ಶನಿವಾರ, ಅಕ್ಟೋಬರ್ 17, 2015

PRESS NOTE OF 17/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0438/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
17/10/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 17-10-2015 ರಂದು ಬೆಳಿಗ್ಗೆ 9-15 ಗಂಟೆಗೆ ಠಾಣೆಯ ಪಿ.ಎಸ್.ಯ ರವರಾದ ಶ್ರೀ. ಕೆ. ಹೊಸಕೇರಪ್ಪರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ದಿನಾಂಕ: 17-10-2015 ರಂದು ಬೆಳಿಗ್ಗೆ ತಮಗೆ ಠಾಣೆಯ ಸರಹದ್ದು ಕಮ್ಮರಚೇಡು ಗ್ರಾಮದ ಹಗರಿ ಹಳ್ಳ್ಳದಲ್ಲಿ ಕೆಲವು ಜನರು ಒಂದು ಟ್ರಾಕ್ಟರ್ ಟ್ರಾಲಿಯನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದಿದ್ದು ಈ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-141 ರವರೊಂದಿಗೆ ಇಲಾಖೆಯ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಹೋಗಿ ನೋಡಲು ಹಗರಿ ಹಳ್ಳದಲ್ಲಿ ಕೆಲವು ಜನರು ಒಂದು ಟ್ರಕ್ಟರ್ ಟ್ರಾಲಿಯನ್ನು ನಿಲ್ಲಿಸಿಕೊಂಡು ಮರಳನ್ನು ತುಂಬುತ್ತಾ ಇದ್ದು ದಾಳಿ ಮಾಡಿದಾಗ ಮರಳನ್ನು ತುಂಬುತ್ತಿದ್ದ ಜನರು ಟ್ರಾಕ್ಟರ್ ಟ್ರಾಲಿಯನ್ನು ಬಿಟ್ಟು ಓಡಿ ಹೋಗಿದ್ದು ಟ್ರಾಕ್ಟರ್ ಇಂಜಿನ್ ನಂಬರ್: 523427241957 ಚಾಸಿ ನಂಬರ್ 923411537756 ಅದಕ್ಕೆ ಜೋಟಿಸಿದ ಟ್ರಾಲಿ ಚಾಸಿ ಸಂಖ್ಯೆ: ಎ 0015 ನೇದ್ದರ ಚಾಲಕ ಮತ್ತು ಮಾಲೀಕ ಮಾಲೀಕ ಯಾವುದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳನ್ನು ಕಳುವು ಮಾಡಿ ಸಾಗಾಣಿಕೆ ಮಾಡುತ್ತಿದ್ದರಿಂದ ಟ್ರಾಕ್ಟರ್, ಟ್ರಾಲಿ, ಟ್ರಾಲಿಯಲ್ಲಿ ಲೋಡು ಮಾಡಿದ 2 ಮೆಟ್ರಿಕ್ ಟನ್ ಮರಳು ಮತ್ತು 2 ಮರಳು ತುಂಬಿದ ಸ್ಯಾಂಪಲ್ ಚೀಲಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಬಂದಿದ್ದಾಗಿ ಟ್ರಾಕ್ಟರ್ ಮತ್ತು ಟ್ರಾಲಿ ಚಾಲಕ ಮತ್ತು ಮಾಲೀಕನ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
2 Cr.No:0439/2015
(INDIAN MOTOR VEHICLES ACT, 1988 U/s 187 ; IPC 1860 U/s 279,337 )
17/10/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ 16-10-2015 ರಂದು ಸಂಜೆ 6-30 ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು, ಚರಕುಂಟ ಗ್ರಾಮದ ಹತ್ತಿರ ಬಳ್ಳಾರಿ-ಬೊಮ್ಮನಹಾಳ್ ರಸ್ತೆಯ ಫಿರ್ಯಾಧಿದಾರರ ಹೊಲದ ಮುಂದೆ ಫಿರ್ಯಾದುದಾರರ ಅಣ್ಣನ ಮಗ ವಿರೇಶನು ತಳ್ಳು ಬಂಡಿಯಲ್ಲಿ ಹುಲ್ಲಿನ ಹೊರೆ ಹಾಕಿಕೊಂಡು, ತಳ್ಳುವ ಬಂಡಿಯನ್ನು ತಳ್ಳಿಕೊಂಡು ರಸ್ತೆಯ ಮೇಲೆ ನಡೆದುಕೊಂಡು ಚರಕುಂಟ ಗ್ರಾಮದ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಅಂದರೆ ಬೊಮ್ಮನಹಾಳ್ ರಸ್ತೆ ಕಡೆಯಿಂದ ಬಂದ ಮೋಟರ್ ಸೈಕಲ್ ನಂಬರ್ ಕೆಎ-36-ಇಇ-4038 ನೇದ್ದನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವೀರೇಶನಿಗೆ ಡಿಕ್ಕಿ ಹೊಡೆದಿದ್ದರಿಂದ ವಿರೇಶನು ಕೆಳಗಡೆ ಬಿದ್ದು, ಬಲಕೈ ಮೊಣಕಾಲಿಗೆ, ಬಲಗಾಲು, ಎಡಕಾಲಿಗೆ ರಕ್ತಗಾಯಗಳಾಗಿರುವುದಾಗಿ, ಮೋಟರ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ನ್ನು ಬಿಟ್ಟು, ಓಡಿ ಹೋಗಿರುತ್ತಾನೆಂದು, ಅಪಘಾತ ಮಾಡಿದ ಮೋಟರ್ ಸೈಕಲ್ ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಜಗಿಸಲು ಕೋರಿ ದೂರು ಇರುತ್ತದೆ.
