Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0425/2015 (ARMS ACT, 1959 U/s 25,27 ; IPC 1860 U/s 506,504,307,323,324 ) |
10/10/2015 | Under Investigation | |||||||||||||
ATTEMPT TO MURDER - Due To Other Causes | ||||||||||||||||
Brief Facts : | ದಿನಾಂಕ 10-10-2015 ರಂದು ಬೆಳಗಿನ ಜಾವ 01-00 ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಫಿರ್ಯಾಧಿ ಪಿ. ವಿನೋದ್ಕುಮಾರ್ ವಾಸ: ರಾಘವೇಂದ್ರ ಕಾಲೋನಿ, ಬಳ್ಳಾರಿ ರವರು ಲಿಖಿತ ದೂರು ನೀಡಿದ್ದು, ಪಡೆದು ನೋಡಲು ಸಾರಾಂಶ: ದಿನಾಂಕ 09-10-2015 ರಂದು ರಾಘವೇಂದ್ರ ಕಾಲೋನಿಯಲ್ಲಿರುವ ಟಪಾಲ್ ನಾಗರಾಜ ರವರ ಮನೆಯಲ್ಲಿ ಸಾಮ್ರಾಣಿ ಹಾಕುವ ಕಾರ್ಯಕ್ರಮಕ್ಕೆ ತಾನು ಮತ್ತು ತನ್ನ ಅಣ್ಣ ಪಿ. ಮನೋಜಕುಮಾರ್ ರವರು ಹೋಗಿದ್ದು, ತಮ್ಮ ಸಂಬಂದಿಕರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ರಾತ್ರಿ 11-10 ಗಂಟೆಗೆ ಆಶ್ವಿನ್ ಟಪಾಲ್ ನು ತನ್ನ ತಾಯಿ ಕುರಿತು ಅಲ್ಲಿ ನೆರೆದಿದ್ದ ಸಂಬಂಧಿಕರಿಗೆ ಇವರ ತಾಯಿಗೆ ಮದುವೆ ಮಾಡಲು ಯೋಗ್ಯತೆ ಇರಲಿಲ್ಲ ನಾವೆಲ್ಲಾ ಚಂದಾ ಹಾಕಿ ಮದುವೆ ಮಾಡಿದ್ದೇವು ಎಂದು ಹೀಯಾಳಿಸಿ ಮಾತನಾಡಿದ್ದು, ಆಗ ತನ್ನ ಅಣ್ಣ ಮನೋಜಕುಮಾರನು ಅಶ್ವಿನ್ ಟಪಾಲ್ ಗೆ ಈ ರೀತಿ ಮಾತನಾಡಬೇಡ ಎಂದು ಹೇಳಿದ್ದಕ್ಕೆ ಅಶ್ವಿನ್ ಟಪಾಲ್ ಸಿಟ್ಟಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನ್ನ ಅಣ್ಣನಿಗೆ ಹೊಡೆದನು ತಾನು ಯಾಕೆ ಹೊಡೆಯುತ್ತಿದ್ದಿಯಾ ಎಂದು ಕೇಳಿದ್ದಕ್ಕೆ ಅಶ್ವಿನ್ ಟಪಾಲ್ ಈಗ ನಿನ್ನ ಅಣ್ಣನನ್ನು ಕೊಲೆ ಮಾಡುತ್ತೇನೆ ಎಂದು ಹೇಳುತ್ತಾ ತನ್ನ ಎಡಸೊಂಟದ ಪೌಚ್ ನಲ್ಲಿಟ್ಟುಕೊಂಡಿದ್ದ ರಿವಾಲ್ವರ್ ತೆಗೆದು ತನ್ನ ಅಣ್ಣನ ಎದೆಗೆ ರಿವಾಲ್ವರ್ ಇಟ್ಟನು. ಈತನು ತನ್ನ ಅಣ್ಣನಿಗೆ ಸಾಯಿಸಿಬಿಡುತ್ತೇನೆಂದು