Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Hagaribommanahalli PS | ||||||||||||||||
1 | Cr.No:0158/2015 (IPC 1860 U/s 379 ) |
21/10/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ಈ ದಿನ ದಿನಾಂಕ:-21-10-15 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾಧ ಶ್ರೀ.ಕೆ.ಗಿರಿರಾಜ ರವರು ಠಾಣೆಗೆ ಹಾಜರಾಗಿ ತಮ್ಮ ಗಣಕೀಕೃತ ದೂರನ್ನು ನೀಡಿದ್ದು, ಸ್ವೀಕರಿಸಿ ನೋಡಲು ಫಿರ್ಯಾದಿದಾರರು ಈಗ್ಗೆ 15 ದಿನಗಳ ಹಿಂದೆ ಅಂದರೆ ದಿ:-07-10-15 ರಂದು ದಾವಣಗೇರೆಯ ಪ್ರಕಾಶ ಮೋಟರ್ಸ್ ನಲ್ಲಿ ಒಂದು ಕಪ್ಪು ಬಣ್ಣದ ಹಿರೋ ಫ್ಯಾಷನ್ ಪ್ರೋ, ಮೋಟರ್ ಸೈಕಲ್ಲನ್ನು ಖರೀದಿ ಮಾಡಿದ್ದು, ಇದರ ಟಿ.ಪಿ ನಂ ಕೆ.ಎ.17/ಎನ್.ಟಿ-042457 ಅಂತ ಇದ್ದು, ಇಂಜಿನ್ ನಂ. ಹೆಚ್ಎ10ಇವಿಎಫ್ ಹೆಚ್ಜಿ36936 ಮತ್ತು ಚಾಸ್ಸಿ ನಂ. ಎಂಬಿಎಲ್ಹೆಚ್ಎ10ಬಿಎಸ್ಎಫ್ಹೆಚ್ಜಿ34856 ಅಂತ ಇದ್ದು, ಇದನ್ನು ಫಿರ್ಯಾದಿಯ ಅಂಗಡಿಯಲ್ಲಿ ಕೆಲಸ ಮಾಡುವ ಯಮನೂರ ಸ್ವಾಮಿಯು ಮಂಜುನಾಥ ಕಾಫಿ ವರ್ಕ್ಸ್ ಮುಂದುಗಡೆ ದಿ:-18/10/15 ರಂದು ರಾತ್ರಿ 7-45 ಗಂಟೆ ಸುಮಾರಿಗೆ ನಿಲ್ಲಿಸಿ ಬಾಕಿ ವಸೂಲಿ ಮಾಡಿಕೊಂಡು ರಾತ್ರಿ 8-00 ಗಂಟೆಗೆ ವಾಪಾಸ್ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಮೋಟರ್ ಸೈಕಲ್ ಅಂದಾಜು ರೂ.49,000/- ಬೆಲೆ ಬಾಳುತ್ತಿದ್ದು, ಇದರ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ನೋಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಸದರಿ ಕಳುವಾದ ಮೋಟರ್ ಸೈಕಲ್ಲನ್ನು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಮೋಟಾರ್ ಸೈಕಲ್ನ್ನು ಪತ್ತೆ ಹಚ್ಚಿ ಕೊಡಬೇಕೆಂದು ಇದ್ದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Hospet Extention PS | ||||||||||||||||
2 | Cr.No:0051/2015 (IPC 1860 U/s 380 ) |
21/10/2015 | Under Investigation | |||||||||||||
THEFT - House Theft | ||||||||||||||||
