ಸೋಮವಾರ, ಅಕ್ಟೋಬರ್ 5, 2015

PRESS NOTE OF 05/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Traffic PS
1 Cr.No:0149/2015
(IPC 1860 U/s 279,304(A) ; INDIAN MOTOR VEHICLES ACT, 1988 U/s 187 )
05/10/2015 Under Investigation
MOTOR VEHICLE ACCIDENTS FATAL - National Highways
Brief Facts :  ದಿನಾಂಕ: 05-10-2015 ರಂದು ಫಿರ್ಯಾಧಿದಾರರಾದ ಜಿ.ಸತೀಶ ಹೆಚ್. ತಂದೆ ಜಿ.ಕೆ. ಪ್ರಸಾದ್, ವಯಸ್ಸು:42 ವರ್ಷ, ಲಿಂಗಾಯಿತರ ಜನಾಂಗ, ಟೀ ಬಂಡಿ ವ್ಯಾಪಾರ್,  ವಾಸ: ಮದ್ದಾನ ಸ್ವಾಮಿ ಮಠದ ಹತ್ತಿರ, ಟ್ಯಾಂಕ್ ಬಂಡ್ ರಸ್ತೆ, 2ನೇ ವಾರ್ಡ್, ಬಳ್ಳಾರಿರವರು  ಪ್ರತಿ ದಿನದಂತೆ ಈ ದಿನ ಬುಡಾ ಕಾಂಪ್ಲೆಕ್ಸ್ ಮುಂದೆ ಟೀ ವ್ಯಪಾರ ಮಾಡುತ್ತಿರುವಾಗ ಬೆಳಗಿನ ಜಾವ 5-15 ಗಂಟೆಯ ಸಮಯದಲ್ಲಿ ಬೂಡಾ ಕಾಂಪ್ಲೆಕ್ಸ್ ನ ಮೇಘಾ ಮೆಡಿಕಲ್ ಶಾಪ್ ಮುಂದೆ ಅವರ ಸ್ನೇಹಿತನಾದ ಬಸವರಾಜ ಈತನು ತಾರ್ ರಸ್ತೆಯನ್ನು ಕ್ರಾಸ್ ಮಾಡಿಸುತ್ತಿರುವಾಗ ಅದೇ ಸಮಯದಲ್ಲಿ ಬೆಂಗಳೂರು ರಸ್ತೆಯ ಕಡೆಯಿಂದ ಟ್ರಾಕ್ಸ್ ನಂಬರ್: ಕೆಎ-26/4604 ನೇದ್ದನ್ನು ಅದರ ಚಾಲಕನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಬಸವರಾಜನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಯ ಹಿಂದಿನ ಎಡಬದಿಯಲ್ಲಿ ರಕ್ತಗಾಯವಾಗಿ ಹಾಗೂ ಎಡ ಮೋಣ ಕಾಲಿನ ಹತ್ತಿರ ತೆರಚಿದ ಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಈ ಅಪಘಾತ ಪಡಿಸಿದ ಟ್ರಾಕ್ಸ್ ವಾಹನದ ಚಾಲಕನು ಸ್ಥಳದಲ್ಲಿ ವಾಹನ ನಿಲ್ಲಿಸಿ ಹಾಗೇ ಹೊರಟು ಹೋಗಿರುತ್ತಾನೆಂದು, ಸದರಿ ವಾಹನದ ಚಾಲಕನು ಯಾರೆಂದು ಪತ್ತೇ ಹಚ್ಚಿ ಆತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
2 Cr.No:0150/2015
(IPC 1860 U/s 279,337,338 ; INDIAN MOTOR VEHICLES ACT, 1988 U/s 187 )