3 Cr.No:0440/2015
(ESSENTIAL COMMODITIES 
17/10/2015 Under Investigation
ACT, 1955 U/s 7,3 ; PDS CONTROLING ORDER, 1992 U/s 18(2) )
CONSUMER - Essential Commodites Act 1955
Brief Facts :  ದಿನಾಂಕ: 17-10-2015 ರಂದು ಮದ್ಯಾಹ್ನ 1-30 ಗಂಟೆಗೆ ಶ್ರೀ. ಶರಣಬಸಯ್ಯ,  ಆಹಾರ ನಿರೀಕ್ಷಕರು, ಭಾಗ:1 ಗ್ರಾಮಾಂತರ, ತಾಲ್ಲೂಕು ಕಛೇರಿ, ಬಳ್ಳಾರಿರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ ಈ ದಿನ ದಿನಾಂಕ: 17-10-2015 ರಂದು ಬಳ್ಳಾರಿ ರೂಪನಗುಡಿ ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದಿದ್ದರಿಂದ ನಾನು ಬಳ್ಳಾರಿ ಗ್ರಾಮೀಣ ಪೊಲಿಸ್ ಠಾಣೆಯ ಪಿ.ಎಸ್.ಐ ಶ್ರೀ. ಕೆ. ಹೊಸಕೇರಪ್ಪ, ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-141-987-500ರವರು ಮತ್ತು ಪಂಚರೊಂದಿಗೆ ಪೊಲೀಸ್ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಬಳ್ಳಾರಿ-ರೂಪನಗುಡಿ ರಸ್ತೆ ಧನಲಕ್ಚ್ಮಿ ಕ್ಯಾಂಪಿನಲ್ಲಿ ಕಾಯುತ್ತಿದ್ದಾಗ ಬೆಳಿಗ್ಗೆ 11-30 ಗಂಟೆಗೆ ಬಳ್ಳಾರಿ ಕಡೆಯಿಂದ ಬಂದ ಆಟೋಗಳನ್ನು ಪರಿಶೀಲಿಸಿ ನೋಡಲು  1] ಅಪ್ಪೇ ಪ್ಯಾಸೆಂಜರ್ ಆಟೋ ನಂಬರ್ ಎ.ಪಿ-02-ಟಿ-ಟಿ-8167 ರಲ್ಲಿ ಅದರ ಚಾಲಕ/ಮಾಲೀಕ ಜಿ.ನಾಗೇಂದ್ರನು ಒಟ್ಟು 10 ಬಿಳಿಯ ಪ್ಲಾಸ್ಟಿಕ್ ಸೂಪರ್ ಚೀಲಗಳಲ್ಲಿ ಒಂದರಲ್ಲಿ 40 ಕೆ.ಜಿ ಯಂತೆ ಒಟ್ಟು 400 ಕೆ.ಜಿ ಬೆಲೆ ರೂ. 4000/- ಪಡಿತರ ಅಕ್ಕಿಯನ್ನು ಮತ್ತು 2] ಅಪ್ಪೇ ಪ್ಯಾಸೆಂಜರ್ ಆಟೋ ಸಂಖ್ಯೆ: ಎ.ಪಿ-02-ವಿ-8096 ನೇದ್ದರ ಚಾಲಕ ಮತ್ತು ಮಾಲೀಕ ಶಂಕರ್ ಒಟ್ಟು 16 ಬಿಳಿಯ ಪ್ಲಾಸ್ಟಿಕ್ ಸೂಪರ್ ಜೀಲಗಳಲ್ಲಿ ಒಂದರಲ್ಲಿ 40 ಕೆ.ಜಿ ಯಂತೆ ಒಟ್ಟು 640 ಕೆ.ಜಿ ಪಡಿತರ ಅಕ್ಕಿಯನ್ನು ಲೋಡು ಮಾಡಿಕೊಂಡಿದ್ದು ಇವರು ಬಳ್ಳಾರಿ ನಗರೆದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿ ತಮ್ಮ ವಾಹನಗಳಲ್ಲಿ ದಾಸ್ತಾನು ಮಾಡಿಕೊಂಡು ಸಾಗಾಣಿಕೆ ಮಾಡಿದ್ದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಮಾಡಿದ ಪಂಚನಾಮೆ ಅಡಿಯಲ್ಲಿ 2 ಆಟೋಗಳು, ಅವುಗಳಲ್ಲಿ ಲೋಡು ಮಾಡಿದ ಅಂದಾಜು ರೂ. 10400/- ಬೆಲೆಯ 1040 ಕೆ.ಜಿ ಪಡಿತರ ಅಕ್ಕಿಯನ್ನು ಜಪ್ತು ಮಾಡಿಕೊಂಡು 2 ಸ್ಯಾಂಪಲ್ ಅಕ್ಕಿಯನ್ನು ಸಂಗ್ರಹಿಸಿಕೊಂಡು ಜಿ.ನಾಗೇಂದ್ರ ಮತ್ತು ಶಂಕರ್ ರವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದಿದ್ದಾಗಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
Gandhinagar PS
4 Cr.No:0218/2015
(CODE OF CRIMINAL PROCEDURE, 1973 U/s 109 )
17/10/2015 Under Investigation
CrPC - Security For Good Behaviour (Sec 109)
