ಮಂಗಳವಾರ, ಅಕ್ಟೋಬರ್ 20, 2015

PRESS NOTE OF 20/10/2015

Crime Key Report From   To   
Sl. No FIR No FIR Date Crime Group - Crime Head Stage of case
Gudekote PS
1 Cr.No:0126/2015
(MMDR (MINES AND MINERALS REGULATION OF DEVELOPMENT) ACT 1957 U/s 4(A),21(4) ; IPC 1860 U/s 379 )
20/10/2015 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ದಿ: 23/06/2015 ರಂದು ಬೆಳಗಿನ ಜಾವ 5-30 ಗಂಟೆ ಸಮಯದಲ್ಲಿ ಚೆಳ್ಳಕೇರೆಯಿಂದ ಹಿರಿಯೂರು ಕಡೆ ಬರುವ ಎಸ್.ಹೆಚ್.19 ರಸ್ತೆಯಲ್ಲಿ ಈ ಮೇಲ್ಕಂಡ ಆರೋಪಿತರು ಸರ್ಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧೀಕೃತವಾಗಿ ಲಾರಿ ನಂ: 1] ಕೆಎ-41 ಬಿ-359 ನೇದ್ದರ ಚಾಲಕ ಹಾಗೂ ಮಾಲೀಕನಾದ ಜಯಕಾಂತ ಹಾಗೂ ಕ್ಲೀನರ್ ಮಂಜುನಾಥ,  2] ಕೆಎ-52-9483 ನೇದ್ದರ ಚಾಲಕ ಅಭೀಷೇಕ, ಕ್ಲೀನರ್ ಗೀರೀಶ, 3] ಕೆಎ-52-9419 ನೇದ್ದರ ಚಾಲಕ ಮಾರುತಿ ಮತ್ತು ಕ್ಲೀನರ್ ಕಿರಣ, ಹಾಗೂ 4] ಕೆಎ-41 ಎ-8937 ನೇದ್ದರ ಚಾಲಕ ಸುರೇಶ ಇವರುಗಳು ಅಕ್ರಮವಾಗಿ ಮರಳನ್ನು ಕಳುವಿನಿಂದ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ರವರಾದ ಗಿರಿಸ್ವಾಮಿ ರವರು ತಮ್ಮ ಠಾಣೆಯ ಸಿಬ್ಬಂಧಿ ಹಾಗೂ ಪಂಚರೊಂದಿಗೆ ಹೋಗಿ ಸದರಿ ವಾಹನಗಳನ್ನು ತಡೆದು ನಿಲ್ಲಿಸಲು ಲಾರಿ ಚಾಲಕ ಸುರೇಶ ಹಾಗೂ ಕ್ಲೀನರ್ ರವರುಗಳು ಪರಾರಿಯಾಗಿದ್ದು ಉಳಿದ ಲಾರಿಗಳ ಚಾಲಕರು ಹಾಗೂ ಕ್ಲೀನರ್ ಗಳಿಂದ 17200/- ರೂ.ಗಳು ನಗದು ಹಣ, ಹಾಗೂ 1] ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ಫೋನ್, 2] ಒಂದು ಸಾಮ್ಯಸಂಗ್ ಕಂಪನಿಯ ಮೊಬೈಲ್ ಫೋನ್, 3] ಒಂದು ಲಾವಾ ಕಂಪನಿಯ ಮೊಬೈಲ್ ಫೋನ್,4] ಒಂದು ಸಾಮ್ಯಸಂಗ್ ಕಂಪನಿಯ ಮೊಬೈಲ್ ಫೋನ್, ಹಾಗೂ ಲಾರಿಯಲ್ಲಿದ್ದ 5] ಒಂದು ನೋಕಿಯಾ ಮೊಬೈಲ್ ಫೋನ್ ಇವುಗಳನ್ನು ಹಾಗೂ ಮರಳು ತುಂಬಿದ ಈ ಮೇಲ್ಕಂಡ 4 ಲಾರಿಗಳನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಲಾರಿ ಚಾಲಕರು ಹಾಗೂ ಕ್ಲೀನರ್ ಗಳನ್ನು ವಶಕ್ಕೆ ತೆಗೆದುಕೊಂಡು ಅದೇ ದಿನ ಬೆಳಿಗ್ಗೆ 8-15 ಗಂಟೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಈ ಮೇಲ್ಕಂಡ ಲಾರಿ ಚಾಲಕರು, ಕ್ಲೀನರ್ ಮತ್ತು ಲಾರಿ ಮಾಲೀಕರು, ಲಾರಿಗೆ ಮರಳು ಲೋಡ್ ಮಾಡಿಸಿದವರುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನೆ ನಂ: 213/2015 ಕಲಂ: 21(4), 4(A) MMRD Act 1957 ಮತ್ತು ಕಲಂ: 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಇರುತ್ತದೆ. ಈ ಪ್ರಕರಣದ ವಿಚಾರಣೆ ವೇಳೆಯಲ್ಲಿ ಘಟನೆ ಸ್ಥಳವು ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಸಾಪುರ ಸಂನ್ಯಾಸಿ ಕೆರೆ ಹಳ್ಳದಲ್ಲಿ ನಡೆದಿರುವುದಾಗಿ ತಿಳಿದು ಬಂದಿದ್ದರಿಂದ ಕೃತ್ಯ ಸ್ಥಳದ ಆಧಾರದ ಮೇಲೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಿ ಬಂದಿದ್ದನ್ನು ಪಡೆದು ಮಾನ್ಯ ಎಸ್.ಪಿ.ಸಾಹೇಬರು ಬಳ್ಳಾರಿರವರು ಪ್ರಕರಣ ದಾಖಲಿಸುವಂತೆ ಆದೇಶಿಸಿ ಕಳುಹಿಸಿ ಕೊಟ್ಟಿದ್ದನ್ನು ಸ್ವೀಕರಿಸಿ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Hospet Town PS
