Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0468/2015 (INDIAN MOTOR VEHICLES ACT, 1988 U/s 187 ; IPC 1860 U/s 304A,279 ) |
03/11/2015 | Under Investigation | |||||||||||||
MOTOR VEHICLE ACCIDENTS FATAL - State Highways | ||||||||||||||||
Brief Facts : | ದಿನಾಂಕ: 3-11-2015 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾದಿ ಶ್ರೀ. ಕೆ. ಬ್ರಹ್ಮಾನಂದ ರೆಡ್ಡಿ ತಂದೆ ಕೆ.ಹನುಮಂತ ರೆಡ್ಡಿ ವಯಸ್ಸು 48 ವರ್ಷ, ರೆಡ್ಡಿ ಜನಾಂಗ, ಬ್ರಾಂಚ್ ಪೋಸ್ಟ ಮಾಸ್ಟರ್, ಆರ್.ಬಿ.ವಂಕ ಗ್ರಾಮ, ರಾಯದುರ್ಗ, ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶ: ದಿನಾಂಕ: 3-11-2015 ರಂದು ಬೆಗಳಿನ ಜಾವ ತಮ್ಮ ಗ್ರಾಮದಿಂದ ಬಳ್ಳಾರಿ ಎ.ಪಿ.ಎಂ.ಸಿ ಮಾರ್ಕೆಟ್ ಗೆ ಹೋಗಲು ತನ್ನ ತಮ್ಮ ಕೆ.ಚಿನ್ನಪ್ಪರೆಡ್ಡಿರವರು ತನ್ನ ಮೋಟಾರ್ ಸೈಕಲ್ ನಂಬರ್ ಎ.ಪಿ-02-ಎ-ಡಬ್ಲು-5517 ನ್ನು ಚಲಾಯಿಸಿಕೊಂಡು ಬಳ್ಳಾರಿ ಬೆಂಗಳೂರು ರಸ್ತೆ ಹಲಕುಂದಿ ಗ್ರಾಮದ ಬಳಿ ಇರುವ ಪೊಲೀಸ್ ಫೈರಿಂಗ್ ರೇಂಜಿನ ಹತ್ತಿರ ಹೋಗುತ್ತಿದ್ದಾಗ ಎದುರಾಗಿ ಬಳ್ಳಾರಿ ಕಡೆಯಿಂದ ಎಸ್.ಆರ್.ಇ ಕಂಪನಿಯ ಬಸ್ ನಂಬರ್ ಕೆ.ಎ-16-ಬಿ-5414 ನೇದ್ದನ್ನು ಅದರ ಚಾಲಕ ಚಿತ್ರದುರ್ಗ ಜಿಲ್ಲೆಯ ವಾಸಿ ಸೈಫುಲ್ಲಾ ಖಾನ್ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಪೂರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆ.ಚಿನ್ನಪ್ಪ ರೆಡ್ಡಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದ್ದರಿಂದ ತಲೆಗೆ, ಕೈಕಾಲುಗಳಿಗೆ ಮತ್ತು ದೇಹಕ್ಕೆ ಭಾರೀ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಅಪಘಾತ ಮಾಡಿದ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. (ಫಿರ್ಯಾದುದಾರರು ನೀಡಿದ ದೂರನ್ನು ಲಗತ್ತಿಸಿ ನಿವೇದಿಸಿಕೊಂಡಿದೆ) | |||||||||||||||
2 | Cr.No:0469/2015 (IPC 1860 U/s 323,324,354(B),498A,504,506,34 ) |
03/11/2015 | Under Investigation | |||||||||||||
CRUELTY BY HUSBAND - Husband And Relative(S) In Law | ||||||||||||||||
Brief Facts : | ಫಿರ್ಯಾಧಿದಾರರಾದ ಶ್ರೀಮತಿ ಅನುರಾಧ ಗಂಡ ಹೆಚ್.ಶ್ರೀನಾಥ ವ: 28 ವರ್ಷ, ವಾಲ್ಮೀಕಿ ಜನಾಂಗ, ಗೃಹಣಿ, ವಾಸ: ಸೀನಪ್ಪ ರವರ ಮನೆಯಲ್ಲಿ ಬಾಡಿಗೆಗೆ, ಬೊಗ್ಗಲು ತಿಪ್ಪಯ್ಯ ಕಾಲೋನಿ, ಉಮಾಮಹೇಶ್ವರ ಕಲ್ಯಾಣ ಮಂಟಪ ಎದುರುಗಡೆ, ಬಳ್ಳಾರಿ ರವರು ಈ ದಿನ ದಿನಾಂಕ 03-11-2015 ರಂದು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸಾರಾಂಶವೇನೆಂದರೇ, ಫಿರ್ಯಾಧಿದಾರರಿಗೆ ದಿನಾಂಕ 18-02-2005 ರಂದು ಹೊಸ ಎರ್ರಗುಡಿ ಗ್ರಾಮದ ವಾಸಿಯಾದ ಆರೋಪಿ-1 ಹೆಚ್.