Brief Facts :  ಫಿರ್ಯಾಧಿದಾರರು ದಿನಾಂಕ:17.10.2015 ರಂದು ಬೆಳಗಿನ ಜಾವ 4.45 ಗಂಟೆಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಿದ್ದಾಗ ಆರೋಪಿತನು ಬಳ್ಳಾರಿ ನಗರದ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಹತ್ತಿರ ಅನುಮಾನಸ್ಪದವಾಗಿ ಇದ್ದವನ್ನು ವಿಚಾರಿಸಲು ಸಮರ್ಪಕವಾದ ಉತ್ತರ ನೀಡದೇ ಇರುವುದರಿಂದ ಆರೋಪಿತನನ್ನು ಹಾಗೇಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಬಹುದೆಂದು ಸದರಿ ಆರೋಪಿತನನ್ನು ಠಾಣೆಗೆ ಕರೆದುಕೊಂಡು ಬಂದು ಆರೋಪಿತನ ವಿರುದ್ದ ಕ್ರಮ ಜರುಗಿಸಲಾಗಿದೆ
Gudekote PS
5 Cr.No:0124/2015
(IPC 1860 U/s 143,144,147,323,324,504,506,149 )
17/10/2015 Under Investigation
RIOTS - Others
Brief Facts :  ಘನ ಸಿ.ಜೆ. & ಜೆ.ಎಂ.ಎಫ್.ಸಿ ಕೂಡ್ಲಿಗಿ ನ್ಯಾಯಾಲಯದ PCR No: 59/2015 ದಿ: 08/09/2015 ನೇದ್ದನ್ನು ಮಾನ್ಯ ಸಿ.ಪಿ.ಐ ಸಾಹೇಬರು ಕೂಡ್ಲಿಗಿರವರು ಈ ದಿನ ದಿ: 17/10/2015 ರಂದು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಠಾಣೆಗೆ ಕಳುಹಿಸಿ ಕೊಟ್ಟಿದ್ದನ್ನು ಬೆಳಿಗ್ಗೆ 10-30 ಗಂಟೆಗೆ ಸ್ವೀಕರಿಸಿ ಪರಿಶೀಲಿಸಿ ನೋಡಲು ದಿನಾಂಕ: 31/08/2015 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ  ಕೆ.ರಾಯಾಪುರ ಗ್ರಾಮದ ಬಳಿ ಸರ್ವೇ ನಂ: 122 ನೇದ್ದರ ಒಟ್ಟು ವಿಸ್ತೀರ್ಣ 5.61 ಎಕರೆ ಜಮೀನಿನ ಪೈಕಿ ತನ್ನ 2.81 ಎಕರೆ ಜಮೀನಿಗೆ ನೀರು ಬಿಟ್ಟುಕೊಳ್ಳುವಾಗ ಆ-1 ರವರು ನೀರು ಬಿಡುವುದಿಲ್ಲವೆಂದು ತಡೆದಿದ್ದು, ಹೊಲದಲ್ಲಿನ ಬೆಳೆ ಒಣಗಿ ಹೋಗುತ್ತದೆ ನೀರು ಬಿಡುವಂತೆ ತಾನು ಕೇಳಿಕೊಂಡಾಗ ಆ-1 ರಿಂದ 5 ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನೊಂದಿಗೆ ಜಗಳ ತೆಗೆದು ' ಸೂಳೇ ಮಗನೇ ನಮ್ಮ ನೀರು ನಿಮ್ಮ ಹೊಲಕ್ಕೆ ಯಾಕೆ ಬಿಟ್ಟುಕೊಳ್ಳುತ್ತೀಯಾ' ಅಂತಾ ಬೈದು, ಕೈಕಾಲುಗಳಿಂದ ತನ್ನ ಬೆನ್ನಿಗೆ, ಹೊಟ್ಟೆಗೆ, ಮೈಕೈಗೆ ಪ್ರಜ್ಞೆ ತಪ್ಪಿ ಬೀಳುವಂತೆ ಹೊಡೆದು ಪೆಟ್ಟು ಮಾಡಿ ಪ್ರಜ್ಞೆ ತಪ್ಪಿ ಬಿದ್ದ ನಂತರ ಬಿಟ್ಟು ಹೋಗಿರುತ್ತಾರೆಂದು ಅಲ್ಲದೇ ಅದೇ ದಿನ ಸಂಜೆ 5-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಹತ್ತಿರ ಬಂದ ಆರೋಪಿತರು ನೀವು ಪೊಲೀಸ್ ಸ್ಟೇಷನ್ ಗೆ ಕೇಸು ಕೊಡಲು ಹೋದರೆ ನಿಮ್ಮ ಮನೆಯವರೆಲ್ಲರನ್ನೂ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಕಾರಣ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಪಿರ್ಯಾದಿ ಶ್ರೀ. ಪೆನ್ನಯ್ಯ ತಂದೆ ಭಂಡಾರಿ ಹನುಮಂತಪ್ಪ, ವಾಸ: ಕೆ. ರಾಯಾಪುರ ಗ್ರಾಮ ಇವರು ನ್ಯಾಯಾಲಯದ ಮುಖಾಂತರ ದೂರು ನೀಡಿದ್ದುದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತದೆ.
