ಸೋಮವಾರ, ಅಕ್ಟೋಬರ್ 19, 2015

PRESS NOTE OF 19/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Traffic PS
1 Cr.No:0159/2015
(IPC 1860 U/s 279,337 ; INDIAN MOTOR VEHICLES ACT, 1988 U/s 187 )
19/10/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ: 17-10-2015 ರಂದು ಫಿರ್ಯಾಧಿದಾರರಾದ ಎಂ.ಎನ್. ರಮೇಶ ತಂದೆ ಎಸ್.ಎನ್.ನಾರಾಯಣ ನಾಯ್ಕ್, ವಯಸ್ಸು: 40 ವರ್ಷ, ಲಂಬಾಣಿ ಜನಾಂಗ, ದ್ವಿ.ದ.ಸ. ವಾಸ: ಗೆಸ್ಟ್ ಹೌಸ್ ಹತ್ತಿರ, ಬಳ್ಳಾರಿರವರು ಹಬ್ಬದ ಪ್ರಯುಕ್ತ ಕಿರಾಣಿ ತರಲು ಸಣ್ಣ ಮಾರ್ಕೇಟ್ ಹತ್ತಿರ ಹೋಗಿ ಗ್ರಾಂ ರಸ್ತೆಯಲ್ಲಿ ಸುಂಕ್ಲಮ್ಮ ಗುಡಿ ಎದುರುಗಡೆ ಇರುವ ಕಟಿಂಗ್ ಷಾಪ್ ಪಕ್ಕದಲ್ಲಿರುವ ಹಣ್ಣಿನ ಅಂಗಡಿಯ ಮುಂದುಗಡೆ ರಸ್ತೆಯ ಬದಿಯಲ್ಲಿ ರಾತ್ರಿ ಸುಮಾರು 7-30 ಗಂಟೆಯ ನಿಂತುಕೊಂಡಿದ್ದಾಗ ಅದೇ ಸಮಯದಲ್ಲಿ ಅದೇ ಗೋಲ್ಡ್ ಸ್ಮಿತ್ ಸ್ಟ್ರೀಟ್ ಕಡೆಯಿಂದ ಲಾರಿ ನಂಬರ್: ಕೆಎ-16 ಸಿ-1408 ನೇದ್ದರ ಚಾಲಕನಾದ ಕೆ.ಪಿ.ವಿಶ್ವಾಸ, ವಾಸ: ಬಿ.ಜಿ.ಕೇರೆ, ಚಿತ್ರದುರ್ಗ ಜಿಲ್ಲೆ ಈತನು ಲಾರಿಯನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿವರ್ಸ್ ತೆಗೆದುಕೊಳ್ಳಲು ಹೋಗಿ ಲಾರಿಯ ಮುಂದಿನ ಎಡಬದಿಯ ಚಕ್ರವನ್ನು ಫಿರ್ಯಾಧಿದಾರರ ಎಡಗಾಲಿನ ಹಿಮ್ಮಡಿಯ ಮೇಲೆ ಹತ್ತಿಸಿ ಇಳಿಸಿದ್ದರಿಂದ ಫಿರ್ಯಾಧಿದಾರರ ಎಡಕಾಲಿನ ಹಿಮ್ಮಡಿಯ ಬಳಿ ಚರ್ಮ ಮತ್ತು ಮಾಂಸಖಂಡ ಕಿತ್ತು ರಕ್ತಗಾಯವಾಗಿರುತ್ತದೆಂದು, ಲಾರಿಯ ಚಾಲಕನು ಲಾರಿಯ ಮಾಲೀಕರಿಗೆ ಮಾಹಿತಿ ತಿಳಿಸಿ ಬರುತ್ತೇನೆಂದು ಹೇಳಿ ಹೊರಟು ಹೋಗಿರುತ್ತಾನೆಂದು, ಈ ದಿನದ ವರೆಗೂ ಕಾದು ನೋಡಲು ಬಾರದೇ ಇದ್ದರಿಂದ ತಡವಾಗಿ ಈ ಅಪಘಾತ ಪಡಿಸಿದ ಲಾರಿಯ ಚಾಲಕ ಕೆ.ಪಿ.ವಿಶ್ವಾಸ್ ಈತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
Hosahalli PS
2 Cr.No:0186/2015
(KARNATAKA POLICE ACT, 1963 U/s 87 )
