Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Gudekote PS | ||||||||||||||||
1 | Cr.No:0114/2015 (KARNATAKA POLICE ACT, 1963 U/s 78(III) ) |
09/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 08/10/2015 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಆರೋಪಿತನು ಗುಡೆಕೋಟೆ ಗ್ರಾಮದ ಬ್ರಾಂದಿ ಶಾಪ್ ಸರ್ಕಲ್ ನಲ್ಲಿ ವಿಶ್ವತೇಜ ಫೋಟೋ ಸ್ಟೂಡಿಯೋ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ದಾರಿಯಲ್ಲಿ ಹೋಗಿ ಬರುವ ಜನರಿಗೆ ಇದು ನಸೀಬಿನ ಮಟಕಾ ಜೂಜಾಟ, ನೀವು ಯಾವುದಾದರೂ ಒಂದು ನಂಬರ್ ಗೆ 1.00/- ರೂ. ಕಟ್ಟಿದಲ್ಲಿ ಅದೇ ನಂಬರ್ ನಾಳೆ ದಿನ ಬಂದರೆ ನಿಮಗೆ 80.00/- ರೂ.ಗಳನ್ನು ಕೊಡುವುದಾಗಿ ಕೂಗಿ ಹೇಳುತ್ತಾ ಬಂದ ಜನರಿಂದ ಹಣ ಪಡೆದು ನಸೀಬಿನ ಮಟಕಾ ಚೀಟಿಗಳನ್ನು ಬರೆದುಕೊಡುತ್ತಾ ನಸೀಬಿನ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅವರ ಆದೇಶದಂತೆ ಎ.ಎಸ್.ಐ (ಎನ್) ರವರು ಸಿಬ್ಬಂಧಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 1850/- ಗಳು, ಒಂದು ಮಟಕಾ ಪಟ್ಟಿ ಹಾಗೂ ಒಂದು ಬಾಲ್ ಪೆನ್ ಗಳನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು ಮರಳಿ ಠಾಣೆಗೆ ಬಂದು ಜಪ್ತು ಪಡಿಸಿಕೊಂಡ ಬಂದ ಮಾಲು, ಹಾಗೂ ಆರೋಪಿತನನ್ನು ಒಪ್ಪಿಸಿ ಆರೋಪಿತನ ವಿರುದ್ದ ಹಾಗೂ ಆತನಿಂದ ಮಟಕಾ ಪಟ್ಟಿಗಳನ್ನು ತೆಗೆದುಕೊಳ್ಳುವ ಕೊಪ್ಪಳದ ಗಿಣಿಗೇರೆ ನೀಲಮ್ಮ ಹಾಗೂ ಬಳ್ಳಾರಿಯ ವ್ಯಕ್ತಿಯ ವಿರುದ್ದ ಕ್ರಮ ಜರುಗಿಸುವಂತೆ ಮದ್ಯಾಹ್ನ 2-10 ಗಂಟೆಗೆ ವಿಶೇಷ ವರದಿಯನ್ನು ನೀಡಿದ ಮೇರೆಗೆ ಆರೋಪಿತರು ಅಸಂಜ್ಞೇಯ ಅಪರಾಧ ಎಸಗಿದ್ದರಿಂದ ಆರೋಪಿತರ ವಿರುದ್ದ ಡಿ.ಪಿ.ನಂ; 72/2015 ರೀತ್ಯಾ ಪ್ರಕರಣ ದಾಖಲಿಸಿ ಈ ಡಿ.ಪಿ.ಯ ಮೇಲೆ ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಲು ಪರವಾನಿಗೆ ಕೋರಿದ್ದು ಈ ದಿನ ದಿ: 09/10/2015 ರಂದು ನ್ಯಾಯಾಲಯವು ಪರವಾನಿಗೆ ನೀಡಿದ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತದೆ. | |||||||||||||||
2 | Cr.No:0115/2015 (IPC 1860 U/s 00MP ) |
09/10/2015 | Under Investigation | |||||||||||||
MISSING PERSON - Girl | ||||||||||||||||