2 Cr.No:0204/2015
(IPC 1860 U/s 379 )
20/10/2015 Under Investigation
THEFT - Electronic Goods (Radio,TV,VCR,ACs,Office Automation Equipments)
Brief Facts :  ಫಿರ್ಯಾದಿದಾರರು ಠಾಣೆಗೆ  ನೀಡಿದ ದೂರಿನ ಸಾರಾಂಶ ಏನಂದರೆ, ನಿನ್ನೆ ದಿನ ದಿನಾಂಕ; 19/10/2015 ರಂದು ಬೆಳಿಗ್ಗೆ 11-55 ಗಂಟೆಗೆ ಹೊಸಪೇಟೆ  ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಅಂಗಿ ಜೇಬಿನಲ್ಲಿದ್ದ  D2502 Xperia C3 Balck- 1.3 Sony  ಕಂಪನಿಯ ಮೊಬೈಲ್ ಇದಕ್ಕೆ  ವೋಡ ಪೋನ್ ಕಂಪನಿಯ ಸೀಮ್ ನಂ; 9886155095 ನೇದ್ದನ್ನು ಹಾಕಿದ್ದು ಸದರಿ ಮೊಬೈಲ್ ಬಸ್ ನಿಲ್ದಾಣದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿದೆ.
Itagi PS
3 Cr.No:0059/2015
(IPC 1860 U/s 309 )
20/10/2015 Under Investigation
SUICIDE - Abetment of Suicide
Brief Facts :  ಈ ದಿನ ದಿನಾಂಕ 20-10-2015 ರಂಧು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶದಲ್ಲಿ ಸೋಗಿ ಗ್ರಾಮ ವಾಸಿ ಗಡ್ಡಿ ಮಲ್ಲಪ್ಪ ತಂದೆ ಕೊಟ್ರಬಸಪ್ಪ @ ಮೂಕಪ್ಪ, 55 ವರ್ಷ, ಲಿಂಗಾಯತರ ಜನಾಂಗ, ಹೋಟೆಲ್ ಕೆಲಸ, ಈತನು ದಿನಾಂಕ 18-10-2015 ರಂದು ಸಂಜೆ 7-30 ಗಂಟೆ ಸುಮಾರಿಗೆ ನಮ್ಮೂರಿನ ವಾಸಿ ಭಜಂತ್ರಿ ಕರಿಯಮ್ಮನ ಮಗಳಾದ ಕು|| ರೇಣುಕಾಳನ್ನು ಅತ್ಯಾಚಾರಿ ಮಾಡಿ, ಮುಂದೇನಾಗುತ್ತೋ ಎಂಬ ಭಯದಿಂದ ಆತ್ಮ ಹತ್ಯೆ ಮಾಡಿಕೊಳ್ಳುವ ನಿಮಿತ್ತ ಟೊಮೆಟೋ ಬೆಳೆಗೆ ಹೊಡೆಯುವ ಯಾವುದೋ ಕ್ರಿಮಿನಾಷಕ ಔಷಧಿಯನ್ನು ದಿನಾಂಕ 19-10-2015 ರಂದು ಸಂಜೆ 5-30 ಗಂಟೆಗೆ ತಮ್ಮ ಗ್ರಾಮದಿಂದ ನಂದಿಹಳ್ಳಿಗೆ ಹೋಗುವ ರಸ್ತೆಯಲ್ಲಿ, ಈ 
ಮುಂಚೆಯೇ ಹಲವಾಗಲಿನಲ್ಲಿ ತಂದಿದ್ದ ಕ್ರಿಮಿನಾಷಕ ಔಷಧಿಯನ್ನು ಆತ್ಮ ಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸೇವಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ನಂತರ ಈತನನ್ನು ಹಡಗಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ 108 ಅಂಬ್ಯುಲೆನ್ಸ್ನಲ್ಲಿ ಕಳುಹಿಸಿಕೊಟ್ಟಿದ್ದು, ಕಾರಣ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ನಮ್ಮ ಊರಿನಿಂದ ರಾತ್ರಿ ಬರಲು ಬಸ್ಸಿನ ಸೌಕರ್ಯವಿಲ್ಲದ ಕಾರಣ ರಾತ್ರಿ ಮನೆಯಲ್ಲಿಯೇ ಇದ್ದು ಈಗ ತಡವಾಗಿ ಬಂದು ಈ ನನ್ನ  ದೂರನು ಇಟ್ಟಿಗಿ ಗ್ರಾಮದ ಸುಣ್ಣಗಾರ ಹನುಮಂತಪ್ಪ ತಂದೆ ಜಾತಪ್ಪ ಈತನಿಂದ ಹೇಳಿ ಬರೆಸಿಕೊಂಡು ತಡವಾಗಿ ಕೊಟ್ಟ ಇದ್ದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