ಶ್ರೀನಾಥ ನೋಂದಿಗೆ ಮದುವೆ ಆಗಿರುತ್ತದೆ. ಮದುವೆಯಾದ 1 ವರ್ಷದಿಂದಲೂ ಆರೋಪಿತರು ಫಿರ್ಯಾಧಿದಾರರ ಶೀಲದ ಮೇಲೆ ಅನುಮಾನ ಪಡುತ್ತಾ ಫಿರ್ಯಾಧಿದಾರರಿಗೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು, ದಿನಾಂಕ 31-10-2015 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರರು ತಮ್ಮ ಮನೆಯ ಮುಂದೆ ಇದ್ದಾಗ ಅದೇ ವಿಚಾರವಾಗಿ ಆರೋಪಿತರು ಬಂದು ಫಿರ್ಯಾಧಿದಾರರಿಗೆ ದುರ್ಭಾಷೆಗಳಿಂದ ಬೈದಾಡಿ, ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಸಾರ್ವಜನಿಕರ ಮುಂದೆ ಫಿರ್ಯಾಧಿದಾರರ ಸೀರೆ ಹಿಡಿದು ಎಳೆದಾಡಿ ಅಪಮಾನ ಮಾಡಿ ಪ್ರಾಣ ಬೆದರಿಕೆ ಹಾಕಿದ ತನ್ನ ಗಂಡ ಹೆಚ್.ಶ್ರೀನಾಥ, ಅತ್ತೆ ಹೆಚ್.ಕ್ರ್ರಿಷ್ಣಮ್ಮ ಮತ್ತು ಮಾವ ಹೆಚ್.ವೆಂಕಟರಾಮುಡು ರವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ದೂರು ಇರುತ್ತದೆ. | |||||||||||||||
Hirehadagali PS | ||||||||||||||||
3 | Cr.No:0183/2015 (CODE OF CRIMINAL PROCEDURE, 1973 U/s 110(E)(G) ) |
03/11/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ನಾನು ದಿನಾಂಕ 03-11-2015 ರಂದು ಬೆಳೆಗ್ಗೆ 09.00 ಗಂಟೆಗೆ ಪಿ.ಸಿ-737 ರವರೊಂದಿಗೆ ಹಿರೇಹಡಗಲಿ ಠಾಣಾ ಸರಹದ್ದಿನ 7 ನೇ ಗ್ರಾಮ ಗಸ್ತಿನ ಗ್ರಾಮವಾದ ತುಂಬಿನಕೇರಿಗೆ ಬೇಟಿ ನೀಡಿ ನಂತರ ಬೆಳೆಗ್ಗೆ 09.30 ಗಂಟೆಗೆ ತುಂಬಿನಕೇರಿ ದೊಡ್ಡ ತಾಂಡಕ್ಕೆ ಬೇಟಿ ನೀಡಿದ್ದು ಆರೋಪಿಯು ತುಂಬಿನಕೇರಿ ದೊಡ್ಡ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಓಡಾಡುತ್ತ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ದುರ್ಭಾಷೆಗಳಿಂದ ಬೈದಾಡುತ್ತ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಾ ಅಸಭ್ಯ ರೀತಿಯಿಂದ ವರ್ತಿಸುತ್ತ ಸಾರ್ವಜನಿಕರಿಗೆ ಭಯ-ಭೀತಿ ಊಂಟು ಮಾಡುತ್ತ ಶಾಂತತಾ ಭಂಗ ಉಂಟು ಮಾಡುತ್ತಿದ್ದು, ಈತನ ಬಗ್ಗೆ ಬಾತ್ಮೀದಾರರನ್ನು ಕಂಡು ಮಾಹಿತಿ ಸಂಗ್ರಹಿಸಲು ಈತನು ಸಾರ್ವಜನಿಕ ಸ್ಥಳದಲ್ಲಿ | |||||||||||||||
ಗಲಾಟೆ ಮಾಡುತ್ತ ದುರ್ಭಾಷೆಗಳಿಂದ ಬೈಯುತ್ತಾ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದರಿಂದ ಸದರಿ ಆರೋಪಿಯು ರೂಢಿಗತವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತ ಅಸಭ್ಯವಾಗಿ ವರ್ತಿಸುತ್ತ ಭಯ-ಭೀತಿ ಉಂಟು ಮಾಡುತ್ತ ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದರಿಂದ ಆರೋಪಿಗೆ ದಸ್ತಗಿರಿ ಮಾಡಿ ಠಾಣೆಗೆ ಬೆಳೆಗ್ಗೆ 10.00 ಗಂಟೆಗೆ ಕರೆದುಕೊಂಡು ಬಂದು ಆರೋಪಿಯ ಮೇಲೆ ಪ್ರಕರಣ ದಾಖಲಿಸಿದೆ | ||||||||||||||||
Hospet Town PS | ||||||||||||||||
4 | Cr.No:0215/2015 (IPC 1860 U/s 363 ) |
03/11/2015 | Under Investigation | |||||||||||||
KIDNAPPING AND ABDUCTION - Others | ||||||||||||||||