ತನ್ನ ಅಣ್ಣನಿಗೆ ತಾನು ತಳ್ಳಿದಾಗ ಅಶ್ವಿನ್ ಟಪಾಲ್ ಗುಂಡು ಹಾರಿಸಿದ್ದರಿಂದ ಗುಂಡು ತನ್ನ ಬಲತೊಡೆಯಲ್ಲಿ ತೂರಿಕೊಂಡು ಇನ್ನೊಂದು ಭಾಗದಿಂದ ಗುಂಡು ಹೊರಬಂದು ರಕ್ತಗಾಯವಾಯಿತು. ಆಶ್ವಿನ್ ಟಪಾಲ್ ಪುನಃ ನನ್ನ ಅಣ್ಣನ ಕಡೆ ರಿವಾಲ್ವರ್ ಗುರಿ ಇಟ್ಟಾಗ ತಾನು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಆಶ್ವಿನ್ ಟಪಾಲ್ ಕೈಯಿಂದ ರಿವಾಲ್ವರ್ ಕಸಿದುಕೊಳ್ಳಲು ಹೋದಾಗ ಆಶ್ವಿನ್ ಟಪಾಲ್ ಗುಂಡು ಹಾರಿಸಿದ್ದರಿಂದ ಗುಂಡು ತನ್ನ ಅಣ್ಣನ ಎಡಹೊಟ್ಟೆಗೆ ತಗುಲಿ ಬೆನ್ನಿನ ಹಿಂದಿನಿಂದ ಹೊರಬಂದು, ಅಲ್ಲಿದ್ದ ರಂಜಿತನ ಎಡಕೈ ರಟ್ಟೆಗೆ ಗುಂಡು ತಗುಲಿತು. ಆಗ ಅಲ್ಲಿದ್ದ ಜನರೆಲ್ಲಾ ಬಿಡಿಸಿಕೊಂಡು ತಮ್ಮನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆಂದು ಆಶ್ವಿನ್ ಟಪಾಲ್ ಕಾರ್ಯಕ್ರಮಕ್ಕೆ ಬಂದ ಜನರ ಮುಂದೆ ತನ್ನ ತಾಯಿಯ ಬಗ್ಗೆ ಹೀನಾಯವಾಗಿ ಮಾತನಾಡಿದ್ದು, ಯಾಕೆ ಮಾತನಾಡುತ್ತಿಯಾ ಎಂದು ಕೇಳಿದ ತನ್ನ ಅಣ್ಣನಿಗೆ ಬೈದಾಡಿ, ಕೈಗಳಿಂದ ಹೊಡೆದು, ರಿವಾಲ್ವರ್ ನಿಂದ ಗುಂಡು ಹಾರಿಸಿ, ತನ್ನ ಅಣ್ಣನನ್ನು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆಂದು ಕಾರಣ ಆಶ್ವಿನ್ ಟಪಾಲ್ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿ, ಪ್ರಕರಣ ದಾಖಲಿಸಿದೆ. | |||||||||||||||
Itagi PS | ||||||||||||||||
2 | Cr.No:0053/2015 (CODE OF CRIMINAL PROCEDURE, 1973 U/s 107 ) |
10/10/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ನಿನ್ನೆ ದಿನ ದಿನಾಂಕ 10-10-2015 ರಂದು ರಾತ್ರಿ 8-30 ಗಂಟೆಗೆ ಮಹಾಜನದಹಳ್ಳಿ, ಮುಸುಕಿನ ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ ಕಡೆಗೆ ಗ್ರಾಮ ಭೇಟಿ ನಿಮಿತ್ತ ಪಿ.