Hatcholli PS
6 Cr.No:0040/2015 17/10/2015 Under 
(CODE OF CRIMINAL PROCEDURE, 1973 U/s 102,41 ; IPC 1860 U/s 379 ) Investigation
THEFT - Of Automobiles - Of Two Wheelers
Brief Facts :  ದಿನಾಂಕ 16/10/2015 ರಂದು ರಾತ್ರಿ 11ಗಂಟೆಗೆ  ಸಿಬ್ಬಂದಿಯವರಾದ ಹೆಚ್.ಸಿ 77, ಪಿಸಿ. 916, 565, 195 ರವರೊಂದಿಗೆ ಸರ್ಕಾರಿ ಜೀಪ್ ನಂ ಕೆ.ಎ-34 ಜಿ-192 ನ್ನೆದ್ದರಲ್ಲಿ ಹಚ್ಚೊಳ್ಳಿ ಗ್ರಾಮದಲ್ಲಿ ರಾತ್ರಿ ಗಸ್ತು ವೀಕ್ಷಣೆಗೆ ಹೊರಟು, ಗಸ್ತು ಕರ್ತವ್ಯ ನಿರ್ವಹಿಸುತ್ತಾ, ಮದ್ಯರಾತ್ರಿ ಸುಮಾರು   1-00 ಗಂಟೆಗೆ ಹಚ್ಚೊಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಂದಾಗ, ಆಗ ಒಬ್ಬ ವ್ಯಕ್ತಿ ತನ್ನ ಸೈಕಲ್ ಮೋಟಾರ್ ನಲ್ಲಿ ಸಿರುಗುಪ್ಪ ಕಡೆಯಿಂದ ಬರುತ್ತಿದ್ದವನನ್ನು ನಿಲ್ಲಿಸಿ, ಅವನ ಹೆಸರು ವಿಳಾಸ ಮತ್ತು ವಾಹನದ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು,  ಸದರಿ ವ್ಯಕ್ತಿಯು ಸಮರ್ಪಕವಾದ ಉತ್ತರ ನೀಡದೆ, ತನ್ನ ಸೈಕಲ್ ಮೋಟರನ್ನು ಬಿಟ್ಟು, ಪರಾರಿಯಾಗಲು ಪ್ರಯತ್ನಿಸುವಾಗ, ಕೂಡಲೇ  ಸಿಬ್ಬಂದಿಗಳ ಸಹಾಯದಿಂದ ಅವನನ್ನು ಹಿಡಿದು, ಪುನಾಃ ಹೆಸರು ವಿಳಾಸ ಮತ್ತು ವಾಹನದ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡದ ಕಾರಣ, ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ಪಿಸಿ-916 ರವರಿಂದ ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು, ಅವರಿಗೆ ವಿಷಯವನ್ನು ತಿಳಿಸಿ, ಅವರು ಒಪ್ಪಿಕೊಂಡ ನಂತರ, ಸದರಿ ವ್ಯೆಕ್ತಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು, ಸದರಿ ವ್ಯಕ್ತಿ ತನ್ನ ಹೆಸರು ನಾಗಭೂಷಣ@ ನಾಗೇಶ ತಂದೆ ಲೇಟ್ ಚಂದ್ರಶೇಖರ್ 32ವರ್ಷ,ಜಂಗಮರ ಜನಾಂಗ ವಾಸ;ಬೀರಳ್ಳಿ ಸಿರುಗುಪ್ಪ ತಾಲೂಕು ಎಂದು ತಿಳಿಸಿ, ತನ್ನ ಸ್ವಾದೀನದಲ್ಲಿದ್ದ ಸೈಕಲ್ ಮೋಟಾರ ಬಗ್ಗೆ ವಿಚಾರಿಸಲು, ಅತನು ಸದರಿ ಸೈಕಲ್ ಮೋಟಾರನ್ನು ರಾಯಚೂರು ನಗರದ ನಮೋದಯ ಅಸ್ಪತ್ರೇಯ  ಬಳಿ ಕಳುವು ಮಾಡಿದ್ದು, ಅದನ್ನು ಮಾರಾಟ ಮಾಡಲು ತರುತ್ತಿರುವುದಾಗಿ ತಿಳಿಸಿದ. ಸದರಿ ಸೈಕಲ್ ಮೋಟಾರನ್ನು ಪರಿಶೀಲಿಸಲು ಇದು ಕಪ್ಪು ಮತ್ತು ನೀಲಿ ಬಣ್ಣದ ಹಿರೋ ಹೊಂಡಾ ಪ್ಯಾಷನ್+,ಅಗಿದ್ದು, ಇದರ ನಂ:-ಕೆಎ25-ಇ7582ಎಂದು ಇದ್ದು, ಸದರಿ ವಾಹನದ ಚಾಸರ್ಿ ನಂ:04ಕೆ010ಸಿ34132 ಹಾಗೂ ಇಂಜನ್ ನಂ:198316ಎಂದು ಇರುತ್ತದೆ. ಈ ವಾಹನವು ಕಳುವಿನ ವಾಹನವಾಗಿದ್ದು, ಇದರ ಬೆಲೆ ಅಂದಾಜು 