ಭಾನುವಾರ, ಅಕ್ಟೋಬರ್ 18, 2015

PRESS NOTE OF 18/10/2015

Crime Key Report From   To   
Sl. No FIR No FIR Date Crime Group - Crime Head Stage of case
Gandhinagar PS
1 Cr.No:0219/2015
(IPC 1860 U/s 380,457 )
18/10/2015 Under Investigation
BURGLARY - NIGHT - At Residential Premises
Brief Facts :  ಬಳ್ಳಾರಿ ನಗರದ ತಾಳೂರು ರಸ್ತೆ ಶಾಂತಿಶಿಶುವಿಹಾರ ಶಾಲೆ ಎದರುಗಡೆ ಶ್ರೀಕಾಂಪ್ಲೇಕ್ಸ್ ಹಿಂದೆ ಮನೆಯಲ್ಲಿ ವಾಸವಾಗಿರುವ ಫಿರ್ಯಾಧಿ ಶ್ರೀ. ಅನ್ಯಂ ಸುನೀಲ್ ರವರು ಮನೆಯಲ್ಲಿ ತನ್ನ ತಾಯಿ, ಹೆಂಡತಿ ಹಾಗೂ ಮಕ್ಕಳೊಂದಿಗೆ ದಿನಾಂಕ 17/10/2015 ರಂದು ರಾತ್ರಿ 11-00 ಗಂಟೆಗೆ ತನ್ನ ಮನೆಯ ಗ್ರಿಲ್ ಡೋರ್ ಗೆ ಒಳಗಡೆ ಯಿಂದ ಬೀಗ ಹಾಕಿ, ಕಟ್ಟಿಗೆ ಬಾಗಿಲು ಚಿಲಕವನ್ನು ಹಾಕೊಂಡು ಮನೆಯಲ್ಲಿ ಮಲಗಿಕೊಂಡಾಗ ಯಾರೋ ಕಳ್ಳರು ದಿನಾಂಕ 18/10/2015 ರಂದು ಬೆಳಗಿನ ಜಾವ 01-00 ಗಂಟೆ ಯಿಂದ 02-30 ಗಂಟೆ ಮಧ್ಯದಲ್ಲಿ ತೆರೆದ ಕಿಟಿಯಿಂದ ಒಳಗಡೆ ಡೋರ್ ಪಕ್ಕದಲ್ಲಿ ತೂಗೂ ಹಾಕಿದ್ದ ಬೀಗದ ಕುಚ್ಟುಗಳನ್ನು ತೆಗದುಕೊಂಡು ಮನೆ ಗ್ರಿಲ್ ಡೋರ್ ಬೀಗ ತೆಗೆದು ಒಳಗೆ ಬಂದು ತಾಯಿ ಬೆಡ್ ರೂಮಿಗೆ ಹೋಗಿ ಬೀರುವಾ ಮೇಲೆ ಇಟ್ಟಿದ್ದ ಬೀಗವನ್ನು ತೆಗೆದು ಅದರಲ್ಲಿಟ್ಟಿದ್ದ ನಗದು ಹಣ ರು:2,00000/- ಹಾಗೂ ಕಬೋರ್ಡ್ ನಲ್ಲಿಟ್ಟಿದ್ದ ಫಿರ್ಯಾಧಿಯ ಒಟ್ಟು 183-00 ಗ್ರಾಂ ಬಂಗಾರ ವಸ್ತುಗಳು, ನಗದು ಹಣ ರೂ:30,000/- ಗಳು , ಒಟ್ಟು ರೂ:7,21,000/- ಗಳು ಬಾಳುವ ಸ್ವತ್ತು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪತ್ತೆ ಹಚ್ಚಿಕೊಡಲು ಕಾನೂನು ರೀತ್ಯ ಕ್ರಮ ಜರುಗಿಸಲು ದೂರು ಇರುತ್ತದೆ.