ಸಿ 1113 ರವರ ಸಂಗಡ ಹೋಗಿ, ರಾತ್ರಿ ಕೆಂಚಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಜಜ್ಜೂರಿ ಬಸವರಾಜ ರವರು ತನ್ನ ಹೆಸರಿನಲ್ಲಿದ್ದ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಹೋಬಳಿಯ ಮುಸುಕಿನಕಲ್ಲಹಳ್ಳ್ಳಿ ಗ್ರಾಮಕ್ಕೆ ಸೇರಿದ ಕೆಂಚಮ್ಮನಹಳ್ಳಿ ಪಕ್ಕ ಇರುವ ಸವರ್ೆ ನಂ 484/ಬಿ/1 ಒಟ್ಟು ವಿಸ್ತೀರ್ಣ 03 ಎಕ್ಕರೆ 19 ಸೆಂಟ್ಸ್ ಜಮೀನನ್ನು ದಿನಾಂಕ 13-10-2006 ರಂದು ತನ್ನ ಮೊದಲ ಹೆಂಡತಿಯ ಮಗಳ ಗಂಡನಾದ ಅಂದರೆ ಪ್ರತಿವಾದಿ 1 ರವರಿಗೆ ಮಾರಾಟ ಮಾಡಿ ಖರೀದಿ ಕ್ರಯ ಪತ್ರ ( ಸ್ವಾಧಿನ ಪತ್ರ ) ವನ್ನು ಬರೆದುಕೊಟ್ಟಿದ್ದು, ಆದರೆ ರಿಜಿಷ್ಟ್ರೇಷನ್ ಆಗಿರಲಿಲ್ಲ, ನಂತರ ಇದೇ ಭೂಮಿಯನ್ನು ಜಜ್ಜೂರಿ ಬಸವರಾಜ ರವರು ದಿನಾಂಕ 02-12-2013 ರಂದು ಬಿ. ಶಿವಪ್ಪ ತಂದೆ ಲೇಟ್ ಸಿದ್ದಪ್ಪ, ಎಂಬುವವರಿಗೆ ಮಾರಾಟ ಮಾಡಿ, ರಿಜಿಷ್ಟ್ರೇಶನ್ ಸಹಾ ಮಾಡಿಸಿಕೊಟ್ಟಿದ್ದು, ಹಾಲಿ ಬಿ. ಶಿವಪ್ಪ ರವರ ಹೆಸರಿನಲ್ಲಿ ಪಹಣಿ ಸಹಾ ಬಂದಿದ್ದು, ಈ ಕುರಿತು ಮಾನ್ಯ ಹಡಗಲಿ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ನೆಡೆಯುತ್ತಿದ್ದು, ಜಿತೆಗೆ ಈ ಬಗ್ಗೆ ಪ್ರಕರಣ ದಾಖಲಾಗಿ ನಮ್ಮ ಪೊಲೀಸ್ ಠಾಣೆಯಲ್ಲಿ ತನಿಖೆಯಲ್ಲಿದ್ದರೂ ಸಹಾ ಸದರಿ ಜಮೀನಿನ ವಿಚಾರದಲ್ಲಿ ಪ್ರತಿವಾದಿಗಳು ಮತ್ತು ಜಮೀನಿನ ಮಾಲಿಕನಾಗಿದ್ದ ಜಜ್ಜೂರಿ ಬಸವರಾಜ, ಈತನ 2 ನೇ ಹೆಂಡತಿಯಾದ ಬಸಮ್ಮ ಹಾಗೂ ಹಾಲಿ ಪಹಣಿಯಲ್ಲಿ ಹೆಸರು ಬಂದಿರುವವ ಬಿ. ಶಿವಪ್ಪ ತಂದೆ ಲೇಟ್ ಸಿದ್ದಪ್ಪ, ರವರುಗಳ ಮಧ್ಯೆ ಮೊದಲಿನಿಂದಲೂ ವಿವಾದಗಳಿದ್ದು, ತಮ್ಮ-ತಮ್ಮ ಮನಸ್ಥಾಪಗಳ ಮಧ್ಯೆ ಗ್ರಾಮದಲ್ಲಿ ಗುಂಪುಗಳನ್ನು ಕಟ್ಟಿಕೊಂಡು ಇಂದಲ್ಲಾ ನಾಳೆ ಮೇಲ್ಕಂಡ ಜಮೀನಿನ ವಿವಾದಗಳ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ರಕ್ತಪಾತ ಮಾಡಿಕೊಳ್ಳುವ ಜೊತೆಗೆ ಕೋಮು ಗಲಭೆ ಮಾಡಿಕೊಳ್ಳುವ ಸಂಭವವಿದ್ದು, ಇದರಿಂದ ಸಾರ್ವಜನಿಕರ ಶಾಂತತೆಗೆ ಮತ್ತು