Brief Facts : | ದಿನಾಂಕ:03/11/2015 ರಂದು ಬೆಳಿಗ್ಗೆ 11-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ,ಹುಸೇನ್ ಸಾಬ್ ತಂದೆ ಅಲ್ಲೀಸಾಬ್, ವಯಸ್ಸು 45 ವರ್ಷ, ಮುಸ್ಲೀಂ ಜನಾಂಗ, ಲಾರಿ ಡ್ರೈವರ್ ಕೆಲಸ, ವಾಸ|| ಜಿ.ಟಿ ಕಾಂಪೌಂಡ್, 10ನೇ ವಾರ್ಡ್, ಎಸ್.ಜಿ.ಎಸ್ ಟಾಕೀಸ್ ಹಿಂಭಾಗದಲ್ಲಿ, ಹೊಸಪೇಟೆ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರು ಸಾರಾಂಶ ತನ್ನ ಹಿರಿಯ ಮಗನಾದ ಆಲಂಭಾಷ, ವಯಸ್ಸು 12 ವರ್ಷ ಈತನು ಬುದ್ಧಿಮಾಂದ್ಯನಿದ್ದು, ಈಗ್ಗೆ 15 ದಿನಗಳ ಹಿಂದೆ ಅಂದರೆ ದಿನಾಂಕ:24/10/2015 ರಂದು ಮಹರಂ ಹಬ್ಬದ ಸಮಯದಲ್ಲಿ ಬೆಳಿಗ್ಗೆ ಸುಮಾರು 8-00 ಗಂಟೆಯ ಸಮಯದಲ್ಲಿ ದಿನಾಲೂ ಹೋದಂತೆ ತನ್ನ ಮಗನಾದ ಆಲಂಭಾಷ ಈತನು ಮಲ ಮೂತ್ರ ವಿಸರ್ಜನೆ ಸಲುವಾಗಿ ಮನೆಯಿಂದ ಹೋಗಿದ್ದು, ಇಲ್ಲಿಯವರೆಗೆ ಬಂದಿರುವುದಿಲ್ಲ, ನನ್ನ ಮಗನನ್ನು ಯಾರಾದರೂ ಕರೆದುಕೊಂಡು ಹೋಗಿರಬಹುದೆಂದು ನಮಗೆ ಅನುಮಾನ ಇರುತ್ತದೆ, ಕಾರಣ ನನ್ನ ಮಗನನ್ನು ಪತ್ತೆ ಮಾಡಿ ಕೊಡಲು ಕೋರುತ್ತೇನೆ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Kottur PS | ||||||||||||||||
5 | Cr.No:0157/2015 (SC AND THE ST (PREVENTION OF ATTROCITIES) ACT, 1989 U/s 3(1)(xi) ; IPC 1860 U/s 506,354 ) |
03/11/2015 | Under Investigation | |||||||||||||
SCHEDULED CASTE AND THE SCHEDULED TRIBES - Scheduled Caste Women | ||||||||||||||||
Brief Facts : | ದಿನಾಂಕ 03-11-2015 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಕಂಪ್ಯೂಟರ್ ಮುದ್ರಿತ ದೂರು ಸಾರಾಂಶ. ದಿನಾಂಕ 02-11-2015 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಪಿರ್ಯಾದಿಯು ತನ್ನ ಊರಿನ ರಾಟಿ ಪಾರ್ವತಮ್ಮನ ಮನೆಗೆ ಬಟ್ಟೆ ಹೊಲಿಸಿಕೊಂಡು ಬರಲು ನೀರಿನ ಟ್ಯಾಂಕ್ ಓಣಿಯಲ್ಲಿರುವ ಬಣಕಾರ್ ಚೆನ್ನವೀರಪ್ಪನ ಮನೆಯ ಹಿಂದಿನಿಂದ ನಡೆದುಕೊಂಡು ಹೋಗುವಾಗ ಚೆನ್ನವೀರಪ್ಪನ ಮಗ ಮಂಜುನಾಥನು ತನ್ನ ಮನೆಯ ಮುಂದೆ ನಿಂತುಕೊಂಡು ಪಿರ್ಯಾದಿಗೆ ಒಳಗಡೆ ಪುಟ್ಟಿ ಇದೆ ಹೊರಿಸು ಬಾ ಅಂತ ಕರೆದು ಪಿರ್ಯಾದಿ ಒಳಗಡೆ ಹೋದ ತಕ್ಷಣ ಬಾಗಿಲು ಮುಚ್ಚಿ ಏಕಾ ಏಕಿ ಪಿರ್ಯಾದಿಯ ಮೈಮೇಲಿನ ಸೀರೆಯ ಸೆರಗನ್ನು ಹಿಡಿದು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಪಿರ್ಯಾದಿ ಬಿಡಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಪುನಃ ಜಾಕೀಟಿಗೆ ಕೈಹಾಕಿ ಹರಿದು ಕೈಹಿಡಿದು ಎಳೆದಾಡಿದ್ದು, ಕೊಸರಿಕೊಂಡು ಹೊರಗೆ ಬರುವಾಗ ಬಾಗಿಲು ಎಡಭುಜಕ್ಕೆ ಬಡಿದು ಒಳಪೆಟ್ಟಾಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಅಂತ ಪ್ರಾಣ ಭಯ ಹಾಕಿರುತ್ತಾನೆ. ಕೂಗಿಕೊಂಡು ಹೊರಗಡೆ ಬರುವಾಗ ಅಲ್ಲೇ ನೀರು ಹಿಡಿಯುತ್ತಿದ್ದ ರಾಟಿ ಪಾರ್ವತಮ್ಮ ಬರುವುದನ್ನು ನೋಡಿ ಮಂಜುನಾಥನು ಓಡಿ ಹೋಗಿದ್ದು, ಸದರಿ ವಿಷಯವನ್ನು ಪಿರ್ಯಾದಿ ಮನೆಯವರು ಹೊಲದಿಂದ ಸಂಜೆ ಮನೆಗೆ ಬಂದಾಗ ತಿಳಿಸಿ, ವಿಚಾರಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು ಮಂಜುನಾಥನ ವಿರುದ್ದ ಕ್ರಮ ಕೈಗೊಳ್ಳಲು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ. | |||||||||||||||
Kuduthini PS | ||||||||||||||||