Hospet Town PS
2 Cr.No:0200/2015
(IPC 1860 U/s 506,341,504,355,323,324 )
18/10/2015 Under Investigation
CASES OF HURT - Simple Hurt
Brief Facts :  ದಿನಾಂಕ:18/10/2015 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ,ಬಿ.ಭವರ್ ಲಾಲ್ ತಂದೆ ಲೇಟ್ ಬಿ.ಎಸ್ ಬನ್ಸಾಲಿ, ವಯಸ್ಸು 53 ವರ್ಷ, ಜೈನ್ ಜನಾಂಗ, ಪ್ರಬಾತ್ ವರ್ಲ್ಡ್, ಸೋನಿ ಷೋರೂಂ ಮಾಲೀಕರು, ವಾಸ|| ಚಪ್ಪರದಹಳ್ಳಿ, ಆದರ್ಶ ನಿಲಯ, ಬಸಲಿಂಗಪ್ಪ ಕಾಂಪೌಂಡ್ ಎದುರುಗಡೆ, ಹೊಸಪೇಟೆ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರು ಸಾರಾಂಶ ನಿನ್ನೆ ದಿನ ದಿನಾಂಕ:17/10/15 ರಂದು ರಾತ್ರಿ 7-00 ಗಂಟೆಯ ಸಮಯದಲ್ಲಿ ಪಟೇಲ್ ನಗರದ ರವಿಕುಮಾರ್ ಈತನು ನಮ್ಮ ಅಂಗಡಿಗೆ ತನ್ನ ಹೆಂಡತಿ ಮತ್ತು ಸ್ನೇಹಿತರೊಂದಿಗೆ ಬಂದು ಟಿ.ವಿ ಖರೀದಿ ಮಾಡುವ ವಿಷಯದಲ್ಲಿ ರವಿಕುಮಾರ್ ಈತನು ತನ್ನೊಂದಿಗೆ ಜಗಳ ತೆಗೆದು ನನಗೆ ಲೇ ಸೂಳೆ ಮಗನೇ, ನೀವು ಮೋಸಗಾರರು ಎಂದು ಬೈದಾಡಿ ಬಲಗಾಲಿನ ಚಪ್ಪಲಿ ತೆಗೆದು ತನ್ನ ಎಡ ಕಪಾಳಕ್ಕೆ ಹೊಡೆದು ಕೈಗಳಿಂದ ನನ್ನ ಕಪಾಳಕ್ಕೆ ಹೊಡೆದು ನೀನು ಹೇಗೆ ಜೀವನ ಮಾಡುತ್ತೀಯ ನಾನು ನೋಡುತ್ತೇನೆ ಅಂತ ಪ್ರಾಣ ಬೆದರಿಕೆ ಹಾಕಿರುತ್ತಾನೆ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.
3 Cr.No:0201/2015
(IPC 1860 U/s 420 )
18/10/2015 Under Investigation
CHEATING - CHEATING
Brief Facts :  ದಿನಾಂಕ: 18/10/2015 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀರಾಮುಲು.ಜೆ.ಎಲ್ ತಂದೆ ಲೇಟ್ ಜೆ.ಆರ್ ಲಕ್ಷ್ಮಿನಾರಾಯಣ, ವ: 40 ವರ್ಷ, ಪದ್ಮಸಾಲಿ ಜನಾಂಗ, ವಾಸ: 1ನೇ ಕ್ರಾಸ್, 2ನೇ ಮೇನ್, ಆಕಾಶವಾಣಿ, ಹೊಸಪೇಟೆ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರು ಸಾರಾಂಶ: ತನ್ನ ಹೆಸರಿನಲ್ಲಿ 2011ನೇ ಸಾಲಿನಿಂದ ಹೊಸಪೇಟೆಯ ಕರ್ನಾಟಕ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಸಂಖ್ಯೆ-31442500101327401 ನೇದ್ದನ್ನು ಹೊಂದಿದ್ದು, ದಿನಾಂಕ: 16/10/2015 ರಂದು ಮೊಬೈಲ್ ನಂ-918294657143 ನೇದ್ದರಿಂದ ಫಿರ್ಯಾಧಿದಾರರ ಮೊಬೈಲ್ ನಂ-8095000047 ನೇದ್ದಕ್ಕೆ ಹಿಂದಿ ಭಾಷೆಯಲ್ಲಿ ಕರ್ನಾಟಕ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, KYC Complainant ಇದೆ ಎಂದು ATM Card ನ 16 ನಂಬರ್ ಗಳು ಮತ್ತು Card ನ ವ್ಯಾಲಿಡಿಟಿ ಮತ್ತು ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿಯನ್ನು ಕೇಳಿದ ಮೇರೆಗೆ ತಾನು ಎಲ್ಲಾ ಮಾಹಿತಿಯನ್ನು ನೀಡಿದ್ದು, ದಿನಾಂಕ: 16/10/2015 ರಂದು ಯಾರೋ ತನ್ನ ಬ್ಯಾಂಕ್ ಖಾತೆಯಿಂದ ರೂ. 46,000/- ಗಳ ಬೆಲೆಯ ಆನ್ ಲೈನ್ ಮೂಲಕ ಖರೀಧಿಸಿರುವುದಾಗಿ ಈ ಬಗ್ಗೆ ಹೊಸಪೇಟೆ ಕರ್ನಾಟಕ ಬ್ಯಾಂಕ್ ಗೆ ಹೋಗಿ ವಿಚಾರಿಸಲು, ಅವರು ತಮ್ಮ ಬ್ಯಾಂಕಿನಿಂದ ಯಾವುದೇ ಕರೆಯನ್ನು ಮಾಡಿರುವುದಿಲ್ಲವೆಂದು ತಿಳಿಸಿದ್ದು, ತನ್ನ ಖಾತೆಯಿಂದ ಹೋದಂತಹ ಹಣವನ್ನು ಹುಡುಕಿಕೊಡುವಂತೆ ಮತ್ತು ತನಗೆ ಮೊಸ ಮಾಡಿದವರ ವಿರುದ್ದ ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Kottur PS
4 Cr.No:0146/2015
(IPC 1860 U/s 34,504,323,324 )
18/10/2015 Under Investigation
CASES OF HURT - Simple Hurt
Brief Facts :  ದಿನಾಂಕ 18-10-2015 ರಂದು ಮದ್ಯಾಹ್ನ 12-30  ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಮುದ್ರಿತ ದೂರು ಸಾರಾಂಶ,  ಪಿರ್ಯಾದಿಯು ಒಂದು ವರ್ಷದಿಂದ ತನ್ನ ಅಣ್ಣ ಹನುಮಂತಪ್ಪನ ಮನೆಯಲ್ಲಿ ವಾಸವಾಗಿದ್ದು, ಸದರಿ ಮನೆಯನ್ನು ಬಿಡುವಂತೆ ಅಣ್ಣನು ಕೇಳಿದ್ದು, ಬೇರೆ ಮನೆಯ ವ್ಯವಸ್ಥೆ ಮಾಡಿಕೊಂಡು ಬಿಡುವುದಾಗಿ ಹೇಳಿದ್ದರಿಂದ ಬಾಯಿ ಮಾತಿನ ಜಗಳ ಮಾಡಿಕೊಂಡಿರುತ್ತಾರೆ.   ಇದೇ ಹಿನ್ನೆಲೆಯಲ್ಲಿ ದಿನಾಂಕ 
16-10-2015 ರಂದು  ಸಂಜೆ 7-45 ಗಂಟೆ ಸಮಯದಲ್ಲಿ ಪಿರ್ಯಾದಿ ಮತ್ತು ಆತನ ಹೆಂಡತಿ ನಾಗವೇಣಿ  ತಮ್ಮ ಮನೆಯ ಮುಂದೆ ನಿಂತಿರುವಾಗ  ಪಿರ್ಯಾದಿಯ ಅಣ್ಣಂದಿರಾದ ಹನುಮಂತಪ್ಪ ಮತ್ತು ತಿಮ್ಮಪ್ಪ ಬಂದು ಲೇ ಸೂಳೆ ಮಗನೆ ನನ್ನ ಮನೆಯನ್ನು ಬಿಡು ಎಂದರೆ ಬಿಡುವುದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈದಾಡಿ  ಕಟ್ಟಿಗೆಯಿಂದ  ಕಣ್ಣಿಗೆ, ಎಡಕಾಲು ಮೀನುಖಂಡಕ್ಕೆ ಹೊಡೆದಿದ್ದು, ಕೆಳಗೆ ಕೆಡವಿ ಕೈಕಾಲುಗಳಿಂದ ಮೈಕೈಗೆ  ಹೊಡೆದು ಒಳಪೆಟ್ಟು ಮಾಡಿದ್ದು,  ಪಂಚಾಯ್ತಿಯಲ್ಲಿ ಬಗೆಹರಿಸುವುದಾಗಿ ಹೇಳಿದ್ದರಿಂದ ತಡವಾಗಿ ದೂರು ಕೊಟ್ಟ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ.