19/10/2015 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ:೧೮/೧೦/೨೦೧೫ ರಂದು ಸಂಜೆ ೦೬-೦೦ ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಹುಲಿಕ್ಕೆರೆ ಗ್ರಾಮದಲ್ಲಿರುವ ಶ್ರೀ ಕಲ್ಲೆಶ್ವರ ದೇವಸ್ಥಾನದ ಮುಂಬಾಗದಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಬೀದಿ ದೀಪದ ಕೆಳಗೆ ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದಿದ್ದರುತ್ತದೆ. ಠಾಣೆಯಲ್ಲಿದ್ದ ಪಿ.ಸಿ.ಗಳಾದ ೩೭೪,೧೮೯,೩೯೭,೩೩೧,೩೪,೧೦೭೩,೬೬೧ ರವರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ಮೇಲ್ಕಂಡ ಪಿ.ಸಿ.ಗಳಾದ ೩೭೪,೧೮೯,೩೯೭,೩೩೧,೩೪,೧೦೭೩,೬೬೧ ರವರಿಗೆ ಸರ್ಕಾರಿ ಜೀಪಿನಲ್ಲಿ ಕೂಡಿಸಿಕೊಂಡು ಸಂಜೆ ೦೬-೧೫ ಗಂಟೆಗೆ ಠಾಣೆಯಿಂದ ಹೊರಟು ಸಂಜೆ ೦೬-೪೫ ಗಂಟೆಯ ಸುಮಾರಿಗೆ ಹುಲಿಕ್ಕೆರೆ ಗ್ರಾಮದ ಊರ ಹೊರಗಡೆ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಪಂಚರನ್ನು ಬರಮಾಡಿಕೊಂಡು ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ   ನಾವೆಲ್ಲರೂ ಕಾಲು ನಡಿಗೆಯಿಂದ ನಡೆದು ಕೊಂಡು ರಾತ್ರಿ ೦೭-೧೫ ಗಂಟೆಯ ಸುಮಾರಿಗೆ ಹುಲಿಕ್ಕೆರೆ ಗ್ರಾಮದಲ್ಲಿರುವ ಶ್ರೀ ಕಲ್ಲೆಶ್ವರ ದೇವಸ್ಥಾನದ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಶ್ರೀ ಕಲ್ಲೆಶ್ವರ ದೇವಸ್ಥಾನದ ಮುಂಬಾಗದಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಬೀದಿ ದೀಪದ ಕೆಳಗೆ ೬ ಜನರು ಗುಂಪಾಗಿ ಕುಳಿತುಕೊಂಡು ಅಂದರ್- ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ ೦೭-೩೦ ಗಂಟೆಗೆ ನಾನು ಸಿಬ್ಬಂಧ್ದಿ ಮತ್ತು ಪಂಚರೊಂದಿಗೆ ಇಸ್ಪೇಟ್ ಜೂಜಾಟದ ಸ್ಥಳದ ಮೇಲೆ ದಾಳಿ ಮಾಡಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರನ್ನು ಹಿಡಿದುಕೊಂಡು ಇಸ್ಪೇಟ್ ಜೂಜಾಟ ಆಡುತ್ತಿದ್ದ ವ್ಯಕ್ತಿಗಳಿಗೆ ಹೆಸರು ವಿಳಾಸ ಕೇಳಲಾಗಿ ೧] ಶರಣಪ್ಪ ತಂದೆ ಕೆಂಚಪ್ಪ ೩೨ ವರ್ಷ, ನಾಯಕರು, ಗಾರೆ ಕೆಲಸ, ವಾಸ: ಹುಲಿಕ್ಕೆರೆ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೨೨೦-೦೦ ರೂಗಳು ದೊರೆಯಿತು ೨] ಮುನಿಶೆಟ್ಟಿ ತಂದೆ ವೆಂಕಟೆಶಪ್ಪ, ೩೧ ವರ್ಷ,ಎಣ್ಣೆಗಾಣಿಗರು, ಕೂಲಿ ಕೆಲಸ, ವಾಸ: ಹುಲಿಕ್ಕೆರೆ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೪೦೦=೦೦ ರೂಗಳು ದೊರೆಯಿತು ೩] ವಿರೇಶ ತಂದೆ ಮೂಗಪ್ಪ,೩೬ ವರ್ಷ,ವ್ಯವಸಾಯ ,ನಾಯಕ ಜನಾಂಗ,ವಾಸ: ಹುಲಿಕ್ಕೆರೆ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೬೦೦=೦೦ ರೂಗಳು  ದೊರೆಯಿತು ೪] ಗುರುಸ್ವಾಮಿ ತಂದೆ ಜೋಕೇಶಪ್ಪ,೨೮ ವರ್ಷ,ನಾಯಕ ಜನಾಂಗ,ವ್ಯವಸಾಯ,ವಾಸ: ಹುಲಿಕ್ಕೆರೆ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೩೩೦=೦೦ ರೂಗಳು ದೊರೆಯಿತು ೫] ತಮ್ಮಪ್ಪ ತಂದೆ ಚೆನ್ನಪ್ಪ, ವ:೫೫ ವರ್ಷ, ನಾಯಕ ಜನಾಂಗ, ಕೂಲಿಕೆಲಸ, ವಾಸ: ಹುಲಿಕ್ಕೆರೆ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೩೫೦=೦೦ ರೂಗಳು ದೊರೆಯಿತು ೬] ಜಯಣ್ಣ ತಂದೆ ನಿಂಗಪ್ಪ, ವ:೨೭ ವರ್ಷ, ನಾಯಕ ಜನಾಂಗ, ಎಳೆನೀರು ವ್ಯಾಪಾರ, ವಾಸ: ಹುಲಿಕ್ಕೆರೆ ಗ್ರಾಮ ಅಂತ ತಿಳಿಸಿದ್ದು ಇವನ ಮುಂದುಗಡೆ ಹಣ ರೂ:೨೫೦=೦೦ ರೂಗಳು ದೊರೆಯಿತು ಜೂಜಾಟದ ಸ್ಥಳದಲ್ಲಿ ೫೨ ಇಸ್ಪೇಟ್ ಎಲೆಗಳು ದೊರೆತಿದ್ದು, ೫೨ ಇಸ್ಪೇಟ್ ಎಲೆಗಳನ್ನು ಮತ್ತು ಇಸ್ಪೇಟ್ ಜೂಜಾಟದ ಒಟ್ಟು ಹಣ ೨೧೫೦=೦೦ ರೂಗಳನ್ನು ರಾತ್ರಿ ೦೭-೩೦ ಗಂಟೆಯಿಂದ ರಾತ್ರಿ ೦೮-೩೦ ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದು ಕೊಂಡು ಜಪ್ತು ಮಾಡಿಕೊಂಡ ಇಸ್ಪೇಟ್ ಎಳೆಗಳು,ಮತ್ತು ಜೂಜಾಟದ ಹಣ ರೂ:೨೧೫೦=೦೦ ರೂಗಳನ್ನು ಹಾಗು ಆರೋಪಿತರಿಗೆ ಈ ದಿನ ರಾತ್ರಿ ೦೯-೦೦ ಗಂಟೆಗೆ ಠಾಣೆಗೆ ವಾಪಾಸ್ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿದ್ದನ್ನು ಸ್ವೀಕರಿಸಿ ಹೊಸಹಳ್ಳಿ ಠಾಣೆ ಎನ್ ಸಿ ನಂ 160/1504/2015ಕಲಂ 87 ಕೆಪಿ ಯ್ಯಾಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
ಈ ಮೇಲ್ಕಂಡ 06 ಜನ ಪ್ರತಿವಾದಿಗಳಿಗೆ ನಾವು ತಿಳಿಸಿದ ದಿನಾಂಕದಂದು ಠಾಣೆಗೆ ಹಾಜರಾಗುವಂತೆ ನೋಟೀಸ್ ನ್ನು ಜಾರಿಮಾಡಿ ಬಿಟ್ಟು 