ಆಸ್ಥಿ-ಪಾಸ್ಥಿಗಳಿಗೆ ನಷ್ಠ ಉಂಟಾಗುವ ಸಂಭವಗಳು ಕಂಡುಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ಪ್ರತಿವಾದಿಗಳಿಂದ ಮಾನ್ಯ ನ್ಯಾಯಾಲಯವು ಸೂಕ್ತ ಮುಚ್ಛಳಿಕೆಯನ್ನು ಪಡೆದು ಶಾಂತಿಯಿಂದ ನೆಲೆಸಲು ಅನುವಾಗುವಂತೆ ಮಾಡಲು, ಮೇಲ್ಕಂಡ ಪ್ರತಿವಾದಿಗಳ ವಿರುದ್ದ ಈ ಪ್ರಕರಣವನ್ನು ದಾಖಲಿಸಲಾಗಿದೆ. | |||||||||||||||
Kudligi PS | ||||||||||||||||
3 | Cr.No:0172/2015 (KARNATAKA POLICE ACT, 1963 U/s 78(III) ) |
10/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿ : 07/10/2015 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಪಿ.ಎಸ್. ಐ ಶ್ರೀ ಮಹಾಂತೇಶ್ ಟಿ ರವರು ಕೂಡ್ಲಿಗಿ ಪಟ್ಟಣದ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇರುವಾಗ್ಗೆ ಬಂಡ್ರಿ ಗ್ರಾಮದಲ್ಲಿ ನಸೀಬಿನ ಮಟಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ದೂರಿನ ಮೇರೆಗೆ ಇಬ್ಬರು ಪಂಚರನ್ನು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್ ಸಿ 59 ಶ್ರೀ ಶಾಂತಪ್ಪ ತಳವಾರ್ ಹಾಗೂ ಮ.ಪಿ.ಸಿ 490 ಶ್ರೀಮತಿ ಮಹಾಲಕ್ಷ್ಮಿ ಇವರೊಂದಿಗೆ ಕೆ.ಎ. 34 ಜಿ 250 ನೊಂದಣೆ ಸಂಖ್ಯೆಯ ಪೊಲೀಸ್ ಜೀಪ್ ನಲ್ಲಿ ಮದ್ಯಾಹ್ನ 3.30 ಗಂಟೆಗೆ ಠಾಣೆಯಿಂದ ಹೊರಟು 4.15 ಗಂಟೆಗೆ ಬಂಡ್ರಿ ಗ್ರಾಮವನ್ನು ತಲುಪಿ ಜೀಪನ್ನು ಹೊರ ಹೊಲಯದಲ್ಲಿ ನಿಲ್ಲಿಸಿ ಜೀಪಿನಿಂದ ಇಳಿದು ಸಾಯಂಕಾಲ 4.20 ಗಂಟೆ ಸುಮಾರಿಗೆ ಬಂಡ್ರಿ ಸಂತೆ ಮಾರ್ಕೇಟ್ ಹತ್ತಿರ ಹೋಗಿ ಎ.ಪಿ.ಎಂ.ಸಿ ಕಟ್ಟೆಯ ಬಳಿ ಮರೆಯಲ್ಲಿ ನಿಂತು ನೋಡಲು ಅದೇ ಗ್ರಾಮದ ವಾಸಿಯಾದ ಕಾತ್ರಿಕೆ ಕುಮಾರ ಸ್ವಾಮಿ ಮತ್ತು ಆತನ ಹೆಂಡತಿ ಶ್ರೀಮತಿ ಲಲಿತಮ್ಮ ಇವರಿಬ್ಬರೂ ಜನರನ್ನು ಗುಂಪಾಗಿ ಸೇರಿಸಿಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದವರನ್ನು