05/10/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ: 01-10-2015 ರಂದು ಫಿರ್ಯಾಧಿದಾರರಾದ ಕೆ. ನಿಂಗಪ್ಪ  ರವರು ತಮ್ಮ ತಾಯಿಯಾದ ಶ್ರೀಮತಿ.ಚೌಡಮ್ಮ ವಯಸ್ಸು: 55 ವರ್ಷ ರವರೊಂದಿಗೆ ತಮ್ಮ ಬಳ್ಳಾರಿನಗರದ ದೇವಿನಗರದ 5ನೇ ಕ್ರಾಸ್ ಹತ್ತಿರ ರಸ್ತೆಯ ಬೆಳಿಗ್ಗೆ ಸುಮಾರು 8-30 ಗಂಟೆಯ ಸಮಯದಲ್ಲಿ ತಮ್ಮ ಊರಿಗೆ ಹೋಗಲು ನಡೆದುಕೊಂಡು ಹೋಗುತ್ತಿರುವಾಗ ಅದೇ ಸಮಯದಲ್ಲಿ ಫಿರ್ಯಾಧಿದಾರರ ಹಿಂದಿನಿಂದ ಮೋಟಾರ್ ಸೈಕಲ್ ನಂಬರ್: ಕೆಎ-37 ಜೆ-9360 ನೇದ್ದನ್ನು ಅದರ ಚಾಲಕನಾದ ಸಾಗರ್ ಈತನು ಮೋಟಾರ್ ಸೈಕಲನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ.ಚೌಡಮ್ಮರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಶ್ರೀಮತಿ.ಚೌಡಮ್ಮರವರು ರಸ್ತೆಯ ಮೇಲೆ ಬಿದ್ದಿದ್ದರಿಂದ ಬಲ ಸೊಂಟದಲ್ಲಿ ಮೂಳೆ ಮುರಿದಿರುತ್ತದೆಂದು, ಬಲ ಪಕ್ಕೆಯಲ್ಲಿ ತೆರಚಿದ ಗಾಯವಾಗಿರುತ್ತದೆಂದು ಅಪಘಾತ ಪಡಿಸಿದ ಮೋಟಾರ್ ಸೈಕಲ್ ಚಾಲಕ ಸಾಗರ್ ಈತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ವಿನಂತಿ.
Gudekote PS
3 Cr.No:0113/2015
(IPC 1860 U/s 506,341,34,504,323,324 )
05/10/2015 Under Investigation
CASES OF HURT - Simple Hurt
Brief Facts :  ದಿನಾಂಕ 05/10/2015 ರಂದು ಬೆಳಿಗ್ಗೆ 07-00 ಗಂಟೆಗೆ ಪಿರ್ಯಾದಿ ತನ್ನ ಮಗಳು ಮಾನಸಳನ್ನು ಕರೆದುಕೊಂಡು ತನ್ನ ಮನೆಯಿಂದ ಗುಡೇಕೋಟೆಗೆ ಬೈಕಿನಲ್ಲಿ ಹೋಗಲು ಬೈಕ್ ಹತ್ತಿ ಕುಳಿತಕೊಂಡು ಹೊರಟಾಗ ತಮ್ಮೂರಿನ ರಮೇಶ ತಂದೆ ಸುಬ್ಬಯ್ಯ, ಸುಬ್ಬಯ್ಯ ತಂದೆ ಜೀವನಾಗಪ್ಪ ಮತ್ತು ಕೊಟ್ರಮ್ಮ ಗಂಡ ಸುಬ್ಬಯ್ಯ ಇವರು ತನ್ನ ಬೈಕ್ ನ್ನು ಅಡ್ಡಗಟ್ಟಿ ನಿಲ್ಲಿಸಿ ತನಗೆ ರಮೇಶನು ಕೋಲಿನಿಂದ ಎಡಗೈ ಗೆ ಹೊಡೆದು ಒಳಪೆಟ್ಟು ಮಾಡಿ ನಂತರ ಕೊಟ್ರಮ್ಮ ಸುಬ್ಬಯ್ಯ ಇವರು ತನಗೆ ಕೈಕಾಲುಗಳಿಂದ ಹೊಡೆದು ತನಗೆ ತನ್ನ ಮಕ್ಕಳಿಗೆ ಮತ್ತು ತನ್ನ ಹೆಂಡತಿಗೆ ದುರ್ಬಾಷೆಗಳಿಂದ ಬೈದಾಡಿ, ತನಗೆ ತನ್ನ ಮಗಳು ಮಾನಸಳಿಗೆ ಆಂದ್ರ ಪ್ರದೇಶದಿಂದ ರೌಡಿಗಳನ್ನು ಕರೆದುಕೊಂಡು ಬಂದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಇದ್ದ ಲಿಖಿತ ದೂರನ್ನು ಠಾಣೆಯಲ್ಲಿ ಹಾಜರುಪಡಿಸಿದ್ದರಿಂದ ಈ ಪ್ರಕರಣ ದಾಖಲಿಸಿದೆ
Kampli  PS
4 Cr.No:0127/2015
(IPC 1860 U/s 379 )
05/10/2015 Under Investigation
THEFT - Of Automobiles - Of Two Wheelers
Brief Facts :  ಈ ದಿನ ದಿನಾಂಕ 05-10-2015 ರಂದು ಮಾನ್ಯ ಎಸ್.ಪಿ.ಸಾಹೇಬರು ಬಳ್ಳಾರಿ ರವರ ಮುಖಾಂತರ ಸಿಂಧನೂರು ಪಟ್ಟಣ ಪೊಲೀಸ್ ಠಾಣೆಯಿಂದ ಕೃತ್ಯಸ್ಥಳದ ಆಧಾರದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ನೀಡಿದ ಮಾನ್ಯ ಎಸ್.ಪಿ.ಸಾಹೇಬರು ಬಳ್ಳಾರಿ ರವರ ಕಛೆರಿ ಸಂಖ್ಯೆ :100:ಡಿಸಿಆರ್ ಬಿ/ಎಫ್ ಐ ಆರ್/2015 ನೇದ್ದನ್ನು ಪಡೆದುಕೊಂಡು ಪರಿಶೀಲಿಸಿ ನೋಡಲು ದಿನಾಂಕ: 15-06-2015 ರಂದು 4-40 ಪಿ.ಎಮ್ ಸಮಯದಲ್ಲಿ ಫಿರ್ಯಾದಿಯಾದ ಪಿ.ಎಸ್.ಐ(ಕಾಸು) ರವರು ಸಿಬ್ಬಂದಿಯವರಾದ ಪಿ.ಸಿ-675, 98, 610, 599, 354 ರವರೊಂದಿಗೆ ಸಿಂಧನೂರು ನಗರದ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ರಿಲಾಯನ್ಸ್ ಪೆಟ್ರೊಲ್ ಬಂಕ್ ಹತ್ತಿರ ವಾಹನ ತಪಾಸಣೆ ಕಾಲಕ್ಕೆ ಆರೋಪಿತನು ಮೋಟಾರ ಸೈಕಲ್ ನಿಲ್ಲಿಸದೆ ಹಾಗೆಯೇ ಮುಂದಕ್ಕೆ ಹೋಗಲು ಪ್ರಯತ್ನಿಸಿದಾಗ ಸದರಿಯವನನ್ನು ಬೆನ್ನತ್ತಿ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರಾಜ್ ಮಹ್ಮದ್ @ ರಾಜಾ @ ಚಿಕನ್ ರಾಜಾ ತಂದೆ ಹಸನ್ ಸಾಬ್, ಮುಲ್ಲಾರ, ಸಾ: ಅಂಬೇಡ್ಕರ್ ಸರ್ಕಲ್ ಬೂದಗುಂಪಾ ತಾ: ಗಂಗಾವತಿ ಅಂತಾ ಹೇಳಿದ್ದು, ಮೋಟಾರ್ ಸೈಕಲ್ ಬಗ್ಗೆ ವಿಚಾರಿಸಲಾಗಿ ಸರಿಯಾದ ಉತ್ತರ ಹೇಳದೇ ಇದ್ದುದ್ದರಿಂದ ಮತ್ತು ಯಾವುದೆ ದಾಖಲಾತಿಗಳನ್ನು ಹಾಜರಪಡಿಸದೆ ಇದ್ದುದ್ದರಿಂದ ಸದರಿ ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಬಂದಿರಬಹುದೆಂಬ ಬಲವಾದ ಸಂಶಯ ಬಂದಿದ್ದರಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ 6-00 ಪಿ.ಎಮ್ ಕ್ಕೆ ಬಂದು ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಗುನ್ನೆ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಜಪ್ತಿ ಪಂಚನಾಮೆ ಮೇಲಿಂದ ಆರೋಪಿತನ ವಿರುದ್ದ ಠಾಣಾ ಗುನ್ನೆ ನಂ. 97/2015 ಕಲಂ 41(1)(ಡಿ) ಸಹಿತ 102 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. ಕೃತ್ಯಸ್ಥಳದ ಆಧಾರದ ಮೇರೆಗೆ ನೀಡಿದನ್ನು ಪಡೆದುಕೊಂಡು ಕಂಪ್ಲಿ ಠಾಣಾ ಗುನ್ನೆ ನಂ 127/2015 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