ಬುಧವಾರ, ಅಕ್ಟೋಬರ್ 28, 2015

PRESS NOTE OF 28/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0456/2015
(IPC 1860 U/s 504,307,324 )
28/10/2015 Under Investigation
ATTEMPT TO MURDER - Due To Other Causes
Brief Facts :  ಫಿರ್ಯಾಧಿದಾರರಾದ ಶ್ರೀ ಅರ್ಜುನ ನಾಯಕ್ @ ಅಜ್ಜು ತಂದೆ ಜಿ. ಗೋವಿಂದಪ್ಪ ವಾಸ: ಕೊಳಗಲ್ ಗ್ರಾಮ ರವರು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಲಿಖಿತ ದೂರು ನೀಡಿದ್ದು, ಸಾರಾಂಶ: ದಿನಾಂಕ 27-10-2015 ರಂದು ರಾತ್ರಿ 9-45 ಗಂಟೆಗೆ ತನ್ನ ಮಾವ ಶಿವರಾಂ ಮತ್ತು ಹೊನ್ನುರುಸ್ವಾಮಿ ರವರು ಕೊಳಗಲ್ ಗ್ರಾಮದ ದುರ್ಗಾ ವೈನ್ ಶಾಪ್ ಮುಂದೆ ಇದ್ದಾಗ ಕೊಳಗಲ್ ಗ್ರಾಮದ ವಾಲ್ಮೀಕಿ ಜನಾಂಗದ ರಾಜಶೇಖರನು ವೈನ್ ಶಾಪ್ ಮುಂದೆ ಗಲಾಟೆ ಮಾಡುತ್ತಿದ್ದರಿಂದ ತನ್ನ ಮಾವ ಶಿವರಾಂ ಮತ್ತು ಹೊನ್ನುರುಸ್ವಾಮಿ ರವರು ಗಲಾಟೆ ಮಾಡದಂತೆ ಬುದ್ದಿ ಹೇಳಿದ್ದು, ಇದೇ ವಿಚಾರವಾಗಿ ಜಗಳ ತೆಗೆದು, ಶಿವರಾಂ ಮತ್ತು ಹೊನ್ನುರುಸ್ವಾಮಿ ರವರನ್ನು ಕಟ್ಟಿಗೆಯಿಂದ ಹೊಡೆದುಕೊಂಡಿದ್ದು, ಈ ವಿಷಯವನ್ನು ತನ್ನ ಮಾವ ಶಿವರಾಂ ತನಗೆ ತಿಳಿಸಿ, ವಿಮ್ಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೊಗಿರುತ್ತಾನೆ. ದಿನಾಂಕ 28-10-2015 ರಂದು ಬೆಳಗಿನ ಜಾವ 00-30 ಗಂಟೆಗೆ ತಾನು ತಮ್ಮಮನೆಯ ಮುಂದೆ ಇರುವ ತಾಯಮ್ಮ ಕಟ್ಟೆಯ ಮುಂದೆ ಇದ್ದಾಗ ರಾಜಶೇಖರನು ಬಂದು ನಿಮ್ಮ ಮಾವ ಶಿವರಾಂ ನನ್ನು ಹೊಡೆದಿದ್ದೇನೆ ನಿನ್ನನ್ನು ಸಹ ಹೊಡೆದು ಸಾಯಿಸುತ್ತೇನೆಂದು ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ಎಡ ಹಣೆಯ ಮೇಲೆ, ಎಡ ಕಪಾಳದ ಮೇಲೆ ಹೊಡೆದು ರಕ್ತಗಾಯಪಡಿಸಿರುವುದಾಗಿ ತಾನು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ರಾಜಶೇಖರನ ಮೇಲೆ ಕಾನೂನು ಕ್ರಮಜರುಗಿಸಲು ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿದೆ
2 Cr.No:0457/2015
(IPC 1860 U/s 323,324,504,34 )
28/10/2015 Under Investigation
CASES OF HURT - Simple Hurt
