರಿ ನಂಬರ್ ಕೆಎ-35-5594 ನೇದ್ದಕ್ಕೆ ಕ್ಲೀನರ್ ಕೆಲಸ ಮಾಡಿಕೊಂಡಿದ್ದು ದಿನಾಂಕ: 20-10-2015 ರಂದು ತಮ್ಮ ಲಾರಿಯ ಕ್ಲೀನರ್ ರಾಜರವರು ಮೋಕಾ ಗ್ರಾಮದಲ್ಲಿ ಕ್ಲೀನರ್ ಕೆಲಸ ಮುಗಿಸಿಕೊಂಡು ವಾಪಾಸ್ ತಮ್ಮ ಗ್ರಾಮಕ್ಕೆ ಬರಲು ಒಂದು ಪಲ್ಸರ್ ಮೋಟರ್ ಸೈಕಲ್ ಚಾಲನಿಗೆ ಲಿಫ್ಟ ಕೇಳಿ ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡು ಸಿರಿವಾರ ಕ್ರಾಸ್ ಹತ್ತಿರ ಬರುತ್ತಿದ್ದಾಗ ಬೆಳಿಗ್ಗೆ 10-00 ಗಂಟೆಗೆ ಎದುರಾಗಿ ಅಂದರೆ ಬಳ್ಳಾರಿ ಕಡೆಯಿಂದ ಕೆಂಪು ಬಣ್ಣದ ಹಿರೋಹೊಂಡ ಮೋಟರ್ ಸೈಕಲನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜರವರು ಬರುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ್ ಸೈಕಲ್ ನಿಂದ ಬಿದ್ದು ರಾಜರವರಿಗೆ ಬಲಕಾಲಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆಂದು ಗಾಯಗೊಂಡ ರಾಜರವರನ್ನು ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ದಾಖಲಿಸಿದ್ದಾಗಿ ರಾಜರವರು ಹೊಗುತ್ತಿದ್ದ ಮೋಟಾರ್ ಸೈಕಲ್ ನಂಬರ್ ಆಗಲೀ ಚಾಲಕನ ಬಗ್ಗೆಯಾಗಲೀ, ಅಪಘಾತ ಮಾಡಿದ ಮೋಟಾರ್ ಸೈಕಲ್ ನಂಬರ್ ಆಗಲೀ ಚಾಲಕನ ಬಗ್ಗೆ ಯಾಗಲೀ ಗೊತ್ತಿರುವುದಿಲ್ಲವೆಂದು ಅಪಘಾತ ಮಾಡಿದ ಮೋಟಾರ್ ಸೈಕಲ್ ಪತ್ತೆಹಚ್ಚಿ, ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದೆ | |||||||||||||||
4 | Cr.No:0448/2015 (IPC 1860 U/s |
25/10/2015 | Under Investigation | |||||||||||||
143,147,148,323,324,342,354(B),504,149 ) | ||||||||||||||||
MOLESTATION - Other Places | ||||||||||||||||
Brief Facts : | ದಿನಾಂಕ: 25-10-2015 ರಂದು ರಾತ್ರಿ 11-15 ಗಂಟೆಗೆ ಫಿರ್ಯಾದಿ ಶ್ರೀಮತಿ ಬೀಮಿಬಾಯಿ ಗಂಡ ನಿರ್ಮಲಸಿಂಗ್, 35 ವರ್ಷ, ಲಮಾಣಿ ಜನಾಂಗ, ವಾಸ: ಪದ್ಮಾವತಿನಗರ, ಗುಗ್ಗರಹಟ್ಟಿ, ಬಳ್ಳಾರಿರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ 25-10-2015 ರಂದು ಸಂಜೆ 5-00 ಗಂಟೆಗೆ ತಾನು ತನ್ನ ಮನೆಯ ಮುಂದೆ ಇದ್ದಾಗ ತಮ್ಮ ಮನೆಯ ಹತ್ತಿರ ವಾಸವಿರುವ ಹರಿಜನ ಜನಾಂಗದ ಕುಮಾರನು ತನ್ನ ಮನೆಯ ಮುಂದೆ ಇದ್ದ ತನ್ನ ಹೆಂಡತಿ ಪಾರ್ವತಮ್ಮಳನ್ನು ನೋಡಿ, ಒಳಗಡೆ ಬಾರಲೇ ತುಡುಗಿ ಸೂಳೆ ಎಂದು ಫಿರ್ಯಾದಿಯನ್ನು ನೋಡಿ, ಉಗುಳಿದ್ದು ಅದಕ್ಕೆ ಫಿರ್ಯಾದಿ ಸಹ ಉಗುಳಿದ್ದರಿಂದ ಕುಮಾರನು ಯಾರನ್ನು ನೋಡಿ ಉಗುಳಿದೆ ಸೂಳೆ ಅಂತಾ ಬೈದಿದ್ದು ಅದಕ್ಕೆ ಫಿರ್ಯಾದಿಯು ಅವರ ಮನೆಯ ಮುಂದೆ ಹೋಗಿ ನೀನು ಯಾರನ್ನು ನೋಡಿ ಉಗುಳಿಗೆ ಎಂದು ಕೇಳಿದ್ದಕ್ಕೆ ಕುಮಾರನು ನಿನ್ನನ್ನು ನೋಡಿ ಉಗುಳಿದೆ ಲೇ ಸೂಳೆ ಮಿಂಡ್ರುನ್ನ ಇಟ್ಟುಕೊಂಡು ಮನೆಕಟ್ಟಿಕೊಂಡು, ಜೀವನ ಮಾಡುತ್ತಿದ್ದಿಯಾ ನೀನು ನನ್ನನ್ನು ನೋಡಿ ಉಗುಳುತ್ತಿಯಾ ಎಂದು ಬೈದು, 1] ಕುಮಾರ 2] ಕುಮಾರನ ಹೆಂಡತಿ ಪಾರ್ವತಮ್ಮ 3] ಕುಮಾರನ ಮಗಳು ಇಂದ್ರ 4] ಕುಮಾರನ ಮಗಳು ಪದ್ಮಾ 5] ಪದ್ಮಳ ಗಂಡ ದುರುಗೇಶಿ, 6] ಕುಮಾರನ ಮಗ ನರಸಿಂಹ ರವರು ಗುಂಪುಕಟ್ಟಿಕೊಂಡು ಬಂದು, ತನ್ನನ್ನು ತಮ್ಮ ಮನೆಯ ಮುಂದೆ ಇದ್ದ ಎಕ್ಕೆ ಗಿಡಕ್ಕೆ ಹಗ್ಗದಿಂದ ಕಟ್ಟಿಹಾಕಿ, ಕುಮಾರನು ತನ್ನ ಸೀರೆಯನ್ನು ಹಿಡಿದು ಎಳೆದಾಡಿ ಜನರ ಎದರುಗಡೆ ಅನುಮಾನಪಡಿಸಿ, ಕಟ್ಟಿಗೆಯಿಂದ ತಲೆಗೆ, ಮೈ ಕೈಗೆ ಹೊಡೆದಿರುತ್ತಾನೆಂದು ಪಾರ್ವತಮ್ಮ, ಇಂದ್ರ, ಪದ್ಮಾ ರವರು ಕೈಗಳಿಂದ ಕಪಾಳಕ್ಕೆ ಹೊಡೆದಿರುತ್ತಾರೆಂದು ದುರುಗೇಶಿ, ನರಸಿಂಹ ರವರು ಕೈ ಕಾಲುಗಳಿಂದ ಬೆನ್ನಿಗೆ, ಹೊಟ್ಟೆಗೆ ಮೈಗೆ ಹೊಡೆದಿರುತ್ತಾರೆಂದು ಈ ಜಗಳದಲ್ಲಿ ಒಂದೂವರೆ ತೊಲೆಯ ತನ್ನ ಮಾಂಗಲ್ಯ ಸರ ಹರಿದುಬಿದ್ದು ಹೋಗಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. | |||||||||||||||
Cowlbazar PS | ||||||||||||||||
5 | Cr.No:0311/2015 (IPC 1860 U/s 506,504,143,147,148,149,323,324 ) |
26/10/2015 | Under Investigation | |||||||||||||
RIOTS - Others | ||||||||||||||||
Brief Facts : | ದಸ್ತಾರ ಹಬ್ಬದ ಪ್ರಯುಕ್ತ ಪ್ರತಿ ವರ್ಷ ದುರುಗಮ್ಮ ಗುಡಿಯ ಪಲ್ಲಕ್ಕಿ ಉತ್ಸವವು ದುರುಗಮ್ಮ ಗುಡಿಯಿಂದ ಕೌಲ್ ಬಜಾರ್ ನ ಗಾಣಿಗರ ಓಣಿಗೆ ಬಂದು ಮುಕ್ತಾಯ ಆಗುತ್ತಿದ್ದು ಹಾಗೂ ದುರುಗಮ್ಮ ಗುಡಿಯ ಪಲ್ಲಕ್ಕಿಯನ್ನು ಹೋರುವ ಸಂಪ್ರದಾಯ ಫಿರ್ಯಾಧಿಯ ಕುಟುಂಬದವರೇ ಆಗಿದ್ದು, ಅದರಂತೆ ದಿನಾಂಕ: 23/10/2015 ರಂದು ಬೆಳಗಿನ ಜಾವ 1-30 ಗಂಟೆಗೆ ಕೌಲ್ ಬಜಾರ್ ನ ಸೆಲೆಕ್ಟ್ ಟಾಕೀಸ್ ಹತ್ತಿರ ಅಡ್ಡ ಪಲ್ಲಕ್ಕಿಯು ಇರುವಾಗ ಆರೋಪಿತರಾದ 1] ಸೋಮಶೇಖರ್ ತಂದೆ ಲಕ್ಷ್ಮಣ, 2] ದುರುಗೇಶ್ ತಂದೆ ಲಕ್ಷ್ಮಣ, 3] ಸೋಮ ತಂದೆ ದೊಡ್ಡಬಸಪ್ಪ, 4] ಹೊನ್ನೂರ ತಂದೆ ದೊಡ್ಡಬಸಪ್ಪ, 5] ಲಕ್ಷ್ಮಣ, 6] ಗಾದಿಲಿಂಗಪ್ಪ, 7] ದೆವೇಂದ್ರ ತಂದೆ ಗಾದಿಲಿಂಗಪ್ಪ ರವರು ಗುಂಪಾಗಿ ಬಂದು, ಅಡ್ಡ ಪಲ್ಲಕ್ಕಿಗೆ ಅಡ್ಡ ಅಡ್ಡವಾಗಿ ಬಂದು ತೊಂದರೆ ಮಾಡುತ್ತಿದ್ಧಾಗ ಫಿರ್ಯಾಧಿದಾರರು ಅವರಿಗೆ ಈ ರೀತಿ ಅಡ್ಡ ಬರಬಾರದು ಎಂದು ಹೇಳಿದಾಗ ಅವರಲ್ಲಿ ಆರೋಪಿತರು ಫಿರ್ಯಾದಿಗೆ ಏನಲೇ ಸೂಳೇ ಮಗನೇ ನಮ್ಮ ಓಣಿಗೆ ಬಂದು ಹುಡುಗಿಯರನ್ನು ನೋಡುತ್ತಿಯೆನಲೇ ಅಂತಾ ಬೈದು, ಕೈಗಳಿಂದ, ಕಟ್ಟಿಗೆಯಿಂದ ಫಿರ್ಯಾಧಿಗೆ ಮತ್ತು ತಿಮ್ಮಪ್ಪಗೆ ಹೊಡೆದು, ಜಗಳ ಮಾಡಿ, ಪ್ರಾಣ ಬೆದರಿಕೆ ಹಾಕಿ ಓಡಿ ಹೋಗಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
6 | Cr.No:0312/2015 (IPC 1860 U/s 00MP ) |
26/10/2015 | Under Investigation | |||||||||||||
MISSING PERSON - Women | ||||||||||||||||
Brief Facts : | ಈ
ದಿನ ದಿನಾಂಕ: 26/10/2015 ರಂದು