ಕಳಿಸಿಕೊಟ್ಟಿರುತ್ತೇನೆ. ಹೊಸಹಳ್ಳಿ ಠಾಣೆಯ ಎನ್,ಸಿ ನಂ 160/1504/2015 ಕಲಂ 87 ಕೆಪಿ ಯ್ಯಾಕ್ಟ್ ಪ್ರಕರಣವು ಎನ್,ಸಿ ಪ್ರಕರಣವಾಗಿದ್ದರಿಂದ ಸದ್ರಿ ಪ್ರಕರಣವನ್ನು ಪ್ರಥಮ ವರ್ತಮಾನ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ನಡೆಸಲು ಪರವಾನಿಗೆ ನೀಡಬೇಮೆಂದು ಮಾನ್ಯ ನ್ಯಾಯಾಲಯದಲ್ಲಿ ವಿನಂತಿಸಿ ವಿನಂತಿ ಪತ್ರವನ್ನು ನಿವೇದಿಸಿಕೊಂಡಿದ್ದರ ಪತ್ರದ ಮೇಲೆ ಮಾನ್ಯ ನ್ಯಾಯಾಲಯವು ಪರವಾನಿಗೆ ನೀಡಿದ್ದನ್ನು ಮಾನ್ಯ ನ್ಯಾಯಾಲಯದ ಕರ್ತವ್ಯಕ್ಕೆ ಹೋಗಿದ್ದ ಹೆಚ್ ಸಿ 312 ರವರು ಈ ದಿನ ದಿನಾಂಕ 19-10-2015 ರಂದು ಬೆಳಿಗ್ಗೆ 10-30 ಗಂಟೆಗೆ ಬಂದು ಒಪ್ಪಿಸಿದ್ದನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Hospet Town PS
3 Cr.No:0203/2015
(MMDR (MINES AND MINERALS REGULATION OF DEVELOPMENT) ACT 1957 U/s 4(1),4(1A) ; KARNATAKA MINOR MINERAL CONSISTENT RULE 1994 U/s 42,44 ; IPC 1860 U/s 379 )
19/10/2015 Under Investigation
THEFT - Other Items Not Included Above
Brief Facts :  ದಿನಾಂಕ:19/10/2015 ರಂದು ಮಧ್ಯಾಹ್ನ 12-00 ಗಂಟೆಗೆ ಶ್ರೀ,ಈ.ನಾಗರಾಜ, ಎ.ಎಸ್.ಐ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಸಲ್ಲಿಸುವ ದೂರು ಏನೆಂದರೆ ನಾನು ಈ ದಿನ ದಿನಾಂಕ 19/10/2015 ರಂದು ಬೆಳಿಗ್ಗೆ 10-00 ಗಂಟೆಗೆ ರಾಮಾ ಸರ್ಕಲ್ ಹತ್ತಿರ ಪಿಸಿ-861,865,968 ರವರೊಂದಿಗೆ ಗಸ್ತಿನಲ್ಲಿದ್ದಾಗ ವಾಲ್ಮಿಕಿ ಸರ್ಕಲ್ ಕಡೆಯಿಂದ ಒಂದು ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಚಾಲಕ ಮತ್ತು ಇನ್ನೊಬ್ಬರು ಬರುವುದನ್ನು ನೋಡಿ ಸಿಬ್ಬಂದಿಯವರ ಸಹಾಯದಿಂದ ಟ್ರಾಕ್ಟರ್ ಟ್ರಾಲಿಯನ್ನು ನಿಲ್ಲಿಸಿ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಪರವಾನಗಿ ಬಗ್ಗೆ ವಿಚಾರಿಸಲು ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದರಿಂದ ಪಿಸಿ-865 ರವರ ಮುಖಾಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ಸದರಿ ಮಾಹಿತಿಯನ್ನು ತಿಳಿಸಿ ಈ ಬಗ್ಗೆ ಪಂಚನಾಮೆ ಬರೆಸಿ ಸಹಕರಿಸಬೇಕೆಂದು ಕೇಳಿಕೊಂಡು ಮೇರೆಗೆ ಅವರು ಒಪ್ಪಿದ ನಂತರ ಪಂಚರ ಸಮಕ್ಷಮದಲ್ಲಿ ಟ್ರಾಕ್ಟರ್ ಟ್ರಾಲಿಯ ನಂಬರ್ ನೋಡಲು ಟ್ರಾಕ್ಟರ್ ನಂ:ಕೆಎ-37/ಟಿಆರ್-1476, ಟ್ರಾಲಿ ನಂ: ಕೆಎ-37/ಟಿ-1759 ಅಂತ ಇದ್ದು, ಚಾಲಕನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಶಿವರಾಮ್ ತಂದೆ ದುರುಗಪ್ಪ, ವಯಸ್ಸು 27 ವರ್ಷ, ವಾಲ್ಮಿಕಿ ಜನಾಂಗ, ವಾಸ|| ಹೊಸಲಿಂಗಾಪುರ ಗ್ರಾಮ, ಕೊಪ್ಪಳ ಜಿಲ್ಲೆ ಮತ್ತು ತಾಲೂಕು ಅಂತ ತಿಳಿಸಿದ್ದು, ಇನ್ನೊಬ್ಬ ವ್ಯಕ್ತಿಗೆ ವಿಚಾರಿಸಲು ತನ್ನ ಹೆಸರು ಬಾಲಕ್ರಿಷ್ಣ ತಂದೆ ಆಂಜನೇಯುಲು, ವಯಸ್ಸು 28 ವರ್ಷ, ಹರಿಜನ ಜನಾಂಗ, ವಾಸ|| ಟಿ.ಬಿ ಡ್ಯಾಂ, ಹೊಸಪೇಟೆ ಅಂತ ತಿಳಿಸಿದ್ದು, ಸದರಿ ಟ್ರಾಕ್ಟರ್ ಟ್ರಾಲಿಯಲ್ಲಿ ಸುಮಾರು 2 ಟನ್ನಷ್ಟು ಮರಳಿರುತ್ತದೆ. ಸದರಿ ಟ್ರಾಕ್ಟರ್ ಚಾಲಕನಿಗೆ ಪಂಚರ ಸಮಕ್ಷಮದಲ್ಲಿ ಪುನಃ ಮರಳನ್ನು ತುಂಬಿಕೊಂಡು ಬಂದ ಬಗ್ಗೆ ಸಂಬಂದಪಟ್ಟ ಇಲಾಖೆಯಿಂದ ಯಾವುದಾದರು ಪರವಾನಿಗೆ ಇರುವ ಬಗ್ಗೆ ಕೇಳಲಾಗಿ ಸದರಿ ಚಾಲಕನು ತನ್ನಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲ, ಟ್ರಾಕ್ಟರ್ ಟ್ರಾಲಿ ಮಾಲೀಕರಾದ ಬಾಲಕೃಷ್ಣ ರವರು ತಿಳಿಸಿದಂತೆ ಮರಳನ್ನು ಅಕ್ರಮವಾಗಿ ತುಂಬಿಕೊಂಡು ಬಾಲಕೃಷ್ಣ ರವರೊಂದಿಗೆ ಹೊಗುತ್ತಿರುವುದಾಗಿ ತಿಳಿಸಿದನು, ಆಗ ಬಾಲಕೃಷ್ಣ ರವರಿಗೆ ವಿಚಾರಿಸಲು ಟ್ರಾಕ್ಟರ್ ಟ್ರಾಲಿಯನ್ನು ಬಾಡಿಗೆಗೆ ಪಡೆದುಕೊಂಡು ವ್ಮರಳು ಸಾಗಿಸುತ್ತಿರುವುದಾಗಿ ತಿಳಿಸಿದನು, ಸದರಿಯವರು ಟ್ರಾಕ್ಟರ್ ಟ್ರಾಲಿಯಲ್ಲಿ ಅಂದಾಜು ತಲಾ ರೂ.600=00 ಬೆಲೆ ಬಾಳುವ 2 ಟನ್ ಮರಳು ಕಳವು ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದು, ಈ ಬಗ್ಗೆ ಬೆಳಿಗ್ಗೆ  10-15 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆಯನ್ನು