Brief Facts :  ದಿನಾಂಕ 28-10-2015 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾಧಿದಾರರಾದ ರಾಜಶೇಖರ್ ತಂದೆ ಯಾಲ್ಪಿ ದುರುಗಪ್ಪ ವ: 24 ವರ್ಷ, ವಾಲ್ಮೀಕಿ ಜನಾಂಗ, ಕುರಿಕಾಯುವ ಕೆಲಸ ವಾಸ: ಕೊಳಗಲ್ಲು ಗ್ರಾಮ, ಬಳ್ಳಾರಿ ತಾಲೂಕು ರವರು ಠಾಣೆಯಲ್ಲಿ ದೂರು ನೀಡಿದ್ದು, ಸಾರಾಂಶವೇನೆಂದರೇ, ನಿನ್ನೆ ದಿನ ದಿನಾಂಕ 27-10-2015 ರಂದು ರಾತ್ರಿ 9-45 ಗಂಟೆಗೆ ಕೊಳಗಲ್ಲು ಗ್ರಾಮದ ದುರ್ಗಾ ವೈನ್ ಷಾಪ್ ಮುಂದೆ ಫಿರ್ಯಾಧಿದಾರರು ನಿಂತಿದ್ದಾಗ, ಆರೋಪಿತರಾದ 1] ರಾಮಾಂಜಿನಿ 2] ಶಿವರಾಮ ಮತ್ತು 3] ಅಶೋಕ ರವರು ಫಿರ್ಯಾಧಿದಾರರಿಗೆ ನೀನು ಸಣ್ಣವನಾಗಿ ಬ್ರಾಂದಿ ಷಾಪ್ ಹತ್ತಿರ ಯಾಕೆ ಬಂದೀಯಾ ಅಂತ ಜಗಳ ತೆಗೆದು ಬೈದಾಡಿ ಕೈಗಳಿಂದ ಕಟ್ಟಿಗೆಯಿಂದ ಫಿರ್ಯಾಧಿದಾರರ ತಲೆ ಮೇಲೆ, ಬಲ ಮೊಣಕಾಲ ಹತ್ತಿರ, ಎಡ ಕಾಲಿನ ತೊಡೆಯ ಹತ್ತಿರ, ಎಡ ಬೆನ್ನಿಗೆ ಹಾಗೂ ಮೈಮೇಲೆ ಹೊಡೆದು ಒಳನೋವು ಹಾಗೂ ರಕ್ತಗಾಯಪಡಿಸಿರುತ್ತಾರೆಂದು ಸದರಿಯವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ.
Gudekote PS
3 Cr.No:0131/2015
(IPC 1860 U/s 143,144,147,148,323,324,326,504,506,149 )
28/10/2015 Under Investigation
CASES OF HURT - Grievous  Hurt
Brief Facts :  ನಿನ್ನೆ ದಿನ ದಿ: 27/10/2015 ರಂದು ಚಿರತಗುಂಡ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಉತ್ಸವದಲ್ಲಿ ವಾಲ್ಮೀಕಿ ಭಾವ ಚಿತ್ರವನ್ನು ಯಾವ ಕೇರಿಯಲ್ಲೂ ಮೆರವಣಿಗೆ ಮಾಡದಂತೆ ಎಲ್ಲರೂ ಸೇರಿ ಮಾರಮ್ಮ ದೇವಸ್ಥಾನದ ಮುಂದುಗಡೆ ಇರುವ ಸರ್ಕಲ್ ನಲ್ಲಿ ಇಟ್ಟು ಪೂಜೆ ಮಾಡಿ ಆಚರಿಸಿದ್ದು ಆದರೆ ಸಂಜೆ 4-30 ಸಮಯದಲ್ಲಿ ಮಲ್ಲಿಕಾರ್ಜುನ ಎಂಬಾತನು ಯಾರು ಏನು ಮಾಡುತ್ತಾರೆಂದು ತಮ್ಮ ಕೇರೆಯ ಕಡೆ ಮೆರವಣಿಗೆ ಮಾಡಿಕೊಂಡು ಹೋದಾಗ ಈ ವಿಷಯವನ್ನು ತನ್ನ ತಮ್ಮ ಬಸಣ್ಣ ಹಾಗೂ ಇನ್ನಿತರರು ಹೋಗಿ ಕೇಳಿದ್ದಕ್ಕೆ ದೇವರಹಳ್ಳಿ ಪಾಲಯ್ಯನ ಮನೆಯ ಮುಂದುಗಡೆ ಒಬ್ಬರಿಗೊಬ್ಬರಿಗೆ ಬಾಯಿ ಮಾತಿನ ಗಲಾಟೆಯಾಗಿ ತನ್ನ ಮಗನನ್ನು ದಿಬ್ಬದಹಳ್ಳಿ ರಾಜ ಎಂಬಾತನು ಹೊಡೆದಿರುತ್ತಾನೆ. ನಂತರ ಇದೇ ವಿಚಾರದಲ್ಲಿ ರಾತ್ರಿ 8-30 ಗಂಟೆ ಸುಮಾರಿಗೆ ಮ್ಯಾನೇಜ್ ಮೆಂಟ್ ನವರಿಗೆ ಕೇಳಲು ಹೋದಾಗ ದನದ ಆಸ್ಪತ್ರೆಯ ಹತ್ತಿರ ಪುನಃ ಬಾಯಿಜಗಳವಾಗಿದ್ದು ಈ ವೈಷಮ್ಯದಲ್ಲಿ ಈ ದಿನ ದಿ: 28/10/2015 ರಂದು ಬೆಳಿಗ್ಗೆ 6-10 ಗಂಟೆ ಸಮಯದಲ್ಲಿ ತಮ್ಮೂರಿನ ಕೆಳಗಡೆ ಬಸ್ ಸ್ಟ್ಯಾಂಡ್ ಹತ್ತಿರ ಹೊಲಕ್ಕೆ ಹೋಗಲೆಂದು ಹೋಗುತ್ತಿದ್ದ ತನ್ನ ತಮ್ಮ ಬಸಣ್ಣನಿಗೆ ಹಿಂದುಗಡೆಯಿಂದ ಬಂದ ಈ ಮೇಲ್ಕಂಡ ಆರೋಪಿತರೆಲ್ಲರೂ ಕಟ್ಟಿಗೆಗಳು ಹಾಗೂ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ತಲೆಗೆ ತೀವ್ರ ರಕ್ತಗಾಯ ಪಡಿಸಿ ಬೆನ್ನಿಗೆ, ಭುಜಕ್ಕೆ ಕೈಗಳ ಹಿಂಭಾಗಕ್ಕೆ ಬಾಸುಂಡೆ ಬರುವಂತೆ ಹೊಡೆದು ಪೆಟ್ಟು ಮಾಡಿ ಎಡಗಾಲು ಮೊಣಕಾಲಿಗೆ ಹಾಗೂ ಬಲಗೈ ಮೊಣಕೈ ಹತ್ತಿರ ಹೊಡೆದು ಪೆಟ್ಟು ಮಾಡಿದ್ದು ಬಿಡಿಸಲು ಹೋದ ತನಗೆ ಸಹಾ ಕಟ್ಟೆಗೆಗಳಿಂದ ಬಲಗಡೆ ಹಾಗೂ ಎಡಗಡೆ ತಲೆಗೆ ಮತ್ತು ಬಲಗೈ ಮುಂಗೈ ತೋರುಬೆರಳಿಗೆ ಹೊಡೆದು ರಕ್ತಗಾಯಪಡಿಸಿ ಬಲಭುಜಕ್ಕೆ ಪಡೆದು ಪೆಟ್ಟು ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಕಾರಣ ಈ ಮೇಲ್ಕಂಡ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಗಾಯಾಳು ಶ್ರೀ. ಬೋರಯ್ಯ ತಂದೆ ಮುನ್ನೂರ್ ಬೊಮ್ಮಯ್ಯ, ವಾಸ: ಚಿರತಗುಂಡ ಗ್ರಾಮ ಇವರು ಈ ದಿನ ದಿ: 28/10/2015 ರಂದು ಬೆಳಿಗ್ಗೆ 10-30 ಗಂಟೆಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿದೆ.
Hagaribommanah
alli PS
4 Cr.No:0162/2015
(IPC 1860 U/s 379 )
28/10/2015 Under Investigation
THEFT - Of Automobiles - Of Two Wheelers
Brief Facts :  ಈ ದಿನ ದಿನಾಂಕ:-28/10/2015 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾಧ ಶ್ರೀ.ವಸೀಮ್ ರವರು ಠಾಣೆ ಹಾಜರಾಗಿ ಗಣಕೀಕೃತ ದೂರನ್ನು ಹಾಜರು ಪಡಿಸಿದ್ದನ್ನು ಸ್ವೀಕರಿಸಿ ನೋಡಲು ಸಾರಾಂಶವು ಫಿರ್ಯಾದಿದಾರರ ಅಣ್ಣ ಇರ್ಷಾದ್ ಇವರ ಹೆಸರಿನಲ್ಲಿರುವ ರೂ.20,000/- ಬೆಲೆ ಬಾಳುವ ಕಪ್ಪುಬಣ್ಣದ ಹಾಗೂ ಕೆಂಪು ಸ್ಟಿಕ್ಕರ್ಸ್ ಇರುವ ಬಜಾಜ್ ಡಿಸ್ಕವರಿ  ಮೋಟಾರ್ ಸೈಕಲ್ ಕೆ.ಎ.35/ಎಸ್.6316 ಇದರ Engine No. JBMBSF58473 & Chassis No. MD2DSPAZZSWF58582 ನೇದ್ದನ್ನು ಫಿರ್ಯಾದಿದಾರರು ತಮ್ಮ ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ದಿನಾಂಕ:-04/10/2015 ರಂದು ರಾತ್ರಿ 10-30 ಗಂಟೆ ಯಿಂದ ಮರು ದಿನ ದಿನಾಂಕ:-05/10/2015 ರಂದು ಬೆಳಿಗ್ಗೆ 5-30 ಗಂಟೆಯ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟರ್ ಸೈಕಲನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ಹೊಸಪೇಟೆ, ಹಡಗಲಿ, ಕೂಡ್ಲೀಗಿ, ಕೊಟ್ಟೂರು, ಸಂಡೂರು ಇತರೆಕಡೆಗಳಲ್ಲಿ ಇಲ್ಲಿಯವರಿಗೆ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ, ಈ ಬಗ್ಗೆ ತಮ್ಮ ಮನೆಯಲ್ಲಿ ಚರ್ಚಿಸಿ ದೂರು ನೀಡಲು ಬಂದಿರುವುದಾಗಿ, ಸದರಿ ಕಳುವಾದ ಮೋಟರ್ ಸೈಕಲ್ಲನ್ನು  ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಮೋಟಾರ್ ಸೈಕಲ್ನ್ನು ಪತ್ತೆ ಹಚ್ಚಿ ಕೊಡಬೇಕೆಂದು ಇದ್ದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Kudligi PS