ಪಿರ್ಯಾದಿದಾರರಾದ ಶ್ರೀಮತಿ ಸವೀತಾ ಗಂಡ ಲೇಟ್ ಪ್ರಕಾಶ್. ವ:43ವರ್ಷ ಕ್ರೀಶ್ಚೀಯನ್ ಜನಾಂಗ. ಗಾರ್ಮೇಟ್ಸ್ ನಲ್ಲಿಕೆಲಸ. ವಾಸ ಮನೆ ನಂ: 4 ವಾರ್ಡ ನಂ:24. ಬಾರ್-ಬಾರ್ ಬೀದಿ ಕೌಲ್ಬಜಾರ್ ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶವೆನೆಂದರೆ; ತನ್ನ 2ನೇ ಮಗಳು ಸಹಾನಳು ದಿನಾಂಕ: 24/10/2015 ರಂದು ಬೆಳಿಗ್ಗೆ 9-30 ಗಂಟೆಗೆ ತಮ್ಮ ಮನೆಯಿಂದ ಟೀಫನ್ ಗಾಗಿ ದೋಸೆತರುವುದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಅವಳಿಗಾಗಿ ಪಿರ್ಯಾದಿದಾರರು ತಮ್ಮ ಏರಿಯಾದಲ್ಲಿ, ಹುಡುಕಾಡಿನೋಡುತ್ತಿರುವಾಗ ನಮಗೆ ಪರಿಚಯವಿರುವವರು ನಿಮ್ಮ ಮಗಳು ಮತ್ತು ಬಾರ್-ಬಾರ್ ಬೀದಿಯ ತಾಯಣ್ಣನ ಮಗನಾದ ಮೋಹನ್ ಇಬ್ಬರು ಆಟೋದಲ್ಲಿ ಕುಳಿತುಕೊಂಡು ಹೋಗಿರುತ್ತಾರೆಂದು ಹೇಳಿದರು. ನಂತರ ತಾನು ಬೇರೆ-ಬೇರೆ ಕಡೆಗಳಲ್ಲಿ ಹುಡುಕಾಡಿ ನೋಡಿದಾಗ್ಯೂ ತನ್ನ ಮಗಳು ಕಾಣಲಿಲ್ಲ ನಂತರ ನಿನ್ನೆ ರಾತ್ರಿ 11-00 ಗಂಟೆಯ ಸುಮಾರಿಗೆ ಮೋಹನ್ ನು ತನ್ನ ಮಾವನಾದ ಶೇಖಣ್ಣನಿಗೆ 9738010988 ನ್ನೆದ್ದರಿಂದ ಪೋನ್ಮಾಡಿ ತಾನು ಮತ್ತು ಸಹಾನ ಇಬ್ಬರು ಜೋತೆಯಾಗಿ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದರು. ಅದಕ್ಕೆ ಇಬ್ಬರನ್ನು ಬಳ್ಳಾರಿಗೆ ಬರಲು ಶೇಖಣ್ಣನು ತಿಳಿಸಿದಾಗ ಅವರಿಬ್ಬರು ಪೂಜಾ ಟ್ರಾವೆಲ್ಸ್ ಬಸ್ ನಿಂದ ಬಳ್ಳಾರಿಗೆ ಬರುವುದಾಗಿ ತಿಳಿಸಿದರು. ಅದರೂ ಬಳ್ಳಾರಿಗೆ ಬರಲಿಲ್ಲ. ಅದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಮಗಳನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರನ್ನು ಪಡೆದು ಮನುಷ್ಯಕಾಣೆ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೇನೆ. |
|||||||||||||||
Gandhinagar PS | ||||||||||||||||
7 | Cr.No:0223/2015 (IPC 1860 U/s 379 ) |
25/10/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ಈ ದಿನ ದಿನಾಂಕ: 25/10/2015 ರಂದು ಬೆಳಿಗ್ಗೆ 10-10 ರಿಂದ 11-30 ಗಂಟೆಯ ಮಧ್ಯಾವಧಿಯಲ್ಲಿ ಬಳ್ಳಾರಿ ನಗರದ ಡಬಲ್ ರಸ್ತೆಯಲ್ಲಿರುವ ಸೀತಾರಾಂ ಕಾಂಪ್ಲೆಕ್ಸ್ ಮುಂದೆ ಮೋಟಾರ್ ಸೈಕಲ್ ಗಳು ನಿಲ್ಲಿಸುವ ಸ್ಥಳದಲ್ಲಿ ಫಿರ್ಯಾದಿದಾರರು ನಿಲ್ಲಿಸಿದ್ದ ತನ್ನ ಕಪ್ಪು ಬಣ್ಣದ ಹೀರೊ ಹೊಂಡಾ ಸಿ.ಡಿ-100 ಮೋಟಾರ್ ಸೈಕಲ್ ನಂ. ಕೆಎ 34/ಇ-8963 ಬೆಲೆ ಅಂದಾಜು 10,000/- ರೂ. ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಫಿರ್ಯಾದಿಯು ಕಳುವಾದ ತನ್ನ ಮೋಟಾರ್ ಸೈಕಲ್ ನ್ನು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಈ ಪ್ರ.ವ. ವರದಿ. | |||||||||||||||
Gudekote PS | ||||||||||||||||
8 | Cr.No:0129/2015 (IPC 1860 U/s 143,144,341,323,354,448,504,506,149 ; SC AND THE ST (PREVENTION OF ATTROCITIES) ACT, 1989 U/s 3(I)(III),3(X) ) |
25/10/2015 | Under Investigation | |||||||||||||
SCHEDULED CASTE AND THE SCHEDULED TRIBES - Scheduled Caste Women | ||||||||||||||||
Brief Facts : | ದಿನಾಂಕ 24/10/2015 ರಂದು ಸಂಜೆ 05-50 ಗಂಟೆ ಸಮಯದಲ್ಲಿ ಪಿರ್ಯಾಧಿದಾರರು ತನ್ನ ಸ್ನೇಹಿತ ಉಮೇಶನೊಂದಿಗೆ ತೋಣಸಿಗೇರೆ ಗ್ರಾಮಕ್ಕೆ ಹೋಗಿ ತಮ್ಮ ಊರಿಗೆ ವಾಪ್ಪಾಸ್ ಸೈಕಲ್ ಮೋಟಾರನಲ್ಲಿ ಬರುವಾಗ ಯರ್ರಯ್ಯನಹಳ್ಳಿ ಕ್ರಾಸ್ ಹತ್ತಿರ ಮೇಲ್ಕಂಡ ಆರೋಪಿತರು ಸೈಕಲ್ ಮೋಟಾರನಲ್ಲಿ ಜೋರಾಗಿ ಎದುರುಗಡೆ ಮೈ ಮೇಲೆ ಬಂದಾಗ, ಪಿರ್ಯಾಧಿದಾರ ಗಾಬರಿಯಾಗಿ ತನ್ನ ಸೈಕಲ್ ಮೋಟಾರ್ ನಿಲ್ಲಿಸಿ, ತಮ್ಮ ಮೈ ಮೇಲೆ ಏಕೆ ಬಂದಿರಿ ಎಂದು ಕೇಳಿದಾಗ, ಆರೋಪಿತರು ಹೊಡೆಯಲು ಹೊದಾಗ ಪಿರ್ಯಾದಿ ತನ್ನ ಸ್ನೇಹಿತನೊಂದಿಗೆ ತಪ್ಪಿಸಿಕೊಂಡು ಅಲ್ಲಿಂದ ತಮ್ಮ ಊರಿನ ಕಡೆ ಹೋಗುವಾಗ ಮೇಲ್ಕಂಡ ಆರೋಪಿತರು ಬೆನ್ನು ಹತ್ತಿ ತಮ್ಮೂರಿನ ಬಣಕಾರ ಇವರ ಹೊಲದ ಹತ್ತಿರ ಅಡ್ಡಗಟ್ಟಿ ನಿಲ್ಲಿಸಿ ಕೈಕಾಲುಗಳಿಂದ ತನಗೆ ತನ್ನ ಸ್ನೇಹಿತನಿಗೆ ಹೊಡೆಯುವಾಗ ತಪ್ಪಿಸಿಕೊಂಡು ತಮ್ಮ ಗ್ರಾಮದಿಂದ ಯರ್ರಯ್ಯನಹಳ್ಳಿಗೆ ಹೋಗುವ ರಸ್ತೆ ಹತ್ತಿರ ಪುನಃ ಬೆನ್ನತಿ ಬಂದು ಹಿಡಿದುಕೊಂಡು ನೆಲಕ್ಕೆ ಕೆಡವಿಕೊಂಡು ತನ್ನ ಎದೆಗೆ, ಹೊಟ್ಟೆಗೆ, ಹೊಡೆದಾಗ ಉಮೇಶನು ಬಿಡಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋದಾಗ ಪುನಃ ಸಂಜೆ 06-30ಗಂಟೆಗೆ ಆರೋಪಿತರು ತನ್ನ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ ತನ್ನ ಕುತ್ತಿಗಿಗೆ ಕೈ ಹಾಕಿ ಇಸುಕಿದಾಗ ಬಿಡಿಸಲು ಬಂದ ತನ್ನ ತಾಯಿ ಭರಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಜಾತಿ ನಿಂದನೆ ಮಾಡಿ ತನ್ನ ತಾಯಿಯ ಸೀರೆಯನ್ನು ಎಳೆದಾಡಿ ಎದೆಗೆ ಹೊಟ್ಟೆಗೆ ಮತ್ತು ಗುಪ್ತಾಂಗಗಳಿಗೆ ಹೊಡೆದಿರುತ್ತಾರೆ, ತನ್ನ ಅತ್ತಿಗೆ, ಹುಲುಗೆಮ್ಮಳಿಗೆ ಕೈ ಹಿಡಿದು ಎಳೆದಾಡಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಕೇಸು ಕೊಟ್ಟರೆ ನಿಮ್ಮಗಳನ್ನು ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆಂದು ತಮ್ಮ ಮೇಲೆ ದೌರ್ಜನ್ಯವೆಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಲು ದಿನಾಂಕ 25/10/2015 ರಂದು ರಾತ್ರಿ 08-20 ಗಂಟಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರಿಗೆ ಈ ಪ್ರಕರಣ ದಾಖಲಾಗಿರುತ್ತದೆ. | |||||||||||||||
Hosahalli PS | ||||||||||||||||
9 | Cr.No:0191/2015 (KARNATAKA POLICE ACT, 1963 U/s 87 ) |
25/10/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ:೨೪/೧೦/೨೦೧೫ ರಂದು ಸಾಯಂಕಾಲ ೪-೦೦ ಗಂಟೆಗೆ ಹೊಸಹಳ್ಳಿ ಠಾಣೆಯ ಪಿ.ಎಸ್.ಐ. ರವರಾದ ಶ್ರೀ.ಸುರೇಶ ಡಿ ಪಿ.ಎಸ್.ಐ.ರವರು ಠಾಣೆಯಲ್ಲಿ ಹಾಜರಾಗಿ ವರದಿಯನ್ನು ಕೊಟ್ಟಿದ್ದೇನೆಂದರೆ,ಈ ದಿನ ದಿನಾಂಕ:೨೪/೧೦/೨೦೧೫ ರಂದು ಮದ್ಯಾಹ್ನ ೦೨-೧೦ ಗಂಟೆಯ ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಹುರಳಿಹಾಳ್ ಗ್ರಾಮದ ಹತ್ತಿರ ಪೆನ್ನಯ್ಯನವರ ಕಟ್ಟೆ ಹತ್ತಿರ ಬಂಡಿ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದಿದ್ದರಿಂದ ಠಾಣೆಯಲ್ಲಿದ್ದ ಪಿ.ಸಿ.