ಮಾಡಿಕೊಂಡು ಸದರಿ ಟ್ರಾಕ್ಟರ್ ಟ್ರಾಲಿಯನ್ನು ಮರಳು ಸಮೇತ ಜಪ್ತುಪಡಿಸಿಕೊಂಡು ಮತ್ತು ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ತೆಗೆದುಕೊಂಡು ಬಂದಿದ್ದು. ಸದರಿ ಟ್ರಾಕ್ಟರ್ ಟ್ರಾಲಿ ಚಾಲಕ ಮತ್ತು ಮಾಲಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ನಂ:203/15 ಕಲಂ:4[1], 4[1ಎ] ಮೈನ್ಸ್ ಅಂಡ್ ಮಿನರಲ್ಸ್ ರೆಗ್ಯೂಲೇಷನ್ ಡೆವಲಪ್ಮೆಂಟ್ ಆಕ್ಟ್-1957 (ಎಂ.ಎಂ.ಡಿ.ಆರ್ ಆಕ್ಟ್-1957) ಮತ್ತು ಕಲಂ:42, 44 ಕರ್ನಾಟಕ ಮೈನರ್ ಮಿನರಲ್ ಕಾನ್ಸಿಸ್ಟೆಂಟ್ ರೂಲ್-1994(ಕೆ.ಎಂ.ಎಂ.ಸಿ.ಆರ್ ಆಕ್ಟ್-1994) ಆಧಾರ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.
Kamalapur PS
4 Cr.No:0090/2015
(CODE OF CRIMINAL PROCEDURE, 1973 U/s 109 )
19/10/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ:- 19/10/2015ರಂದು ನನ್ನದು ಗುಡ್ ಮಾರ್ನಿಂಗೆ  ಬೀಟ್‌ಗೆ ನಾನು ಮತ್ತು ಸಿಬ್ಬಂದಿಯರುಗಳಾದ ಹೆಚ್.ಸಿ 149, 271, ಪಿಸಿ-516, 798, 1230 ರವರೊಂದಿಗೆ ಬೆಳಿಗ್ಗೆ 05-30 ಗಂಟೆಗೆ ಠಾಣಾ ಜೀಪ್ ನಂಬರ್ ಕೆ.ಎ 34ಜಿ 256 ನೇದ್ದರಲ್ಲಿ ಠಾಣೆಯನ್ನು ಬಿಟ್ಟು ಬೆಳಿಗ್ಗೆ 05-45 
ಗಂಟೆ ಸಮಯದಲ್ಲಿ ಕಮಲಾಪುರ ಪಟ್ಟಣದ ಬಸವೇಶ್ವರ ಟಾಕೀಸ್ ಹತ್ತಿರ ಹೆಚ್.ಪಿ.ಸಿ ರಸ್ತೆಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಪೊಲೀಸ್ ಆದ ನಮ್ಮನ್ನು ನೋಡಿ ಭಯಪಟ್ಟು ಅನುಮಾನಾಸ್ಪದ ರೀತಿಯಲ್ಲಿ ವರ್ತನೆ ಮಾಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸದರಿ ವ್ಯಕ್ತಿಯನ್ನು ಹಿಡಿದ ಸದರಿ ವ್ಯಕ್ತಿಯಿಂದ ಯಾವುದಾರೂ ಸ್ವತ್ತಿನ ಅಪರಾದ ಪ್ರಕರಣಗಳಲ್ಲಿ ಭಾಗಿಯಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಮುಂಜಾಗ್ರತ ಕ್ರಮಕ್ಕಾಗಿ ಸದರಿ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆತಂದು ಆರೋಪಿತನ ವಿರುದ್ಧ ಪ್ರ.ವ ವರದಿ ಸಲ್ಲಿಸಲಾಗಿದೆ.