5 Cr.No:0180/2015
(IPC 1860 U/s 498A,494 )
28/10/2015 Under Investigation
CRUELTY BY HUSBAND - Husband And Relative(S) In Law
Brief Facts :  ಈ ಪ್ರಕರಣದ ಪಿರ್ಯಾಧಿ ಶ್ರೀಮತಿ ಭಾರತಿ ಬಾಯಿ @ ದುರ್ಗಿ ಬಾಯಿ ಗಂಡ ಬಿ ಪಾಪನಾಯ್ಕ್ ತಂದೆ ಪೂರ್ಯ ನಾಯ್ಕ್ 36 ವರ್ಷ ವಾ// ಎ ಡಿ ಗುಡ್ಡ ತಾಂಡ ಕೂಡ್ಲಿಗಿ ತಾ ಇವರು ಕೂಡ್ಲಿಗಿ ಸಿಜೆ [ಹಿ.ಶ್ರೇ] ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಕೂಡ್ಲಿಗಿರವರಲ್ಲಿ ಖಾಸಗಿ ದೂರು ನೀಡಿದ್ದು, ಖಾಸಗಿ ದೂರಿನ ಸಂಖ್ಯೆ 27/15 ಅಂತಾ ಇದ್ದು, ಸದರಿ ಖಾಸಗಿ ದೂರನ್ನು ನ್ಯಾಯಾಲಯದ ಕರ್ತವ್ಯದ ಹೆಚ್ ಸಿ 15 ಶ್ರೀ ಮೈನುದ್ದೀನ್ ಇವರು ಈ ದಿನ ದಿ.28/10/15 ರಂದು ಮಧ್ಯಾಹ್ನ 12-30 ಗಂಟೆಗೆ ತಂದು ಹಾಜರುಪಡಿಸಿದ್ದನ್ನು ಸ್ವೀಕರಿಸಿ, ಪರಿಶೀಲಿಸಿ ನೋಡಲು  ಸಾರಾಂಶವೇನೆಂದರೆ ಆರೋಪಿ 02 ಇವರು ತನ್ನ ಗಂಡನ ಆರೋಪಿ 01 ಪಾಪನಾಯ್ಕ್ ನ 02 ನೇ ಹೆಂಡತಿ ಆಗಿದ್ದು, ಆರೋಪಿ 03 ಮತ್ತು 04 ತನ್ನ ಗಂಡನ ತಂದೆ ತಾಯಿ, ಆರೋಪಿ 05 ಮತ್ತು 06 ರವರು ತನ್ನ ಗಂಡನ ಸಹೋದರರು ಆಗಿದ್ದು, ಆರೋಪಿ 07 ಇವರು ಆರೋಪಿ 01 ರವರ ಸಂಬಂಧಿಕರಾಗಿದ್ದು, ಆರೋಪಿ 08 ಮತ್ತು 09 ರವರು ಆರೋಪಿ 02 ಶ್ರೀಮತಿ ರೇಣುಕಾಬಾಯಿ ಇವರ ತಂದೆ ತಾಯಿ ಆಗಿದ್ದು, ತನ್ನ ತಂದೆ ತಾಯಿಗಳು ಕುಲ ಪದ್ಧತಿ ಪ್ರಕಾರ ಆರೋಪಿ 01 ಇವರಿಗೆ ದಿ.21/06/2006 ರಂದು ಎಡಿ ಗುಡ್ಡ ತಾಂಡದಲ್ಲಿ ತಮ್ಮ ಮನೆಯ ಮುಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಆದ ನಂತರ ಪಿರ್ಯಾಧಿಗೆ ಕೆಲವು ದಿನ ಅನ್ಯೂನ್ಯವಾಗಿ ನೋಡಿಕೊಂಡಿದ್ದು, ಒಂದು ಗಂಡು, ಹೆಣ್ಣು ಮಗುವಿದ್ದು ನಂತರ ಎಲ್ಲರೂ ಒಂದಾಗಿ ವಿನಾಕಾರಣ ತೊಂದರೆ ಕೊಟ್ಟು ಮನೆಯಿಂದ ಹೊರ ಹಾಕಿ, ನನಗೆ ಹೇಳದೇ ಕೇಳದೇ 2014 ನೇ ಇಸ್ವಿಯಲ್ಲಿ ತನ್ನ ಗಂಡ ಬಿ ಪಾಪನಾಯ್ಕ್ ನು ಹಂಪಿ ವಿರುಪಾಕ್ಷೇಶ್ವರ ಗುಡಿಯಲ್ಲಿ ತನ್ನ ಒಪ್ಪಿಗೆ ಪಡೆಯದೆ, ಆರೋಪಿ 2 ರೇಣುಕಾಬಾಯಿಯನ್ನು ಮದುವೆ ಆಗಿ, ನನಗೆ ಮಾನಸಿಕ ತೊಂದರೆ ನೀಡಿ, ತವರು ಮನೆಯಲ್ಲಿಯೇ ಇರಿಸಿರುತ್ತಾನೆಂದು, ಗಂಡನ ಮನೆಗೆ ಇದುವರೆಗೂ ಕರೆದು ಕೊಂಡು ಹೋಗಿಲ್ಲವೆಂದು  ಮೇಲ್ಕಂಡ 09 ಜನರ ವಿರುದ್ಧ ಕ್ರಮ ಜರುಗಿಸುವಂತೆ ಇತ್ಯಾದಿ ಇದ್ದ ಖಾಸಗಿ ದೂರಿನ ಸಾರಾಂಶದ ಮೇರೆಗೆ ಕೂಡ್ಲಿಗಿ ಠಾಣಾ ಗುನ್ನೆ ನಂ 180/15 ಕಲಂ 498 [ಎ] 494 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Kuduthini PS