ಗಳಾದ ೧೦೫೦,೯೮೯,೧೧೦೩ ರವರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ನಾನು ಮೇಲ್ಕಂಡ ಸಿಬ್ಬಂಧಿಯೊಂದಿಗೆ ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಮದ್ಯಾಹ್ನ ೨-೧೫ ಗಂಟೆಗೆ ಠಾಣೆಯಿಂದ ಹೊರಟು ಮದ್ಯಾಹ್ನ ೨-೪೫ ಗಂಟೆಯ ಸುಮಾರಿಗೆ ಹುರಳಿಹಾಳ್ ಗ್ರಾಮದ ಊರ ಹೊರಗಡೆ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ನಾವೆಲ್ಲರೂ ಕಾಲು ನಡಿಗೆಯಿಂದ ನಡೆದು ಕೊಂಡು ಮದ್ಯಾಹ್ನ ೨-೫೫ ಗಂಟೆಯ ಸುಮಾರಿಗೆ ಹುರಳಿಹಾಳ್ ಗ್ರಾಮದ ಹತ್ತಿರ ಇರುವ ಪೆನ್ನಯ್ಯನವರ ಕಟ್ಟೆ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಹುರಳಿಹಾಳ್ ಗ್ರಾಮದ ಹತ್ತಿರ ಇರುವ ಪೆನ್ನಯ್ಯನವರ ಕಟ್ಟೆ ಹತ್ತಿರ ಬಂಡಿ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ೩ ಜನರು ಗುಂಪಾಗಿ ಕುಳಿತುಕೊಂಡು ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮದ್ಯಾಹ್ನ ೩-೦೦ ಗಂಟೆಗೆ ನಾನು, ಸಿಬ್ಬಂಧ್ದಿ ಮತ್ತು ಪಂಚರೊಂದಿಗೆ ಇಸ್ಪೇಟ್ ಜೂಜಾಟದ ಸ್ಥಳದ ಮೇಲೆ ದಾಳಿ ಮಾಡಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರನ್ನು ಹಿಡಿದುಕೊಂಡು ಇಸ್ಪೇಟ್ ಜೂಜಾಟ ಆಡುತ್ತಿದ್ದ ವ್ಯಕ್ತಿಗಳಿಗೆ ಹೆಸರು ವಿಳಾಸ ಕೇಳಲಾಗಿ ೧] ಕುಮಾರಪ್ಪ ಕೆ.ತಂದೆ ಲೇಟ್ ಸಿಡ್ಲಪ್ಪ ,೪೭ ವರ್ಷ,ಆದಿ ಕರ್ನಾಟಕ ಜನಾಂಗ,ವ್ಯವಸಾಯ,ವಾಸ:ಓಬಳಶೆಟ್ಟಿಹಳ್ಳಿ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಇಸ್ಪೇಟ್ ಜೂಜಾಟದ ಹಣ ರೂ: ೪೦೦=೦೦ ರೂಗಳು ದೊರೆಯಿತು ೨] ಮಲ್ಲಿಕಾರ್ಜುನ ತಂದೆ ಗುರುಸಿದ್ದಯ್ಯ,೪೨ ವರ್ಷ,ಲಿಂಗಾಯತರು, ವ್ಯವಸಾಯ, ವಾಸ:ಎಂ.ಬಿ.ಅಯ್ಯನಹಳ್ಳಿ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ೧೫೦೦=೦೦ ರೂಗಳು ದೊರೆಯಿತು.೩] ಎರ್ರಿಸ್ವಾಮಿ ತಂದೆ | |||||||||||||||
ಮಲ್ಲಯ್ಯ,ವ:೩೨ ವರ್ಷ, ವಾಲ್ಮೀಕಿ ಜನಾಂಗ,ವ್ಯವಸಾಯ,ವಾಸ:ಹುರಳಿಹಾಳ್ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ೩೦೦=೦ ರೂಗಳು ದೊರೆಯಿತು.ಜೂಜಾಟದ ಸ್ಥಳದಲ್ಲಿ ೫೨ ಇಸ್ಪೇಟ್ ಎಲೆಗಳು ದೊರೆತಿದ್ದು, ೫೨ ಇಸ್ಪೇಟ್ ಎಲೆಗಳನ್ನು ಮತ್ತು ಇಸ್ಪೇಟ್ ಜೂಜಾಟದ ಒಟ್ಟು ಹಣ ೨೨೦೦=೦೦ ರೂಗಳನ್ನು ಮದ್ಯಾಹ್ನ ೩-೦೦ ಗಂಟೆಯಿಂದ ೩-೪೦ ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದು ಕೊಂಡು ಜಪ್ತು ಮಾಡಿಕೊಂಡ ಇಸ್ಪೇಟ್ ಎಳೆಗಳು,ಮತ್ತು ಜೂಜಾಟದ ಹಣ ರೂ:೨೨೦೦=೦೦ ರೂಗಳನ್ನು ಹಾಗು ಆರೋಪಿತರನ್ನು ನನಗೆ ಒಪ್ಪಿಸಿದ್ದನ್ನು ಸ್ವೀಕರಿಸಿ ಹೊಸಹಳ್ಳಿ ಠಾಣೆಯ ಎನ್.ಸಿ.ನಂ.೧೬೩/೧೫೦೪/೨೦೧೫,ಕಲಂ:೮೭ ಕೆ.ಪಿ.ಯಾಕ್ಟ್ ರಿತ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.ಸದರಿ ಪ್ರಕರಣವು ಎನ್.ಸಿ.ಪ್ರಕರಣವಾಗಿದ್ದರಿಂದ ಪ್ರ.ವ.ವರದಿಯನ್ನು ದಾಖಲು ಮಾಡಲು ಪರವಾನಿಗೆ ನೀಡಬೇಕೆಂದು ಮಾನ್ಯ ನ್ಯಾಯಾಲಯಕ್ಕೆ ಕೊಟ್ಟ ವಿನಂತಿ ಪತ್ರವನ್ನು ಸ್ವಿಕರಿಸಿ ಪ್ರಕರಣ ದಾಖಲಿಸಿಕೊಂಡಿದೆ. | ||||||||||||||||
10 | Cr.No:0192/2015 (IPC 1860 U/s 279,337 ; INDIAN MOTOR VEHICLES ACT, 1988 U/s 183 ) |
25/10/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ದಿನಾಂಕ:೨೫-೧೦-೨೦೧೫ ರಂದು ಸಾಯಂಕಾಲ ೦೪-೦೦ ಗಂಟೆಯ ಸುಮಾರಿಗೆ ಪಿರ್‍ಯಾದಿದಾರರಾದ ಶ್ರೀ.ವಿ.ರಾಮಮೂರ್ತಿ ತಂದೆ ವೆಂಕಟಚಲಪತಿ ವ:೫೯ವರ್ಷ,ಪಿಳೈ ಜನಾಂಗ,ಲಾರಿನಂ:ಟಿ.ಎನ್.೨೮/ಎಪಿ-೩೩೫೫ ನೇದ್ದರ ೧ ನೇಚಾಲಕ ಸಾ:೫೩/೨೨,ಎಎಸ್ ಪಟ್ಟೈಮೆಲ್ ಸ್ಟ್ರೀಟ್, ನೇಮಕಲ್ಲು , ತಮಿಳು ನಾಡು ರಾಜ್ಯ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಂಶವೆನೆಂದರೆ ನಾನು ,ಲಾರಿನಂ:ಟಿ.ಎನ್.೨೮/ಎಪಿ-೩೩೫೫ ನೇದ್ದರ ೧ ನೇಚಾಲಕನಾಗಿ ಮತ್ತು ಎರಡನೇ ಚಾಲಕನಾಗಿ ಕೆ.ರಾಜ ತಂದೆ ಕಾಮರಾಜ ವ:೪೧ವರ್ಷ, ,ಲಾರಿನಂ:ಟಿ.ಎನ್.೨೮/ಎಪಿ-೩೩೫೫ ನೇದ್ದರ ೨ ನೇಚಾಲಕ, ಸಾ:ಮಾಳಿನೂರು, ವೇಪೂರು ತಾಲೂಕು, ಕಡಲೂರು ಜಿಲ್ಲೆ. ತಮಿಳುನಾಡು ರಾಜ್ಯ ಅಂತಾ ಇರುತ್ತಾರೆ. ನಾವು ನಮ್ಮ ಲಾರಿಯಲ್ಲಿ ಗುಜರಾತ್ ರಾಜ್ಯದ ಅಹಮ್ಮದ್ ಬಾದ್ ಹತ್ತಿರ ಇರುವ ಮೋಡಿಬಾಯಿಯಿಂದ ಸಕ್ಕರೆ ತುಂಬುವ ಖಾಲಿ ಚೀಲಗಳನ್ನು ಲೋಡ್ ಮಾಡಿಕೊಂಡು ತಮಿಳುನಾಡು ರಾಜ್ಯದ ಈರೋಡ್ ಹತ್ತಿರ ಇರುವ ಪವಾನಿ ಶಕ್ತಿ ಶುಗರ್ ಮಿಲ್ಸ್‌ಗೆ ಅನ್ ಲೋಡ್ ಮಾಡಲು ಹೊರಟೆವು. ಚಾಲಕನಾಗಿ ನಾನು ನಮ್ಮ ಲಾರಿಯನ್ನು ದಿನಾಂಕ:೨೫-೧೦-೨೦೧೫ ರಂದು ಬೆಳಿಗ್ಗೆ ೧೧.೩೦ ಗಂಟೆಯ ಸುಮಾರಿಗೆ ಚಾಲನೆ ಮಾಡಿಕೊಂಡು ಅಲೂರು ಕ್ರಾಸ್ ದಾಟಿದ ನಂತರ ಜೋದಪುರ ಢಾಬದ ಹತ್ತಿರ ಎನ್.ಹೆಚ್.೧೩ ರಸ್ತೆಯಲ್ಲಿ ಚಿತ್ರದುರ್ಗದ ಕಡೆಗೆ ಹೋಗುತ್ತಿರುವಾಗ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ನಮ್ಮ ಲಾರಿ ಎದುರಿಗೆ ಬಂದಾಗ ನಾನು ನಮ್ಮ ಲಾರಿಯನ್ನು ಸ್ವಲ್ಪ ರಸ್ತೆಯ ಎಡಬದಿಗೆ ತಿರುಗಿಸಿಕೊಂಡಾಗ ನಮ್ಮ ಲಾರಿಯ ಮದ್ಯದ ಭಾಗಕ್ಕೆ ಡಿಕ್ಕಿಪಡಿಸಿದನು. ಈ ಅಪಘಾತದಿಂದ ನಮ್ಮ ಲಾರಿ ಪಲ್ಟಿಯಾಗಿ ರಸ್ತೆಯ ಎಡಕ್ಕೆ ಬಿದ್ದಿತು. ಈ ಅಪಘಾತದಿಂದ ನನಗೆ ಬಲಕೈ ರಟ್ಟೆಯ ಹತ್ತಿರ ಓಳನೋವು ಮತ್ತು ಬೆನ್ನಿನ ಹಿಂದ ಬಲಬಾಗದಲ್ಲಿ ತೆರಚಿದ ಗಾಯಗಳಾದವು. ನಮ್ಮ ೨ ನೇಚಾಲಕ ರಾಜನಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಗಾಯಗೊಂಡ ನಾನು ೨ನೇ ಚಾಲಕ ರಾಜನ ಸಹಾಯದಿಂದ ಲಾರಿಯ ಹೊರಗಡೆಯಿಂದ ಹೊರಬಂದು ನಮ್ಮ ಲಾರಿಗೆ ಅಪಘಾತಪಡಿಸಿದ ಲಾರಿಯ ನೊಂದಾಣಿ ಸಂಖ್ಯೆ ನೋಡಲಾಗಿ ಹೆಚ್.ಅರ್.೬೧/ಎ-೯೩೩೩ ಅಂತಾ ಇದ್ದು, ಅಪಘಾತ ಪಡಿಸಿದ ಲಾರಿಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ಅವನ ಹೆಸರು ಮುನ್ನಾ ತಂದೆ ಪಿ.ಹರಿಲಾಲ್ ಸಿಂಗ, ಠಾಕೂರು ಜನಾಂಗ, ಸಾ: ಸಾತ್ನ ಜಿಲ್ಲೆ, ಮದ್ಯಪ್ರದೇಶ ರಾಜ್ಯ ಅಂತಾ ತಿಳಿಸಿದನು. ಸದರಿ ಅಪಘಾತ ಪಡಿಸಿದ ಲಾರಿ ಚಾಲಕನಿಗೆ ಬಲಗಾಲು ಪಾದದ ಹತ್ತಿರ ಮತ್ತು ಮುಖಕ್ಕೆ ರಕ್ತಗಾಯಗಳಾಗಿದ್ದು, ಗಾಯಗೊಂಡ ಚಾಲಕ ಮುನ್ನಾನಿಗೆ ೧೦೮ ಅಂಬ್ಯುಲೇನ್ಸ್ ನಲ್ಲಿ ಚಿತ್ರದುರ್ಗಕ್ಕೆ ಚಿಕಿತ್ಸೆಗೆ ಕಳುಹಿಸಿಕೊಟ್ಟೆನು. ನಂತರ ನಾನು ನಮ್ಮ ಇನ್ನೋಬ್ಬ ಚಾಲಕನ ಸಹಾಯದಿಂದ ಹೊಸಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡೆನು. ನಂತರ ನಮ್ಮ ಲಾರಿಗೆ ಅಪಘಾತ ಪಡಿಸಿದ ಲಾರಿ ,ಲಾರಿನಂ:ಹೆಚ್.ಅರ್.೬೧/ಎ-೯೩೩೩ ನೇದ್ದರ ಚಾಲಕನ ವಿರುದ್ದ ಮುಂದಿನ ಕ್ರಮಕೈಗೊಳ್ಳುವಂತೆ ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
11 | Cr.No:0193/2015 (CODE OF CRIMINAL PROCEDURE, 1973 U/s 107 ) |