6 | Cr.No:0139/2015 (IPC 1860 U/s 279,337 ) |
03/11/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ದಿನಾಂಕ:- 02.11.2015 ರಂದು ಸಂಜೆ 5:15 ಗಂಟೆಗೆ ಕೆಪಿಸಿಎಲ್ ಹತ್ತಿರ ಬಳ್ಳಾರಿ-ಹೊಸಪೇಟೆ ಎನ್.ಹೆಚ್. 63 ರಸ್ತೆಯಲ್ಲಿ ಮೋಟರ್ ಸೈಕಲ್ ನಂ, ಕೆಎ-34/ಯು.1673 ನೇದ್ದರಲ್ಲಿ ಪಿರ್ಯದಿದಾರನು ಮತ್ತು ಗಾಯಳು ರಮೇಶ್ ಸೇರಿ ತೋರಣಗಲ್ಲು ನಿಂದ ಕುಡತಿನಿ ಕಡೆಗೆ ಬರುತ್ತಿರುವಾಗ ಸದರಿ ಮೋಟರ್ ಸೈಕಲ್ ನ್ನು ರಮೇಶ್ ಈತನು ಚಲಾಯಿಸುತ್ತಿದ್ದು, ಹಿಂದೆ ಪಿರ್ಯಾದಿದಾರನು ಕುಳಿತುಕೊಂಡಿದ್ದು, ರಮೇಶ್ ಈತನು ಮೋಟರ್ ಸೈಕಲ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಏಕಾಏಕಿಯಾಗಿ ದನ ಅಡ್ಡಬಂದಿದ್ದರಿಂದ ರಮೇಶ್ ಈತನು ಮೋಟರ್ ಸೈಕಲ್ ನ್ನು ಬ್ರೀಕ್ ಹಾಕಿದಾಗ ಪಿರ್ಯಾದಿದಾರನು ಮತ್ತು ರಮೇಶ್ ಈತನು ಕೆಳಗೆ ಬಿದ್ದಾಗ, ರಮೇಶ್ ಈತನಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ಮತ್ತು ಪಿರ್ಯಾದಿದಾರನಿ ಸಣ್ಣ-ಪುಟ್ಟ ತೆರಚಿದ ಗಾಯಳಾಗಿರುತ್ತವೆ. ನಂತರ ಗಾಯಗೊಂಡಿದ್ದ ರಮೇಶ್ ಈತನಿಗೆ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲಿಸಿ, ತಡವಾಗಿ ಠಾಣೆಗೆ ಬಂದು ದೂರು ನೀಡಿದ ಮೇರೆಗೆ. ( ದೂರಿನ ಪ್ರತಿಯನ್ನು ಲಗತ್ತಿಸಿದೆ) | |||||||||||||||
7 | Cr.No:0140/2015 | 03/11/2015 | Under | |||||||||||||
(IPC 1860 U/s 279,337 ) | Investigation | |||||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ದಿನಾಂಕ:- 02.11.2015 ರಂದು ಮದ್ಯಾಹ್ನ 12:45 ಗಂಟೆಗೆ ಪಿರ್ಯಾದಿದಾರನು ಮತ್ತು ಇತರೆ ಪ್ರಯಾಣಿಕರು ಸೇರಿ ಕೆ.ಎಸ್.ಅರ್.ಟಿ.ಸಿ. ಬಸ್ ನಂ, ಕೆಎ-34/ಎಫ್-1059 ನೇದ್ದರಲ್ಲಿ ಬಳ್ಳಾರಿ-ಹೊಸಪೇಟೆ ಎನ್.ಹೆಚ್. 63 ರಸ್ತೆಯಲ್ಲಿ ಅಕ್ವಾಫನ್ ಹತ್ತಿರ ಬಳ್ಳಾರಿ ಕಡೆಗೆ ಹೋಗುತ್ತಿರುವಾಗ ಸದರಿ ಕೆ.ಎಸ್.ಅರ್.ಟಿ.ಸಿ. ಬಸ್ ಚಾಲಕನು ಬಸ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಮುಂದಿನ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಅದೇ ವೇಳೆಗೆ ಎದುರುಗಡೆಯಿಂದ ಮೋಟರ್ ಸೈಕಲ್ ಬಂದಿದ್ದು, ಅಗ ಬಸ್ಸುನ್ನು ಏಕಾಎಕಿಯಾಗಿ ಎಡಗಡೆಗೆ ತಿರುಗಿಸಿ ಮುಂದಿನ ಲಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯಳಾಗಿರುತ್ತವೆ. ಅದ್ದರಿಂದ ಕೆ.ಎಸ್.ಅರ್.ಟಿಸಿ ಬಸ್ ಚಾಲಕ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ರತಿ) | |||||||||||||||
Marriyammanahalli PS | ||||||||||||||||
8 | Cr.No:0138/2015 (IPC 1860 U/s 279,337 ) |
03/11/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ಈ
ದಿನ ದಿನಾಂಕ-03/11/2015 ರಂದು ಮಧ್ಯಾಹ್ನ 12.00 ಗಂಟೆಗೆ ಪಿರ್ಯಾದಿ ವಲಿಸಾಬ್ ಇವರು
ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶ- ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಿರುತ್ತೇನೆ.