Thoranagal PS
5 Cr.No:0157/2015
(IPC 1860 U/s 341,504,143,147,148,149,307,323,324,506(2) )
18/10/2015 Under Investigation
ATTEMPT TO MURDER - Due To Other Causes
Brief Facts :  ನಿವೇದನೆ:-
ನಿನ್ನೆಯ ದಿನ ದಿನಾಂಕ: 16/10/2015 ರಂದು  11;00 ಎ.ಎಂ.ಗೆ ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇಮ್ ಕುಮಾರ್ ರವರು ನೀಡಿದ ದೂರಿನ ಸಾರಂಶವೆನೆಂದರೆ  ಆದ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳವುದೆನೆಂದರೆ ನಾನು  ಸುಮಾರು 3 ವರ್ಷ ದಿಂದ  ಜೆ.ಎಸ್.ಎಸ್.ಎಲ್. ನಲ್ಲಿ ಅಪರೇಟರ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಬಂದಿದ್ದೇನ್. ಸುಮಾರು 1 ತಿಂಗಳಿಂದ ಕ್ರಾಂತಿಕಾರಿ ಕಾಮಾಗಾರಿ ಯೂನಿಯನ್ ನಲ್ಲಿಸದಸ್ಯನಾಗಿ ಬಂದಿರುತ್ತೇನೆ.ನಾನು ಸದಸ್ಯನಾಗುವುದು ಕಂಪನಿಗೆ ಇಷ್ಟ ವಿರುವುದಿಲ್ಲ ಈ ವಿಷಯವನ್ನು ತೋರಣಗಲ್ಲು ಆರ್ ಎಸ್ ವೆಂಕಟೇಶ್(ಮಾಸ್) ಅವರು ದಿನಾಂಕ: 15/10/2015ರಂದು ಮದ್ಯಾಹ್ನ 12;30ಕ್ಕೆ ನಮ್ಮ ಮನೆಯ ಹತ್ತಿ ಬಂದು ಹಳ್ಳದ ರಾಯಪ್ಪ ರವರನ್ನು ನನ್ನ ಬಗ್ಗೆ ವಿಚಾರ ಮಾಡಿಕೊಂಡು ಹೋಗಿರುತ್ತಾರೆ.
      ಪ್ರತಿದಿನದಂತೆ  ನಿನ್ನೆಯ ದಿನ ದಿನ಻ಂಕ: 16/10/2015 ರಂದು  ಬಿ. ಶೀಪ್ಟ್  ಗೆ ಕೆಲಸಕ್ಕೆ ಹೋಗಿದ್ದು ಮುಗಿಸಿಕೊಂಡು ನಮ್ಮ ಕಂಪನಿಯ ಬಸ್ಸಿನಲ್ಲಿ ನಾನು ನಮ್ಮ ಸ್ನೇಹಿತರಾದ ಮಹೇಶ್ ಮಹೇಶ್ ಗೀರಿ ಶಂಕರಪ್ಪ ನೊಂದಿಗೆ  10;30  ಪಿ.ಎಂ. ವಡ್ಡು ಗ್ರಾಮದ ಕ್ರತಾಸಿನ ಹತ್ತಿರ ಬಸ್ಸಿನಿಂದ ಇಳಿದು  ಮನೆಗೆ ಹೋಗುತ್ತಿರುವಾಗ  ವೆಂಕಟೇಶ(ಮಾಸ್) ಇತರೆ 6 ಜನರು ಕೂಡಿಕೊಂಡು  ನಮ್ಮ ನಿಲ್ಲಿಸಿ ನಿಮ್ಮಲ್ಲಿ ಪ್ರೇಮ್ ಕುಮಾರ್ ಯಾರೆಂದು ಕೇಳಿದ್ದಕ್ಕೆ ನಾನು ಪ್ರೇಮ್ ಕುಮಾರ್ ಎಂದು ಹೇಳಿದ್ದಕ್ಕೆ  ಇದನ್ನು ಕೇಳಿಸಿಕೊಂಡವರು ಲೇ ಸೂಲೇ ಮನಗೇ ಇಲ್ಲಿಂದಲೇ ಬಂದು ನಮ್ಮ ಜಿಂದಲ್ ಕಂಪನಿಯಲ್ಲಿ ಯೂನಿಯನ್  