25/10/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಕಳೆದ ವರ್ಷ ದಿನಾಂಕ:೦೯/೧೦/೨೦೧೫ ರಂದು ಮಂಗಾಪುರ ಗ್ರಾಮದಲ್ಲಿ ಎ ಪಾರ್ಟಿ ೧] ಅಬ್ದುಲ್ ಘನಿಸಾಬ್ ತಂದೆ ಪಕ್ಕೀರ್‌ಸಾಬ್,೩೫ ವರ್ಷ, ೨] ಪಕ್ಕಿರ್‌ಸಾಬ್ ತಂದೆ ಸಣ್ಣ ಯಮನೂರ್‌ಸಾಬ್,೬೫ ವರ್ಷ ೩] ಖಾತೂನ್ ಬಿ ಗಂಡ ಪಕ್ಕೀರ್‌ಸಾಬ್,೫೫ ವರ್ಷ, ೪] ಆಶಾಬಿ ಗಂಡ ಘನಿಸಾಬ್,೩೦ ವರ್ಷ.೫] ಪೀರಾಸಾಬ್ ತಂದೆ ಲೇಟ್ ಜಾಫರ್‌ಸಾಬ್,೫೦ ವರ್ಷ,೬] ಷರೀಫಮ್ಮ ಗಂಡ ಪೀರಾಸಾಬ್,೪೫ ವಷ ೭] ಶಮೀನಾ ತಂದೆ ಪೀರಾಸಾಬ್,೨೪ ವರ್ಷ,೮] ಶಬ್ಬೀರ್ ತಂದೆ ಪೀರಾಸಾಬ್,೨೨ ವರ್ಷ,ಎಲ್ಲರೂ ಪಿಂಜಾರ ಜನಾಂಗ,ವ್ಯವಸಾಯ, ವಾಸ:ಮಂಗಾಪುರ ಗ್ರಾಮ ಮತ್ತು ಬಿಪಾರ್ಟಿ ೧] ಹೊನ್ನೂರ್‌ಸಾಬ್ ತಂದೆ ಲೇಟ್ ಸಣ್ಣ ಯಮನೂರ್‌ಸಾಬ್,೬೦ ವರ್ಷ.೨] ಬಾಬಮ್ಮ ಗಂಡ ಹೊನ್ನೂರಸಾಬ್,ವ:೫೫ ವರ್ಷ.೩] ನಜೀರ್ ತಂದೆ ಹೊನ್ನೂರ್‌ಸಾಬ್,ವ:೨೪ ವರ್ಷ.೪] ಶಫಿ ತಂದೆ ಹೊನ್ನೂರ್‌ಸಾಬ್,ವ:೨೮ ವರ್ಷ. ಎಲ್ಲರೂ ಪಿಂಜಾರ ಜನಾಂಗ, ವ್ಯವಸಾಯ,ವಾಸ:ಮಂಗಾಪುರ ಗ್ರಾಮ ಇವರುಗಳ ಮದ್ಯ ಜಮೀನು ಪಾಲು ವಿಭಾಗದ ವಿಷಯದಲ್ಲಿ ಒಬ್ಬರಿಗೊಬ್ಬರು ಹೊಡದಾಡಿಕೊಂಡು ಮಂಗಾಪುರ ಗ್ರಾಮದಲ್ಲಿ ಇವೆರಡು ಗುಂಪನವರ ಮೇಲೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.೧೨೨/೨೦೧೫ ಕಲಂ:೧೪೩,೧೪೭,೧೪೮,೩೨೩,೩೨೪,೫೦೪,೫೦೬ ಆದಾರ ೧೪೯ ಐಪಿಸಿ ರಿತ್ಯ ಮತ್ತು ಗುನ್ನೆ ನಂ>೧೨೫/೨೦೧೫ ಕಲಂ:೩೨೩,೩೪೧,೩೫೪, ೫೦೪,೫೦೬, ಆದಾರ ೩೪ ಐಪಿಸಿ ರಿತ್ಯ ಕೇಸು ಮತ್ತು ಪ್ರತಿ ಕೇಸು ದಾಖಲಾಗಿದ್ದು ಇರುತ್ತದೆ. ನಾನು ಈ ದಿವಸ ದಿನಾಂಕ:೨೫/೧೦/೨೦೧೫ ರಂದು ಸಾಯಂಕಾಲ ಮೊಹರಂ ಹಬ್ಬದ ಸಲುವಾಗಿ ಹಿರೇಕುಂಬಳಗುಂಟೆ, ಬೈಲತುಂಬ್ರಗುದ್ದಿ, ನಿಂಬಳಗೇರೆ ಗ್ರಾಮಗಳಿಗೆ ಬೇಟಿ ಕೊಟ್ಟು ನಂತರ ಈ ದಿನ ದಿನಾಂಕ;೨೫/೧೦/೨೦೧೫ ರಂದು ರಾತ್ರಿ ೯-೦೦ ಗಂಟೆಯ ಸುಮಾರಿಗೆ ಮಂಗಾಪುರ ಗ್ರಾಮಕ್ಕೆ ಬೇಟಿ ಕೊಟ್ಟು ಗ್ರಾಮದಲ್ಲಿರುವ ನನ್ನ ಬಾತ್ಮೀದಾರರಿಗೆ ಗ್ರಾಮದ ಬಗ್ಗೆ ವಿಚಾರಿಸಲಾಗಿ ಅವರು ಈ ಮೇಲ್ಕಂಡ ಎರಡು ಗುಂಪಿನವರು ಜಮೀನು | |||||||||||||||
ಪಾಲು ವಿಭಾಗದ ವಿಷಯದಲ್ಲಿ ಪುನ: ಒಬ್ಬರಿಗೊಬ್ಬರು ಹೊಡದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುವ ಸಾದ್ಯತೆ ಇರುತ್ತದೆಂದು ತಿಳಿಸಿರುತ್ತಾರೆ.ಕಾರಣ ಮೇಲ್ಕಂಡ ಪ್ರತಿವಾದಿಗಳಿಂದ ಮಂಗಾಪುರ ಗ್ರಾಮದಲ್ಲಿ ಶಾಂತತೆಯನ್ನು ಕಾಪಾಡುವ ಸಲುವಾಗಿ ಮತ್ತು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮತ್ತು ಸದ್ರಿ ಮೇಲ್ಕಂಡ ವ್ಯಕ್ತಿಗಳನ್ನು ಹಾಗೆಯೇ ಬಿಟ್ಟಲ್ಲಿ ಒಬ್ಬರಿಗೊಬ್ಬರು ಮಂಗಾಪುರ ಗ್ರಾಮದಲ್ಲಿ ಜಮೀನು ಪಾಲು ವಿಭಾಗದ ವಿಚಾರದಲ್ಲಿ ಹೊಡದಾಡಿಕೊಂಡು ಗಲಾಟೆಮಾಡಿಕೊಳ್ಳುವ ಸಂಭವ ಇರುವುದಾಗಿ ತಿಳಿದು ಬಂದಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಈ ದಿನ ದಿನಾಂಕ ೨೫/೧೦/೨೦೧೫ ರಂದು ರಾತ್ರಿ ೧೦-೦೦ ಗಂಟೆಗೆ ಮರಳಿ ಠಾಣೆಗೆ ಬಂದು ಈ ಮೇಲ್ಕಂಡ ಪ್ರತಿವಾದಿಗಳ ವಿರುದ್ದ ಸರ್ಕಾರದ ಪರವಾಗಿ ನಾನು ಹೊಸಹಳ್ಳಿ ಠಾಣೆಯ ಗುನ್ನೆ ನಂ ೧೯೩/೨೦೧೫ ಕಲಂ ೧೦೭ ಸಿ.ಆರ್.ಪಿ.ಸಿ ರಿತ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ. | ||||||||||||||||
Hospet Extention PS | ||||||||||||||||
12 | Cr.No:0052/2015 (KARNATAKA POLICE ACT, 1963 U/s 87 ) |
25/10/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ಈ ದಿನ ದಿನಾಂಕ:-25/10/2015 ರಂದು ರಾತ್ರಿ 08-00 ಗಂಟೆಗೆ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಬಂದು ದೂರಿನೊಂದಿಗೆ 4 ಜನ ಆರೋಪಿತರು ನಗದು ಹಣ ರೂ-2820/- ಹಾಗು 52 ಇಸ್ಪಿಟ್ ಎಲೆಗಳನ್ನು ನೀಡಿದನ್ನು ಪಡೆದಿದ್ದು,ದೂರಿನ ಸಾರಾಂಶ ಏನೆಂದರೆ ಪಿ.ಎಸ್ೈ(ಕಾ.ಸು) ಮತ್ತು ಪಿ.ಸಿಸ್-1044,1204 ರವರೋಂದಿಗೆ ಎಂ.ಜೆ.ನಗರದಲ್ಲಿ ಸಂಜೆ 5-45 ಗಂಟೆಗೆ ಗಸ್ತು ಪರಿಶಿಲನೆಯಲ್ಲಿದ್ದಾಗ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎ.ಎಸ್.ಐ ಗಡಗಡೆ ರವರನ್ನು ಸಹ ದಾಳಿಗೆ ಬಲ್ಡೋಟಾ ರವರ ಮನೆಯ ಹತ್ತಿರ ಕರೆಯಿಸಿಕೊಂಡು ಇಬ್ಬರು ಪಂಚರನ್ನು ಸಹ ಪಿ.ಸಿ-1204 ರವರ ಸಂಗಡ ಬರಮಾಡಿಕೊಂಡು ಖಚಿತ ಮಾಹಿತಿಯಂತೆ ಅಂದರ್ ಬಾಹರ್ ಇಸ್ಪಿಟ್ ಜೂಜಾಟದಲ್ಲಿ ವೆಲ್ ಕಂ ಸರ್ವಿಸ್ ಸೆಂಟರ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿಮಾಡಲು ಮಾನ್ಯ ಸಿ.ಪಿ.ಐ ಹಾಗೂ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ಪಂಚರೋಂದಿಗೆ ದಾಳಿಮಾಡಿದ್ದು,4 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಅವರನ್ನು ಒಬ್ಬಬ್ಬರನ್ನಾಗಿ ವಿಚಾರಿಸಲು 1)ರಾಘವೇಂದ್ರ ತಂದೆ ಲೇಟ್ ಗೋಪಾಲ್ ರಾವ್,37 ವರ್ಷ ,ಬ್ರಾಹ್ಮಣ ಜನಾಂಗ ,ಚಾಲಕ ವೃತ್ತಿ,ವಾಸ:-ವಾಲ್ಮಿಕಿ ಸರ್ಕಲ್ ಹತ್ತಿರ ,32 ವಾರ್ಡ,ಕೋಟೆ ಹೊಸಪೇಟೆ 2)ಅರ್.ಟಿ.ವಿರುಪಾಕ್ಷಪ್ಪ ತಂದೆ ಲೇಟ್ ತಿಪ್ಪೆ ಸ್ವಾಮಿ ,40 ವರ್ಷ, ಪದ್ಮಶಾಲಿ ಜನಾಂಗ ವಾಸ:31 ನೇ ವಾರ್ಡ ಬಿ.ಟಿ.ಅರ್ ನಗರ ಹೊಸಪೇಟೆ 3)ಮೋಹನ ತಂದೆ ಚಿದಾನಂದ,ವರ್ಷ-30,ಶೇಟ್ಟಿ ಬಲಜಿಗ ಜನಾಂಗ,ವಾಸ:-31 ವಾರ್ಡ್ ಹುಕ್ಕಡಕೇರಿ,ಹೊಸಪೇಟೆ 4)ಕೆ.ಈಶ್ವರ ತಂದೆ ಹನುಮಂತಪ್ಪ 38 ವರ್ಷ,ವಾಲ್ಮಿಕಿ ಜನಾಂಗ,ವಾಸ:-ವಾಲ್ಮಿಕಿ ಸರ್ಕಲ್ ಹತ್ತಿತ ತಳವಾರ ಕೇರಿ ಹೊಸಪೇಟೆ ಅಂತಾ ತಿಳಿಸಿದ್ದು ಅರೋಪಿತರ ಬಳಿಯಿದ್ದ ಮತ್ತು ಕಣದಲ್ಲಿ ಇದ್ದ್ ಹಣ ಎಲ್ಲಾ ಒಟ್ಟು ರೂ-2820/- ಮತ್ತು 52 ಇಸ್ಪಿಟ್ ಎಲೆಗಳನ್ನು ಸಂಜೆ 6-30 ರಿಂದ 7-30 ಗಂಟೆಯ ವರೆಗೆ ಪಂಚನಾಮೆ ಕೈಗೊಂಡು ಆರೋಪಿ ಸಮೇತ ಠಾಣೆಗೆ ಕರೆತಂದು ಹಾಜರು ಪಡಿಸಿ ಸದರಿಯವರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. | |||||||||||||||
Hospet Rural PS | ||||||||||||||||
13 | Cr.No:0155/2015 (IPC 1860 U/s 337 ) |
25/10/2015 | Under Investigation | |||||||||||||
MOTOR VEHICLE ACCIDENTS NON-FATAL - Other Places | ||||||||||||||||