Brief Facts : | ಈ ದಿನ ದಿನಾಂಕ 21-10-2015 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಠಾಣೆಗೆ ಬಂದು ದೂರು ನೀಡಿದ್ದೇನೆಂದರೆ, ತಾವು ಬೆಂಗಳೂರಿನಲ್ಲಿ ಸಿ.ಎ. ವಿದ್ಯಾಬ್ಯಾಸ ಮಾಡಿಕೊಂಡಿದ್ದು, ತನ್ನ ಬಳಕೆಗಾಗಿ 2009 ರಲ್ಲಿ ಕ್ಯಾಂಪ್ಯಕ್ಟ್ (hp) sl No. (S)CNF937B015 Product no VV284PA#ACJ ಕಂಪನಿಯ ಕಪ್ಪ ಬಣ್ಣದ ಲ್ಯಾಪ್ ಟಾಪ್ ನ್ನು ಮತ್ತು ರೀಲಿಯನ್ಸ್ ಕಂಪನಿಯ ಮೊಡಮ್ ನಂ. RHWCDD230104202 ಮೊಡಮ್ ,ಮೊಬೈಲ್ ನಂ.7483078793 ಇವುಗಳನ್ನು ಖರೀದಿಸಿದ್ದು, ರಜೆ ಇದ್ದ ಕಾರಣ ತಾನು ಹೊಸಪೇಟೆಗೆ ಬಂದಿದ್ದು,ದಿ:16-10-2015 ರಂದು ಸಂಜೆ 7 ಗಂಟೆಗೆ ತಮ್ಮ ಮನೆಯ ಸಿಟೌಟ್ ನಲ್ಲಿ ದಿವಾನ್ ಕಾಟ್ ಮೇಲೆ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿ ಅಲ್ಲೆ ಬ್ಯಾಗಿನಲ್ಲಿಟ್ಟಿದ್ದು, ನಂತರ ದಿನಾಂಕ 18-10-2015 ರ ಮದ್ಯಾಹ್ನ 2-30 ಗಂಟೆಗೆ ನೋಡಿಕೊಳ್ಳಲು ಇರಲಿಲ್ಲ ಯಾರೋ ಕಳ್ಳರು ಒಟ್ಟು ಅಂದಾಜು ಬೆಲೆ ರೂ.21,500/- ಲ್ಯಾಪ್ ಟಾಪ್ ಮತ್ತು ಮೊಡಂನ್ನು ಕಳುವು ಮಾಡಿಕೊಂಡು ಹೋಗಿ ಮನೆಯ ಟೆರಸ್ ಮೇಲೆ ಬ್ಯಾಗ್ ಮತ್ತು ಮೊಡಂ ಬಾಕ್ಸ್ ಬಿಸಾಕಿ ಹೋಗಿರುತ್ತಾರೆ ಕಾರಣ ಪತ್ತೆ ಮಾಡಿಕೊಡಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದೆ. | |||||||||||||||
Hospet Town PS | ||||||||||||||||
3 | Cr.No:0205/2015 (IPC 1860 U/s 420 ) |
21/10/2015 | Under Investigation | |||||||||||||
CHEATING - CHEATING | ||||||||||||||||
Brief Facts : | on
20/10/2015 at 8-30 pm walking from shivanda store having purchased itens for
my fathers death ceremony . as i was walking twards m car whuih i had parked
further up , i was told by a boy that back of my shirt was dirty. i ignored
him. A ew minutes later, big statured man came and told me tat back of my
shirt was dirty.He took me aside got a bottle of water & asked me to
remove the shirt & cleaned it. I cleaned & came back to the car.I
looked for the bag & it was not there. The belongings & documents in the is as listed above.loss . Hence this FIR. |
|||||||||||||||
4 | Cr.No:0206/2015 (IPC 1860 U/s 420 ) |