ನನ್ನ ಹೆಸರಿನಲ್ಲಿ ಕೆ.ಎ.೦೧/ಎ.ಇ. ೪೯೫೯ (೧೦ಗಾಲಿ) ಲಾರಿ ಇದ್ದು ಅದಕ್ಕೆ ನನ್ನ ಮಗನಾದ
ಇಂತಿಯಾಜ್ ಪಾಷ್ ಎಂಬುವರು ಚಾಲಕರಿರುತ್ತಾರೆ. ನಿನ್ನೆ ದಿನ ದಿ:೦೨-೧೧-೧೫ ರಂದು ಸಂಜೆ ೭-೦೦
ಗಂಟೆ ಸುಮಾರಿಗೆ ನನ್ನ ಮಗ ಇಂತಿಯಾಜ್ ಪಾಷ್ ಕೊಪ್ಪಳದಲ್ಲಿ ಕೋಳಿ ಆಹಾರದ ಚೀಲಗಳನ್ನು ಲೋಡ್
ಮಾಡಿಕೊಂಡು ಎನ್.ಹೆಚ್. ೧೩ ರಸ್ತೆಯ ಮುಖಾಂತರ ಗುಬ್ಬಿಗೆ ಬರುತ್ತಾ ಇದ್ದೇನೆ. ಎಂದು ಪೋನ್
ಮಾಡಿ ತಿಳಿಸಿದನು. ನಿನ್ನೆ ದಿನ ರಾತ್ರಿ ೮-೦೦ ಗಂಟೆ ಸುಮಾರಿಗೆ ಮತ್ತೆ ನನ್ನ ಮಗ ಪೋನ್ ಮಾಡಿ ಎನ್.ಹೆಚ್. ೧೩ ರಸ್ತೆ ಹಾರೋನಹಳ್ಳಿ ಸಮೀಪದ ಕೋಳಿ ಪಾರಂ ಬಳಿ ನಮ್ಮ ಲಾರಿ ಮತ್ತು ಇನ್ನೊಂದು ಲಾರಿ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿ ನಮಗೆ ಪೆಟ್ಟುಗಳು ಬಿದ್ದಿವೆ ನೀವು ಬೇಗನೆ ಬರ್ರಿ ಎಂದು ತಿಳಿಸಿದನು. ಕೂಡಲೆ ನಾನು, ಮತ್ತು ಅಬ್ದುಲ್ ವಾಜಿದ್, ಹಾಗು ಇಸ್ಸಾರ್ ಅಹ್ಮದ್ ಕೂಡಿಕೊಂಡು ಈ ದಿನ ದಿ:೦೩-೧೧-೧೫ ರಂದು ಬೆಳಿಗ್ಗೆ ೬-೦೦ ಗಂಟೆಗೆ ಘಟನೆ ಸ್ಥಳಕ್ಕೆ ಬಂದು ನೋಡಲು, ನಮ್ಮ ಲಾರಿ ರಸ್ತೆಯ ಪಕ್ಕದಲ್ಲಿ ಬಲಮಗ್ಗಲಾಗಿ ಜಖಂಗೊಂಡು ಬಿದ್ದಿತ್ತು. ಇನ್ನೊಂದು ಲಾರಿ ಸಹಾ ಮುಂಬಾಗವೆಲ್ಲ ಜಖಂಗೊಂಡು ನಿಂತಿದ್ದು ಅದರ ನಂಬರ್ ನೋಡಲು, ಕೆ.ಎ. ೨೦/ ಎ. ೬೮೦೩ ನಂಬರಿನ ಲಾರಿಯಾಗಿದ್ದು ಅದರ ಚಾಲಕನ ಹೆಸರು ಮಂಜುನಾಥ ಹಿರೆಗುಂಟೂರು (ಗ್ರಾಮ) ಚಿತ್ರದುರ್ಗ (ಜಿ) ಎಂದು ಈತನಿಗೆ ಸಹಾ ಎರಡು ಕಾಲುಗಳಿಗೆ ಮತ್ತು ಮೈಕೈಗಳಿಗೆ ಪೆಟ್ಟುಗಳು ಆದ ವಿಚಾರ ಗೊತ್ತಾಯಿತು. ನನ್ನ ಮಗ ಇಂತಿಯಾಜ್ ಪಾಷ್ ಹೊಸಪೇಟೆ ೧೦೦ ಬೆಡ್ ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿದು ನಾನು ಮತ್ತೆ ಹೊಸಪೇಟೆ ಆಸ್ಪತ್ರೆಗೆ ಹೋಗಿ ನನ್ನ ಮಗನಿಗೆ ನೋಡಲು, ನನ್ನ ಮಗನ ಬಲ ಮೊಣಕಾಲಿನಿಂದ ಪಾದದವರೆಗೆ ಜಜ್ಜಿದಂತ ಒಳಪೆಟ್ಟು, ಬಲ ಸೊಂಟಕ್ಕೆ ಒಳಪೆಟ್ಟು, ಬಲ ಭುಜಕ್ಕೆ ಒಳಪೆಟ್ಟು ಗಾಯಗಳು ಆಗಿದ್ದವು. ಘಟನೆಯ ಬಗ್ಗೆ ನನ್ನ ಮಗನಿಗೆ ವಿಚಾರಿಸಲು ನಿನ್ನೆ ದಿನ ದಿ:೦೨-೧೧-೧೫ ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ನಮ್ಮ ಲಾರಿಯನ್ನು ಕೊಪ್ಪಳದಿಂದ ಎನ್.ಹೆಚ್. ೧೩ ರಸ್ತೆಯಲ್ಲಿ ಸ್ಪೀಡಾಗಿ ಹೋಗುತ್ತಿದ್ದೆ ಅದೇ ವೇಳೆಗೆ ಎದುರಾಗಿ ಕೂಡ್ಲಿಗಿ ಕಡೆಯಿಂದ ಕೆ.