ಕಟ್ಟಿಕೊಂಡು  ಹೇಗೆ ಜೀವನ ಮಾಡಿಕೊಂಡು ಹೋಗುತ್ತೀರೀ ನಿಮ್ಮನ್ನು  ಇಲ್ಲಿ ಹೇಗೆ ಜೀವನ ಮಾಡಿಕೊಳ್ಳುತ್ತೀರೀ ನೋಡಿಕೊಳ್ಳುತ್ತೇವೆ. ಎನ್ನುತ್ತಾ  ಅವರಲ್ಲಿ  ಇದ್ದ ಇಬ್ಬರು  ನನ್ನ ಹಿಡಿದು ಕೊಂಡು  ವೆಂಕಟೇಶನು  ಕಟ್ಟಿಗೆ ಯಿಂದ  ನನ್ನ ಬೆಣ್ನಿಗೆ ಬಡಿದನು. ಇನ್ನೊಬ್ಬನು  ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು  ಚಾಕಿನಿಂದ ಹೊಡೆದನು. ಉಳಿದವರು ಕೈ ಕಾಲುನಿಂದ  ಬಡಿದ್ದರಿಂದ ನನಗೆ ತೆಲೆ ಸುತ್ತು ಬಂದು ಬಿದ್ದೆನು. ಈ ಗಲಾಟೆಯಲ್ಲಿ  ನನ್ನ ಮೊಬೈಲ್ ಬಿದ್ದು ಹೋಗಿರುತ್ತದೆ. ನನಗೆ ಬೆನ್ನಿಗೆ ಕೈಕಾಲುಗಳಿಗೆ  ಪೆಟ್ಟುಗಳು ಆಗಿದ್ದು ನನ್ನ ಜೊತೆಯಲ್ಲಿ ಇರುವವರು  ಮತ್ತು ನನ್ನ ಅಕ್ಕ ಚಂದ್ರಕಲಾ ಕರೆದು ಕೊಂಡು ಬಂದು ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಲು ಮ಻ಡಿದರು. ನಾನು ಈ ದಿನ ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ  ನನ್ನ ದೂರನ್ನು  ವೆಂಕಟೇಶ್(ಮಾಸ್) 6 ಜನರು  ವಾಸ: ತೋರಣಗಲ್ಲು ಆರ್.ಎಸ್. ಇವರ ವಿರುದ್ದ ಹಾಗೂ ಜೆ.ಎಸ್.ಎಸ್.ಎಲ್.  ಕೆಲ ಆದಿಕಾರಿಗಳು ವಿರುದ್ದ  ಕಾನೂನು ರೀತಿ ಕ್ರಮ ಜರುಗಿಸಲು ವಿಮ್ಸ ಆಸ್ಪತ್ರೆಯಲ್ಲಿ ಸತೀಶ್ ರವರ ಮು;ಖಾಂತರ ನನ್ನ ದೂರನ್ನು ಬರೆಯಿಸಿ ವಿಮ್ಸ ಆಸ್ಪತ್ರೆಯಲ್ಲಿ ದೂರು ನೀಡುತ್ತಾ ನನಗೆ ಮುಂದೆ ಏನೇ ಹಾದರೂ ಜೆ.ಎಸ್.ಎಸ್.ಎಲ್   ಕೆಲಸ ಆದಿಕಾರಿಗಳು ಹಾಗೂ ವೆಂಕಟೇಶ್ (ಮಾಸ್) ಇತರು ಕಾರಣರಾಗಿರುತ್ತಾರೆ.  ಈ ಘಾಟನೆ ಬೀದಿ ದೀಪದ ಬೆಳಕಿನಲ್ಲಿ ಜರುಗಿದ್ದು ಹಲ್ಲೆ ಮಾಡಿದವರನ್ನು ನೋಡಿದರೆ ಗುರುತಿಸುತ್ತೇನೆ. ಎಂದು ದೂರನ್ನು ಪಡೆದು ಕೊಂಡು ಈ ದಿನ ದಿನಾಂಕ: 18/10/2015 ರಂದು 00;15 ಗೆ ಠಾಣೆಗೆ ಬಂದು ಠಾಣೆಯಲ್ಲಿ ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.( ಪ್ರ.ವ.ವ.ಗೆ ಪಿರ್ಯಾದಿ ದೂರನ್ನು ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