21/10/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಏನಂದರೆ, ಈ ದಿನ ದಿನಾಂಕ; 21/10/2015 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಊರಿನಿಂದ ನಾನು ಮತ್ತು ನನ್ನ ತಮ್ಮನಾದ ಸುರೇಶ್ ನಾಯ್ಕನೊಂದಿಗೆ ದಸರಾ ಹಬ್ಬದ ನಿಮಿತ್ತ ಎಸ್.ಬಿ.ಎಂ. ಬ್ಯಾಂಕ್ ಹೊಸಪೇಟೆಗೆ ಬಂದು ಎಸ್.ಬಿ.ಐ. ಬ್ಯಾಂಕ್ನಲ್ಲಿ ನನ್ನ ಖಾತೆಯ ಯಿಂದ ನಗದು ಹಣ 1) ಸಾವಿರ ರೂಪಾಯಿ ಮುಖ ಬೆಲೆಯ ರೂ: 1000 X 20 = 20,000/- (ಒಟ್ಟು 01 ಕಟ್ಟು ಬಂಡಲ್) 2) ಐದು ನೂರು ರೂಪಾಯಿ ಮುಖ ಬೆಲೆಯ ರೂ: 500 X30 = 15,000/- ( 01 ಕಟ್ಟು ಬಂಡಲ್) ಎಲ್ಲಾ ಒಟ್ಟು ನಗದು ಹಣ ರೂ; 35,000/- 3) ಕೃಷ್ಣ ಬ್ಯಾಂಕಿನ ಎ.ಟಿ.ಟಂ. ಕಾರ್ಡ 4) ಸಾಮ್ಸಾಂಗ್ ಕಂಪನಿಯ ಮೊಬೈಲ್ ಇದಕ್ಕೆ ಏರ್ಟೇಲ್ ಕಂಪನಿಯ ಸೀಮ್ ನಂ: 9108836324 ಹಾಕಿದ್ದು ಇದರ ಅಂದಾಜು ಬೆಲೆ ರೂ: 1000/- ಎಲ್ಲಾ ಒಟ್ಟು ರೂ: 36,000/- ನಗದು ಹಣ ಮತ್ತು ಇತರೆ | |||||||||||||||
ವಸ್ತುಗಳನ್ನು ಒಂದು ಪಿಂಕ್ ಮತ್ತು ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಇಟ್ಟುಕೊಂಡು ಈ ದಿನ ಮದ್ಯಾಹ್ನ ಸುಮಾರು 12-30 ಗಂಟೆಯ ಸಮಯದಲ್ಲಿ ರಾಮ ಸರ್ಕಲ್ ಹತ್ತಿರ ಇರುವ ಶ್ರೀ, ಬಸವೇಶ್ವರ ಜನರಲ್ ಸ್ಟೋರ್ ಅಂಗಡಿಯಲ್ಲಿ ದಸರಾ ಹಬ್ಬಕ್ಕೆ ಮನೆಗೆ ಕಿರಾಣಿ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ನಿನ್ನ ಬೆನ್ನಿಹಿಂದೆ ಗಲಿಸು ಬಿದಿದ್ದೆ ಎಂದು ಹೇಳಿದಾಗ ನಾನು ಸದರಿ ಪ್ಲಾಸ್ಟಿಕ್ ಬ್ಯಾಗ್ನ್ನು ನನ್ನ ಪಕ್ಕದಲ್ಲಿ ಇಟ್ಟುಕೊಂಡು ಹಿಂದೆ ನೋಡಿಕೊಳ್ಳುತ್ತಿದ್ದಾಗ ಸದರಿ ಅಪರಿಚಿ ವ್ಯಕ್ತಿಯು ನನ್ನ ಗಮನವನ್ನು ಬೇರೆಡೆ ಸೆಳೆದಿದ್ದು, ಮೋಸ ಮಾಡಿ ತೆಗೆದುಕೊಂಡು ಹೋದ ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ. | ||||||||||||||||
Siruguppa PS | ||||||||||||||||
5 | Cr.No:0219/2015 (INDIAN MOTOR VEHICLES ACT, 1988 U/s 183 ; IPC 1860 U/s 279,337,304(A) ) |
21/10/2015 | Under Investigation | |||||||||||||
MOTOR VEHICLE ACCIDENTS FATAL - State Highways | ||||||||||||||||