6 Cr.No:0136/2015
(IPC 1860 U/s 323,341,504,506,34 )
28/10/2015 Under Investigation
CRIMINAL INTIMIDATION - Criminal Intimidation
Brief Facts :  ಪಿರ್ಯಾದಿದಾರನ ಹಟ್ಟೆವು ಮತ್ತು ಮೆವಿನ ಬಣವಿ ದನಕರಗಳನ್ನು ಅನುಕೂಲ ಮಾಡಿಕೊಂಡಿದ್ದು, ಸದರಿ ಹಟ್ಟೆವು ಜಾಗದಲ್ಲಿ ಜಾಲಿಯ ಮರವು ಬೆಳೆದಿರುತ್ತದೆ. ದಿನಾಂಕ:- 23.10.2015 ರಂದು ಸಂಜೆ 4:30 ಗಂಟೆ ಸುಮಾರಿಗೆ ಆರೋಪಿಯಾದ ಶಂಕರ್ ದಾಸನು 3-4 ಜನ ಕೂಲಿ ಹಾಳುಗಳನ್ನು ಕರೆದುಕೊಂಡು ಬಂದು ಅಕ್ರಮವಾಗಿ ಪಿರ್ಯದಿದಾರರನ್ನು ತಡೆದು ಗಿಡವನ್ನು ಕಡಿಯುತ್ತಿರುವಾಗ ತಾನು ಮತ್ತು ತನ್ನ ಹೆಂಡತಿ ಜಡೆಮ್ಮ ಮತ್ತು ಗೊಂದೆಪ್ಪ ಕಡಿಯಬೇಡವೆಂದು ಮನವಿ ಮಾಡಿದಾಗ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು 2-3 ಕೈಯಿಂದ ಹೊಡೆದಿರುತ್ತಾನೆ. ಮತ್ತು ಸದರಿ ಗಿಡವನ್ನು ಕಡಿಯುವುದಕ್ಕೆ ತಡೆಯುದಕ್ಕೆ ಬಂದರೆ ಪ್ರಾಣ ತೆಗೆಯುತ್ತೇನೆಂದು ಬೆದರಿಕೆ ಹಾಕಿರುತ್ತಾನೆಂದು ಇತ್ಯಾದಿಯಾಗಿ ದೂರಿನ ಮೇರೆಗೆ. ( ದೂರಿನ ಪ್ರತಿ ಲಗತ್ತಿಸಿದೆ)
Kurugod PS
7 Cr.No:0175/2015
(ESSENTIAL COMMODITIES 
28/10/2015 Under Investigation
ACT, 1955 U/s 3,7 ; PDS CONTROLING ORDER, 1992 U/s 18(2) )
CONSUMER - Essential Commodites Act 1955
Brief Facts :  ಪಿಯರ್ಾಧಿದಾರರಿಗೆ ಈ ದಿನ ದಿನಾಂಕ: 28/10/2015 ರಂದು ಬೆಳಿಗ್ಗೆ 11-00 ಗಂಟೆಗೆ ಎಮ್ಮಿಗನೂರು ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಆಂಜಿನೇಯಸ್ವಾಮಿ ಕ್ಯಾಂಪಿನಲ್ಲಿ ಡಿ.ಲಕ್ಷ್ಮಿನರಸಯ್ಯ ತಂದೆ ಸುಬ್ಬರಾಯುಡು ರವರ ಗೋಡಾನ್ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿರುತ್ತಾರೆ. ಎಂದು ತಮಗೆ ಭಾತ್ಮೀಧಾರರಿಂದ ಬಂದ ಮಾಹಿತಿಯನ್ನು ಕುರುಗೋಡು ವೃತ್ತ ಕಛೇರಿಯ ಸಿಪಿಐ ರವರು ನನಗೆ  ಮಾಹಿತಿ ನೀಡಿದ ಮೇರೆಗೆ, ಪಿಯರ್ಾಧಿದಾರರು  ಮಧ್ಯಾನ್ಹ 12:00 ಗಂಟೆಗೆ ಕುರುಗೊಡು ಪೊಲಿಸ್ ಠಾಣೆಗೆ ಬಂದು ಠಾಣೆಯಲ್ಲಿದ್ದ ಪಿಎಸ್ಐ ಮತ್ತು ಅವರ ಸಿಬ್ಬಂದಿ ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸ್ವಲ್ಪ ದೂರದಲ್ಲಿ ಹೋಗಿ ಅಲ್ಲಿ ಸ್ಥಳೀಯ ಇಬ್ಬರು ಪಂಚರೊಂದಿಗೆ ಅಕ್ರಮವಾಗಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿದ ಗೋಡಾನ್ ಮೇಲೆ ಮಧ್ಯಾನ್ಹ 1:30 ಗಂಟೆಗೆ ದಾಳಿ ಮಾಡಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ದಾಸ್ತಾನು ಮಾಡಿದ 61 ಚೀಲ ಅಕ್ಕಿ ಒಟ್ಟು 29.47 ಕ್ವಿಂಟಾಲ್ ಇದರ ಅಂದಾಜು ಬೆಲೆ ಒಟ್ಟು 29,470/-ರೂಗಳಾಗಬಹುದು. ಮತ್ತು 50 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಗೋಧಿ ಒಟ್ಟು 23.84 ಕ್ವಿಂಟಾಲ್ ಇದರ ಅಂದಾಜು ಬೆಲೆ ಒಟ್ಟು 21,456/- ರೂಗಳ ಎಲ್ಲಾ ಅಕ್ಕಿ ಮತ್ತು ಗೋಧಿಯ ಬೆಲೆ 50,926/- ರೂಗಳನ್ನು ಮತ್ತು ಒಂದು ತೂಕದ ಯಂತ್ರವನ್ನು ಜಪ್ತಿ ಮಾಡಿಕೊಂಡು ಸದರಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು  ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಿದ ವಿರಾಂಜಿನೇಯ@ಅಂಜಿನಿ ತಂದೆ ಮೀಸಾಲ ಈರಣ್ಣ ಸಾ:ನೆಲ್ಲುಡಿಕೊಟ್ಟಾಲ, ಸುಧಾಕರ ಸಾ:ಗಂಗಾವತಿ, ಡಿ.ಲಕ್ಷ್ಮಿನರಸಯ್ಯ ತಂದೆ ಸುಬ್ಬರಾಯುಡು, ಗೋಡಾನ್ ಮಾಲಿಕ ಸಾ:ನೆಲ್ಲುಡಿ ಕೊಟ್ಟಾಲ ರವರುಗಳ ವಿರುದ್ದ ಕಾನೂನು  ಕ್ರಮ ಕೈಗೊಳ್ಳಲು ಕೋರುತ್ತೇನೆ.
Siruguppa PS
8 Cr.No:0223/2015
(CODE OF CRIMINAL PROCEDURE, 1973 U/s 110 )
28/10/2015 Under Investigation
CrPC - Security For Good Behaviour (Sec 110)
Brief Facts :  ಸಿರುಗುಪ್ಪ ಪೊಲೀಸ್ ಠಾಣೇಯ ಪಿ.ಎಸ್.ಐ (ಸಿ) ಆದ ನಾನು ಮಾನ್ಯ ಘನ ನ್ಯಾಯಲಯದಲ್ಲಿ ನಿವೇಧಿಸಿಕೊಳ್ಳುವುದೆನೆಂದರೆ, ಸುರೇಂದ್ರ ತಂದೆ ಗೊರಂಟ್ಲಪ್ಪ ವ;36 ವರ್ಷ ನಾಯಕರು ಜನಾಂಗ ವಾಸ: 19ನೆ ವಾರ್ಡ ಸಿರುಗುಪ್ಪ ಈ ದಿನ ದಿನಾಂಕ 28/10/15 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿನಲ್ಲಿ ಅಕ್ಕಪಕ್ಕದವರೊಂದಿಗೆ ಗಲಾಟೆ ಮಾಡುತ್ತಿದ್ದು ಕೆಲ ಸಲ ಎಚ್ಚರಿಕೆ ಕೊಟ್ಟಿದ್ದರೂ ಪದೇ ಪದೇ ಗಲಾಟೆ ಮಾಡಿ ಶಾಂತಿ ಭಂಗ ಉಂಟು ಮಾಡುತ್ತಿದ್ದು ಶಾಂತತೆ ಭಂಗ ವಾತವರಣ ಸೃಷ್ಠಿ ಮಾಡುವ ಸಾಧ್ಯತೆಗಳಿರುವ ಕಂಡುಬಂದಿರುವುದರಿಂದ ಈತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
9 Cr.No:0224/2015
(INDIAN MOTOR VEHICLES ACT, 1988 U/s 183 ; IPC 1860 U/s 279,337 )