20,000/- ರೂ ಅಗಬಹುದು. ಸೈಕಲ್ ಮೋಟಾರನ್ನು ಮುಂದಿನ  ಕ್ರಮಕ್ಕಾಗಿ ವಿವರವಾದ ಪಂಚನಾಮ ಮೂಲಕ ಜಪ್ತು ಮಾಡಿಕೊಂಡು, ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬೆಳಗಿನ ಜಾವ 03-00 ಗಂಟೆಗೆ ಠಾಣೆಗೆ ಹಿಂತಿರುಗಿ, ಅರೋಪಿತನ ವಿರುದ್ದ ಠಾಣೆ ಗುನ್ನೆ ನಂ:-40/2015 ಕಲಂ-41-102 ಸಿಅರ್ಪಿಸಿ ಮತ್ತು 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತೇನೆ.
Kottur PS
7 Cr.No:0144/2015
(IPC 1860 U/s 506,34,504,323,354 )
17/10/2015 Under Investigation
CASES OF HURT - Simple Hurt
Brief Facts :  ದಿನಾಂಕ 17-10-2015 ರಂದು  ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಮುದ್ರಿತ ದೂರು ಸಾರಾಂಶ, ದಿನಾಂಕ 16-10-2015 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಕೊಟ್ಟೂರಿನ ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಪಿರ್ಯಾದಿ ಹಾಗೂ ಆತನ ಹೆಂಡತಿ ನಿಂತಿರುವಾಗ  ಆರೋಪಿತರು ಬಂದು ಲೇ ಸೂಳೆ ಮಕ್ಕಳಾ ನಾವು ಕೊಟ್ಟ ಹಣವನ್ನು ಕೊಡುತ್ತಿಲ್ಲವೆಂದು ಜಗಳ ತೆಗೆದು  ದುರ್ಭಾಷೆಗಳಿಂದ ಬೈಯುತ್ತಾ ಪಿರ್ಯಾದಿಗೆ ಮತ್ತು ಪಿರ್ಯಾದಿ ಹೆಂಡತಿಗೆ ಕೈಗಳಿಂದ  ಎದೆಗೆ ಮತ್ತು ಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿ ಪಿರ್ಯಾದಿ ಹೆಂಡತಿ  ಕಮಲಮ್ಮಳಿಗೆ ಕೈಹಿಡಿದು ಎಳೆದು ಅವಮಾನ ಮಾಡಿದ್ದಲ್ಲದೆ, ಪ್ರಾಣ ಬೆದರಿಕೆ ಹಾಕಿರುತ್ತಾರೆಂದು  ಸದರಿ ಜಗಳವು ಗೋಪಾಲ ಎಂಬುವರಿಗೆ 11,000=00 ರೂಗಳನ್ನು ಕೊಡಬೇಕಾಗಿದ್ದು, ಆರೋಪಿ ಅದೇ  ಹಣವನ್ನು ಮಲ್ಲಕಾರ್ಜುನನು ಕೇಳಿದ್ದರಿಂದ ಬಾಯಿ ಮಾತಿನ ಜಗಳವಾಗಿದ್ದು, ಇದೇ ಹಿನ್ನೆಲೆಯಲ್ಲಿ ಸದರಿ ಜಗಳ ನಡೆದಿರುತ್ತದೆ. ಚಿಕಿತ್ಸೆಗಾಗಿ ಹೋಗಿದ್ದರಿಂದ ದೂರು ಕೊಡಲು ತಡವಾಗಿರುತ್ತದೆ ಎಂದು ನೀಡಿ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Kurugod PS
8 Cr.No:0171/2015
(KARNATAKA POLICE ACT, 1963 U/s 78 )
17/10/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕಃ 17/10/2015 ರಂದು ವ್ಮಧ್ಯಾನ್ಹ 2:30 ಗಂಟೆಗೆ ಕುರುಗೋಡು ಗ್ರಾಮದ ಬಳ್ಳಾರಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ-01 ರಿಂದ 04 ರವರು  ಮಟಕಾ ದಂಧೆಯಲ್ಲಿ ತೊಡಗಿದ್ದಾಗ ಪಿಎಸ್ಐ ರವರು ಸಿಬ್ಬಂದಿ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿದಾಗ  ಆರೋಪಿ-01 ರವರು ಸಿಕ್ಕಿಬಿದ್ದಿದ್ದು ಆರೋಪಿ-02 ರಿಂದ 04 ರವರು ಪರಾರಿಯಾಗಿದ್ದು  ಸಿಕ್ಕಿ ಬಿದ್ದ  ಆರೋಪಿ-01 ರವರನ್ನು  ಪಂಚರ ಸಮಕ್ಷಮ ಅಂಗಶೋಧನೆ ಮಾಡಲಾಗಿ ಮಟ್ಕಾ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 1200=00 ರೂಪಾಯಿಗಳು, ಒಂದು ಮಟ್ಕಾ ಪಟ್ಟಿ ಮತ್ತು ಒಂದು ಬಾಲ್ಪೆನ್, ಒಂದು ಮೊಬೈಲ್ ದೊರೆತಿರುತ್ತದೆ ಸದರಿ ಸ್ವತ್ತಿನೊಂದಿಗೆ ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಮಾನ್ಯ ಪಿಎಸ್ಐ ರವರು ಹಾಜರುಪಡಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೇನೆ,
Marriyammanahalli PS
9 Cr.No:0132/2015
(IPC 1860 U/s 506,504,143,147,148,149,323,324 )
17/10/2015 Under Investigation
RIOTS - Others
Brief Facts :  ಈ ದಿನ ದಿನಾಂಕ-17/10/2015 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿ ಸುಣಗಾರ ಗಂಗಾಧರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ದೂರು ಹಾಜರುಪಡಿಸಿದ್ದು ಪರಿಶೀಲಿಸಲು ದಿನಾಂಕ-14/10/2015 ರಂದು ಪಿರ್ಯಾದಿಯ ಹೆಂಡತಿ ತಮ್ಮ ಮನೆಯ  ಅಂಗಳದಲ್ಲಿ ಪಾತ್ರೆ ಸಾಮಾನುಗಳನ್ನು ತೊಳೆಯುವಾಗ  ಆಗ ಸಣ್ಣ ಸ್ವಾಮಿ ಇವರು ಇದು ನಮ್ಮ ಜಾಗ  ಎಂದು ಬಾಯಿ ಮಾತಿನ ಜಗಳ ಮಾಡಿರುತ್ತಾನೆ. ನಂತರ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಸಣ್ಣ ಸ್ವಾಮಿ ಈತನು  ಪಿರ್ಯಾದಿ ಮನೆಯ   ಅಂಗಳದಲ್ಲಿ ಕಲ್ಲುಗಳನ್ನು ಹಾಕಿದ ವಿಷಯದಲ್ಲಿ ಪಿರ್ಯಾದಿ ಮತ್ತು ಆತನ ತಮ್ಮ ಮಾರುತಿ ಏಕೆ ಕಲ್ಲುಗಳನ್ನು ಹಾಕಿದ್ದೀಯಾ ಎಂದಿದ್ದಕ್ಕೆ ಸಣಱಣ ಸ್ವಾಮಿ ದುರ್ಬಾಷೆಗಳಿಂದ ಬೈದು 1. ಸಣ್ಣ ಸ್ವಾಮಿ 2. ಮಾರೆಣ್ಣ 3. ಚೆನ್ನಜ್ಜ 4. ದೊಡ್ಡ ಸೋಮಪ್ಪ 5. ಚೆನ್ನಮ್ಮ 6. ಅಂಜಿನಮ್ಮ 7. ಗೌರಮ್ಮ ಮತ್ತು ದುರುಗಮ್ಮ ಇವರುಗಳು ಆಕ್ರಮ ಗುಂಪು ಕಟ್ಟಿಕೊಂಡು ಬಂದು ಪಿರ್ಯಾದಿಯ ತಮ್ಮ ಮಾರುತಿಗೆ ಸಣ್ಣ ಸ್ವಾಮಿ ಕಟ್ಟಿಗೆಯಿಂದ ತೆಲೆಯ ಹಿಂಭಾಗಕ್ಕೆ ಹೊಡೆದು ಹಲ್ಲೆ ಮಾಡಿ ನಂತರ ಬಾಯಿಂದ ಬಲಭುಜಕ್ಕೆ ಕಚ್ಚಿ ನಂತರ ಉಳಿದವರು ಮಾರುತಿಗೆ ಕೈಗಳಿಂದ ಹೊಡೆದು ನೆಲಕ್ಕ ಕೆಡವಿ ಕಾಲಿನಿಂದ ಒದ್ದಿರುತ್ತಾರೆ.ನಂತರ ದೊಡ್ಡ ಸೋಮಪ್ಪ ಮತ್ತು ಸಣ್ಣ ಸ್ವಾಮಿ ಇವರು " ಲೇ ಸೂಳೇ ಮಕ್ಕಳೇ ಇವತ್ತು ನೀವು ಉಳಿದುಕೊಂಡಿರಿ ನಿಮ್ಮ ಪ್ರಾಣ ತೆಯುತ್ತೇವೆ. ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ದೂರಿನ ಮೇರೆಗೆ ಗುನ್ನೆ ದಾಖಲಿಸಿದೆ.