ಎ. ೨೦/ ಎ. ೬೮೦೩ ನಂಬರಿನ ಲಾರಿ ಚಾಲಕ ಮಂಜುನಾಥ ಎಂಬುವನು ಸಹಾ ಅತೀ ವೇಗ ಮತ್ತು ನಿರ್ಲಕಷತನದಿಂದ ನಡೆಸಿಕೊಂಡು ಬಂದು ರಸ್ತೆಯಲ್ಲಿದ್ದ ಕುಣಿ ತಪ್ಪಿಸಲು ಹೋಗಿ ಇಬ್ಬರು ಮುಖಾ ಮುಖಿ ಡಿಕ್ಕಿಹೊಡೆದುಕೊಂಡೆವು. ಎಂದು ತಿಳಿಸಿದನು. ನಾನು ಸಹಾ ಅಪಘಾತವಾದ ಸ್ಥಳವನ್ನು ಮತ್ತು ಜಖಂಗೊಂಡಿರುವ ಲಾರಿಗಳನ್ನು ನೋಡಲಾಗಿ ಹಾಗು ಸ್ಥಳದಲ್ಲಿ ಇದ್ದ ಜನರಿಗೆ ವಿಚಾರಿಸಲು, ಈ ಘಟನೆಯು ಈ ಮೇಲ್ಕಂಡ ಎರಡು ಲಾರಿಗಳ ಚಾಲಕರು ಎನ್.ಹೆಚ್. ೧೩ ರಸ್ತೆಯಲ್ಲಿ ತಮ್ಮ ಲಾರಿಗಳನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ಕಾರಣದಿಂದ ಈ ಅಪಘಾತ ಸಂಭವಿಸಿರುತ್ತದೆ. ಮೇಲ್ಕಂಡ ಎರಡು ಲಾರಿಗಳ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ೆಂದು ದೂರಿನ ಮೇರೆಗೆ ಗುನ್ನೆ ದಾಖಲಿಸಿದೆ. |
|||||||||||||||
P.D. Halli PS | ||||||||||||||||
9 | Cr.No:0062/2015 (MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ; IPC 1860 U/s 379 ) |
03/11/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ದಿನಾಂಕ 03/11/2015 ರಂದು ಬೆಳಿಗ್ಗೆ 9-15 ಗಂಟೆಗೆ ಶ್ರೀ ಚಿದಾನಂದ ಎಂ.ಗದಗ್ ರವರು ಠಾಣೆಗೆ ಹಾಜರಾಗಿ ನೀಡಿದ ವಿಶೇಷ ವರದಿಯನ್ನು ನೋಡಲಾಗಿ ದಿನಾಂಕ 03/11/2015 ರಂದು ಬೆಳಿಗ್ಗೆ 6-45 ಗಂಟೆಗೆ ರೂಪನಗುಡಿ ಗ್ರಾಮದ ಹಗರಿ ನದಿ ದಂಡೆಯ ಮೇಲೆ 5 ಟ್ರಾಕ್ಟರ್ ಗಳು ಮತ್ತು | |||||||||||||||
ಟ್ರಾಲಿಗಳಲ್ಲಿದ್ದ ಮರಳನ್ನು ಚಾಲಕರು ಮತ್ತು ಮಾಲಿಕರು ಆಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಪಿ.ಎಸ್.ಐ ಸಿಬ್ಬಂದಿಯವರು ಟ್ರಾಕ್ಟರ್ ಗಳನ್ನು ನಿಲ್ಲಿಸಿ ಚಾಲಕರನ್ನು ವಿಚಾರಿಸಲು ಟ್ರಾಕ್ಟರ್ ಗಳ ಚಾಲಕರು ಯಾವುದೇ ಮಾಹಿತಿ ತಿಳಿಸದೆ ಟ್ರಾಕ್ಟರ್ ಗಳು ಮತ್ತು ಟ್ರಾಲಿಗಳಲ್ಲಿದ್ದ ಮರಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾರೆಂದು ಹಾಗು 5 ಟ್ರಾಕ್ಟರ್ ಗಳಲ್ಲಿದ್ದ ಸುಮಾರು 10 ಟನ್ ಮರಳಿದ್ದು ಒಟ್ಟು ರೂ 20000/- ರೂಗಳಾಗಬಹುದೆಂದು ಟ್ರಾಕ್ಟರ್ ಮತ್ತು ಟ್ರಾಲಿಗಳ ಚಾಲಕರ ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | ||||||||||||||||
Sandur PS | ||||||||||||||||
10 | Cr.No:0170/2015 (KARNATAKA EXCISE ACT, 1965 U/s 32,34 ) |
03/11/2015 | Under Investigation | |||||||||||||
KARNATAKA STATE LOCAL ACTS - Karnataka Excise Act 1965 | ||||||||||||||||