Brief Facts : | ದಿನಾಂಕ: 22/08/2015 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ತಮ್ಮ ಮಗಳಾದ ಕು: ಮಾರಕ್ಕ, 20ವರ್ಷ, ಈಕೆಯು ಊಟ ಮಾಡಿ ತನ್ನ ತಾಯಿ ಸಣ್ಣಪಾಲಮ್ಮ ಹಾಗೂ ತನ್ನ ದೊಡ್ಡ ಮಗಳು ಲಿಂಗಮ್ಮಳೊಂದಿಗೆ ಮಲಗಿಕೊಂಡಿದ್ದವಳು ಮಧ್ಯರಾತ್ರಿ 1-00 ಗಂಟೆ ಸಮಯದಲ್ಲಿ ಯಾರಿಗೂ ಹೇಳದೇ ಕೇಳದೇ ಯಾವ ಕಾರಣಕ್ಕೋ ಮನೆಯಿಂದ ಹೋಗಿ ಕಾಣೆಯಾದವಳು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಸಹಾ ಪತ್ತೆಯಾಗದೇ ಕಾಣೆಯಾಗಿರುತ್ತಾಳೆಂದು ಕಾರಣ ಕಾಣೆಯಾದ ತನ್ನ ಮಗಳು ಕು: ಮಾರಕ್ಕಳನ್ನು ಹುಡುಕಿ ಪತ್ತೆ ಮಾಡಿಕೊಡಬೇಕೆಂದು ಪಿರ್ಯಾದಿ ಶ್ರೀ. ಪರಮೇಶ್ವರಿ ಪಾಪಯ್ಯ ತಂದೆ ಚಿನ್ನಯ್ಯ, ವಾಸ:ಎ.ಸಿ.ಹಳ್ಳಿ ಗ್ರಾಮ ಇವರು ಈ ದಿನ ದಿ: 09/10/2015 ರಂದು ಬೆಳಿಗ್ಗೆ 11-45 ಗಂಟೆಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತದೆ. | |||||||||||||||
Hospet Town PS | ||||||||||||||||
3 | Cr.No:0192/2015 (KARNATAKA POLICE ACT, 1963 U/s 78(3) ) |
09/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 09/10/2015 ರಂದು ಮಧ್ಯಾಹ್ನ 2:45 ಗಂಟೆಗೆ ಶ್ರೀ ಇ.ನಾಗರಾಜ, ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ತಮ್ಮ ದೂರು, ದೂರಿನೊಂದಿಗೆ ಪಂಚನಾಮೆ, ಪಂಚನಾಮೆಯಲ್ಲಿ ನಮೂದು ಮಾಡಿ ಮುದ್ದೇಮಾಲು ಮತ್ತು ಒಬ್ಬ ಆರೋಪಿಯನ್ನು ಹಾಜರುಪಡಿಸಿದ್ದು, ದೂರು ಸಾರಾಂಶ: ಎ.ಎಸ್.ಐ ರವರಿಗೆ ಬಂದ ಮಾಹಿತಿ ಮೇರೆಗೆ ಹೆಚ್.ಸಿ-256, ಪಿಸಿ-497, 968, 865, 861 ರವರೊಂದಿಗೆ ಮತ್ತು ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ತಮ್ಮ ತಮ್ಮ ಬೈಕ್ ಗಳಲ್ಲಿ ಹೊಸಪೇಟೆ ನಗರದ ಕನಕದಾಸ ಸರ್ಕಲ್ ಹತ್ತಿರ ನಡೆಯುತ್ತಿದ್ದ ಮಟ್ಕಾ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿ ರಂಜಾನ್ ಸಾಬ್ ತಂದೆ ಫೀರಾ ಸಾಬ್, ಪಿಂಜಾರ ಜನಾಂಗ, ವ: 45 ವರ್ಷ, ಕೂಲಿ ಕೆಲಸ, ವಾಸ: ಮಸೀದಿ ಹತ್ತಿರ, ಆರ್.ಎಸ್ ರಸ್ತೆ, ಹೊಸಪೇಟೆ ಈತನನ್ನು ಹಿಡಿದುಕೊಂಡಿದ್ದು, ಸದರಿ ವ್ಯಕ್ತಿಯಿಂದ ಒಟ್ಟು ನಗದು ಹಣ ರೂ. 21,570/- ಗಳನ್ನು, 1 ಬಾಲ್ ಪೆನ್ ಹಾಗೂ 3 ಮಟ್ಕಾ ಪಟ್ಟಿಗಳು ಹಾಗೂ 1 ಮೊಬೈಲ್ ಅಂದಾಜು ಬೆಲೆ ರೂ,100/- ಬಾಳುವು ದೊರೆತಿದ್ದು ಹಾಗೂ ಮಟ್ಕಾ ಪಟ್ಟಿಗಳನ್ನು ಯಾರಿಗೆ ಕೊಡುತ್ತೀಯಾ ಎಂದು ಕೇಳಿದಾಗ, ಗುರುಸ್ವಾಮಿ ವಾಸ: ಆಕಾಶವಾಣಿ ಹೊಸಪೇಟೆ ರವರಿಗೆ ನೀಡುವುದಾಗಿ ಹೇಳಿದನು. ಆಗ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಮೇಲ್ಕಂಡ ಆರೋಪಿಯ ವಶದಲ್ಲಿ ದೊರೆತ ಮಟ್ಕಾ ಸಾಮಾಗ್ರಿಗಳು, ಎಲ್ಲಾ ಒಟ್ಟು ನಗದು ಹಣ ರೂ.21570/- ಗಳನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಮುದ್ದೆಮಾಲುಗಳು ಮತ್ತು ಆರೋಪಿ ಸಮೇತ ವಾಪಾಸ್ ಠಾಣೆಗೆ ಬಂದು ಸದರಿ ವ್ಯಕ್ತಿಯ ವಿರುದ್ದ ಕ್ರಮ ಜರುಗಿಸಲು ಇದ್ದ ದೂರು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Sandur PS | ||||||||||||||||