28/10/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಈ ದಿನ ದಿನಾಂಕ; 28-10-15 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಬೇಲ್ದಾರ್ ಕೆಲಸ ಮಾಡುತ್ತಿದ್ದು ಬೇಲ್ದಾರ್ ಕೆಲಸ ಇಲ್ಲದೇ ಇದ್ದುದರಿಂದ ಈಗ್ಗೆ 15 ದಿನಗಳಿಂದ  ಸಿರುಗುಪ್ಪ ಪಟ್ಟಣದ ಕನಕದುರ್ಗ ರೈಸ್ ಮಿಲ್ಲಿನಲ್ಲಿ ಹಮಾಲಿ ಕೆಲಸಕ್ಕೆ ಹೋಗುತ್ತಿದ್ದು ಅದೇ ರೀತಿ ದಿನಾಂಕ; 25-10-15 ರಂದು ಬೆಳಿಗ್ಗೆ ತಮ್ಮ ಗ್ರಾಮದ ಮಹಾಂತೇಶನ ಮೋಟಾರ್ ಸೈಕಲ್ ನಂ. ಕೆಎ-34/ಎಕ್ಸ್-9230 ನೇದ್ದರಲ್ಲಿ ಮಿಲ್ಲಿಗೆ ಹಮಾಲಿ ಕೆಲಸಕ್ಕೆ ಬಂದು  ಇನ್ನೂ ಲೋಡ್ ಮಾಡುವುದು ಇರುವುದರಿಂದ ರಾತ್ರಿ 8-00 ಗಂಟೆ ಸುಮಾರಿಗೆ ಮಹಾಂತೇಶನ ಮೋಟಾರ್ ಸೈಕಲ್ ನಲ್ಲಿ ಊಟಕ್ಕೆ ಹೋಗಿ ರಾತ್ರಿ 9-30 ಗಂಟೆ ಸುಮಾರಿಗೆ ವಾಪಾಸು ಆದೋನಿ ರಸ್ತೆಯಲ್ಲಿ ನೀಲಮ್ಮ ಬಾವಿ ಹತ್ತಿರ ಸಿರುಗುಪ್ಪಕಡೆಗೆ ಬರುತ್ತಿರುದ್ದು ಸದರಿ ಮೋಟಾರ್ ಸೈಕಲ್ ನ್ನು  ಮಹಾಂತೇಶನು ನಡೆಸುತ್ತಿದ್ದು ಅದೇ ಸಮಯ ಸಿರುಗುಪ್ಪ ಕಡೆಯಿಂದ  ಮೋಟಾರ್ ಸೈಕಲ್ ನ್ನು ಸವಾರನು ನಡೆಸಿಕೊಂಡು ಬರುತ್ತಿದ್ದು ಇಬ್ಬರು ಮೋಟಾರ್ ಸವಾರರು ತಮ್ಮ ತಮ್ಮ ಮೋಟಾರ್ ಸೈಕಲ್ ಗಳನ್ನು ಅತೀವೇಗ ಮತ್ತು ಅಜಾಗರೂಕತೆಯೀಂದ ನಡೆಸಿಕೊಂಡು ಒಬ್ಬರಿಗೊಬ್ಬರು ಡಿಕ್ಕಿ ಹೊಡೆಸಿಕೊಂಡ ಪರಿಣಾಮ ನಾನು ಮತ್ತು ನಮ್ಮ ಮೋಟಾರ್ ಸೈಕಲ್ ನಡೆಸುತ್ತಿದ್ದ ಮಹಾಂತೇಶ ಇಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದ  ಪರಿಣಾಮ ನನಗೆ ಎಡಗಡೆಯ ಹಣೆ ಪಟ್ಟಿಗೆ, ಗದ್ದಕ್ಕೆ ಮತ್ತು ಎಡಗಡೆಯ ಕುತ್ತಿಗೆಗೆ ತೆರೆಚಿದ ಗಾಯಗಳಾಗಿದ್ದು ಮೋಟಾರ್ ಸೈಕಲ್ ನಡೆಸುತ್ತಿದ್ದ  ಮಹಾಂತೇಶನ ಹಣೆಗೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ. ಎದುರಿಗೆ ಬರುತ್ತಿದ್ದ ಮೋಟಾರ್ ಸೈಕಲ್ ಸವಾರನಿಗೆ ಸಹ ಹಣೆಗೆ  ಮತ್ತು ಬಲಗಾಲಿನ ಪಾದಕ್ಕೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ. ಗಾಯಗಳಾದ ನಮ್ಮನ್ನು ಚಿಕಿತ್ಸೆಗೆ ಸಿರುಗುಪ್ಪ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಮೋಟಾರ್ ಸೈಕಲ್ ಚಾಸಿ ನಂ. MBLHA10A3EHG11630 ನೇದ್ದರ ಸವಾರ ಚಂದ್ರಶೇಖರ್ 
ಮತ್ತು ಮೋಟಾರ್ ಸೈಕಲ್ ನಂ. ಕೆಎ-34/ಎಕ್ಸ್-9230 ನೇದ್ದರ ಸವಾರ ಮಹಾಂತೇಶ ಇವರಿಬ್ಬರು ತಮ್ಮ ಮೋಟಾರ್ ಸೈಕಲ್ ಗಳನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಇವರ ಮೇಲೆ ಕಾನೂನು  ಕ್ರಮ ಜರುಗಿಸಲು ಈ ದಿನ ಬೆಳಿಗ್ಗೆ 11-30 ಗಂಟೆಗೆ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