Brief Facts : | ಈ ದಿನ ದಿನಾಂಕ 21-10-2015 ರಂದು ಬೆಳಿಗ್ಗೆ 07-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎನ್. ಹುಸೇನಪ್ಪ ರವರು ಠಾಣೆಗೆ ಹಾಜರ್ ಆಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಿನ್ನೆ ದಿನ ದಿನಾಂಕ 20-10-2015 ರಂದು ಸಂಜೆ 06-30 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಮಲ್ಲಿಕಾರ್ಜುನ ರೆಡ್ಡಿ ಇವರು ಅದೋನಿ ರಸ್ತೆ ಕಡೆಯಿಂದ ತಮ್ಮ ಇಟಿಗಿಹಾಳ್ ಗ್ರಾಮದ ಐ.ಹೆಚ್.ವಾಸುದೇವ ರೆಡ್ಡಿ ರವರ ಜಮೀನಿ ಹತ್ತಿರ ಬರುತ್ತಿರುವಾಗ ಇವರ ಮುಂದೆ ಇಟಿಗಿಹಾಳ್ ಗ್ರಾಮದ ಶ್ರೀಮತಿ ನಾರಾಯಣಮ್ಮ ಮತ್ತು ಇವರ ಮಗ ದಶರಥ ಇಬ್ಬರು ತಮ್ಮ ಜಮೀನಿನ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದು ಅದೇ ಸಮಯ ಅದೋನಿ ರಸ್ತೆ ಕಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ನಂ:ಎಪಿ.21/ಎ.ಅರ್/8793 ಮತ್ತು ಚಾಸ್ಸಿ ನಂ:MBLHA11ERA9J13427 ನೇದ್ದರ ಸವಾರನು ತನ್ನ ಮೋಟರ್ ಸೈಕಲ್ ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಧಶರಥ ಮತ್ತು ಈತನ ತಾಯಿ ಶ್ರೀಮತಿ ನಾರಾಯಣಮ್ಮಳಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ದಶರಥ ಈತನ ತಲೆಯ ಹಿಂದೆ ಪೆಟ್ಟು ಬಿದ್ದು ರಕ್ತಗಾಯವಾಗಿ ಮೂರ್ಚೆ ಹೋಗಿದ್ದು. ನಾರಾಯಾಣಮ್ಮಳಿಗೆ ಬಲ ಕೈ ಮತ್ತು ಬಲ ಕಾಲಿಗೆ ಒಳಪೆಟ್ಟು ಆಗಿದ್ದು ಸದರಿ ಮೋಟರ್ ಸೈಕಲ್ ಸವಾರನಿಗೂ ಸಹ ಗಾಯಗಳಾಗಿರುತ್ತವೆ. ದಶರಥ ಮತ್ತು ನಾರಾಯಣಮ್ಮ ಇವರಿಬ್ಬರಿಗೆ ಚಿಕಿತ್ಸೆಗಾಗಿ ಆದೋನಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ನಿನ್ನೆ ದಿನ ರಾತ್ರಿ 07-30 ಗಂಟೆಗೆ ದಾಖಲಿಸಿದ್ದು. ಸದರಿ ಅಸ್ಪತ್ರೆಯ ವೈದ್ಯಾಧಿಕಾರಿಗಳು ದಶರಥನಿಗೆ ಪರೀಕ್ಷಿಸಿ ಆಗಲೇ ಮೃತ ಪಟ್ಟಿರುತ್ತಾನೆಂದು ಖಚಿತ ಪಡಿಸಿದರು ಕಾರಣ ಅತೀವೇಗ ಮತ್ತು ಅಜಾಗರೂಕತೆಯಿಂದ ಮೋಟರ್ ಸೈಕಲ್ ಅನ್ನು ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ದಶರಥನ ಸಾವಿಗೆ ಕಾರಣನಾದ ಮೋಟರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. | |||||||||||||||
Thoranagal PS | ||||||||||||||||
6 | Cr.No:0158/2015 (IPC 1860 U/s 287,304(A) ) |
21/10/2015 | Under Investigation | |||||||||||||
NEGLIGENT ACT - Other - Related | ||||||||||||||||
Brief Facts : | ಪಿರ್ಯಾಧಿದಾರರು ನಾಗೇಂದ್ರ ದಾಸ್ ಮತ್ತು ಗಾಯಾಳು ಕಾರುಸಾವ್ ರವರುಗಳು ಜಿಂದಾಲ್ ಕಾರ್ಖಾನೆಯ ಜೈನ್ ಕಂಪನಿಯಲ್ಲಿ ಮೆಸನ್ ಕೆಲಸಮಾಡಿಕೊಂಡಿದ್ದು, ದಿನಾಂಕ:20/10/15ರಂದು ರಾತ್ರಿ 11.30ಗಂಟೆ ಸಮಯದಲ್ಲಿ ಜಿಂದಾಲ್ ಕಾರ್ಖಾನೆಯ ಕೋಕೋ ಓವನ್ 2 ಬ್ಯಾಟರಿ ಡಿ 52ರಲ್ಲಿ ಕಮಾನು ಕೆಳಗಡೆ ಮೆಸನ್ ಕೆಲಸಮಾಡುತ್ತಿರುವಾಗ್ಗೆ ಇದ್ದಕ್ಕಿದ್ದಂತೆ ಬ್ಯಾಟರಿ ಡಿ-52-53ನೇದ್ದರ ಕಮಾನುಗಳು ಕುಸಿದು ನಾಗೇಂದ್ರದಾಸ್ ರವರ ತಲೆಯ ಮೇಲೆ ಬಿದ್ದು, ಅವರಿಗೆ ತಲೆಯ ಎಡಭಾಗಕ್ಕೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಬಿದ್ದಿದ್ದು, ಪಿರ್ಯಾಧುದಾರರ ತಲೆ, ಬೆನ್ನು, ಮತ್ತು ಎಡಗೈ ಮೇಲೆ ಬಿದ್ದಿದ್ದು, ಇದರಿಂದ ಅವರಿಗೆ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು, ಸದರಿ ಘಟನೆಯಲ್ಲಿ ಹಿಂದೆ ಸರಿದುಕೊಳ್ಳುವಾಗ ಬಿದ್ದು ಕಾರು ಸಾವ್ ರವರಿಗೆ ಬಲಗಾಲು, ಸೊಂಟಕ್ಕೆ ಎಡಕೈಗೆ ಒಳಪೆಟ್ಟುಗಳಾಗಿದ್ದು, ಸದರಿ ಘಟನೆಯು ಜಿಂದಾಲ್ ಕಾರ್ಖಾನೆಯ ವೆಂಕಟೇಶ್ವರಲು, ಜೇಮ್ಸ್ ಜಾನ್, ಶರಣ ನಾಸೀ, ಅನೀಲ್ ಜಾದವ್, ದಿನೇಶ್ ಪೂಜಾರಿ, ಜೈನ್ ಕಂಪನಿಯ ಮಾಲೀಕರಾದ ಅಜಗರ್ ರವರುಗಳು ಓವನ್ ಬ್ಯಾಟರಿ ಡಿ 52-53 ನೇದ್ದರವುಗಳ ಶಿಥೀಲತೆಯ ಬಗ್ಗೆ ಎಚ್ಚರವಹಿಸದೇ ಹಾಗೂ ಕೆಲಸ ನಡೆಯುವ ಸ್ಥಳದಲ್ಲಿದ್ದು, ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ ಕೆಲಸಗಾರರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡದೇ ನಿರ್ಲಕ್ಷತೆಯಿಂದ ಅದರಲ್ಲಿಯೇ ಕೆಲಸಗಾರರಿಂದ ರಿಪೇರಿಯ ಕೆಲಸಮಾಡಿಸಿದ್ದರಿಂದ, ಜೈನ್ ಕಂಪನಿಯ ಶಿವನಾಗೇರೆಡ್ಡಿ, ಕೆ ರಾಜು, ಅಜಯ್ ಕುಮಾರ್ ಮತ್ತು ಕಾಂತ ರವರುಗಳು ಕೆಲಸಗಾರರಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ, ಅದಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ನೀಡಿ ಕೆಲಸ ನಡೆಯುವ ಸ್ಥಳದಲ್ಲಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡದೇ ನಿರ್ಲಕ್ಷತನ ವಹಿಸಿದ್ದರಿಂದ ಸದರಿ ಘಟನೆಯು ನಡೆದು ನಾಗೇಂದ್ರ ದಾಸ್ ರವರು ಮೃತಪಟ್ಟು, ನಾನು ಮತ್ತು ಕಾರು ಸಾವ್ ರವರುಗಳು ಗಾಯಗೊಂಡಿರುತ್ತೇವೆ. ಆದ್ದರಿಂದ ಮೇಲ್ಕಂಡರವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ. | |||||||||||||||
ಬುಧವಾರ, ಅಕ್ಟೋಬರ್ 21, 2015
PRESS NOTE OF 21/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