Brief Facts : | ಈ ದಿನ ದಿನಾಂಕ 03.11.2015 ರಂದು ಮಾನ್ಯ P.S.I. ರವರು ಠಾಣೆಯಲ್ಲಿ ನೀಢಿದ ಜ್ಞಾಪನ ವರದಿ ಸಾರಾಂಶವು ಈ ರೀತಿ ಇರುತ್ತದೆ.ಈ ದಿನ ದಿನಾಂಕ 03/11/ 2015 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಮತ್ತು ಠಾಣಾ ಸಿಬ್ಬಂದಿಯವರಾದ PCS 682,377,450, W.P.C1031 ರವರ ಸಂಗಡ ಸರಕಾರಿ ಜೀಪ್ ನಂಬರ್ K.A.34-G 401 ರಲ್ಲಿ ನಂದಿಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 10-30 ಗಂಟೆಗೆ ಬೇಟಿ ಕೊಟ್ಟಾಗ ರುದ್ರಮ್ಮ ವಾಸಃ- ನಂದಿಹಳ್ಳಿ ಎಂಬುವರು ತಮ್ಮ ಬೀಡಿ ಅಂಗಡಿ ಶೆಡ್‌ನ ಮುಂ ದುಗಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಬಾಟಲುಗಳನ್ನು ಸಾರ್ವಜನಿಕರಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾಳೆಂದು ಬಂದ ಖಚಿತ ಮಾಹಿತಿ ಮೇರೆಗೆ ಜೊತೆಯಲ್ಲಿದ್ದ P.C.682 ರವರಿಗೆ ಕಳಿಸಿ ಇಬ್ಬರು ಪಂಚರನ್ನುಬೆಳಿಗ್ಗೆ 10-45 ಗಂಟೆಗೆ ಬರಮಾಡಿಕೊಂಡು ಅವರಿಗೆ ಈ ಮೇಲಿನಂತೆ ಮಾಹಿತಿ ನೀಡಿ ದಾಳಿಗೆ ಬಂದು ಸಹಕರಿಸಲು ಕೋರಿಕೊಂಡಿದ್ದು, ಉಭಯರು ಒಪ್ಪಿದ ನಂತರ ನಾನು ಮತ್ತು ಸಿಬ್ಬಂದಿಯವರು ಸೇರಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬ ಹೆಂಗಸು ಬೀ ಡಿ ಅಂಗಡಿಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಪ್ಲಾಸ್ಟೀಕ್ ಚೀಲ ಮುಂದೆ ಇಟ್ಟುಕೊಂಡಿದ್ದು, ಆಕೆಯು ಜನರಿಗೆ ಕರೆಯುತ್ತಾ ತನ್ನ್ಮಲ್ಲಿ ಮದ್ಯದ ಬಾಟಲುಗಳು ಇವೆ ಬನ್ನಿರಿ ಎಂದು ಹೇಳುತ್ತಿದ್ದಾಗ ಜನರು ಹಣ ಕೊಟ್ಟು ಮದ್ಯದ ಬಾಟಲುಗಳನ್ನು ಕೊಂಡು ಹೋಗುತ್ತಿದ್ದಾಗ ನಾವೆಲ್ಲಾರೂ ಸೇರಿ ಬೆಳಿಗ್ಗೆ 11-00 ಗಂಟೆಗೆ ಆಕೆಯ ಮೇ ಲೆ ದಾಳಿ ಮಾಡಲಾಗಿ ಜನರು ಅಲ್ಲಿಂದ ಚದುರಿಹೊಗಿದ್ದು ಮದ್ಯದ ಬಾಟಲುಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದ ಹೆಂಗಸು ಸಿಕ್ಕಿದ್ದು ಆಕೆಯ ಹೆಸರು ಕೇಳಲಾಗಿ [1] ರುದ್ರಮ್ಮ ಗಂಡ ಹನುಮಂತಪ್ಪವಾಲ್ಮೀಕಿ ಜನಾಂಗ, ಬೀಡಿ ಅಂಗಡಿ ವ್ಯಾಪಾರ ವಾಸಃ- ನಂದಿಹಳ್ಳಿ ಗ್ರಾಮ ಸಂಡೂರು ತಾಲೂಕು ಅಂತ ತಿಳಿಸಿದಳು.ಸದ್ರಿ ಬೀಡಿ ಅಂಗ ಡಿ ಯಾರದೆಂದು ವಿಚಾರ ಮಾಡಲಾಗಿ ತನ್ನದೆಂದು ತಿಳಿಸಿದಳು. ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ ಅಂತ ವಿಚಾರ ಮಾಡ ಲಾಗಿ ಮದ್ಯದ ಬಾಟಲುಗಳು ಇವೆ ಎಂದು ತಿಳಿ ಸಿದಳು.