Tekkalkota PS
5 Cr.No:0105/2015
(KARNATAKA POLICE ACT, 1963 U/s 78(II) )
19/10/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ: 19/10/2015 ರಂದು ಬೆಳಿಗ್ಗೆ 9-10 ಗಂಟೆಗೆ ಪಿಎಸ್ ಐ ಸಾಹೇಬರು ಹೆರಕಲ್ಲು ಗ್ರಾಮದ  ಮಾರೆಮ್ಮಗುಡಿ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಚೀಟಿಗಳನ್ನುಬರೆದುಕೊಡುತ್ತಿದ್ದಾರೆಂಧು ಮಾಹಿತಿ ಪಡೆದು ಬೆಳ್ಳಿಗೆ 9-40 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಸೇರಿದ್ದ ಜನರು ಓಡಿ ಹೋಗಿದ್ದು, ಮಟಕಾ ಜೂಜಾಟದ ಚೀಟಿಗಳನ್ನು ಬರೆದು ಕೊಡುತ್ತಿದ್ದ  ಆರೋಪಿ ಹುಸೇನ್ ಬಾಷನನ್ನು ಸಿಕ್ಕಿಬಿದ್ದಿದ್ದು, ಆತನಿಂದ ಮಟಕಾ ಜೂಜಾಟದ ನಗದು ಹಣ 12450/- ಹಾಗೂ ಮಟಕಾ ಸಾಮಾಗ್ರಿಗಳು ಮತ್ತು ಒಂದು ಸೆಲ್ ಕಾನ್ ಮೊಬೈಲ್ ಬೆಲೆ 100/- ದೊರೆತ್ತಿದ್ದು,. ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯ ಎಂದು ಕೇಳಿದ್ದಕ್ಕೆ ನಿಟ್ಟೂರಿನ ಕುರುಬರ ಲಕ್ಷ್ಮಣನಿಗೆ ಕೊಡುವುದಾಗಿ ತಿಳಿಸಿದ್ದು, ಪಿಎಸ್ ಐ ಸಾಹೇಬರು ಆರೋಫಿ ಹುಸೇನ್ ಬಾಷನ್ನನ್ನು ಮತ್ತು ಮಟಕಾ ಜೂಜಾಟದ ನಗದು ಹಣ ಹಾಗೂ ಸಾಮಾಗ್ರಿಗಳನ್ನು  ತಂದು ಕೊಟ್ಟು, ನೀಡಿದ ದೂರನ್ನು ಪಡೆದು  ಆರೋಪಿ-ಹುಸೇನ್ ಬಾಷ ಮತ್ತು ಕುರುಬರ ಲಕ್ಷ್ಮಣನ ವಿರುದ್ದ ಪ್ರಕರಣ ದಾಖಲು ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