Brief Facts : | ದಿನಾಂಕ:25/10/2015 ರಂದು ಬೆಳಿಗ್ಗೆ 10-30 ಗಂಟೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಎಂ.ಎಲ್.ಸಿ. ಮಾಹಿತಿ ಮೇರೆಗೆ ಹೋಗಿ ಗಾಯಾಳು ರುದ್ರಪ್ಪನ ಹೇಳಿಕೆ ಪಡೆದಿದ್ದು ಸಾರಾಂಶ ದಿನಾಂಕ:25/10/2015 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಪಿರ್ಯಾದಿಯು ಸಂಕ್ಲಾಪುರ ಗ್ರಾಮದ ಬಸಪ್ಪನ ಹೊಲದಲ್ಲಿ ಬದುವು ಕೆತ್ತುವ ಕೂಲಿ ಕೆಲಸವನ್ನು ಮಾಡುತ್ತಿದ್ದಾಗ ಟ್ರಾಕ್ಟರ್ ನಂ: ಕೆ.ಎ:35/ಟಿಎ:0239 ರ ಚಾಲಕ ಎನ್. ಸ್ವಾಮಿ ವಾಸ:- ಸಂಕ್ಲಾಪುರ ಗ್ರಾಮ, ಹೊಸಪೇಟೆ ಈತನು ಅದೇ ಹೊಲದಲ್ಲಿ ತನ್ನ ಟ್ರಾಕ್ಟರ್ ಮುಖಾಂತರ ಹೊಲವನ್ನು ಕಲ್ಟಿವೇಟರ್ ಹೊಡೆಯುತ್ತಿದ್ದಾಗ ತನ್ನ ಟ್ರಾಕ್ಟರ್ ನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷತೆಯಿಂದ ನಡೆಸಿ ಕೊಂಡು ಬಂದು ಹೊಲದ ಬದುವಿನಲ್ಲಿ ಬಗ್ಗಿ ಹುಲ್ಲನ್ನು ಕೆತ್ತುತ್ತಿದ್ದ ತನಗೆ ಬಲವಾಗಿ ಡಿಕ್ಕಿಪಡಿಸಿ ಅಪಘಾತಪಡಿಸಿದ್ದರಿಂದ ಸೊಂಟಕ್ಕೆ ಹಾಗು ಇತರ ಕಡೆಗೆ ಒಳನೋವು ಆಗಿರುತ್ತದೆ ಎಂದು ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ. | |||||||||||||||
Hospet Town PS | ||||||||||||||||
14 | Cr.No:0209/2015 (KARNATAKA POLICE ACT, 1963 U/s 87 ) |
25/10/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 25/10/2015 ರಂದು ಮಾನ್ಯ ಡಿ.ಎಸ್.ಪಿ. ಸಾಹೇಬರು ಮತ್ತು ಪಿ.ಐ. ಸಾಹೇಬರ ಮಾರ್ಗದರ್ಶನದಂತೆ ರಾತ್ರಿ 6-45 ಗಂಟೆಗೆ ಶ್ರೀ, ಸಾಯಿಬಣ್ಣ, ಪಿ.ಎಸ್.ಐ. (ಕಾ&ಸು) ಪಟ್ಟಣ ಠಾಣೆ, ಹೊಸಪೇಟೆ ರವರು ಠಾಣೆಯಲ್ಲಿ ಹಾಜರಾಗಿ ದೂರು, ದೂರಿನೊಂದಿಗೆ ಪಂಚನಾಮೆ, ಪಂಚನಾಮೆಯಲ್ಲಿ ನಮೂದಿಸಿದ ಮುದ್ದೇಮಾಲು ಮತ್ತು ಆರೋಪಿತರನ್ನು ಹಾಜರುಪಡಿಸಿದ್ದು, ಸದರಿ ದೂರು ಸಾರಾಂಶ ನಾನು, ಎ.ಎಸ್.ಐ, ಶ್ರೀ,ಲಾಲೆಪ್ಪ, ಕುಮಾರ್ ಪಿಸಿ- ಪಿಸಿ-526, 1094, 1015, 191 ರವರುಗಳು ಮತ್ತು , ಚಾಲಕ ಎ.ಪಿ.ಸಿ-194 ರವರೊಂದಿಗೆ ಮತ್ತು ಪಂಚರೊಂದಿಗೆ ಸಿದ್ದಾರ್ಥ ಹೊಟೇಲ್ ಹಿಂದೆ ಬಸವಣ್ಣ ಕಾಲುವೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ನಸೀಬಿನ ಇಸ್ಪೇಟ್ | |||||||||||||||
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ 1) ಸುರೇಶ್ ಬಾಬು 2) ಎಂ. ರಮೇಶ್ 3) ಸಂಜು 4) ರವಿಕಾಂತ 5) ಕೆ. ಮಲ್ಲಿ 6) ವಸಂತ 7) ಗೌಡ 8) ಇರ್ಪಾನ್ ರಫೀಕ್ ರವರುಗಳನ್ನು ಹಿಡಿದುಕೊಂಡು ಇವರಿಂದ ದೊರೆತ ಎಲ್ಲಾ ಹಣ ಒಟ್ಟು ರೂ. 27,200/- ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ 2 ಮೊಬೈಲ್ ಗಳು, ಒಟ್ಟು ಬೆಲೆ ರೂ,300/-, ಇವುಗಳನ್ನು ಪಂಚರ ಸಮಕ್ಷಮ ರಾತ್ರಿ 7-05 ಗಂಟೆಯಿಂದ 8-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಪಡಿಸಿಕೊಂಡು, ಆರೋಪಿತರ ಸಮೇತ ವಾಪಾಸ್ ಠಾಣೆಗೆ ಬಂದು ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ. | ||||||||||||||||
Kamalapur PS | ||||||||||||||||
15 | Cr.No:0091/2015 (IPC 1860 U/s 279,337 ) |
25/10/2015 | Under Investigation | |||||||||||||
MOTOR VEHICLE ACCIDENTS NON-FATAL - Other Roads | ||||||||||||||||
Brief Facts : | ಈ ದಿನ ದಿನಾಂಕ: 25/10/2015 ರಂದು ಬೆಳಿಗ್ಗೆ 11-30 ಗಂಟೆಗೆ ಮಲಪನಗುಡಿ ಸರ್ಕಾರಿ ಆಸ್ಪತ್ರೆಯಿಂದ ದೂರವಾಣಿ ಕರೆ ಬಂದ ಮೇರೆಗೆ ಬೆಳಿಗ್ಗೆ 11-15 ಗಂಟೆಗೆ ಸದರಿ ಆಸ್ಪತ್ರಗೆ ಬೇಟಿ ನೀಡಿ ಫಿರ್ಯಾದಿದಾರರ ನೀಡಿದ ಹೇಳಿಕೆ ದೂರಿನ ಸಾರಾಂಶ: ಫಿರ್ಯಾದಿದಾರರು ಮತ್ತು ಇತರರು ಆಟೋ ನಂಬರ್ ಕೆ.ಎ 35 ಎ 4881 ನೇದ್ದರಲ್ಲಿ ಬೆಳಿಗ್ಗೆ 10-00 ಗಂಟೆಗೆ ಕಮಲಾಪುರದಿಂದ ಪಿ.ಕೆ ಹಳ್ಳಿಗೆ ಹೊರಟ್ಟಿದ್ದು, ಕಮಲಾಪುರ-ಪಿ.ಕೆ ಹಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಹೆಚ್.ಎಲ್.ಸಿ ಕಾಲುವೆಯ ತಿರುವಿನ ಬಳಿ ಬೆಳಿಗ್ಗೆ ಅಂದಾಜು 10-30 ಗಂಟೆ ಸಮಯದಲ್ಲಿ ಪಿ.ಕೆ ಹಳ್ಳಿ ಕಡೆಯಿಂದ ಟ್ರ್ಯಾಕ್ಸ್ ನಂಬರ್ ಕೆ.ಎ 35 ಬಿ 3287 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ಆಟೋ ಮತ್ತು ಟ್ರ್ಯಾಕ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೂ ಗಾಯಾಗಳಾಗಿ ವಾಹನಗಳ ಜಖಂಗೊಂಡಿರುತ್ತವೆ. ಈ ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಸ್ ಚಾಲಕನಾದ ಬಿ ಇಮಾಮ್ ವಲಿ ರವರ ಮೇಲೆ ಸೂಕ್ತ ಕ್ರಮ ಜರುಗಿಸಲು ದೂರು ಇದ್ದ ಮೇರೆಗೆ ಪ್ರ. ವ ವರದಿ | |||||||||||||||
Kudligi PS | ||||||||||||||||
16 | Cr.No:0179/2015 (IPC 1860 U/s 418,420,506(2),504 ) |
26/10/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಪಿರ‍್ಯಾದುದಾರರು ಕೂಡ್ಲಿಗಿ ಪಟ್ಟಣದ ವಾಸಿಯಾಗಿದ್ದು ಕೂಡ್ಲಿಗಿ-ಸಂಡೂರು ರಸ್ತೆಯಲ್ಲಿ ಹತ್ತಿರ ವಿರುವ ಸರ್ವೇನಂಬರ್ ೭೧೭-ಎ/೧ ರಲ್ಲಿಯ ೪.೩೩ ಎಕರೆ ಜಮೀನಿನಲ್ಲಿ ೧.೫೦ ಎಕರೆ ಜಮೀನು ಪಿರ‍್ಯಾದುದಾರರ ಗಂಡನ ಭಾಗಕ್ಕೆ ಬಂದಿದ್ದು ಹಾಲಿ ಅವರ ಅನುಭೋಗದಲ್ಲಿಯೇ ಇದ್ದು ಇದು ಕೂಡ್ಲಿಗಿ ಪಟ್ಟಣಕ್ಕೆ ಹತ್ತಿರದಲ್ಲಿಯೇಇದ್ದುದರಿಂದ ಇದು ಬೆಲೆಯುಳ್ಳ ಆಸ್ತಿಯಾಗಿದ್ದು ಪಿರ‍್ಯಾದುದಾರರ ಗಂಡನು ತೀರಿಕೊಂಡ ನಂತರ ಪಿರ‍್ಯಾದುದಾರರಿಗೆ ಇದರ ಮಾಲೀಕತ್ವ ಇದ್ದು ಆರೋಪಿಗಳು ಪಿರ‍್ಯಾದುದಾರರಿಗೆ ಗೋತ್ತಾಗದ ಆಗೆ ಪಿರ‍್ಯಾದುದಾರರಿಗೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನಕಲಿ ಸಹಿ ಮಾಡಿ ಆರೋಪಿಗಳು ಮೋಟೇಶನ್ ಮಾಡಿಸಿಕೊಂಡಿದ್ದು ಪಿರ‍್ಯಾದುದಾರರಿಗೆ ಈ ವಿಷಯ ಗೋತ್ತಾದ ಮೇಲೆ ಈ ಬಗ್ಗೆ ಪಿರ‍್ಯಾದುದಾರರು ಮಾನ್ಯ ಸಹಾಯಕ ಆಯುಕ್ತರು ಹೊಸಪೇಟೆ ನ್ಯಾಯಾಲಯದಲ್ಲಿ ಪ್ರಶ್ನೀಸಿದ್ದು ಈ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ಹೋಗಿ ಪರಿಹರಿಸಿಕೊಳ್ಳಲು ಸೂಚಿಸಿದ ಮೇರೆಗೆ ಹಾಲಿ ಪ್ರಕರಣ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ಇದ್ದು ಆರೋಪಿಗಳು ಸದ್ರಿ ಆಸ್ತಿಯಲ್ಲಿರುವ ಹುಣಿಸೆ ಮರಳನ್ನು ಕಡೆಯುತ್ತಿರುವಾಗ ಪಿರ‍್ಯಾದುದಾರರು ಹಾಲಿ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು ಅದಕ್ಕೆ ಆರೋಪಿಗಳು ದುಬಾರ್ಷಗಳಿಂದ ಬೈಯ್ದಾಡಿ ಕೊಡಲಿಯಿಂದ ನಿನ್ನನ್ನು ಹೊಡೆದು ಸಾಯಿಸುವುದಾಗಿ ಕೊಡಲಿಯನ್ನು ತೋರಿಸಿಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ಪಿರ‍್ಯಾದುದಾರರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ಪಿ.ಸಿ ನಂಬರ್ ೨೨/೨೦೧೫ರಲ್ಲಿ ನೊಂದಾಯಿಸಿಕೊಂಡು ಸದ್ರಿ ಖಾಸಗಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನೀಡಿದ ಆದೇಶದ ಮೇಮೋವನ್ನು ನ್ಯಾಯಾಲಯದ ಕರ್ತವ್ಯಕ್ಕೆ ಹೋಗಿದ್ದ ಠಾಣೆಗೆ ಹೆಚ್.ಸಿ ಮೈನುದ್ದೀನ್‌ರವರ ಠಾಣೆಯಲ್ಲಿ ಂದುಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Sirigeri PS | ||||||||||||||||