ನೋಡಿ ಸಾಯಂಕಾಲ 4.25 ಗಂಟೆಗೆ ಅವರಿಬ್ಬರನ್ನು ಹಿಡಿದು ವಿಚಾರಿಸಿ ಅವರಿಂದ ದೊರೆತ ಒಂದು ಬಾಲ್ ಪೆನ್ನ ಒಂದು ಮಟಕಾ ನಂಬರ್ ಗಳ ಪಟ್ಟಿಯನ್ನು ಹಾಗೂ ಮಟಕಾ ಜೂಜಾಟದ ನಗದು ಹಣ 570/- ರೂಗಳನ್ನು ಸ್ವಾದೀನಕ್ಕೆ ಪಡೆದು ಪಿ.ಎಸ್.ಐ ರವರು ಸದರಿ ಪಂಚನಾಮೆಯನ್ನು ಸಾಯಂಕಾಲ 4.30. ರಿಂದ 5.15 ಗಂಟೆಯ ವರೆಗೆ ವಿವರವಾಗಿ ಕೈಗೊಂಡು ಆರೋಪಿಗಳಿಬ್ಬರನ್ನು ವಶಕ್ಕೆ ತೆಗೆದುಕೊಂಡು ಸಾಯಂಕಾಲ 5.45 ಗಂಟೆಗೆ ಮರಳಿ ಠಾಣೆಗೆ ಬಂದು ಜ್ಞಾಪನಾ ದೂರಿನೊಂದಿಗೆ ಮುಂದಿನ ಕ್ರಮ ಜರುಗಿಸಲು ಆದೇಶಿಸಿ ಒಪ್ಪಿಸಿದ್ದನ್ನು ದಿ: 07/10/2015 ರಂದು ರಾತ್ರಿ 8.00 ಗಂಟೆಗೆ ಎಸ್.ಹೆಚ್.ಒ ಕರ್ತವ್ಯದಲ್ಲಿದ್ದಂತಾ ಹೆಚ್ ಸಿ 136 ಜಿ. ಬಸವರಾಜ್ ಆದ ನಾನು ಮೇಲ್ಕಂಡ ಸ್ವತ್ತುಗಳನ್ನು. ಪಂಚನಾಮೆಯನ್ನು. ಜ್ಞಾಪನಾ ದೂರನ್ನು ಇಬ್ಬರು ಆಸಾಮಿಗಳನ್ನು ವಷಕ್ಕೆ ತೆಗೆದುಕೊಂಡು ಠಾಣಾ ಡಿ.ಪಿ. ನಂ 281/2015 ರಲ್ಲಿ ನೊಂದಾಯಿಸಿಕೊಂಡು ಅಸಂಜ್ಞೇಯ ಅಪರಾದ ವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನ್ಯಾಯಾಲಯ ಕರ್ತವ್ಯದ ಪಿ.ಸಿ 302 ಶ್ರೀ ರಮೇಶ್ ರವರೊಂದಿಗೆ ಮಾನ್ಯ ಸಿ.ಜೆ. ಮತ್ತು ಜೆ.ಎಂ.ಎಫ.ಸಿ ನ್ಯಾಯಾಲಯ ಸಂಡೂರು ರವರಲ್ಲಿ ದಿ: 08/10/2015 ರಂದು ಮನವಿ ಪತ್ರವನ್ನು ಸಲ್ಲಿಸಿದ್ದು. ಸದರಿ ಪಿ.ಸಿ ರವರು ಘನ ನ್ಯಾಯಾಲಯದಿಂದ ಪ್ರಕರಣದ ದಾಖಲಿಸಿಕೋಂಡು ತನಿಖೆ ಕೈಗೊಳ್ಳಲು ಅನುಮತಿಸಿದ ಆದೇಶವನ್ನು ತಂದು ಒಪ್ಪಿಸಿದ್ದನ್ನು ಸ್ವೀಕರಿಸಿ ಈ ದಿನ ದಿನಾಂಕ 10/10/2015 ರಂದು ಬೆಳಿಗ್ಗೆ 10.15 ಗಂಟೆಗೆ ಕೂಡ್ಲಿಗಿ ಪೊಲೀಸ್ ಠಾಣೆಯ ಗುನ್ನೆ ನಂ 172/2015 ಕಲಂ 78 (III) ಕೆ.ಪಿ. ಯಾಕ್ಟ್ ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
ಶನಿವಾರ, ಅಕ್ಟೋಬರ್ 10, 2015
PRESS NOTE OF 10/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