4 | Cr.No:0164/2015 | 09/10/2015 | Under | |||||||||||||
(IPC 1860 U/s 363 ) | Investigation | |||||||||||||||
KIDNAPPING AND ABDUCTION - Others | ||||||||||||||||
Brief Facts : | ಫಿರ್ಯಾದಿದಾರರು ದಿನಾಂಕ: 09-10-2015 ರಂದು ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದೇನೆಂದರೆ:- ನನ್ನ ಮಗನು ಸಂಡೂರುನಲ್ಲಿರುವ ಕೃಪಾನಿಲಯ (ಚರ್ಚ್ ಶಾಲೆ) ಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಡುತ್ತಿದ್ದು, ಪರೀಕ್ಷೆ ಇದ್ದರಿಂದ ದಿನಾಂಕ : 05-10-2015 ರಂದು ಬೆಳಿಗ್ಗೆ 9-00 ಗಂಟೆಗೆ ಶಿವುಕುಮಾರನನ್ನು ಮೊಟಾರು ಸೈಕಲ್ ನಲ್ಲಿ ನಾನು ಕರೆದುಕೊಂಡು ಶಾಲೆಗೆ ಬಿಟ್ಟುಬಂದಿರುತ್ತೇನೆ. ಶಾಲೆಯಿಂದ ಸಂಜೆಯಾದರೂ ಮನೆಗೆ ಬರಲಿಲ್ಲವಾದ್ದರಿಂದ ಅಲ್ಲಲ್ಲಿ ಹೋಗಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಮರುದಿನ ಬೆಳಿಗ್ಗೆ ಶಾಲೆಯಲ್ಲಿ ಹೋಗಿ ವಿಚಾರ ಮಾಡಲಾಗಿ ನನ್ನ ಮಗನು ಪರೀಕ್ಷೆ ಮುಗಿದ ನಂತರ ಎಲ್ಲರಂತೆ ತಾನು ಮನೆಗೆ ಹೋಗಿರುತ್ತಾನೆಂದು ತಿಳಿಸಿದರು. ನನ್ನ ಮಗನು ಸಂಡೂರು ವಾಸಿಯಾದ ೩೫ ವರ್ಷದ ವ್ಯಕ್ತಿ ವಿರುಪಣ್ಣ ಎಂಬಾತನ ಸಂಗಡ ಹೆಚ್ಚಾಗಿ ಇರುತ್ತಿದ್ದರಿಂದ ಆತನನ್ನು ವಿಚಾರ ಮಾಡಲಾಗಿ ತನಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾನೆ. ಈ ಬಗ್ಗೆ ನಾವು ನಮ್ಮ ಸಂಬಂಧಿಕರ ಊರುಗಳಲ್ಲಿ ಮತ್ತು ನನ್ನ ಮಗನ ಫ್ರಂಡ್ಸ್ ಬಳಿ ವಿಚಾರ ಮಾಡಲಾಗಿ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಆದ್ದರಿಂದ ನನ್ನ ಮಗನು ಇದ್ದರಿಂದ ದಿನಾಂಕ : 05-10-2015 ರಂದು ಶಾಲೆಯಿಂದ ವಾಪಾಸ್ ಮನೆಗೆ ಬಂದಿಲ್ಲದ ಕಾರಣ ಕಾಣೆಯಾಗಿದ್ದು, ಹಾಲಿ ಎಲ್ಲಿದ್ದಾನೋ ಅಥವಾ ಯಾರಾದರೂ ಕಿಡ್ನಾಪ್ ಮಾಡಿದ್ದಾರೋ ಎಂಬ ವಿಷಯ ಗೊತ್ತಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಠಾಣೆಯ ಗುನ್ನೆ ನಂ: 164/2015 ಕಲಂ: 363 ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. | |||||||||||||||
ಶುಕ್ರವಾರ, ಅಕ್ಟೋಬರ್ 9, 2015
PRESS NOTE OF 09/10/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