17 | Cr.No:0158/2015 (KARNATAKA POLICE ACT, 1963 U/s 78(III) ) |
26/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ಪಿಎಸ್ ಐರವರು ದಿನಾಂಕಃ 20/10/2015 ರಂದು ಸಂಜೆ 05:00 ಗಂಟೆಗೆ ಠಾಣೆಯಲ್ಲಿದ್ದಾಗ ಸಿದ್ದರಾಂಪುರ ಗ್ರಾಮದ ಬಸವಣ್ಣ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ-ಜೂಜಾಟ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ನಾನು ಸಿಬ್ಬಂದಿ ಪಿಸಿ-1223 ರವರಿಂದ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ನಾನು ಮತ್ತು ಸಿಬ್ಬಂದಿಯವರಾದ ಪಿಸಿ-638.1223.709 ರವರು ಮತ್ತು ಪಂಚರೊಂದಿಗೆ ಇಲಾಖಾ ಜೀಪ್ ನಂಕೆಎ34/ಜಿ269 ನೇದ್ದರಲ್ಲಿ ಸಂಜೆ 05.15 ಗಂಟೆಗೆ ಬಿಟ್ಟು ಸಂಜೆ 05.30 ಗಂಟೆಗೆ ಸಿದ್ದರಾಂಪುರ ಗ್ರಾಮಕ್ಕೆ ಹೋಗಿ ಬಸವಣ್ಣ ಗುಡಿಯಿಂದ ಸ್ವಲ್ಪ ದೂರದಲ್ಲಿ ನಾವಿದ್ದ ಜೀಪ್ನ್ನು ಮರೆಯಾಗಿ ನಿಲ್ಲಿಸಿ ಮರೆಯಾಗಿ ನೋಡಲು ಬಸವಣ್ಣ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದ ಹತ್ತಿರ ಜನರು ಗುಂಪಾಗಿ ಕೂಡಿಕೊಂಡಿದ್ದು, ಒಬ್ಬ ವ್ಯಕ್ತಿ ಜನರನ್ನು ಕೂಗಿ 1 ರೂಪಾಯಿ ಕಟ್ಟಿದರೆ 80 ರೂಪಾಯಿಗಳನ್ನು ಕೊಡುತ್ತೇವೆ, ಇದು ನಸೀಬಿನ ಮಟ್ಕಾ ಜೂಜಾಟ ಬನ್ನಿರಿ ಆಡಿರಿ ಎಂದು ಸಾರ್ವಜನಿಕರನ್ನು ಕೂಗಿ ಕರೆದು ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನ್ನು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಗಳು ಸೇರಿ ಪಂಚರ ಸಮಕ್ಷಮ ಮಟ್ಕಾ-ಜೂಜಾಟ ನಡೆಸುತ್ತಿದ್ದವನ ಮೇಲೆ | |||||||||||||||
ದಾಳಿಮಾಡಲಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ರಾಚಯ್ಯಸ್ವಾಮಿ ತಂದೆ ಸಿದ್ದರಾಮಯ್ಯಸ್ವಾಮಿ, 45ವರ್ಷ, ಜಂಗಮರ ಜನಾಂಗ, ವ್ಯವಸಾಯ ಕೆಲಸ, ವಾಸ:-ಸಿದ್ದರಾಂಪುರ ಗ್ರಾಮ ಎಂದು ತಿಳಿಸಿದನು, ಈತನ ಅಂಗ ಶೋದನೆ ಮಾಡಲು ಈತನ ಬಳಿ ಒಂದು ಮಟ್ಕಾ ಪಟ್ಟಿ, ಒಂದು ಬಾಲ್ ಪೆನ್ನು , ನಗದು ಹಣ 550/- ರೂಪಾಯಿಗಳು ಇದ್ದವು. ಸದರಿ ಮಟ್ಕಾ ಜೂಜಾಟದಿಂದ ದೊರೆತ ಒಟ್ಟು ನಗದು ಹಣ ರೂ 550/-ರೂಗಳು ಒಂದು ಮಟ್ಕಾ ಪಟ್ಟಿ, ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ವಿವರವಾದ ಪಂಚನಾಮೆಯೊಂದಿಗೆ ಜಪ್ತುಪಡಿಸಿಕೊಂಡು ಸಿಕ್ಕಿ ಬಿದ್ದ ರಾಚಯ್ಯಸ್ವಾಮಿ ತಂದೆ ಸಿದ್ದರಾಮಯ್ಯಸ್ವಾಮಿ ಇವರೊಂದಿಗೆ ರಾತ್ರಿ 07:00 ಗಂಟೆಗೆ ಠಾಣೆಗೆ ಬಂದು ಮೇಲ್ಕಂಡ ವ್ಯಕ್ತಿಗಳ ವಿರುದ್ಧ ಮುಂದಿನ ಕ್ರಮ ಜರುಗಿಸಲು ಠಾಣಾಧಿಕಾರಿಗಳಿಗೆ ಸೂಚಿಸಿದ ಮೇರೆಗೆ ಠಾಣಾ ಎನ್ ಸಿ11/15ರಲ್ಲಿ ನೊಂದಾಯಿಸಿ ಮಾನ್ಯ ನ್ಯಾಯಾಲಯದಲ್ಲಿ ಮುಂದಿನ ತನಿಕೇ ಕೈಗೊಳ್ಳಲು ಪರವಾನಗೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ | ||||||||||||||||
18 | Cr.No:0159/2015 (KARNATAKA POLICE ACT, 1963 U/s 78(III) ) |
26/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ನಾನು ದಿನಾಂಕಃ 20/10/2015 ರಂದು ರಾತ್ರಿ 07:15 ಗಂಟೆಗೆ ಠಾಣೆಯಲ್ಲಿದ್ದಾಗ, ಎಂ ಸೂಗೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ-ಜೂಜಾಟ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ನಾನು ಸಿಬ್ಬಂದಿ ಹೆಚ್,ಸಿ-339. ರವರಿಂದ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ನಾನು ಮತ್ತು ಸಿಬ್ಬಂದಿಯವರಾದ ಹೆಚ್,ಸಿ-339. ಪಿಸಿ-685.709 ರವರು ಮತ್ತು ಪಂಚರೊಂದಿಗೆ ಇಲಾಖಾ ಜೀಪ್ ನಂಕೆಎ34/ಜಿ269 ನೇದ್ದರಲ್ಲಿ ರಾತ್ರಿ 07:30 ಗಂಟೆಗೆ ಬಿಟ್ಟು ರಾತ್ರಿ 8:00 ಗಂಟೆಗೆ ಎಂ, ಸೂಗೂರು ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ನಾವಿದ್ದ ಜೀಪ್ನ್ನು ಮರೆಯಾಗಿ ನಿಲ್ಲಿಸಿ ಮರೆಯಾಗಿ ನೋಡಲು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಗುಂಪಾಗಿ ಕೂಡಿಕೊಂಡಿದ್ದು, ಒಬ್ಬ ವ್ಯಕ್ತಿ ಜನರನ್ನು ಕೂಗಿ 1 ರೂಪಾಯಿ ಕಟ್ಟಿದರೆ 80 ರೂಪಾಯಿಗಳನ್ನು ಕೊಡುತ್ತೇವೆ, ಇದು ನಸೀಬಿನ ಮಟ್ಕಾ ಜೂಜಾಟ ಬನ್ನಿರಿ ಆಡಿರಿ ಎಂದು ಸಾರ್ವಜನಿಕರನ್ನು ಕೂಗಿ ಕರೆದು ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಗಳು ಸೇರಿ ಪಂಚರ ಸಮಕ್ಷಮ ಮಟ್ಕಾ-ಜೂಜಾಟ ನಡೆಸುತ್ತಿದ್ದವನ ಮೇಲೆ ದಾಳಿಮಾಡಲಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಒಬ್ಬ ವ್ಯಕ್ತಿ ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ಕಲ್ದಾರ್ ವಿರೇಶ್ ತಂದೆ ದೊಡ್ಡಬಸಪ್ಪ, 40ವರ್ಷ, ಕಬ್ಬೇರ ಜನಾಂಗ, ವ್ಯವಸಾಯ ಕೆಲಸ, ವಾಸ: ಎಂ,ಸೂಗೂರು ಗ್ರಾಮ ಎಂದು ತಿಳಿಸಿದನು, ಈತನ ಅಂಗ ಶೋದನೆ ಮಾಡಲು ಈತನ ಬಳಿ ಒಂದು ಮಟ್ಕಾ ಪಟ್ಟಿ, ಒಂದು ಬಾಲ್ ಪೆನ್ನು , ನಗದು ಹಣ 2800/- ರೂಪಾಯಿಗಳು ಇದ್ದವು, ಈತನಿಗೆ ಸದರಿ ಮಟ್ಕಾ ಪಟ್ಟಿಯ ಬಗ್ಗೆ ವಿಚಾರಿಸಲು ಮಟ್ಕಾಪಟ್ಟಿಯನ್ನು ಗಾಧಿಲಿಂಗಪ್ಪ ವಾಸ:ರುದ್ರಪಾದ ಗ್ರಾಮ ಈತನಿಗೆ ಕೊಡುತ್ತೇನೆಂದು ತಿಳಿಸಿದನು, ಸದರಿ ಮಟ್ಕಾ ಜೂಜಾಟದಿಂದ ದೊರೆತ ಒಟ್ಟು ನಗದು ಹಣ ರೂ 2800/-ರೂಗಳು, ಒಂದು ಮಟ್ಕಾ ಪಟ್ಟಿ, ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ವಿವರವಾದ ಪಂಚನಾಮೆಯೊಂದಿಗೆ ಜಪ್ತುಪಡಿಸಿಕೊಂಡು, ಸಿಕ್ಕಿ ಬಿದ್ದ ಕಲ್ದಾರ್ ವಿರೇಶ್ ತಂದೆ ದೊಡ್ಡಬಸಪ್ಪ ಇವರೊಂದಿಗೆ ಠಾಣೆಗೆ ರಾತ್ರಿ 09:30 ಗಂಟೆಗೆ ಬಂದು ಮೇಲ್ಕಂಡ ವ್ಯಕ್ತಿಗಳ ವಿರುದ್ಧ ಮುಂದಿನ ಕ್ರಮ ಜರುಗಿಸಲು ಠಾಣಾಧಿಕಾರಿಗಳಿಗೆ ಜ್ಞಾಪನವನ್ನು ಪಡೆದುಕೊಂಡು ಠಾಣಾ ಎನ್ ಸಿ ನಂ-12/2015 ನೇದ್ದರಲ್ಲಿ ಧಾಖಲಿಸಿಕೊಂಡು ನಂತರ ಪ್ರಕರಣ ಧಾಖಲಿಸಲು ಮಾನ್ಯನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಗುನ್ನೆ ನಂ-159/15 ಕಲಂ-78(3) ರಿತ್ಯ ಪ್ರಕರಣವನ್ನು ಧಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ. | |||||||||||||||
Siruguppa PS | ||||||||||||||||
19 | Cr.No:0221/2015 (MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 ) |