Sirigeri PS
10 Cr.No:0156/2015
(MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
17/10/2015 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ಪಿಎಸ್ ಐರವರು ದಿನಾಂಕಃ17/10/2015 ರಂದು ಬೆಳಿಗ್ಗೆ 11:00 ಗಂಟೆಗೆ ಠಾಣಾ ಸರಹದ್ದಿನ ಉತ್ತನೂರು ಗ್ರಾಮದ ವೇದಾವತಿ ಹಗರಿ ನದಿಯಲ್ಲಿ ಟ್ರಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ಕಳ್ಳ ಸಾಗಾಟ ಮಾಡುತ್ತಿದ್ದಾರೆಂದು ಎಂದು ಖಚಿತ ಮಾಹಿತಿ ಬಂದ ಮೇರೆಗೆ, ನಾನು ಪಿಸಿ-890 ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಅವರ ಒಪ್ಪಿಗೆ ಪಡೆದು,  ನಾನು ಸಿಬ್ಬಂದಿಗಳಾದ ಪಿಸಿ-890,1162,638 ರವರು ಪಂಚರು ಸೇರಿ ಬೆಳಿಗ್ಗೆ  11:15 ಗಂಟೆಗೆ ಠಾಣೆಯಿಂದ ಬಿಟ್ಟು  ಮಧ್ಯಾಹ್ನ 12.00 ಗಂಟೆಗೆ  ಉತ್ತನೂರು ಗ್ರಾಮದ ವೇದಾವತಿ ಹಗರಿ ನದಿ ದಡದಲ್ಲಿ ನಿಂತು ನೋಡಲಾಗಿ ಸದರಿ ನದಿಯಲ್ಲ್ಲಿ ಎರಡು ಟ್ರಾಕ್ಟರ್ಗಳು  ಆಕ್ರಮವಾಗಿ ಮರಳು ತುಂಬಿಕೊಂಡು ನಿಂತಿದ್ದು, ಕಂಡುಬಂದಿದ್ದು, ನಾನು ಮತ್ತು ಸಿಬ್ಬಂದಿ ಪಿಸಿ-890.638.1162 ರವರು ಹಾಗೂ ಪಂಚರ ಸಮಕ್ಷಮ ಸದರಿ ನದಿಯಲ್ಲಿ ದಾಳಿ ಮಾಡಲಾಗಿ ಎರೆಡು ಮರಳು ತುಂಬಿದ ಟ್ರಾಕ್ಟರ್ ಮತ್ತು ಟ್ರಾಲಿ ಸಿಕ್ಕಿಬಿದ್ದಿದ್ದು, ಅದರ ಚಾಲಕರು ಟ್ರಾಕ್ಟರ್ ಬಿಟ್ಟು ಪರಾರಿಯಾದರು. ಸದರಿ ಟ್ರಾಕ್ಟರ್ಗಳ ಪರಿಶೀಲಿಸಲು 1) ಹಸಿರು ಬಣ್ಣದ ಜಾನ್ ಡೀರೆ ಕಂಪನಿಯ ಟ್ರಾಕ್ಟರ್ ಇದ್ದು ಇದರ ಇದರ ನೊಂದಣಿ ನಂ:ಕೆಎ34/ಟಿಎ3482 ಎಂದು ಇದ್ದು, ಕೆಂಪು ಬಣ್ಣದ ಟ್ರಾಲಿ ಇದ್ದು ಇದರ ನಂ:ಇರಲಿಲ್ಲ, ಸದರಿ ಟ್ರಾಲಿಯಲ್ಲಿ ಸುಮಾರು 300ರೂ ಬೆಲೆ ಬಾಳುವ ಮರಳು ತುಂಬಿತ್ತು,  2) ಹಸಿರು ಬಣ್ಣದ ಜಾನ್ ಡೀರ್ ಕಂಪನಿಯ  ಟ್ರಾಕ್ಟರ್ ಇದ್ದು, ಇದರ ನೊಂದಣಿ ನಂ:ಕೆಎ34/ಟಿಎ3713 ಎಂದು ಇದ್ದು, ಕೆಂಪು ಬಣ್ಣದ ಟ್ರಾಲಿ ಇದ್ದು ಇದರ ನಂ: ಕೆಎ34/ಟಿಎ0857 ಎಂದು ಇತ್ತು, ಸದರಿ ಟ್ರಾಲಿಯಲ್ಲಿ ಸುಮಾರು 300ರೂ ಬೆಲೆ ಬಾಳುವ ಮರಳು ತುಂಬಿತ್ತು,  ಸದರಿ ಎರಡು ಟ್ರಾಕ್ಟರ್ಗಳು ಸುಮಾರು  2ಲಕ್ಷರೂ ಬೆಲೆಬಾಳಬಹುದು, ಕಾರಣ ಸದರಿ ಟ್ರಾಕ್ಟರ್ ಚಾಲಕರು ಮರಳು ಸಾಗಾಟ ಮಾಡಲು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಸಕರ್ಾರಕ್ಕೆ ರಾಜಧನ ಕಟ್ಟದೆ ನಷ್ಠವನ್ನುಂಟು ಮಾಡಿ ಅಕ್ರಮವಾಗಿ ಸುಮಾರು  ರೂ, 600/- ಬೆಲೆ ಬಾಳುವ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ  ಎರಡು ಟ್ರ್ಯಾಕ್ಟ್ರಗಳು ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ ಜಪ್ತುಪಡಿಸಿಕೊಂಡು ಠಾಣೆಗೆ ಮಧ್ಯಾಹ್ನ 2:00ಗಂಟೆಗೆ ಬಂದು ಸದರಿ ಪರಾರಿಯಾದ ಚಾಲಕರ ವಿರುದ್ಧ ಕಲಂ: 21(1) ಎಂಎಂಡಿಆರ್ ಕಾಯ್ದೆ ಆಧಾರ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ,
Thoranagal PS
11 Cr.No:0156/2015
(IPC 1860 U/s 511,380,457 )
17/10/2015 Under Investigation
BURGLARY - NIGHT - At Banks
Brief Facts :  ನಿವೇದನೆ:-
ಪಿರ್ಯಾದಿ ಪ್ರತಿದಿನದಂತೆ  ದಿನಾಂಕ:16/10/2015 ರಂದು  6;00 ಪಿ.ಎಂ.  ಪಂಜಾಬ್ ನ್ಯಾಷನಲ್  ಬ್ಯಾಂಕ್ ಮ್ಯಾನೆಜರ್ ಆದ ಮಾರ್ಕೋಸ್  ಕುಟ್ಟಿ  ರವರು  ಕೆಲಸ ಮುಗಿಸಿಕೊಂಡು  ಬ್ಯಾಂಕ್ ಮತ್ತು ಬ್ಯಾಂಕ್ ಗೆ ಸಂಬಂದ ಪಟ್ಟ ಎ.ಟಿ.ಎಂ. ಮುಚ್ಚಿಕೊಂಡು  ಮನೆಗೆ ಹೋಗಿದ್ದು ಈ ದಿನ ದಿನಾಂಕ:  10;00 ಎ.ಎಂ.ಗೆ ಬ್ಯಾಂಕ್ ಗೆ ಬಂದು ನೋಡಲು ಯಾರೋ ಕಳ್ಳರೂ  ಪಂಜಾಬ್ ಬ್ಯಾಂಕ್ ನ ಎ.ಟಿ.ಎಂ.  ಶೆಟರ್ ತೆಗೆದು  ಎ.ಟಿ.ಎಂ. ಒಳಗೆ ಹೋಗಿದ್ದು ಅದರಲ್ಲಿ ಇದ್ದ  5,00,000 ರೂ.ಗಳನ್ನು ಕಳುವು ಮಾಡಿಲಿಕ್ಕೆ ಹೋಗಿದ್ದು   ಕಳವು ಮಾಡಿರವುದಿಲ್ಲ ಎಂದು ಸಿ.ಸಿ. ಟಿವಿಯಲ್ಲಿ 
ನೋಡಿ ಬಂದು  ಈ ಘಟನೆ ಈ ದಿನ ದಿನಾಂಕ: 17/10/2015 ರಂದು  1;00 ಎ.ಎಂ. ನಿಂದ 2.00 ಎ.ಎಂ.ರ ಮದ್ಯಾವದಿಯಲ್ಲಿ  ಜರುಗಿರುತ್ತದೆ. ಯಾವುದೇ ರೀತಿ ನಗದು ಹಣ ಹೋಗಿರುವುದಿಲ್ಲ  ಕಾರಣ ಎ.ಟಿ.ಎಂ. ನಲ್ಲಿರುವ  ನಗದು ಹಣವನ್ನು ಕಳುವು ಮಾಡಲು ಪ್ರಯತ್ನ ಪಟ್ಟ  ಕಳ್ಳರ ಬಗ್ಗೆ ಕಾನೂರು ರೀತಿ ಕ್ರಮ ಜರುಗಿಸಲು ನೀಡಿದ ದೂರಿನ ಸಾರಂಶ ಇದ್ದ ಮೇರೆಗೆ ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ. ( ಪ್ರ.ವ.ವ.ಗೆ ಪಿರ್ಯಾದಿ ದೂರನ್ನು ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