10 Cr.No:0225/2015
(MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
28/10/2015 Under Investigation
KARNATAKA STATE LOCAL ACTS - Mmdr (Mines & Minerals Regulation Development) Act 1957
Brief Facts :  ಆದ ನಾನು   ಈ ದಿನ ದಿನಾಂಕ 28-10-2015 ರಂದು ಬೆಳಿಗ್ಗೆ  10-00 ಎ.ಎಮ್  ಗಂಟೆಗೆ  ಸಿಪಿಐ ಸಾಹೇಬರು ಸಿರುಗುಪ್ಪ ವೃತ್ತ ರವರ ಆಧೇಶದಂತೆ ಗಸ್ತು ಕರ್ತವ್ಯಕ್ಕೆ ಪಿಸಿ ,128  ರವರನ್ನು ಕರೆದುಕೊಂಡು  ಹೊರಟಿದ್ದು ಪಟ್ಟಣದ ಪ್ರಮಖ ಏರಿಯಾಗಳಾದ  ಪಾರ್ವತಿನಗರ ದೇಶನೂರು ರಸ್ತೆ, ಸದಾಶಿವನಗರ,ಪಾರ್ವತಿನಗರ ಗಸ್ತು ಕರ್ತವ್ಯ ಮುಗಿಸಿಕೊಂಡು  ಸಿಂಧನೂರು ರಸ್ತೆ  ಕಡೆ ಹೋಗುತ್ತಿರುವಾಗ ಬೆಳಿಗ್ಗೆ  11-00 ಎ.ಎವಂ ಗಂಟೆಯ ಸಮಯದಲ್ಲಿ ಸಿಂಧನೂರು  ರಸ್ತೆಯ ಕಡೆಯಿಂದ ಬರುತ್ತಿದ್ದ  ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಯನ್ನು   ಅಂಕಲಿಮಠದ ಹತ್ತಿರ  ಕೈ ಮಾಡಿ ನಿಲ್ಲಸಲು   ಪೊಲೀಸರಾದ ನಮ್ಮನ್ನು ನೋಡಿ ಟ್ರಾಕ್ಟರ್ ಚಾಲಕ ಮರಳು ತುಂಬಿದ ಟ್ರಾಕ್ಟರ್   ಟ್ರಾಲಿಯನ್ನು ನಿಲ್ಲಿಸಿ ಓಡಿ ಹೋಗಿದ್ದು   ಸದರಿ ಸ್ಥಳಕ್ಕೆ ಪಿಸಿ 128 ರವರ ಮುಖಾಂತರ 11-30 ಎ.ಎಂ ಗಂಟೆಗೆ  ಇಬ್ಬರು ಪಂಚರನ್ನು ಬರಮಾಡಿಕೊಂಡು  ಪಂಚರ ಸಮಕ್ಷಮ ಸದರಿ ಟ್ರಾಕ್ಟರ್   ಪರಿಶೀಲಿಸಲು   ಜಾನ್ ಡಿಯರ್  5038ಡಿ ಕಂಪನಿಯ ಕೆ.ಎ 34 ಟಿ ಎ 1158 ಇದ್ದು  ಕೆಂಪು ಬಣ್ಣದ ಮರಳು ತುಂಬಿದ ಟ್ರಾಲಿ ನಂಬರ್ ಕಂಡು ಬಂದಿರುವುದಿಲ್ಲ ಟ್ರಾಲಿಯಲ್ಲಿ  ಅಕ್ರಮವಾಗಿ ಮರಳು ತುಂಬಿದ್ದ ಮರಳು ಬೆಲೆ ಅಂದಾಜು ರೂ 1000/-ಗಳು ಗಳಾಗಬಹುದು.ಈ ಬಗ್ಗೆ ಯಾವುದೇ ರೀತಿ ಅಧಿಕೃತ ದಾಖಲಾತಿಗಳು ಇಲ್ಲದೇ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ  ಸಾಗಾಟ ಮಾಡುತ್ತಿದ್ದುಕಂಡು ಬಂದಿದ್ದು ಸದರಿ ಮರಳು ತುಂಬಿದ ಟ್ರಾಕ್ಟರ ಮತ್ತು ಟ್ರಾಲಿಯನ್ನು  ಪಂಚನಾಮೇಯ ಮೂಲಕ ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಠಾಣೆಗೆ  1-00 ಪಿ.ಎಮ್   ಗಂಟೆಗೆ ಹಿಂತಿರುಗಿ ಅಕ್ರಮ ಮರಳು ತುಂಬಿದ  ಟ್ರಾಕ್ಟರ್ ಟ್ರಾಲಿ ಮತ್ತು  ಚಾಲಕನ   ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