26/10/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಈ ದಿನ ದಿನಾಂಕ 26-10-2015 ರಂದು ಬೆಳಿಗ್ಗೆ 5-00 ಗಂಟೆಗೆ ಠಾಣೆಗೆ ಬಂದು ಪಿಸಿ 128,896 ರವರನ್ನು ಕರೆದುಕೊಂಡು ಗುಡ್ ಮಾನರ್ಿಂಗ್ ಬೀಟ್ ಕರ್ತವ್ಯಕ್ಕೆ ಹೊರಟಿದ್ದು ಪಟ್ಟಣದ ಪ್ರಮಖ ಏರಿಯಾಗಳಾದ ದೇಶನೂರು ರಸ್ತೆ, ಸದಾಶಿವನಗರ,ಪಾರ್ವತಿನಗರ ಗಸ್ತು ಕರ್ತವ್ಯ ಮುಗಿಸಿಕೊಂಡು ಸಿಂಧನೂರು ರಸ್ತೆ ಕಡೆ ಹೋಗುತ್ತಿರುವಾಗ ಬೆಳಿಗ್ಗೆ 6-30 ಎ.ಎವಂ ಗಂಟೆಯ ಸಮಯದಲ್ಲಿ ಸಿಂಧನೂರು ರಸ್ತೆಯ ಕಡೆಯಿಂದ ಬರುತ್ತಿದ್ದ ಎರಡು ಮರಳು ತುಂಬಿದ ಟ್ರಾಕ್ಟರಗಳನ್ನು ರಿಲಾಯಿನ್ಸ್ ಪೆಟ್ರೊಲ್ ಬಂಕ್ ಹತ್ತಿರ ಕೈ ಮಾಡಿ ನಿಲ್ಲಸಿ ಇಬ್ಬರು ಟ್ರಾಕ್ಟರ್ ಚಾಲಕರಿಗೆ ಟ್ರಾಲಿಯಲ್ಲಿ ತುಂಬಿದ್ದ ಮರಳಿನ ಪರವಾನಿಗೆ ದಾಖಲಾತಿಗಳ ಬಗ್ಗೆ ಕೇಳಲು ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಬೆಳಿಗ್ಗೆ 6-45 ಎ.ಎಂ ಗಂಟೆಗೆ ಸದರಿ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಟ್ರಾಕ್ಟರ್ ಚಾಲಕರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು ಹೆಸರು ನಾಗರಾಜ ತಂದೆ ಶಿವಪ್ಪ ವ: 20 ವರ್ಷ ನಾಯಕರು ವಾಸ:ಬಾಗೇವಾಡಿ ಗ್ರಾಮ ಕೆಂಪು ಬಣ್ಣದ ಮಹಿಂದ್ರ ಕಂಪನಿಯ 275ಡಿ-1 ಕೆ.ಎ 34 ಟಿ.ಎ 1574 ನೇದ್ದರ ಚಾಲಕ ಕೆಂಪು ಬಣ್ಣದ ಮರಳು ತುಂಬಿದ ಟ್ರಾಲಿ ನಂಬರ್ ಕಂಡು ಬಂದಿರುವುದಿಲ್ಲ ಇನ್ನೊಬ್ಬ ಚಾಲಕನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು ಮಂಜುನಾಥ ತಂದೆ ದ್ಯಾವಣ್ಣ ವ: 30ವರ್ಷ ಕುರಬರು ವಾಸ:04ನೇ ವಾರ್ಡ ರಾರಾವಿ ಗ್ರಾಮ ಪು ಬಣ್ಣದ ಮಹಿಂದ್ರ ಕಂಪನಿಯ 275ಡಿ-1 ಕೆ.ಎ 34 ಟಿ. 6943 ನೇದ್ದರ ಚಾಲಕ ಹಸಿರು ಬಣ್ಣದ ಮರಳು ತುಂಬಿದ ಟ್ರಾಲಿ ನಂಬರ್ ಕೆ.ಎ 34 ಟಿ 6811 ಟ್ರಾಕ್ಟರ್ ಟ್ರಾಲಿಗಳಲ್ಲಿ ಅಕ್ರಮವಾಗಿ ಮರಳು ತುಂಬಿದ್ದ ತಲಾ ಮರಳು ಬೆಲೆ ಅಂದಾಜು ರೂ 1000/-ಗಳು ಒಟ್ಟು 2000/-ಗಳಾಗಬಹುದು.ಈ ಬಗ್ಗೆ ಯಾವುದೇ ರೀತಿ ಅಧಿಕೃತ ದಾಖಲಾತಿಗಳು ಇಲ್ಲದೇ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ | |||||||||||||||
ಟ್ರಾಕ್ಟ್ರರಗಳಲ್ಲಿ ಸಾಗಾಟ ಮಾಡುತ್ತಿದ್ದುಕಂಡು ಬಂದಿದ್ದು ಸದರಿ ಮರಳು ತುಂಬಿದ ಎರಡು ಟ್ರಾಕ್ಟರ ಮತ್ತು ಟ್ರಾಲಿಗಳನ್ನು ಪಂಚನಾಮೇಯ ಮೂಲಕ ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ 8-15 ಎ.ಎಂ ಗಂಟೆಗೆ ಹಿಂತಿರುಗಿ ಅಕ್ರಮ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿ ಮತ್ತು ಇಬ್ಬರು ಚಾಲಕರ ವಿರುದ್ದ ಎಂ.ಎಂ.ಆರ್.ಡಿ ಯ್ಯಾಕ್ಟ್ 21(1) ರೆ.ವಿ 379 ಐ.ಪಿ.ಸಿ ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | ||||||||||||||||
20 | Cr.No:0222/2015 (MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 ) |
26/10/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಈ ದಿನ ದಿನಾಂಕ 26-10-2015 ರಂದು ಬೆಳಿಗ್ಗೆ ಠಾಣೆಯಿಂದ ಪಿಸಿ 128,896 ರವರನ್ನು ಕರೆದುಕೊಂಡು ಗುಡ್ ಮಾನರ್ಿಂಗ್ ಬೀಟ್ ಕರ್ತವ್ಯಕ್ಕೆ ಹೊರಟಿದ್ದು ಸಿಂಧನೂರು ರಸ್ತೆ ಕಡೆ ಹೋಗುತ್ತಿರುವಾಗ ಬೆಳಿಗ್ಗೆ 8-45 ಎ.ಎಂ ಗಂಟೆಯ ಸಮಯದಲ್ಲಿ ಸಿಂಧನೂರು ರಸ್ತೆಯ ಕಡೆಯಿಂದ ಬರುತ್ತಿದ್ದ ಎರಡು ಮರಳು ತುಂಬಿದ ಟ್ರಾಕ್ಟರಗಳನ್ನು ಅಂಕಲಿಮಠದ ಹತ್ತಿರ ಕೈ ಮಾಡಿ ನಿಲ್ಲಸಿ ಇಬ್ಬರು ಟ್ರಾಕ್ಟರ್ ಚಾಲಕರಿಗೆ ಟ್ರಾಲಿಯಲ್ಲಿ ತುಂಬಿದ್ದ ಮರಳಿನ ಪರವಾನಿಗೆ ದಾಖಲಾತಿಗಳ ಬಗ್ಗೆ ಕೇಳಲು ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಬೆಳಿಗ್ಗೆ ಎ.ಎಂ 9-00 ಎ.ಎಂ ಗಂಟೆಗೆ ಸದರಿ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಟ್ರಾಕ್ಟರ್ ಚಾಲಕರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು ಹೆಸರು ಶ್ರೀಶೈಲ ತಂದೆ ವೆಂಕಟೇಶ ವ: 25 ವರ್ಷ ಹಜಾಮರು ವಾಸ:21ನೇ ವಾರ್ಡ ಹುಚ್ಚಿರಪ್ಪ ಗುಡಿ ಹತ್ತಿರ ಸಿರುಗುಪ್ಪ ಕೆಂಪು ಬಣ್ಣದ ಮಹಿಂದ್ರ ಕಂಪನಿಯ 475ಡಿ-1 ಕೆ.ಎ 34 ಟಿ.ಎ 0373 ನೇದ್ದರ ಚಾಲಕ ಕೆಂಪು ಬಣ್ಣದ ಮರಳು ತುಂಬಿದ ಟ್ರಾಲಿ ನಂಬರ್ ಕಂಡು ಬಂದಿರುವುದಿಲ್ಲ ಇನ್ನೊಬ್ಬ ಚಾಲಕನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು ದುರಗಪ್ಪ ತಂದೆ ಮಲ್ಲಿ ವ:20 ವರ್ಷ ನಾಯಕರು ವಾಸ:03ನೇ ವಾರ್ಡ ಬಾಗೇವಾಡಿ ಗ್ರಾಮ ಕೆಂಪು ಬಣ್ಣದ ಮಹಿಂದ್ರ ಕಂಪನಿಯ 475ಡಿ-1 ಕೆ.ಎ 34 ಟಿ. ಎ 1064 ನೇದ್ದರ ಚಾಲಕ ಕೆಂಪು ಬಣ್ಣದ ಮರಳು ತುಂಬಿದ ಟ್ರಾಲಿ ನಂಬರ್ ಕಂಡುಬಂದಿರುವುದಿಲ್ಲ. ಟ್ರಾಕ್ಟರ್ ಟ್ರಾಲಿಗಳಲ್ಲಿ ಅಕ್ರಮವಾಗಿ ಮರಳು ತುಂಬಿದ್ದ ತಲಾ ಮರಳು ಬೆಲೆ ಅಂದಾಜು ರೂ 1000/-ಗಳು ಒಟ್ಟು 2000/-ಗಳಾಗಬಹುದು.ಈ ಬಗ್ಗೆ ಯಾವುದೇ ರೀತಿ ಅಧಿಕೃತ ದಾಖಲಾತಿಗಳು ಇಲ್ಲದೇ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಟ್ರಾಕ್ಟ್ರರಗಳಲ್ಲಿ ಸಾಗಾಟ ಮಾಡುತ್ತಿದ್ದುಕಂಡು ಬಂದಿದ್ದು ಸದರಿ ಮರಳು ತುಂಬಿದ ಎರಡು ಟ್ರಾಕ್ಟರ ಮತ್ತು ಟ್ರಾಲಿಗಳನ್ನು ಪಂಚನಾಮೇಯ ಮೂಲಕ ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ 10-15 ಎ.ಎಂ ಗಂಟೆಗೆ ಹಿಂತಿರುಗಿ ಅಕ್ರಮ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿ ಮತ್ತು ಇಬ್ಬರು ಚಾಲಕರ ವಿರುದ್ದ ಎಂ.ಎಂ.ಆರ್.ಡಿ ಯ್ಯಾಕ್ಟ್ 21(1) ರೆ.ವಿ 379 ಐ.ಪಿ.ಸಿ ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
T.B. Halli PS | ||||||||||||||||
21 | Cr.No:0036/2015 (IPC 1860 U/s 363 ) |