ಅವುಗಳನ್ನು ಜನರಿಗೆ ಮಾರಾಟ ಮಾಡಲು ಯಾವುದಾದರು ಅಧಿಕೃತ ಪರವಾನಿಗೆಯಾಗಲಿ ಕಾಗದ ಪ ತ್ರಗಳಾಗಲಿ ಇವೆಯೇ ಎಂದು ಕೇಳಲಾಗಿ ಅವು ಯಾ ವುದು ತನ್ನಲ್ಲಿ ಇಲ್ಲವೆಂದು ತಿಳಿಸಿದಳು.ಜನರಿಗೆ ಮದ್ಯದ ಬಾಟಲುಗಳನ್ನು ಹಣಕ್ಕಾಗಿ ಮಾರಾಟ ಮಾಡುವುದಾಗಿ ತಿಳಿಸಿದ್ದು ಆಗ ಪಂಚರ ಸಮಕ್ಷಮ ಪ್ಲಾಸೀಕ್ ಚೀಲದ ಲ್ಲಿದ್ದ ಮದ್ಯವನ್ನು ಪರಿಶೀಲಿಸಲಾಗಿ [1] ಪ್ಲಾಸ್ಟೀಕ್ ಚೀಲದಲ್ಲಿ 180 M.L. ತುಂಬಿದ ಒಟ್ಟು 33 VIN GRAPE BRANDY ಯ ಟಟ್ರಾ ಪೌಚ್‌ಗಳು ಇದ್ದು ಒಂದರ ಬೆಲೆ 50=09 ರೂ ಇದ್ದು ಒಟ್ಟು ಅಂದಾಜು ರೂ 1650=೦೦ ರೂಗಳು, ಮತ್ತು 180 M.L.ತುಂಬಿದ ಒಟ್ಟು 03 OLD TAVERN WHISKY ಪೌಚ್(ಪ್ಯಾಕ್) ಗಳಿದ್ದು, ಒಂದಕ್ಕೆ ಬೆಲೆ 58=80 ರೂ ಇದ್ದು ಒಟ್ಟು ಅಂದಾಜು ರೂ 174=೦೦ ರೂಗಳು, ಒಟ್ಟ ಬೆಲೆ 1824/== ರೂಗಳಾಗಬಹುದು ಇವುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 11-00 ಗಂಟೆಯಿಂದ ಮದ್ಯಾಹ್ನ 12-00 ಗಂಟೆವರೆಗೆ ಪಂಚನಾಮೆ ಯ ಮೂಲಕ ಜಪ್ತುಪಡಿಸಿಕೊಂಡು ಸದ್ರಿ ಮದ್ಯದ ಟಟ್ರಾ ಪೌಚ್‌ಗಳ ಪೈಕಿ ಸುಮಾರು 4 ವರೆ ಲೀಟ ರ್ ಗಳಿಗಾಗುವಷ್ಟು ಮದ್ಯವನ್ನು ಸ್ಯಾಂಪಲ್‌ಗಾಗಿ ತೆಗೆಯಲಾಯಿತು ಮದ್ಯವನ್ನು ಸಾರ್ವಜನಿಕರಿಗೆ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಹಣಕ್ಕಾಗಿ ಮಾರಾ ಟ ಮಾಡುತ್ತಿದ್ದರಿಂದ ಮದ್ಯ ತುಂಬಿದ ಟಟ್ರಾ ಪೌಚ್‌ಗಳನ್ನು [W.P.C].ಮಹಿಳಾ P.C.1031 ರವರ ಸಹಾಯದಿಂದ ರುದ್ರಮ್ಮ ರವರ ಕೈಯ್ಯಲ್ಲಿದ್ದ ಜನರಿಗೆ ಮದ್ಯವನ್ನು ಮಾರಾಟ ಮಾಡಿ ಬಂದಂತಹ ಹಣ ಎನ್ನಲಾದ ನಗದು ಹಣ 250/ ರೂಗಳನ್ನು ಜಪ್ತು ಮಾಡಿ ರುದ್ರಮ್ಮ ರವರನ್ನು W.P.C.ರವರ ಸಹಾಯದಿಂದ ವಶಕ್ಕೆ ತೆಗೆದು ಕೊಂಡು ಮರಳಿ ಠಾಣೆಗೆ ಮದ್ಯಾಹ್ನ 12-25 ಗಂಟೆಗೆ ಬಂದು ಪಂಚನಾಮೆ,ಮಾಲು & ಜ್ಞಾಪನ ವರದಿ ಆರೋಪಿ ರುದ್ರಮ್ಮ ರವರನ್ನು ನಿಮ್ಮ ಸ್ವಾಧೀನಕ್ಕೆ ನೀಡುತ್ತಿದ್ದು ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ರುದ್ರಮ್ಮ ರವರ ವಿರುದ್ದ ವಿರುದ್ದ ಕಲಂ: 32-34 ಕರ್ನಾಟಕ ಅಬ್ಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈ ಗೊಳ್ಳಲು ಈ ಮೂಲಕ ನಿಮಗೆ ಸೂಚಿಸಿದೆ ಎಂದು ಇದ್ದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
ಮಂಗಳವಾರ, ನವೆಂಬರ್ 3, 2015
PRESS NOTE OF 03/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