25/10/2015 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ದಿನಾಂಕ : 25-10-2015 ರಂದು ಸಂಜೆ 05-30 ಗಂಟೆಗೆ ಹಡಗಲಿ ಪೊಲೀಸ್ ಠಾಣೆಯ ಮ.ಪಿ.ಸಿ 223 ರವರು ತಂದು ಹಾಜರುಪಡಿಸಿದ ಕಡತವನ್ನು ಪರಿಶೀಲಿಸಿ ನೋಡಲು ಪಿ.ಎಸ್.ಐ ಹಡಗಲಿರವರು ತಮ್ಮ ಠಾಣಾ ಗುನ್ನೆ ನಂ. 62/15 ಕಲಂ. 363 IPC ಪ್ರಕರಣದಲ್ಲಿ ಕೃತ್ಯ ಸ್ಥಳವು ತಂಬ್ರಹಳ್ಳಿ ಠಾಣಾ ವ್ಯಾಪ್ತಿಯ ಕಾಲ್ವಿತಾಂಡವಾಗಿದ್ದರಿಂದ, ಮಾನ್ಯ ಡಿ.ಎಸ್.ಪಿ ಸಾಹೇಬರು ಹಡಗಲಿರವರಿಂದ ಜ್ಞಾಪನ ಪತ್ರ ಸಂಖ್ಯೆ :324/ಹೆಚ್.ಎಸ್.ಡಿ/2015 ನೇದ್ದನ್ನು ಪಡೆದುಕೊಂಡು ಪ್ರಕರಣವನ್ನು ವರ್ಗಾವಣೆ ಮಾಡಿದ್ದು, ಸದ್ರಿ ಪ್ರಕರಣದ ದೂರಿನ ಸಾರಂಶವೆನೆಂದರೆ ಫಿರ್ಯಾದಿಯ ಮಗ ಹನುಮಂತನಾಯ್ಕನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದು, ಆತನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುತ್ತಾನೆ. ದಿನಾಂಕ 23-06-2015 ರಂದು 07-30 ಪಿ.ಎಂ ಗಂಟೆಗೆ ಫೀರ್ಯಾದಿಯ ಮಗನು ಮನೆಯಲ್ಲಿದ್ದಾಗ ಆರೋಪಿತನು ಫಿರ್ಯಾದಿಯ ಮಗನ ಮೋಬೈಲ್ ಗೆ ಕರೆ ಮಾಡಿ ಕೋಳಿ ಹಬ್ಬ ಇದೆ ಊಟಕ್ಕೆ ಬರುವಂತೆ ತಿಳಿಸಿದ್ದು, 08-30 ಪಿ.ಎಂ ಗಂಟೆಗೆ ಫೀರ್ಯಾದಿಯ ಮಗ ಒಬ್ಬನೆ ಕಾಲ್ವಿ ತಾಂಡಕ್ಕೆ ಹೋಗಿದ್ದು, ಮುಂಜಾನೆಯಾದರು ಮನೆಗೆ ಬಾರದಿದ್ದನ್ನು ಕಂಡು ಫಿರ್ಯಾದಿದಾರರು ತನ್ನ ಮಗನ ಮೋ ನಂ 9902339047-8548029015 ನೇದ್ದವುಗಳಿಗೆ ಕರೆ ಮಾಡಿದಾಗ, ಸ್ವೀಚ್ ಆಪ್ ಅಂತಾ ಬಂದಿದ್ದು, ನಂತರ ಮಧ್ಯಹ್ನ 12-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಹೂವಿನ ಹಡಗಲಿ ಪಟ್ಟಣದ ಐಬಿಯಲ್ಲಿದ್ದಾಗ, ಬಿತ್ಯಾತಾಂಡದ ಸಾಣ್ಯನಾಯ್ಕ ಎನ್ನುವರು ಬಂದು ದಿನಾಂಕ 24-06-2015 ರಂದು ಮುಂಜಾನೆ 07-00 ಗಂಟೆ ಸುಮಾರಿಗೆ ಕಾಲ್ವಿತಾಂಡದ ಕುಬೇರನಾಯ್ಕನ ಕಬ್ಬು ಹಾಕಿದ ಹೊಲದಿಂದ ಹನುತಮಂತನಾಯ್ಕನನ್ನು ಒತ್ತಾಯ ಪೂರ್ವಕವಾಗಿ ಮಲ್ಲೇಶನಾಯ್ಕನು ವಾಹನದಲ್ಲಿ ಕರೆದುಕೊಂಡು ಹೋದನು ಎಂದು ತಿಳಿಸಿ, ತನ್ನ ಮೋಬೈಲ್ ನಲ್ಲಿ ತೆಗೆದಿದ್ದ, ವೀಡಿಯೋವನ್ನು ತೋರಿಸಿರುತ್ತಾನೆ. ಈ ದಿನದ ವರೆಗೆ ಹುಡುಕಿದರು ಪತ್ತೆಯಾಗದ ಕಾರಣ, ತನ್ನ ಮಗನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಬಾರದೆಂದು ದಿನಾಂಕ 23-06-2015 ರಂದು ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣಾಧಿಕಾರಿ ಹೆಚ್.ಸಿ 223 ರವರು ತಮ್ಮ ಠಾಣಾ ಗುನ್ನೆ ನಂ . 62/15 ಕಲಂ 363 ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ. ಸದರಿ ಪ್ರಕರಣದ ಕಡತವನ್ನು ಪಡೆದು ಪ್ರಕರಣ ದಾಖಲಿಸಿದೆ. | |||||||||||||||
22 | Cr.No:0037/2015 (IPC 1860 U/s 380 ) |
26/10/2015 | Under Investigation | |||||||||||||
BURGLARY - NIGHT - Temple Theft | ||||||||||||||||
Brief Facts : | ಫಿರ್ಯಾದಿದಾರರು ಪೂರ್ವ ಕಾಲ್ವಿ ಗ್ರಾಮದ ಭೀರ ಲಿಂಗಶ್ವರ ದೇವಸ್ಥಾನದ ಪೂಜಾರಿ ಇದ್ದು ಇವರು ದಿನಾಂಕ : 25-10-2015 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಪೂಜೆಯನ್ನು ಮುಗಿಸಿಕೊಂಡು ದೇವಸ್ಥಾನದ ಬಾಗಿಲಿಗೆ ಭೀಗವನ್ನು ಹಾಕದೇ ಮನೆಗೆ ಹೋಗಿದ್ದು , ದಿನಾಂಕ : 26-10-2015 ರಂದು ಬೆಳಗ್ಗೆ 06-30 ಗಂಟೆಗೆ ಫೀರ್ಯಾದಿ ತಮ್ಮ ಹೊಲಕ್ಕೆ ನೀರು ಬಿಡಲು ಹೋಗಿದ್ದಾಗ ಪೂರ್ವ ಕಾಲ್ವಿ ಗ್ರಾಮದ ದ್ಯಾಮಪ್ಪನು ಫಿರ್ಯಾದಿದಾರರಿಗೆ ಫೋನ್ ಮಾಡಿ ನಮ್ಮ ಭೀರಲಿಂಗ ದೇವರ ದೇವಸ್ಥಾನದಲ್ಲಿ ಬೀರಲಿಂಗದೇವರ ಬೆಳ್ಳಿಯ ಮುಖವಾಡ ಕಾಣುತ್ತಿಲ್ಲ ಬಾ ಅಂತಾ ಕರೆದಿದ್ದರಿಂದ ಫಿರ್ಯಾದಿದಾರರು ಊರಿನ ಮುಖಂಡರಿಗೆ ವಿಷಯ ತಿಳಿಸಿ ಅವರೊಂದಿಗೆ ದೇವಸ್ಥಾನಕ್ಕೆ ಹೋಗಿ ನೋಡಲು 44,000/- ರೂ ಮೌಲ್ಯದ ಭೀರದೇವರ ಬೆಳ್ಳಿಯ ಮುಖವಾಡ ಕಾಣಲಿಲ್ಲ ಇದನ್ನು ದಿನಾಂಕ : 25-10-2015 ರಂದು ರಾತ್ರಿ 08-30 ಗಂಟೆಯಿಂದ ದಿನಾಂಕ : 26-10-2015 ರಂದು ಬೆಳಗ್ಗೆ 06-30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಬೆಳ್ಳಿಯ ಮುಖವಾಡ ಹಾಗೂ ಕಳ್ಳರನ್ನು ಪತ್ತೆ ಹಚ್ಚಲು ಫಿರ್ಯಾದಿಯು ನೀಡಿದ ಹೇಳಿಕೆ ದೂರನ್ನು ಎ.ಎಸ್.ಐ ಶ್ರೀ.ದೇವೇಂದ್ರಪ್ಪರವರು ಪಡೆದು ಪಿ.ಸಿ 01 ರವರ ಮುಖಾಂತರ ಕಳುಹಿಸಿಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ | |||||||||||||||
Tekkalkota PS | ||||||||||||||||
23 | Cr.No:0107/2015 (IPC 1860 U/s 34,504,323,332,353 ) |
25/10/2015 | Under Investigation | |||||||||||||
OFFENCES AGAINST PUBLIC SERVANTS (Public servant is a victim) - Other Govt Official | ||||||||||||||||
Brief Facts : | ದಿನಾಂಕ 25/10/2015 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪರೀಶಿಲಿಸಲಾಗಿ, ಗೌರಿಪುರದ ತಿಮ್ಮಪ್ಪ ಗುರುಸ್ವಾಮಿ, ಬಿಲ್ಲೆ ಸಂಖ್ಯೆ:4661, ಸಿರುಗುಪ್ಪ ಡಿಪೋ ಆದ ನನ್ನನ್ನು ಕೆಎಸ್ಆರ್ಟಿಸಿ ಬಸ್ ನಂ:ಕೆಎ34/ಎಫ್ 1027 ನೇದ್ದರ ಕಂಡಕ್ಟರ್ ಆಗಿ ಹಾಗೂ ತ್ರಿಪಾಲ ರೆಡ್ಡಿ, ಬಿಲ್ಲೆ ಸಂಖ್ಯೆ:6677 ಇದ್ದು ಚಾಲಕನಾಗಿದ್ದು, ನಿನ್ನೆ ದಿನಾಂಕ:23/10/2015 ರಂದು ಬೆಳಿಗ್ಗೆ 07:30 ಗಂಟೆಗೆ ಕರ್ತವ್ಯದ ಮೇಲೆ ಸಿರುಗುಪ್ಪ- ಕಂಪ್ಲಿ ಮಾರ್ಗದ ಮೇಲೆ ನಿಯೋಜಿಸಿ ಕಳುಹಿಸಿರುತ್ತಾರೆ. ಹಾಗೂ ದಿನಾಂಕ:24/10/2015 ರಂದು ಸಂಜೆಗೆ ವಾಪಾಸ ಡಿಪೋಕ್ಕೆ ಬಂದು ಕರ್ತವ್ಯ ಮುಗಿಸಬೇಕಾಗಿರುತ್ತದೆ. ಆದರೆ ದಿನಾಂಕ:24/10/2015 ರಂದು ಕಂಪ್ಲಿ ಬಿಟ್ಟು ಸಿರುಗುಪ್ಪಕ್ಕೆ ವಾಪಾಸ್ ಆಗುವಾಗ್ಗೆ ಸಂಜೆ 07:00 ಗಂಟೆಗೆ ಸುಮಾರಿಗೆ ನಿಟ್ಟೂರು ಗ್ರಾಮಕ್ಕೆ ಇಳಿಯುವಂತಹ ಪ್ರಯಾಣಿಕರು ಯಾರು ಇಲ್ಲದ ಕಾರಣ, ಬಸ್ ಸ್ಟ್ಯಾಂಡ್ನಿಂದ 20 ಅಡಿ ಮುಂದೆ ಹೋಗುತ್ತಿದ್ದಾಗ, ವ್ಯಕ್ತಿಯೋರ್ವ ನಮ್ಮ ಬಸ್ಗೆ ಅಡ್ಡ ಬಂದು ಬಸ್ನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ ಮೇರೆಗೆ ನಾವು ಬಸ್ನ್ನು ನಿಲ್ಲಿಸಿದೆವು, ನಂತರ ಬೇಗ ಹತ್ತಿ ಮುಂದಿನ ಪ್ರಯಾಣಿಕರು ಊರಿಗೆ ಹೋಗುವವರು ಇದ್ದಾರೆ ಎಂದು ತಿಳಿಸಿದ್ದಕ್ಕೆ ಕೋಪಿತನಾದ ಸದರಿ ವ್ಯಕ್ತಿಯು ಏಕಾಕಿ ತನ್ನ ಬಲಗೈಯಿಂದ ಮುಷ್ಟಿ ಮಾಡಿ ನನ್ನ ಮುಖಕ್ಕೆ ಹಾಗೂ ಮೂಗಿಗೆ ಗುದ್ದಿದ, ಅವಾಚ್ಯ ಶಬ್ದಗಳಿಂದ ನಿಂದಿಸಿ,ಮೂಗಿಗೆ ಬಾಯಿ ಹಾಕಿ ಕಚ್ಚಿರುತ್ತಾನೆ. ಇನ್ನೊಬ್ಬ ವ್ಯಕ್ತಿಯು ಪ್ರಯಾಣಿಕರು ಹತ್ತುವಂತಹ ಮುಂದಿನ ಬಾಗಿಲನಿಂದ ಹತ್ತಿ ನಮ್ಮ ಬಸ್ನ ಚಾಲಕ ತ್ರಿಪಾಲ ರೆಡ್ಡಿಗೂ ಬೆನ್ನಿಗೆ ಗುದ್ದಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾನೆ. ನನಗೆ ಹೊಡೆಯುತ್ತಿದ್ದ ವ್ಯಕ್ತಿಯ ಹೆಸರು ಬಸವ ಅಂತಾ ಗೊತ್ತಾಯಿತು, ಬಸವ ಹಾಗೂ ಉಳಿದವರನ್ನು ಪತ್ತೆ ಹಚ್ಚಿ, ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವಂತೆ ನೀಡಿದ ದೂರು. | |||||||||||||||
ಸೋಮವಾರ, ಅಕ್ಟೋಬರ್ 26, 2015
PRESS NOTE OF 26/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